ಸ್ಯಾಂಡಲ್‍ವುಡ್‍ನ (Sandalwood) ಯುವನಟ ಶಬರೀಶ್ ಶೆಟ್ಟಿ ಆಘಾತಕಾರಿ ವೀಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಸಹಾಯಕತೆಯಿಂದ ವೀಡಿಯೋ ಮಾಡಿ ನಾನು ಸತ್ತರೆ ಅದಕ್ಕೆ ಕಾರಣ ನಿರ್ದೇಶಕ ನಂದಕೀಶೋರ್ (Nanda Kishore) ಹಾಗೂ ಸಾರಾ ಗೋವಿಂದು (Sa Ra Govindu) ಎಂದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ನಿರ್ದೇಶಕ ನಂದಕೀಶೋರ್ ಮೇಲೆ 22 ಲಕ್ಷ ರೂ. ವಂಚಿಸಿದ ಆರೋಪ ಮಾಡಿದ್ದರು.
ನಿರ್ದೇಶಕ ನಂದಕೀಶೋರ್ ಮೇಲೆ ವಂಚನೆ ಆರೋಪ (Fraud Case) ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಬಳಿಕ ಫಿಲ್ಮ್ ಚೇಂಬರ್ ವತಿಯಿಂದ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಯುವನಟ ಶಬರೀಶ್‍ಗೆ ಕರೆಮಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಹಣ ವಾಪಸ್ ಕೊಡಿಸುತ್ತೇನೆ ದುಡಕಬೇಡ ಎಂದಿದ್ದರಂತೆ. ಸಾರಾ ಗೋವಿಂದು ಕೊಟ್ಟ ಸಮಯ ಮುಗಿದ ಬಳಿಕ ಶಬರೀಶ್ ಕರೆ ಮಾಡಿ ವಿಚಾರಿಸಿದಾಗ ಏನ್ ಬೇಕಾದ್ರೂ ಮಾಡಿಕೊಳ್ಳಿ ಎಂಬ ಉತ್ತರ ಬಂದಿದ್ದಕ್ಕೆ ನೊಂದ ಯುವನಟ ಇದೀಗ ವೀಡಿಯೋ ರೆಕಾರ್ಡ್ ಮಾಡಿ ನಡೆದಿರುವ ಘಟನೆ ವಿವರಿಸಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ
ನಿರ್ದೇಶಕ ನಂದಕಿಶೋರ್ ಮೇಲೆ 22 ಲಕ್ಷ ರೂ. ವಂಚನೆ ಆರೋಪ ಮಾಡಿದ್ದ ಶಬರೀಶ್ ಶೆಟ್ಟಿ. ಫಿಲ್ಮ್ ಚೇಂಬರ್‍ಗೆ ದೂರು ಕೊಟ್ಟಿದ್ದರು. ಬಳಿಕ ಸಾಲಪಡೆದ ನಂದಕಿಶೋರ್ ಸಂಪರ್ಕ ಮಾಡಲು ಆಗದೆ ಅಸಹಾಯಕರಾಗಿದ್ದೇನೆ ಎಂದಿದ್ದಾರೆ. ಬಳಿಕ ಶಬರೀಶ್‍ಗೆ ಕರೆ ಮಾಡಿದ್ದ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ, ನಂದಕಿಶೋರ್ ಪರವಾಗಿ ಸಂಧಾನ ಮಾಡೋದಾಗಿ ಹೇಳಿದ್ದರಂತೆ. ಸಾರಾ ಗೋವಿಂದ್ ಮಾತು ಕೇಳಿ ಪೊಲೀಸರಿಗೆ ದೂರು ಕೊಡುವ ನಿರ್ಧಾರವನ್ನ ಕೈ ಬಿಟ್ಟಿದ್ದ ಅವರು, 2 ತಿಂಗಳಾದ್ರೂ ಸಂಧಾನ ಆಗದೇ ಇದ್ದಾಗ ಮತ್ತೆ ಸಾರಾ ಗೋವಿಂದ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ನಿನ್ನ ಕೈಯಿಂದ ಏನ್ ಮಾಡೋಕೆ ಆಗತ್ತೋ ಮಾಡ್ಕೋ ಅಂದ್ರಂತೆ. ಇತ್ತ ಹಣವೂ ಬಾರದೇ, ಅತ್ತ ಸಂಧಾನವೂ ನಡೆಯದೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.
ನಾನೇನಾದರೂ ಸೂಸೈಡ್ ಮಾಡಿಕೊಂಡರೆ ಅದಕ್ಕೇ ನೇರ ಹೊಣೆ ನಂದಕಿಶೋರ್ ಮತ್ತು ಸಾರಾ ಗೋವಿಂದ್ ಎಂದು ಆರೋಪಿಸಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ ಶಬರೀಶ್ ಶೆಟ್ಟಿ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು








`ಕೆಜಿಎಫ್ 2′ ನಂತರ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರುವ ಸಂಜಯ್ ದತ್‌ಗಾಗಿಯೇ ಸೂಪರ್ ಕಥೆಯೊಂದನ್ನ ನಂದ ಕಿಶೋರ್ ರೆಡಿ ಮಾಡಿದ್ದಾರೆ. ಸಂಜಯ್ ದತ್ ಕಥೆ ಕೇಳಿ ಥ್ರಿಲ್ ಆಗಿ, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತೆಲುಗಿನ ಸ್ಟಾರ್ ವರುಣ್ ತೇಜ್ ಕೂಡ ಸಾಥ್ ನೀಡಿಲಿದ್ದಾರೆ. ಇದನ್ನೂ ಓದಿ:
ಇತ್ತೀಚೆಗಷ್ಟೇ ನಿರ್ದೇಶಕ ನಂದ ಕಿಶೋರ್ ಕೂಡ ಮುಂಬೈಗೆ ಹೋಗಿ ಬಂದಿದ್ದಾರೆ. ಈ ಇಬ್ಬರು ಸ್ಟಾರ್‌ಗಳಿಂದ ಕಥೆಗೆ ಓಕೆ ಅಂದಿದ್ದು ಆಗಿದೆ. ಇನ್ನೂ ಅಧಿಕೃತ ಅನೌನ್ಸ್ ಆಗೋದೊಂದೆ ಬಾಕಿ. ಅಲ್ಲಿಯವರೆಗೂ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಾಗಿ ಕಾದು ನೋಡಬೇಕಿದೆ.













