Tag: Namma Mane Expo

  • ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

    ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋ 4ನೇ ಆವೃತ್ತಿಯ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಮಲ್ಲೇಶ್ವರಂ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಎಕ್ಸ್ ಪೋಗೆ ಇಂದು ತೆರೆ ಬೀಳಲಿದೆ. ಮೊದಲ ದಿನವೇ ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಎಕ್ಸ್ ಪೋಗೆ ಭೇಟಿ ನೀಡಿ ತಮ್ಮ ನೆಚ್ಚಿನ ಸೂರನ್ನು ಹೊಂದುವ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲೇ ಸಾಗಿದ್ದರು, ಅದೇ ರೀತಿ ಇಂದು ಸಹ ನೂರಾರು ಸಂಖ್ಯೆಯಲ್ಲಿ ಜನ ಎಕ್ಸ್ ಪೋಗೆ ಆಗಮಿಸುತ್ತಿದ್ದು ತಮಗೆ ಬೇಕಾದ ಪ್ರಾಪರ್ಟಿಸ್‍ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

    ಎಕ್ಸ್ ಪೋದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಗ್ರಾಹಕರಿಗೂ ಲಕ್ಕಿ ಡ್ರಾಪ್ ಮೂಲಕ ಚಿನ್ನದ ನಾಣ್ಯ ಗೆಲ್ಲುವ ಸುವರ್ಣ ಅವಕಾಶವನ್ನು ಒದಗಿಸಲಾಗಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಅದೃಷ್ಟ ಗ್ರಾಹಕರನ್ನು ಆಯ್ಕೆ ಮಾಡಲಾಗುವುದು. ಇಷ್ಟೇ ಅಲ್ಲದೆ ಪ್ರಾಪರ್ಟಿ ಖರೀದಿ ಮಾಡುವ ಗ್ರಾಹಕರಿಗೆ ಸಂಸ್ಥೆಗಳಿಂದ ಕಾರು, ಬೈಕ್, ಐ ಫೋನ್ ಸೇರಿದಂತೆ ಅನೇಕ ಹೋಂ ಅಪ್ಲೈಯನ್ಸ್‌ಗಳನ್ನು ಗೆಲ್ಲುವ ಸದಾವಕಾಶ ಸಹ ಇದೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಎಕ್ಸ್ ಪೋದಲ್ಲಿ ಧಾತ್ರಿ ಡೆವಲಪರ್ಸ್, ಸ್ಯಾನ್ ಸಿಟಿ, ಸಾಯಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಯಲ್ ಪ್ರಾಪರ್ಟಿಸ್, ಟ್ರಿನ್ಕೋ ಇನ್ಫ್ರಾ ಪ್ರೈವೇಟ್ ಲಿಮಿಟೆಡ್, ಯೂನಿಕ್ ರಿಯಾಲಿಟಿಸ್ ಸೇರಿದಂತೆ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಎಕ್ಸ್ ಪೋದಲ್ಲಿ ಭಾಗಿಯಾಗಿವೆ. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

  • ನಮ್ಮ ಮನೆ ಎಕ್ಸ್‌ಪೋಗೆ ಬನ್ನಿ – ಮನೆ ಖರೀದಿಸಿ

    ನಮ್ಮ ಮನೆ ಎಕ್ಸ್‌ಪೋಗೆ ಬನ್ನಿ – ಮನೆ ಖರೀದಿಸಿ

    ಬೆಂಗಳೂರು: ನೆಲೆಗೆ ಒಂದು ಸ್ವಂತ ಸೂರಿರಬೇಕು ಎನ್ನುವುದು ಎಲ್ಲರ ಕನಸು. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಮನೆಯಿದ್ದರೆ ನೆಮ್ಮದಿ ಎನ್ನುವುದು ಎಲ್ಲರ ಭಾವನೆ. ಆ ಕನಸಿಗೆ ಈಗ ನಿಮ್ಮ ಪಬ್ಲಿಕ್ ನೀರೆರೆಯುತ್ತಿದೆ.

    ಇಂದು ಮತ್ತು ನಾಳೆ ಪಬ್ಲಿಕ್ ಟಿವಿ ನಮ್ಮ ಮನೆ ಎಕ್ಸ್‌ಪೋ ನಡೆಯಲಿದೆ. ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ಶ್ರೀಧತ್ರಿ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್‌ಪೋ 4ನೇ ಆವೃತ್ತಿಗೆ ಇಂದು ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ಸಿಗಲಿದೆ.

    ಬೆಳಗ್ಗೆ 9:30 ರಿಂದ ಸಂಜೆ 6:30 ರವರೆಗೆ ಎಕ್ಸ್ ಪೋ ನಡೆಯಲಿದ್ದು ಸೈಟ್ ರೇಟ್, ಫ್ಲ್ಯಾಟ್, ಮನೆ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಎಕ್ಸ್ ಪೋದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಬಗ್ಗೆ ಮಾಹಿತಿ ಕೊಡಲಿದೆ. ಸುಸಜ್ಜಿತ ಒಂದೇ ಸೂರಿನಡಿಯಲ್ಲಿ 28ಕ್ಕೂ ಹೆಚ್ಚು ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಭಾಗವಹಿಸುತ್ತಿದ್ದಾರೆ. ಎಕ್ಸ್ ಪೋದಲ್ಲಿ ನೊಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಚಿನ್ನದ ನಾಣ್ಯ ಹಾಗೂ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗುತ್ತಿದೆ.

    ಎಕ್ಸ್ ಪೋ ವಿಶೇಷತೆ ಏನು?
    ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

    ಯಾರೆಲ್ಲ ಭಾಗವಹಿಸುತ್ತಾರೆ?
    – ಕನ್‍ಸ್ಟ್ರಕ್ಷನ್ ಕಂಪನಿಗಳು
    – ಲ್ಯಾಂಡ್ ಡೆವಲಪರ್ಸ್
    – ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
    – ಹಣಕಾಸು ಸಂಸ್ಥೆಗಳು
    – ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
    – ಸ್ಯಾನಿಟರಿ ಫಿಟ್ಟಿಂಗ್
    – ಒಳಾಂಗಣ ವಿನ್ಯಾಸ ಕಂಪನಿಗಳು
    – ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು

    ಟೈಟಲ್ ಸ್ಪಾನ್ಸರ್ – ಶ್ರೀ ಧತ್ರಿ ಡೆವಲಪರ್ಸ್ & ಪ್ರಮೋಟರ್ಸ್, ಪ್ಲಾಟಿನಂ ಸ್ಪಾನ್ಸರ್- ಸ್ಯಾನ್ ಸಿಟಿ. ಕೋ ಸ್ಪಾನ್ಸರ್– ಶೆಟ್ಟಿ & ಶೆಟ್ಟಿ ಕನಸ್ಟ್ರಕ್ಷನ್ಸ್ ಆ್ಯಂಡ್ ಹೌಸಿಂಗ್, ಶ್ರೀ ಭೂಮಿ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್, ಬಿಎಸ್‍ಎನ್‍ಎಲ್ ಬ್ಯಾಂಕ್ ಎಂಪ್ಲಾಯಿಸ್ & ವೆಲ್‍ಫೇರ್ ಸೊಸೈಟಿ, ರಾಜರ್ಶಿ ಡೆವಲಪರ್ಸ್ ಪ್ರೈ. ಲಿಮಿಟೆಡ್.

    ಪವರ್ಡ್ ಬೈ– ಶ್ರೀ ಸಾಯಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಯಲ್ ಪ್ರಾಪರ್ಟಿಸ್, ಕೋ ಪವರ್ಡ್ ಬೈ– ಟ್ರಿಂಕೋ ಇನ್‍ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಯೂನಿಕ್ ರಿಯಾಲಿಟಿಸ್, ಅಸೋಸಿಯೇಟ್ ಸ್ಪಾನ್ಸರ್ಸ್– ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್, ಕಂಪಾಸ್, ಮದರ್ ಅರ್ಥ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್. ಬ್ಯಾಂಕ್ ಪಾರ್ಟ್‍ನರ್– ಕೆನರಾ ಬ್ಯಾಂಕ್, ಸ್ಟೀಲ್ ಪಾರ್ಟ್‍ನರ್– ಟರ್ಬೋ ಸ್ಟೀಲ್, ಗಿಫ್ಟ್ ಪಾರ್ಟ್‍ನರ್- ಜೀನಿ ಮಿಲೆಟ್ ಹೆಲ್ತ್ ಮಿಕ್ಸ್.

    ಸ್ಟಾಲ್ ಪಾರ್ಟ್‍ನರ್– ಶರಣ್ಯ ಫಾರ್ಮ್ಸ್, ಅಲೈಡ್ ಹ್ಯಾಬಿಟಾಟ್ಸ್, ಆರ್ಯನ್ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಜರ್ಶಿ ಡೆವಲಪರ್ಸ್ ಆ್ಯಂಡ್ ಪ್ರೈ. ಲಿಮಿಟೆಡ್, ಕೃಷ್ಣ ಕಾವೇರಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ವಸತಿ ವೈಭವ್ ಗ್ರೂಪ್, ಎಟಿಝೆಡ್ ಪ್ರಾಪರ್ಟಿಸ್, ಹಸಿರು ಫಾರಮ್ಸ್, ಎಎಸ್‍ಬಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ಎಂಆರ್ ಪ್ರಾಪರ್ಟಿಸ್.‌

    ಫುಡ್ ಪಾರ್ಟ್‍ನರ್– ಕೆಫ್‍ಡಿಸಿ ಹಾಗೂ ಇವೆಂಟ್ ಪಾರ್ಟ್‍ನರ್ ಪ್ರಗತಿ ಅಡ್ವರ್ಟೈಸರ್ಸ್

  • ಮತ್ತೆ ಬಂದಿದೆ ‘ನಮ್ಮ ಮನೆ’ ಎಕ್ಸ್ ಪೋ-ಒಂದೇ ಸೂರಿನಡಿ ವಿಲ್ಲಾ, ಮನೆಗಳ ಮಾಹಿತಿ

    ಮತ್ತೆ ಬಂದಿದೆ ‘ನಮ್ಮ ಮನೆ’ ಎಕ್ಸ್ ಪೋ-ಒಂದೇ ಸೂರಿನಡಿ ವಿಲ್ಲಾ, ಮನೆಗಳ ಮಾಹಿತಿ

    -‘ನಮ್ಮ ಮನೆ’ ಹಬ್ಬಕ್ಕೆ ಪ್ರವೇಶ ಉಚಿತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಸೈಟ್ ತಗೆದುಕೊಳ್ಳಬೇಕು. ಒಂದು ಒಳ್ಳೆಯ ಮನೆ ಕಟ್ಟಿಸಬೇಕು ಅನ್ನೋದು ಎಲ್ಲರ ಕನಸು. ಈಗ ನಿಮ್ಮ ಕನಸನ್ನ ನನಸು ಮಾಡೋಕೆ ಪಬ್ಲಿಕ್ ಟಿವಿ ವೇದಿಕೆ ಕಲ್ಪಿಸಿದೆ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎಂಕೆಬಿ ಡೆವಲಪರ್ಸ್ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ.

    ಮನೆ ಕೊಳ್ಳುವವರಿಗೆ, ಸೈಟ್ ಖರೀದಿ ಮಾಡೋರಿಗೆ ಇದು ಸುವರ್ಣಾವಕಾಶ. ಕಾರಣ ಎಲ್ಲವೂ ಒಂದೇ ಸೂರಿನಡಿ ಸಿಗೋ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ’ ಎಕ್ಸ್ ಪೋ ಮೊದಲ ಆವೃತ್ತಿ ಸಾವಿರಾರು ಮಂದಿಗೆ ಸೂರು ಕಲ್ಪಿಸಿತ್ತು. ಈಗ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ. ಇಂದು ಮತ್ತು ನಾಳೆ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಮ್ಮ ಮನೆ ಎಕ್ಸ್ ಪೋ ಕಾರ್ಯಕ್ರಮ ನಡೆಯಲಿದೆ.

    ಎರಡನೇ ಆವೃತ್ತಿಯ ನಮ್ಮ ಮನೆ ಎಕ್ಸ್ ಪೋಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಂತ ಎಕ್ಸ್ ಪೋಗೆ ಹೋಗಲು ಎಂಟ್ರಿ ಫೀಸ್ ಕೊಡಬೇಕು ಅನ್ನೋ ಟೆನ್ಶನ್ ಬೇಡ. ಇಂದಿನಿಂದ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

    ನಮ್ಮ ಮನೆ ಎಕ್ಸ್ ಪೋ ವಿಶೇಷತೆ
    * ಒಂದೇ ಸೂರಿನಡಿ 40ಕ್ಕೂ ಹೆಚ್ಚು ಪ್ರಸಿದ್ಧ ಡೆವಲಪರ್ಸ್, ಬಿಲ್ಡರ್ಸ್
    * ಕೈಗೆಟುಕುವ ದರದಲ್ಲಿ ಸೈಟ್, ಫ್ಲ್ಯಾಟ್, ಮನೆ, ವಿಲ್ಲಾ ಪ್ರದರ್ಶನ
    * ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರೆಡೆಯ ‘ನಮ್ಮ ಮನೆ’ ಮಾಹಿತಿ
    * ಬಿಡಿಎ, ಬಿಎಂಆರ್‍ಡಿಎ ಅನುಮೋದಿಸಲ್ಪಟ್ಟ ಫ್ಲ್ಯಾಟ್ ಬಗ್ಗೆ ಮಾಹಿತಿ
    * ಎಕ್ಸ್ ಪೋಗೆ ಬಂದವರಿಗೆ ಸೈಟ್, ಫ್ಲ್ಯಾಟ್ ವೀಕ್ಷಣೆಗೆ ಉಚಿತ ಅವಕಾಶ
    * ಸ್ಥಳದಲ್ಲೇ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ
    * ಹೊಸ ಯೋಜನೆಗಳಿಗೆ ದಸರಾ ಹಬ್ಬದ ವಿಶೇಷ ಕೊಡುಗೆ
    * ನೋಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಲಕ್ಕಿ ಡಿಪ್
    * ಲಕ್ಕಿ ಡಿಪ್‍ನಲ್ಲಿ ಆಯ್ಕೆಯಾದವರಿಗೆ ಎಂಕೆಬಿ ಡೆವಲ್ಲಪರ್ಸ್‍ನಿಂದ ಬೆಳ್ಳಿ ನಾಣ್ಯ ಗಿಫ್ಟ್

    ಒಟ್ಟಿನಲ್ಲಿ ಮನೆ ಕೊಳ್ಳುವವರಿಗೆ ಇದು ಸುವರ್ಣಾವಕಾಶ. ಎಲ್ಲವೂ ಒಂದೇ ಕಡೆ ಮಾಹಿತಿ ಸಿಗಲಿದ್ದು ಸಾಲಕ್ಕಾಗಿ ಬೇರೆಡೆ ಅಲೆದಾಡಬೇಕೆನ್ನುವ ಸಮಸ್ಯೆ ಬೇಡ. ಯಾಕಂದ್ರೆ ಸಾಲ ಸೌಲಭ್ಯನೂ ಇಲ್ಲೇ ಸಿಗಲಿದೆ. ಅಲ್ಲದೇ ಎಕ್ಸ್ ಪೋದಲ್ಲಿ ನೋಂದಾಯಿಸಲ್ಪಟ್ಟ ಗ್ರಾಹಕರು ಗಿಫ್ಟ್ ಕೂಡ ತಮ್ಮದಾಗಿಸಿಕೊಳ್ಳಬಹುದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ ಎಕ್ಸ್ ಪೋಗೆ ಬನ್ನಿ.

    ನಮ್ಮ ಎಕ್ಸ್ ಪೋ ನಡೆಯುವ ವಿಳಾಸ:
    ಮಲ್ಲೇಶ್ವರಂ ಸರ್ಕಾರಿ ಶಾಲೆಯ ಆಟದ ಮೈದಾನ,
    ಕೆಸಿ ಜನರಲ್ ಆಸ್ಪತ್ರೆ ಮುಂಭಾಗ,
    ಬೆಂಗಳೂರು.