Tag: naming ceremony

  • 14 ದಿನದ ಮಗುವಿಗೆ ಅಭಿನಂದನ್ ಹೆಸರನ್ನಿಟ್ಟ ದಂಪತಿ!

    14 ದಿನದ ಮಗುವಿಗೆ ಅಭಿನಂದನ್ ಹೆಸರನ್ನಿಟ್ಟ ದಂಪತಿ!

    ರಾಯಚೂರು: ಪಾಕಿಸ್ತಾನದಲ್ಲಿ ಸಿಕ್ಕಿ ಬಿದ್ದರೂ ದೇಶ ಪ್ರೇಮ ಮೆರೆದ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಹೆಸರನ್ನು ತಮ್ಮ ಮಗನಿಗೆ ನಾಮಕರಣ ಮಾಡುವ ಮೂಲಕ ರಾಯಚೂರಿನ ಸಿಂಧನೂರಿನ ದಂಪತಿ ದೇಶಾಭಿಮಾನ ಮೆರೆದಿದ್ದಾರೆ.

    ಸಿಂಧನೂರು ತಾಲೂಕಿನ ದಿದ್ದಗಿ ಗ್ರಾಮದ ರೈತ ದಂಪತಿ ಸುರೇಶ್ ಹಾಗೂ ಶ್ರೀದೇವಿ ತಮ್ಮ ಮಗನಿಗೆ ಅಭಿನಂದನ್ ಎಂದು ಹೆಸರು ಇಟ್ಟಿದ್ದಾರೆ. ದೇಶಕ್ಕಾಗಿ ಹೋರಾಡಿ ಮರಳಿ ಬಂದಿರುವ ವೀರ ಯೋಧನ ಹೆಸರಿನಿಂದ ಮಗನನ್ನು ಕರೆಯುವುದೇ ದೊಡ್ಡ ಖುಷಿ ಎಂದು ದಂಪತಿ ಹೇಳಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲೂ ಕೂಡ ದಂಪತಿ ವಿಂಗ್ ಕಮಾಂಡರ್ ಅಭಿನಂದನ್ ಗೌರವಾರ್ಥ ನಾಮಕರಣ ಮಾಡಿದ್ದಾರೆ. ಮಹಾಂತೇಶ್ ಶೆಟ್ಟರ್ ಹಾಗೂ ಶಾಂತಾ ಶೆಟ್ಟರ್ ದಂಪತಿ ತಮ್ಮ ಪುತ್ರನಿಗೆ ಅಭಿನಂದನ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ದಂಪತಿ ಈ ಮೊದಲು ತಮ್ಮ ಪುತ್ರನಿಗೆ ಅಥರ್ವ ಅಥವಾ ಅಭಿನವ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದರು. ಆದ್ರೆ ಇತ್ತೀಚೆಗೆ ಅಭಿನಂದನ್ ಮಾಡಿದ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮೂರು ತಿಂಗಳ ಗಂಡು ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಗೆ ಅಂಬಿ ಹೆಸರನ್ನಿಟ್ಟು, ಪುಣ್ಯಸ್ಮರಣೆಯಲ್ಲಿ ಮದ್ಯದ ಬಾಟಲಿಗಳನ್ನು ಅರ್ಪಿಸಿದ ಗ್ರಾಮಸ್ಥರು

    ರಸ್ತೆಗೆ ಅಂಬಿ ಹೆಸರನ್ನಿಟ್ಟು, ಪುಣ್ಯಸ್ಮರಣೆಯಲ್ಲಿ ಮದ್ಯದ ಬಾಟಲಿಗಳನ್ನು ಅರ್ಪಿಸಿದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ತಾಲೂಕಿನ ತಾಳಹಳ್ಳಿ ಗ್ರಾಮದ ಗ್ರಾಮಸ್ಥರು ತಮ್ಮ ಊರಿನ ಪ್ರಮುಖ ರಸ್ತೆಗೆ ‘ಕಲಿಯುಗ ಕರ್ಣ ಅಂಬರೀಶ್’ ಎಂದು ನಾಮಕರಣ ಮಾಡುವ ಮೂಲಕ ಮಂಡ್ಯದ ಗಂಡು ದಿವಂಗತ ಅಂಬರೀಶ್ ರವರ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ನೇರವೇರಿಸಿದ್ದಾರೆ.

    ತಾಳಹಳ್ಳಿ ಗ್ರಾಮಸ್ಥರು ಇಂದೂ ಅದ್ಧೂರಿಯಾಗಿ ಅಂಬರೀಷ್‍ರವರ ಪುಣ್ಯಸ್ಮರಣೆಯನ್ನು ಮಾಡಿದ್ದಾರೆ. ಅಲ್ಲದೇ ವಿಶೇಷವಾಗಿ ಅಂಬರೀಶ್ ಭಾವಚಿತ್ರಕ್ಕೆ ಕಬ್ಬಿನ ಜಲ್ಲೆ ಹಾಗೂ ಹೂವಿನ ಅಲಂಕಾರ ಮಾಡಿ, ಪೂಜೆ-ಪುನಸ್ಕಾರ ನೇರವೇರಿಸಿದರು. ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೊಸ ಬಟ್ಟೆ, ಮದ್ಯದ ಬಾಟಲಿ, ಸಿಗರೇಟ್ ಸೇರಿದಂತೆ ಹೂ, ಹಣ್ಣು-ಕಾಯಿ ಸೇರಿದಂತೆ ಭರ್ಜರಿ ಬಾಡೂಟವನ್ನ ನೈವೈದ್ಯವಾಗಿ ಅರ್ಪಿಸಿದ್ದಾರೆ.

    ಬಾಡೂಟದಲ್ಲಿ ಅಂಬಿ ಅವರಿಗೆ ಪ್ರಿಯವಾಗಿದ್ದ ಮುದ್ದೆ, ನಾಟಿಕೋಳಿ ಸೇರಿದಂತೆ ಬಾಡೂಟವನ್ನು ನೂರಾರು ಮಂದಿಗೆ ಉಣಬಡಿಸಿದ್ದಾರೆ. ಗ್ರಾಮಸ್ಥರು ತಮ್ಮೂರಿನ ರಸ್ತೆಗೆ ಅಂಬಿ ಹೆಸರು ನಾಮಕರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ದಿವಂಗತ ಅಂಬರೀಶ್ ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳ ನಾಮಕರಣವನ್ನು ನೆರವೇರಿಸಿದ ನಟ ಅಜಯ್ ರಾವ್

    ಮಗಳ ನಾಮಕರಣವನ್ನು ನೆರವೇರಿಸಿದ ನಟ ಅಜಯ್ ರಾವ್

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ತಂದೆಯಾಗಿದ್ದು, ಈಗ ಅವರು ತಮ್ಮ ಮಗಳ ನಾಮಕರಣವನ್ನು ಮಾಡಿದ್ದಾರೆ.

    ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಚೆರಿಷ್ಮಾ’ ಎಂದು ಅಜಯ್ ರಾವ್ ದಂಪತಿ ನಾಮಕರಣ ಮಾಡಿದ್ದಾರೆ. ತಮ್ಮ ಮಗಳ ನಾಮಕರಣ ಕಾರ್ಯಕ್ರಮದ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನಾವು ಡಿ. 2ರಂದು ಅವಳಿಗೆ ಚೆರಿಷ್ಮಾ ಎಂದು ನಾಮಕರಣ ಮಾಡಿದ್ದೇವೆ. ಪೂರ್ತಿ ಹೆಸರು ಚೆರಿಷ್ಮಾ ಅಜಯ್ ರಾವ್” ಎಂದು ಟ್ವೀಟ್ ಮಾಡಿದ್ದಾರೆ.

    ಚೆರಿಷ್ಮಾ ಎಂದರೆ ಕಳೆ ಎಂಬರ್ಥ. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫೀ ತೆಗೆದುಕೊಂಡ ಫೋಟೋವೊಂದು ವೈರಲ್ ಆಗಿತ್ತು.

    ಅಜಯ್ ರಾವ್ ಡಿ. 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನ ಅವರು ಎಂಜಿನಿಯರ್ ಆಗಿದ್ದು, ಅಜಯ್ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಆಡಂಭರ ಇಲ್ಲದೇ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿಯಲ್ಲಿ ಶುರುವಾಯ್ತು ಧರ್ಮ ಯುದ್ಧ

    ಬಿಬಿಎಂಪಿಯಲ್ಲಿ ಶುರುವಾಯ್ತು ಧರ್ಮ ಯುದ್ಧ

    -ಅಯೋಧ್ಯೆ, ಶ್ರೀರಾಮನ ಹೆಸರಿಡುವಂತೆ ಶಿಫಾರಸ್ಸು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೀಗ ಧರ್ಮ ಯುದ್ಧ ಶುರುವಾಗಿದ್ದು, ಕಾಂಗ್ರೆಸ್ ಸದಸ್ಯನಿಂದ ರಸ್ತೆಗಳಿಗೆ ಮುಸ್ಲಿಂ ಹೆಸರನ್ನು ಬದಲಾವಣೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ, ಬಿಜೆಪಿಯು ಸಹ ಶ್ರೀರಾಮನ ಹೆಸರನ್ನು ಇಡುವಂತೆ ಕೌಂಟರ್ ಅಟ್ಯಾಕ್ ನೀಡಿದೆ.

    ಹೌದು, ಬಿಬಿಎಂಪಿಯ ಬಾಪೂಜಿನಗರದ ಕಾಂಗ್ರೆಸ್ ಕಾರ್ಪೋರೇಟರ್ ಅಜ್ಮದ್ ಬೇಗ್ ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಗೆ ಮುಸ್ಲಿಂ ಹೆಸರನ್ನಿಡಲು ಪಾಲಿಕೆಯಿಂದ ಅನುಮೋದನೆ ಪಡೆದುಕೊಂಡಿದ್ದರು. ಇದು ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಪೋರೇಟರ್‍ಗೆ ಕೌಂಟರ್ ಕೊಡಲು ಬಿಜೆಪಿ ಸಿದ್ಧವಾಗಿದೆ.

    ಗೋವಿಂದರಾಜ ನಗರದ ಬಿಜೆಪಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ, ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಗೆ ಅಂಜನಿಪುತ್ರ ರಸ್ತೆ, ಅಯೋಧ್ಯೆ ಹಾಗೂ ಶ್ರೀರಾಮ ಎಂದು ಮರುನಾಮಕರಣ ಮಾಡಲು ಬಿಬಿಎಂಪಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಮೂಲಕ ಬಿಬಿಎಂಪಿಯಲ್ಲಿ ಇಷ್ಟು ದಿನ ಕಾಮಗಾರಿಗಳಿಗಾಗಿ ಕಿತ್ತಾಟ ನಡೆಸುತ್ತಿದ್ದ ಸದಸ್ಯರು, ಈಗ ಧರ್ಮಯುದ್ಧಕ್ಕಾಗಿ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಪ್ಪ-ಅಮ್ಮನ ಹೆಸ್ರನ್ನೇ ರಸ್ತೆಗೆ ನಾಮಕರಣ ಮಾಡಲು ಮುಂದಾದ ಅಜ್ಮದ್ ಬೇಗ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ಪುನರ್ಜನ್ಮ ಎಂದು ಮಗನಿಗೆ ಅಟಲ್ ಜೀ ಹೆಸರಿಟ್ಟ ದಂಪತಿ

    ವಾಜಪೇಯಿ ಪುನರ್ಜನ್ಮ ಎಂದು ಮಗನಿಗೆ ಅಟಲ್ ಜೀ ಹೆಸರಿಟ್ಟ ದಂಪತಿ

    ರಾಯಚೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಮಗನ ರೂಪದಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತ ರಾಯಚೂರಿನ ದಂಪತಿಗಳು ಮಗುವಿಗೆ ಅಟಲ್ ಜೀ ಅಂತ ನಾಮಕರಣ ಮಾಡಿದ್ದಾರೆ.

    ಲಿಂಗಸುಗೂರಿನ ಸಜ್ಜಲ ಶ್ರೀ ಕಾಲೋನಿಯ ಪಾರ್ವತಿ ಶರಣ ಬಸವರಾಜ್ ದಂಪತಿ ತಮ್ಮ ಪುತ್ರನಿಗೆ ಅಟಲ್ ಜೀ ಅಂತ ಹೆಸರಿಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ನಿಧನರಾಗಿ 13ನೇ ದಿನಕ್ಕೆ ಮಗು ಜನಿಸಿದ್ದರಿಂದ ವಾಜಪೇಯಿಯವರೇ ಪುನರ್ಜನ್ಮ ಪಡದಿದ್ದಾರೆ ಅಂತ ಭಾವಿಸಿದ್ದಾರೆ.

    ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ಮಗುವಿಗೆ ನಾಮಕರಣ ಮಾಡಿದ್ದಾರೆ. ಹಲವಾರು ಸ್ವಾಮೀಜಿಗಳ ಸಮ್ಮುಖದಲ್ಲಿ ನಾಮಕರಣ ಕಾರ್ಯ ನಡದಿದೆ. ಮತ್ಸದ್ದಿ, ಅಜಾತ ಶತ್ರುವಾಗಿದ್ದ ವಾಜಪೇಯಿ ಅವರ ಹಾಗೇ ತಮ್ಮ ಮಗು ಬೆಳೆಯಬೇಕು ಅನ್ನೋ ಆಶಯದಲ್ಲಿ ಅವರ ಹೆಸರಿಟ್ಟರುವುದಾಗಿ ಮಗುವಿನ ಪೋಷಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ಅರಮನೆಯಲ್ಲಿಂದು ಯದುವಂಶದ ಕುಡಿಗೆ ನಾಮಕರಣ

    ಬೆಂಗಳೂರು ಅರಮನೆಯಲ್ಲಿಂದು ಯದುವಂಶದ ಕುಡಿಗೆ ನಾಮಕರಣ

    ಬೆಂಗಳೂರು: ಇಂದು ಬೆಂಗಳೂರು ಅರಮನೆಯಲ್ಲಿ ಯದುವಂಶದ ಕುಡಿಗೆ ನಾಮಕರಣ ಕಾರ್ಯಕ್ರಮ ನಡೆಯಲಿದೆ.

    ಬೆಂಗಳೂರಿನ ಅರಮನೆಯಲ್ಲಿ ನಡೆಯುವ ಸರಳ ಸಮಾರಂಭಕ್ಕೆ ಬಂಧುಗಳು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈಗಾಗಲೇ ರಾಜಮಾತೆ ಪ್ರಮೋದಾದೇವಿ ಬೆಂಗಳೂರಿನ ಅರಮನೆಗೆ ಆಗಮಿಸಿದ್ದಾರೆ. ಆದರೆ ಮೈಸೂರಿನ ಅರಮನೆಯಲ್ಲಿ ಯಾಕೆ ಯದುವಂಶದ ಕುಡಿಯ ನಾಮಕರಣ ಕಾರ್ಯಕ್ರಮ ನಡೆಯುತ್ತಿಲ್ಲ ಎಂಬ ಅಂಶ ಚರ್ಚೆಗೆ ಗ್ರಾಸವಾಗಿದೆ.

    ಕಳೆದ ಡಿಸೆಂಬರ್‍ನಲ್ಲಿ ಮಹಾರಾಜ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಿಕೊಡಲಾಗಿತ್ತು.

    ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

  • ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲೇ ಯುವರಾಜನ ನಾಮಕರಣ- ಯದುವೀರ್ ಒಡೆಯರ್

    ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲೇ ಯುವರಾಜನ ನಾಮಕರಣ- ಯದುವೀರ್ ಒಡೆಯರ್

    ಮೈಸೂರು: ಯದುವಂಶದ ಸಂಪ್ರದಾಯದಂತೆ ಯುವರಾಜನ ನಾಮಕರಣ ಅರಮನೆಯಲ್ಲಿ ನಡೆಯಲಿದೆ ಎಂದು ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಯದುವೀರ್, ನಮ್ಮ ಸಂಪ್ರದಾಯದಂತೆ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಅರಮನೆಯ ಮೂಹೂರ್ತ ಸಮಯ ನೋಡಿಕೊಂಡು ನಾಮಕರಣ ಮಾಡುತ್ತೇವೆ. ಹಲವು ಹೆಸರುಗಳನ್ನು ಯೋಚನೆ ಮಾಡಿದ್ದು, ಯಾವ ಹೆಸರನ್ನು ಅಧಿಕೃತ ಮಾಡಿಲ್ಲ. ಮಗನ ಎಲ್ಲಾ ಕಾರ್ಯಕ್ರಮಗಳು ಅರಮನೆಯಲ್ಲೇ ನಡೆದರೆ ನಮಗೆ ಇನ್ನಷ್ಟು ಖುಷಿ ಸಿಗಲಿದೆ ಎಂದು ತಿಳಿಸಿದ್ರು.

    ಸದ್ಯ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ ಯದುವೀರ್, ನಾಮಕರಣದ ಉಹಾಪೋಹಗಳಿಗೆ ತೆರೆ ಎಳೆದರು.

    ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. 2017ರ ಡಿಸೆಂಬರ್ 06ರಂದು ರಾತ್ರಿ 9.50 ಕ್ಕೆ ರಾಣಿ ತ್ರಿಷಿಕಾ ಕುಮಾರಿ ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

    ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು ಎಂದು ಹೇಳಲಾಗಿತ್ತು.

  • 70 ಜನರ ತುಂಬು ಕುಟುಂಬದಿಂದ 100ರ ಅಜ್ಜಿಗೆ ಮರುನಾಮಕರಣ!

    70 ಜನರ ತುಂಬು ಕುಟುಂಬದಿಂದ 100ರ ಅಜ್ಜಿಗೆ ಮರುನಾಮಕರಣ!

    ಯಾದಗಿರಿ: ವಯಸ್ಸಾದ ಹೆತ್ತವರನ್ನು ದೂರವಿಡುವ ಇಂತಹ ಅಧುನಿಕ ಯುಗದಲ್ಲಿ ವೃದ್ಧೆಯಾದ ತನ್ನ ತಾಯಿ ಶತ ದಿನ ಪೂರೈಸಿದ ಹಿನ್ನಲೆಯಲ್ಲಿ ಹೆತ್ತಮ್ಮನನ್ನು ಮಕ್ಕಳು, ಮಮ್ಮಕ್ಕಳು ಸೇರಿ ಮರು ನಾಮಕಾರಣ ಮಾಡಿದ ಅಪರೂಪದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ದುಪ್ಪಲ್ಲಿ ಗ್ರಾಮದ ಕಾಳಪ್ಪ ಹಾಗೂ ವೆಂಕಣ್ಣ ಅವರು ತನ್ನ ತಾಯಿ ನಾಗಮ್ಮ ವಿಶ್ವಕರ್ಮ ಶತ ದಿನ ಪೂರೈಸಿದಕ್ಕೆ ದುಪ್ಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ಮರುನಾಮಕರಣ ಮಾಡಿ ಸಂಭ್ರಮಿಸಿದ್ದಾರೆ. ಅಜ್ಜಿ ಹಾಗೂ ಮರಿ ಮಮ್ಮಗನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದಾರೆ.

    ನಾಗಮ್ಮ ವಿಶ್ವಕರ್ಮ ಅವರು ಶುಕ್ರವಾರ ಅಂದ್ರೆ ನಿನ್ನೆ ನೂರು ವರ್ಷ ವಯಸ್ಸು ಪೂರ್ಣಗೊಳಿಸಿದ್ದಾರೆ. ಜನ್ಮದಾತೆಯ ತೊಟ್ಟಿಲು ಕಾರ್ಯಕ್ರಮ ಮಾಡಿ, ಹೆತ್ತಬ್ಬೆಯ ಪಾದ ಪೂಜೆ ಮಾಡಿ ಬಳಿಕ ಮರು ನಾಮಕರಣ ಮಾಡಿದ್ದಾರೆ. ತನ್ನ ಮರಿಮಮ್ಮಗನ ಜೊತೆ ಮರು ನಾಮಕರಣ ಮಾಡಿದ್ದು ಅಜ್ಜಿ ನಾಗಮ್ಮಗೆ ಖುಷಿ ಕೊಟ್ಟಿದೆ.

    ಮರಿ ಮೊಮ್ಮಗನಿಗೆ ಅನಿರುದ್ಧ ಎಂದು ನಾಮಕರಣ ಮಾಡಿದ್ದು ನಾಗಮ್ಮರಿಗೆ ಭಾಗ್ಯವಂತಿ ಎಂದು ಮರು ನಾಮಕರಣ ಮಾಡಿದ್ದಾರೆ. 20 ಪುತ್ರರು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸೇರಿ 70 ಸದಸ್ಯರ ತುಂಬು ಕುಟುಂಬದೊಂದಿಗೆ ಅಜ್ಜಿ ಮರುನಾಮಕರಣ ಮಾಡಿಕೊಂಡಿದ್ದಾರೆ.

     

  • ಬೈಕಿಗೆ ಬಸ್ ಡಿಕ್ಕಿ- ಮಗಳ ನಾಮಕರಣ ಮುಗಿಸಿ ಬರುತ್ತಿದ್ದ ತಂದೆ, ಅಣ್ಣ ದುರ್ಮರಣ

    ಬೈಕಿಗೆ ಬಸ್ ಡಿಕ್ಕಿ- ಮಗಳ ನಾಮಕರಣ ಮುಗಿಸಿ ಬರುತ್ತಿದ್ದ ತಂದೆ, ಅಣ್ಣ ದುರ್ಮರಣ

    ಶಿವಮೊಗ್ಗ: ಮಗಳ ನಾಮಕರಣಕ್ಕೆಂದು ಬೈಕ್ ನಲ್ಲಿ ಹೋಗಿ ಹಿಂದಿರುಗುವ ವೇಳೆ ತಂದೆ ಮತ್ತು ಅವರ ಅಣ್ಣ ಇಬ್ಬರೂ ಅಪಘಾತದಲ್ಲಿ ಮೃತಪಟ್ಟ ಘಟನೆ ಶಿವಮೊಗ್ಗ- ಸಾಗರ ರಸ್ತೆಯ ಮುದ್ದಿನಕೊಪ್ಪ ಎಂಬಲ್ಲಿ ನಡೆದಿದೆ.

    ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್ ಬೈಕಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಲೋಕೇಶ್ ಎಂಬವರು ತನ್ನ ಮೂರು ತಿಂಗಳ ಮಗುವಿನ ನಾಮಕರಣಕ್ಕಾಗಿ ವೀರಗೊಂಡನಹಳ್ಳಿಯಲ್ಲಿರುವ ಹೆಂಡತಿ ಮನೆಗೆ ಹೋಗಿ ಬರುವಾಗ ಈ ದುರಂತ ಸಂಭವಿಸಿದೆ. ಲೋಕೇಶ್ ಜೊತೆ ಅವರ ಅಣ್ಣ ಜಗದೀಶ್ ಕೂಡಾ ಹೋಗಿದ್ದು, ಇಬ್ಬರೂ ಸಹೋದರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಟ್ಯಾಂಕರ್ ಗೆ ಬೈಕ್ ತಗುಲಿ ಬೆಂಕಿ ಹತ್ತಿ, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಬಸ್ಸಿಗೆ ಬೆಂಕಿ ತಗುಲಿದ ತಕ್ಷಣ ಪ್ರಯಾಣಿಕರು ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಸ್ಥಳಕ್ಕೆ ಶಿವಮೊಗ್ಗ ಎಸ್‍ಪಿ ಅಭಿನವ್ ಖರೆ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.