Tag: namo app

  • ಕಾಂಗ್ರೆಸ್ಸಿನಿಂದ #DeleteNaMoApp ಅಭಿಯಾನ- ದಿಢೀರ್ ಏರಿಕೆ ಆಯ್ತು ಮೋದಿ ಆ್ಯಪ್ ಡೌನ್‍ಲೋಡ್ ಸಂಖ್ಯೆ!

    ಕಾಂಗ್ರೆಸ್ಸಿನಿಂದ #DeleteNaMoApp ಅಭಿಯಾನ- ದಿಢೀರ್ ಏರಿಕೆ ಆಯ್ತು ಮೋದಿ ಆ್ಯಪ್ ಡೌನ್‍ಲೋಡ್ ಸಂಖ್ಯೆ!

    ನವದೆಹಲಿ: ನರೇಂದ್ರ ಮೋದಿ ಅವರ `ನಮೋ’ ಆ್ಯಪ್ ವಿರುದ್ಧ ಕಾಂಗ್ರೆಸ್ ಮಾಹಿತಿ ಸೋರಿಕೆ ಆರೋಪದ ಮಾಡಿದ ಬಳಿಕ ಆ್ಯಪ್ ಡೌನ್‍ಲೋಡ್ ಮಾಡುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

    ರಾಹುಲ್ ಗಾಂಧಿ ಭಾನುವಾರ ನಮೋ ಆ್ಯಪ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, ಈ ಮಾಹಿತಿಯನ್ನು ಅಮೆರಿಕ ಕಂಪೆನಿಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ, ಆ್ಯಪ್ ಡೌನ್‍ಲೋಡ್ ಮಾಡುವವರ ಸಂಖ್ಯೆ ಏರಿಕೆಯಾಗಿರುವ ಗ್ರಾಫ್ ಬಿಡುಗಡೆ ಮಾಡಿದೆ.

    ಮಾಹಿತಿ ಸೋರಿಕೆ ಕುರಿತು ಕೇಂಬ್ರಿಡ್ಜ್ ಅನಾಲಿಟಿಕಾ ವಿಶ್ಲೇಷಣಾ ವರದಿಯನ್ನು ಆಧಾರಿಸಿ ರಾಹುಲ್ ಈ ಟ್ವೀಟ್ ಮಾಡಿದ್ರು. ಅಲ್ಲದೇ ನಮೋ ಆ್ಯಪ್ ಬಳಕೆ ಮಾಡುತ್ತಿರುವವರ ಧ್ವನಿ, ವಿಡಿಯೋ, ಫೋಟೋ ಹಾಗೂ ಅವರ ಲೋಕೆಷನ್ ಸಮೇತ ಮಾಹಿತಿ ಪಡೆಯಲಾಗುತ್ತಿದೆ ಎಂದು ಆರೋಪಿದ್ದರು. ಅಲ್ಲದೇ ಇಂದು ತಮ್ಮ ಆರೋಪಗಳನ್ನು ಮುಂದುವರೆಸಿರುವ ರಾಹುಲ್ ಮೋದಿ `ಬಿಗ್‍ಬಾಸ್’ ರೀತಿ ವರ್ತನೆ ಮಾಡುತ್ತಿದ್ದಾರೆ. ಈಗ 13 ಲಕ್ಷ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಈ ಆ್ಯಪ್ ಬಳಕೆ ಮಾಡುವಂತೆ ಒತ್ತಡ ಹಾಕಿರುವುದಾಗಿ ತಿಳಿಸಿದ್ದರು.

    ರಾಹುಲ್ ಅವರ ಆರೋಪಿಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಪಕ್ಷ ನಾಯಕ ಅಮಿತ್ ಮಾಳವಿಯಾ ಕಾಂಗ್ರೆಸ್ ಪಕ್ಷ ಅಧಿಕೃತ ಆಪ್ ಯಾವ ಯಾವ ದೇಶಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ಹೆಸರು ರಾಹುಲ್ ಗಾಂಧಿ, ಭಾರತದ ಅತ್ಯಂತ ಹಳೆಯ ಪಕ್ಷ ಅಧ್ಯಕ್ಷ. ನೀವು ನಮ್ಮ ಅಧಿಕೃತ ಆ್ಯಪಿಗೆ ಪ್ರವೇಶ ಪಡೆದರೆ, ನಿಮ್ಮ ಎಲ್ಲಾ ಮಾಹಿತಿಯನ್ನು ಸಿಂಗಾಪುರದ ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದಾಗಿ ಬರೆದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಆರೋಪಕ್ಕೆ ಟಾಂಗ್ ನೀಡಿದ್ದಾರೆ.

    ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಕೂಡ ನಮೋ ಆ್ಯಪ್ ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ ಎಂದು ಡೀಲಿಟ್ ನಮೋ ಆ್ಯಪ್ ಎಂಬ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು. ಅಲ್ಲದೇ ಬಿಜೆಪಿ ನಾಯಕರ ಆರೋಪಗಳನ್ನು ನಿರಾಕರಿಸಿರುವ ಅವರು, ನಾವು ಐಎನ್‍ಸಿ ಆ್ಯಪ್ ಮೂಲಕ ಯಾವುದೇ ಮಾಹಿತಿ ಪಡೆಯುತ್ತಿಲ್ಲ. ವೆಬ್‍ಸೈಟ್ ಮೂಲಕ ಕಾರ್ಯಕರ್ತರ ಮೆಂಬರ್ ಶಿಪ್ ಪಡೆಯುತ್ತಿದ್ದೇವೆ ಎಂಬ ಸ್ಪಷ್ಟನೆ ನೀಡಿದ್ದಾರೆ.

  • #IAmNewIndia ಹೊಸ ಭಾರತ ಕಟ್ಟಲು ಪ್ರತಿಜ್ಞೆ ಮಾಡಿ: ನಮೋ ಆಪ್ ಮೂಲಕ ಮೋದಿ ಮನವಿ

    #IAmNewIndia ಹೊಸ ಭಾರತ ಕಟ್ಟಲು ಪ್ರತಿಜ್ಞೆ ಮಾಡಿ: ನಮೋ ಆಪ್ ಮೂಲಕ ಮೋದಿ ಮನವಿ

    ನವದೆಹಲಿ: ಕಳೆದ ದೀಪಾವಳಿಗೆ ಸೈನಿಕರಿಗೆ ಸಂದೇಶ ಕಳುಹಿಸಿ ಎಂದು ದೇಶದ ಜನರಲ್ಲಿ ಕೇಳಿದ್ದ ಪ್ರಧಾನಿ ಮೋದಿ ಈ ಹೋಳಿಯ ಸಂಭ್ರಮದಲ್ಲಿ ಹೊಸ ಭಾರತದ ನಿರ್ಮಾಣಕ್ಕಾಗಿ ಪ್ರತಿಜ್ಞೆಯನ್ನು ಕೈಗೊಂಡು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

    ಈ ಸಂಬಂಧ ನಮೋ ಆಪ್ ಮೂಲಕ ದೇಶವ್ಯಾಪಿ ಪ್ರತಿಜ್ಞಾ ಆಂದೋಲನಕ್ಕೆ ಮೋದಿ ಚಾಲನೆ ನೀಡಿದ್ದಾರೆ. 2022ರ ಸ್ವಾತಂತ್ರ್ಯ ಸಂಭ್ರಮಕ್ಕೆ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಾಟೇಲ್, ಅಂಬೇಡ್ಕರ್ ಕನಸನ್ನು ನನಸು ಮಾಡಿ ಹೊಸ ಭಾರತ ನಿರ್ಮಿಸಲು ಸಹಕಾರ ನೀಡಿ ಎಂದು ಮೋದಿ ವಿನಂತಿ ಮಾಡಿಕೊಂಡಿದ್ದಾರೆ.

    ಜನ ಏನು ಮಾಡಬೇಕು?
    ಆಪ್‍ನಲ್ಲಿ ದೇಶದ ಕೆಲವೊಂದು ಸಮಸ್ಯೆ/ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಟಗೆರಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ ಒಂದು ಆಯ್ಕೆಯನ್ನು ಜನ ಆರಿಸಿಕೊಳ್ಳಬೇಕಾಗುತ್ತದೆ.

    ಯಾವೆಲ್ಲ ವಿಭಾಗಗಳಿವೆ?
    – ಭಾರತದ ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸುತ್ತೇನೆ
    – ಕ್ಯಾಶ್‍ಲೆಸ್ ವ್ಯವಹಾರ ಹೆಚ್ಚಿಸಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ
    – ಸ್ವಚ್ಛ ಭಾರತಕ್ಕಾಗಿ ನಾನು ಕೆಲಸ ಮಾಡುತ್ತೇನೆ
    – ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸುತ್ತೇನೆ
    – ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ನಾನು ಬೆಂಬಲ ನೀಡುತ್ತೇನೆ
    – ಪ್ರಕೃತಿ ಮತ್ತು ಪಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ನಾನು ಕಟಿಬದ್ಧನಾಗಿದ್ದೇನೆ
    – ಭಾರತದ ಶಕ್ತಿ, ಏಕತೆ ಮತ್ತು ಸದ್ಭಾವನೆಗಾಗಿ ನಾನು ನಿಲ್ಲುತ್ತೇನೆ
    – ನಾನು ಉದ್ಯೋಗವನ್ನು ಬೇಡದೇ ಉದ್ಯೋಗ ನೀಡುವ ವ್ಯಕ್ತಿಯಾಗುತ್ತೇನೆ

    ಈ ಮೇಲೆ ತಿಳಿಸಿದ ಆಯ್ಕೆಯಲ್ಲಿ ಒಂದನ್ನು ಆರಿಸಿಕೊಂಡು ಪ್ರತಿಜ್ಞೆ ಮಾಡಬೇಕು. ಈ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ನೀವು ನಿಮ್ಮ ಪ್ರತಿಜ್ಞೆಯನ್ನು ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಶೇರ್ ಮಾಡಲು ಸಾಧ್ಯವಿದೆ. ನರೇಂದ್ರ ಮೋದಿ ಆಪ್‍ನ್ನು ನೀವು ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಆಪಲ್ ಐಟ್ಯೂನ್ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಬಹುದು.