Tag: namratha

  • Bigg Boss: ಮತ್ತೆ ಒಟ್ಟಾದ್ರು ದೊಡ್ಮನೆಯ ಗುಂಪು- ಸ್ನೇಹಿತ್ ಎಲ್ಲಿ ಎಂದ ಫ್ಯಾನ್ಸ್

    Bigg Boss: ಮತ್ತೆ ಒಟ್ಟಾದ್ರು ದೊಡ್ಮನೆಯ ಗುಂಪು- ಸ್ನೇಹಿತ್ ಎಲ್ಲಿ ಎಂದ ಫ್ಯಾನ್ಸ್

    ‘ಬಿಗ್ ಬಾಸ್’ ಕನ್ನಡ ಸೀಸನ್ 10 ಈ ವರ್ಷ ಸೆನ್ಸೇಷನ್ ಕ್ರಿಯೇಟ್ ಮಾಡಿದ ಶೋ. ಸೀಸನ್‌ನ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಇದೆಲ್ಲಾ ಕಳೆದು 2 ವಾರಗಳಾಗಿವೆ. ಈ ಬೆನ್ನಲ್ಲೇ `ಬಿಗ್ ಬಾಸ್’ ಮನೆಯ ಗುಂಪು ಜೊತೆಯಾಗಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಬಿಗ್ ಬಾಸ್ ಶೋ ಮುಗಿದ ಮೇಲೆ ಕೆಲ ದಿನಗಳ ಹಿಂದೆ ಕಾರ್ತಿಕ್, ನಮ್ರತಾ, ವಿನಯ್, ಸಂಗೀತಾ ಭೇಟಿಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆಯ ಗುಂಪು ರಕ್ಷಕ್, ವಿನಯ್, ನಮ್ರತಾ ಗೌಡ, ಇಶಾನಿ, ಮೈಕಲ್ ಅಜಯ್, ಪವಿ ಪೂವಪ್ಪ ಮತ್ತೆ ಭೇಟಿಯಾಗಿದ್ದಾರೆ. ಈ ತಂಡದ ಜೊತೆ ವಿನಯ್ ಪತ್ನಿ ಅಕ್ಷತಾ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:12 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ‘ಧೂಮ್’ ಚಿತ್ರ ನಟಿ ಇಶಾ

    ಬಿಗ್ ಬಾಸ್ ಮನೆಯಲ್ಲಿ ಈ 3 ಗುಂಪುಗಳಾಗಿ ಹೈಲೆಟ್ ಆಗಿತ್ತು. ಸಂತು-ಪಂತು ಗುಂಪು, ಮತ್ತೊಂದು ಸಂಗೀತಾ, ಕಾರ್ತಿಕ್, ತನಿಷಾರ ಟ್ರಯೋ ಫ್ರೆಂಡ್‌ಶಿಪ್, ಹಾಗೆಯೇ ವಿನಯ್ ಗುಂಪಲ್ಲಿ ಇಶಾನಿ, ಮೈಕಲ್, ನಮ್ರತಾ, ರಕ್ಷಕ್, ಪವಿ, ಸ್ನೇಹಿತ್ ಗೌಡ ಹೈಲೆಟ್ ಆಗಿದ್ದರು. ಈಗ ಇದೇ ವಿನಯ್ ಟೀಮ್ ಭೇಟಿಯಾಗಿ ಕೆಲ ಸಮಯ ಕಾಲ ಕಳೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ನೇಹಿತ್ ಎಲ್ಲಿ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

    ನಮ್ರತಾ (Namratha) ಜೊತೆಗೆ ಫ್ರೆಂಡ್‌ಶಿಪ್ ಬ್ರೇಕಪ್ ಆದ್ಮೇಲೆ ವಿನಯ್ (Vinay) ತಂಡದ ಜೊತೆ ಸ್ನೇಹಿತ್ (Snehith Gowda) ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ‘ಬಿಗ್ ಬಾಸ್’ ಸ್ಪರ್ಧಿ ಪವಿ ಪೂವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಸ್ನೇಹಿತ್ ಆ ದಿನ ಬ್ಯುಸಿಯಾಗಿದ್ದರು. ಹಾಗೆಯೇ ಅವರು ಪಾರ್ಟಿ ಮಾಡದ ಕಾರಣ ಬರಲಿಲ್ಲ. ಆದರೆ ಸ್ನೇಹಿತ್ ಯಾವಾಗಲೂ ನಮ್ಮ ಗುಂಪಿನಲ್ಲಿಯೇ ಇರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪವಿ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಮೇಲೆ ಸ್ನೇಹಿತ್‌ಗೆ ಲವ್ ಆಗಿತ್ತು. ದೊಡ್ಮನೆಯಲ್ಲಿ ಇರುವಾಗಲೇ ನಮ್ರತಾಗೆ ಹಲವು ಬಾರಿ ಸ್ನೇಹಿತ್ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಸ್ನೇಹಿತ್ ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟದ ಬಗ್ಗೆ ಭಾರೀ ಟ್ರೋಲ್ ಆಗಿತ್ತು. ಫಿನಾಲೆ ಕೊನೆಯ ವಾರದಲ್ಲಿ ಸ್ನೇಹಿತ್ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಕಾರ್ತಿಕ್ ಜೊತೆಗಿನ ಟ್ರೋಲ್ ಬಗ್ಗೆ ಸ್ನೇಹಿತ್ ಮಾತನಾಡಿದ ರೀತಿ ನಮ್ರತಾಗೆ ಘಾಸಿ ಆಗಿತ್ತು. ಬಿಗ್ ಬಾಸ್ ಶೋ ಮುಗಿದ ಮೇಲೆ ನಿಮ್ಮನ್ನು ಎಂದೂ ಭೇಟಿ ಮಾಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು ನಮ್ರತಾ. ಇದೀಗ ದೊಡ್ಮನೆಯ ಆಟ ಮುಗಿದ ಮೇಲೂ ಇಬ್ಬರು ಮುನಿಸು ಮುಂದುವರೆದಿದೆ.

  • Bigg Boss: ನಮ್ರತಾ ಕೈಯಲ್ಲಿದೆ ಸ್ಪರ್ಧಿಗಳ ಭವಿಷ್ಯ- ಔಟ್ ಆಗಿರೋ ಆ ಸ್ಪರ್ಧಿ ಯಾರು?

    Bigg Boss: ನಮ್ರತಾ ಕೈಯಲ್ಲಿದೆ ಸ್ಪರ್ಧಿಗಳ ಭವಿಷ್ಯ- ಔಟ್ ಆಗಿರೋ ಆ ಸ್ಪರ್ಧಿ ಯಾರು?

    ಬಿಗ್ ಬಾಸ್ ಕನ್ನಡ 10ರ ಆಟಕ್ಕೆ (Bigg Boss Kannada 10) ಅಂತಿಮ ಪರದೆ ಬೀಳುವ ಸಮಯ ಬಂದಿದೆ. ತುಕಾಲಿ ಸಂತು ನಂತರ ಸ್ಟ್ರಾಂಗ್ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಂದಿದ್ದಾರೆ. ಸದ್ಯ 5 ಸ್ಪರ್ಧಿಗಳ ಭವಿಷ್ಯ ನಮ್ರತಾ (Namratha Gowda) ಕೈಯಲ್ಲಿದೆ.

    ತುಕಾಲಿ ಸಂತು (Tukali Santhu) ಔಟ್ ಆದ್ಮೇಲೆ ಈಗ ಮನೆಯಲ್ಲಿ 5 ಜನ ಸ್ಪರ್ಧಿಗಳಿದ್ದಾರೆ. ಕಾರ್ತಿಕ್, ವಿನಯ್, ಸಂಗೀತಾ, ವರ್ತೂರು, ಪ್ರತಾಪ್ ಇದ್ದಾರೆ. ಈ 5 ಜನ ಸ್ಪರ್ಧಿಗಳಲ್ಲಿ ಒಬ್ಬರಿಗೆ ದೊಡ್ಮನೆ ಆಟ ಅಂತ್ಯವಾಗಿದೆ. ಇದನ್ನೂ ಓದಿ:ನನ್ನ ಮಗನನ್ನು ವಾಪಸ್ಸು ಕೊಟ್ಟಿದ್ದೀರಿ: ಡ್ರೋನ್ ತಾಯಿ ಕಣ್ಣೀರು

    ಸುದೀಪ್ (Sudeep) ಕಾರ್ಯಕ್ರಮ ಶುರುವಿನಲ್ಲೇ ಶಾಕ್ ಕೊಟ್ಟಂತಿದೆ. ಈ ಕವರ್‌ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯ ಹೆಸರಿದೆ. ನಿಮಗೆ ಪರಿಚಯ ಇರುವ ಒಬ್ಬರು ಮನೆಯೊಳಗೆ ಬರುತ್ತಾರೆ. ಆ ಸ್ಪರ್ಧಿಯ ಹೆಸರು ಹೇಳಿ ಹೊರ ಕರೆದುಕೊಂಡು ಬರುತ್ತಾರೆ ಎಂದು ಸುದೀಪ್ ಅನೌನ್ಸ್ ಮಾಡಿದ್ದಾರೆ.

    ಬಳಿಕ ನಮ್ರತಾ ಅವರು ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ನಂತರ ನಮ್ರತಾ, ಕವರ್ ತೆಗೆದು ಇವರು ಟಾಪ್ 2ನಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ತುಂಬಾನೇ ಇತ್ತು ಆದರೆ.. ಅವರೇ ಹೊರಬರುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ನಮ್ರತಾ ಶಾಕ್ ಕೊಟ್ಟಿದ್ದಾರೆ. ಸದ್ಯ ಎಲಿಮಿನೇಟ್ ಆಗಿರುವ ಆ ಸ್ಪರ್ಧಿ ಯಾರು ಎಂಬುದು ಕುತೂಹಲ ಕೆರಳಿಸಿದೆ. ಈ ಕುರಿತ ಪ್ರೋಮೋ ವಾಹಿನಿಯ ಖಾತೆಯಲ್ಲಿ ಸದ್ದು ಮಾಡುತ್ತಿದೆ.

    ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನಮ್ರತಾ ಅನೌನ್ಸ್ ಮಾಡಿರುವ ಆ ಸ್ಪರ್ಧಿ ಹೆಸರು ವರ್ತೂರು ಸಂತೋಷ್ (Varthur Santhosh) ಎನ್ನಲಾಗುತ್ತಿದೆ. ಈ ಸುದ್ದಿ ನಿಜಾನಾ ಬಿಗ್ ಬಾಸ್ (Bigg Boss) ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.

  • ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರು ಬೀಳಲು ನಾನು ಬಕ್ರನಾ- ಸ್ನೇಹಿತ್‌ಗೆ ನಮ್ರತಾ ಪ್ರಶ್ನೆ

    ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರು ಬೀಳಲು ನಾನು ಬಕ್ರನಾ- ಸ್ನೇಹಿತ್‌ಗೆ ನಮ್ರತಾ ಪ್ರಶ್ನೆ

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಸ್ನೇಹಿತ್ (Snehith) ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟ ಹೊಂದಿದ್ದರು. ಇದೀಗ ಬಿಗ್ ಮನೆಯ ಮಾಜಿ ಸ್ಪರ್ಧಿಗಳು ಮನೆಗೆ ಬಂದ ಬೆನ್ನಲ್ಲೇ ನಮ್ರತಾಗೆ ಆಗಿರೋ ಕೆಟ್ಟ ಟ್ರೋಲ್ ಬಗ್ಗೆ ತಿಳಿದಿದೆ. ಈ ಬಗ್ಗೆ ಸ್ನೇಹಿತ್ ಮುಂದೆ ನಮ್ರತಾ (Namratha Gowda) ಕಣ್ಣೀರು ಸುರಿಸಿದ್ದಾರೆ. ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರೂ ಬೀಳಲು ನಾನು ಬಕ್ರನಾ ಎಂದು ಕೇಳಿದ್ದಾರೆ.

    ಕಾರ್ತಿಕ್ (Karthik Mahesh) ಹಾಗೂ ನಮ್ರತಾ (Namratha) ತಮಾಷೆಗೆ ಫ್ಲರ್ಟ್ ಮಾಡುತ್ತಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ (Troll) ಆಗಿರುವುದನ್ನ ನಮ್ರತಾಗೆ ಸ್ನೇಹಿತ್ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ನಮ್ರತಾ ಕಣ್ಣೀರು ಸುರಿಸಿದ್ದಾರೆ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ನನ್ನ ಕ್ಯಾರೆಕ್ಟರ್‌ನ ನಾನು ರಿಸ್ಕ್ ಮಾಡಿಕೊಳ್ಳಲ್ಲ. ಪ್ಲೀಸ್ ನನ್ನ ಮನೆಗೆ ಕರ್ಕೊಂಡು ಹೋಗಿ ಎಂದು ಸ್ನೇಹಿತ್ ಮುಂದೆ ನಮ್ರತಾ ಕಣ್ಣೀರಿಟ್ಟಿದ್ದಾರೆ.

    ಬಿಗ್ ಬಾಸ್‌ಗೆ ಬಂದ ಕೂಡಲೆ ವಿನಯ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತು ಮುಂತಾದವರೊಂದಿಗೆಲ್ಲಾ ಸ್ನೇಹಿತ್ ಮಾತನಾಡಿದರು. ಆದರೆ, ಈ ಹಿಂದೆ ಇದ್ದಂತೆ ನಮ್ರತಾ ಜೊತೆಗೆ ಸ್ನೇಹಿತ್ ಆತ್ಮೀಯವಾಗಿ ನಡೆದುಕೊಳ್ಳಲಿಲ್ಲ. ಹೀಗಾಗಿ ನಮ್ರತಾ ಮಂಕಾಗಿದ್ದರು. ಇದನ್ನೇ ತನಿಷಾ ಪ್ರಶ್ನೆ ಮಾಡಿದರು. ಯಾಕೆ ನೀವು ಅವರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ? ಪಾಪ ಅವರು ಕಾಯ್ತಿದ್ದಾರೆ. ಬೇಸರ ಮಾಡಿಕೊಂಡಿದ್ದಾರೆ ಎಂದು ತಿಳಿ ಹೇಳಿದ್ದರು. ಇದನ್ನೂ ಓದಿ:ಅಭಿಮಾನಿಗಳ ಸಾವಿನ ನೋವಲ್ಲೇ ಇದ್ದಾರೆ ಯಶ್: ಆಪ್ತರ ಮಾತು

    ಕೆಟ್ಟ ಟ್ರೋಲ್ ವಿಚಾರ ಅರಿತ ಮೇಲೆ ನನ್ನನ್ನ ಮನೆಗೆ ಕರ್ಕೊಂಡ್ ಹೋಗಿ. ಇಲ್ಲಿರೋದು ನನಗೆ ಇಷ್ಟ ಆಗ್ತಿಲ್ಲ. ಏನು ಆಗ್ತಾ ಇದೆ ಅಂತ ನನಗೆ ಗೊತ್ತಿಲ್ಲ. ನಾನು ಇಲ್ಲಿ ಯಾರಿಗೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ಜೊತೆ ನಾನು ನಿಮ್ಮಷ್ಟೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ನನ್ನ ಕೈಹಿಡಿದುಕೊಳ್ಳುತ್ತಾರೆ ಅಷ್ಟೇ. ನನಗೇನೂ ಅನ್‌ಕಮ್ಫರ್ಟಬಲ್ ಅನಿಸೋದಿಲ್ಲ. ಒಮ್ಮೊಮ್ಮೆ ತುಂಬಾ ಲೋನ್ಲಿ ಫೀಲ್ ಆಗುತ್ತದೆ. ಬಹುಶಃ ಫ್ಲರ್ಟ್ ಮಾಡಿರೋದನ್ನ ನೋಡಿ ಯಾರೋ ಏನೋ ಅಂದುಕೊಂಡಿರಬೇಕು. ಅದು ಪ್ರಾಂಕ್ ಅಷ್ಟೇ. 60 ದಿನಗಳಾದ್ಮೇಲೆ ಯಾರಿಗೋ ಬೀಳೋಕೆ ನಾನೆಂಥ ಫೂಲ್ ಅಲ್ವಾ? ಎಂದು ಹೇಳುತ್ತಾ ನಮ್ರತಾ ಕಣ್ಣೀರು ಸುರಿಸಿದರು.

    ಬಳಿಕ ವಿನಯ್, ಸ್ನೇಹಿತ್ ಬಳಿ ನಾನು ನಟಿ. ಸಾವಿರ ಜನ ಸಾವಿರ ತರಹ ಮಾತಾಡ್ತಾರೆ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ಕಾರ್ತಿಕ್ ಜಸ್ಟ್ ಫ್ರೆಂಡ್ ಅಷ್ಟೇ. ಅವನು ನನಗೆ ಅನ್‌ಕಮ್ಫರ್ಟಬಲ್ ಫೀಲ್ ಮಾಡಿಲ್ಲ. ನಾವು ಪ್ರಾಂಕ್ ಮಾಡಿದ್ವಿ ಅಷ್ಟೇ. ಕಾರ್ತಿಕ್‌ಗೆ ಹೊರಗಡೆ ಹುಡುಗಿ ಇದ್ದಾರೆ. ಆದರೂ ಅವರನ್ನ ಇಷ್ಟಪಡೋಕೆ ನಾನು ಅಂತಹ ಫೂಲಾ? ಎಂದ ನಮ್ರತಾಗೆ ಇಂತಹ ವಿಚಾರದಲ್ಲಿ ಪ್ರಾಂಕ್ ಮಾಡೋದು ಅಷ್ಟು ಸರಿಯಲ್ಲ ಎಂದು ಸ್ನೇಹಿತ್ ಕಿವಿಹಿಂಡಿದ್ದಾರೆ.

  • ಕಾರ್ತಿಕ್‌ ಸಖತ್‌ ಕೇರಿಂಗ್‌, ಒಳ್ಳೆಯ ಹುಡುಗ ಎಂದ ನಮ್ರತಾ ಕಾಲೆಳೆದ ವಿನಯ್

    ಕಾರ್ತಿಕ್‌ ಸಖತ್‌ ಕೇರಿಂಗ್‌, ಒಳ್ಳೆಯ ಹುಡುಗ ಎಂದ ನಮ್ರತಾ ಕಾಲೆಳೆದ ವಿನಯ್

    ಬಿಗ್ ಬಾಸ್ ಶೋನ (Bigg Boss Kannada 10)  ಪ್ರತಿ ಸೀಸನ್‌ನಲ್ಲಿಯೂ ಒಬ್ಬರಲ್ಲ ಒಬ್ಬರು ಜೋಡಿಗಳಾಗಿ ಹೈಲೆಟ್‌ ಆಗುತ್ತಾರೆ. ಸ್ನೇಹಿತ್‌ ಜೊತೆ ನಮ್ರತಾ ಲವ್ವಿ ಡವ್ವಿ ಇತ್ತು. ಆದರೆ ಅವರ ಎಲಿಮಿನೇಷನ್‌ ನಂತರ ಕಾರ್ತಿಕ್‌ (Karthik) ಜೊತೆ ನಮ್ರತಾಗೆ (Namratha) ಸಲುಗೆ ಜಾಸ್ತಿ ಆಗಿದೆ. ಇದೀಗ ಕಾರ್ತಿಕ್ ಬಗೆಗಿನ ಮನದಾಳದ ಮಾತನ್ನು ವಿನಯ್‌ ಬಳಿ ಹೇಳಿಕೊಂಡಿದ್ದಾರೆ. ಆಗ ಕಾರ್ತಿಕ್‌ಗೆ ಬೀಳಬೇಡ ಅಂತ ನಮ್ರತಾಗೆ, ವಿನಯ್ (Vinay Gowda) ಕಿವಿಹಿಂಡಿದ್ದಾರೆ.

    ದೊಡ್ಮನೆಗೆ ಬರುವ ಮುನ್ನವೇ ನಮ್ರತಾ, ವಿನಯ್ ಅವರು ಒಳ್ಳೆಯ ಸ್ನೇಹಿತರು. ವಿನಯ್ ಟೀಂನಲ್ಲಿದ್ದುಕೊಂಡು ನಮ್ರತಾ ಆಟ ಆಡುತ್ತಿದ್ದಾರೆ. ಸ್ವಂತ ಅಸ್ತಿತ್ವ ಇಲ್ಲ, ವಿನಯ್ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳೇ ನಮ್ರತಾ ವಿರುದ್ಧ ಅಪಸ್ವರ ಎತ್ತಿದ್ದರು. ಯಾರು ಏನೇ ಹೇಳಿದ್ರೂ ಕೂಡ ನಾನು ನನ್ನ ಆಟವನ್ನೇ ಆಡ್ತಿದ್ದೀನಿ ಎಂದು ಹೇಳಿದ್ದರು ನಮ್ರತಾ. ಆಟ ಬೇರೆ ಫ್ರೆಂಡ್‌ಶಿಪ್ ಬೇರೆ ಎಂದು ನಮ್ರತಾ ಸಮರ್ಥನೆ ನೀಡಿದ್ದರು.

    ಇನ್ನೂ ಮೊನ್ನೆಯಷ್ಟೇ ಸದಾ ಫ್ಲಟ್ ಮಾಡೋ ಕಾರ್ತಿಕ್ ನಡೆಗೆ ನಮ್ರತಾ ಗುಡುಗಿದ್ದರು. ನನ್ನ ಮೇಲೆ ಫೀಲಿಂಗ್ಸ್ ಇಲ್ಲ ಅಂದ್ಮೇಲೆ ಯಾಕೆ ಫ್ಲರ್ಟ್ ಮಾಡುತ್ತೀರಿ ಎಂದು ಕಾರ್ತಿಕ್‌ಗೆ ನಮ್ರತಾ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಕಾರ್ತಿಕ್, ಇನ್ನೂ ಮುಂದೆ ನಾನು ಹೀಗೆಲ್ಲಾ ವರ್ತಿಸೋದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಈಗ ವಿನಯ್ ಬಳಿ ಕಾರ್ತಿಕ್ ಜೊತೆಗಿನ ಬಾಂಧವ್ಯದ ಬಗ್ಗೆ ನಮ್ರತಾ ಮಾತನಾಡಿದ್ದಾರೆ. ಇದನ್ನೂ ಓದಿ:ಒಟಿಟಿಯಿಂದ ನಯನತಾರಾ ನಟನೆಯ ಸಿನಿಮಾ ಡಿಲಿಟ್

    ನನಗೆ ಆರಂಭದಲ್ಲಿ ಕಾರ್ತಿಕ್ ತುಂಬಾ ಇರಿಟೇಟ್ ಅಂತ ಅನಿಸ್ತಿತ್ತು. ಈಗ ಅವರು ಒಳ್ಳೆಯ ಮನುಷ್ಯ ಅಂತ ಅನಿಸ್ತಿದೆ. ಅವರು ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಗೌಡ ಮುಂದೆ ಹೇಳಿಕೊಂಡಿದ್ದಾರೆ. ಆಗ ವಿನಯ್ ಅವರು ನಮ್ರತಾಗೆ ಕಾರ್ತಿಕ್‌ಗೆ ಬೀಳಬೇಡ ಎಂದು ಕಿವಿಮಾತು ಹೇಳಿದ್ದಾರೆ.

    ಕಾರ್ತಿಕ್ ಸಖತ್ ಕೇರಿಂಗ್, ಸ್ವೀಟ್, ಒಳ್ಳೆಯ ಹುಡುಗ. ಮುಂಚಿನಂತೆ ಇರೀಟೇಟ್ ಆಗೋದು ನಿಂತಿದೆ. ಬಳಿಕ ಕಾರ್ತಿಕ್ ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಬಳಿ ಹೇಳಿಕೊಂಡರು. ವಿನಯ್ ನಗುತ್ತಲೇ ನಮ್ರತಾ ಕಾಲೆಳೆದರು. ಕೂಡಲೇ ನಮ್ರತಾ, ನಮ್ಮದು ಫ್ರೆಂಡ್‌ಶಿಪ್ ಅಂತಹದ್ದೇನು ಇಲ್ಲ ಅಂತ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ಆದರೆ ನಮ್ರತಾ ನಡೆಗೆ ವೀಕ್ಷಕರು ಕನ್ಫೂಸ್‌ ಆಗಿದ್ದಾರೆ. ಕಾರ್ತಿಕ್‌ ಜೊತೆಗಿನ ನಮ್ರತಾ ಒಡನಾಟ ನೋಡಿ ಸ್ನೇಹಿತ್‌ ಕಥೆಯೇನು ಅಂತ ಕೇಳ್ತಿದ್ದಾರೆ ಅಭಿಮಾನಿಗಳು. ಎಲ್ಲದ್ದಕ್ಕೂ ಬಿಗ್‌ ಬಾಸ್‌ ಶೋ ಮುಗಿದ ಮೇಲೆಯೇ ಉತ್ತರ ಸಿಗಲಿದೆ.

  • ತಂದೆಯ ನಿಧನದ ನಂತರ ಹೊಸ ಉದ್ಯಮದತ್ತ ನಟ ಮಹೇಶ್ ಬಾಬು

    ತಂದೆಯ ನಿಧನದ ನಂತರ ಹೊಸ ಉದ್ಯಮದತ್ತ ನಟ ಮಹೇಶ್ ಬಾಬು

    ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು(Mahesh Babu) ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ತಂದೆ ತಾಯಿ ನಿಧನದ ನೋವಿನ ನಂತರ ಕೊಂಚ ಚೇತರಿಸಿಕೊಂಡಿರುವ ಮಹೇಶ್ ಬಾಬು ಪತ್ನಿ ನಮ್ರತಾ (Namratha Shirodkar) ಹೆಸರಿನಲ್ಲಿ ರೆಸ್ಟೋರೆಂಟ್ ಬ್ಯುಸಿನೆಸ್ ಶುರು ಮಾಡಿದ್ದಾರೆ.

    ಇತ್ತೀಚೆಗೆ ಅಣ್ಣ, ತಂದೆ ತಾಯಿ ನಿಧನದ ಶಾಕ್‌ನಲ್ಲಿದ್ದ ಮಹೇಶ್ ಬಾಬು ಕುಟುಂಬ ಕೊಂಚ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾ, ಬ್ಯುಸಿನೆಸ್ ಅಂತಾ ಮಹೇಶ್ ಬಾಬು ಬ್ಯುಸಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಮಲ್ಟಿಫ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟ ಮಹೇಶ್ ಪತ್ನಿ ನಮ್ರತಾ ಈಗ ಹೊಸ ರೆಸ್ಟೋರೆಂಟ್ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ. ಇದನ್ನೂ ಓದಿ: ರಶ್ಮಿಕಾ ನಂತರ ಟ್ರೋಲಿಗರ ಕಣ್ಣಿಗೆ ಗುರಿಯಾದ್ರು ನಿವೇದಿತಾ ಗೌಡ

    ಪತ್ನಿಯ ಹೆಸರಿನಲ್ಲಿ ರೆಸ್ಟೋರೆಂಟ್ ಮಾಡಲು ಮಹೇಶ್ ಬಾಬು ಹೊರಟಿದ್ದಾರೆ. ಈಗ ನಮ್ರತಾ ಶಿರೋಡ್ಕರ್ ಅವರ ರೆಸ್ಟೋರೆಂಟ್ ಅನ್ನು ಏಷ್ಯನ್ ನಮ್ರತಾ ಎಂದು ಹೆಸರಿಸಲಾಗಿದೆ.  ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿದೆ. ಇದು ಡಿಸೆಂಬರ್ 8, 2022 ರಂದು ಬೆಳಗ್ಗೆ  ಅದ್ಧೂರಿಯಾಗಿ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]