Tag: Naming

  • Breaking- ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಸಿಎಂ ಒಪ್ಪಿಗೆ

    Breaking- ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಸಿಎಂ ಒಪ್ಪಿಗೆ

    ನ್ನಡದ ಹೆಸರಾಂತ ನಟ ಅಂಬರೀಶ್ (Ambarish) ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ (Race Course) ರಸ್ತೆಗೆ (Road) ಇಡಲು ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಒಪ್ಪಿಗೆ ನೀಡಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಟ್ವೀಟ್ ಮಾಡಿದ್ದಾರೆ. ಇದೇ ವಾರದಲ್ಲೇ ಹೆಸರು ಇಡುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡುವಂತೆ ಸರಕಾರಕ್ಕೆ ಮನವಿ ಮಾಡಿತ್ತು. ಮಂಡಳಿಯ ಮನವಿಗೆ ಸ್ಪಂದಿಸಿರುವ ಸರಕಾರ ಇದೇ ವಾರದಲ್ಲೇ ಹೆಸರು ಇಡುವ ಒಪ್ಪಿಗೆ ಕೂಡ ನೀಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಹಲವು ದಿನಗಳ ಬೇಡಿಕೆ ಈ ಮೂಲಕ ಈಡೇರಿದಂತಾಗಿದೆ.

    ಕನ್ನಡ ಚಿತ್ರ ಜಗತ್ತಿಗೆ ಅಂಬರೀಶ್ ಕೊಟ್ಟಿರುವ ಕೊಡುಗೆ ಅಪಾರ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸಾಕಷ್ಟು ಸಹಾಯವನ್ನೂ ಅಂಬರೀಶ್ ಮಾಡಿದ್ದಾರೆ. ರಾಜಕಾರಣಿಯಾಗಿಯೂ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಈ ಎಲ್ಲ ಸೇವೆಯನ್ನು ಪರಿಗಣಿಸಿರುವ ಸರಕಾರ ರೇಸ್ ಕೋರ್ಸ್ ರಸ್ತೆಗೆ ಹೆಸರು ಇಡಲು ಒಪ್ಪಿಗೆ ನೀಡಿದೆ.

    ಅಷ್ಟೇ ಅಲ್ಲದೇ, ಅಂಬರೀಶ್ ಸ್ಮಾರಕದ ಕೆಲಸ ಕೂಡ ಬಹುತೇಕ ಮುಗಿದಿದ್ದು, ಅತೀ ಶೀಘ್ರದಲ್ಲೇ ಸ್ಮಾರಕದ ಲೋಕಾರ್ಪಣೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕವು ಹಲವು ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ. ಡಾ.ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲೇ ಅಂಬರೀಶ್ ಸ್ಮಾರಕ ಕೂಡ ತಲೆಯೆತ್ತಿದೆ.

  • ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

    ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

    ತುಮಕೂರು: ತಮ್ಮ ಅಭಿಮಾನಿಯ ಒತ್ತಾಸೆ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಹೆಸರನ್ನೇ ಮಗುವಿಗೆ ನಾಮಕರಣ ಮಾಡಿರುವ ಅಪರೂಪದ ಪ್ರಸಂಗ ನಡೆದಿದೆ.

    ಭಾನುವಾರ ತುಮಕೂರಿನ ಬಾಲಭವನದಲ್ಲಿ ನಡೆದ ಗ್ರಂಥಾವಲೋಕನ ಸಂಕೀರ್ಣ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಮಗುವಿಗೆ ನಾಮಕರಣ ಮಾಡಿದ್ದಾರೆ.

    ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿಯ ತಿಪ್ಪಾಪುರ ಗ್ರಾಮದ ಅಭಿಮಾನಿ ಗಂಗಾಧರಯ್ಯ ತಮ್ಮ ಮಗುವಿಗೆ ಸಿದ್ದರಾಮಯ್ಯ ಅವರಿಂದ ನಾಮಕರಣ ಮಾಡಿಸಬೇಕೆಂದು ಬಹು ದಿನಗಳಿಂದ ಆಸೆ ಪಟ್ಟಿದ್ದರು. ಭಾನುವಾರ ಸಿದ್ದರಾಮಯ್ಯ ತುಮಕೂರಿಗೆ ಆಗಮಿಸುತ್ತಾರೆ ಎಂದು ತಿಳಿದ ಗಂಗಾಧರಯ್ಯ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಕೊರೊನಾ BA.4 ಮತ್ತು BA.5 ತಳಿ ದೃಢ

    ಅಭಿಮಾನಿ ಗಂಗಾಧರಯ್ಯ ಸಂವಾದದ ಮಧ್ಯೆಯೇ ತಮ್ಮ ಮಗುವಿಗೆ ಹೆಸರು ಇಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ನಾಮಕರಣ ಮಾಡಿದರು.

    ತಮ್ಮ ಅಭಿಮಾನಿಯ ಒತ್ತಾಸೆಯ ಮೇರೆಗೆ ಸಿದ್ದರಾಮಯ್ಯ ಮಗುವಿಗೆ ತಮ್ಮ ಹೆಸರನ್ನೇ ಇಟ್ಟರು. ಮಾಜಿ ಶಾಸಕ ಕೆ.ಎನ್. ರಾಜಣ್ಣ, ವೈಎಸ್‌ವಿ ದತ್ತ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಸಿದ್ದರಾಮಯ್ಯ ನಾಮಕರಣ ಮಾಡಿದ್ದು, ಬಳಿಕ ಮಗುವಿಗೆ ಉಡುಗೊರೆ ನೀಡಿದರು. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ

     

  • ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

    ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

    ಕೊಪ್ಪಳ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿ ಮೇಲಿನ ತಮ್ಮ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

    ಜಿಲ್ಲೆಯ ನೂತನ ಕುಕನೂರು ತಾಲೂಕಿನ ದ್ಯಾಂಪುರದ ನಿವಾಸಿಯಾಗಿರುವ ರೈತ ಮಂಜುನಾಥ ಅವರು ತಮ್ಮ ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತವಾಗಿ ಬುಧವಾರ ಬಂಧು-ಬಾಂಧವರ ಸಮ್ಮುಖದಲ್ಲಿ ನಾಮಕರಣ ಮಾಡಿದ್ದಾರೆ. ಮಂಜುನಾಥ ಹಾಗೂ ನೇತ್ರಾವತಿ ದಂಪತಿಗೆ ಜನಿಸಿರುವ ಮೊದಲ ಗಂಡು ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕ ಅವರು ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಿದ್ದರು. ಇಂತಹ ಅನೇಕ ಯೋಜನೆಗಳನ್ನು ಮೆಚ್ಚಿಕೊಂಡ ಮಂಜುನಾಥ ಅಂದಿನಿಂದ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಹೀಗಾಗಿ ತಮ್ಮ ನಾಯಕನ ಬಗೆಗಿನ ಅಭಿಮಾನವನ್ನು ಯಾವ ರೀತಿ ವ್ಯಕ್ತಪಡಿಸಬೇಕು ಎಂದುಕೊಂಡಾಗ ತಮಗೆ ಜನಿಸಿದ ಮೊದಲ ಗಂಡು ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರಿಡಲು ನಿರ್ಧರಿಸಿದ್ದಾರೆ.

    ಅದರಂತೆ ಬುಧವಾರ ತಮ್ಮ ಮನೆಯಲ್ಲಿ ನಾಮಕರಣ ಕಾರ್ಯಕ್ರಮವನ್ನು ಬಂಧು-ಬಾಂಧವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಏರ್ಪಡಿಸಿ ಮಗುವನ್ನು ತೊಟ್ಟಿಲಿಗೆ ಹಾಕಿದ್ದಾರೆ. ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜನಪರ ಕಾಳಜಿ, ಯೋಜನೆಗಳನ್ನು ಮೆಚ್ಚಿ ಅವರ ಕಟ್ಟಾ ಅಭಿಮಾನಿಯಾಗಿರುವೆ. ಹೀಗಾಗಿ ಅವರ ಹೆಸರನ್ನು ನನ್ನ ಮಗನಿಗೆ ನಾಮಕರಣ ಮಾಡಿದ್ದೇನೆ ಎಂದು ಮಗುವಿನ ತಂದೆ ಮಂಜುನಾಥ ಅವರು ತಿಳಿಸಿದರು.

  • ಯಲಹಂಕ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆ

    ಯಲಹಂಕ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆ

    – ಬಿಗಿ ಭದ್ರತೆಯಲ್ಲಿ ನಡೆಯಿತು ಕಾರ್ಯಕ್ರಮ

    ಬೆಂಗಳೂರು: ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನು ನಾಮಕರಣ ಮಾಡಿದೆ.

    ಇಂದು ನಾಮಕರಣದ ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪನವರು ಉದ್ಘಾಟನೆ ಮಾಡಿದ್ದಾರೆ. ಯಲಹಂಕದ ಡೈರಿ ಸರ್ಕಲ್ ಬಳಿ ಇರುವ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರನ್ನು ಇಡಲಾಗಿದೆ. 388.35 ಮೀಟರ್ ಉದ್ದದ ಈ ಮೇಲ್ಸೇತುವೆಯನ್ನು ಬಿಬಿಎಂಪಿಯಿಂದ 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

    ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಕಾಂಗ್ರೆಸ್, ಜೆಡಿಎಸ್ ವಿರೋಧಿಸಿತ್ತು. ಹೀಗಾಗಿ ಯಾವುದೇ ಪ್ರತಿಭಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಸ್‍ಆರ್ ವಿಶ್ವನಾಥ್, ಸಚಿವರಾದ ಸಿಟಿ ರವಿ, ಡಿಸಿಎಂ ಅಶ್ವಥ್ ನಾರಾಣ್, ಗೃಹ ಸಚಿವ ಬಸವರಾಜ್ ಬೊಮ್ಮಯಿ ಮತ್ತು ಬೈರತಿ ಬಸವರಾಜು ಉಪಸ್ಥಿತರಿದ್ದರು.

    ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ಸರ್ಕಾರ ಈ ಹಿಂದೆಯೇ ಮುಂದಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆ ಸರ್ಕಾರ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಿತ್ತು. ಮೇಲ್ಸೇತುವೆಗೆ ಸಾವರ್ಕರ್ ಹೆಸರು ಬೇಡ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು.

  • ಮಗನ ನಾಮಕರಣ ಸಂಭ್ರಮ- ಹೆಸರಿನ ಅರ್ಥ ತಿಳಿಸಿದ ಶ್ವೇತಾ

    ಮಗನ ನಾಮಕರಣ ಸಂಭ್ರಮ- ಹೆಸರಿನ ಅರ್ಥ ತಿಳಿಸಿದ ಶ್ವೇತಾ

    ಬೆಂಗಳೂರು: ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚೆಂಗಪ್ಪ ಅವರು ತಮ್ಮ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ.

    ಶ್ವೇತಾ ಅವರು ತಮ್ಮ ಮಗನಿಗೆ ಜಿಯಾನ್ ಅಯ್ಯಪ್ಪ ಎಂಬ ಹೆಸರಿಟ್ಟಿದ್ದಾರೆ. ಕೊಡಗಿನ ಇಗ್ಗುಟ್ಟಪ್ಪ ದೇವಸ್ಥಾನದಲ್ಲಿ ಮಗನಿಗೆ ನಾಮಕರಣವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ವೇತಾ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಮಗನ ನಾಮಕರಣದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಕೊಡಗಿನ ಉಡುಪನ್ನು ಧರಿಸಿಕೊಂಡು ಪತಿ ಮತ್ತು ಮಗನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ. ಅಭಿಮಾನಿಗಳು ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ಕೇಳಿದ್ದರು. ಹೀಗಾಗಿ ತಮ್ಮ ಪುತ್ರನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ.

    ಜಿಯಾನ್ ಎಂದರೆ “ಯಾವಾಗಲೂ ಸಂತೋಷದಿಂದ ಇರುವವರು ಮತ್ತು ಸಂತೋಷವನ್ನು ಹರಡುವ ವ್ಯಕ್ತಿ”. ಅಯ್ಯಪ್ಪ ಎಂಬುದು ಅವರ ಮತ್ತು ಪತಿಯ ಸರ್ ನೇಮ್ ಆಗಿದೆ.

    https://www.instagram.com/p/B8GhHQ8DMkw/

    ಶ್ವೇತಾ ಅವರು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ಮಗನಿಗೆ ಕೊಡಗಿನ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿದ್ದರು.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದರು.