Tag: Namrata Shirodkar

  • ಪತ್ನಿ ಜೊತೆ ಸ್ಟೈಲ್‌ ಆಗಿ ಕಾಣಿಸಿಕೊಂಡ ಮಹೇಶ್ ಬಾಬು

    ಪತ್ನಿ ಜೊತೆ ಸ್ಟೈಲ್‌ ಆಗಿ ಕಾಣಿಸಿಕೊಂಡ ಮಹೇಶ್ ಬಾಬು

    ಟಾಲಿವುಡ್ ನಟ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಜೊತೆ ಹೈದರಾಬಾದ್‌ನ ಏರ್‌ಪೋರ್ಟ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಜೊತೆ ಹೈದರಾಬಾದ್‌ನ ಏರ್‌ಪೋರ್ಟ್‌ನಿಂದ ತಮ್ಮ ಸಿನಿಮಾದ ಶೂಟಿಂಗ್‌ಗಾಗಿ ಹೊರಟಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಕ್ಯಾಮೆರಾದ ಕಣ್ಣಲ್ಲಿ ಕ್ಯಾಪ್ಚರ್ ಆಗಿದೆ ಈ ಜೋಡಿ. ಮಹೇಶ್ ಬಾಬು ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆಗೆ ಕ್ಯಾಪ್ ಹಾಕಿ ನಮ್ರತಾ ಜೊತೆ ನಡೆದಿದ್ದಾರೆ.

    ಮಹೇಶ್ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ-29 ಸಿನಿಮಾದ ಶೂಟಿಂಗ್ ವಿದೇಶದಲ್ಲಿ ಭರ್ಜರಿಯಾಗಿ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ದಟ್ಟವಾದ ಅರಣ್ಯಪ್ರದೇಶದಲ್ಲಿ ಸಿನಿಮಾದ ಶೂಟಿಂಗ್ ಕೂಡಾ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ಮಾಡಲಿದೆ ಚಿತ್ರತಂಡ. ಅಂದಹಾಗೆ ಈ ಸಿನಿಮಾ 900-1000 ಕೋಟಿ ಬಂಡವಾಳದಲ್ಲಿ ಮೂಡಿಬರಲು ಸಜ್ಜಾಗಿದೆ.

    ಮಹೇಶ್ ಬಾಬು ಜೊತೆಗೆ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಆರ್.ಮಾಧವನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೆ ಪ್ರಿಯಾಂಕಾ ಛೋಪ್ರಾ ಭಾಗದ ಕೆಲ ದೃಶ್ಯಗಳನ್ನ ಹೈದರಾಬಾದ್‌ನ ಒಳಾಂಗಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಿದೆಯಂತೆ ಚಿತ್ರತಂಡ. ಸದ್ಯ ಎಸ್‌ಎಸ್‌ಎಂಬಿ-29 ಸಿನಿಮಾದ ಶೂಟಿಂಗ್‌ಗಾಗಿ ಪತ್ನಿ ನಮ್ರತಾ ಜೊತೆ ಮಹೇಶ್ ಬಾಬು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ 2026ರ ವೇಳೆಗೆ ಸಿನಿಮಾವನ್ನ ತೆರೆಗೆ ತರುವ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ.

  • ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ಟಾಲಿವುಡ್‌ನ (Tollywood) ಬೆಸ್ಟ್ ಜೋಡಿಯಾಗಿ ಮಹೇಶ್ ಬಾಬು (Mahesh Babu) ಮತ್ತು ನಮ್ರತಾ ಶಿರೋಡ್ಕರ್ (Namratha Shirodkar) ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ನಮ್ಮ ಸಂಸಾರದಲ್ಲಿ ಜಗಳ ನಡೆಯಲು ನಮ್ಮ ಮಕ್ಕಳೇ ಕಾರಣ ಅಂತಾ ಅಚ್ಚರಿಯ ಸಂಗತಿಯೊಂದನ್ನ ಹೇಳಿಕೊಂಡಿದ್ದಾರೆ.

    ನಮ್ರತಾ ಮತ್ತು ಮಹೇಶ್ ಬಾಬು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. 2000 `ವಂಶಿ’ (Vamsi) ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಮುಗಿಯುವುದರ ಒಳಗೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ನಂತರ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದರು. ಜೊತೆಗೆ ಮದುವೆಗೂ ಮುನ್ನ ಮಹೇಶ್ ಬಾಬು ಕೆಲವು ಷರತ್ತುಗಳನ್ನ ಹಾಕಿದ್ರಂತೆ ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ತಿಳಿಸಿದ್ದಾರೆ. ಇದನ್ನೂ ಓದಿ: ಗುರೂಜಿನ ಕಳಪೆ ಎಂದ ಅಮೂಲ್ಯಗೆ ಕಿಚ್ಚನ ಖಡಕ್ ಕ್ಲಾಸ್

    ಮದುವೆಗೂ ಮುನ್ನವೇ, ನಮ್ಮ ಮದುವೆಯ ಬಳಿಕ ನಟನೆ ಬಿಡಬೇಕು ಎಂದು ಹೇಳಿದ್ರಂತೆ, ಅದರಂತೆ ನಮ್ರತಾ ಕೂಡ ನಟನೆ ಬಿಟ್ಟು ತಮ್ಮ ಸಂಸಾರದ ಜವಾಬ್ದಾರಿಯನ್ನ ತೆಗೆದುಕೊಂಡರು. ನನಗೆ ನಟನೆಗಿಂತ ಮಹೇಶ್ ಬಾಬು ಅವರೇ ಮುಖ್ಯ, ಅವರೇ ನನ್ನ ಪ್ರಪಂಚ. ನಾನು ನಟನೆ ಬಿಟ್ಟೆ ಎಂದು ನನಗೆ ಬೇಸರವಿಲ್ಲ. ಅದಕ್ಕಿಂತ ನನಗೆ ಖುಷಿಯ ಜೀವನ ಸಿಕ್ಕಿದೆ ಎಂದು ನಟಿ ಮಾತನಾಡಿದ್ದಾರೆ. ಹಾಗೆಯೇ ಈ ವೇಳೆ ನಾವಿಬ್ಬರು ಜಗಳ ಆಡೋದು ನಮ್ಮ ಮಕ್ಕಳಿಂದ ಎಂದು ನಮ್ರತಾ ಹೇಳಿದ್ದಾರೆ.

    ಮಹೇಶ್ ಬಾಬು ಅವರು ಮಾತನಾಡೋದು ಕಮ್ಮಿ, ಸಿನಿಮಾದ ನಂತರ ಅವರಿಗೆ ಮನೆಯೇ ಪ್ರಪಂಚ. ಹಾಗಾಗಿ ಶೂಟಿಂಗ್‌ಗೆ ಬ್ರೇಕ್ ಇದ್ದ ಸಮಯದಲ್ಲಿ ಕುಟುಂಬದ ಜೊತೆ ವಿದೇಶದ ಪ್ರವಾಸಕ್ಕೆ ಸಮಯ ಕೊಡುತ್ತಾರೆ. ಇನ್ನೂ ಮಕ್ಕಳಾದ ಗೌತಮ್, ಸಿತಾರಾ ತಮಗೆ ಏನೇ ಬೇಕಿದ್ದರೂ ಮಹೇಶ್ ಅವರನ್ನೇ ಕೇಳುತ್ತಾರೆ. ಅವರೂ ಎಲ್ಲದಕ್ಕೂ ಓಕೆ ಎನ್ನುತ್ತಾರೆ. ಈ ವಿಷ್ಯಕ್ಕೆ ನನಗೂ ಮಹೇಶ್‌ಗೂ ಜಗಳವಾಗುತ್ತದೆ ಎಂದು ಮಾತನಾಡಿದ್ದಾರೆ. ಮಕ್ಕಳು ಕೇಳಿದನ್ನೆಲ್ಲ ಕೊಡಿಸಬಾರದು ಎಂದು ಈ ವೇಳೆ ನಮ್ರತಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಾಕ್‍ಡೌನ್ ಮಧ್ಯೆ ಮಗನೊಂದಿಗೆ ಟೆನ್ನಿಸ್ ಆಡಿದ ಮಹೇಶ್ ಬಾಬು

