Tag: Name plate

  • ಜಿ20 ಸಭೆಯಲ್ಲಿ ಮತ್ತೆ ‘ಭಾರತ್’ ನಾಮಸ್ಮರಣೆ – ಪ್ರಧಾನಿ ಆಸನದ ಮುಂದೆ ಭಾರತ್ ಪದ ಬಳಕೆ

    ಜಿ20 ಸಭೆಯಲ್ಲಿ ಮತ್ತೆ ‘ಭಾರತ್’ ನಾಮಸ್ಮರಣೆ – ಪ್ರಧಾನಿ ಆಸನದ ಮುಂದೆ ಭಾರತ್ ಪದ ಬಳಕೆ

    ನವದೆಹಲಿ: ಇಂಡಿಯಾ (India) ಅಥವಾ ಭಾರತ್ (Bharat) ಪದ ಬಳಕೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಜಿ20 ಶೃಂಗಸಭೆಯಲ್ಲಿ (G20 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿನಿಧಿಸುವ ನಾಮಫಲಕದಲ್ಲಿ (Name Plate) ಇಂಡಿಯಾ ಬದಲು ಭಾರತ್ ಎನ್ನುವ ಪದವನ್ನು ಬಳಕೆ ಮಾಡಲಾಗಿದೆ.

    ಜಿ20 ಅಂತರಾಷ್ಟ್ರೀಯ ಸಭೆಯಾಗಿರುವ ಹಿನ್ನೆಲೆ ಸಜಹವಾಗಿ ಇಂಡಿಯಾ ಎನ್ನುವ ಪದ ಬಳಕೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಭಾರತ್ ಎನ್ನುವ ಪದ ಬಳಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಂತಿದೆ. ಇದನ್ನೂ ಓದಿ: ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು: ಮೋದಿ

    ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಏರ್ಪಡಿಸಿರುವ ವಿಶೇಷ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎನ್ನುವ ಪದ ಬಳಕೆ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಕೇಂದ್ರ ಸರ್ಕಾರ ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಬದಲಿಸುವ ನಿರ್ಧಾರ ತೆಗೆದುಕೊಳ್ಳಲಿದ್ದು, ಭಾರತ್ ಎನ್ನುವ ಒಂದೇ ಹೆಸರನ್ನು ಉಳಿಸಿಕೊಳ್ಳಲಿದೆ ಎನ್ನುವ ಚರ್ಚೆ ಶುರುವಾಗಿತ್ತು. ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?

    ಇದಕ್ಕೆ ಪೂರಕ ಎನ್ನುವಂತೆ ಇಂದು ಭಾರತ ಜಿ20 ಸಭೆಯ ಅಧ್ಯಕ್ಷತೆ ವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಆಸಿನರಾಗಿದ್ದ ಕುರ್ಚಿ ಮುಂಭಾಗದಲ್ಲಿ ಇಂಡಿಯಾ ಬದಲು ಭಾರತ್ ಪದ ಬಳಕೆ ಮಾಡಲಾಗಿತ್ತು. ಭಾಷಣ ಅಂತ್ಯವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಈ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ನಾನೊಬ್ಬ ಹೆಮ್ಮೆಯ ಹಿಂದೂ: ರಿಷಿ ಸುನಕ್

