Tag: Namaskara

  • ಮಂಡಿಯೂರಿ ನಮಸ್ಕರಿಸಿ ಬಿಜೆಪಿ ಕಚೇರಿ ಪ್ರವೇಶಿಸಿದ ಕೇಂದ್ರ ಸಚಿವ!

    ಮಂಡಿಯೂರಿ ನಮಸ್ಕರಿಸಿ ಬಿಜೆಪಿ ಕಚೇರಿ ಪ್ರವೇಶಿಸಿದ ಕೇಂದ್ರ ಸಚಿವ!

    ಬೆಂಗಳೂರು: ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೀದರ್ ಸಂಸದ ಭಗವಂತ್ ಖೂಬಾ ಅವರು ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದರು.

    ಬಿಜೆಪಿ ಕಾರ್ಯಾಲಯ ಪ್ರವೇಶಿಸುವ ಮುನ್ನ ಬಾಗಿಲ ಬಳಿ ಮಂಡಿಯೂರಿ ನೆಲಕ್ಕೆ ತಲೆ ತಾಗಿಸಿ ನಮಸ್ಕರಿಸಿದರು. ಇದೇ ವೇಳೆ ಮಾತನಾಡಿದ ಅವರು, ಪಕ್ಷವು ನನಗೆ ಈಗ ಹೆಚ್ಚಿನ ಜವಾಬ್ದಾರಿ ನೀಡಿದೆ. ಆದ್ದರಿಂದ ಪಕ್ಷಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಮನ ಸಲ್ಲಿಸಿದ್ದಾಗಿ ಅವರು ಭಾವಪೂರ್ಣರಾಗಿ ನುಡಿದರು.

    ಬಳಿಕ ಕಾರ್ಯಾಲಯದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಅಲ್ಲದೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

    ಬೀದರ್ ಸಂಸದರಾಗಿರುವ ಭಗವಂತ್ ಖೂಬಾ ಅವರು ಮೋದಿ ಸಂಪುಟದಲ್ಲಿ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಇಡೀ ಪ್ರಪಂಚವೇ ನಮಸ್ಕಾರ ಮಾಡುತ್ತಿದೆ, ಅದನ್ನು ಅಭ್ಯಾಸ ಮಾಡಿಸೋಣ: ಮೋದಿ

    ಇಡೀ ಪ್ರಪಂಚವೇ ನಮಸ್ಕಾರ ಮಾಡುತ್ತಿದೆ, ಅದನ್ನು ಅಭ್ಯಾಸ ಮಾಡಿಸೋಣ: ಮೋದಿ

    – ಕೊರೊನಾಗೆ ಹೆದರಬೇಡಿ, ಸೂಕ್ತ ವೈದ್ಯರ ಸಲಹೆ ಪಡೆಯಿರಿ

    ನವದೆಹಲಿ: ಇಡೀ ಪ್ರಪಂಚವೇ ನಮಸ್ಕಾರ ಮಾಡುತ್ತಿದೆ. ಈಗ ನಾವು ಅದನ್ನು ಅಭ್ಯಾಸ ಮಾಡಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

    ಪಿಎಂ ಮೋದಿ ಅವರು ಜನೌಷಧಿ ಕೇಂದ್ರಗಳ ಮಾಲೀಕರು ಮತ್ತು ಪ್ರಧಾನ್ ಮಂತ್ರಿ ಭಾರತೀಯ ಜನೌಶಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ವೇಳೆ ಕೊರೊನಾ ವೈರಸ್ ವಿಚಾರವಾಗಿ ಹೆದರಬೇಡಿ, ಸೂಕ್ತ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ತಿಳಿಸಿದರು.

    ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮೋದಿ, ಕೊರೊನಾ ವೈರಸ್ ವದಂತಿಯಿಂದ ದೂರ ಇರುವಂತೆ ನನ್ನ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ಕೊರೊನಾ ಈ ನಿಟ್ಟಿನಲ್ಲಿ ನಾವು ವೈದ್ಯರ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಕರೆ ಕೊಟ್ಟರು. ನಾವು ನಮಸ್ಕಾರ ಎಂದು ಶುಭಾಶಯ ಕೋರುವುದನ್ನು ಕೆಲವು ಕಾರಣಗಳಿಂದ ಮರೆತ್ತಿದ್ದೇವೆ. ಆದರೆ ಇಂದು ಇಡೀ ಪ್ರಪಂಚವೇ ನಮಸ್ಕಾರ ಮಾಡಿ ಆಹ್ವಾನಿಸುವುದನ್ನು ಮಾಡುತ್ತಿದೆ. ನಮಗೆ ಇದೇ ಸರಿಯಾದ ಸಮಯ ಹ್ಯಾಂಡ್‍ಶೇಕ್ ಮಾಡುವ ಬದಲು ನಮಸ್ಕಾರ ಮಾಡುವ ಅಭ್ಯಾಸವನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

    ಈ ವೇಳೆ ಪಿಎಂ, ಪ್ರತಿ ತಿಂಗಳು, ಒಂದು ಕೋಟಿ ಕುಟುಂಬಗಳು ಈ ಜನೌಷಧಿ ಕೇಂದ್ರಗಳಿಂದ ಅಗ್ಗದ ಔಷಧಿಗಳ ಲಾಭವನ್ನು ಪಡೆಯುತ್ತಿವೆ. ದೇಶಾದ್ಯಂತ 6,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಜನರಿಗೆ 2,000-2,500 ಕೋಟಿ ರೂ. ಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

  • ದೇವಸ್ಥಾನಕ್ಕೆ ಹೋದವ್ರು ಸ್ವತಃ ದೇವಮಾನವರಾದ್ರು-ಪರಮೇಶ್ವರ್ ಕಾಲಿಗೆರಗಿದ ಮಹಿಳಾ ಮಣಿಗಳು, ಕಾರ್ಯಕರ್ತರು!

    ದೇವಸ್ಥಾನಕ್ಕೆ ಹೋದವ್ರು ಸ್ವತಃ ದೇವಮಾನವರಾದ್ರು-ಪರಮೇಶ್ವರ್ ಕಾಲಿಗೆರಗಿದ ಮಹಿಳಾ ಮಣಿಗಳು, ಕಾರ್ಯಕರ್ತರು!

    ತುಮಕೂರು: ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಇಂದು ಜಿಲ್ಲೆಯ ಸೀಬಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಪರಮಶ್ವರ್ ಅವರು ತಾವು ಹೊತ್ತುಕೊಂಡಿದ್ದ ಹರಕೆ ತೀರಿಸಲೆಂದು ದೇವಾಸ್ಥಾನಕ್ಕೆ ಹೋಗಿದ್ದರು. ಡಿಸಿಎಂ ಬೇಟಿ ನೀಡುತ್ತಿದ್ದಂತೆಯೇ ಅವರ ಬೆಂಬಲಿಗರು ಹೂ ಹಾರಗಳನ್ನು ಹಾಕಿ ಸ್ವಾಗತಿಸಿಕೊಂಡಿದ್ದಾರೆ. ಬಳಿಕ ಅವರು ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಸ್ವತಃ ತಾವೇ ದೇವಮಾನವರಾಗಿದ್ದಾರೆ. ದೇವಸ್ಥಾನಕ್ಕೆ ಬಂದ ಮಹಿಳಾ ಮಣಿಗಳು ಹಾಗೂ ಕಾರ್ಯಕರ್ತರು ದೇವರಿಗೆ ಕೈ ಮುಗಿಯೋದನ್ನು ಬಿಟ್ಟು ಪರಮೇಶ್ವರ್ ಕಾಲಿಗೆ ಎರಗಿದ್ದಾರೆ.

    ಒಬ್ಬರಾದ ಮೇಲೆ ಒಬ್ಬರು ಸರತಿ ಸಾಲಿನಲ್ಲಿ ನಿಂತು ಪರಂ ಕಾಲಿಗೆ ಬಿದ್ದಿದ್ದಾರೆ. ಇಷ್ಟಾದರೂ ತುಟಿಕ್ ಪಿಟಿಕ್ ಅನ್ನದ ಡಿಸಿಎಂ ಕಾಲಿಗೆ ನಮಸ್ಕರಿಸುತ್ತಿರುವುದನ್ನು ನಿರಾಕರಿಸಿಲ್ಲ. ಎಲ್ಲರೂ ಕಾಲಿಗೆ ಬೀಳುವವರೆಗೂ ಸಾವಧಾನವಾಗಿ ನಿಂತುಕೊಂಡಿದ್ದರು. ಪ್ರಗತಿಪರರು ಅಂದುಕೊಳ್ಳುವ ಜಿ.ಪರಮೇಶ್ವರ್ ಈ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.