Tag: Namrata Gowda

  • ಎಲಿಮಿನೇಷನ್ ಶಾಕ್ ತಂದಿದೆ: ನಟಿ ನಮ್ರತಾ ಸಂದರ್ಶನ

    ಎಲಿಮಿನೇಷನ್ ಶಾಕ್ ತಂದಿದೆ: ನಟಿ ನಮ್ರತಾ ಸಂದರ್ಶನ

    ಬಿಗ್‌ಬಾಸ್‌ ಹತ್ತನೇ ಸೀಸನ್‌ನ (Bigg Boss Kannada) ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ (Namrata Gowda) ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ‘ಬಿಗ್‌ಬಾಸ್‌ ಈ ಸೀಸನ್‌ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್‌ ನಿಜಕ್ಕೂ ಮಹತ್ವದ್ದು. ನೀವು ಯಾರು ಎಂದು ನನಗೂ ತೋರಿಸಿಕೊಟ್ಟಿದ್ದೀರಿ’ ಎಂಬ ಮೆಚ್ಚುಗೆಯ ಮಾತನ್ನು ಕಿಚ್ಚನ ಬಾಯಿಂದಲೇ ಕೇಳಿಸಿಕೊಂಡಿರುವ ನಮ್ರತಾ ಅವರು ಮನೆಯಿಂದ ಹೊರಗೆ ಬಂದ ಕೂಡಲೇ ತಮ್ಮ ಜರ್ನಿಯ ಬಗ್ಗೆ ಜಿಯೊ ಸಿನಿಮಾಗೆ ಎಕ್ಸ್‌ಕ್ಲೂಸೀವ್ ಸಂದರ್ಶನ (Interview) ನೀಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.

    ನಾನು ನಿಮ್ಮ ನಮೃತಾ. ಬಿಗ್‌ಬಾಸ್‌ ಹತ್ತನೇ ಸೀಸನ್‌ನ ಟಾಪ್‌ ಸೆವೆನ್ ಸ್ಪರ್ಧಿಗಳಲ್ಲಿ ಒಬ್ಬಳು ನಾನು. ನಿಜಕ್ಕೂ ಸಖತ್ ಬೇಜಾರಾಗ್ತಿದೆ. ಹತ್ತೊಂಬತ್ತು ಜನರಲ್ಲಿ ಏಳನೇ ಸ್ಥಾನದವರೆಗೂ ಬಂದಿರುವುದು ಖಂಡಿತ ಸುಲಭವ ಸಂಗತಿ ಅಲ್ಲ. ಮೂರು ದಿನಗಳ ಹಿಂದೆ ಹಳೆಯ ಸ್ಪರ್ಧಿಗಳೆಲ್ಲ ಬಂದು ಒಂದು ಬಾಂಬ್ ಹಾಕ್ತಾರೆ. ನಿಂಗೆ ಚಾನ್ಸ್ ಇಲ್ಲ ಅಂತ. ಆಗ ನನಗೆ ಓ ಎಂದು ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರುಮಾಡಿದೆ. ಆದರೆ ಈಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್‌.

    ಈ ನೂರಾ ಆರು ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ನನ್ನ ಜರ್ನಿ ನಿಜವಾಗಿಯೂ ಏರಿಳಿತದ ಪಯಣವಾಗಿತ್ತು. ಎಲ್ಲಿಂದಲೋ ಶುರುಮಾಡಿ ಎಲ್ಲಿಗೋ ಹೋಗಿ, ಕೆಳಗೆ ಇಳಿದು ಮತ್ತೆ ಮೇಲೆ ಏರಿ ಹೋದ ಜರ್ನಿ ನಂದು.  ಸ್ನೇಹಿತರ ಜೊತೆಗೆ ಮಾತಾಡುವುದು ನನಗೆ ತುಂಬ ಖುಷಿ ಕೊಟ್ಟಿತ್ತು. ಆದರೆ ಆ ಫ್ರೆಂಡ್‌ಷಿಪ್‌ ನಲ್ಲಿ ಮಾತಾಡುತ್ತಿದ್ದಾಗ ಬೇರೆಯವರ ಬಗ್ಗೆ ಒಂದು ಒಪಿನಿಯನ್ ಕ್ರಿಯೇಟ್ ಆಗುತ್ತದೆ. ಅವರು ಕೆಟ್ಟವರು, ಅವರು ಒಳ್ಳೆಯವರು ಎಂದೆಲ್ಲ. ಆದರೆ ಹೋಗ್ತಾ ಹೋಗ್ತಾ ನಾನು ಮೈಚಳಿ ಬಿಟ್ಟು ಅವರ ಜೊತೆಗೆ ಸೇರಲು ಪ್ರಾರಂಭಿಸಿದಾಗ, ‘ಏಯ್… ಅವರೂ ನಾನು ಅಂದುಕೊಂಡಷ್ಟು ಕೆಟ್ಟವರಲ್ಲ’ ಅನಿಸಿತು. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಆದರೆ ಆಯಾ ಸಂದರ್ಭದಲ್ಲಿ ಎಲ್ಲರೂ ಕೆಟ್ಟವರ ಹಾಗೆ ಕಾಣಿಸುತ್ತಿರುತ್ತಾರೆ. ನಾನೂ ಅಂಥ ಕೆಲವು ಸಂದರ್ಭಗಳಲ್ಲಿ ಕೆಟ್ಟವರಾಗಿರುತ್ತೇನೆ.

    ಬಿಗ್ಬಾಸ್‌ ಮನೆಯಲ್ಲಿ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ ಇವೆಲ್ಲ ಹೇಳುವ ಥರ, ಶಾಡೊ, ಇನ್‌ಪ್ಲ್ಯೂಯೆನ್ಸ್‌ ಎಲ್ಲ ಆಗಿಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ. ಆರಂಭದಲ್ಲಿ ಗೇಮ್ ಆಡಲು, ಸ್ಟ್ರಾಟೆಜಿ ಮಾಡಲು ಗೊತ್ತಾಗ್ತಿರ್ಲಿಲ್ಲ. ಆದರೆ ನಾನು ಕಲಿತಾ ಬಂದೆ. ಕಲಿಯುವಷ್ಟರಲ್ಲಿ ಸ್ವಲ್ಪ ಸಮಯ ತಗುಲಿತು ಅಷ್ಟೆ. ನಂತರ ನಾನು ಆಟದಲ್ಲಿ ಇಳಿದೆ. ಬಿಗ್‌ಬಾಸ್‌ ಮನೆಯಲ್ಲಿ ಕಳೆದ ದಿನಗಳು ನನ್ನ ಪಾಲಿಗೆ ಸೋಲ್‌ಫುಲ್ ಜರ್ನಿ. ಇಲ್ಲಿ ಯಾರೂ ಕೆಟ್ಟವರಲ್ಲ. ಈ ಪ್ರಯಾಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ರಿಯಲ್ ಫ್ರೆಂಡ್‌ಷಿಪ್‌ ಕೂಡ ಮನೆಯೊಳಗಲ್ಲ, ಹೊರಗೇ ಮುಂದುರಿಯುತ್ತದೆ ಅಂದುಕೊಂಡಿದ್ದೇನೆ. ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ.

    ನನ್ನ-ಸಂಗೀತಾ ನಡುವಿನ ಫ್ರೆಂಡ್‌ಷಿಪ್‌ ಅನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಸಿಸ್ಟರ್‍ಹುಡ್‌. ನನಗೆ ಆ ಥರ ಬಾಂಡಿಂಗ್ ಆಗೋದು ಕಡಿಮೆ. ಆದರೆ ಇಲ್ಲಿ ಆಯ್ತು. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ. ಅಂಥ ಕ್ರಿಟಿಕ್ ಎಲ್ಲರ ಬದುಕಿನಲ್ಲಿಯೂ ಇರಬೇಕು ಅನಿಸುತ್ತದೆ. ನನಗೆ ಅಣ್ಣ ಇಲ್ಲ ಎಂಬ ಕೊರಗು ಯಾವಾಗಲೂ ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಂಧನವನ್ನು ಮುಂದುವರಿಸಿಕೊಳ್ಳಲು ಬಯಸುತ್ತೇನೆ. ಇಡೀ ಮನೆಯಲ್ಲಿ ನನಗೆ ಬಹುಬೇಗ ಮನಸ್ಸಿಗೆ ಹತ್ತಿರವಾದವನು ಪ್ರತಾಪ್. ಆವಾಗಾವಾಗ ವಿಯರ್ಡ್ ಆಗಿ ಆಡ್ತಾನೆ ನಿಜ. ಆದರೆ ಅವನು ಇರೋದೇ ಹಾಗೆ. ಅವನನ್ನು ಹಾಗೆಯೇ ಒಪ್ಪಿಕೊಂಡಿದ್ದೇನೆ ನಾನು. ಮೊದಲು ಅವನು ಒಪಿನಿಯನ್ ಹೇಳಬೇಕಾದರೆ, ಕಮೆಂಟ್ ಮಾಡುವುದನ್ನು ಕೇಳಿದಾಗ ಕೋಪ ಬರುತ್ತಿತ್ತು. ಏನೋ ಹೇಳಿದ್ದನ್ನು ಪರ್ಸನಲ್ ಆಗಿಟ್ಟುಕೊಂಡು ತುಂಬದಿನ ಸಾಧಿಸ್ತಿದ್ದ. ಆದರೆ ಈಗ, ಅವನೂ ಅದನ್ನೆಲ್ಲ ಬಿಟ್ಟು ತುಂಬ ಚೇಂಜ್ ಆಗಿದ್ದಾನೆ.

