Tag: Namrata

  • ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ (Namrata), ಬಿಗ್‌ ಬಾಸ್‌ (Bigg Boss Kannada) ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ ಶೇಕಡಾ ಮತಗಳು ಬಂದಿದ್ದವು. ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್‌’ ಎಂಬ ಟ್ಯಾಗ್‌ಲೈನ್‌ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.

    ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್‌, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್‌ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್‌ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.

    ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ JioCinemaದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ. ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಅವರ ಕಾಂಟ್ರಿಬ್ಯೂಷನ್ ದೊಡ್ಡದಿದೆ. ‘ಹೂಂ ಅಂತಿಯಾ ಊಹೂಂ’ ಅಂತಿಯಾ ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸುವುದರ ಮೂಲಕ ಅವರು ಗಮನಸೆಳೆದಿದ್ದರು. ಗೇಮ್‌ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಅವರದ್ದು ಎತ್ತಿದ ಕೈ. ‘ಹುಡುಕಿ ತಂದವರೇ ಮಹಾಶೂರ’ ಟಾಸ್ಕ್‌ನಲ್ಲಿ ಅವರು ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ತಂದಿತ್ತಿತ್ತು.

    ತನಿಷಾ ಜೊತೆಗೆ ಕ್ಲಾಶ್‌

    ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್‌ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್‌ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.

    ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ

    ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್‌. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್‌ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.

     

    ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್‌ ಅವರಿಗೆ ಅರ್ಪಿಸಿದ್ದರು.

  • ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ (Bigg Boss Kannada) ಮನೆ ಈ ವಾರ ಅಕ್ಷರಶಃ ಯುದ್ಧ ಭೂಮಿಯಂತೆ ಕಾಣುತ್ತಿದೆ. ಫಿನಾಲೆಗೆ ಒಂದು ವಾರವಷ್ಟೇ ಬಾಕಿ. ಮನೆಯಲ್ಲಿ ಇರೋದು ಏಳು ಜನ. ಈಗಾಗಲೇ ಸಂಗೀತಾ ಶೃಂಗೇರಿ ಡೈರೆಕ್ಟ್ ಆಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ತುಕಾಲಿ ಸಂತು ಅವರು ನಾಮಿನೇಷನ್ ತೂಗುಕತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಹಾಗಾಗಿ ವರ್ತೂರು ಸಂತೋಷ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ನಮ್ರತಾ ಸೆಣೆಸಾಡೋದು ಅನಿವಾರ್ಯವಾಗಿದೆ.

    ಮಿಡ್ ವೀಕ್ ಎಲಿಮಿನೇಷನ್ (Elimination) ಅಂತ ಈಗಾಗಲೇ ತನಿಷಾ ಕುಪ್ಪಂಡ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಫಿನಾಲೆ ವೇದಿಕೆಯ ಮೇಲೆ ಐದೇ ಐದು ಜನರು ಇರುವ ಕಾರಣದಿಂದಾಗಿ ಇನ್ನೂ ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಬೇಕಿದೆ. ಹಾಗಾಗಿ ಈ ವಾರ ಮತ್ತ್ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ. ಕಳೆದ ಸುದೀಪ್ ಅವರು ವರ್ತೂರು ಸಂತೋಷ್ ಅಥವಾ ತುಕಾಲಿ ಸಂತು ಇಬ್ಬರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗಲು ರೆಡಿಯಾಗಿ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು. ಈ ಬಾರಿ ತುಕಾಲಿ ಬಚಾವ್ ಆಗಿದ್ದಾರೆ.

    ಸದ್ಯ ನಾಮಿನೇಟ್ ಆಗಿರುವ ಕಂಟೆಸ್ಟೆಂಟ್ ಗಳ ಪೈಕಿ ವಿನಯ್, ಕಾರ್ತಿಕ್ ಹಾಗೂ ಡ್ರೋನ್ ಪ್ರತಾಪ್ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಅನಿಸಿಕೊಂಡಿದ್ದಾರೆ. ಉಳಿದಿರೋದು ವರ್ತೂರು ಸಂತೋಷ್ ಮತ್ತು ನಮ್ರತಾ. ಇಬ್ಬರಲ್ಲಿ ಒಬ್ಬರು ಈ ವಾರ ಆಚೆ ಬರಬಹುದಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹೊರ ಬಂದರೆ ಈ ಇಬ್ಬರಲ್ಲಿ ಒಬ್ಬರು ಗ್ಯಾರಂಟಿ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಕಳೆದ ವಾರವೇ ವರ್ತೂರು ಆಚೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಈ ವಾರ ಅದೇನಾದರೂ ರಿಪೀಟ್ ಆಗಬಹುದಾ? ಗೊತ್ತಿಲ್ಲ.

    ಮತ್ತೊಂದು ಕಿಚ್ಚನ ಪಂಚಾಯತಿ ಎಂದು ನಡೆಯುತ್ತಿದೆ. ಈ ಪಂಚಾಯತಿಯಲ್ಲಿ ಏನೆಲ್ಲ ಸಂಗತಿಗಳು ನಡೆಯಲಿವೆ ಎನ್ನುವ ಚರ್ಚೆ ಕೂಡ ಆಗುತ್ತಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಕಿಚ್ಚ ಇಂದು ಮಾಡುತ್ತಾರಾ ಅಥವಾ ನಾಳೆ ಮಾಡುತ್ತಾರಾ ಎನ್ನುವುದು ಇಂದು ರಾತ್ರಿಗೆ ಅಂದಾಜು ಸಿಗಲಿದೆ.

  • ಸ್ನೇಹಿತ್ ಜೊತೆ ಯಾವತ್ತೂ ಮಾತನಾಡಲ್ಲ: ನಮ್ರತಾ ಶಪಥ

    ಸ್ನೇಹಿತ್ ಜೊತೆ ಯಾವತ್ತೂ ಮಾತನಾಡಲ್ಲ: ನಮ್ರತಾ ಶಪಥ

    ದ್ಯ ಬಿಗ್ ಬಾಸ್ (Bigg Boss Kannada) ಮನೆಯಲ್ಲಿರುವ ನಮ್ರತಾ, ದೊಡ್ಮನೆಯಲ್ಲೇ ಶಪಥವೊಂದನ್ನು ಮಾಡಿದ್ದಾರೆ. ಜೀವನದಲ್ಲಿ ಇನ್ನಾವತ್ತೂ ತಾವು ಸ್ನೇಹಿತ್ (Snehith) ಜೊತೆ ಮಾತನಾಡಲ್ಲ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಹಕ್ಕಿಗಳು ಎಂದೇ ಖ್ಯಾತರಾಗಿತ್ತು ಸ್ನೇಹಿತ್ ಮತ್ತು ನಮ್ರತಾ (Namrata) ಜೋಡಿ. ಆದರೆ, ಈಗ ವೈರತ್ವ ಬೆಳೆದುಕೊಂಡಿದೆ.

    ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ಕಣ್ಣೀರು ಇಟ್ಟಿದ್ದರು ನಮ್ರತಾ. ಈ ಮನೆಯಲ್ಲಿ ಸ್ನೇಹಿತ್ ನನ್ನು ತುಂಬಾ ಮಿಸ್ ಮಾಡ್ಕೋತಿದ್ದೀನಿ ಅಂತ ಹಲವಾರು ಬಾರಿ ಹೇಳಿದ್ದೂ ಇದೆ. ಇದ್ದಕ್ಕಿದ್ದಂತೆ ಈ ವೈರತ್ವ ಬೆಳೆಯೋಕೆ ಕಾರಣ, ಮೊನ್ನೆ ಸ್ನೇಹಿತ್ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದರು. ಅಲ್ಲಿ ಅವರ ವಿನಯ್ ಅವರನ್ನು ಬೆಂಬಲಿಸಿದ್ದರು.

    ಈ ಬಾರಿ ಬಿಗ್ ಬಾಸ್ ಟೈಟಲ್ ಅನ್ನು ಯಾರು ಗೆಲ್ಲಬೇಕು ಎನ್ನುವ ವಿಚಾರವಾಗಿ ಸ್ನೇಹಿತ್ ಮಾತನಾಡಿದ್ದರು. ನಮ್ರತಾ ಬದಲು ವಿನಯ್ ಅವರು ಗೆಲ್ಲುಬೇಕು ಎಂದು ಹೇಳಿದ್ದರು. ಈ ವಿಚಾರ ನಮ್ರತಾ ಅವರ ಕೋಪಕ್ಕೆ ಕಾರಣವಾಗಿತ್ತು. ಅವತ್ತೆ ಅವರು ಸ್ನೇಹಿತ್ ಜೊತೆ ಜಗಳವನ್ನೂ ಮಾಡಿದ್ದರು.

     

    ನಾನು ನಿನಗೆ ಏನೂ ಅಲ್ಲವಾ? ಹಾಗಾದರೆ, ನಾನು ಬಿಗ್ ಬಾಸ್ ಗೆಲ್ಲೋದು ಬೇಡವಾ? ನಿನಗೆ ಇಷ್ಟ ಇಲ್ಲವಾ? ಎಂದು ಹಲವಾರು ಪ್ರಶ್ನೆಗಳನ್ನು ಸ್ನೇಹಿತ್ ಅವರಿಗೆ ಕೇಳಿದ್ದರು ನಮ್ರತಾ. ಇದೀಗ ಮಾತು ಬಿಡುವುದಾಗಿ ಹೇಳಿಕೊಂಡಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

    ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

    ಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಪಾಲಾಗಿದ್ದ ಡ್ರೋನ್ ಪ್ರತಾಪ್ ಮತ್ತೆ ಬಿಗ್ ಬಾಸ್ (Bigg Boss Kannada) ಮನೆಗೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಯಿಂದ ಹೋದ ನಂತರ ಅವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಪ್ರತಾಪ್  (Drone Pratap) ಅವರಿಗೆ ಏನಾಗಿದೆ? ಸರಿಯಾದ ಮಾಹಿತಿ ಕೊಡಿ, ಅವರನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸಿ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಲಾಗಿತ್ತು. ಕೊನೆಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವ ವಿಡಿಯೋವನ್ನು ವಾಹಿನಿ ರಿಲೀಸ್ ಮಾಡಿದೆ.

    ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸಂಚಲವನ್ನುಂಟು ಮಾಡಿತ್ತು. ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಸಹಜವಾಗಿಯೇ ಅವರ ಕುಟುಂಬ ಮತ್ತು ಆಪ್ತರು ಆತಂಕಕ್ಕೆ ಒಳಗಾಗಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಈ ನ್ಯೂಸ್ ಬರ್ತಿದ್ದಂತೆ ಆಸ್ಪತ್ರೆಯತ್ತ ಪೊಲೀಸರು ಕೂಡ ಧಾವಿಸಿದ್ದರು. ಪೊಲೀಸರು ಆಸ್ಪತ್ರೆಗೆ ಹೋಗುವಷ್ಟರಲ್ಲಿ, ಡ್ರೋನ್ ಪ್ರತಾಪ್ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲಾಗಿತ್ತು. ಹಾಗಾಗಿ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು.

    ಡ್ರೋನ್ ಪ್ರತಾಪ್ ಆಸ್ಪತ್ರೆಯಲ್ಲಿ ಇಲ್ಲ ಎಂದು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ, ಪೊಲೀಸ್ ಜೀಪ್ ಬಿಗ್ ಬಾಸ್ ಮನೆಗೆ ನುಗ್ಗಿತ್ತು. ಡ್ರೋನ್ ಪ್ರತಾಪ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಕೇಳಿತ್ತು. ವೈದ್ಯರಿಂದ ಮಾಹಿತಿಯನ್ನೂ ಪಡೆದಿತ್ತು. ಅವರಿಗೆ ಆಹಾರದಲ್ಲಿ ವ್ಯತ್ಯಾಸವಾದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಾಗಿದೆ ಎನ್ನುವ ಮಾಹಿತಿಯನ್ನೂ ಪಡೆದಿತ್ತು. ಆದರೆ, ಡ್ರೋನ್ ಅಭಿಮಾನಿಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರನ್ನು ನೋಡಬೇಕು ಎಂದು ಆಗ್ರಹಿಸಿದ್ದರು.

    ಆಸ್ಪತ್ರೆಯಿಂದ ಡ್ರೋನ್ ಡಿಸ್ಚಾರ್ಜ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲೇ ಅವರಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ವಿಶ್ರಾಂತಿ ಪಡೆದುಕೊಂಡು ಡ್ರೋನ್, ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆಯೇ ಡ್ರೋನ್ ನನ್ನು ತಬ್ಬಿಕೊಂಡು ನಮ್ರತಾ (Namrata) ಸ್ವಾಗತಿಸಿದ್ದಾರೆ. ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಎಂದು ಸಂಗೀತಾ ಭಾವುಕರಾಗಿದ್ದಾರೆ. ಡ್ರೋನ್ ಆರೋಗ್ಯವಾಗಿರಲಿ ಎಂದು ದೊಡ್ಮನೆಯಲ್ಲಿ ಪೂಜೆ ಕೂಡ ಮಾಡಲಾಗಿದೆ. ಇಂದು ಕಿಚ್ಚನ ಪಂಚಾಯತಿಯಲ್ಲಿ ಡ್ರೋನ್ ಗೆ ಸುದೀಪ್ ಏನ್ ಹೇಳ್ತಾರೆ ಎಂದು ಕಾದು ನೋಡಬೇಕಿದೆ.

  • ಸಂಗೀತಾ ಮಾತಿಗೆ ಗಳಗಳನೆ ಅತ್ತ ನಮ್ರತಾ

    ಸಂಗೀತಾ ಮಾತಿಗೆ ಗಳಗಳನೆ ಅತ್ತ ನಮ್ರತಾ

    ಬಿಗ್ ಮನೆ ಆಟ ಜೋರಾಗಿದೆ. 70 ದಿನದತ್ತ ದಾಪುಗಾಲು ಇಡ್ತಿರೋ ಬಿಗ್ ಬಾಸ್ (Bigg Boss Kannada) ಮನೆ ಆಟ ಸಾಕಷ್ಟು ರೋಚಕ ತಿರುವು ಪಡೆದುಕೊಂಡಿದೆ. ಈ ಹಿಂದಿನ ಸೀಸನ್‌ಗಳಿಗಿಂತ ಈಗೀನ ಬಿಗ್ ಬಾಸ್ 10 ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹಳೆಯ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿ ಮುನ್ನುಗ್ಗುತ್ತಿದೆ. ಅದರಲ್ಲೂ ಈ ಸೀಸನ್‌ನಲ್ಲಿ ಜಗಳದಿಂದಲೇ ಹೆಚ್ಚೆಚ್ಚು ಸುದ್ದಿಯಾಗುತ್ತಾ ಪ್ರೇಕ್ಷಕರನ್ನ ಸೆಳೆಯುತ್ತಿದೆ.

    ಈಗ ಇದೆಲ್ಲದರ ನಡುವೆ ಮತ್ತೆ ಬಿಗ್ ಮನೆಯಲ್ಲಿ ಹೊಸದೊಂದು ಗಲಾಟೆ ಶುರುವಾಗಿದೆ. ಅನ್ನಕ್ಕಾಗಿ ಸಂಗೀತಾ- ನಮ್ರತಾ ಕೋಳಿ ಜಗಳ ಮಾಡಿಕೊಂಡಿದ್ದಾರೆ. ಸಿಡಿದೆದ್ದ ಸಂಗೀತಾ ಮುಂದೆ ನಮ್ರತಾ ಗಳಗಳನೇ ಅತ್ತಿದ್ದಾರೆ. ಹೌದು ಈ ವಾರ ಟಾಸ್ಕ್ ನಲ್ಲಿ ಪೂರೈಸಿದ ಮೇಲೆ ಎಂದಿನಂತೆ ಲಕ್ಷುರಿ ಬಜೆಟ್ ಆರಂಭವಾಗಿದೆ. ಕಳೆದ ಬಾರಿ ಸಂಗೀತಾ (Sangeetha) ತಿನ್ನುವ ಪನ್ನೀರ್ ಮಹತ್ವ ಕೊಡಲಿಲ್ಲ. ಲಿಸ್ಟ್ ನಲ್ಲಿ ಇರಲಿಲ್ಲ ಎಂದು ಜಗಳವಾಗಿತ್ತು. ಈ ಬಾರಿ ಬ್ರೋನ್ ರೈಸ್ ಯಾಕೆ ಬಂತು ಎಂದೂ ಜಗಳವಾಗಿದೆ.

    ಮನೆಗೆ ಏನೆಲ್ಲಾ ಬೇಕು ಎಂದು ನಮ್ರತಾ ಪಟ್ಟಿ ಮಾಡಿ ಲಕ್ಷುರಿ ಬಜೆಟ್ ಫೈನಲ್ ಮಾಡಿದ್ದಾರೆ. ಪನ್ನೀರ್‌ಗೆ ಆಧ್ಯತೆ ನೀಡಿದ್ದಾರೆ. ಆದರೆ ಬ್ರೋನ್ ರೈಸ್ ಬೇಕು ಎಂದು ಹೇಳಿರೋದು ಸಂಗೀತಾ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟು ದಿನ ಲಿಸ್ಟ್ನಲ್ಲಿ ಇಲ್ಲದೇ ಇರೋದು ಈಗ ಯಾಕೆ ಬಂತು ಎಂದು ನಮ್ರತಾಗೆ ಸಂಗೀತಾ ಕುಟುಕಿದ್ದಾರೆ.

    ಅದಕ್ಕೆ ನಮ್ರತಾ (Namrata) ಕೂಡ, ನಿಮಗೆ ಹೇಗೆ ಪನ್ನೀರ್‌ಗೆ ಹೇಗೆ ಆದ್ಯತೆ ಕೊಟ್ಟೆವೋ ಹಾಗೆಯೇ ಬ್ರೋನ್ ರೈಸ್ ಬೇಕು ಎನ್ನುವುದು ಹಲವರ ಬೇಡಿಕೆಯಾಗಿತ್ತು ಹಾಗಾಗಿ ಬರೆದೆ ಎಂದು ಖಡಕ್ ಆಗಿ ಹೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ನಮ್ರತಾ ಕಣ್ಣೀರು ಹಾಕಿದ್ದಾರೆ. ದೀದಿ ಪರದಾಟ ನೋಡಲಾಗದೇ ಡ್ರೋನ್ ಪ್ರತಾಪ್ ಹೋಗಿ ಸಮಾಧಾನ ಮಾಡಿ ಸಂತೈಸಿದ್ದಾರೆ. ಒಟ್ನಲ್ಲಿ ಸಂಗೀತಾ- ನಮ್ರತಾ ವಾಕ್ಸಮರ ಮನೆಮಂದಿಯ ನಿದ್ದೆ ಕೆಡಿಸಿರೋದಂತೂ ನಿಜ.

  • ಬಿಗ್ ಬಾಸ್ ಮನೆಯಲ್ಲಿ ಹೆಣ್ಣಿನ ವೇಷತೊಟ್ಟ ತುಕಾಲಿ

    ಬಿಗ್ ಬಾಸ್ ಮನೆಯಲ್ಲಿ ಹೆಣ್ಣಿನ ವೇಷತೊಟ್ಟ ತುಕಾಲಿ

    ಳೆದ ಕೆಲವು ದಿನಗಳಿಂದ ತುಕಾಲಿ ಸಂತೋಷ್‌ (Tukali Santu) ಗಂಭೀರವಾಗಿಬಿಟ್ಟಿದ್ದರು. ಮೊದಲ ವಾರದಲ್ಲಿ ಅವರು ಮಾಡಿದ ಕಾಮಿಡಿಯ ಕ್ವಾಲಿಟಿ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಕಾಮಿಡಿ ಬೇರೆಯವರ ಮನಸ್ಸನ್ನು ನೋಯಿಸುತ್ತದೆ’ ಎಂಬ ಮಾತು ಪದೇ ಪದೇ ಮನೆಮಂದಿಯ ಬಾಯಲ್ಲಿ ಬರುತ್ತಿತ್ತು. ಇದರಿಂದ ಹಾಸ್ಯ ಮಾಡಲೇ ಹಿಂಜರಿಯುತ್ತಿದ್ದ ತುಕಾಲಿ ಅವರು ಗಂಭೀರವಾಗಿಬಿಟ್ಟಿದ್ದರು. ಮನೆಯೊಳಗಿನ ಸನ್ನಿವೇಶಗಳು, ಟಾಸ್ಕ್‌ಗಳು ಮತ್ತು ಜಗಳಗಳೂ ಅವರು ಗಂಭೀರವಾಗಲು ಕಾರಣವಿರಬಹುದು.

    ಆದರೆ ಈವತ್ತು ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿ ಮತ್ತೆ ನಗೆಯ ಹೊನಲು ಹರಡಿದೆ. ಆ ನಗೆಯ ಅಲೆಯಲ್ಲಿ ಮನೆಯ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಕ್ಕು ನಲಿದಿದ್ದಾರೆ. ಆ ನಗುವಿಗೆ ಕಾರಣವಾದವರು ತುಕಾಲಿ ಸಂತೋಷ್. ಈವತ್ತಿನ ಎಪಿಸೋಡ್ ಸಖತ್ ಎಂಟರ್‍ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ.

    ‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು. ಯಾಕೆಂದರೆ ತುಕಾಲಿ ಅವರ ವೇಷ ಬದಲಾಗಿತ್ತು. ಅವರು ‘ಚೂಡಿದಾರ ತೊಟ್ಟ ಮರಿಜಿಂಕೆ’ಯಾಗಿ ಬದಲಾಗಿದ್ದರು.

    ಬಂದವರು ವರ್ತೂರ್ ಸಂತೋಷ್ ಅವರ ಹೆಗಲಿಗೆ ಕೈ ಹಾಕಿ ನುಲಿಯುತ್ತ, ‘ವರ್ತೂ… ಯಾಕೆ ನನ್ನನ್ನ ಬಿಟ್ಬಟ್ಟು ಒಬ್ನೇ ಟೊಮೆಟೊ ಮಾರೋಕೆ ಹೋಗಿದ್ದೆ’ ಎಂದು ಕೇಳಿದಾಗಲಂತೂ ಮನೆಯವರೆಲ್ಲರೂ ಬಿದ್ದು ಬಿದ್ದು ನಗುವಂತಾಯ್ತು.

     

    ‘ಇನ್ನೊಂದ್ ವಿಷ್ಯ ಗೊತ್ತಾ? ಯಾವಾಗ ನನ್ನ ತಂಗಿ ಸಿಕ್ರೂ ನಾನು ಜೋರಾಗಿ ತಬ್ಕೋತೀನಿ’ ಎಂದು ನಮ್ರತಾ (Namrata) ಕಡೆಗೆ ಹೋದರೆ, ನಮ್ರತಾಕಿರುಚುತ್ತ ಓಡಿಹೋಗಿಬಿಟ್ಟರು. ಅಷ್ಟೇ ಅಲ್ಲ, ಈ ‘ಹೊಸ ಹುಡುಗಿ’ಯಿಂದ ‘ಪಪ್ಪಿ’ ತೆಗೆದುಕೊಳ್ಳಲು ಪೈಪೋಟಿಯೇ ನಡೆದಿದೆ.

  • Big Boss Kannada: ನಮ್ರತಾ ಕಾರಣದಿಂದ ಸಂಗೀತಾ-ಕಾರ್ತಿಕ್ ಲವ್ ಬ್ರೇಕಪ್

    Big Boss Kannada: ನಮ್ರತಾ ಕಾರಣದಿಂದ ಸಂಗೀತಾ-ಕಾರ್ತಿಕ್ ಲವ್ ಬ್ರೇಕಪ್

    ನಿನ್ನೆಯ ಹಬ್ಬದ ಸಂಭ್ರಮ, ಇಂದಿನ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿಗೆ ಕರಗಿದೆ. ಅಗ್ಗಷ್ಟಿಕೆಯೆದುರು ನೋವು ಹಂಚಿಕೊಳ್ಳುತ್ತ ಒಂದಾಗಿದ್ದ ಸ್ಪರ್ಧಿಗಳ ನಡುವೆ ಮತ್ತೀಗ ಕಿಡಿ ಹೊತ್ತಿಕೊಂಡಿದೆ. ಮನೆಯ ಕ್ಯಾಪ್ಟನ್‌ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್‌ (Bigg Boss Kannada) ಆದೇಶ ನೀಡಿದ್ದಾರೆ. ಸಂಗೀತಾ, ‘ತಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಘೋಷಿಸಿದ್ದಾರೆ. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ಅವರೇ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ. ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಅಭ್ಯಾಸ ಇರುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ.

    ಕಾರ್ತಿಕ್ (Karthik) ಮತ್ತು ಸಂಗೀತಾ (Sangeeta) ಮಧ್ಯ ಕಿಡಿ ಹೊತ್ತಿಕೊಂಡ ದೃಶ್ಯವು JioCinema ಬಿಡುಗಡೆ ಮಾಡಿರುವ ಫ್ರೋಮೊದಲ್ಲಿ ಸೆರೆಯಾಗಿದೆ. ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ‘ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ‘ಯಾಕೆ ನಮ್ರತಾ?’ ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ‘ಕೋಪ ಯಾಕೆ ಮಾಡ್ಕೋತಿಯಾ?’ ಎಂದು ಅನುನಯಿಸಲು ಹೋಗಿದ್ದಾರೆ

    ‘ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ ಇಲ್ಲಿ. ಜೊತೆಗಿದ್ದೋರೇ ಚುಚ್ಚುವುದು’ ಎಂದೆಲ್ಲ ಜರಿದಿದ್ದಾರೆ. ಕೊನೆಗೆ ‘ಯು ಆರ್ ಫೇಕ್‌’ ಎಂಬ ಮಾತು ಸಂಗೀತಾ ಬಾಯಲ್ಲಿ ಹೊರಬೀಳುತ್ತಿದ್ದಂತೆಯೇ ಕಾರ್ತಿಕ್ ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ.

    ಬಿಗ್‌ಬಾಸ್‌ ಮನೆಯ ಬೆಸ್ಟ್‌ ಜೋಡಿ ಅಂತಲೇ ಗುರ್ತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್‌ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಅವರ ಸಂಬಂಧದ ಮೇಲೆ ಈಗ ಯಾರದೋ ಕಣ್ಣು ಬಿದ್ದಂತಿದೆ.

    ಯಾವಾಗಲೂ ಹ್ಯಾಪಿಯಾಗಿರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಒಡಕು ಮೂಡಿದೆಯೇ? ಪರಸ್ಪರ ಹಳೆಯದನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡೇ ಹೋಗುತ್ತದಾ? ಗೊತ್ತಿಲ್ಲ. ಆದರೆ, ಸಂಗೀತಾರನ್ನು ಕೆರಳಿಸುವುದಕ್ಕಾಗಿ ಮತ್ತೆ ಮತ್ತೆ ಕಾರ್ತಿಕ್ ಅವರು ನಮ್ರತಾ ಜೊತೆ ಹೋಗುತ್ತಿದ್ದಾರೆ. ಅವರೊಂದಿಗೆ ಡಾನ್ಸ್ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ ಹರಿದ ಕಣ್ಣೀರು

    ಬಿಗ್ ಬಾಸ್ ಮನೆಯಲ್ಲಿ ಹರಿದ ಕಣ್ಣೀರು

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ತಣ್ಣನೆಯ ರಾತ್ರಿ. ಆದರೆ ಎಲ್ಲರ ಕಣ್ಣಲ್ಲೂ ಕೋಡಿಯಾಗಿ ಹರಿಯುತ್ತಿದೆ ಬಿಸಿಯಾದ ಕಂಬನಿ. ಎದುರಲ್ಲಿ ಅಗ್ಗಷ್ಟಿಗೆ ಧಗಧಗ ಉರಿಯುತ್ತಿದ್ದರೆ, ಸ್ಪರ್ಧಿಗಳೆಲ್ಲ ಕುಟುಂಬದವರ ನೆನಪಲ್ಲಿ ಕರಗಿ ಕಣ್ಣೀರಾಗಿ ಹರಿಯುತ್ತಿದ್ದಾರೆ. ಅಪ್ಪ-ಅಮ್ಮನಿಗೆ ಕೊಟ್ಟ ಮಾತು, ಸಂಗಾತಿಯ ನೆನಪು,  ಈಡೇರದೇ ಉಳಿದುಬಿಟ್ಟ ಭಾಷೆ, ಕೊನೆಗೂ ಒಪ್ಪಿಕೊಳ್ಳದೇ ತಮ್ಮೊಳಗೆ ಒಂದಾಗಿಸಿಕೊಂಡು ಅಪ್ಪಿಕೊಳ್ಳದೇ ಹೋದ ಕುಟುಂಬ, ಹೆತ್ತವರ ಬೆಂಬಲಕ್ಕೆ ಪ್ರತಿಫಲ ನೀಡಲಾಗದ ಅಸಹಾಯಕತೆ, ಒಬ್ಬೊಬ್ಬರ ಹೃದಯದಲ್ಲಿಯೂ ಹೇಳಿಕೊಳ್ಳದೇ ಉಳಿದಿವೆಯಲ್ಲ ಎಷ್ಟೊಂದು ಕತೆ.

    ಮನುಷ್ಯ ಮನುಷ್ಯರ ನಡುವಿನ ಗೋಡೆ ಒಡೆಯಲು ನೋವಿಗಿಂತ ಬೇರೆ ಆಯುಧ ಬೇಕೆ? ಅಗ್ಗಷ್ಟಿಕೆಯ ಬೆಳಕಲ್ಲಿ, ನೆನಪುಗಳ ಕಾವಿನಲ್ಲಿ ನೋವಿನ ನೆಪದಲ್ಲಿ ಮನೆಯ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಒಬ್ಬರ ಕಣ್ಣೀರನ್ನು ಇನ್ನೊಬ್ಬರು ವರೆಸಿದ್ದಾರೆ. ಒಬ್ಬರ ದುಃಖಕ್ಕೆ ಇನ್ನೊಬ್ಬರು ಹೆಗಲಾಗಿದ್ದಾರೆ. ಒಬ್ಬರಿಗೊಬ್ಬರು ಒದಗಿಬರುತ್ತ ಎಲ್ಲರೂ ಒಂದೇ ಆಗಿದ್ದಾರೆ.

    ಈ ಎಲ್ಲ ಭಾವುಕ ಕ್ಷಣಗಳನ್ನು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿವೆ. ಆದರೆ ಎಷ್ಟು ಕಾಲ? ಎಲ್ಲಿಯವರೆಗೆ? ಬಿಗ್ ಬಾಸ್ ಮನೆಯೊಳಗಿನ ಪ್ರತಿ ಗಳಿಗೆಯೂ ವ್ಯಕ್ತಿತ್ವ ಪರೀಕ್ಷೆಯ ಅಗ್ನಿದಿವ್ಯವೇ.. ಈ ಆಟದಲ್ಲಿ ಒಂದಾಗಿರುವವರು ಮತ್ತೆ ಬೇರಾಗುತ್ತಾರಾ? ಪರಸ್ಪರ ಹೆಗಲುಕೊಟ್ಟವರು ತೊಡೆ ತಟ್ಟಿ ನಿಲ್ಲುತ್ತಾರಾ? ಕಾದು ನೋಡಬೇಕು.

    ಅದರಲ್ಲೂ ತಾರಾ (Tara) ಅವರು ಮನೆಗೆ ಬಂದಾದ ಮೇಲೆ ಭಾವುಕ ಕ್ಷಣಗಳನ್ನೂ ಇನ್ನೂ ಹೆಚ್ಚಾಗಿ ಡ್ರೋನ್ ಪ್ರತಾಪ್ (Drone Pratap) ಸೇರಿದಂತೆ ಹಲವರು ತಮ್ಮ ನೋವುಗಳನ್ನು ತೋಡಿಕೊಂಡು ಭಾವುಕರಾಗಿದ್ದಾರೆ. ಮನೆಯ ಸಂಕಟಗಳನ್ನು ತಾರಾ ಜೊತೆಗೇ ಹಲವರು ಹಂಚಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ನಮ್ರತಾ ಮುಂದೆ ನಿಂತು ‘ಕ್ಷಮಿಸಿ’ ಎಂದ ಕಾರ್ತಿಕ್

    Bigg Boss Kannada: ನಮ್ರತಾ ಮುಂದೆ ನಿಂತು ‘ಕ್ಷಮಿಸಿ’ ಎಂದ ಕಾರ್ತಿಕ್

    ಟಾಸ್ಕ್‌ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಆರ್ಭಟಿಸಿದ್ದನ್ನು ನೋಡಿ ನಮ್ರತಾ (Namrata) ನಡುಗಿಹೋಗಿದ್ದರಂತೆ. ಕಾರ್ತಿಕ್‌ಗೆ (Karthik) ತಾನು ಪ್ರತಾಪ್‌ (Pratap)ಪರವಾಗಿ ನಿಂತು ತಪ್ಪುಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಅವರ ಕ್ಷಮೆಯನ್ನೂ ಕೇಳಿದ್ದಾರೆ.

    ಮನೆಯೊಳಗೆ ವಿನಯ್‌-ಸಂಗೀತಾ ಜಗಳ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯ ಸದಸ್ಯರೆಲ್ಲರೂ ಯಾರ ಪರವಾಗಿ ಮಾತಾಡುವುದು, ಯಾರ ತಪ್ಪನ್ನು ಹೇಳುವುದು ಎಂದು ತಿಳಿಯದೇ ಗೊಂದಲಗೊಂಡಂತಿದ್ದಾರೆ. ಈ ನಡುವೆ ಕಾರ್ತಿಕ್-ನಮ್ರತಾ-ಸಂಗೀತಾ ನಡುವೆ ನಡೆದ ಮಾತುಕತೆ ಈ ಕಥೆಯ ಮತ್ತೊಂದು ಮಗ್ಗುಲನ್ನು ಕಾಣಿಸುವಂತಿದೆ. ಈ ವಿಡಿಯೊ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ ‘Deep ಆಗಿ ನೋಡಿ’ ಸೆಗ್ಮೆಂಟ್‌ನಲ್ಲಿ ದಾಖಲಾಗಿದೆ.

    ಕಾರ್ತಿಕ್: ಸಾರಿ, ಇಫ್‌ ಐ ವಾಸ್ ಟೂ ರೂಢ್‌.. ನಮ್ರತಾ: ನಂಗ್ ನಿಜವಾಗ್ಲೂ ಭಯ ಆಯ್ತು… ನೀವು ಆ ಥರ ಮಾತಾಡ್ತಿರಾ? ನೀವು ಹಾಗೆ ಇದೀರಾ? ಕಾರ್ತಿಕ್: ಇಲ್ಲ, ಹಾಗೇನಿಲ್ಲ… ನಂಗ್ ಕೋಪ ಬಂತು ಆಕ್ಚುಲಿ… ರೂಢ್ ಆಗಿರಬೇಕು ಅನ್ನೋದಲ್ಲ… ವಿನಯ್ ಬೇರೆ ಎಲ್ಲರಿಗೂ ಹೇಳ್ತಾ ಇದ್ದ… ಯಾರೂ ಮಾತಾಡ್ತಿರ್ಲಿಲ್ಲ… ಆಗ ಇವ್ನು ಮಧ್ಯ ಬಂದ. ಜೋರಾಗೇ ಮಾತಾಡ್ತಿದ್ದ… ಐ ವಾಸ್ ಟೇಕಿಂಗ್ ಸ್ಟ್ಯಾಂಡ್ ಫಾರ್ ಪ್ರತಾಪ್ ಅಷ್ಟೆ. ಬಟ್ ಕೊನೆಗೂ ನಾನು ಸಪೋರ್ಟ್‌ ಮಾಡಿದ್ದು ತಪ್ಪು ಅಂತ ಪ್ರತಾಪ್‌ ಪ್ರೂವ್ ಮಾಡಿಬಿಟ್ಟ…

    ನಮ್ರತಾ: ನೋ… ಇಟ್ಸ್ ಓಕೆ… ಬಟ್ ನಂಗೆ ನಿಜವಾಗ್ಲೂ ಭಯ ಆಯ್ತು… ಅಕ್ಷರಶಃ ನಡುಗಲು ಶುರುಮಾಡಿದ್ದೆ. ನಂಗೆ ಅಭ್ಯಾಸ ಇಲ್ಲ ಅದು… ಕಾರ್ತಿಕ್: ಸಾರಿ… ಟೀಮ್ ಕೋ ಆರ್ಡಿನೇಷನ್ ಬೇಕು. ಅದು ಇಂಪಾರ್ಟೆಂಟ್… ಎಲ್ರೂ ಬ್ರೇಕ್‌ಡೌನ್ ಆಗ್ತಿದಾರೆ…ನಮ್ರತಾ: ಅದನ್ನೇ ನಾನು ಹೇಳೋಕೆ ಬಂದೆ. ಇನ್ ಸೆಕ್ಯೂರಿಟಿ… ಅಷ್ಟರಲ್ಲಿ ಅಲ್ಲಿಗೆ ಸಂಗೀತಾ ಬರುತ್ತಾರೆ. ಸಂಗೀತಾ: ಆಂ…ನಮ್ರತಾ: ಆರ್‍‌ ಯು ಓಕೆ? ಸಂಗೀತಾ: ನಿಮ್ ಜೊತೆಗೆ ಜಗಳ ಮಾಡ್ಬೇಕು ಅಂತಿರ್ಲಿಲ್ಲ ನಂಗೆ…ನಮ್ರತಾ: ಅಲ್ಲಾ… ನಾನು ಪ್ರತಾಪ್‌ಗೆ ಟಾಸ್ಕ್‌ ಏನು ಅಂತ ಎಕ್ಸ್‌ಪ್ಲೇನ್ ಮಾಡ್ತಿದ್ದೆ. ಅಷ್ಟರಲ್ಲಿ ನೀವು ಬಂದ್ರಲ್ಲಾ… ‘ಥ್ರೆಟನಿಂಗ್’ ಅಂದ್ರಿ… ಅದು ತಪ್ಪು ಶಬ್ದ.. ಅದನ್ನು ಬಳಸಬೇಡಿ ಅಷ್ಟೇ ನಾನು ಹೇಳಿದ್ದು… ಕಾರ್ತಿಕ್: ಆ ಶಬ್ದ ಬಳಸಬಾರದಿತ್ತು. ಇಟ್ಸ್ ಓಕೆ…

    ನಮ್ರತಾ: ನಂಗೆ ನಿಮ್ಮ ವಿರುದ್ಧವಾಗಲಿ, ಪ್ರತಾಪ್‌ ವಿರುದ್ಧವಾಗಲಿ ಏನೂ ಇಲ್ಲ… ಸಂಗೀತಾ: ಹೌದು… ನಾನು ಆ ಶಬ್ದವನ್ನು ಭಳಸಬಾರದಿತ್ತು. ಕಾರ್ತಿಕ್: ಅವಳು ಒಂದು ಹೀಟ್‌ ಮೊಮೆಂಟ್‌ನಲ್ಲಿ ಹೇಳಿದ್ದಾರೆ. ನಾನೂ ಒಂದು ಹೀಟ್ ಮೊಮೆಂಟ್‌ನಲ್ಲಿ ಮಾತಾಡ್ಬಿಟ್ಟೆ. ಸಂಗೀತಾ: ವಿಷಯ ಏನೇ ಇರಲಿ. ನನಗೆ ಯಾರ ಜೊತೆಗೂ ಫೈಟ್ ಮಾಡಲು ಇಷ್ಟವಿಲ್ಲ. ಮತ್ತೆ ಹೀಗಾಗದಂತೆ ನೋಡಿಕೊಳ್ಳೋಣ ಅಷ್ಟೆ. ಕಾರ್ತಿಕ್: ಎಲ್ಲೆಲ್ಲಿಂದ ಎಲ್ಲೆಲ್ಲೋ ಹೋಯ್ತು… ಏನೇನೋ ಆಯ್ತು…ಸಂಗೀತಾ ಅಲ್ಲಿಂದ ಹೊರಡುತ್ತಾರೆ. ಕಾರ್ತಿಕ್ ಅವಳ ಕೈ ಹಿಡಿದು ನಿಲ್ಲಿಸಿಕೊಳ್ಳುತ್ತಾರೆ. ಕಾರ್ತಿಕ್: ಎಲ್ಲಿ? ಯಾಕೆ? ಸಂಗೀತಾ: ವಿನಯ್ ಜೊತೆ ಮಾತಾಡ್ಕೊಂಡ್ ಬರ್ತೀನಿ…ಕಾರ್ತಿಕ್: ಏ… ಯಾಕೆ? ಸಂಗೀತಾ: ನಾನ್ ಮಾತಾಡ್ಕೊಂಡ್ ಬರ್ತೀನಿ.

    ನಮ್ರತಾ: ಅವ್ರು ಮಾತಾಡ್ತಾರಂತೆ. ಮಾತಾಡ್ಲಿ ಬಿಡಿ…ಸಂಗೀತಾ ಅಲ್ಲಿಂದ ಹೊರಡುತ್ತಾರೆ. ಕಾರ್ತಿಕ್: ಅವಳಿಗೆ ಹುಶಾರಿಲ್ಲ… ಎಲ್ಲ ಕ್ಯಾಮೆರಾ ಎದುರಿಗೆ ಹೋಗಿ ನಾನ್ ಹೋಗ್ತೀನಿ ಹೋಗ್ತೀನಿ ಅಂತಿದಾಳೆ. ನಮ್ರತಾ: ಹೌದಾ… ಕಳಿಸಿಬಿಡ್ತಾರಾ ಬಿಗ್‌ಬಾಸ್‌? ಅಷ್ಟರಲ್ಲಿ ವಿನಯ್ ಅಲ್ಲಿಗೆ ಬರುತ್ತಾರೆ. ಸಂಗೀತಾರನ್ನೂ ಹಾದು, ಕಾರ್ತಿಕ್ ಮತ್ತು ನಮ್ರತಾ ನಡುವಿನಿಂದಲೇ ಹಾದು ಹೋಗುತ್ತಾರೆ.

    ಸಂಗೀತಾ ‘ವಿನಯ್’ ಎಂದು ಕರೆದರೂ ಕೇಳದೆ ಮುಂದೆ ನಡೆಯುತ್ತಾರೆ. ನಮ್ರತಾ, ವಿನಯ್‌ ಅವರ ಕೈ ಹಿಡಿದು ನಿಲ್ಲುತ್ತಾರೆ… ಅವರಿಂದಲೂ ಬಿಡಿಸಿಕೊಂಡು ಮುಂದೆ ನಡೆದುಬಿಡುತ್ತಾರೆ. ನಮ್ರತಾ, ‘ಅಲ್ಲಾ.. ವಿನಯ್.. ಏನೋ ಮಾತಾಡ್ಬೇಕು…. ಕೇಳಿ ಅಂತಷ್ಟೆ’ ಎಂದು ಹೇಳುತ್ತಿದ್ದರೂ ಕೇಳದ ಹಾಗೆ ಹೊರಟುಬಿಡುತ್ತಾರೆ.

     

    ಕಾರ್ತಿಕ್, ಸಂಗೀತಾ ಮತ್ತು ನಮ್ರತಾ ಜಗಳವನ್ನುಬಗೆಹರಿಸಿಕೊಳ್ಳುವ ಮೂಡ್‌ನಲ್ಲಿದ್ದರೆ ವಿನಯ್ ಮಾತ್ರ ಇನ್ನೂ ಫೈಟಿಂಗ್ ಮೂಡ್‌ನಲ್ಲಿಯೇ ಇದ್ದಂತಿದೆ. ಅವರ ಕೋಪ ಯಾವಾಗ ಹೇಗೆ ಯಾರ ಮೇಲೆ ಸ್ಫೋಟಗೊಳ್ಳುತ್ತದೆಯೋ ಹೇಳುವುದು ಕಷ್ಟವೇ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]