ಕನ್ನಡದ ‘ನೀಲಕಂಠ’ (Neelakanta Kannada Film) ಚಿತ್ರದ ನಟಿ ನಮಿತಾ (Namitha) ಅವರು ತಮಿಳುನಾಡಿದ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಅಹಿತಕರ ಘಟನೆಯೊಂದು ನಡೆದಿದೆ. ದೇಗುಲ ಪ್ರವೇಶದ ವೇಳೆ ಯಾವ ಧರ್ಮದವರು ಜಾತಿ ಪ್ರಮಾಣಪತ್ರ ತೋರಿಸಿ ಎಂದು ಒಳಪ್ರವೇಶಿಸದಂತೆ ತಡೆದಿದ್ದಾರೆ. ಕಹಿ ಘಟನೆಯ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ, ನೀವು ಹಿಂದೂ ನಾ ಎಂದು ಆಡಳಿತ ಮಂಡಳಿ ಸಿಬ್ಬಂದಿ ನನ್ನನ್ನು ತಡೆದಿದ್ದಾರೆ. ನಾನು ಹಿಂದೂ ಎಂದು ತಿಳಿಸಿದರೂ ಕೂಡ ನೀವು ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದು ಕೇಳಿದ್ದಾರೆ ನಟಿ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿವರಣೆ ನೀಡಿ, ಇದುವರೆಗೂ ನನ್ನ ಜೀವನದಲ್ಲಿ ಹೀಗೆ ಆಗಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಬಹುಭಾಷಾ ನಟಿ ನಮಿತಾ.
View this post on Instagram
ಬಳಿಕ ನಾವು ಹಿಂದೂ ಎಂದು ಸ್ಪಷ್ಟನೆ ನೀಡಿದ ನಂತರವೇ ಹಣೆಗೆ ಕುಂಕುಮ ಹಚ್ಚಿಕೊಂಡ ನಂತರ ನಮ್ಮನ್ನು ದೇವಸ್ಥಾನ ಒಳ ಪ್ರವೇಶಿಸಲು ಅನುಮತಿ ನೀಡಿದರು ಎಂದು ನಟಿ ನಮಿತಾ ತಿಳಿಸಿದ್ದಾರೆ.
ಅಂದಹಾಗೆ, ರವಿಚಂದ್ರನ್ (Ravichandran) ಜೊತೆ ನೀಲಕಂಠ, ಹೂ, ದರ್ಶನ್ (Actor Darshan) ಜೊತೆ ‘ಇಂದ್ರ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಮಿತಾ ನಟಿಸಿದ್ದಾರೆ.












ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೇಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ. ಬಳಿಕ 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಜತೆ ಹಸೆಮಣೆ ಏರಿದ್ದರು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ನಮಿತಾ ಹೇಳಿಕೊಂಡಿದ್ದರು. ಇದನ್ನೂ ಓದಿ: 

ತೆಲುಗು, ತಮಿಳು ಸಿನಿಮಾಗಳ ಜತೆ ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೇಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ. ಬಳಿಕ 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಜತೆ ಹಸೆಮಣೆ ಏರಿದ್ದರು.
ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ನಮಿತಾ ಹೇಳಿಕೊಂಡಿದ್ದರು. ಈಗ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಸೀಮಂತದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ನಮಿತಾ ಅವರ ಬೇಬಿ ಬಂಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬ್ಲ್ಯಾಕ್ ಕಲರ್ ಸೀರೆಯಲ್ಲಿ ಇನ್ನು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:
ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.


ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮಗುವಿನ ಆಗಮನದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲಿದ್ದಾರೆ. ಮತ್ತೆ ಚಿತ್ರಗಳಲ್ಲಿ ನಮಿತಾ ಕಾಣಿಸಿಕೊಳ್ಳಲಿದ್ದಾರೆ.
























