ಉಡುಪಿ: ಹಿಜಬ್ ಹೋರಾಟ ಒಂದೊಂದು ಕಡೆ ಒಂದೊಂದು ಲೆವೆಲ್ಲಿಗೆ ಹೋಗುತ್ತಿದೆ. ಶಿರವಸ್ತ್ರದಿಂದ ಆರಂಭವಾಗಿ ಧಾರ್ಮಿಕ ಕೇಂದ್ರದ ವ್ಯಾಪಾರ, ಅಲ್ಲಿಂದ ಹಲಾಲ್ ಗೆ ಸುತ್ತುವರಿದು ಇದೀಗ ಅಂಗಡಿಗಳ ಹೆಸರು ಬದಲಾವಣೆ ಮಾಡಿಸುವವರೆಗೆ ಬಂದು ನಿಂತಿದೆ.

ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ಹೋರಾಟ ಒಂದೊಂದೇ ಘರ್ಷಣೆಗಳಿಗೆ ಕಾರಣವಾಗುತ್ತಿದೆ. ಹಿಂದೂ ಸಂಘಟನೆಗಳು ಜಿದ್ದಿಗೆ ಬಿದ್ದಂತೆ ಮುಸ್ಲಿಮರನ್ನು ಕಾಡಲು ಶುರು ಮಾಡಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಫೂಟ್ ವೇರ್ ಅಂಗಡಿಯ ಹೆಸರು ಬದಲಿಸುವಂತೆ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ. ಸಾಲಿಗ್ರಾಮ ಪಟ್ಟಣದ ಮುಖ್ಯರಸ್ತೆಯಲ್ಲಿ ಹಿಂದೂ ದೇವರ ಹಾಗೂ ಪ್ರಸಿದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿರುವ “ಸಾಲಿಗ್ರಾಮ ಫ್ಯಾನ್ಸೀ ಮತ್ತು ಪುಟ್ ವೇರ್” ಹೆಸರು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿದೆ. ಇದನ್ನೂ ಓದಿ: ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ: ಅಖಿಲೇಶ್ ಯಾದವ್

ಅಂಗಡಿ ಮಾಲೀಕ ಹಿಜಬ್ ಸಂಬಂಧಿಸಿದ ಕೋರ್ಟ್ ತೀರ್ಪು ವಿಚಾರದಲ್ಲಿ ಬಂದ್ ಮಾಡಿದ್ದರು. ಮುಸ್ಲಿಂ ಸಮುದಾಯ ನಮ್ಮ ಪವಿತ್ರ ಕ್ಷೇತ್ರದ ಹೆಸರು ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸೆಗುತ್ತಿದ್ದಾರೆ. ವ್ಯಾವಹಾರಿಕಾ ಅಂಗಡಿಯ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ನಡುವೆ ವ್ಯವಹಾರ ಅಸಹಕಾರ ಮುಂದುವರೆದಿದೆ. ಗ್ರಾಮಿಣ ಪ್ರದೇಶಗಳಿಗೂ ವ್ಯಾಪಾರ ಬಹಿಷ್ಕಾರ ಆವರಿಸಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸದಸ್ಯರು ಜಾತ್ರೆ ನಡೆಯುವಲ್ಲೆಲ್ಲಾ ಕರಪತ್ರ, ಬ್ಯಾನರ್ ಹಾಕಿ ವಹಿವಾಟಿಗೆ ತಡೆಯೊಡ್ಡುತ್ತಿದ್ದಾರೆ. ನಾಯಕರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಹೋರಾಟ ಆರಂಭವಾಗಿತ್ತು. ಧಾರ್ಮಿಕ ಕೇಂದ್ರದ ವ್ಯಾಪಾರ ವಹಿವಾಟಿಗೆ ತಡೆ ಬಿದ್ದದ್ದು ಉಡುಪಿಯಲ್ಲೇ. ಆದರೆ ಹಲಾಲ್ ಮತ್ತು ಜಟ್ಕಾ ಕಟ್ ತಿಕ್ಕಾಟ ಈವರೆಗೆ ಉಡುಪಿಯಲ್ಲಿ ಕಾಣಿಕೊಳ್ಳದಿರುವುದು ಕೊಂಚ ನೆಮ್ಮದಿಯ ಸಂಗತಿ. ಇದನ್ನೂ ಓದಿ: ಯುಗಾದಿ ಬಳಿಕ ಜಟ್ಕಾ ಕಟ್‍ಗೆ ಸ್ಪೆಷಲ್ ಕ್ಲಾಸ್..!




























