Tag: NammaElection

  • ಮೋದಿಗೆ ದೇಶವನ್ನು ಮುನ್ನಡೆಸುವ ಅನುಭವದ ಕೊರತೆಯಿದೆ- ಸಂಸದೆ ರೇಣುಕಾ ಚೌಧರಿ

    ಮೋದಿಗೆ ದೇಶವನ್ನು ಮುನ್ನಡೆಸುವ ಅನುಭವದ ಕೊರತೆಯಿದೆ- ಸಂಸದೆ ರೇಣುಕಾ ಚೌಧರಿ

    ರಾಯಚೂರು: ಪ್ರಧಾನಿ ಮೋದಿ ಅವರಿಗೆ ದೇಶವನ್ನು ಮುನ್ನಡೆಸುವ ಅನುಭವದ ಕೊರತೆಯಿದೆ. ಅದರಿಂದಾಗಿಯೇ ದೇಶ ಆರ್ಥಿಕ ದುಸ್ಥಿತಿಗೆ ತಲುಪಿದೆ ಅಂತ ಕಾಂಗ್ರೆಸ್ ಹಿರಿಯ ಮುಖಂಡೆ ಹಾಗೂ ಮಾಜಿ ಸಂಸದೆ ರೇಣುಕಾ ಚೌಧರಿ ಆರೋಪಿಸಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ ಅಂತ ಸಂಸದೆ ಆರೋಪಿಸಿದ್ದಾರೆ.

    ಪ್ರಧಾನಿ ಹುದ್ದೆಗೆ ತಕ್ಕಂತೆ ಮೋದಿ ವರ್ತನೆಯಿಲ್ಲ. ರಾಜ್ಯದ ಚುನಾವಣೆಯಲ್ಲಿ ಪ್ರಚಾರಕರಂತೆ ಮಾತನಾಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಕ್ಕಳ ಮೇಲೆ ದಾಳಿ ಬಗ್ಗೆ ಪ್ರಧಾನಿಗೆ ಕಾಳಜಿಯಿಲ್ಲ. ದೇಶದಲ್ಲಿನ ಎಲ್ಲಾ ಅಹಿತಕರ ಘಟನೆ ಬದಿಗಿರಿಸಿ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ದೇಶದ ಆಗುಹೋಗುಗಳ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು.

  • ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಧಾರವಾಡ: ಜಿಲ್ಲೆಯ ಉಪ್ಪಿನಬೆಟಗೇರಿ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ.

    ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಬಿಎಸ್‍ವೈ ಅವರು ತನ್ನ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. `ಬಹಳ ಚಿಕ್ಕವಯಸ್ಸಿನಲ್ಲಿದ್ದಾಗಲೇ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ತಾಯಿ ಪ್ರೀತಿ-ವಿಶ್ವಾಸ ನನಗೆ ಗೊತ್ತಿಲ್ಲ. ಆದರೆ ತಾಯಿಯ ಹೃದಯ ಏನು ಅಂತಾ ನನಗೆ ಗೊತ್ತಿದೆ. ನಮ್ಮ ಅಜ್ಜ-ಅಜ್ಜಿಯರು ನೆಮ್ಮದಿಯಿಂದ ಇರಬೇಕು ಅನ್ನೊದು ನಮ್ಮ ಆಸೆ. ಅದಕ್ಕಾಗಿ ತಾಯಂದಿರು, ಹೆಣ್ಣುಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇನೆ ಅಂತ ಕಣ್ಣೀರು ಸುರಿಸಿದ್ರು.

    ಬಡವರ ಮನೆಯಲ್ಲಿ ಮದುವೆಯಾದಾಗ 3ಗ್ರಾಂ ತಾಳಿ ಹಾಗೂ ಬಡವರ ಮದುವೆಗೆ 25ಸಾವಿರ ರೂಪಾಯಿ ಸಹಾಯಧನ ಕೊಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಅಂತ ಅವರು ಹೇಳಿದ್ರು.

  • ಬೆಂಗ್ಳೂರಲ್ಲಿ ಬೃಹತ್ ಮತಚೀಟಿ ಹಗರಣ ಸ್ಫೋಟ – ರಾಜಕಾರಣದಲ್ಲಿ ಮಿಡ್‍ನೈಟ್ ಹೈಡ್ರಾಮ

    ಬೆಂಗ್ಳೂರಲ್ಲಿ ಬೃಹತ್ ಮತಚೀಟಿ ಹಗರಣ ಸ್ಫೋಟ – ರಾಜಕಾರಣದಲ್ಲಿ ಮಿಡ್‍ನೈಟ್ ಹೈಡ್ರಾಮ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರು ದಿನ ಬಾಕಿ ಇರುವಂತೆ ರಾಜ್ಯ ರಾಜಕಾರಣ ಹೊಸ ಆಯಾಮಕ್ಕೆ ತಿರುಗಿದೆ.

    ಬೆಂಗಳೂರಿನ ಜಾಲಹಳ್ಳಿಯ ಅಪಾರ್ಟ್ ಮೆಂಟ್‍ನಲ್ಲಿ ಸಿಕ್ಕ ರಾಶಿರಾಶಿ ವೋಟರ್ ಐಡಿ, ಮಿಡ್‍ನೈಟ್ ರಾಜಕಾರಣಕ್ಕೆ ಸಾಕ್ಷಿಯಾಯ್ತು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಎಸ್‍ಎಲ್ ವಿ ಅಪಾರ್ಟ್ ಮೆಂಟ್‍ಗೆ ಲಗ್ಗೆ ಇಟ್ಟಿದ್ದ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಬರೋಬ್ಬರಿ 9,746 ವೋಟರ್ ಐಡಿ ಪತ್ತೆಯಾಗಿತ್ತು.

    ಈ ವಿಷಯ ತಿಳಿಯುತ್ತಿದ್ದಂತೆ ಅಪಾರ್ಟ್ ಮೆಂಟ್ ಬಳಿ ಜಮಾಯಿಸಿದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಹಣದ ಆಮಿಷವೊಡ್ಡಿ ಮತದಾರರಿಂದ ವೋಟರ್ ಐಡಿಗಳನ್ನು ಸಂಗ್ರಹ ಮಾಡಿಕೊಳ್ಳಲಾಗ್ತಿದೆ ಅಂತ ಆರೋಪಿಸಿ ಪ್ರತಿಭಟನೆ ನಡೆಸಿದ್ರು. ಬಳಿಕ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕೂಡ ಭೇಟಿ ನೀಡಿದ್ರು. ಈ ಬೆನ್ನಲ್ಲೇ ಚುನಾವಣಾ ಆಯೋಗ ರಾತ್ರಿ 11.30ರ ಸುಮಾರಿಗೆ ತುರ್ತು ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳೋದಾಗಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ರು.


    ಅಪಾರ್ಟ್‍ಮೆಂಟ್‍ನಲ್ಲಿ ಸಿಕ್ಕಿದ್ದೇನು..?
    * 9,746 ವೋಟರ್ ಐಡಿ
    * 5 ಲ್ಯಾಪ್‍ಟಾಪ್
    * 2 ಸ್ಟೀಲ್ ಟ್ರಂಕ್
    * ವೋಟರ್ ಐಡಿ ಹೆಸರು ಸೇರ್ಪಡೆ ಮಾಡಿಕೊಳ್ಳು ಫಾರ್ಮ್ 6 ಅರ್ಜಿ

     

  • ಯಡಿಯೂರಪ್ಪ ನನ್ನ ಮನೆಗೆ ಬರುವುದೇ ಬೇಡ-ಕೊನೆಗೂ ಮೌನ ಮುರಿದ ಸೊಗಡು ಶಿವಣ್ಣ

    ಯಡಿಯೂರಪ್ಪ ನನ್ನ ಮನೆಗೆ ಬರುವುದೇ ಬೇಡ-ಕೊನೆಗೂ ಮೌನ ಮುರಿದ ಸೊಗಡು ಶಿವಣ್ಣ

    ತುಮಕೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಕೊನೆಗೂ ಮೌನ ಮುರಿದಿದ್ದಾರೆ. ಟಿಕೆಟ್ ಸಿಗದ ಬಳಿಕ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೇ ಶಿವಣ್ಣ ದೂರ ಉಳಿದಿದ್ರು.

    ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸೊಗಡು ಶಿವಣ್ಣ, ಯಾವ ನಾಯಕರೂ ನನ್ನ ಮನವೊಲಿಸುವ ಪ್ರಯತ್ನ ಮಾಡೋದು ಬೇಡ. ಸದ್ಯ ನಾನು ತಟಸ್ಥನಾಗಿರುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಯವಿಟ್ಟು ನನ್ನ ಮನೆಗೆ ಬರುವುದು ಬೇಡ. ಚುನಾವಣೆ ಮುಗಿದ ಬಳಿಕ ನಾನೇ ಅವರ ಮನೆಗೆ ಹೋಗಿ ಮಾತಾಡುತ್ತೇನೆ ಎಂದು ಕೈ ಮುಗಿದು ಕೇಳಿಕೊಂಡರು.

    ಈ ಬಾರಿಯ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಲ್ಲಿ ಸಕ್ರಿಯನಾಗುತ್ತೇನೆ. ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಕೊಟ್ಟಿರುವ ಹಿಂಸೆಗೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದ್ರೆ ಧೈರ್ಯದಿಂದ ಧೃತಿಗೆಡದೇ ಪರಿಸ್ಥಿತಿ ಎದುರಿಸಿದ್ದೇನೆ ಎಂದು ಮಾಜಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

    ಸೊಗಡು ಶಿವಣ್ಣ ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಹೈಕಮಾಂಡ್ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಸೊಗಡು ಶಿವಣ್ಣ ಸಹಜವಾಗಿಯೆ ಅಸಮಾಧಾನಗೊಂಡಿದ್ರು.