    ಲಾಕ್‍ಡೌನ್ ಮಧ್ಯೆ ಮಗನೊಂದಿಗೆ ಟೆನ್ನಿಸ್ ಆಡಿದ ಮಹೇಶ್ ಬಾಬು

    ಹೈದರಾಬಾದ್: ಟಾಲಿವುಡ್‍ನ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಅವರು ಲಾಕ್‍ಡೌನ್‍ನಲ್ಲಿ ಮನೆಮಂದಿ ಜೊತೆ ಮನೆಯಲ್ಲಿಯೇ ಕಾಲಕಳೆಯುತ್ತಿದ್ದು, ತಮ್ಮ ಇಬ್ಬರು ಮಕ್ಕಳ ಜೊತೆ ಮೋಜು ಮಸ್ತಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಹೆಚ್ಚು ಸಕ್ರಿಯವಾಗಿದ್ದರೂ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹಂಚಿಕೊಳ್ಳೋದು ಕಡಿಮೆ. ಹೆಚ್ಚಾಗಿ ಪ್ರಿನ್ಸ್ ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳು, ಪತಿ ಬಗ್ಗೆ ಪೋಸ್ಟ್ ಹಾಕುತ್ತಿರುತ್ತಾರೆ. ಕುಟುಂಬದ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ಶೇರ್ ಮಾಡುತ್ತಿರುತ್ತಾರೆ.

    https://www.instagram.com/p/B_DACFwDS5y/?utm_source=ig_embed

    ಈಗ ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಮಹೇಶ್ ಅವರು ಸಿನಿಮಾದಿಂದ ಬ್ರೇಕ್ ಪಡೆದು ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ನಮ್ರತಾ ತಂದೆ, ಮಕ್ಕಳ ಮೋಜು ಮಸ್ತಿಯ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ಹಾಗೂ ಮಗನ ಹಳೇ ವಿಡಿಯೋಗಳನ್ನೂ ಶೇರ್ ಮಾಡುತ್ತಿದ್ದಾರೆ.

    https://www.instagram.com/p/B–NUZzjLN4/?utm_source=ig_embed

    ಸದ್ಯ ಲಾಕ್‍ಡೌನ್ ಅನ್ನು ಮಹೇಶ್ ಮನೆಯಲ್ಲಿ ಹೇಗೆ ಕಳೆಯುತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಮಕ್ಕಳ ಜೊತೆ ಮಸ್ತಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಕೂಡ ನಮ್ರತಾ ಅಭಿಮಾನಿಗಳಿಗೆ ಪೋಸ್ಟ್ ಗಳ ಮೂಲಕ ಅಪ್ಡೇಟ್ ಕೊಡುತ್ತಿದ್ದಾರೆ. ಜೊತೆಗೆ ಮನೆಯಲ್ಲಿಯೇ ಇರಿ ಹುಷಾರಾಗಿರಿ ಎಂದು ಪ್ರಿನ್ಸ್ ಜೋಡಿ ಅಭಿಮಾನಿಗಳಿಗೆ ಸಂದೇಶವನ್ನೂ ನೀಡಿದ್ದಾರೆ. ಅದರಲ್ಲಿ ಮಹೇಶ್ ಮಗ ಗೌತಮ್ ಜೊತೆ ಆನ್‍ಲೈನ್‍ನಲ್ಲಿ ಟೆನ್ನೀಸ್ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಬಿಮಾನಿಗಳು ವಿಡಿಯೋಗೆ ಫಿದಾ ಆಗಿದ್ದಾರೆ.

    ಮನೆಯಲ್ಲಿ ಮಕ್ಕಳಿಗೆ ಜೋಕ್ ಹೇಳಿ ನಗಿಸುತ್ತಾ, ಅವರೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿರುವ ಮಹೇಶ್ ಬಾಬು ಅವರ ವಿಡಿಯೋ, ಫೋಟೋಗಳು ಅಭಿಮಾನಿಗಳ ಮನಗೆದ್ದಿದ್ದು, ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