     

    ಅವನ ಅಪ್ಪ, ಅಮ್ಮ ಇಬ್ಬರೂ ಸಿಕ್ಕಾಪಟ್ಟೆ ಒಳ್ಳೆಯ ಜನ, ಮುಗ್ಧರು. ನಾನು ನೋಡಿದ ತಕ್ಷಣ ಪಟ್ ಅಂತ ಕನೆಕ್ಟ್ ಆದೆ. ಅವರಿಬ್ಬರ ಸೆಲ್ಫ್‌ಸೆಲ್ ಮಾತು ನೋಡಿ ಇಷ್ಟವಾಯ್ತು. ಅವನು ‘ನಾನು ನಿಮಗೆ ಸೀರೆ ಕೊಡಿಸ್ತೀನಿ ದೀ… ನಿಮಗೆ ಓಲೆ ಜುಮುಕಿ ಕೊಡಿಸ್ತೀನಿ’ ಎಂದು ಹೇಳೋನು. ಬಟ್ ಅವರ ತಂದೆ ತಾಯಿ ಸೀರೆ ತಂದುಕೊಟ್ಟಿದ್ದು ನೋಡಿ ಬಹಳ ಎಮೋಷನಲ್ ಆಯ್ತು. ನಮ್ಮೋರು ಅಂತ ಅನಿಸಿತು. ಬೇಕೋ ಬೇಡವೋ ನಾನು ಯಾವಾಗಲೂ ಅವನ ದಿದಿ ಆಗಿಯೇ ಇರುತ್ತೇನೆ. ಅವನು ಯಾವಾಗಲೂ ನನ್ನ ಪುಟ್ಟ ತಮ್ಮನೇ.

  • Bigg Boss Kannada: ಸೀರೆಗೂ ಸೈ.. ಮಾಡ್ ಲುಕ್ ಗೂ ಜೈ ಎಂದ ನಮ್ರತಾ

    Bigg Boss Kannada: ಸೀರೆಗೂ ಸೈ.. ಮಾಡ್ ಲುಕ್ ಗೂ ಜೈ ಎಂದ ನಮ್ರತಾ

    ಪ್ರತಿ ವಾರವೂ ಕಿಚ್ಚನ ಜೊತೆ ಮಾತನಾಡಲು ದೊಡ್ಮನೆ ಕಂಟೆಸ್ಟೆಂಟ್ ಕಾಯುತ್ತಿರುತ್ತಾರೆ. ಸುದೀಪ್ (Sudeep) ಜೊತೆ ಮಾತನಾಡುವುದಕ್ಕಾಗಿಯೇ ವಿಶೇಷ ವಿನ್ಯಾಸದ ಬಟ್ಟೆಗಳನ್ನು ಧರಿಸಿಕೊಂಡು ಕ್ಯಾಮೆರಾ ಮುಂದೆ ಕುಂತಿರುತ್ತಾರೆ. ಮೂರ್ನಾಲ್ಕು ದಿನಗಳಿಂದ ಸೀದಾ ಸಾದಾ ಸೀರೆಯಲ್ಲೇ ಓಡಾಡಿಕೊಂಡಿದ್ದ ನಮ್ರತಾ ಗೌಡ (Namratha Gowda) , ವೀಕೆಂಡ್ ಕಾರ್ಯಕ್ರಮಕ್ಕಾಗಿ ಸಖತ್ ಮಾಡ್ ಡ್ರೆಸ್ (Mod Look)  ಹಾಕಿಕೊಂಡಿದ್ದಾರೆ. ಈ ಮೂಲಕ ತಮಗೆ ಎಂತಹ ಕಾಸ್ಟ್ಯೂಮ್ ಆದರೂ, ಒಪ್ಪುತ್ತದೆ ಎಂದು ತೋರಿಸಿಕೊಂಡಿದ್ದಾರೆ.

    ಮಹಿಳಾ ಕಂಟೆಸ್ಟೆಂಟ್ ನಲ್ಲಿ ಬೆಸ್ಟ್ ಯಾರು?

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮಹಿಳೆಯರ ದಂಡೇ ಇದೆ. ಈ ಬಾರಿ ದೊಡ್ಮನೆಯಲ್ಲಿ ಇರಲು ಏಳು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಸೀರಿಯಲ್ ನಟಿಯರಾದ ನಮ್ರತಾ, ಸಿರಿ, ಭಾಗ್ಯಶ್ರೀ, ಸಿನಿಮಾ ನಟಿಯರಾದ ತನಿಷಾ, ಸಂಗೀತಾ, ಗಾಯಕಿ ಇಶಾನಿ ಮತ್ತು ಟ್ರಾನ್ಸ್ ಝಂಡರ್ ನೀತು ವನಜಾಕ್ಷಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ವಯೋಮಾನವಾದರೂ, ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆಟವಾಡುತ್ತಿದ್ದಾರೆ. ಅದರಲ್ಲೂ ಸಂಗೀತಾ, ನಮ್ರತಾ ಮತ್ತು ತನಿಷಾ ಆಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದೆ.

    ಬಿಗ್ ಬಾಸ್ ಶುರುವಿಗೆ ಇಡೀ ಮನೆಯನ್ನು ಆವರಿಸಿಕೊಂಡಿದ್ದು ನಮ್ರತಾ. ಪುರುಷರ ಸರಿ ಸಮಾನವಾಗಿ ನಿಂತುಕೊಂಡು ನಮ್ರತಾ ಫೈಟ್ ಕೊಡುತ್ತಾರೆ ಎಂದೇ ನಂಬಲಾಗಿತ್ತು. ಆದರೆ, ಬರ್ ಬರ್ತಾ ನಮ್ರತಾ ಚಾರ್ಮ್ ಕಳೆದುಕೊಂಡರು. ಹೊಂದಾಣಿಕೆಯ ಆಟ ಆಡಲು ಶುರು ಮಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ರತಾ ತನ್ನದೇ ಆದ ರೀತಿಯಲ್ಲಿ ಟಾಸ್ಕ್ ಮಾಡದೇ ವಿನಯ್ ಅವರ ಆಶ್ರಯ ಕೋರಿದ್ದಾರೆ. ಹಾಗಾಗಿ ನಮ್ರತಾ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಕರೆಯಿಸಿಕೊಳ್ತಾರಾ ಎನ್ನುವುದೇ ಸದ್ಯದ ಪ್ರಶ್ನೆ.

    ಎರಡು ವಾರಗಳಿಂದ ದೊಡ್ಮನೆಯಲ್ಲಿ ದೊಡ್ಡ ಸೌಂಡ್ ಮಾಡ್ತಿರೋದು ಸಂಗೀತಾ ಶೃಂಗೇರಿ. ಹಳ್ಳಿಮನೆ ಆಟದಲ್ಲಂತೂ ಸಂಗೀತಾ ಅಬ್ಬರಿಸಿದ್ದಾರೆ. ಬಲಿಷ್ಠ ಎದುರಾಳಿ ಅನಿಸಿರುವ ವಿನಯ್‍ ಗೆ ಸರಿಯಾಗಿ ಠಕ್ಕರ್ ಕೊಟ್ಟಿದ್ದಾರೆ. ಮಹಿಳೆಯರೂ ಸಮರ್ಥವಾಗಿ ಎಲ್ಲವನ್ನೂ ಎದುರಿಸಬಲ್ಲರು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಸಂಗೀತಾ ಟೀಮ್ ಟಾಸ್ಕ್ ನಲ್ಲಿ ಸೋತರೂ, ಸರಿಯಾದ ಪೆಟ್ಟನ್ನೇ ವಿನಯ್‍ ಗೆ ನೀಡಿದ್ದಾರೆ. ಸಂಗೀತಾ ವಿಷಯದಲ್ಲಿ ವಿನಯ್ ಯಾವ ರೀತಿಯಲ್ಲಿ ಭಯ ಪಟ್ಟಿದ್ದಾರೆ ಅಂದರೆ, ಸಂಗೀತಾರನ್ನು ಜೈಲಿಗೆ ಹಾಕುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

    ಸಂಗೀತಾರಷ್ಟೇ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸ್ತಾ ಇರೋದು ತನಿಷಾ. ಮನೆಯೊಳಗೆ ಕಾಲಿಟ್ಟ ಮೊದಲ ವಾರದಲ್ಲಿ ಸೈಲೆಂಟ್ ಆಗಿದ್ದ ತನಿಷಾ, ಇದೀಗ ಘರ್ಜಿಸುತ್ತಿದ್ದಾರೆ. ತಾನೂ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ. ಅದರಲ್ಲೂ ದೊಡ್ಮನೆಯಲ್ಲಿ ಯಾರದ್ದಾದರೂ ಜೋರು ಧ್ವನಿ ಕೇಳಿದರೆ, ಅದಕ್ಕೆ ಸಮರ್ಥವಾಗಿ ನಿಲ್ಲುವಷ್ಟು ಶಕ್ತಿಯನ್ನು ತನಿಷಾ ಬೆಳೆಸಿಕೊಂಡಿದ್ದಾರೆ. ಹೀಗಾಗಿ ತನಿಷಾ ಕೂಡ ಬಹಳ ದಿನಗಳವರೆಗೂ ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

    ಸಿರಿ, ಭಾಗ್ಯಶ್ರೀ ಮತ್ತು ಇಶಾನಿ ಅಷ್ಟೇನೂ ಉತ್ಸಾಹ ಅನ್ನುವ ಹಾಗೆ ಮನೆಯೊಳಗೆ ಇಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಎನ್ನುವಂತೆ ಟಾಸ್ಕ್ ನಲ್ಲಿ ಭಾಗಿಯಾಗುತ್ತಿದ್ದಾರೆ. ನೀತು ಹಾಗಿಲ್ಲ. ತಮಗೆ ಎಲ್ಲ ಸಾಮರ್ಥ್ಯವಿದ್ದರೂ, ಅದನ್ನು ಹೊರ ಹಾಕುವಲ್ಲಿಇನ್ನೂ ಮೀನಾಮೇಷ ಎಣೆಸುತ್ತಿದ್ದಾರೆ. ಒಂದು ವಾರ ನೀತುಗೆ ಕ್ಯಾಪ್ಟನ್ ಆಗಲು ಅವಕಾಶ ಸಿಕ್ಕರೂ, ಅದನ್ನು ಅವರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿಲ್ಲ. ನಮ್ರತಾ ಹಾಗೆ ನವೀನ್ ಗೌಡನ ಹಿಂದೆಯೇ ನೀತು ಬಿದ್ದಿದ್ದಾರೆ. ಹಾಗಾಗಿ ನೀತು ಸದ್ಯಕ್ಕೆ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಳ್ಳುತ್ತಿಲ್ಲ.

     

    ಮಹಿಳೆಯರ ಗುಂಪಿನಲ್ಲಿ ಪುರುಷರ ಜೊತೆ ಸಖತ್ ಫೈಟ್ ಮಾಡುವಂತಹ ಲಿಸ್ಟ್ ಮಾಡಿದರೆ, ನಮ್ರತಾ, ಸಂಗೀತಾ ಮತ್ತು ತನಿಷಾ ಹೆಸರು ಕೇಳಿ ಬರುತ್ತದೆ. ಈ ಮೂವರಲ್ಲಿ ಇನ್ನೂ ಬೆಸ್ಟ್ ಯಾರು ಎನ್ನುವುದನ್ನು ಸಾಬೀತು ಪಡಿಸಬೇಕಿದೆ. ಸದ್ಯ ಬಿಗ್ ಬಾಸ್ ಮೂರು ವಾರಗಳನ್ನು ಸಮರ್ಥವಾಗಿ ಮುಗಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಮೂವರ ನಡುವೆಯೇ ಫೈಟ್ ನಡೆಯುತ್ತದೆ. ಆಗ ಯಾರು ಹಿತವರ ಎನ್ನುವ ಫಲಿತಾಂಶ ಸಿಗಬಹುದು. ಅಲ್ಲಿವರೆಗೂ ಕಾಯೋಣ.

  • Bigg Boss Kannada ವಾರ್: ಶಟಪ್ ಎಂದು ಗರಂ ಆದ ನಮ್ರತಾ

    Bigg Boss Kannada ವಾರ್: ಶಟಪ್ ಎಂದು ಗರಂ ಆದ ನಮ್ರತಾ

    ಬಿಗ್ ಬಾಸ್  (Bigg Boss Kannada) ಮನೆ ಬೆಳಗ್ಗೆ ರಣರಂಗವಾಗಿತ್ತು. ನೆನ್ನೆಯಿಂದಲೇ ನಮ್ರತಾ (Namrata Gowda) ಮತ್ತು ತನಿಷಾ (Tanisha Kuppunda) ನಡುವೆ ಯಾವುದೂ ಸರಿಯಿಲ್ಲ ಎನ್ನುವಂತಿತ್ತು. ಅದು ಇವತ್ತು ನಿಜವಾಗಿದೆ. ಇಬ್ಬರೂ ಜೋರು ಧ್ವನಿಯಲ್ಲೇ ಕಿತ್ತಾಡಿದ್ದಾರೆ. ತನಿಷಾ ಮೇಲೆ ನಮ್ರತಾ ಗರಂ ಆಗಿದ್ದಾರೆ. ಶಟಪ್.. ಮುಚ್ಕೋ ಬಾಯಿ ಎಂದು ಹೇಳುವಷ್ಟರ ಮಟ್ಟಿಗೆ ಜಗಳ ಬೆಳೆದು ನಿಂತಿದೆ.

    ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಜಡೆ ಜಗಳ ಶುರುವಾಗಿದೆ. ತನಿಷಾ ಮತ್ತು ನಮ್ರತಾ ಗೌಡ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಫನ್ ಟಾಸ್ಕ್‌ ಫನ್‌ ಆಗಿ ನಡೆಯಬೇಕಿದ್ದ ಜಾಗದಲ್ಲಿ ನಮ್ರತಾ- ತನಿಷಾ ಕಿತ್ತಾಡಿಕೊಂಡಿದ್ದಾರೆ. ರೊಚ್ಚಿಗೆದ್ದ ನಮ್ರತಾ, ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕುಟುಕಿದ್ದಾರೆ.

    ಬಿಗ್ ಬಾಸ್ ಎಂದಿನಂತೆ ಈ ವಾರವೂ 2 ತಂಡಗಳಿಗೆ ಟಾಸ್ಕ್ ನೀಡಿದ್ರು. ಭಜರಂಗಿ’ – ‘ಉಗ್ರಂ’ ತಂಡಕ್ಕೆ ‘ಬಿಗ್ ಬಾಸ್’ ಫನ್ ಟಾಸ್ಕ್ ಕೊಟ್ಟಿದ್ದರು. ಅದೇ ‘ಗಲ್ಲಿ ಕ್ರಿಕೆಟ್’ ಇದರ ಅನುಸಾರ, ಎರಡೂ ತಂಡಗಳು ಮೂರು ಓವರ್‌ಗಳ ಗಲ್ಲಿ ಕ್ರಿಕೆಟ್ ಆಡಬೇಕಿತ್ತು. ಎರಡೂ ತಂಡದಿಂದ ತಲಾ ಒಬ್ಬರು ಅಂಪೈರ್‌ ಆಗಬೇಕಿತ್ತು. ‘ಭಜರಂಗಿ’ ತಂಡದಿಂದ ತನಿಷಾ ಅಂಪೈರ್ ಆದರೆ, ‘ಉಗ್ರಂ’ ತಂಡದಿಂದ ನಮ್ರತಾ ಗೌಡ ಅಂಪೈರ್‌ ಆಗಿದ್ದರು.

    ಆಟಕ್ಕೆ ತನಿಷಾ ಎಂಟ್ರಿ ಕೊಟ್ಟ ಕೂಡಲೆ ನಮ್ರತಾ, ತನಿಷಾ ಡಿಸಿಷನ್ ಫೇರ್‌ ಆಗಿರಲಿ ಈಗಲೇ ಹೇಳ್ತಿದ್ದೀನಿ ಎಂದು ಖಡಕ್ ಆಗಿ ಹೇಳಿ ಬಿಟ್ಟರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ನಮ್ರತಾ ಮಾತಿಗೆ ನಿಮ್ಮ ಹತ್ತಿರ ಅನ್ನಿಸಿಕೊಳ್ಳಲು ಬಂದಿಲ್ಲ ಇಲ್ಲಿ. ಇದು ನಾನ್‌ ಸೆನ್ಸ್. ಎಂಟರ್‌ಟೇನ್ಮೆಂಟ್ ಗೇಮ್‌ನ ಹಾಳು ಮಾಡೋಕೆ ನಿಮ್ಮಂಥೋರು ಇರಬೇಕು ಇಲ್ಲಿ ಅಂತ ತನಿಷಾ ತಿರುಗೇಟು ನೀಡಿದ್ರು.

    ಗಲ್ಲಿ ಕ್ರಿಕೆಟ್‌’ನಲ್ಲಿ ಅಂತಿಮವಾಗಿ ‘ಭಜರಂಗಿ’ ತಂಡ ಗೆಲುವು ಸಾಧಿಸಿತು. ಉತ್ತಮ ಬ್ಯಾಟ್‌ಮ್ಯಾನ್ ಪಟ್ಟ ತುಕಾಲಿ ಸಂತುಗೆ ಒಲಿಯಿತು. ಆದರೆ ಆಟ ಮುಗಿದ್ರೂ ನಮ್ರತಾ-ತನಿಷಾ ಕೋಳಿ ಜಳಗಕ್ಕೆ ಬ್ರೇಕ್ ಬಿಳಲಿಲ್ಲ.

    ಇದಾದ ಬಳಿಕ ಡಿಸಿಷನ್ ಫೇರ್‌ ಆಗಿರಲಿ ಈಗಲೇ ಹೇಳ್ತಿದ್ದೀನಿ ಅಂತ ತನಿಷಾ ಮುಂದೆ ಹೇಳಿಬಿಟ್ಟು. ಜಗಳದ ಬಳಿಕ ವಿನಯ್ ಮತ್ತು ಕಾರ್ತಿಕ್ ಮುಂದೆ, ನಾನು ಏನೂ ಹೇಳಿಲ್ಲ ಗುರು ನಮ್ರತಾ ಖ್ಯಾತೆ ತೆಗೆದರು. ಮಾತು ಶುರುವಾದ್ಮೇಲೆ ನಿಲ್ಲಿಸೋದೇ ಇಲ್ಲ ಅಂತ ತನಿಷಾ ಬಗ್ಗೆ ವಿನಯ್ ಗೌಡ ಕಾಮೆಂಟ್ ಮಾಡಿದ್ಮೇಲೆ, ಮಾತನಾಡುವ ಕಾಯಿಲೆ ಅನ್ಸುತ್ತೆ. ಆ್ಯಸಿಡ್ ಹಾಕಿ ಬಾಯಿ ತೊಳಿದುಬಿಡು ಒಂದ್ಸಲಿ ಎಂದು ಕೊಂಕು ನುಡಿದರು ನಮ್ರತಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತು ಕಠೋರ ಶಪಥ

    Bigg Boss Kannada: ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತು ಕಠೋರ ಶಪಥ

    ‘ಬಿಗ್‌ಬಾಸ್‌ (Bigg Boss Kannada) ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ’ ಎಂದು ತಮಾಷೆಯಾಗಿ ಹೇಳಿದ್ದ ತುಕಾಲಿ ಸಂತೋಷ್ (Tukali Santu) ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಇಂತಹ ಪ್ರಶ್ನೆಗಳು ನೋಡುಗರಲ್ಲಿ ಮೂಡಿವೆ.

    ಮನೆಯೊಳಗಿದ್ದಾಗ ತುಕಾಲಿ ಸಂತೋಷ್‌ಗೆ ಎದುರಾದ ಈ ಪರಿಸ್ಥಿತಿಯ ಬಗ್ಗೆ ನಮ್ರತಾ, ಸ್ನೇಹಿತ್ ಅವರು ತುಕಾಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಅಣ್ಣನಾಗುವ ಮಾತು ಬಂದಿದೆ. ಅದಕ್ಕೆ ಸಂತೋಷ್‌ ರೊಚ್ಚಿಗೆದ್ದು ನೇರವಾಗಿ ಬಿಗ್‌ಬಾಸ್‌ಗೇ ಸವಾಲು ಹಾಕಿದ್ದಾರೆ.

    ಮೊದ ಮೊದಲು ಪಾತ್ರೆಗಳ ರಾಶಿ ನೋಡಿದಾಗ, ’ಅಯ್ಯೋ ಈ ಹುಡುಗಿಯರ ಸಹವಾಸವೂ ಬೇಡ. ಈ ಪಾತ್ರೆ ತೊಳೆಯುವುದೂ ಬೇಡ’ ಅನ್ನಿಸಿಬಿಟ್ಟಿತ್ತಂತೆ. ಆದರೆ ಎರಡು ಮೂರು ಸಲ ತೊಳೆದು ರೂಢಿ ಆದಮೇಲೆ ಅವರಿಗೆ ಮತ್ತೆ ಛಲ ಉಕ್ಕಿದೆ. ನಾನು ಎಂದಿಗೂ ಈ ಮನೆಯೊಳಗಿನ ಹೆಣ್ಮಕ್ಳಿಗೆ ಅಣ್ಣನಾಗಲಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ.

    ಸ್ವಿಮ್ಮಿಂಗ್ ಫೂಲ್‌ ಬಳಿ ನಿಂತಿದ್ದಾಗ ನಮ್ರತಾ (Namrata Gowda), ‘ಅಣ್ಣನಾಗಬೇಕಾಗತ್ತೆ ಎಂಬ ಕಾರಣಕ್ಕೆ ಇರೋ ಬರೋ ಪಾತ್ರೆಯೆಲ್ಲ ತೊಳಿತಿದ್ದೀರಲ್ಲಾ ನೀವು’ ಎಂದು ತುಕಾಲಿ ಅವರ ಕಾಲೆಳೆದಿದ್ದಾರೆ. ಸ್ನೇಹಿತ್, ‘ರಾಖಿ ತರಿಸಿಕೊಡ್ತೀನಿ ಬನ್ನಿ’ ಎಂದು ತಮಾಷೆ ಮಾಡಿದ್ದಾರೆ.

    ನೇರವಾಗಿ ಕ್ಯಾಮೆರಾ ಎದುರಿಗೆ ಬಂದು ನಿಂತ ತುಕಾಲಿ ಅವರು, ‘ನಾನ್ಯಾಕೆ ರಾಖಿ ಕಟ್ಟಿಸ್ಕೋಬೇಕು? ಇನ್ನೂ ಬೇಕಾದ್ರೆ ಬಿಗ್‌ಬಾಸ್‌ ಮನೆಯೊಳಗೆ ಇರೋವರೆಗೂ ಪಾತ್ರೆ ತೊಳಿತೀನಿ ಬೇಕಾದ್ರೆ. ಆದ್ರೆ ರಾಖಿ ಮಾತ್ರ ಕಟ್ಟಿಸ್ಕೊಳ್ಳಲ್ಲ. ನಾನು ಎಲ್ಲಿಯವರೆಗೂ ಬಿಗ್‌ಬಾಸ್‌ ಮನೆಯೊಳಗೆ ಇರ್ತಿನೋ ಅಲ್ಲಿಯವರೆಗೂ ಇರೋವರೆಗೂ ಬ್ಯಾಚುಲರ್‍ರೇ’ ಎಂದು ಶಪಥ ಮಾಡಿದ್ದಾರೆ.

     

    ಅವರ ಶಪಥವನ್ನು ಕೇಳಿದ ಸ್ನೇಹಿತ್‌, ತುಕಾಲಿ ಅವರ ಹೆಂಡತಿಗೆ ಅಲ್ಲಿಂದಲೇ ‘ಚಿನ್ನಿ ಅವರೇ, ಈ ಎಲ್ಲ ಮಾತು ಕೇಳಿಸಿಕೊಂಡಮೇಲೆ ನೀವೇ ಏನಾದ್ರೂ ಮಾಡಬೇಕು. ಮೇನ್‌ಡೋರ್‍‌ನಿಂದ ಬಂದು ಏನಾದ್ರೂ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ. ಇಂತಹ ರಸವತ್ತಾದ ಅನೇಕ ದೃಶ್ಯಗಳನ್ನು Jiocinemaದ Unseen ಕಥೆಗಳಲ್ಲೂ ಕಾಣಬಹುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

    ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

    ಖ್ಯಾತ ನಟ ಶಿವರಾಜ್‌ ಕುಮಾರ್ (Shivaraj Kumar) ಅವರ ಅಭಿಮಾನಿಗಳು ಎಲ್ಲಿ ಇಲ್ಲ ಹೇಳಿ? ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿಯೂ ಶಿವಣ್ಣನ ನೆನಪುಗಳು ಹರಿದಾಡಿವೆ. ಅದಕ್ಕೆ ಕಾರಣವಾಗಿದ್ದು ತುಕಾಲಿ ಸಂತು (Tukali Santu). ತುಕಾಲಿಗೂ ಶಿವಣ್ಣನಿಗೂ ಎಲ್ಲಿಂದ ಎಲ್ಲಿಯ ಸಂಬಂಧ?

    ಇದು ಅಭಿಮಾನದ ಸಂಬಂಧ. ತುಕಾಲಿ ಸಂತುಗೆ ಶಿವಣ್ಣನ ಮೇಲಿದ್ದ ಅಭಿಮಾನ ವ್ಯಕ್ತಗೊಂಡಿದ್ದು ಅವರನ್ನು ಮಿಮಿಕ್ರಿ ಮಾಡುವ ಮೂಲಕ. ಮೊದಲೇ ಮಾತಿಗೊಮ್ಮೆ ಹಾಸ್ಯ ಚಟಾಕಿ ಸಿಡಿಸುವ ಸಂತು ಅವರು, ಶಿವಣ್ಣನ ಮಿಮಿಕ್ರಿ ಮಾಡಿದರೆ ಕೇಳಬೇಕೇ?  ಹಾಗಂತ ತುಕಾಲಿ ಅವರು ಶಿವಣ್ಣನ ಮಿಮಿಕ್ರಿ ಮಾಡುವುದರಲ್ಲಿಯೂ ಒಂದು ಅಡ್ವಾಂಟೇಜ್ ತೆಗೆದುಕೊಂಡಿದ್ದಾರೆ. ಆ ಅಡ್ವಾಂಟೇಜ್ ಏನು ಗೊತ್ತಾ?

    ‘ಸಮರ್ಥ’ ಮತ್ತು ‘ಅಸಮರ್ಥ’ ಸ್ಪರ್ಧಿಗಳ ನಡುವೆ ಕೆಲವರು ಬಿಗ್‌ಬಾಸ್ ಮನೆಯಲ್ಲಿನ ಹುಲ್ಲುಹಾಸಿನ ಮೇಲೆ ಕೂತು ಹರಟೆ ಹೊಡೆಯುತ್ತಿದ್ದರು. ಆಗಲೇ ತುಕಾಲಿ ಸಂತುಗೆ ಶಿವಣ್ಣನ ಮಿಮಿಕ್ರಿ ಮಾಡುವ ಹುಕಿ ಬಂದಿದ್ದು. ಬರೀ ಮಿಮಿಕ್ರಿ ಮಾಡಿದರೆ ಸಾಕೇ? ಅದರ ಮೂಲಕವೇ ನಮ್ರತಾ ಗೌಡ ಜೊತೆಗೆ ಎರಡು ಹೆಜ್ಜೆ ಹಾಕುವ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ. ಕಾಮಿಡಿ ಮಾಡ್ತಾನೇ ಫ್ಲರ್ಟ್‌ ಮಾಡುವ ಕಲೆ ಅವರಿಗೆ ಕರಗತ ಆಗಿರುವಂತಿದೆ.

    ‘ಹುಲ್ಲು ಹಾಸಿನ ಮೇಲೆ ಮಲಗಿದ್ದ ನಮ್ರತಾ ಎದುರಿಗೆ ಹೋಗಿ ನಿಂತ ತುಕಾಲಿ ಶಿವಣ್ಣ ಅವರ ಸ್ಟೈಲ್‌ನಲ್ಲಿಯೇ, ‘ನೀವಂದ್ರೆ ತುಂಬ ಇಷ್ಟ. ಒಂದೆರಡು ಸ್ಟೆಪ್ ಹಾಕ್ಬೋದಾ?’ ಎಂದು ಕೇಳಿದ್ದಾರೆ. ಶಿವಣ್ಣನ ಧ್ವನಿಯಲ್ಲಿ ‘ಸ್ಟೆಪ್ ಹಾಕೋಣ್ವಾ?’ ಅಂತ ಕೇಳಿದ್ರೆ ನೋ ಅನ್ನಕ್ಕಾಗತ್ತಾ? ನಮ್ರತಾ ಖುಷಿಯಿಂದಲೇ ಎದ್ದುಹೋಗಿ ಅವರ ಪಕ್ಕ ನಿಂತಿದ್ದಾರೆ.

     

    ‘ರಾಜಾ ರಾಜಾ ಶಿವರಾಜ…’ ಎಂದು ಶಿವಣ್ಣನ ಧ್ವನಿಯನ್ನೇ ಅನುಕರಿಸುತ್ತ ಹಾಡುವುದರ ಜೊತೆಗೆ ತುಕಾಲಿ ಅವರು ಡಾನ್ಸ್‌ ಎಕ್ಸ್‌ಫರ್ಟ್‌ ನಮ್ರತಾಗೇ (Namrata Gowda)ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ. ಈ ಎಲ್ಲ ಕ್ಷಣಗಳು JioCinemaದಲ್ಲಿ ದಾಖಲಾಗಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ನೆನೆದು ಕಣ್ಣೀರಿಟ್ಟ ಸ್ನೇಹಿತ್

    Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ನೆನೆದು ಕಣ್ಣೀರಿಟ್ಟ ಸ್ನೇಹಿತ್

    ಬಿಗ್‌ಬಾಸ್‌ (Bigg Boss Kannada) ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಹೊಸ ಸ್ನೇಹ, ಹೊಸ ವೈರ, ಹೊಸ ಹೊಸ ಸಂಬಂಧಗಳೂ ಅವರ ನಡುವೆ ರೂಪುಗೊಳ್ಳುತ್ತಿವೆ. ಅದೇ ರೀತಿ ಸ್ಪರ್ಧಿಗಳು ತಮ್ಮ ಬದುಕಿನ ಹಿಂದಿನ ದಿನಗಳನ್ನು, ಸಿಹಿ-ಕಹಿ ನೆನಪುಗಳನ್ನೂ ಹಂಚಿಕೊಂಡು ಹಗುರಾಗುತ್ತಿದ್ದಾರೆ.

    ಕ್ಯೂಟ್‌ ಆಂಡ್ ಫಿಟ್ ಹುಡುಗ ಸ್ನೇಹಿತ್ ಕೂಡ ಬಿಗ್‌ಬಾಸ್‌ ಮನೆಯಲ್ಲಿ ಮನಸೊಳಗಿನ ನೋವನ್ನು ಹೊರಹಾಕಿ ಕಣ್ಣೀರಾಗಿದ್ದಾರೆ.  ಹಾಗಾದ್ರೆ ಸ್ನೇಹಿತ್ (Snehith) ಕಣ್ಣಲ್ಲಿ ನೀರು ತರಿಸಿದ್ದು ಯಾರು? ಅವರ ಕಣ್ಣೀರಿಗೆ ಕಾರಣ ಮನೆಯೊಳಗಿನ ಯಾವ ವ್ಯಕ್ತಿಯೂ ಅಲ್ಲ. ಅಥವಾ ಟಾಸ್ಕ್‌ನ ಟಫ್‌ನೆಸ್‌ ಕೂಡ ಅಲ್ಲ. ತಮ್ಮ ಆಪ್ತ ಸ್ನೇಹಿತನನ್ನು ನೆನಪಿಸಿಕೊಂಡು ಅವರು ಕಣ್ಣೀರಾಗಿದ್ದಾರೆ.

    ಸ್ನೇಹಿತ್, ನಮ್ರತಾ (Namrata Gowda) ಮತ್ತು ಇಶಾನಿ (Ishani) ನಡುವಿನ ಮಾತುಕತೆ ಫಿಟ್‌ನೆಸ್‌ ಸುತ್ತಲೇ ಸುತ್ತುತ್ತಿತ್ತು. ವರ್ಕೌಟ್‌ ಮಾಡುವಾಗ ಸ್ನೇಹಿತ್ ಅವರ ಕಣ್ಣುಗಳಲ್ಲಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ಬಿಗ್‌ಬಾಸ್‌ ಮನೆಯೊಳಗಿನ ಟಾಸ್ಕ್‌ಗಳನ್ನು ಮಾಡುವಾಗಲೂ ಅವರಲ್ಲಿ ಅದೇ ರೀತಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ‘ನಾನು ನಾರ್ಮಲ್ ಆಗಿ ವರ್ಕೌಟ್ ಮಾಡಲ್ಲ. ನಾನು ವರ್ಕೌಟ್ ಮಾಡುವಾಗ ನೋಡಿ, ನನ್ನ ಕಣ್ಣಲ್ಲಿ ಒಂದು ಅಗ್ರೆಶನ್ ಇರುತ್ತದೆ. ಇವನ್, ನಾನು ಫಿಜಿಕಲ್ ಟಾಸ್ಕ್ ಯಾವುದಾದರೂ ಮಾಡುವಾಗ ನೋಡಿದರೂ ನನ್ನ ಕಣ್ಣಲ್ಲಿ ಅಗ್ರೆಶನ್ ಇರುತ್ತದೆ’ ಎಂದರು  ಸ್ನೇಹಿತ್.

    ಡ್ರೋನ್‌ ಪ್ರತಾಪ್ ತರಹನಾ ಎನ್ನುತ್ತಾರೆ ನಮ್ರತಾ, ಅಲ್ಲ ಅಲ್ಲ… ನಾನು ಮೊದಲು ವೀಕ್ ಆಗಿದ್ದೆ. ನನ್ನ ಫ್ರೆಂಡ್‌ ಒಬ್ಬ ಇದ್ದ. ನಾವು ಸ್ಕೂಲ್‌ ಟೈಮಲ್ಲೂ ಒಟ್ಟಿಗೇ ಓದಿದ್ದು. ಯಾರಾದ್ರೂ ಹೊಡೆದ್ರೆ ನನ್ ಜೊತೆ ನಿಂತ್ಕೊಳೋನು ಅವ್ನು. ಯಾಕಂದ್ರೆ ಅವ್ನು ನನಗಿಂತ ಸ್ಟ್ರಾಂಗ್ ಇದ್ದ. ಮತ್ಯಾರೂ ನನ್ ಜೊತೆಗೆ ನಿಲ್ತಿರಲಿಲ್ಲ. ಅವನು ನಾನು ಸ್ಟ್ರಗಲ್ ಮಾಡುತ್ತಿದ್ದಾಗ ನಂಗೆ ತುಂಬ ಹೆಲ್ಪ್ ಮಾಡಿದ್ದ. ರಿಹರ್ಸಲ್‌ಗೆ ದುಡ್ಡು ಇರ್ತಿರ್ಲಿಲ್ಲ. ನಂಗೆ ಮನೇಲಿ ದುಡ್ಡ ಕೇಳೋಕೆ ಆಗ್ತಾನೇ ಇರ್ಲಿಲ್ಲ. ಅವ್ನು ಯಾವಾಗ್ಲೋ ಸಿಕ್ಕಾಗ ಮೂರು ಸಾವ್ರ ಹಣ ಕೊಟ್ಟು ಹೋಗೋನು. ಆ ಮೂರು ಸಾವ್ರ ನಂಗೆ ಎರಡು ತಿಂಗಳ ಪೆಟ್ರೋಲ್‌ಗೆ ಸಾಕಾಗ್ತಿತ್ತು. ಎರಡು ತಿಂಗಳು ರಿಹರ್ಸಲ್‌ ನಡೀತಿತ್ತು. ನನ್ನ ಕರ್ಚು ಅಷ್ಟೇ ಇರ್ತಿತ್ತು. ಆ ಥರ ಫ್ರೆಂಡ್ಸ್ ಸಿಗೋದು ಕಷ್ಟ. ಆ ಸ್ಟ್ರಗಲ್‌ನಲ್ಲಿ ನನ್ ಜೊತೆಗಿದ್ದ.  ನಾನು ಮನೆಯೊಳಗೆ ಬರುವ ದಿನವೂ ಅವನು ಬಂದಿದ್ದ ಎಂದು ಭಾವುಕರಾದ ಸ್ನೇಹಿತ್.

     

    ಹೀಗೆ ಹೇಳುತ್ತಲೇ ಸ್ನೇಹಿತ್‌ ಕಣ್ಣುಗಳು ತುಂಬಿಕೊಳ್ಳುತ್ತವೆ. ನಮ್ರತಾ ಮತ್ತು ಇಶಾನಿ ಸ್ನೇಹಿತ್ ಬಳಿಗೆ ಬಂದು ಸಂತೈಸುತ್ತಾರೆ. ಕ್ರೈಯಿಂಗ್ ಈಸ್ ನಾಟ್ ವೀಕ್‌ನೆಸ್ ಎಂದು ನಮ್ರತಾ ಸಂತೈಸುತ್ತಾಳೆ. ವೀಕ್‌ನೆಸ್ ಅಲ್ಲ.  ಇದನ್ನು ನಾರ್ಮಲೈಜ್ ಮಾಡಬೇಕು. ಗಂಡಸರು ಅಳಬಾರದು ಅನ್ನೋದು ರಾಂಗ್. ಎಲ್ಲ ಎಮೋಷನ್ ಕೂಡ ಎಮೋಷನ್ನೇ.. ಖುಷಿ ದುಃಖ ಎಲ್ಲವೂ ಇರಬೇಕು ಎನ್ನುತ್ತಾರೆ ಸ್ನೇಹಿತ್. ಗಂಡಸರನ್ನೂ ಕೂಡ ನಾವು ಸೆನ್ಸಿಟೀವ್ ಆಗಿ ಸಾಫ್ಟ್ ಆಗೇ ನೋಡಬೇಕು. ನನಗೆ ಈಗ ಅರ್ಥ ಆಗುತ್ತಿದೆ. ಅವರೂ ಎಷ್ಟು ಕಷ್ಟಪಡ್ತಾರೆ ಹೀಗೆ ಇಶಾನಿ ಮಾತನಾಡಿದ್ದಾರೆ. ಇವೆಲ್ಲ ಎಮೋಷನಲ್ ದೃಶ್ಯಗಳನ್ನು Jio Cinema Live Shorts ನಲ್ಲಿ ಸೆರೆ ಹಿಡಿಯಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BBK 10- ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಸ್ನೇಹಿತ್: ಕಣ್ಣೀರಿಟ್ಟ ನಮ್ರತಾ

    BBK 10- ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಸ್ನೇಹಿತ್: ಕಣ್ಣೀರಿಟ್ಟ ನಮ್ರತಾ

    ಬಿಗ್ ಬಾಸ್ (Bigg Boss Kannada) ಮನೆಯ ಮೊದಲ ಕ್ಯಾಪ್ಟನ್ ಆಗಬೇಕು ಎನ್ನುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಬಿಗ್ ಬಾಸ್ ಆಡಿಸುವ ಆಟದಲ್ಲಿ ಅವರು ಗೆಲ್ಲಬೇಕು. ಟಾಸ್ಕ್ ಗೆಲ್ಲದೇ ಕ್ಯಾಪ್ಟನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ನೆನ್ನೆಯೂ ಕ್ಯಾಪ್ಟನ್ (Captain) ಗಾಗಿ ಹಲವರು ಟಾಸ್ಕ್ ಗಳು ನಡೆದವು. ಅಂತಿಮವಾಗಿ ಬಿಗ್ ಬಾಸ್ ಮನೆಗೆ ಮೊದಲ ಕ್ಯಾಪ್ಟನ್ ಆಗಹಿ ಸ್ನೇಹಿತ್ (Snehith) ಆಯ್ಕೆಯಾಗಿದ್ದಾರೆ.

    ತುಕಾಲಿ ಸಂತು ಮತ್ತು ನಮ್ರತಾ ಗೌಡ (Namrata Gowda) ಕ್ಯಾಪ್ಟನ್ ಆಟದಲ್ಲಿ ಪ್ರತಿಸ್ಪರ್ಧಿಯಾಗಿದ್ದರು. ಈ ಇಬ್ಬರೂ ಕ್ಯಾಪ್ಟನ್ ಶಿಪ್ ಗೆಲ್ಲುವನ್ನು ವಿಫಲರಾದರು. ಹಾಗಾಗಿ ಮೊದಲ ಕ್ಯಾಪ್ಟನ್ ಪಟ್ಟವನ್ನು ಸ್ನೇಹಿತ್ ಮುಡಿಗೇರಿಸಿಕೊಂಡರು. ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆಯಲ್ಲಿ ನಿರಾಸೆ ಕಾದಿತ್ತು. ಯಾಕೆಂದರೆ, ಕ್ಯಾಪ್ಟನ್ ಮೀರಿಸುವಂತಹ ವ್ಯಕ್ತಿಯೊಬ್ಬರು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ.

    ದೊಡ್ಮನೆಗೆ ಮತ್ತೊಂದು ಸಲ ಒಳ್ಳೆಯ ಹುಡುಗ ಪ್ರಥಮ್ (Pratham) ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಂಟೆಸ್ಟೆಂಟ್ ಆಗಿ ಹೋದವರು, ಟ್ರೋಫಿ ಗೆದ್ದುಕೊಂಡು ಹೊರ ಬಂದರು. ಇದೀಗ ಪ್ರಥಮ್ ಟಾಸ್ಕ್ ಆಡಿಸುವುದಕ್ಕಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಹೆಸರಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಗತ್ತಿನ ಮಾತುಗಳಿಂದ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದ್ದಾರೆ.

    ಪ್ರಥಮ್ ಗಿಂತ ಮೊದಲು ಗನ್ ಮ್ಯಾನ್ ಎಂಟ್ರಿ

    ದೊಡ್ಮನೆಯ ಆಟ ಜೋರಾಗಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಬದಲಾಗುತ್ತಿದೆ. ಈಗ ಮನೆಯ ಅಸಲಿ ಆಟ ಶುರುವಾಗಿದೆ. ಬಿಗ್ ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದಾರೆ. ಗನ್ ಮ್ಯಾನ್‌ಗಳ ಎಂಟ್ರಿ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ.

    ಬಿಗ್ ಬಾಸ್ ಮನೆಗೆ(Bigg Boss House) 8 ಜನ ಗನ್ ಮ್ಯಾನ್‌ಗಳ (Gun Man) ಆಗಮನವಾಗಿದೆ. ಸಡನ್ ಆಗಿ ಗನ್ ಮ್ಯಾನ್‌ಗಳು ಎಂಟ್ರಿ ಕೊಟ್ಟಿರೋದು ನೋಡಿ ಮನೆ ಮಂದಿ ಒಮ್ಮೆ ಸೈಲೆಂಟ್ ಆಗಿದ್ದಾರೆ. ಬಳಿಕ ಚಪ್ಪಾಳೆ ಹೊಡೆದು ಸ್ಪರ್ಧಿಗಳು ಸ್ವಾಗತ ಕೋರಿದ್ದಾರೆ. ಅವರ ಮುಖದಲ್ಲಿರೋ ಮಂದಹಾಸ ನೋಡಿ ಮನೆಗೆ ಹೊಸ ಸೆಲೆಬ್ರಿಟಿ ಎಂಟ್ರಿ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.

     

    ಅಕ್ಟೋಬರ್ 9ರ ಎಪಿಸೋಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಮನೆಯಲ್ಲಿ 3 ಗಂಟೆಗಳ ಕಾಲ ಕಳೆಯುವ ಮೂಲಕ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದ್ದರು. ಪ್ರದೀಪ್ ಈಶ್ವರ್ ಅವರ ಎಂಟ್ರಿಗೆ ರಾಜಕೀಯ ರಂಗದಲ್ಲಿ (Politics) ಕೋಲಾಹಲ ಎಬ್ಬಿಸಿದ್ದರೂ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಮನೆ ಒಳಗೆ ಕಾಣಿಸಿಕೊಂಡ ದೆವ್ವ

    Bigg Boss Kannada: ಮನೆ ಒಳಗೆ ಕಾಣಿಸಿಕೊಂಡ ದೆವ್ವ

    ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ (Bigg Boss Kannada) ಮನೆಯಲ್ಲೇ ದೆವ್ವ ಕಾಣಿಸಿಕೊಂಡು ಗಾಬರಿ ಮೂಡಿಸಿತ್ತು. ಆಗ ದೊಡ್ಮನೆ ಒಳಗಿದ್ದ ಚೈತ್ರಾ ಕೋಟೂರು ಭೂತ ಕಂಡ ಬೊಬ್ಬೆ ಹಾಕಿದ್ದರು. ಮನೆಯಲ್ಲಿ ದೆವ್ವ ಇದೆ ನಾನು ನೋಡಿದ್ದೇನೆ ಎಂದು ಇಡೀ ಬಿಗ್ ಬಾಸ್ ಮನೆಯ ವಾತಾವರಣವನ್ನೇ ಭಯಭೀತಿಗೊಳಿಸಿದ್ದಳು. ಚೈತ್ರಾ ಮಾತನ್ನು ಅನೇಕರು ನಂಬಿದ್ದರು. ಭಯದಲ್ಲೇ ಅಂದಿನ ದಿನವನ್ನು ಕಳೆಯಲಾಗಿತ್ತು.

    ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡ ವಿಚಾರ ದೊಡ್ಮನೆ ಒಳಗೆ ಮಾತ್ರವಲ್ಲ, ಆಚೆಯೂ ಸಾಕಷ್ಟು ಸದ್ದು ಮಾಡಿತ್ತು. ತಮ್ಮದೇ ಆದ ಕಲ್ಪನೆಯನ್ನು ಸೇರಿಸಿ ಸುದ್ದಿಯನ್ನು ಮತ್ತಷ್ಟು ದೊಡ್ಡದು ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಸದ್ದು ಮಾಡಿತ್ತು. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡಿದೆ. ಆದರೆ, ಯಾರೂ ಭಯ ಪಡಲು ಹೋಗಿಲ್ಲ. ಕಾರಣ, ಆ ದೆವ್ವವನ್ನು ಸೃಷ್ಟಿ ಮಾಡಿದವರು ಅದೇ ಮನೆಯಲ್ಲೇ ಇದ್ದರು.

    ಬಿಗ್ ಬಾಸ್ ಮನೆಯಲ್ಲಿ ಇಂದು ಇಂಟ್ರಸ್ಟಿಂಗ್ ಸಂಗತಿಯೊಂದು ನಡೆಯಿತು. ಒಬ್ಬೊಬ್ಬರು ಒಂದೊಂದು ಸಾಲನ್ನು ಜೋಡಿಸುವ ಮೂಲಕ ಹಾರರ್ ಸಿನಿಮಾದ ಕಥೆಯನ್ನು ರೆಡಿ ಮಾಡಿದರು. ಒಬ್ಬೊಬ್ಬರು ಒಂದೊಂದು ರೋಚಕ ಸಾಲುಗಳನ್ನು ಪೋಣಿಸುವ ಮೂಲಕ ದೆವ್ವದ ಕಥೆಯೊಂದನ್ನು ರೆಡಿ ಮಾಡಿದರು. ಆ ಕಥೆ ನಿಜಕ್ಕೂ ಇಂಟ್ರಸ್ಟಿಂಗ್ ಆಗಿತ್ತು. ಜೋಡಿಸಿದ ಸಾಲುಗಳಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇದ್ದವು.

    ಅದರಲ್ಲೂ ತುಕಾಲಿ ಸಂತು ದೆವ್ವ, ನಾಗಿಣಿಯಾದ ಎಳೆಗೆ ಹಾಲು ಕುಡಿಸುವ ದೃಶ್ಯವನ್ನೂ ಪೋಣಿಸಿದರು. ಅಲ್ಲಿಂದ ಕಥೆಯ ಚಿತ್ರಣವೇ ಬದಲಾಯಿತು. ಇಡೀ ಮನೆಯಲ್ಲಿ ಆಹ್ಲಾದಕರ ವಾತಾವರಣವಿತ್ತು. ಯಾವುದೇ ಕೆಲಸವಿರಲಿ ಎಲ್ಲರೂ ಕೈ ಜೋಡಿಸಿದರೆ ಅದ್ಭುತವಾದ ಕೆಲಸವನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿತ್ತು.

     

    ಈ ಕಥೆ ಹೆಣೆಯುವ ಪ್ರಕ್ರಿಯೆಯಲ್ಲಿ ಸ್ನೇಕ್ ಶ್ಯಾಮ್ ಉತ್ತೇಜಿಸುತ್ತಲೇ, ಹಾದಿ ತಪ್ಪುವ ಮಾತುಗಳಿಗೆ ಬ್ರೇಕ್ ಹಾಕುತ್ತಿದ್ದರು. ಕೆಲವರು ಉತ್ಸಾಹದಿಂದ ಭಾಗಿಯಾದರೆ, ಇನ್ನೂ ಕೆಲವರು ಕಥೆ ಕೇಳಿಕೊಂಡು ಎಂಜಾಯ್ ಮಾಡುತ್ತಿದ್ದರು. ಅವರು ಕಟ್ಟಿದ ಕಥೆಯನ್ನು JioCinema live ನಲ್ಲೂ ವೀಕ್ಷಿಸಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಯಾರು ಯಾವ್ ಮೂಡ್‍ ನಲ್ಲಿ ಎದ್ದರು ನೋಡಿ

    Bigg Boss Kannada: ಯಾರು ಯಾವ್ ಮೂಡ್‍ ನಲ್ಲಿ ಎದ್ದರು ನೋಡಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ರಾತ್ರಿ- ಹಗಲುಗಳಿಗೆ ಲೆಕ್ಕ ಈಡೋರು ಯಾರು? ಮಲಗಿದ್ದೆ ರಾತ್ರಿ, ಏಳೋದು ಹಗಲು ಅಂತಿರುತ್ತದೆ. ಅದರಲ್ಲೂ ಅವರ ಬೆಳಗನ್ನು ಹಾಡಿನ ಮೂಲಕ ಸುಂದರಗೊಳಿಸಲಾಗುತ್ತಿದೆ. ದಿನವೂ ಒಂದೊಂದು ಹಾಡು, ಒಂದೊಂದು ಗುಡ್ ಮಾರ್ನಿಂಗ್, ಕಣ್ಣು ಉಜ್ಜಿಕೊಳ್ಳುತ್ತಲೇ ದಿನವನ್ನು ಸ್ವಾಗತಿಸುವುದು ಸಂಪ್ರದಾಯ.

    ಇಂದು ಕೂಡ ಬಿಗ್ ಬಾಸ್ ಮನೆಯಲ್ಲಿ ಅದೇ ನಡೆಯಿತು. ಹಾಡಿನ ಮೂಲಕವೇ ಮಲಗಿದ್ದವರನ್ನು ಎಚ್ಚರಗೊಳಿಸಲಾಯಿತು. ಬೆಳಗ್ಗೆ ಬೇಗ ಎದ್ದಿದ್ದ ನೀತು, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಮತ್ತು ಡ್ರೋಣ್ ಪ್ರತಾಪ್ ಯೋಗ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ನೀತು ವನಜಾಕ್ಷಿ ಮತ್ತು ಸಂಗೀತಾ ಶೃಂಗೇರಿ ಯೋಗ ಕಂಡು ಡ್ರೋಣ್ ಪ್ರತಾಪ್ ಅಚ್ಚರಿಯಲ್ಲೇ ನಿಂತಿದ್ದರು.

    ಯಾರು, ಯಾವ್ಯಾವುದೋ ಯೋಗ ಮಾಡ್ತಿದ್ದಾರೆ. ನನಗೆ ಅರ್ಥ ಆಗ್ತಿಲ್ಲ. ಯಾರನ್ನು ಫಾಲೋ ಮಾಡಬೇಕೋ ಗೊತ್ತಾಗ್ತಿಲ್ಲ ಅಂತ ಬೆರಗುಗಣ್ಣಿನಿಂದ ನೋಡುತ್ತಾ ಕುಳಿತಿದ್ದರು. ಒಂದೂ ಆಸನವನ್ನು ಟ್ರೈ ಮಾಡುವಂತಹ ಪ್ರಯತ್ನವನ್ನೂ ಡ್ರೋಣ್ ಪ್ರತಾಪ್ ಮಾಡಲಿಲ್ಲ. ಸುಮ್ಮನೆ ಲೇಜಿ ರೀತಿಯಲ್ಲಿ ಕುಳಿತುಕೊಂಡೇ ಇದ್ದರೆ.

    ಇತ್ತ ಮೈಕಲ್ ಕಾಫಿ ಮಗ್ ಹಿಡಿದುಕೊಂಡು ಮನೆ ತುಂಬಾ ಓಡಾಡುತ್ತಿದ್ದರು ಮೈಕಲ್. ಬೇರೆಯವರಿಗೆ ಕಾಫಿ ಕುಡಿಯಲು ಹುರುದುಂಬಿಸುತ್ತಿದ್ದರು. ಕಾಫಿ ರೆಡಿ ಇದೆ, ಬಿಸಿ ನೀರು ರೆಡಿ ಇದೆ ಎಂತಲ್ಲ ಮಾಹಿತಿಯನ್ನು ರವಾಣಿಸುತ್ತಿದ್ದರು.

    ನಮ್ರತಾ ಗೌಡ ಮತ್ತು ಭಾಗ್ಯಶ್ರೀ ನಡುವೆ ಬೆಡ್ ರೂಮ್‍ ನಲ್ಲಿ ಮಾತುಕತೆ ಜೋರಾಗಿತ್ತು. ಒಳ್ಳೆಯ ನಿದ್ದೆ ಮಾಡಿದ್ದಾಗ ಭಾಗ್ಯಶ್ರೀ ಹೇಳಿಕೊಂಡರೆ, ನಮ್ರತಾ (Namrata Gowda) ಕೂಡ ನಿದ್ದೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾತನಾಡಿಸಿದರು.

    ಪಕ್ಕದಲ್ಲಿ ಕೂತವರಿಗೆ ಬಡೆದು ಮಾತನಾಡಿಸುವ ಕೆಟ್ಟ ಚಾಳಿ ಇದೆ ಎಂದು ಭಾಗ್ಯಶ್ರೀ ಹೇಳಿದರು. ಗೌರೀಶ್ ಅಕ್ಕಿ ಅವರಿಗೆ ಈ ವಿಷಯದಲ್ಲಿ ಭಾಗ್ಯಶ್ರೀ ಕ್ಷಮೆ ಕೇಳಿದರು. ತನಗೂ ಅಂಥದ್ದೇ ಕೆಟ್ಟ ಹವ್ಯಾಸ ಇರುವುದಾಗಿ ನಮ್ರತಾ ಮಾತನಾಡಿದರು.

     

    ಒಂದು ರೀತಿಯಲ್ಲಿ ಎಲ್ಲರೂ ವಿಚಿತ್ರ ಮೂಡಿನಲ್ಲಿ ಎದ್ದು, ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ದಿನ ಅವರು ಹೇಗೆಲ್ಲ ಇರಲಿದ್ದಾರೆ ಎನ್ನುವುದನ್ನು JioCinema live ನೋಡಬಹುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada 10: ಕಿರುತೆರೆ ನಟ ಸ್ನೇಹಿತ್ ಗೌಡ 2ನೇ ಸ್ಪರ್ಧಿಯಾಗಿ ದೊಡ್ಮೆನೆಗೆ ಎಂಟ್ರಿ

    Bigg Boss Kannada 10: ಕಿರುತೆರೆ ನಟ ಸ್ನೇಹಿತ್ ಗೌಡ 2ನೇ ಸ್ಪರ್ಧಿಯಾಗಿ ದೊಡ್ಮೆನೆಗೆ ಎಂಟ್ರಿ

    ಬಿಗ್ ಬಾಸ್ (Bigg Boss Kannada) ಮನೆಗೆ ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಪ್ರವೇಶ ಮಾಡಿದ್ದರು. ಎರಡನೇ ಸ್ಪರ್ಧಿಯಾಗಿ ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ಸ್ನೇಹಿತ್ ಗೌಡ (Snehith Gowda) ಎಂಟ್ರಿ ಕೊಟ್ಟಿದ್ದಾರೆ. ರಂಗಭೂಮಿ ಮತ್ತು ಕಿರುತೆರೆಯ ಹಿನ್ನೆಲೆ ಈ ಯುವ ನಟನಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ. ಸ್ನೇಹಿತ್ ಗೌಡ ಅವರಿಗೆ ದೊಡ್ಮನೆ ಪ್ರವೇಶ ಮಾಡಲು ಶೇಕಡಾ 81ರಷ್ಟು ವೋಟು ಪಡೆದು ಆಯ್ಕೆಯಾದರು.

    ‘ನಿನ್ನ ಕಂಡ ಕ್ಷಣದಿಂದ ಹಾಡಿನ ಮೂಲಕ ವೇದಿಕೆ ಪ್ರವೇಶ ಮಾಡಿದ ಸ್ನೇಹಿತ್ ಗೌಡ, ದೊಡ್ಮನೆಯ ಬಾಗಿಲು ತೆರೆದುಕೊಂಡು ಹೋಗುವಾಗ ಸುದೀಪ್ ನೀಡಿದ ಕಾಫಿ ಪೌಡರ್ ತೆಗೆದುಕೊಂಡು ಹೋದರು. ಮನೆಗೆ ಬರುವ ಸ್ಪರ್ಧಿಗಳಿಗೆ ನಮತ್ರಾ ಮತ್ತು ಸ್ನೇಹಿತ್ ಒಟ್ಟಾಗಿ ಕಾಫಿ ಮಾಡಿಕೊಡುವ ಮತ್ತು ಕಾಫಿ ಕುಡಿಯದೇ ಇರುವ ಸ್ನೇಹಿತ್ ಕೂಡ ಕಾಫಿ ಕುಡಿಯುವಂತೆ ಸುದೀಪ್ ವಾರ್ನ್ ಮಾಡಿ ಮನೆಗೆ ಕಳುಹಿಸಿಕೊಟ್ಟರು.

    ಮೊದಲ ಸ್ಪರ್ಧಿ ನಮ್ರತಾ

    ಕಿರುತೆರೆಯ ಖ್ಯಾತ ನಟಿ ನಮ್ರತಾ ಗೌಡ (Namrata Gowda), ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ನಾಗಿಣಿ 2 ಧಾರಾವಾಹಿ ಮೂಲಕ ಫೇಮಸ್ ಆದ ನಟಿ ಇವರು. ತಂದೆ, ತಾಯಿ ಮತ್ತು ಕುಟುಂಬ ಈ ಸಂದರ್ಭದಲ್ಲಿ ಹಾಜರಿತ್ತು. ತಾವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಬಂದೆ ಎನ್ನುವ ಕುರಿತು ನಮ್ರತಾ ಗೌಡ ಮಾತನಾಡಿದರು. ನಿರ್ಣಾಯಕರಾದ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಒಟ್ಟಾರೆ ಶೇಕಡಾ 86ರಷ್ಟು ವೋಟ್ ಪಡೆದುಕೊಂಡು ಆಯ್ಕೆಯಾದರು.

     

    ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಒಳಗೆ ಹೋದ ನಮ್ರತಾ ಗೌಡ ಅವರಿಗೆ ಸ್ಪೆಷಲ್ ಕೆಲಸವನ್ನು ನೀಡಿದರು ಸುದೀಪ್ (Sudeep). ಮೊದಲ ಕಂಟೆಸ್ಟೆಂಟ್ ಆಗಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಹಾಲು ಉಕ್ಕಿಸುವಂತೆ ಹೇಳಿದರು. ನಮತ್ರಾ ಮನೆಯೊಳಗೆ ಕಾಲಿಟ್ಟು ಹಾಲು ಉಕ್ಕಿಸುವ ಮೂಲಕ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ. ‘ಊರಿಗೊಬ್ಬಳೆ ಪದ್ಮಾವತಿ’ ಹಾಡಿನ ಮೂಲಕ ವೇದಿಕೆಗೆ ಬಂದ ನಮ್ರತಾ, ಹಲವಾರು ವಿಚಾರಗಳನ್ನು ಹಂಚಿಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]