Tag: Nandakishore

  • ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    – ನಂದಕಿಶೋರ್‌ ವಿರುದ್ಧ ಶಬರೀಶ್‌ ಶೆಟ್ಟಿ ಆರೋಪ

    ಬೆಂಗಳೂರು: ಸುದೀಪ್‌ (Sudeep) ಹೆಸರು ಹೇಳಿ ಖ್ಯಾತ ನಿರ್ದೇಶಕ ನಂದಕಿಶೋರ್ (Nandakishore) ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ.

    9 ವರ್ಷಗಳ ಹಿಂದೆ ನಂದ ಕಿಶೋರ್‌ ನನ್ನಿಂದ 22 ಲಕ್ಷ ರೂ. ಪಡೆದು ಈಗ ಹಣ ನೀಡದೇ ವಂಚಿಸಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ (Shabarish Shetty) ಆರೋಪಿಸಿದ್ದಾರೆ.

    ಶಬರೀಶ್‌ ಶೆಟ್ಟಿ ಆರೋಪ ಏನು?
    9 ವರ್ಷಗಳ ಹಿಂದೆ ನಂದಕಿಶೋರ್‌ 22 ಲಕ್ಷ ರೂ. ಪಡೆದಿದ್ದರು. ದುಡ್ಡು ಕೊಡುವಂತೆ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್‌ ನೀಡಿದ್ದರು. ಆದರೆ ನನಗೆ ಯಾವುದೇ ಆಫರ್‌ ನೀಡಿರಲಿಲ್ಲ.

    ಈ ವಿಚಾರವನ್ನು ನಾನು ನಟ ಸುದೀಪ್‌ ಅವರ ಗಮನಕ್ಕೆ ತರಲು ಮುಂದಾಗಿದ್ದೆ. ಈ ವೇಳೆ ಸುದೀಪ್‌ ಬಳಿ ಹೇಳದಂತೆ ತಡೆಯುತ್ತಿದ್ದರು. ನಾನು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) ಆಡುವ ಕನಸ್ಸು ಕಟ್ಟಿಕೊಂಡಿದ್ದೆ. ಕನ್ನಡ ಚಲನಚಿತ್ರ ಕಪ್ (ಕೆಸಿಸಿ)ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನನ್ನು ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

     

    ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಎನ್ನುತ್ತಿದ್ದಾರೆ.

    ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಹಣ ನನಗೆ ಕೊಡದಿದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೇನೆ. ಫಿಲ್ಮ್ ಚೇಂಬರ್‌ಗೆ ದೂರು ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

    ಶಬರೀಶ್‌ ಆರೋಪಕ್ಕೆ ಪಬ್ಲಿಕ್‌ ಟಿವಿ ನಂದಕಿಶೋರ್‌ ಅವರನ್ನು ಸಂಪರ್ಕಿಸಿದೆ. ಸದ್ಯಕ್ಕೆ ನಾನು ಈ ಕುರಿತು ಏನೂ ಮಾತಾಡಲಾರೆ. ಕೆಲಸದ ಸಂಬಂಧ ನಾನು ಮುಂಬೈನಲ್ಲಿದ್ದೇನೆ. ಶಬರೀಶ್ ಶೆಟ್ಟಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಬೇರೆ ಬೇರೆಯವರ ಹೆಸರು ಎಳೆತಂದಿದ್ದಾರೆ. ನನ್ನ ವಿರುದ್ಧ ಮಾಡಿದ ಆರೋಪಕ್ಕೆ ಕಾನೂನು ರೀತಿಯಲ್ಲೇ ಉತ್ತರ ಕೊಡುವೆ. ವಕೀಲರ ಜೊತೆ ಮಾತಾಡಿ, ಈ ಕುರಿತು ಪ್ರತಿಕ್ರಿಯೆ ಕೊಡುವೆ. ನಾನೂ ಕೂಡ ಆತನ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

     

  • ಮೈಸೂರಿನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದ ‘ವೃಷಭ’: ಮೋಹನ್ ಲಾಲ್ ಸಿನಿಮಾ

    ಮೈಸೂರಿನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದ ‘ವೃಷಭ’: ಮೋಹನ್ ಲಾಲ್ ಸಿನಿಮಾ

    ಹು ನಿರೀಕ್ಷಿತ ‘ವೃಷಭ’ (Vrishabh) ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.  ಒಂದು ತಿಂಗಳ ಕಾಲ ಮೈಸೂರಿನಲ್ಲಿ (Mysore) ಚಿತ್ರೀಕರಣ ನಡೆದಿದೆ.  ಭಾರತೀಯ ಚಿತ್ರರಂಗದಲ್ಲಿ ಕಂಡು ಕೇಳರಿಯದ ಬೃಹತ್ ಆಕ್ಷನ್ ದೃಶ್ಯಗಳನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ. ನಂದಕಿಶೋರ್ (Nandakishor) ನಿರ್ದೇಶನದ ವೃಷಭ ಚಿತ್ರದ ಚಿತ್ರೀಕರಣ ಕಳೆದ ತಿಂಗಳು 22 ರಂದು ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಈ ಭಾಗದ  ಚಿತ್ರೀಕರಣದಲ್ಲಿ ಮೋಹನ್ ಲಾಲ್ (Mohanlal), ರೋಶನ್ ಮೇಕಾ, ಶನಾಯ ಕಪೂರ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ (Ragini Dwivedi) ಮುಂತಾದವರು ಪಾಲ್ಗೊಂಡಿದ್ದರು.

    ಹಾಲಿವುಡ್‌ ನ ಜನಪ್ರಿಯ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿರುವ ನಿಕ್ ಥರ್ಲೋ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ಒಂದು ವಿಶೇಷತೆಯಾದರೆ, ಬಾಹುಬಲಿ,  ಪುಲಿಮುರುಗನ್, ಶಿವಾಜಿ – ದಿ ಬಾಸ್, ಎಂದಿರನ್, ಪುಷ್ಪ – ದಿ ರೈಸ್ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಾದ ಪೀಟರ್ ಹೇನ್ಸ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿರುವುದು ಇನ್ನೊಂದು ಹೆಗ್ಗಳಿಕೆ.

    ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ನಂದಕಿಶೋರ್, ‘ಮೊದಲ ಹಂತದ ಚಿತ್ರೀಕರಣದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ ಖುಷಿ ನಮಗಿದೆ.  ಜೊತೆಗೆ ಹಗಲು ರಾತ್ರಿ ಕಷ್ಟಪಟ್ಟು ದುಡಿದ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳುವುದಕ್ಕೆ ಬಯಸುತ್ತೇನೆ.  ಮೋಹನ್ ಲಾಲ್ ಸರ್, ರೋಶನ್, ಶ್ರೀಕಾಂತ್, ರಾಗಿಣಿ ಮುಂತಾದವರು ನಮ್ಮ ಡೆಡ್ ಲೈನ್ ಗಳನ್ನು ಪೂರೈಸುವಲ್ಲಿ ಪೂರಕವಾಗಿ ಕೆಲಸ ಮಾಡಿದ್ದಾರೆ. ಪುಲಿಮುರುಗನ್ ಚಿತ್ರದ ನಂತರ ಮೋಹನ್ ಲಾಲ್ ಮತ್ತು ಪೀಟರ್ ಹೇನ್ಸ್ ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ವೃಷಭ ಚಿತ್ರವು ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರವಾಗಿ ಮೂಡಿಬರಲಿದೆ’ ಎಂದಿದ್ದಾರೆ.

    ವೃಷಭ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಅತೀ ದೊಡ್ಡ  ಆಕ್ಷನ್ ಚಿತ್ರವಾಗಿದ್ದು, ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಝಹ್ರ ಎಸ್ ಖಾನ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ವಿಎಫ್ಎಕ್ಸ್ ದೊಡ್ಡ ಪ್ರಮಾಣದಲ್ಲಿದ್ದು, ಇದೊಂದು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಅದ್ಭುತ ಸೆಂಟಿಮೆಂಟ್ ಚಿತ್ರವಾಗಿ ಮೂಡಿಬರುತ್ತಿದ್ದು, 2024ರ ಅತೀ ಜನಿರೀಕ್ಷಿತ ಚಿತ್ರವಾಗಿದೆ.

    ವೃಷಭ ಚಿತ್ರವನ್ನು ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲಂಸ್, ಎವಿಎಸ್ ಸ್ಟುಡಿಯೋಸ್ ನ ಜೊತೆಗೆ ಅರ್ಪಿಸುತ್ತಿದೆ‌. ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಅಭಿಷೇಕ್ ವ್ಯಾಸ್ (ಏವಿಎಸ್), ಶ್ಯಾಮ್ ಸುಂದರ್ (ಫರ್ಸ್ಟ್ ಸ್ಟೆಪ್ ಮೂವೀಸ್), ಏಕ್ತಾ ಕಪೂರ್, ಶೋಭಾ ಕಪೂರ್ (ಬಾಲಾಜಿ ಟೆಲಿಫಿಲಂಸ್), ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ (ಕನೆಕ್ಟ್ ಮೀಡಿಯಾ) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತೆಲುಗು, ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವು ತೆಲುಗು, ಮಲಯಾಳಂ, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋಹನ್ ಲಾಲ್-ನಂದಕಿಶೋರ್ ಚಿತ್ರಕ್ಕೆ ಚಾಲನೆ: ಇದು ಪ್ಯಾನ್ ಇಂಡಿಯಾ ಸಿನಿಮಾ

    ಮೋಹನ್ ಲಾಲ್-ನಂದಕಿಶೋರ್ ಚಿತ್ರಕ್ಕೆ ಚಾಲನೆ: ಇದು ಪ್ಯಾನ್ ಇಂಡಿಯಾ ಸಿನಿಮಾ

    ನ್ನಡದ ಮತ್ತೋರ್ವ ಪ್ರತಿಭಾವಂತ ನಿರ್ದೇಶಕ ಬೇರೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹಿಟ್ ಸಿನಿಮಾಗಳನ್ನು ನೀಡಿರುವ ನಂದಕಿಶೋರ್, ಇದೀಗ ಮಲಯಾಳಂ (Malayalam) ಚಿತ್ರರಂಗಕ್ಕೆ ಹಾರಿದ್ದಾರೆ. ಮಲಯಾಳಂ ಚಿತ್ರರಂಗದ ದಿಗ್ಗಜ ಮೋಹನ್ ಲಾಲ್ (Mohanlal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ನಿನ್ನೆಯಷ್ಟೇ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

    ಈ ಹಿಂದೆ ಮೋಹನ್ ಲಾಲ್ ಜೊತೆಗಿರುವ ನಂದಕಿಶೋರ್ (Nandakishor) ಫೋಟೋ ವೈರಲ್ ಆಗಿತ್ತು. ಅವರೊಂದಿಗೆ ಸಿನಿಮಾ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಅದೀಗ ನಿಜವಾಗಿದೆ. ಚಿತ್ರಕ್ಕೆ ವೃಷಭ  (Vrushabha) ಎಂದು ಹೆಸರಿಟ್ಟಿದ್ದು, ಇದೇ ತಿಂಗಳಿನಿಂದಲೇ ಚಿತ್ರೀಕರಣ ಆರಂಭಿಸುವುದಾಗಿ ನಂದಕಿಶೋರ್ ತಿಳಿಸಿದ್ದಾರೆ. ಮೋಹಲ್ ಲಾಲ್ ಜೊತೆ ಸಿನಿಮಾ ಮಾಡುತ್ತಿರುವುದು ತಮ್ಮ ಪುಣ್ಯ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

    ಇದೊಂದು ಪೌರಾಣಿಕ ಹಾಗೂ ಫ್ಯಾಂಟಸಿ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಎಂದು ಹೇಳಿಕೊಂಡಿರುವ ನಂದಕಿಶೋರ್, ಸಾಹಸ ಪ್ರಧಾನ ದೃಶ್ಯಗಳನ್ನೂ ಹೊಂದಿರುವುದಾಗಿ ತಿಳಿಸಿದ್ದಾರೆ. ಸತತ ಎಂಟು ತಿಂಗಳ ಕಾಲ ಸ್ಕ್ರಿಪ್ಟ್ ಮೇಲೆಯೇ ಕೆಲಸ ಮಾಡಿದ್ದಾರಂತೆ ನಂದಕಿಶೋರ್, ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

     

    ಮೋಹನ್ ಲಾಲ್ ಜೊತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದ್ದು, ಶ್ರೀಕಾಂತ್ ಮೇಕಾ ಪುತ್ರ ರೋಷನ್ ಕೂಡ ನಟಿಸುತ್ತಿದ್ದಾರೆ. ಅಲ್ಲದೇ, ಕನ್ನಡದ ಕಲಾವಿದರಿಗೂ ಅವಕಾಶ ನೀಡಲಿದ್ದಾರಂತೆ. ಹಿಂದಿ ಸಿನಿಮಾಗಳಲ್ಲಿ ಪಳಗಿರುವ ಸಂತೋಷ್ ತುಂಡಿಯಲ್ ಸಿನಿಮಾಟೋಗ್ರಾಫರ್ ಆಗಿದ್ದು, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಸಂಗೀತ ಚಿತ್ರಕ್ಕಿದೆ. ಮೂಲ ತೆಲುಗು ಮತ್ತು ಮಲಯಾಳಂನಲ್ಲಿ ಸಿನಿಮಾ ತಯಾರಾಗಲಿದ್ದು, ನಂತರ ಇತರ ಭಾಷೆಗಳಿಗೆ ಡಬ್ ಮಾಡುತ್ತಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಚ್ಚ ಸುದೀಪ್ ಸಿನಿಮಾ ಮೂಲಕ ಕನ್ನಡಕ್ಕೆ ಬರಲಿದ್ದಾರಾ ನಿರ್ದೇಶಕ ಚರಣ್