    ಸರ್ಕಾರವು ಹಲವಾರು ಅಧಿಕೃತ ಜಿ20 ದಾಖಲೆಗಳಲ್ಲಿ ಭಾರತದೊಂದಿಗೆ ದೇಶಕ್ಕೆ ಸಂವಿಧಾನದಲ್ಲಿ ಬಳಸಲಾದ ‘ಭಾರತ್’ ಎಂಬ ಹೆಸರನ್ನು ಬಳಸಿದೆ. ಇದೊಂದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅಧಿಕೃತ ಮೂಲಗಳು ಹೇಳಿವೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶಾರುಖ್ ಖಾನ್ ಕನಸಿನ ಸೌಧ ‘ಮನ್ನತ್’. ಮುಂಬೈನ ಬಾಂದ್ರಾ ಎನ್ನುವ ದುಬಾರಿ ಪ್ರದೇಶದಲ್ಲಿ ಈ ಮನೆಯಿದ್ದು, ಈ ಮನೆಯಿಂದಲೇ ಸಮುದ್ರವನ್ನು ವೀಕ್ಷಿಸುವಂತೆ ಕಟ್ಟಿದ್ದಾರೆ ಶಾರುಖ್ ಮತ್ತು ಪತ್ನಿ ಗೌರಿ ಖಾನ್. ಬರೋಬ್ಬರಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನ್ನತ್ ಒಂದು ಅರ್ಥದಲ್ಲಿ ಪ್ರವಾಸಿ ತಾಣವೇ ಆಗಿದೆ. ಮುಂಬೈಗೆ ಬಂದವರು ದೂರದಿಂದಲೇ ಮನ್ನತ್ ಕಣ್ಣುತುಂಬಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಇನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮನ್ನತ್ ಸೌಧದಲ್ಲಿ ಅಷ್ಟೇ ಬೆಲೆ ಬಾಳುವ ವಸ್ತುಗಳು ಇವೆ ಎನ್ನುವುದು ಗುಟ್ಟಿನ ಸಂಗತಿ. ಈಗ ಆ ಗುಟ್ಟುಗಳೆಲ್ಲ ಒಂದೊಂದೆ ರಟ್ಟಾಗುತ್ತಿವೆ. ಈ ಮೊದಲು ಮನ್ನತ್ ಮನೆಯಲ್ಲಿರುವ ಟಿವಿ ರೇಟ್ ಬಗ್ಗೆ ಮೊನ್ನೆಯಷ್ಟೇ ಟ್ರೆಂಡ್ ಆಗಿತ್ತು. ಭಾರೀ ದುಬಾರಿಯ ಟಿವಿಗಳನ್ನು ಈ ಮನೆಯಲ್ಲಿ ಅಳವಡಿಸಲಾಗಿದೆಯಂತೆ. ಅದು ಕೋಟಿ ಲೆಕ್ಕದಲ್ಲಿ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಟಿವಿ ನಂತರ ಮನ್ನತ್ ಮನೆಯ ನೇಮ್ ಪ್ಲೇಟ್ ಬಗ್ಗೆಯೂ ಭಾರೀ ಸುದ್ದಿ ಆಗಿತ್ತು. ಬರೋಬ್ಬರಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೇಮ್ ಪ್ಲೇಟ್ ತಯಾರಾಗಿದೆಯಂತೆ. ವಜ್ರದ ಹರಳುಗಳನ್ನು ಈ ನೇಮ್ ಪ್ಲೇಟ್ ನಲ್ಲಿ ಅಳವಡಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ರಾತ್ರಿ ವೇಳ ಫಳಫಳ ಹೊಳೆಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಈಗ ಆ ನೇಮ್ ಪ್ಲೇಟ್ ನಾಪತ್ತೆ ಆಗಿದೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಕಳೆದ ಒಂದು ವಾರದಿಂದ ‘ಮನ್ನತ್’ ಎನ್ನುವ ನೇಮ್ ಪ್ಲೇಟ್ ಮನೆಯ ಮುಂದೆ ಕಾಣಿಸುತ್ತಿಲ್ಲವಂತೆ. ಕಳ್ಳತನವಾಗಿದೆಯಾ? ಅಥವಾ ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಾ? ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ನೇಮ್ ಪ್ಲೇಟ್ ಮಾತ್ರ ಇರಬೇಕಾಗಿದ್ದ ಜಾಗದಲ್ಲಿ ಕಾಣಿಸುತ್ತಿಲ್ಲ ಎನ್ನುವುದು ಲೇಟೆಸ್ಟ್ ಸುದ್ದಿ. ಈ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.  ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಶಾರುಖ್ ಖಾನ್ ಆಪ್ತರು ಹೇಳುವ ಪ್ರಕಾರ, ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಂತೆ. ಅದು ಹೊಸ ನೇಮ್ ಪ್ಲೇಟ್ ಆದ ಕಾರಣ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಅದರಲ್ಲಿ ಅಳವಡಿಸಿದ್ದರಿಂದ, ರಿಪೇರಿಗೆ ಬಂದಿದೆಯಂತೆ. ಅದನ್ನು ಸರಿ ಮಾಡಿಸಿ, ಮತ್ತೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.

  • ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡ ಫಲಕ

    ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡ ಫಲಕ

    ಉಡುಪಿ: ಶ್ರೀಕೃಷ್ಣ ಮಠದಲ್ಲಿ ಇದ್ದ ಕನ್ನಡ ಬೋರ್ಡ್ ಬದಲಿಗೆ ತುಳು ಹಾಗೂ ಸಂಸ್ಕೃತ ಬೋರ್ಡ್ ಅಳವಡಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಉಡುಪಿ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡದ ನಾಮಫಲಕವನ್ನು ಅಳವಡಿಸಲಾಗಿದೆ.

    ಉಡುಪಿ ಕೃಷ್ಣ ಮಠದ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠದ ಕೈಯಲ್ಲಿದೆ ಕರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಮಠವನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಳೆಯ ಬೋರ್ಡ್ ತೆಗೆದು, ಹೊಸ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಕನ್ನಡ ಮಾಯವಾಗಿ ತುಳು ಮತ್ತು ಸಂಸ್ಕೃತ ಪ್ರತ್ಯಕ್ಷವಾಗಿತ್ತು. ಇದು ಕೃಷ್ಣ ಮಠದ ಭಕ್ತರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ನೋವುಂಟು ಮಾಡಿತ್ತು.

    ಇದೀಗ ಕೃಷ್ಣಮಠದ ಮಹಾದ್ವಾರಕ್ಕೆ ಕನ್ನಡದ ನಾಮಫಲಕ ಅಳವಡಿಕೆ ಆಗಿದೆ. ಕೃಷ್ಣ ಮಠ ಮತ್ತು ಅದಮಾರು ಮಠದ ಸಿಬ್ಬಂದಿ ಹೊಸ ನಾಮಫಲಕವನ್ನು ಹಾಕಿದ್ದಾರೆ. ‘ವಿಶ್ವಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಕೃಷ್ಣ ಮಠ ಉಡುಪಿ’ ಎಂದು ಬರೆದಿರುವ ಬೋರ್ಡನ್ನು ಅಳವಡಿಸಲಾಗಿದೆ.

    ಲಕ್ಷದೀಪೋತ್ಸವ ಸಂದರ್ಭ ಕನ್ನಡದ ಬೋರ್ಡ್ ಸಿದ್ಧವಾಗಿರಲಿಲ್ಲ. ಮೊದಲು ರೆಡಿಯಾಗಿದ್ದ ಸಂಸ್ಕೃತ ಮತ್ತು ತುಳುವಿನ ಬೋರ್ಡನ್ನು ಅಳವಡಿಸಿದ್ದೆವು. ಬೋರ್ಡ್ ರಚನೆ ಕಾರ್ಯ ಈಗ ಸಂಪೂರ್ಣವಾಗಿದೆ. ಇದೀಗ ಕನ್ನಡದಲ್ಲಿ ಬರೆದಿರುವ ಬೋರ್ಡ್ ರೆಡಿಯಾಗಿದ್ದು, ಅದನ್ನು ಅಳವಡಿಸುವ ಪ್ರಕ್ರಿಯೆ ನಡೆಸಿದ್ದೇವೆ. ಯಾರಿಗೂ ನೋವು ಮಾಡುವ, ಕನ್ನಡಕ್ಕೆ ಅಗೌರವ ತೋರುವ ಉದ್ದೇಶ ನಮ್ಮದಲ್ಲ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.