  • ಮೇಕಪ್ ಹಾಕಿಕೊಳ್ಳಿ ಎಂದವನಿಗೆ ಮಹೇಶ್ ಬಾಬು ಪತ್ನಿ ಖಡಕ್ ಉತ್ತರ

    ಮೇಕಪ್ ಹಾಕಿಕೊಳ್ಳಿ ಎಂದವನಿಗೆ ಮಹೇಶ್ ಬಾಬು ಪತ್ನಿ ಖಡಕ್ ಉತ್ತರ

    ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರಿಗೆ ನೆಟ್ಟಿಗರೊಬ್ಬರು ಅವರ ಮೇಕಪ್ ಬಗ್ಗೆ ಕಮೆಂಟ್ ಮಾಡಿದ್ದರು. ಇದೀಗ ಕಮೆಂಟ್ ಮಾಡಿದವನನ್ನು ನಮ್ರತಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಗುರುವಾರವಷ್ಟೇ ನಮ್ರತಾ ಪತಿ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ನಟ ಮಹೇಶ್, ಸಿನಿಮಾ ನಿರ್ದೇಶಕ ವಂಶಿ ಪೈಡಿಪಲ್ಲಿ ಸೇರಿದಂತೆ ಕುಟುಂಬದವರು ಪಾರ್ಟಿ ಮಾಡಿದ್ದಾರೆ. ಈ ವೇಳೆ ನಮ್ರತಾ ಅವರು ಸಂತೋಷದ ಕ್ಷಣಗಳನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಆ ಫೋಟೋವನ್ನು ಇನ್ಸ್ ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದರು.

    ನಮ್ರತಾ ಆ ಫೋಟೋಗೆ “ಸೂಪರ್ ಡೂಪರ್ ಸಕ್ಸಸ್ ಮಹರ್ಷಿ ಸಿನಿಮಾ ಕೊಟ್ಟಿದ್ದಕ್ಕೆ ನಿರ್ದೇಶಕ ವಂಶಿಪೈಡಿಪಲ್ಲಿ ಅವರಿಗೆ ಧನ್ಯವಾದಗಳು” ಎಂದು ಬರೆದಿದ್ದರು. ಈ ಫೋಟೋಗೆ ಗೌರವ್ ಎಂಬಾತ ‘ನಮ್ರತಾ ನೀವ್ಯಾಕೆ ಸ್ವಲ್ಪವೂ ಮೇಕಪ್ ಮಾಡಿಕೊಳ್ಳವುದಿಲ್ಲ. ನೀವು ಯಾವುದಾದರೂ ಫೋಬಿಯಾದಿಂದ ಬಳಲುತ್ತಿದ್ದೀರಾ? ಅಥವಾ ಖಿನ್ನತೆಯಲ್ಲಿದ್ದೀರಾ? ಎಂದು ಕಮೆಂಟ್ ಮಾಡಿದ್ದನು.

    ಗೌತಮ್ ಕಮೆಂಟ್ ನೋಡಿದ ನಮ್ರತಾ ಅವರು, “ಗೌರವ್ ನೀನು ಮೇಕಪ್ ಮಾಡಿಕೊಂಡ ಮಹಿಳೆಯರನ್ನೇ ಇಷ್ಟಪಡುತ್ತೀಯಾ? ಹಾಗಿದ್ದರೆ ಇನ್ನು ಮುಂದೆ ನೀನು ನನ್ನಂತೆ ಆಲೋಚನೆ ಮಾಡುವವರನ್ನು ಫಾಲೋ ಮಾಡು. ಇಲ್ಲಿಂದ ನೀನು ನಿರ್ಗಮಿಸಬಹುದು. ಇದು ನನ್ನ ಮನವಿ” ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.

    ನಮ್ರತಾ ಅವರು 1993ರಲ್ಲಿ ಮಿಸ್ ಇಂಡಿಯಾ ಅವಾರ್ಡ್ ಗೆದ್ದಿದ್ದರು. ಅಷ್ಟೇ ಅಲ್ಲದೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅದರಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದರು. 2005ರಲ್ಲಿ ನಮ್ರತಾ ಮಹೇಶ್ ಬಾಬು ಅವರನ್ನು ಮದುವೆಯಾಗಿದ್ದು, ವಿವಾಹವಾದ ನಂತರ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದಾರೆ.

    https://www.instagram.com/p/BxS5TuFBeYz/