Tag: Name

  • ನಿರ್ಮಲಾ ಸೀತಾರಾಮನ್ ಹೆಸರಲ್ಲಿ ವಂಚನೆ – ಠಾಣೆ ಮೆಟ್ಟಿಲೇರಿದ ಮಹಿಳೆಯರು!

    ನಿರ್ಮಲಾ ಸೀತಾರಾಮನ್ ಹೆಸರಲ್ಲಿ ವಂಚನೆ – ಠಾಣೆ ಮೆಟ್ಟಿಲೇರಿದ ಮಹಿಳೆಯರು!

    ಆನೇಕಲ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಹೆಸರು ಬಳಕೆ ಮಾಡಿಕೊಂಡು ಮಹಿಳೆ ಹಾಗೂ ಗ್ಯಾಂಗ್ ವಂಚಿಸಿರುವುದು ಬೆಳಕಿಗೆ ಬಂದಿದೆ.

    ನಕಲಿ ಟ್ರಸ್ಟ್ ಮೂಲಕ ಪವಿತ್ರಾ & ಗ್ಯಾಂಗ್ ವಂಚನೆ ಮಾಡಿದೆ. ಪವಿತ್ರಾ ತಮಿಳುನಾಡಿನ ಹೊಸೂರು ಮೂಲದವಳು. ಸದ್ಯ ಆನೇಕಲ್, ಚಂದಾಪುರ, ಸೂರ್ಯ ನಗರ, ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ಪ್ರಕರಣ ಬಯಲಾಗಿದೆ.

    ಮೋಸ ಮಾಡಿದ್ದು ಹೇಗೆ..?: ನಾವು ಹೊಸೂರಿನಲ್ಲಿ ಟ್ರಸ್ಟ್ ಓಪನ್ ಮಾಡಿದ್ದೇವೆ. ನಮ್ಮ ಟ್ರಸ್ಟ್ ಗೆ ಕೇಂದ್ರ ಸರ್ಕಾರದಿಂದ 17,000 ಕೋಟಿ ರೂ. ಹಣ ಬಂದಿದೆ. ನಿರ್ಮಲಾ ಸೀತಾರಾಮನ್ ಅವರು ನಮಗೆ ವರ್ಗಾವಣೆ ಮಾಡಿದ್ದಾರೆ. ಅಮೆರಿಕದಿಂದಲೇ ನಮ್ಮ ಟ್ರಸ್ಟ್ ಗೆ ಹಣ ಸಂದಾಯ ಆಗಿದೆ. ಆ ಹಣವನ್ನು ನಾವು ಲೋನ್ ಮೂಲಕ ನಿಮಗೆ ಕೊಡುತ್ತೇವೆ. 10 ಲಕ್ಷ ಕೊಟ್ಟರೆ 5 ಲಕ್ಷ ಮಾತ್ರ ವಾಪಸ್ ಕಟ್ಟಬೇಕು. 5 ಲಕ್ಷ ನಿಮಗೆ ಸಬ್ಸಿಡಿಯಾಗಿ ಸಿಗುತ್ತದೆ. ನೀವು ಲೋನ್ ಪಡಿಬೇಕು ಅಂದ್ರೆ ಮುಂಚಿತವಾಗಿ ಹಣ ಕಟ್ಟಬೇಕು. ಈ ರೀತಿ ಹೇಳಿ ನಯವಂಚಕರ ತಂಡ ವಂಚನೆ ಮಾಡಿದೆ. ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರಿ-ವೆಡ್ಡಿಂಗ್ ಶೂಟ್!

    2019 ರಿಂದಲೇ ವಂಚನೆ: ವಂಚಕರ ತಂಡವು ನೂರಾರು ಜನ ಮಹಿಳೆಯರಿಂದ 2019 ರಿಂದ ನಿರಂತರವಾಗಿ ಹಣ ವಸೂಲಿ ಮಾಡಿದೆ. ಮೋಸ ಹೋಗಿರುವ ಮಹಿಳೆಯರು 5 ಸಾವಿರದಿಂದ 25 ಸಾವಿರದವರೆಗೆ ಹಣ ಕಟ್ಟಿದ್ದಾರೆ. ಆದರೆ ಈಗ ಹಣ ಕಟ್ಟಿದವರು ಲೋನ್ ಕೇಳಿದಾಗ ವಂಚಕೀಯ ನಾಟಕ ಬಟಾಬಯಲಾಗಿದ್ದು, ವಂಚನೆಗೆ ಒಳಗಾಗಿರುವ ಮಹಿಳೆಯರು ಕಂಗಾಲಾಗಿದ್ದಾರೆ.

    ಪರಿಚಯ ಅಂತ ಹೇಳಿ ನೂರಾರು ಜನರಿಂದ ಮಹಿಳೆಯರು ಹಣ ಕಟ್ಟಿಸಿದ್ದರು. ಅಕ್ಕ-ಪಕ್ಕದ ಮನೆ ಊರಿನವರಿಂದ ಹಣ ಕಟ್ಟಿಸಿದ್ದ ಮಹಿಳೆಯರಿಗೆ ಇದೀಗ ಆಘಾತವಾಗಿದೆ. ಈಗಾಗಲೇ ಪವಿತ್ರ ಮೇಲೆ ಸೂರ್ಯ ನಗರದಲ್ಲಿ ದೂರು ದಾಖಲಾಗಿದೆ. ಇತ್ತ ಮೋಸ ಹೋದ ಮಹಿಳೆಯರು ಅತ್ತಿಬೆಲೆ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಅಲಿಗಢ ನಗರದ ಹೆಸರು ಹರಿಗಢವಾಗಿ ಬದಲಾಗುತ್ತಾ?

    ಅಲಿಗಢ ನಗರದ ಹೆಸರು ಹರಿಗಢವಾಗಿ ಬದಲಾಗುತ್ತಾ?

    ಲಕ್ನೋ: ಉತ್ತರ ಪ್ರದೇಶದ ಅಲಿಗಢ (Aligarh) ನಗರದ ಹೆಸರು ಹರಿಗಢ(Harigarh) ಎಂದು ಬದಲಾಗುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಅಲಿಗಢ ಮಹಾನಗರ ಪಾಲಿಕೆ (Aligarh Municipal Corporation) ಕೈಗೊಂಡ ನಿರ್ಧಾರದಿಂದ ಈ ಪ್ರಶ್ನೆ ಈಗ ಎದ್ದಿದೆ. ಅಲಿಗಢ ಹೆಸರಿನ ಬದಲು ಹರಿಗಢ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ನಿರ್ಣಯವನ್ನು ಪಾಸ್‌ ಮಾಡಿದೆ. ಮೊಬೈಲಿನಲ್ಲೇ ಲೇಟೆಸ್ಟ್‌ ಸುದ್ದಿ ಓದಲು ಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲಿಗೆ ಸೇರ್ಪಡೆಯಾಗಿಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲ್‌

    ಬಿಜೆಪಿಯ (BJP) ಪಾಲಿಕೆ ಸದಸ್ಯ ಸಂಜಯ್‌ ಪಂಡಿತ್‌ ಮಂಡಿಸಿದ ಪ್ರಸ್ತಾಪವನ್ನು ಪಾಲಿಕೆ ಒಪ್ಪಿಗೆ ಸೂಚಿಸಿದೆ.  ಇದನ್ನೂ ಓದಿ: ಇಸ್ರೇಲ್‌ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ

    ಪಾಲಿಕೆಯಲ್ಲಿ ನಿರ್ಧಾರ ಕೈಗೊಂಡ ಮಾತ್ರಕ್ಕೆ ಹೆಸರು ಬದಲಾಗುವುದಿಲ್ಲ. ಇದು ಮೊದಲ ಹೆಜ್ಜೆಯಾಗಿದ್ದು ರಾಜ್ಯ ಸರ್ಕಾರ ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದ ಬಳಿಕವಷ್ಟೇ ಹೆಸರು ಅಧಿಕೃತವಾಗಿ ಬದಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್‌ ಪ್ರಶಾಂತ್‌ ಸಿಂಘಾಲ್‌, ನಿನ್ನೆ ಸಂಜಯ್‌ ಪಂಡಿತ್‌ ಮಂಡಿಸಿದ ಪ್ರಸ್ತಾಪದ ಬಗ್ಗೆ ಸಭೆ ನಡೆಯಿತು. ಈ ಪ್ರಸ್ತಾಪಕ್ಕೆ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ನಿರ್ಣಯವನ್ನು ನಾವು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಹರಿಗಢ ಹೆಸರನ್ನು ಇಡಲು ಒಪ್ಪಿಗೆ ಸೂಚಿಸಬಹುದು ಎಂಬ ನಂಬಿಕೆಯಿದೆ ಎಂದು ತಿಳಿಸಿದರು.

  • ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಸಾಧಕನ ಹೆಸರನ್ನು ಮಗನಿಗಿಟ್ಟ ಮಸ್ಕ್

    ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಸಾಧಕನ ಹೆಸರನ್ನು ಮಗನಿಗಿಟ್ಟ ಮಸ್ಕ್

    ಲಂಡನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಅವರು ತಮ್ಮ ಮಗನಿಗೆ (Son) ಹೆಸರಾಂತ ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್ ಚಂದ್ರಶೇಖರ್ (S Chandrasekhar) ಅವರ ಹೆಸರನ್ನು ಇಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಬ್ರಿಟನ್‌ನಲ್ಲಿ ನಡೆದ ಗ್ಲೋಬಲ್ ಎಐ ಶೃಂಗಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ವಿಷಯ ಬಹಿರಂಗವಾಗಿದೆ. ಮಸ್ಕ್ ಚಂದ್ರಶೇಖರ್ ಅವರ ಹೆಸರು ಕೇಳಿದಾಗ ತಮ್ಮ ಪುತ್ರನ ಹೆಸರಲ್ಲೂ ಚಂದ್ರಶೇಖರ್ ಇರುವುದಾಗಿ ತಿಳಿಸಿದ್ದಾರೆ. ಮಸ್ಕ್‌ನೊಂದಿಗಿನ ಭೇಟಿಯ ಫೋಟೋವನ್ನು ಎಕ್ಸ್‌ನಲ್ಲಿ ಚಂದ್ರಶೇಖರ್ ಹಂಚಿಕೊಂಡಿದ್ದು, ತಮ್ಮ ಮಗನಿಗೆ ಭಾರತೀಯ ಟ್ವಿಸ್ಟ್‌ನ ಹೆಸರನ್ನು ಇಟ್ಟಿರುವುದನ್ನು ಬಹಿರಂಗಪಡಿಸಿದ್ದಾಗಿ ಹೇಳಿದ್ದಾರೆ.

    ಈ ಬಗ್ಗೆ ಬರೆದಿರುವ ಅವರು, ಎಲೋನ್ ಮಸ್ಕ್ ಮತ್ತು ಶಿವೋನ್ ಜಿಲಿಸ್ ಅವರ ಪುತ್ರನಿಗೆ ‘ಚಂದ್ರಶೇಖರ್’ ಎಂಬ ಮಧ್ಯದ ಹೆಸರನ್ನು ಇಟ್ಟಿರುವುದನ್ನು ಹಂಚಿಕೊಂಡಿದ್ದಾರೆ. ಈ ವಿಶಿಷ್ಟ ಹೆಸರು 1983 ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹೆಸರಾಂತ ನೊಬೆಲ್ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್ ಚಂದ್ರಶೇಖರ್ ಅವರಿಗೆ ಗೌರವವಾಗಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಕೆನಡಾದ ಶಿವನ್ ಆಲಿಸ್ ಜಿಲಿಸ್ ಈ ಮಗುವಿನ ತಾಯಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ಚಂದ್ರಶೇಖರ್ ಅವರು ಬಹಿರಂಗಪಡಿಸಿದ ಈ ವಿಚಾರವನ್ನು ದೃಢಪಡಿಸಿದ ಜಿಲಿಸ್, ಹೌದು, ಇದು ನಿಜ. ನಾವು ಮಗನನ್ನು ಚಿಕ್ಕದಾಗಿ ಶೇಖರ್ ಎಂದು ಕರೆಯುತ್ತೇವೆ. ಆದರೆ ನಮ್ಮ ಮಗನಿಗೆ ಈ ಹೆಸರನ್ನು ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರಿಗೆ ಗೌರವಾರ್ಥವಾಗಿ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಸರು ಬದಲಿಸಿಕೊಂಡ ನಟಿ ಮಾಲಾಶ್ರೀ ಪುತ್ರಿ

    ಹೆಸರು ಬದಲಿಸಿಕೊಂಡ ನಟಿ ಮಾಲಾಶ್ರೀ ಪುತ್ರಿ

    ನಸಿನ ರಾಣಿ ಮಾಲಾಶ್ರೀ (Malashree), ನಿರ್ಮಾಪಕ ರಾಮು (Ramu)ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ (Aradhanaa)  ಎಂದು ಬದಲಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಮಾಲಾಶ್ರೀ ‘ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು (Name) ಆಯ್ಕೆ ಮಾಡಿದ್ದೇವೆ. ಈ ಹೆಸರು ಬರೀ ‘ಕಾಟೇರ’ ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೆ ಆರಾಧನಾ.  ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು’ ಮಾಲಾಶ್ರೀ ವಿನಂತಿಸಿದ್ದಾರೆ.

    ಈಗಾಗಲೇ ಆರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?

    ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ರಾಮು ಅವರ ಸಾಧನೆ ಕೊಡುಗೆ ಅಪಾರ. ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ಆರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ.

     

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

    ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

    ರೋಬ್ಬರಿ ಹನ್ನೊಂದು ವರ್ಷಗಳ ನಂತರ ತಂದೆಯಾಗಿದ್ದಾರೆ ತೆಲುಗು ನಟ ರಾಮ್ ಚರಣ್ (Ram Charan). ಉದ್ದೇಶ ಪೂರ್ವಕವಾಗಿಯೇ ಮಗು ಹೊಂದದಿರಲು ರಾಮ್ ಚರಣ್ ಮತ್ತು ಉಪಾಸನಾ ಸಂಕಲ್ಪ ಮಾಡಿದ್ದರು. ಕುಟುಂಬದವರ ಒತ್ತಡವಿದ್ದರೂ, ತಾವು ಹೊಂದಿದ್ದ ಸಂಕಲ್ಪವನ್ನು ಅವರು ಮುರಿದಿರಲಿಲ್ಲ. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕುಟುಂಬದಲ್ಲಿ ಸಂಭ್ರಮ ಹೆಚ್ಚಿಸಿದ್ದಾರೆ ಉಪಾಸನಾ.

    ಇಂದು ಮಗುವನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ ರಾಮ್ ಚರಣ್. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ್ ಚರಣ್, ‘ಮಗುವನ್ನು ಮೊದಲ ಬಾರಿಗೆ ನೋಡಿದಾಗ ಆದ ಆನಂದವನ್ನು ಹೇಳಲು ಕಷ್ಟ. ಹೇಳಿದರೆ, ಅದು ಕೃತಕ ಅನಿಸಬಹುದು. ಅಷ್ಟೊಂದು ಸಂಭ್ರಮವನ್ನು ಮಗು ಕೊಟ್ಟಿದೆ’ ಎಂದು ಹೇಳಿದರು. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಮಗು ತಾಯಿಯನ್ನು ಹೋಲುತ್ತಾ? ಅಥವಾ ನಿಮ್ಮನ್ನು ಹೋಲುತ್ತಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ ಅದು ನನ್ನನ್ನೇ ಹೋಲುತ್ತದೆ’ ಎಂದು ಹೇಳಿ ಸಂಭ್ರಮಿಸಿದರು. ಮಗುವಿಗೆ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮಗುವಿಗೆ ಯಾವ ಹೆಸರನ್ನು (Name) ಇಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದಾರಂತೆ. ಅದನ್ನು ನಂತರ ಹೇಳುವೆ ಎನ್ನುವುದು ರಾಮ್ ಚರಣ್ ಮಾತು.

    ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.

    ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ.

  • ರೇಸ್ ಕೋರ್ಸ್ ರಸ್ತೆಗೆ ನಟ ಅಂಬರೀಶ್ ಹೆಸರಿಡಲು ಬಿಬಿಎಂಪಿಗೆ ಮನವಿ

    ರೇಸ್ ಕೋರ್ಸ್ ರಸ್ತೆಗೆ ನಟ ಅಂಬರೀಶ್ ಹೆಸರಿಡಲು ಬಿಬಿಎಂಪಿಗೆ ಮನವಿ

    ನ್ನಡದ ಹೆಸರಾಂತ ನಟ ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರನ್ನು ಭೇಟಿ ಮಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ. ಹರೀಶ್, ಮನವಿ ಪತ್ರವನ್ನು ನೀಡಿದರು. ಕನ್ನಡ ಸಿನಿಮಾ ರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ಅಂಬರೀಶ್ ಅವರಿಗೆ ರಸ್ತೆಗೆ ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸುವಂತೆ ಮನವಿ ಮಾಡಿದೆ.

    ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ಕೊಟ್ಟಿರುವ ಮನವಿ ಪತ್ರದಲ್ಲಿ, ‘ಕನ್ನಡ ಚಿತ್ರರಂಗದಲ್ಲಿ ಅಪಾರ ಕೊಡುಗೆಯನ್ನು ನೀಡಿರುವ ಸಾಧಕರಾದ ಪದ್ಮಭೂಷಣ ಡಾ.ರಾಜ್ ಕುಮಾರ್, ಶ್ರೀಮತಿ ಪಾರ್ವತಮ್ಮ ರಾಜಕುಮಾರ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇವರುಗಳ ಜ್ಞಾಪಕಾರ್ಥವಾಗಿ ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ಅವರ ಹೆಸರನ್ನು ಘನ ಸರ್ಕಾರವು ಈಗಾಗಲೇ ನಾಮಕರಣ ಮಾಡಿರುವುದು ಇಡೀ, ಚಿತ್ರೋದ್ಯಮಕ್ಕೆ ಸಂದ ಗೌರವವಾಗಿದೆ. ಅದಕ್ಕಾಗಿ ಚಿತ್ರೋದ್ಯಮ ಆಭಾರಿಯಾಗಿದೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಮುಂದುವರೆದ ಪತ್ರದಲ್ಲಿ ‘ಕನ್ನಡ ಚಿತ್ರರಂಗದಲ್ಲಿ ಅಪಾರ ಕೊಡುಗೆಯನ್ನು ನೀಡಿರುವ ಖ್ಯಾತ ಕಲಾವಿದ ರೆಬೆಲ್ ಸ್ಟಾರ್ ಡಾ.ಅಂಬರೀಶ್ ಅವರಿಗೆ 70 ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಾನ್ ಸಾಧಕರಾದ ಅಂಬರೀಶ್ ಹೆಸರನ್ನು ಪರಿಗಣಿಸಿ, ರಾಂ ನಾರಾಯಣ ಚಲರಾಮ್ ಕಾಲೇಜಿನಿಂದ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ರಸ್ತೆವರೆಗೆ ನಾಮಕರಣ ಮಾಡಬೇಕೆಂದು ಚಿತ್ರೋದ್ಯಮದ ಮಹಾಸಾದೆಯಾಗಿದೆ. ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಮನವಿ ಪತ್ರ ಸಲ್ಲಿಸಲಾಗಿದೆ’ ಎಂದು ಬರೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

    ಐತಿಹಾಸಿಕ ಸಿಂಗಾಪುರ ಕೆರೆ ಮರುನಾಮಕರಣಕ್ಕೆ ಭಾರೀ ವಿರೋಧ

    ಬೆಂಗಳೂರು: ಅದು ನೂರಾರು ವರ್ಷಗಳ ಸುದೀರ್ಘ ಅಸ್ತಿತ್ವ ಹೊಂದಿರುವ ಐತಿಹಾಸಿಕ ಪ್ರದೇಶ. ದಶಕಗಳ ಹಿಂದೆಯೇ ಇತಿಹಾಸಕಾರರು ಇದನ್ನು ಕೋಟೆಯ ಪಟ್ಟಣ ಎಂದು ಕರೆದಿದ್ದರು. ಇದೀಗ ಕೆರೆಗೆ ಇದ್ದ ಊರಿನ ಹೆಸರಿನ ಬದಲಾವಣೆ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

    16 ನೇ ಶತಮಾನದ ಆರಂಭದಿಂದಲೂ ಜನವಸತಿ ಪ್ರದೇಶವಾಗಿದೆ. ಈಗ ವಿಚಾರ ಏನಂದ್ರೆ, ಐತಿಹಾಸಿಕ ಸಿಂಗಾಪುರ ಕೆರೆ (Singapura Lake) ಯ ಹೆಸರನ್ನ ಬದಲಾವಣೆ ಮಾಡಿದ್ದರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು

    ಸಿಂಗಾಪುರ ಕೆರೆಗೆ ಭಗವಾನ್ ಬುದ್ದ, ಅಂಬೇಡ್ಕರ್ ಕೆರೆ ಎಂದು ಮರುನಾಮಕರಣ ಮಾಡಿರೋದು ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ನವೆಂಬರ್ 6ರಂದು ಸಿಎಂ ಬೊಮ್ಮಾಯಿ (Basavaraj Bommai) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದಾರೆ. ಸಾರ್ವಜನಿಕರು ಇದರ ವಿರುದ್ಧ ತಿರುಗಿ ಬಿದ್ದಿದ್ದು, ಯಾವುದೇ ಕೆರೆಯನ್ನ ಬದಲಿಸುವ ಅಧಿಕಾರ ಬಿಬಿಎಂಪಿಗೆ ಇಲ್ಲ. ನಗರದ ಇತರೆ ಕೆರೆಗಳಿಗೆ ಊರಿನ ಹೆಸರನ್ನೇ ಇಡಲಾಗಿದೆ. ಸಿಂಗಾಪುರಕ್ಕೆ ಇರುವ ಐತಿಹಾಸಿಕ ಕೆರೆಯ ಪ್ರತಿಮೆಯನ್ನ ಹಾಳು ಮಾಡುವ ಕೆಲಸ ಆಗ್ತಿದೆ. ಕೂಡಲೇ ಇದನ್ನ ಹಿಂಪಡೆದು ಐತಿಹಾಸಿಕವಾಗಿದ್ದ ಸಿಂಗಾಪುರ ಕೆರೆ ಅಂತಲೇ ಮುಂದುವರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಎಲ್ಲಿಯೂ ಸಹ ಜೀವಂತ ಕೆರೆಗೆ ‘ಪಾರ್ಕ್’ (Park) ಅಂತ ಯಾರೂ ಕರೆದಿರಲಿಲ್ಲ. ಆದರೆ ಈಗ ನೂರಾರು ವರ್ಷಗಳ ಇತಿಹಾಸವಿರುವ ಕೆರೆಗೆ ಈ ರೀತಿ ಪಾರ್ಕ್ ಅಂತ ಹೆಸರು ಬದಲಿಸಿದ್ದಾರೆ. ರಾಜಕೀಯ ದುರುದ್ದೇಶಕ್ಕೆ ಹೀಗೆ ಮಾಡಲಾಗ್ತಿದೆ. ನಾವು ಅಂಬೇಡ್ಕರ್ ಹೆಸರಿಗೆ ವಿರೋಧ ಮಾಡ್ತಿಲ್ಲ, ಊರಿಗೆ ಹಿರಿಮೆಗಾಗಿ ಸಿಂಗಾಪುರ ಹೆಸರನ್ನೇ ಕೆರೆಗೆ ಮುಂದುವರಿಸಬೇಕು. ಇಲ್ಲವಾದರೆ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

    ಒಟ್ಟಾರೆ, 16ನೇ ಶತಮಾನದಿಂದಲೂ ಜನವಸತಿ ಪ್ರದೇಶವಾಗಿರುವ ಸಿಂಗಾಪುರ ಗ್ರಾಮದ ಇತಿಹಾಸ ಮರೆಮಾಚಲು ರಾಜಕೀಯ ಬಳಸಲಾಗ್ತಿದೆ. ಕೆರೆಯ ಹೆಸರನ್ನ ಬದಲಿಸಿದ್ದರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆಯನ್ನ ಸಿಂಗಾಪುರ ಗ್ರಾಮಸ್ಥರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಸರು ಬದಲಾಯಿಸಲು ತಲೆ ಕೆಟ್ಟಿದ್ಯಾ?: ಶೋಭಾ ಕರಂದ್ಲಾಜೆ ಗರಂ

    ಹೆಸರು ಬದಲಾಯಿಸಲು ತಲೆ ಕೆಟ್ಟಿದ್ಯಾ?: ಶೋಭಾ ಕರಂದ್ಲಾಜೆ ಗರಂ

    ಉಡುಪಿ: ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆಯೊಂದು ಜೋರಾಗಿತ್ತು. ಇದೀಗ ಈ ಸುದ್ದಿಗೆ ಸಚಿವೆ ಸ್ಪಷ್ಟನೆ ನೀಡುವ ಮೂಲಕ ಬ್ರೇಕ್ ಹಾಕಿದ್ದಾರೆ.

    ಶೋಭಾ ಕರಂದ್ಲಾಜೆ ಹೆಸರು ಬದಲಿಸುವ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳನ್ನ ಕೆಲವರು ಜೋಕರ್ಸ್ ಅಂದುಕೊಂಡಿದ್ದಾರೆ ಎಂದು ಗರಂ ಆದರು.

    ಮಾಧ್ಯಮ, ಸಾಮಾಜಿಕ, ರಾಜಕೀಯ ವಲಯ ಅಥವಾ ವಿರೋಧ ಪಕ್ಷ ಅಪಪ್ರಚಾರ ನಿಲ್ಲಿಸಬೇಕು. ಈ ರೀತಿ ಮಾಡುವವರಿಗೆ ಇದು ನನ್ನ ವಿನಮ್ರ ವಿನಂತಿ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ಹೆಸರು ಬದಲಾಯಿಸಲು (Name Change) ನನಗೆ ತಲೆ ಕೆಟ್ಟಿದ್ಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಹೆಸರು ಬದಲಾವಣೆ: ಬಿಜೆಪಿ (BJP) ಯಲ್ಲಿ ಒಂದು ವರ್ಗದ ಪ್ರಕಾರ 2023ರ ಚುನಾವಣೆ (Election)ಗೆ ತಯಾರಿ ನಡೆಸಲಾಗುತ್ತಿದ್ದು, ಶೋಭಾ ಕರಂದ್ಲಾಜೆ ಅವರು ಶೋಭಾ ಗೌಡ (Shobha Gowda) ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಸರು ಬದಲಾಯಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಬರಲಿದ್ದಾರೆ. ರಾಜ್ಯದಲ್ಲಿ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂಬ ವದಂತಿ ಹರಿದಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಬೆಂಗಳೂರು: ಕರಾವಳಿ ಮೂಲದವರಾದ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಇದೀಗ ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆಯೊಂದು ಜೋರಾಗಿದೆ.

    ರಾಜ್ಯ ರಾಜಕೀಯದಿಂದ ಕೇಂದ್ರ ಸಚಿವರಾಗುವ ಮಟ್ಟಿಗೆ ಬೆಳೆದಿರುವ ಶೋಭಾ ಕರಂದ್ಲಾಜೆ ಇದೀಗ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಪ್ರಸ್ತುತ ಇರುವ ಸರ್ ನೇಮ್ ‘ಕರಂದ್ಲಾಜೆ’ ಬದಲಿಗೆ ‘ಗೌಡ’ ಸೇರಿಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದ್ದು, ಮುಂದೆ ಅವರ ಹೆಸರು ‘ಶೋಭಾ ಗೌಡ’ (Shobha Gowda) ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೇರಳ, ತಮಿಳುನಾಡಿನಲ್ಲೂ PFI ಬ್ಯಾನ್

    ಹೆಸರು ಬದಲಾವಣೆ ಯಾಕೆ..?:
    ಇದೀಗ ಯಾಕೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಹೆಸರು ಬದಲಾವಣೆಗೆ ಜ್ಯೋತಿಷಿಗಳ ಸಲಹೆಯೋ? ಸಂಖ್ಯಾಶಾಸ್ತ್ರವೋ? ಅಥವಾ ದೆಹಲಿ ಮೂಲದ ನಾಯಕರ ಸಲಹೆಯೋ ಎಂಬ ಅನುಮಾನವು ಇದೆ. ಬಿಜೆಪಿಯಲ್ಲಿ (BJP) ಒಂದು ವರ್ಗದ ಪ್ರಕಾರ 2023ರ ಚುನಾವಣೆಗೆ ತಯಾರಿ ನಡೆಸಿ ಶೋಭಾ ಗೌಡ ಎಂದು ಹೆಸರು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಸರು ಬದಲಾಯಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಶೋಭಾ ಕರಂದ್ಲಾಜೆ ಬರಲಿದ್ದಾರೆ. ರಾಜ್ಯದಲ್ಲಿ ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.  ಇದನ್ನೂ ಓದಿ: PFI ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ಆಗ್ತಿದೆ: ಆರಗ ಜ್ಞಾನೇಂದ್ರ

    ಚುನಾವಣಾ ವರ್ಷ ಆಗಿರುವುದರಿಂದಾಗಿ ಈಗಾಗಲೇ ಬಿಜೆಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ರಾಜ್ಯದಲ್ಲಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆಗೆ ಬಿಜೆಪಿ ಹೈಕಮಾಂಡ್ ಪ್ಲಾನ್ ಏನಾದರೂ ಹಾಕಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಶೋಭಾ ಕರಂದ್ಲಾಜೆ ತಂದೆ ದಿವಂಗತ ಮೋನಪ್ಪ ಗೌಡ ಆದರೆ ಶೋಭಾ ಈವರೆಗೆ ತಮ್ಮ ಸರ್ ನೇಮ್ ಆಗಿ ಕರಂದ್ಲಾಜೆ ಬಳಸುತ್ತಿದ್ದರು. ಇದೀಗ ಕರಂದ್ಲಾಜೆ ಬದಲಿಗೆ ಗೌಡ ಸೇರಿಸಿ 2023ರ ಚುನಾವಣಾ ಅಖಾಡದಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಫ್ಯಾಕ್ಟರ್, ಕರಾವಳಿ ಭಾಗದಲ್ಲಿ ಹಿಂದುತ್ವ ಫ್ಯಾಕ್ಟರ್‌ಗೆ ಕೈ ಹಾಕಿದ್ಯಾ ಬಿಜೆಪಿ ಹೈಕಮಾಂಡ್ ಎಂಬ ಅನುಮಾನ ಮೂಡಿದೆ.

    ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರ ಅಧಿಕಾರವಧಿ ಅಂತ್ಯಗೊಂಡಿದೆ. ಇದೀಗ ಮುಂದಿನ ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಶೋಭಾ ಕರಂದ್ಲಾಜೆ ಕೂಡ ಇದ್ದು, ಹೀಗಾಗಿ ಹೆಸರು ಬದಲಾವಣೆಯೊಂದಿಗೆ ಸಿ.ಟಿ ರವಿ (C.T Ravi) ಅವರ ಪ್ರಬಲ ಸ್ಪರ್ಧಿಯಾಗುವ ಸೂಚನೆ ನೀಡಿದ್ದಾರೆ. ಇದೀಗ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ಸಿ.ಟಿ ರವಿ ಹಾಗೂ ಶೋಭಾ ಒಕ್ಕಲಿಗರು (Vokkaliga). ಇದೀಗ ಇವರಿಬ್ಬರಲ್ಲಿ ಒಬ್ಬರಿಗೆ ಮಹತ್ವದ ಸ್ಥಾನ ನೀಡಿ ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಈ ಪೈಕಿ ಶೋಭಾ ಅವರಿಗೆ ಉನ್ನತ ಸ್ಥಾನಮಾನ ನೀಡಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ ಹೆಸರಿನೊಂದಿಗೆ ಒಕ್ಕಲಿಗರ ಮತ ಸೆಳೆಯುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಹಾಕಿಕೊಂಡಂತಿದೆ. ಇದರೊಂದಿಗೆ ಈಗಾಗಲೇ ಕಾಂಗ್ರೆಸ್‍ನಲ್ಲಿ ಒಕ್ಕಲಿಗ ನಾಯಕರಾಗಿ ಡಿ.ಕೆ ಶಿವಕುಮಾರ್ (D.K Shivakumar) ಕಾಣಿಸಿಕೊಂಡರೆ, ಜೆಡಿಎಸ್‍ನಲ್ಲಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಪ್ರಬಲರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಜೆಪಿಯಿಂದ ಶೋಭಾ ಕರಂದ್ಲಾಜೆಯನ್ನು ಒಕ್ಕಲಿಗ ನಾಯಕಿಯಾಗಿ ಮಾಡಿ ಕಾಂಗ್ರೆಸ್ (Congress), ಜೆಡಿಎಸ್‍ಗೆ (JDS) ಟಕ್ಕರ್ ನೀಡಲು ಬಿಜೆಪಿ ಹೈಕಮಾಂಡ್ ಚಿಂತಿಸಿದಂತಿದೆ.

