Tag: Nandamuri Balakrishna

  • ಅಖಂಡ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ : ಬಾಲಯ್ಯ ನಟನೆಯ ಸಿನಿಮಾ

    ಅಖಂಡ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ : ಬಾಲಯ್ಯ ನಟನೆಯ ಸಿನಿಮಾ

    ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಬಹು ನಿರೀಕ್ಷಿತ ‘ಅಖಂಡ 2’ (Akhanda 2) ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಅಖಂಡ ಚಿತ್ರದ ಮುಂದುವರಿದ ಭಾಗವಾಗಿರುವ ಅಖಂಡ-2 ಡಿಸೆಂಬರ್ 5, 2025 ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ.

    ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ಸಿಂಹ, ಲೆಜೆಂಡ್ ಹಾಗೂ 2021ರಲ್ಲಿ ಬಿಡುಗಡೆ ಆಗಿದ್ದ ಅಖಂಡ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ `ಅಖಂಡ-2’ರ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

    ಅಖಂಡ-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.ಚಿತ್ರದಲ್ಲಿ ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ.

    ಹೈ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್ ಥಮನ್ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಫೈಟ್ ಚಿತ್ರಕ್ಕಿರಲಿದೆ.

  • ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    ‘ಗಾಡ್ ಆಫ್ ಮಾಸ್’ ನಂದಮೂರಿ ಬಾಲಕೃಷ್ಣ (Nandamuri Balakrishna) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಯ್ಯ ಜನ್ಮದಿನಕ್ಕೆ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಅಖಂಡ-2’ (Akhanda-2) ಟೀಸರ್ ಬಿಡುಗಡೆ ಮಾಡಲಾಗಿದೆ. ನಂದಿ ಮುಖ ಇರುವ ತ್ರಿಶೂಲ ಹಿಡಿದು ಮಾಸ್ ಅವತಾರದಲ್ಲಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ.

    ಹಿಮದಿಂದ ಆವೃತವಾದ ಕೈಲಾಸಂ, ಭರ್ಜರಿ ಆಕ್ಷನ್ಸ್, ಎಸ್ ಥಮನ್ ಮ್ಯೂಸಿಕ್ ‘ಅಖಂಡ-2’ ಟೀಸರ್‌ನ ಹೈಲೆಟ್ಸ್ ಆಗಿದೆ. ಸಾಧು ಗೆಟಪ್‌ನಲ್ಲಿ ಎಂಟ್ರಿ ಕೊಡುವ ಬಾಲಯ್ಯ ದುಷ್ಟರನ್ನು ಸಂಹಾರ ಮಾಡುವ ರೀತಿಯೂ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತದೆ. ಇದನ್ನೂ ಓದಿ:

    ಬಾಲಕೃಷ್ಣ ನಟನೆಯ `ಅಖಂಡ’ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಬಾಲಯ್ಯ (Balayya) ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದೇ ಸಿನಿಮಾದ ಎರಡನೇ ಭಾಗವೇ ‘ಅಖಂಡ-2′ ಆಗಿದೆ. `ಅಖಂಡ’ ಸಿನಿಮಾ ನಿರ್ದೇಶನ ಮಾಡಿದ್ದ ಬೊಯಪಾಟಿ ಶ್ರೀನು ಅವರೇ `ಅಖಂಡ-2′ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. `ಅಖಂಡ-2′ ಸಿನಿಮಾದಲ್ಲಿಯೂ ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:

    ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ಸಿಂಹ, ಲೆಜೆಂಡ್ ಹಾಗೂ 2021ರಲ್ಲಿ ಬಿಡುಗಡೆ ಆಗಿದ್ದ ಅಖಂಡ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ `ಅಖಂಡ-2’ರ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

    ಅಖಂಡ-2 ಸಿನಿಮಾದ ಚಿತ್ರೀಕರಣ ಸದ್ಯ ಜಾರ್ಜಿಯಾದ ಗ್ರ‍್ಯಾಂಡ್ ಲೊಕೇಲ್ಸ್‌ನಲ್ಲಿ ನಡೆಯುತ್ತಿದೆ. ದಸರಾ ವಿಶೇಷ ದಿನವಾದ ಸೆ. 25ರಂದು ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಇದನ್ನೂ ಓದಿ:

    ಹೈಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್ ಥಮನ್ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್‌ ಫೈಟ್ ಚಿತ್ರಕ್ಕಿರಲಿದೆ.

  • ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಕನಸಿನ ರಾಣಿ ಮಾಲಾಶ್ರೀ (Malashri) ಮಗಳ ಜೊತೆ ಪೆದ್ದಮ್ಮನ ದರ್ಶನ ಮಾಡಿದ್ದಾರೆ. ಹೈದ್ರಾಬಾದ್‍ನ ಜುಬಲಿ ಹಿಲ್ಸ್‍ನಲ್ಲಿರುವ ಪೆದ್ದಮ್ಮ ದೇವಸ್ಥಾನ ಅಲ್ಲಿನ ಸುಪ್ರಸಿದ್ಧ ದೇವಸ್ಥಾನದಲ್ಲೊಂದು. ಕರ್ನಾಟಕದಲ್ಲಿ ಮೆಜೆಸ್ಟಿಕ್‍ನಲ್ಲಿರುವ ಅಣ್ಣಮ್ಮ ದೇವಿಯ ಮೇಲಿನ ನಂಬಿಕೆಯಂತೆ ಹೈದ್ರಾಬಾದ್‍ನಲ್ಲಿ ಪೆದ್ದಮ್ಮ ದೇವಿಯ ಮೇಲೆ ಭಕ್ತರ ಅಪಾರ ನಂಬಿಕೆ ಇದೆ. ಹೀಗಾಗಿ ಗೌರಿ ಹಬ್ಬದ ದಿನ ಅಲ್ಲಿನ ಪೆದ್ದಮ್ಮನ ದರ್ಶನ ಮಾಡಿದ್ದಾರೆ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ (Aradhana Ram).

    ಬಾಲಯ್ಯರ 50ನೇ ವರ್ಷದ ಸಿನಿಮಾ ಜರ್ನಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಮಾಲಾಶ್ರೀ ಮಗಳ ಸಮೇತ ಅತಿಥಿಯಾಗಿ ತೆರಳಿದ್ದರು. ಹಲವು ದಿನ ಅಲ್ಲೇ ಉಳಿದಿದ್ದಾರೆ. ಅಷ್ಟಕ್ಕೂ ಆಂಧ್ರನಾಡು ಮಾಲಾಶ್ರೀಯ ತವರುಮನೆ ಕೂಡ. ಹೀಗಾಗಿ ಆಂಧ್ರಕ್ಕೆ ತೆರಳಿದ್ದ ಮಾಲಾಶ್ರೀ ಅಲ್ಲಿನ ಸಹೋದ್ಯೋಗಿ ಆಪ್ತರನ್ನೆಲ್ಲಾ ಭೇಟಿಯಾಗಿದ್ದಾರೆ. ಈ ವೇಳೆ ಅಲ್ಲಿಯೇ ಇರುವ ಪೆದ್ದಮ್ಮ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಇದನ್ನೂ ಓದಿ: `ಡಿ’ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷ್ಯವಾದ ಮಣ್ಣು – ದೇಶದಲ್ಲೇ ಮೊದಲ ಪ್ರಕರಣ!

    `ಕಾಟೇರ’ ಚಿತ್ರದ ಮೂಲಕ ಮಾಲಾಶ್ರೀ ಮಗಳು ಆರಾಧನಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಬಳಿಕ ಆರಾಧನಾ ಒಳ್ಳೆಯ ಅವಕಾಶಕ್ಕಾಗಿ ಕಾದಿದ್ದಾರೆ. ಈ ನಡುವೆ ಟಾಲಿವುಡ್‍ನಿಂದಲೂ ಆರಾಧನಾಗೆ ಸಿನಿಮಾ ಆಫರ್ ಬರ್ತಿರೋ ಸುದ್ದಿಯಿತ್ತು. ಬಹುಶಃ ಹೈದ್ರಾಬಾದ್‍ಗೆ ತೆರಳಿರುವ ಮಾಲಾಶ್ರೀ ಮಗಳ ಸಿನಿಮಾ ಕರಿಯರ್ ವಿಚಾರವಾಗಿಯೂ ಚರ್ಚಿಸಿರುವ ಸಾಧ್ಯತೆ ಇದೆ. ಹಲವು ಸ್ಕ್ರಿಪ್ಟ್‍ಗಳನ್ನ ಕೇಳಿರುವ ಸುದ್ದಿಯೂ ಬಂದಿದೆ. ಶ್ರೀಘ್ರದಲ್ಲೇ ಆರಾಧನಾ ಟಾಲಿವುಡ್‍ಗೆ ಎಂಟ್ರಿ ಕೊಟ್ರೂ ಆಶ್ಚರ್ಯವೇನಿಲ್ಲ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

  • ಚಿತ್ರರಂಗದಲ್ಲಿ ಬಾಲಯ್ಯ ಹಾಫ್ ಸೆಂಚುರಿ – ತಲೈವಾ ಗ್ರೇಟ್ ವಿಶ್!

    ಚಿತ್ರರಂಗದಲ್ಲಿ ಬಾಲಯ್ಯ ಹಾಫ್ ಸೆಂಚುರಿ – ತಲೈವಾ ಗ್ರೇಟ್ ವಿಶ್!

    ಟಾಲಿವುಡ್‌ನ ಲೆಜೆಂಡರಿ ಆ್ಯಕ್ಟರ್ ನಂದಮೂರಿ ಬಾಲಕೃಷ್ಣ ಚಿತ್ರರಂಗದಲ್ಲಿ 50 ವರ್ಷಗಳನ್ನ ಪೂರೈಸಿದ್ದಾರೆ. 1974ರಲ್ಲಿ ಬಿಡುಗಡೆಗೊಂಡ `ತಾತಮ್ಮ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂದಮೂರಿ ಬಾಲಕೃಷ್ಣ ಇಲ್ಲಿಗೆ ಭರ್ತಿ 50 ವರ್ಷಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಲೈವಾ ರಜನಿಕಾಂತ್ ಬಾಲಯ್ಯನಿಗೆ ಶುಭಾಷಯ ತಿಳಿಸಿದ್ದಾರೆ. `ಆ್ಯಕ್ಟಿಂಗ್ ಕಿಂಗ್, ಕಲೆಕ್ಷನ್ ಕಿಂಗ್, ಡೈಲಾಗ್ ಡೆಲಿವರಿ ಕಿಂಗ್, ಮೈ ಲವ್ಲಿ ಬ್ರದರ್ ಬಾಲಯ್ಯ 50 ವರ್ಷಗಳನ್ನ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ಅವರಿಗೆ ದೇವರು ಆಯುರ್-ಆರೋಗ್ಯ ಕೊಟ್ಟು ಕಾಪಾಡಲಿ’ ಅಂತಾ ಜಾಲತಾಣದ ಮೂಲಕ ತಲೈವ ಹಾರೈಸಿದ್ದಾರೆ.

    ನಂದಮೂರಿ ಬಾಲಕೃಷ್ಣರನ್ನ ಎಲ್ಲರೂ ಪ್ರೀತಿಯಿಂದ `ಬಾಲಯ್ಯ’ ಅಂತಲೇ ಕರೆಯುತ್ತಾರೆ. ಬಾಲಯ್ಯ ಈ ಐವತ್ತು ವರ್ಷಗಳಲ್ಲಿ 108 ಸಿನಿಮಾಗಳನ್ನ ಮಾಡಿದ್ದಾರೆ. ಇನ್ನು ಎರಡು ಸಿನಿಮಾಗಳು ಸದ್ಯ ಶೂಟಿಂಗ್ ನಡೆಯುತ್ತಿವೆ. ಒಟ್ಟು 110 ಸಿನಿಮಾಗಳನ್ನ ನಂದಮೂರಿ ಬಾಲಕೃಷ್ಣ ಮಾಡಿದ್ದಾರೆ. ಸಾಕಷ್ಟು ಕಾಂಟ್ರುವರ್ಸಿಗಳನ್ನ ಮಾಡಿಕೊಂಡಿದ್ದಾರೆ. ಆದ್ರೂ ಕೂಡಾ ಅಭಿಮಾನಿಗಳ ಬಳಗ ಮಾತ್ರ ಕಮ್ಮಿಯಾಗಿಲ್ಲ. ಇದನ್ನೂ ಓದಿ: ಕೈದಿ ನಂಬರ್‌ ಆಯ್ತು.. ಈಗ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಟ್ರೆಂಡ್‌

    ತೆಲುಗು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಬಾಲಯ್ಯ ಅವರಿಗೆ ಭಾರತಾದ್ಯಂತ ಅತೀ ದೊಡ್ಡ ಅಭಿಮಾನಿಗಳ ಬಳಗವಿದೆ. ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಬಾಲಯ್ಯ ನೀಡಿದ್ದಾರೆ. ಜೊತೆಗೆ ಬೇರೆ ಬೇರೆ ಭಾಷೆಯ ನಟರೊಂದಿಗೆ ಗೆಳೆತನವನ್ನ ಹೊಂದಿರುವ ನಟ ನಂದಮೂರಿ ಬಾಲಕೃಷ್ಣ ಡೈಲಾಗ್‌ಗೆ ಅಂತಾನೇ ಸಿನಿಮಾವನ್ನ ಕಾಯ್ತಿರುತ್ತೆ ಭಕ್ತಗಣ. ಇದನ್ನೂ ಓದಿ: ಕೇರಳ ಚಿತ್ರರಂಗ ಆಯ್ತು, ಟಾಲಿವುಡ್‌ನಲ್ಲೂ ಕಂಪನ; ʻದಿ ವಾಯ್ಸ್ ಆಫ್ ವುಮನ್ʼ ವರದಿ ಬಹಿರಂಗಕ್ಕೆ ಸಮಂತಾ ಒತ್ತಾಯ!

    ಸದ್ಯ 50 ವರ್ಷಗಳನ್ನ ಸಿನಿಮಾ ಇಂಡಸ್ಟ್ರಿಯಲ್ಲಿ ಪೂರೈಸಿರುವ ಬಾಲಯ್ಯ ಇನ್ನು ಹೆಚ್ಚು ಹೆಚ್ಚು ಸಿನಿಮಾಗಳನ್ನ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡಲಿ. ಕಳೆದ ವರ್ಷ ಬಾಲಯ್ಯ ಅಭಿನಯದ ವೀರ ಸಿಂಹ ರೆಡ್ಡಿ ಹಾಗೂ ಭಗವಂತ್ ಕೇಸರಿ ಸಿನಿಮಾಗಳು ತೆರೆಗೆ ಬಂದಿದ್ದವು. ಆದ್ರೆ ಈ ವರ್ಷ ಅವರ ಸಿನಿಮಾಗಳಿಲ್ಲ, ಮುಂದಿನ ವರ್ಷಕ್ಕೆ ಎನ್‌ಬಿಕೆ109 ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್‌

  • ಬಾಲಯ್ಯಗೆ ‘ಅಖಂಡ’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್

    ಬಾಲಯ್ಯಗೆ ‘ಅಖಂಡ’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್

    ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. 2021ರಲ್ಲಿ ‘ಅಖಂಡ’ ಸಿನಿಮಾ ಸಕ್ಸಸ್ ಕೊಟ್ಟ ನಿರ್ದೇಶಕನ ಜೊತೆ ಬಾಲಯ್ಯ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    ಜೂನ್‌ 10ರಂದು ಬೋಯಪತಿ ಶ್ರೀನು (Boyapati Srinu) ಮತ್ತು ಬಾಲಯ್ಯ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಚಿತ್ರತಂಡ ತಿಳಿಸಿದೆ. ಮತ್ತೆ ಆ್ಯಕ್ಷನ್ ಸಿನಿಮಾ ತೋರಿಸೋಕೆ ರೆಡಿಯಾಗಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ ಕೂಡ ಶುರುವಾಗಲಿದೆ. ಇದನ್ನೂ ಓದಿ:ಉಮಾಪತಿ ಜೊತೆ ಐಶ್ವರ್ಯಾ ಸರ್ಜಾ ಅದ್ಧೂರಿ ಮದುವೆ

    ಇನ್ನೂ 2021ರಲ್ಲಿ ಬಾಲಯ್ಯ ನಟಿಸಿದ ‘ಅಖಂಡ’ ಸಿನಿಮಾಗೆ ಬೋಯಪತಿ ಶ್ರೀನು ನಿರ್ದೇಶನ ಮಾಡಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೇ ಟೀಮ್ ಮತ್ತೆ ಜೊತೆಯಾಗಿ ಕೆಲಸ ಮಾಡಲು ಮಂದಾಗಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ಅಂದಹಾಗೆ, ಇದೊಂದೇ ಸಿನಿಮಾ ಅಲ್ಲ ಹಲವು ಸಿನಿಮಾಗಳನ್ನು ಬಾಲಯ್ಯ ಒಪ್ಪಿಕೊಂಡಿದ್ದಾರೆ. ರಾಜಕೀಯದ ಜೊತೆ ನಟನೆಯಲ್ಲೂ ಅವರು ಬ್ಯುಸಿಯಾಗಿದ್ದಾರೆ. ನಟನ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‘ಜೈಲರ್ 2’ನಲ್ಲಿ ರಜನಿಕಾಂತ್ ಜೊತೆ ಬಾಲಯ್ಯ

    ‘ಜೈಲರ್ 2’ನಲ್ಲಿ ರಜನಿಕಾಂತ್ ಜೊತೆ ಬಾಲಯ್ಯ

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಇದೀಗ ‘ಜೈಲರ್ 2’ (Jailer 2) ಸಿನಿಮಾ ಮಾಡಲು ತಯಾರಿ ನಡೆಯುತ್ತಿದೆ. ಸದ್ಯ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ರಜನಿಕಾಂತ್ ಸಿನಿಮಾದಲ್ಲಿ ಬಾಲಯ್ಯ ಕೂಡ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಡಿವೋರ್ಸ್‌ಗೆ ಮುಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಂಪತಿ

    ‘ಜೈಲರ್’ (Jailer) ಸಿನಿಮಾ ಸಕ್ಸಸ್ ಆಗ್ತಿದ್ದಂತೆ ರಜನಿಕಾಂತ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.‌ ಒಪ್ಪಿಕೊಂಡಿರುವ ಸಿನಿಮಾವನ್ನು ಮುಗಿಸಿದ್ದಾರೆ. ಇತ್ತ ಜೈಲರ್ ಪಾರ್ಟ್ 2 ಮಾಡೋಕೆ ಡೈರೆಕ್ಟರ್ ನೆಲ್ಸನ್ ತಯಾರಿ ಮಾಡುತ್ತಿದ್ದಾರೆ. ಸ್ಕ್ರೀಪ್ಟ್ ಕೂಡ ಈಗಾಗಲೇ ಸಿದ್ಧವಾಗಿದ್ದು, ಕಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಡೆವಲಪ್ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಶೂಟಿಂಗ್ ಶುರುವಾಗಿದೆ. ಚಿತ್ರದ ಲೇಟೆಸ್ಟ್ ಸುದ್ದಿ ಅಂದರೆ, ಬಾಲಯ್ಯ ‌(Balayya) ಚಿತ್ರತಂಡಕ್ಕೆ ಸಾಥ್ ನೀಡುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ‘ಜೈಲರ್ 2’ನಲ್ಲಿ ನಂದಮೂರಿ ಬಾಲಕೃಷ್ಣ ನಟಿಸುತ್ತಾರೆ ಎನ್ನಲಾಗಿದೆ. ಈ ಹಿಂದೆ ಜೈಲರ್ ಪಾರ್ಟ್ 1ರಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಕೇಳಲಾಗಿತ್ತು. ಆದರೆ ಬಾಲಯ್ಯ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ನಟಿಸಲು ಆಗಿರಲಿಲ್ಲ. ಹಾಗಾಗಿ ಜೈಲರ್ 2ನಲ್ಲಿ ಅವರು ನಟಿಸುತ್ತಾರೆ ಎನ್ನಲಾಗಿದೆ. ರಜನಿಕಾಂತ್ ಜೊತೆ ಬಾಲಯ್ಯ ಉತ್ತಮ ಬಾಂದವ್ಯ ಇರುವ ಕಾರಣ ಈ ಸಿನಿಮಾದ ನಟಿಸುತ್ತಾರೆ ಎನ್ನಲಾಗಿದೆ.

    ‘ಜೈಲರ್‌’ನಲ್ಲಿ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ ಸೇರಿದಂತೆ ಅನೇಕರು ನಟಿಸಿದ್ದರು.

  • ಬಾಲಯ್ಯ ಜೊತೆ ನಟಿಸಲಿದ್ದಾರೆ ನಟಿ ಶ್ರೀಲೀಲಾ

    ಬಾಲಯ್ಯ ಜೊತೆ ನಟಿಸಲಿದ್ದಾರೆ ನಟಿ ಶ್ರೀಲೀಲಾ

    ನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. `ಧಮಾಕ’ (Dhamaka) ಚಿತ್ರದ ಸೂಪರ್ ಸಕ್ಸಸ್ ನಂತರ ಬಾಲಯ್ಯ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಭರ್ಜರಿ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ಕಿಸ್, ಭರಾಟೆ, ಬೈ ಟು ಲವ್, ಕನ್ನಡದ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಲೀಲಾ ಈಗ ತೆಲುಗು ಸಿನಿಮಾ ರಂಗದಲ್ಲಿ ಬೆಳಗುತ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಸೆಡ್ಡು ಹೊಡೆದು ಸಾಲು ಸಾಲು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗುತ್ತಿದ್ದಾರೆ. `ಧಮಾಕ’ (Dhamaka) ಚಿತ್ರದ ಸಕ್ಸಸ್ ನಂತರ ನಟಿಯ ಕೈಯಲ್ಲಿ ಏಳು ಸಿನಿಮಾಗಳಿವೆ.

    ಬಾಲಯ್ಯ (Balayya) ನಟನೆಯ ಚಿತ್ರದಲ್ಲಿ ಶ್ರೀಲೀಲಾ (Sreeleela) ನಟಿಸುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೆ ಅಧಿಕೃತ ಮಾಹಿತಿ ಹೊರ ಬಿದ್ದಿರಲ್ಲಿಲ್ಲ. ಇದೀಗ ನಟಿ ಶ್ರೀಲೀಲಾ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ನಂದಮೂರಿ ಬಾಲಯ್ಯ (Nandamuri Balayya) ಜೊತೆ ನಟಿಸುವ ಬಗ್ಗೆ ಅಧಿಕೃತ ಅಪ್‌ಡೇಟ್ ತಿಳಿಸಿದ್ದಾರೆ.

     

    View this post on Instagram

     

    A post shared by Sreeleela (@sreeleela14)

    ಚಿತ್ರದಲ್ಲಿ ಬಾಲಯ್ಯ ಅವರ ತಂಗಿ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಅನಿಲ್ ರವಿಪುಡಿ ನಿರ್ದೇಶನದ NBK 108 ಚಿತ್ರದಲ್ಲಿ ತ್ರಿಷಾ, ಕಾಜಲ್ ಅಗರ್‌ವಾಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  • ನಾಯಕಿ ಹನಿ ರೋಸ್ ಜೊತೆ ಬಾಲಯ್ಯ ಪಾರ್ಟಿ

    ನಾಯಕಿ ಹನಿ ರೋಸ್ ಜೊತೆ ಬಾಲಯ್ಯ ಪಾರ್ಟಿ

    `ಅಖಂಡ’ ಚಿತ್ರದ ಸಕ್ಸಸ್ ನಂತರ `ವೀರಸಿಂಹ ರೆಡ್ಡಿ’ (Veerasimha Reddy) ಸಕ್ಸಸ್ ಅಲೆಯಲ್ಲಿ ನಟ ಬಾಲಯ್ಯ ತೇಲುತ್ತಿದ್ದಾರೆ. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದೆ. ನಟಿ ಹನಿ ರೋಸ್ (Honey Rose) ಜೊತೆ ತೆಗೆದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಟಾಲಿವುಡ್ (Tollywood) ಅಂಗಳದಲ್ಲಿ ಸದ್ಯ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರದ್ದೇ ಸದ್ದು ಸುದ್ದಿ. `ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಖಡಕ್ ಆಗಿ ಅಬ್ಬರಿಸಿದ್ದರು. ದುನಿಯಾ ವಿಜಯ್ ವಿಲನ್ ಆಗಿ ಟಕ್ಕರ್ ಕೊಟ್ಟಿದ್ದರು. ಜ.12ಕ್ಕೆ ಸಿನಿಮಾ ತೆರೆಗೆ ಅಬ್ಬರಿಸಿತ್ತು. ರಿಲೀಸ್ ಕೆಲವೇ ದಿನಕ್ಕೆ 124 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಿರುವಾಗ ಚಿತ್ರದ ನಾಯಕಿ ಹನಿ ರೋಸ್ ಜೊತೆ ಬಾಲಯ್ಯ (Balayya) ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ಸದ್ಯ ಈ ಪಾರ್ಟಿಯಲ್ಲಿ ಬಾಲಕೃಷ್ಣ ಹಾಗೂ ನಟಿ ಹನಿ ರೋಸ್ ಕೈ ಬಳಸಿ ವಿಭಿನ್ನ ಶೈಲಿಯಲ್ಲಿ ಕುಡಿಯುತ್ತಿರುವ ಫೋಟೊವೊಂದು ವೈರಲ್ ಆಗಿದೆ. ಈ ಫೋಟೋ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

    ಇನ್ನು ನಟಿ ಹನಿ ರೋಸ್ ಮೂಲತಃ ಮಲಯಾಳಂನವರಾಗಿದ್ದು, `ವೀರಸಿಂಹ ರೆಡ್ಡಿ’ ಮೂಲಕ ಟಾಲಿವುಡ್ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ಹನಿ ರೋಸ್ ಬಾಲಕೃಷ್ಣ ಪತ್ನಿ ಮೀನಾಕ್ಷಿ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಸಕ್ಸಸ್ ಪಾರ್ಟಿಯಲ್ಲಿ ನೇರಳೆ ಬಣ್ಣದ ಗೌನ್ ಧರಿಸಿದ್ದ ನಟಿ ಹನಿ ರೋಸ್ ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದು, ಈ ಚಿತ್ರಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಅನಿಲ್ ರವಿಪುಡಿ (Anil Ravipudi) ನಿರ್ದೇಶಿಸಲಿರುವ ಬಾಲಕೃಷ್ಣ ನಟನೆಯ ಮುಂದಿನ ಚಿತ್ರಕ್ಕೂ ಸಹ ಹನಿ ರೋಸ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ಗಾಡ್ ಆಫ್ ಮಾಸ್ ಎಂದೇ ಕರೆಸಿಕೊಳ್ಳೋ ತೆಲುಗು ನಟ ನಂದಮುರಿ ಬಾಲಕೃಷ್ಣ 108ನೇ ಸಿನಿಮಾ ಇಂದು ಅದ್ದೂರಿಯಾಗಿ ಸೆಟ್ಟೇರಿದೆ. ಬಾಲಕೃಷ್ಣ 108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಇಬ್ಬರ ಕ್ರೇಜಿ ಕಾಂಬಿನೇಶನ್ ನಲ್ಲಿ  ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಶೈನ್ ಸ್ಕ್ರೀನ್ಸ್ ಬ್ಯಾನರ್ ನಡಿ ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

    NBK108ನೇ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ದು, ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ, ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತ ಸೀನ್ ಗೆ ಆಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.    ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಬಾಲಕೃಷ್ಣ ಅಭಿನಯದ 108ನೇ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಚಿತ್ರ ಮೂಡಿ ಬರ್ತಿದೆ. ಸದ್ಯದಲ್ಲೇ ಟೈಟಲ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಇಂದಿನಿಂದಲೇ ಚಿತ್ರೀಕರಣ ಆರಂಭವಾಗಲಿದ್ದು, ಆಕ್ಷನ್ ಸೀನ್ ನೊಂದಿಗೆ ಚಿತ್ರೀಕರಣ ಆರಂಭವಾಗಲಿದೆ. ಆಕ್ಷನ್ ಸೀನ್ ಸೆರೆ ಹಿಡಿಯಲೆಂದೇ ರಾಜೀವನ್ ಅವರ ನೇತೃತ್ವದಲ್ಲಿ ದೊಡ್ಡ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ಒಳಗೊಂಡ ಈ ಚಿತ್ರಕ್ಕೆ ಬಾಲಕೃಷ್ಣ ಅವರ ಮಾಸ್ ಇಮೇಜ್, ಸ್ಟಾರ್ ಡಂ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಅನಿಲ್ ರವಿಪುಡಿ ಪವರ್ ಫುಲ್ ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ನಿರ್ದೇಶನವಿದೆ.  ಬಾಲಕೃಷ್ಣ, ಅನಿಲ್ ರವಿಪುಡಿ, ಎಸ್. ತಮನ್ ಈ ಮೂರು ಕಾಂಬಿನೇಶನ್ ಒಂದಾಗಿರೋ ಈ ಚಿತ್ರದ ಮೇಲೆ ಬಾಲಯ್ಯ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿ.ರಾಮ್ ಪ್ರಸಾದ್ ಕ್ಯಾಮೆರಾ ನಿರ್ದೇಶನ, ತಮ್ಮಿ ರಾಜು ಸಂಕಲನ ಚಿತ್ರಕ್ಕಿದೆ. ಸದ್ಯದಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

    ಟಸಿಂಹ ನಂದಮುರಿ ಬಾಲಕೃಷ್ಣ ಅಭಿನಯದ ಮಾಸ್ ಆಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ಇಂದು ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಗೋಪಿಚಂದ್ ಮಲಿನೇನಿ ನಿರ್ದೇಶಿಸಿರುವ ಸಿನಿಮಾವಿದು. ಚಿತ್ರದಲ್ಲಿ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಮಾಸ್ ಮಹರಾಜ ನಂದಮುರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಬಾಲಯ್ಯ ಮಾಸ್ ಅಭಿಮಾನಿಗಳ ಮನತಣಿಸಲು ಚಿತ್ರತಂಡ ‘ಜೈ ಬಾಲಯ್ಯ’ ಮಾಸ್ ಸಾಂಗ್ ಇಂದು ಬಿಡುಗಡೆ ಮಾಡಿದೆ.

    ಹೈದ್ರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಡಿನ ಮೂಲಕ ಸಿನಿರಸಿಕರ ಮನಗೆಲ್ಲಲು ಹೊರಟಿದೆ. ಚಿತ್ರದ ಮಾಸ್ ನಂಬರ್ ಸಾಂಗ್ ‘ಜೈ ಬಾಲಯ್ಯ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯಕ್ಕೆ ಕರಿಮುಲ್ಲ ದನಿಯಾಗಿದ್ದು, ತಮನ್ ಎಸ್ ಮಾಸ್ ಮ್ಯೂಸಿಕ್ ಕಿಕ್ ನೀಡಿದೆ. ಬಾಲಯ್ಯ ಅಭಿಮಾನಿಗಳು ಹಾಡು ಕೇಳಿ ಥ್ರಿಲ್ ಆಗಿದ್ದು, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಆರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಕೊಂಡಿದೆ. ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    2023ರ ಸಂಕ್ರಾಂತಿ ಹಬ್ಬಕ್ಕೆ ‘ವೀರ ಸಿಂಹ ರೆಡ್ಡಿ’ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ವರಲಕ್ಷ್ಮೀ ಶರತ್ ಕುಮಾರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅದ್ದೂರಿ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ವೈ.ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ಸಾಯಿ ಮದೇವ್ ಸಂಭಾಷಣೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]