    ಕಿಚ್ಚ ಸುದೀಪ್ ಸಿನಿಮಾ ಮೂಲಕ ಕನ್ನಡಕ್ಕೆ ಬರಲಿದ್ದಾರಾ ನಿರ್ದೇಶಕ ಚರಣ್

    ಮೂರು ಕಥೆಗಳನ್ನು ಒಪ್ಪಿಕೊಂಡಿರುವುದಾಗಿ ಮೊನ್ನೆಯಷ್ಟೇ ಕಿಚ್ಚ ಸುದೀಪ್ (Kichcha Sudeep) ಹೇಳಿದ್ದರು. ಈ ಮಾತಿನ ಬೆನ್ನಲ್ಲೇ ರಾಷ್ಟ್ರ ಪ್ರಶಸ್ತಿ ತಮಿಳು ನಿರ್ದೇಶಕ ಚರಣ್ (Charan)  ಕನ್ನಡಕ್ಕೆ ಬರುತ್ತಿರುವುದಾಗಿ ಸುದ್ದಿ ಆಗಿದೆ. ಕಿಚ್ಚನಿಗಾಗಿ ಸಿನಿಮಾ ಮಾಡಲು ಕನ್ನಡದ ಇಬ್ಬರು ನಿರ್ದೇಶಕರು ರೆಡಿಯಾಗಿದ್ದಾರೆ. ಅವರು ಹೆಸರು ಕೂಡ ಬಹಿರಂಗವಾಗಿದೆ ಮತ್ತು ಅವರು ಸಿನಿಮಾ ಮಾಡುವ ಕುರಿತು ಹೇಳಿಕೊಂಡಿದ್ದಾರೆ. ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದೆ.

    ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚನಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ಅನೂಪ್ ಭಂಡಾರಿ (Anoop Bhandari) ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಅವರಿಗಾಗಿಯೇ ಕಥೆ ಬರೆಯುತ್ತಿರುವುದಾಗಿಯೂ ತಿಳಿಸಿದ್ದರು. ಅಲ್ಲದೇ, ನಂದಕಿಶೋರ್ (Nandakishore) ಕೂಡ ಕಿಚ್ಚನಿಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ. ಆ ಕಥೆಯೂ ಲಾಕ್ ಆಗಿದೆ. ಇದೀಗ ಚರಣ್ ಹೆಸರು ಕೇಳಿ ಬಂದಿದೆ.  ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಚರಣ್ ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟವರು. ತಮ್ಮ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ಸುದೀಪ್ ಗಾಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ಅವರು ಮಾಡಲಿದ್ದಾರಂತೆ. ಅಧಿಕೃತವಾಗಿ ಈ ವಿಷಯವನ್ನು ಚರಣ್ ಆಗಲಿ ಅಥವಾ ಸುದೀಪ್ ಆಗಲಿ ಹೇಳದೇ ಇದ್ದರೂ ಗಾಂಧಿನಗರದಲ್ಲಂತೂ ಈ ಸುದ್ದಿ ಭರ್ಜರಿಯಾಗಿ ಸೇಲ್ ಆಗುತ್ತಿದೆ.

    ಸದ್ಯ ಸುದೀಪ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರು ಹೇಳಿದ ಅಭ್ಯರ್ಥಿಗಳ ಪರ ಅವರು ಪ್ರಚಾರ ಮಾಡಲಿದ್ದಾರೆ. ಶಿಗ್ಗಾಂವಿಯಿಂದ ಶುರುವಾದ ಪ್ರಚಾರ ರಾಜ್ಯಾದ್ಯಂತ ಮುಂದುವರೆಯಲಿದೆ. ಚುನಾವಣೆ ನಂತರವೇ ಅವರು ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

    ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

    ವಿಕ್ರಾಂತ್ ರೋಣ (Vikrant Rona) ಸಿನಿಮಾದ ನಂತರ ಈವರೆಗೂ ಹೊಸ ಸಿನಿಮಾದ (New Cinema) ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಕಿಚ್ಚ ಸುದೀಪ್ (Sudeep). ವಿಕ್ರಾಂತ್ ರೋಣ ಚಿತ್ರ ರಿಲೀಸ್ ಆಗಿ ಹಲವು ತಿಂಗಳು ಕಳೆದರೂ, ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಲೇ ಇದ್ದಾರೆ. ಈ ನಡುವೆ ಮೂರ್ನಾಲ್ಕು ನಿರ್ದೇಶಕರ ಹೆಸರೂ ಕೇಳಿ ಬಂದಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸುದೀಪ್ ನಟನೆಯ ಹೊಸ ಸಿನಿಮಾದ ಘೋಷಣೆ ಏಪ್ರಿಲ್ ನಲ್ಲಿ ನಡೆಯಲಿದೆ. ಅದು ಹಲವು ಭಾಷೆಗಳಲ್ಲಿ ಮೂಡಿ ಬರುವ ಚಿತ್ರವಾಗಲಿದೆ.

    ಕನ್ನಡದ ನಿರ್ದೇಶಕರಾದ ನಂದಕಿಶೋರ್ (Nandakishor), ಅನೂಪ್ ಭಂಡಾರಿ (Anoop Bhandari) ಸೇರಿದಂತೆ ಕೆಲ ನಿರ್ದೇಶಕರು ಈಗಾಗಲೇ ಸುದೀಪ್ ಗಾಗಿ ಕಥೆ ಬರೆದುಕೊಂಡು ಕೂತಿದ್ದಾರೆ. ಜೊತೆಗೆ  ಕಬಾಲಿ ಅಂತಹ ಭಾರೀ ಬಜೆಟ್ ಸಿನಿಮಾ ಮಾಡಿರುವ ಕಲೈಪುಲಿ ಎಸ್ ಥಾನು ಕೂಡ ಸುದೀಪ್ ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಈ ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವೇ ಏಪ್ರಿಲ್ ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ವಿಜಯ್ (Vijay) ನಿರ್ದೇಶನದಲ್ಲಿ ಮೂಡಿ ಬರಲಿರುವ ಆ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸವನ್ನೂ ಶುರು ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದ ಮಾಹಿತಿಯನ್ನೂ ನಿರ್ಮಾಣ ತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗಲಿದ್ದು, ನೂರು ಕೋಟಿ ಬಜೆಟ್ ಚಿತ್ರ ಇದಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ವಿಜಯ್ ನಿರ್ದೇಶನದ ಸಿನಿಮಾ ನಂತರ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಬಾಷಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಆ ನಂತರ ನಂದಕಿಶೋರ್ ಅವರಿಗೆ ಕಿಚ್ಚ ಡೇಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಸುದೀಪ್ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.

  • ಕಿಚ್ಚ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಕಿಚ್ಚ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    `ವಿಕ್ರಾಂತ್‌ರೋಣ’ (Vikrantrona) ಸಿನಿಮಾದ ಸಕ್ಸಸ್ ನಂತರ ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada 9) ಕಿಚ್ಚ ಸುದೀಪ್ ಬ್ಯುಸಿಯಾಗಿದ್ದರು. ಈ ಶೋಗೆ ಬ್ರೇಕ್ ಬಿದ್ದಿದೆ. ಈ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗಳತ್ತ ಸುದೀಪ್ (Actor Sudeep)  ಗಮನ ಕೊಡ್ತಿದ್ದಾರೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಕಿಚ್ಚನ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.

    2022ರಲ್ಲಿ `ವಿಕ್ರಾಂತ್‌ರೋಣ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಬಳಿಕ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದರು. ಈ ಶೋ ಈಗ ಮುಗಿದಿದೆ. ಕಿಚ್ಚ ಮುಂದೇನು ಮಾಡ್ತಾರೆ ಅನ್ನೋ ಮಾಹಿತಿ ಕೂಡ ದಕ್ಕಿದೆ. ಕೆಆರ್‌ಜಿ ಸ್ಟುಡಿಯೋ (Krg Studio) ಸಂಸ್ಥೆ ಜೊತೆ ಸಿನಿಮಾ ಮಾಡಲು ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿನಿಮಾರಂಗಕ್ಕೆ ದಾರಿ ತೋರಿಸಿದ್ದೇ ರಕ್ಷಿತ್, ರಿಷಬ್: ನಟಿ ರಶ್ಮಿಕಾ ಮಂದಣ್ಣ

    ಈಗಾಗಲೇ ಕೆಜಿಎಫ್ 1 ಮತ್ತು ಚಾಪ್ಟರ್ 2ಗೆ ಕೆಆರ್‌ಜಿ ಹಂಚಿಕೆ ಮಾಡಿದ ಖ್ಯಾತಿಯಿದೆ. ಈಗ ಕಿಚ್ಚ ಸುದೀಪ್ ನಟನೆಯ ಮುಂಬರುವ ಸಿನಿಮಾಗೆ ʻಕೆಆರ್‌ಜಿ ಸಂಸ್ಥೆʼ ಬಂಡವಾಳ ಹೂಡಲು ಮುಂದಾಗಿದ್ದಾರೆ. ಈ ಸುದ್ದಿಗೆ ಪುಷ್ಟಿ ನೀಡುವಂತಹ ಫೋಟೋ ಸದ್ದು ಮಾಡ್ತಿದೆ. ಕಿಚ್ಚನ ಜೊತೆ ʻಕೆಆರ್‌ಜಿʼ ಸಂಸ್ಥೆಯ ಕಾರ್ತಿಕ್ ಗೌಡ ಮತ್ತು ನಿರ್ದೇಶಕ ನಂದಕಿಶೋರ್ ಜೊತೆಯಿರುವ ಫೋಟೋ ವೈರಲ್ ಆಗುತ್ತಿದೆ.

    ಕಿಚ್ಚನ ಚಿತ್ರಕ್ಕೆ ನಂದ ಕಿಶೋರ್ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ. ಈ ಹಿಂದೆ `ರನ್ನ’ ಹಾಗೂ `ಮುಕುಂದ ಮುರಾರಿ’ ಸಿನಿಮಾದಲ್ಲಿ ಸುದೀಪ್ ಹಾಗೂ ನಂದಕಿಶೋರ್ ಒಟ್ಟಾಗಿ ಕೆಲಸ ಮಾಡಿದ್ದರು. ನಂದಕಿಶೋರ್ (Nandakishore) ಮತ್ತು ಸುದೀಪ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸದ್ಯದಲ್ಲೇ ಗುಡ್ ನ್ಯೂಸ್ ಕೊಡಲಿದ್ದಾರೆ ಕಿಚ್ಚ ಸುದೀಪ್

    ಸದ್ಯದಲ್ಲೇ ಗುಡ್ ನ್ಯೂಸ್ ಕೊಡಲಿದ್ದಾರೆ ಕಿಚ್ಚ ಸುದೀಪ್

    ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಸುದೀಪ್ ಯಾವ ಮತ್ತು ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈವರೆಗೂ ಸುದೀಪ್ ಈ ವಿಷಯದ ಕುರಿತು ಮಾತೂ ಆಡಿಲ್ಲ. ಹಾಗಾಗಿ ಯಾರ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಅಲ್ಲದೇ, ಹೊಸ ಸಿನಿಮಾವನ್ನು ಯಾವಾಗ ಅನೌನ್ಸ್ ಮಾಡುತ್ತಾರೆ ಎಂದು ಕಾಯುವಿಕೆಯೇ ಹೆಚ್ಚಾಗಿತ್ತು. ಕೊನೆಗೂ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾದ ನಂತರ ಮತ್ತೆ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅಲ್ಲದೇ, ನಂದಕಿಶೋರ್ ಕೂಡ ಸುದೀಪ್ ಗಾಗಿ ಒಂದು ಸಿನಿಮಾ ಮಾಡಬೇಕಿದೆ. ರಕ್ಷಿತ್ ಶೆಟ್ಟಿ ಜೊತೆಯೂ ಸುದೀಪ್ ಒಂದು ಚಿತ್ರವನ್ನು ಮಾಡಬೇಕಿದೆ. ಈ ನಡುವೆ ಸ್ವತಃ ಸುದೀಪ್ ಅವರೇ ಸಲ್ಮಾನ್ ಖಾನ್ ಗಾಗಿ ಒಂದು ಚಿತ್ರವನ್ನು ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು. ಇವುಗಳಲ್ಲಿ ಮೊದಲು ಯಾವುದು ಆಗಲಿದೆ ಎನ್ನುವುದು ಅಭಿಮಾನಿಗಳ ಮುಂದಿರುವ ಪ್ರಶ್ನೆ. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿರುವ ಸುದೀಪ್, ಸದ್ಯದಲ್ಲೇ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ‘ನಾನು ವಿಶ್ರಾಂತಿಯಲ್ಲಿ ಇದ್ದೇನೆ ಎಂದು ಭಾವಿಸಬೇಕಿಲ್ಲ. ಹಲವಾರು ಕಥೆಗಳನ್ನು ಕೇಳುತ್ತಿದ್ದೇನೆ. ನನಗೆ ಎಕ್ಸೈಟ್ ಕೊಡುವಂಥ, ಈ ಪಾತ್ರವನ್ನು ನಾನು ಮಾಡಬಲ್ಲೆ ಎಂದು ಕಿಕ್ ಕೊಡುವಂತಹ ಸ್ಕ್ರಿಪ್ಟ್ ಆಯ್ಕೆಯಾದ ತಕ್ಷಣವೇ ಅಭಿಮಾನಿಗಳ ಜೊತೆ ಅದನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ ಸುದೀಪ್.

    ಸುದೀಪ್ ಅವರ ಆಪ್ತರು ಹೇಳುವಂತೆ, ಮೂರ್ನಾಲ್ಕು ಕಥೆಗಳನ್ನು ಸುದೀಪ್ ಆಯ್ಕೆ ಮಾಡಿಕೊಂಡಿದ್ದಾರಂತೆ. ಆದರೆ, ಯಾವ ಕಥೆಯನ್ನು ಮೊದಲು ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆದಿದೆ. ಈ ಸಲ ಅಭಿಮಾನಿಗಳ ಮುಂದೆ ನಿರ್ದೇಶಕನಾಗಿ ನಿಲ್ಲಬೇಕಾ? ಅಥವಾ ನಟನಾಗಿ ಸಿಹಿ ಸುದ್ದಿ ಕೊಡಬೇಕಾ ಎನ್ನುವ ಗೊಂದಲ ಕೂಡ ಇದೆಯಂತೆ. ಏನೇ ಇರಲಿ, ಸದ್ಯದಲ್ಲೇ ಸುದೀಪ್ ಭರ್ಜರಿ ಸುದ್ದಿಯನ್ನೇ ಕೊಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರ್ಮಾಪಕ ಕೆ.ಮಂಜು ಪುತ್ರನ ‘ರಾಣ’ ಸಿನಿಮಾದ ಹಾಡು ರಿಲೀಸ್ ಮಾಡಿದ ಜೋಗಿ ಪ್ರೇಮ್

    ನಿರ್ಮಾಪಕ ಕೆ.ಮಂಜು ಪುತ್ರನ ‘ರಾಣ’ ಸಿನಿಮಾದ ಹಾಡು ರಿಲೀಸ್ ಮಾಡಿದ ಜೋಗಿ ಪ್ರೇಮ್

    ನಿರ್ಮಾಪಕ ಕೆ.ಮಂಜು (, K. Manju) ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ “ರಾಣ” (Rana) ಚಿತ್ರದ “ಗಲ್ಲಿ ಬಾಯ್” ಹಾಡನ್ನು ಜೋಗಿ ಪ್ರೇಮ್ (Jogi Prem) ಬಿಡುಗಡೆ ಮಾಡಿದರು. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸುಂದರವಾಗಿದೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಗಾಯನ ಸುಮಧುರವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಜೋಗಿ ಪ್ರೇಮ್ ಹಾರೈಸಿದರು.

    ಮೊದಲು ನಾನು, ನನ್ನ ಸ್ಪೂರ್ತಿಯಾದ ವಿಷ್ಣುವರ್ಧನ್ ಹಾಗೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಂದನ್ ಶೆಟ್ಟಿ  ಎಲ್ಲರ ಮನಸಿಗೆ ಹತ್ತಿರವಾಗುವಂತಹ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಅನಿರುಧ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಅವರ ಅದ್ಭುತ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಒಳ್ಳೆಯ ನೃತ್ಯಗಾರ್ತಿ.  ನೃತ್ಯ ನಿರ್ದೇಶಕ ಇಮ್ರಾನ್ ಮಾಸ್ಟರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ ಅವರ ಕಾರ್ಯವೈಖರಿ ಚೆನ್ನಾಗಿದೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ನವೆಂಬರ್ 11 ರಂದು ಚಿತ್ರ ತೆರೆಗೆ ಬರಲಿದೆ.‌ ಹಾಡು ಬಿಡುಗಡೆ ಮಾಡಿಕೊಟ್ಟ ಪ್ರೇಮ್ ಅವರಿಗೆ ಹಾಗೂ ಅವಕಾಶ ನೀಡಿರುವ ನಿರ್ಮಾಪಕ ಪುರುಷೋತ್ತಮ್ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್ (Shreyash). ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಚಿತ್ರ ಚೆನ್ನಾಗಿ ಬಂದಿದೆ. ಈ ಹಾಡಂತೂ ಸಖತ್‌ ಆಗಿದೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty)  ಅವರು ಬರೆದಿರುವ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ ಎಂದರು ನಾಯಕಿ ರೀಷ್ಮಾ ನಾಣಯ್ಯ. ಗುಜ್ಜಲ್ ಪುರುಷೋತ್ತಮ್ ಅವರು ಒಂದು ಸಿನಿಮಾ ಮಾಡುತ್ತಿದ್ದೇನೆ. ನೀವು ಜೊತೆಗಿರಬೇಕು ಎಂದರು.  ನನ್ನ ಮಗನೇ ಹೀರೋ ಅಂತ ತಿಳಿದ ಮೇಲೆ, ನಾನು ಅವನಿಗೆ ಚಿತ್ರ ಚೆನ್ನಾಗಿ ಬರಲು ನಿರ್ದೇಶಕರು ಕಾರಣ ಅವರು ಹೇಳಿದ ಹಾಗೆ ಕೇಳಬೇಕು ಅಂತ ಹೇಳಿದೆ. “ರಾಣ” ಒಂದೊಳ್ಳೆಯ ಕೌಟುಂಬಿಕ ಚಿತ್ರ.  ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿರುವವರ ಕುರಿತಾದ ಕಥೆಯಿದೆ. ನಂದಕಿಶೋರ್ (Nandakishor) ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲರ ಕೆಲಸ ಚೆನ್ನಾಗಿದೆ. ನವೆಂಬರ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದೆ ಎಂದು ತಿಳಿಸಿದ ಕೆ.ಮಂಜು, ಹಾಡು ಬಿಡುಗಡೆ ಮಾಡಲು ದೂರದ ಮುಂಬೈನಿಂದ ಬಂದ ಪ್ರೇಮ್ ಅವರಿಗೆ ಧನ್ಯವಾದ ಹೇಳಿದರು.

    ಹಾಡು (Song) ಬಿಡುಗಡೆ ಮಾಡಿದ ಪ್ರೇಮ್ ಸರ್ ಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.‌ ನವೆಂಬರ್ 11ರಂದು ಬಿಡುಗಡೆಯಾಗಲಿದೆ. ತಂಡದವರೆಲ್ಲಾ ಸೇರಿ ಉತ್ತಮ ಚಿತ್ರ ಮಾಡಿದ್ದೇವೆ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನಂದಕಿಶೋರ್. ಕೆ.ಮಂಜು ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್. ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ  ಚೆನ್ನಾಗಿ ಬಂದಿದೆ. ಹಾಡುಗಳು ಸುಂದರವಾಗಿದೆ. ಇದೇ ಮೊದಲ ಬಾರಿಗೆ ನಾನು ಹಿನ್ನೆಲೆ ಸಂಗೀತ ಕೂಡ ನೀಡಿದ್ದೇನೆ ಎಂದು ಸಂಗೀತದ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಕೋಟೆ ಪ್ರಭಾಕರ್, ಅಶೋಕ್, ರಘು ಹಾಗೂ ಗಾಯಕ ಅನಿರುದ್ಧ್ ಶಾಸ್ತ್ರಿ ಚಿತ್ರದ ಕುರಿತು ಮಾತನಾಡಿದರು. ರೈತ ಕೇಶವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಂದಕಿಶೋರ್ ನಿರ್ದೇಶನದ ‘ರಾಣ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ನಂದಕಿಶೋರ್ ನಿರ್ದೇಶನದ ‘ರಾಣ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ಕೆ.ಮಂಜು ಅರ್ಪಿಸುವ,  ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಿಸಿರುವ, ನಂದಕಿಶೋರ್ (Nandakishore) ನಿರ್ದೇಶನದಲ್ಲಿ  ಶ್ರೇಯಸ್ ಕೆ ಮಂಜು (Shreyas) ನಾಯಕನಾಗಿ ‌ಅಭಿನಯಿಸಿರುವ “ರಾಣ” (Raana) ಚಿತ್ರ ನವೆಂಬರ್ 11 ರಂದು ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ (Release). ‌ರೀಷ್ಮಾ ನಾಣಯ್ಯ (Reeshma Nanaiah) ಈ ಚಿತ್ರದ ನಾಯಕಿ. ರಜನಿ ಭಾರದ್ವಾಜ್,  ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ರವಿವರ್ಮ, ಚೇತನ್,ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ಇದನ್ನೂ ಓದಿ:ಹೆರಿಗೆಯ ನಂತರ ಬದಲಾಯ್ತು ಪ್ರಣಿತಾ ಸುಭಾಷ್ ಲುಕ್

    ಚಿತ್ರದಲ್ಲಿ ಮೂರು ಹಾಡುಗಳಿದ್ದು, ಚಂದನ್ ಶೆಟ್ಟಿ (Chandan Shetty) ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ  ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಗೆ ಕನ್ನಡದ ನಂದಕಿಶೋರ್ ಆ್ಯಕ್ಷನ್ ಕಟ್

    ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಗೆ ಕನ್ನಡದ ನಂದಕಿಶೋರ್ ಆ್ಯಕ್ಷನ್ ಕಟ್

    ದ್ಯ ರಾಣಾ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ನಂದ ಕಿಶೋರ್ ಸದ್ಯದಲ್ಲೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಸಿನಿಮಾ ಮಾಡಲಿದ್ದಾರೆ. ಹಾಗಂತ ಸ್ವತಃ ಮೋಹನ್ ಲಾಲ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಎಕ್ಸೈಟ್ ಆಗಿದ್ದೇನೆ ಎಂದು ಹೇಳಿದ್ದಾರೆ.

    ಈ ಚಿತ್ರಕ್ಕೆ ವೃಷಭ ಎಂದು ಹೆಸರಿಡಲಾಗಿದ್ದು, ಎವಿಎಸ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಭಿಷೇಕ್ ‍ವ್ಯಾಸ್, ಪ್ರವೀಣ್ ಸಿಂಗ್ ಮತ್ತು ಶ್ಯಾಂಸ್ ಸುಂದರ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಎವಿಎಸ್ ಸ್ಟುಡಿಯೋ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.  ಹಾಗಾಗಿ ಇಂತಹ ಸಿನಿಮಾಗೆ ನಿಮ್ಮ ಬೆಂಬಲವಿರಲಿ ಎಂದೂ ಮೋಹನ್ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿದ್ದು, ಕಥಾ ನಾಯಕ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುವಂತಹ ಪಾತ್ರವಾಗಿದೆ ಎಂದು ನಂದಕಿಶೋರ್ ಮಾತನಾಡಿದ್ದಾರೆ. ಜುಲೈ 2023 ರಿಂದ ಈ ಸಿನಿಮಾ ಶುರುವಾಗಲಿದ್ದು, ತೆಲುಗಿನ ಸ್ಟಾರ್ ನಟರೊಬ್ಬರು ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]