    ಈ ನಡುವೆ ಶೋಭಾ ಕರಂದ್ಲಾಜೆ ಆಪ್ತ ವಲಯ ಹೆಸರು ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದೆ. ಹಾಗಾದ್ರೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆಗೆ ನಿಜಕ್ಕೂ ಮುಂದಾಗಿದ್ದಾರಾ? ಅಥವಾ ಬಿಜೆಪಿಯೊಳಗಿನ ಆಂತರಿಕ ರಾಜಕೀಯ ರೆಕ್ಕೆಪುಕ್ಕನಾ? ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಶಿವರಾಜ್ ಕುಮಾರ್ ನಿಜವಾದ ಹೆಸರು ಏನು? ಶಿವಣ್ಣ ಬಿಚ್ಚಿಟ್ಟ ರಹಸ್ಯ

    ಶಿವರಾಜ್ ಕುಮಾರ್ ನಿಜವಾದ ಹೆಸರು ಏನು? ಶಿವಣ್ಣ ಬಿಚ್ಚಿಟ್ಟ ರಹಸ್ಯ

    ನ್ನಡದ ಅಭಿಮಾನಿಗಳು ಶಿವರಾಜ್ ಕುಮಾರ್ ಅವರನ್ನು ಸೆಂಚ್ಯುರಿ ಸ್ಟಾರ್, ಶಿವಣ್ಣ ಅಂತ ಅಭಿಮಾನದಿಂದ ಕರೆಯುತ್ತಾರೆ. ಸಿನಿಮಾ ರಂಗದಲ್ಲಿ ಶಿವರಾಜ್ ಕುಮಾರ್ ಎಂದೇ ಫೇಮಸ್. ಆದರೆ, ಶಿವರಾಜ್ ಕುಮಾರ್ ನಿಜವಾದ ಹೆಸರು ಬೇರೆಯದ್ದೇ ಇದೆ ಅಂತೆ. ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್, ಸರಕಾರಿ ದಾಖಲಾತಿಗಳಲ್ಲಿ ಅವರು ಹೆಸರು ಬೇರೆಯಾಗಿದ್ದು, ಸಿನಿಮಾ ರಂಗದಲ್ಲಿ ಮಾತ್ರ ಶಿವರಾಜ್ ಕುಮಾರ್ ಎಂದಿದೆಯಂತೆ.

    ಈ ವಿಷಯವನ್ನು ಅವರೇ ಬಹಿರಂಗ ಪಡಿಸಿದ್ದಾರೆ. ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನನ್ನ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ, ಬೇರೆಯದ್ದೇ ಇದೆ’ ಎಂದು ಹೇಳುವ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದ್ದಾರೆ. ಹಾಗಂತ ಅವರು ಹೆಸರು ಬದಲಾಯಿಸಿಕೊಂಡಿದ್ದು, ಸಿನಿಮಾ ರಂಗದ ಕೆಲವರಿಗೆ ಗೊತ್ತಿರುವ ವಿಚಾರ. ಆದರೆ, ಸಾರ್ವಜನಿಕರಿಗೆ ಈ ವಿಷಯವೇ ಗೊತ್ತಿರಲಿಲ್ಲ. ಇದನ್ನೂ ಓದಿ: ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಣ್ಣ, ‘ನನ್ನ ಹೆಸರು ನಾಗರಾಜು ಶಿವಪುಟ್ಟಸ್ವಾಮಿ’ ಎಂದು ಹೇಳಿದ್ದಾರೆ. ಈ ಹಿಂದೆ ಡಾ.ರಾಜ್ ಕುಮಾರ್ ಅವರು ಅದೆಷ್ಟು ಬಾರಿ ಶಿವರಾಜ್ ಕುಮಾರ್ ಕುರಿತು ಮಾತನಾಡುವಾಗ ತಮ್ಮ ತಂದೆಯ ಹೆಸರನ್ನೇ ಶಿವಣ್ಣನಿಗೆ ಇಟ್ಟಿದ್ದು ಎಂದು ಹೇಳಿದ್ದಾರೆ. ಶಿವಪುಟ್ಟಸ್ವಾಮಿ ನಿಜವಾದ ಹೆಸರು ಎಂದೂ ಹೇಳಿದ್ದಾರೆ. ಇಂದು ಬಹಿರಂಗವಾಗಿಯೇ ಶಿವರಾಜ್ ಕುಮಾರ್ ತಮ್ಮ ನಿಜವಾದ ಹೆಸರನ್ನು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]