Tag: Name

  • ಹೆಣ್ಣು ಮಗುವಿಗೆ ವೀರಯೋಧನ ಹೆಸರಿಟ್ಟು ಅಭಿಮಾನ ಮೆರೆದ ದಂಪತಿ!

    ಹೆಣ್ಣು ಮಗುವಿಗೆ ವೀರಯೋಧನ ಹೆಸರಿಟ್ಟು ಅಭಿಮಾನ ಮೆರೆದ ದಂಪತಿ!

    ಬಾಗಲಕೋಟೆ: ಇಷ್ಟು ದಿನ ವೀರ ಯೋಧ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರನ್ನು ಅಭಿಮಾನದಿಂದ ಗಂಡು ಮಕ್ಕಳಿಗೆ ಇಡುವುದು ಟ್ರೆಂಡ್ ಆಗಿತ್ತು. ಆದ್ರೆ ಈಗ ಹೆಣ್ಣು ಮಗುವೊಂದಕ್ಕೂ ಕೂಡ ಹೆತ್ತವರು ವೀರ ಯೋಧನ ಹೆಸರನ್ನು ನಾಮಕರಣ ಮಾಡಿದ್ದಾರೆ.

    ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ ಅಭಿನಂದನ್ ಅವರ ಮೀಸೆ, ಹೇರ್ ಸ್ಟೈಲ್, ಅಷ್ಟೇ ಏಕೆ ಸ್ವತಃ ಅಭಿನಂದನ್ ಅವರ ಹೆಸರೇ ಫೇಮಸ್ ಆಗಿಬಿಟ್ಟಿದೆ. ಅಲ್ಲದೆ ಇಷ್ಟು ದಿನ ಬರೀ ಗಂಡು ಮಗುವಿಗೆ ಮಾತ್ರ ಅಭಿನಂದನ್ ಅಂತ ಅಭಿಮಾನದಿಂದ ಹೆತ್ತವರು ಹೆಸರಿಡುತ್ತಿದ್ದರು. ಆದ್ರೆ ಬಾಗಲಕೋಟೆ ಜಿಲ್ಲೆಯ ಇಳಕಲ್‍ನ ನಗರ ಸಭೆ ಮಾಜಿ ಕಮೀಶನರ್ ಆಗಿದ್ದ ಅರವಿಂದ್ ಜಮಖಂಡಿ ದಂಪತಿ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಅಭಿನಂದನಾ’ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ:14 ದಿನದ ಮಗುವಿಗೆ ಅಭಿನಂದನ್ ಹೆಸರನ್ನಿಟ್ಟ ದಂಪತಿ!

    ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಗ್ರಾಮದವರಾದ ಅರವಿಂದ್ ಜಮಖಂಡಿ ಸದ್ಯ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈರಿ ರಾಷ್ಟ್ರ ಪಾಕಿಸ್ಥಾನದಿಂದ ಸುರಕ್ಷಿತವಾಗಿ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ಮೇಲಿನ ಅಭಿಮಾನದಿಂದ, ಫೆಬ್ರವರಿ 11 ರಂದು ಜನಿಸಿದ ತಮ್ಮ ಮೂರನೇ ಮಗಳಿಗೆ ಅಭಿನಂದನಾ ಎಂಬ ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಕೊಪ್ಪಳ: ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳುತ್ತಿದ್ದಂತೆಯೇ ಇದೀಗ ವೀರಪುತ್ರನ ಹೆಸರನ್ನು ಹುಟ್ಟಿದ ಮಕ್ಕಳಿಗೆ ಇಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳದ ಮಗುವಿಗೆ ಕೂಡ ಅಭಿನಂದನ್ ಹೆಸರನ್ನು ನಾಮಕರಣ ಮಾಡಲಾಗಿದೆ.

    ಹೌದು. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಂಪತಿ ವಿಂಗ್ ಕಮಾಂಡರ್ ಅಭಿನಂದನ್ ಗೌರವಾರ್ಥ ನಾಮಕರಣ ಮಾಡಿದ್ದಾರೆ. ಮಹಾಂತೇಶ್ ಶೆಟ್ಟರ್ ಹಾಗೂ ಶಾಂತಾ ಶೆಟ್ಟರ್ ದಂಪತಿ ತಮ್ಮ ಪುತ್ರನಿಗೆ ಅಭಿನಂದನ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ದಂಪತಿ ಈ ಮುಂಚೆ ತಮ್ಮ ಪುತ್ರನಿಗೆ ಅಥರ್ವ ಅಥವಾ ಅಭಿನವ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದರು. ಆದ್ರೆ ಇತ್ತೀಚೆಗೆ ಅಭಿನಂದನ್ ಮಾಡಿದ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮೂರು ತಿಂಗಳ ಗಂಡುಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ಪಾಕ್ ಮೇಲೆ ಏರ್‌ಸ್ಟ್ರೈಕ್- ಮಗುವಿಗೆ `ಮಿರಾಜ್ ಸಿಂಗ್’ ಹೆಸರಿಟ್ಟ ರಾಜಸ್ಥಾನ ದಂಪತಿ..!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ಜೈಪುರ: ಪೈಲಟ್ ಮಿಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ಕಾಲಿಟ್ಟ ದಿನದಂದೇ ಹುಟ್ಟಿದ ಮಗುವಿಗೆ ದಂಪತಿ ಅಭಿನಂದನ್ ಹೆಸರನ್ನಿಟ್ಟು ಗೌರವ ಸಲ್ಲಿಸಿದ್ದಾರೆ.

    ಅಭಿನಂದನ್ ಅವರ ಬಗ್ಗೆ ದೇಶಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ದಂಪತಿ ತಮ್ಮ ಗಂಡು ಮಗುವಿಗೆ ಅಭಿನಂದನ್ ಎಂದು ಹೆಸರಿಡುವ ಮೂಲಕ ಮಿಗ್ ಕಮಾಂಡರ್ ಗೆ  ಗೌರವ ಸಲ್ಲಿಸಿದ್ದಾರೆ. ಈ ಕುಟುಂಬವು ಅಲ್ವಾರ್ ಕಿಶನ್‍ಗಢ್ ನಲ್ಲಿ ನೆಲೆಸಿದೆ.

    ನನ್ನ ಸೊಸೆ ಶುಕ್ರವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ವಾಯಸೇನೆಯ ಪೈಲಟ್ ಗೌರವರ್ಥವಾಗಿ ಅಭಿನಂದನ್ ಎಂದು ಹೆಸರಿಟ್ಟಿದ್ದೇವೆ. ನಮ್ಮ ಪೈಲಟ್ ಬಗ್ಗೆ ನಮಗೆ ಹೆಮ್ಮೆ ಇದೆ. ಹೀಗಾಗಿ ಅವರ ಹೆಸರನ್ನು ನಾವು ಮಗುವಿಗೆ ನಾಮಕರಣ ಮಾಡಿದ್ದೇವೆ ಎಂದು ಮಗುವಿನ ಅಜ್ಜ ಜಾನೇಶ್ ಭೂತನಿ ಅವರು ಹೇಳಿದ್ದಾರೆ.

    ಮಿಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಸಂದರ್ಭದಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಬಗ್ಗೆ ನನ್ನ ಸೊಸೆ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಟಿವಿ ನೋಡುತ್ತಿದ್ದೆವು. ಈ ವೇಳೆ ನನ್ನ ಸೊಸೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೆವು. ನನ್ನ ಸೊಸೆ ಅಂದಿನ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ್ದರು ಎಂದು ಜಾನೇಶ್ ತಿಳಿಸಿದ್ದಾರೆ.

    ನನ್ನ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡುವ ಮೂಲಕ ನಾವು ಭಾರತೀಯ ಪೈಲಟ್ ನ ಶೌರ್ಯವನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಜೊತೆಗೆ ಮುಂದೆ ನನ್ನ ಮಗನೂ ಒಬ್ಬ ವೀರ ಯೋಧನಾಗಲಿ ಎಂದು ನಾನು ಬಯಸುತ್ತೇನೆ ಎಂದು ತಾಯಿ ಸಪ್ನಾ ದೇವಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಸ್ತಾನಿಗೆ ಮೂರು ಗಂಟು ಹಾಕಿ, ಮೂರು ಮಾತು ಕೊಟ್ಟಿದ್ದ ಬಾಜೀರಾವ್

    ಮಸ್ತಾನಿಗೆ ಮೂರು ಗಂಟು ಹಾಕಿ, ಮೂರು ಮಾತು ಕೊಟ್ಟಿದ್ದ ಬಾಜೀರಾವ್

    – ಮದ್ವೆ ಬಳಿಕ ರಣ್‍ವೀರ್ ಹೆಸ್ರು ಬದಲಿಸಿಕೊಂಡಿದ್ದು ಯಾರಿಗೂ ಗೊತ್ತಾಗೇ ಇಲ್ಲ!

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಪತ್ನಿ ಕೊರಳಿಗೆ ಮೂರು ಗಂಟು ಹಾಕಿ, ಮೂರು ವಚನ ನೀಡಿದ್ದನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗೆ ರಣ್‍ವೀರ್ ಸಿಂಗ್ ಫಿಲಂಫೇರ್ ಮ್ಯಾಗಜೀನ್‍ಗೆ ಸಂರ್ದಶನ ನೀಡಿದ್ದರು. ನನ್ನ ಮದುವೆಯಲ್ಲಿ ಮ್ಯೂಸಿಕ್ ವ್ಯವಸ್ಥೆ ಬಿಟ್ಟರೆ ಬೇರೆ ಯಾವ ಕೆಲಸಗಳನ್ನು ಮಾಡಲಿಲ್ಲ. ಮದುವೆ ನಂತರ ನನ್ನ ಜೀವನ ಸಾಕಷ್ಟು ಬದಲಾಗಿದೆ. ಪತ್ನಿಗೆ ಮೂರು ಮಾತುಗಳನ್ನು ನೀಡಿದ್ದು, ಅವುಗಳನ್ನು ಈಗ ಪಾಲಿಸುತ್ತಿದ್ದೇನೆ. ದೀಪಿಕಾಳ ಯಾವುದೇ ಕರೆಗಳನ್ನು ಮಿಸ್ ಮಾಡಿಕೊಳ್ಳಲ್ಲ, ಮನೆಯಿಂದ ಹೊರಗೆ ತುಂಬಾ ಕಾಲಹರಣ ಮಾಡಲ್ಲ ಮತ್ತು ಊಟ ಮಾಡದೇ ಮನೆಯಿಂದ ಹೊರ ಹೋಗಲ್ಲ ಎಂದು ಹೇಳಿ ನಕ್ಕರು.

    ಈ ವೇಳೆ ಸಂರ್ದಶಕ “ನಿಮ್ಮನ್ನು ರಣ್‍ವೀರ್ ಸಿಂಗ್ ಪಡುಕೋಣೆ ಎಂದು ಕರೆಯಬೇಕೆಂದು ದೀಪಿಕಾ ಹೇಳಿದ್ದಾರೆ” ಎಂದು ಹೇಳಿದ್ದರು. ಆಗ ರಣ್‍ವೀರ್, “ಸರಿ ನಾನು ನನ್ನ ಅಡ್ಡ ಹೆಸರನ್ನು(ಸರ್ ನೇಮ್) ತೆಗೆಯುತ್ತೇನೆ. ನನಗೆ ಈಗ ಹೊಸ ಅಡ್ಡ ಹೆಸರು ಬೇಕು. ನಾನು ಇನ್ನುಂದೆ ಈ ಲೆಜೆಂಡರಿ ಅಡ್ಡ ಹೆಸರನ್ನು ಬಳಸುತ್ತೇನೆ” ಎಂದು ಹೇಳಿದ್ದಾರೆ.

    ಸಂರ್ದಶಕ ರಣ್‍ವೀರ್ ಅವರಿಗೆ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ಆಗ ರಣ್‍ವೀರ್ ನಾನು ಮೊದಲು ದೀಪಿಕಾಳನ್ನು ಅವಾರ್ಡ್ ಕಾರ್ಯಕ್ರಮದಲ್ಲಿ ನೋಡಿದೆ. ಆಕೆ ಯಾವ ಉಡುಪು ಧರಿಸಿದ್ದಳು ಎಂಬುವುದು ನನಗೆ ನೆನಪಿಲ್ಲ. ದೀಪಿಕಾಳನ್ನು ಮೊದಲು ನೋಡಿದ್ದಾಗ ನನಗೆ ಏನು ಅನಿಸಿತು ಎಂದು ಹೇಳಲು ಸಾಧ್ಯವಿಲ್ಲ. ನಾನು ದೀಪಿಕಾಳನ್ನು ಭೇಟಿ ಮಾಡಿದ್ದಾಗ ನಾನು ಆಕೆಯ ಜೊತೆ ಫೋಟೋ ತೆಗೆದುಕೊಂಡು ನನ್ನ ಗೆಳೆಯರಿಗೆ ಕಳುಹಿಸಿದೆ. ನೋಡಿ ನಾನು ಯಾರ ಜೊತೆ ಡೇಟ್‍ಗೆ ಹೋಗಿದ್ದೇನೆ ಎಂದು ತಿಳಿಸಿದ್ದೆ ಎಂದು ಹೇಳಿದರು.

    ಇದೇ ವೇಳೆ ಸಂರ್ದಶಕ ನಿಮ್ಮ ಆರತಕ್ಷತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಎಲ್ಲರೂ ಆಗಮಿಸಿ ನಿಮಗೆ ಶುಭಾಶಯ ಕೋರಲು ಬಂದಿದ್ದರು. ಅವರು ನಿಮ್ಮ ಆರತಕ್ಷತೆಗೆ ಬಂದಿದ್ದು ನಿಮಗೆ ಹೇಗೆ ಅನಿಸಿತು ಎಂದು ಪ್ರಶ್ನಿಸಿದ್ದರು. ಆಗ ರಣ್‍ವೀರ್ ಸಿಂಗ್ ಆರತಕ್ಷತೆಗೆ ಎಲ್ಲರು ಆಗಮಿಸಿದ್ದು ಖುಷಿ ಆಯಿತು. ಅದರಲ್ಲೂ ಅನುಷ್ಕಾ ಶರ್ಮಾ ನನ್ನ ಆರತಕ್ಷತೆಗೆ ಬಂದಿದ್ದು ನನಗೆ ತುಂಬಾನೇ ಸ್ಪೆಷಲ್ ಆಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೋಟೋ ಶೇರ್ ಮಾಡಿ ರೋಹಿತ್ ಶರ್ಮಾರಿಂದ ಮಗಳ ಹೆಸರು ರಿವೀಲ್

    ಫೋಟೋ ಶೇರ್ ಮಾಡಿ ರೋಹಿತ್ ಶರ್ಮಾರಿಂದ ಮಗಳ ಹೆಸರು ರಿವೀಲ್

    ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಶೇರ್ ಮಾಡಿದ್ದು, ಮಗಳಿಗೆ ಸಮೈರಾ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.

    ಪತ್ನಿ ರಿತಿಕಾ ಹಾಗೂ ಮಗಳೊಂದಿಗೆ ಇರುವ ಸುಂದರ ಫೋಟೋವನ್ನು ಟ್ವೀಟ್ ಮಾಡಿ ರೋಹಿತ್ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಮಗಳು ತಮ್ಮ ಕೈ ಬೆರಳು ಹಿಡಿದಿರುವ ಫೊಟೋವನ್ನು ಟ್ವೀಟ್ ಮಾಡಿ 2019ರ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದರು. ಡಿಸೆಂಬರ್ 31 ರಂದು ರಿತಿಕಾ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. 2015 ಡಿಸೆಂಬರ್ ನಲ್ಲಿ ರೋಹಿತ್, ರಿತಿಕಾ ಮದುವೆ ಕಾರ್ಯಕ್ರಮ ನಡೆದಿತ್ತು.

    ಆಸೀಸ್ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದ ರೋಹಿತ್ ಟೂರ್ನಿಯ ನಡುವೆಯೇ ತವರಿಗೆ ಮರಳಿದ್ದರು. ಬಳಿಕ ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಪ್ರಕಟಿಸಿತ್ತು.

    ಜನವರಿ 12 ರಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದ್ದು, ರೋಹಿತ್ ಶರ್ಮಾ ಜನವರಿ 8 ರಂದು ಟೀಂ ಇಂಡಿಯಾ ಬಳಗವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಂದ ಯಶ್-ರಾಧಿಕಾ ಮಗಳಿಗೆ ಹೆಸರಿನ ಸಲಹೆ

    ಅಭಿಮಾನಿಗಳಿಂದ ಯಶ್-ರಾಧಿಕಾ ಮಗಳಿಗೆ ಹೆಸರಿನ ಸಲಹೆ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ರಾಧಿಕಾ ಅವರು ಇಂದು ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಜನಿಸಿದ ಗಂಟೆಗಳಲ್ಲೇ ಅಭಿಮಾನಿಗಳು ಅವರ ಮಗುವಿಗೆ ಹೆಸರಿನ ಸಲಹೆಯನ್ನು ನೀಡುತ್ತಿದ್ದಾರೆ.

    ನಟ ಯಶ್ ತಂದೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹೆಸರಿನ ಸಲಹೆಯನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ‘ಯಶಿಕಾ’ ಎಂದು ನಾಮಕರಣ ಮಾಡಿ ಅಂತ ಕಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ನಟ ಯಶ್ ಅವರ ಮೊದಲ ಪದ ಮತ್ತು ರಾಧಿಕಾ ಅವರ ಕೊನೆಯ ಪದವನ್ನು ತೆಗೆದುಕೊಂಡು ಅವರ ಮಗಳಿಗೆ ಹೆಸರಿಡುವಂತೆ ಸೂಚಿಸಿದ್ದಾರೆ. ಅಪ್ಪನಿಂದ ಯಶ್ ಹಾಗೂ ಅಮ್ಮ ರಾಧಿಕಾರಿಂದ ಕೊನೆಯ ಪದ ‘ಕಾ’ ವನ್ನು ತೆಗೆದುಕೊಂಡು ‘ಯಶಿಕಾ’ ಎಂದು ಹೆಸರನ್ನು ಅಭಿಮಾನಿ ಸೂಚಿಸಿದ್ದಾರೆ.

    ವೈದ್ಯರು ಡಿಸೆಂಬರ್ 10 ರಂದು ಹೆರಿಗೆಯ ದಿನಾಂಕವನ್ನು ಸೂಚಿಸಿದ್ದರು. ಆದರೆ ಇಂದು ಬೆಳಗ್ಗೆ ನಗರದ ಆಸ್ಪತ್ರೆಯಲ್ಲಿ 6.10ಕ್ಕೆ ರಾಧಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ ಮನೆಗೆ ಭಾಗ್ಯಲಕ್ಷ್ಮಿ ಬಂದಿದ್ದಾಳೆ ಎಂದು ಕುಟುಂಬಸ್ಥರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಕೂಡ ಯಶ್ ತಮಗೆ ಹೆಣ್ಣು ಮಗು ಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ ನಟ ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

    ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

    ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಗರಗಳ ಹೆಸರನ್ನು ಬದಲಾಯಿಸುತ್ತಿರುವುದಕ್ಕೆ ಖ್ಯಾತ ಇತಿಹಾಸಕಾರ ಹಾಗೂ ಆಲೀಗಢ ಮುಸ್ಲಿಂ ವಿವಿಯ ಗೌರವ ಪ್ರೊಫೆಸರ್ ಇರ್ಫಾನ್ ಹಬೀಬ್ ವ್ಯಂಗ್ಯವಾಡಿದ್ದಾರೆ.

    ಆಗ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಹೆಸರಿನಲ್ಲಿರುವ ಶಾ ಎನ್ನುವ ಅಕ್ಷರ ಪರ್ಶಿಯನ್ ಮೂಲದ್ದು, ಅದು ಗುಜರಾತಿಗೆ ಸೇರಿದ್ದಲ್ಲ. ಹೀಗಾಗಿ ಅವರ ಹೆಸರನ್ನು ಮೊದಲು ಬದಲಾಯಿಸುವ ಕುರಿತು ಬಿಜೆಪಿ ಚಿಂತಿಸಲಿ. ಅಲ್ಲದೇ ಗುಜರಾತ್ ಹೆಸರು ಕೂಡ ಪರ್ಶಿಯನ್ ಮೂಲದ್ದು, ಇದನ್ನು ಗುಜರಾತ್ರ ಎಂದು ಕರೆಯಲಾಗುತ್ತಿತ್ತು. ಇದನ್ನೂ ಬಿಜೆಪಿಯವರು ಬದಲಿಸಬೇಕೆಂದು ಲೇವಡಿ ಮಾಡಿದ್ರು.

    ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಹಾನಗರಗಳ ಹೆಸರುಗಳನ್ನು ಬದಲಾವಣೆಯ ಮಾಡುವ ಹುಚ್ಚನ್ನು ಬೆಳೆಸಿಕೊಂಡಿದ್ದಾರೆ. ಇದು ಆರ್‍ಎಸ್‍ಎಸ್‍ನ ಹಿಂದುತ್ವ ನೀತಿಗೆ ಅನುಗುಣವಾಗಿದೆ. ಅಲ್ಲದೇ ನೆರೆಯ ಪಾಕಿಸ್ತಾನದಲ್ಲಿ ಇಸ್ಲಾಮಿಕ್‍ಗೆ ಸೇರಿಲ್ಲದವನ್ನೆಲ್ಲಾ ತೆಗೆದು ಹಾಕಿದ್ದರು. ಇಲ್ಲಿಯೂ ಸಹ ಅದೇರೀತಿ ಬಿಜೆಪಿ ಹಾಗೂ ಬಲಪಂಥೀಯ ಬೆಂಬಲಿಗರು ಹಿಂದೂಯೇತರ ಹೆಸರುಗಳನ್ನು, ಅದರಲ್ಲು ಪ್ರಮುಖವಾಗಿ ಇಸ್ಲಾಮಿಕ್ ಮೂಲದ ಹೆಸರುಗಳನ್ನು ಬದಲಿಸುತ್ತಿದ್ದಾರೆ ಎಂದು ಟೀಕಿಸಿದರು.

    ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಇರುವ ಆಗ್ರಾ ನಗರವನ್ನು ಅಗ್ರವನ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಆಗ್ರಹಿಸಿದ್ದರು. ಇದಲ್ಲದೇ ಯೋಗಿ ಆದಿತ್ಯನಾಥ್ ರಾಜ್ಯದ ಮಹಾನಗರಗಳ ಹೆಸರನ್ನು ಬದಲಾವಣೆ ಮಾಡಿದ್ದರು. ಹೀಗಾಗಿ ಹಬೀಬ್ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

    ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

    ಮೈಸೂರು: ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದಕ್ಕೆ ಕಾರ್ಯಕ್ರಮದ ಮಧ್ಯೆಯೇ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೊರನಡೆದಿದ್ದಾರೆ.

    ನಗರದ ಮಾನಸ ಗಂಗೋತ್ರಿ ಕ್ಯಾಂಪಸ್‍ನಲ್ಲಿ ಗಾಂಧಿ ಕುರಿತ ಸಿಮೆಂಟ್ ಕಲಾಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಸಚಿವರು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

    ಇದಾದ ನಂತರ ಕ್ಯಾಂಪಸ್ ಆವರಣದಲ್ಲಿದ್ದ ಕಲಾಕೃತಿಗಳನ್ನು ಉದ್ಘಾಟನೆ ಮಾಡಿ, ಅಧಿಕಾರಿಗಳನ್ನು ಬೈಯುತ್ತಾ ವೇದಿಕೆ ಕಾರ್ಯಕ್ರಮಕ್ಕೆ ಹಾಜರಾಗದೇ ತೆರಳಿದರು. ಈ ವೇಳೆ ಸ್ಥಳದಲ್ಲೇ ಇದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮಕ್ಕೆ ಬಾರಯ್ಯ ಎಂದು ಕರೆದರು. ಇಲ್ಲ ಇಲ್ಲ ನನಗೆ ಬೇರೆ ಕಾರ್ಯಕ್ರಮವಿದೆ ಎನ್ನುತ್ತಾ ಸಾ.ರಾ.ಮಹೇಶ್ ಹೊರಟು ಹೋದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಸರು ಬದಲಾಯಿಸಿಕೊಂಡ ಪುಟ್ಟಗೌರಿ ಮದುವೆ ನಾಯಕ ರಕ್ಷಿತ್

    ಹೆಸರು ಬದಲಾಯಿಸಿಕೊಂಡ ಪುಟ್ಟಗೌರಿ ಮದುವೆ ನಾಯಕ ರಕ್ಷಿತ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ರಕ್ಷಿತ್ ಈಗ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡುತ್ತಿದ್ದಾರೆ.

    ಮಹೇಶ ಪಾತ್ರಧಾರಿಯ ರಕ್ಷಿತ್ ಈಗ ರಕ್ಷ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ರಕ್ಷಿತ್ ಶೆಟ್ಟಿ ಇರುವುದರ ಕಾರಣ ಅವರು ತಮ್ಮ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದಾರೆ.

    8ಎಂಎಂ ಚಿತ್ರದ ನಿರ್ದೇಶಕರಾದ ಹರಿಕೃಷ್ಣ ರಕ್ಷ್ ಅವರ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ರೆಡ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಕ್ಷ್ ಹ್ಯಾಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷ್‍ಗೆ ನಾಯಕಿಯಾಗಿ ಸೋನು ಗೌಡ ಮಿಲಿಟರಿ ಆಫಿಸರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

    ಸದ್ಯ ಶುಕ್ರವಾರ ರೆಡ್ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲದೇ ಈ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮತ್ತೊಬ್ಬ ನಾಯಕಿ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಸರು ಬದಲಾಯಿಸಿಕೊಂಡ ಟಗರು ಪುಟ್ಟಿ

    ಹೆಸರು ಬದಲಾಯಿಸಿಕೊಂಡ ಟಗರು ಪುಟ್ಟಿ

    ಬೆಂಗಳೂರು: ನಟ-ನಟಿಯರು ಸ್ಟಾರ್ ಆದ ಮೇಲೆ ಹೆಸರು ಬದಲಾಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈಗ ಕೆಂಡಸಂಪಿಗೆಯ ನಟಿ ಮಾನ್ವಿತಾ ಹರೀಶ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ನಟಿ ಮಾನ್ವಿತಾ ಹರೀಶ್ ಅವರು ಮಾನ್ವಿತಾ ಕಾಮತ್ ಎಂದು ಬದಲಾಯಿಸಿಕೊಂಡಿದ್ದಾರೆ. ತನ್ನ ಟ್ವಿಟ್ಟರ್, ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮಾನ್ವಿತಾ ಹರೀಶ್ ಬದಲಾಗಿ ಮಾನ್ವಿತಾ ಕಾಮತ್ ಎಂದು ಬದಲಾಗಿದೆ.

    ಮಾನ್ವಿತಾ ಇತ್ತಿಚೇಗೆ ಹೈದರಾಬಾದ್ ನಲ್ಲಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿಂದ ಬಂದ ನಂತರ ಹೆಸರು ಬದಲಾಯಿಸಿಕೊಂಡಿದ್ದರು. ಇದರಿಂದ ಅಭಿಮಾನಿಗಳು ಮಾನ್ವಿತಾ ಅವರು ಮದುವೆಯಾಗಿದ್ದಾರೆ ಅದಕ್ಕೆ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ ಮಾನ್ವಿತಾ ಅವರ ತಂದೆಯ ಹೆಸರನ್ನೇ ತನ್ನ ಹೆಸರಿನ ಕೊನೆಯಲ್ಲಿ ಹಾಕಿಕೊಂಡಿದ್ದಾರೆ.

    ಮಾನ್ವಿತಾ ತಂದೆಯ ಪೂರ್ಣ ಹೆಸರು ಹರೀಶ್ ಕಾಮತ್. ಇದುವರೆಗೂ ಮಾನ್ವಿತಾ ತಮ್ಮ ತಂದೆಯ ಹೆಸರನ್ನು ತನ್ನ ಹೆಸರಿನ ಕೊನೆಯಲ್ಲಿ ಇಟ್ಟುಕೊಂಡು ಮಾನ್ವಿತಾ ಹರೀಶ್ ಎಂದು ಗುರುತಿಸಿಕೊಂಡಿದ್ದರು. ಈಗ ಕಾಮತ್ ಮಾನ್ವಿತಾ ಅವರ ಕುಟುಂಬದ ಸರ್ ನೇಮ್ ಆಗಿದ್ದು, ಈಗ ತಂದೆಯ ಹೆಸರು ಬದಲಿಗೆ ಕಾಮತ್ ಎಂದು ಸೇರಿಸಿಕೊಂಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಾನ್ವಿತಾ ಹರೀಶ್ ಬದಲಿಗೆ ಮಾನ್ವಿತಾ ಕಾಮತ್ ಎಂದು ಗುರುತಿಸಿಕೊಳ್ಳುತ್ತಾರೆ.

    ಮಾನ್ವಿತಾ ಅವರು ‘ಕೆಂಡಸಂಪಿಗೆ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಲಂಡನ್ ನಲ್ಲಿ ನಡೆಯುತ್ತಿದೆ. ಮಾನ್ವಿತಾ ನಟ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv