Tag: Namami Gange

  • ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಿಂದ ಪಡೆದ ಹಲವಾರು ಉಡುಗೊರೆ, ಸ್ಮರಣಿಕೆಗಳು ಹರಾಜಾಗುತ್ತಿದ್ದು, ಜನರು ಈ ಹರಾಜಿನಲ್ಲಿ ಭಾಗವಹಿಸಬೇಕೆಂದು ಮೋದಿ ಕರೆ ನೀಡಿದ್ದಾರೆ.

    ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಇ-ಹರಾಜು ಶುಕ್ರವಾರ ಆರಂಭವಾಯಿತು. ಅಕ್ಟೋಬರ್ 7 ರವರೆಗೆ ಹರಾಜು ಪ್ರಕ್ರಿಯೆ ಮುಂದುವರಿಯುತ್ತದೆ. ಹರಾಜಿನ ಮೂರನೇ ಆವೃತ್ತಿ ಇದಾಗಿದ್ದು, ಇದರಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗವಹಿಸಬಹುದು.  https://pmmementos.gov.in ಮೂಲಕ ಹರಾಜಿನಲ್ಲಿ ನೀವು ಭಾಗಿಯಾಗಬಹುದು.

    ಟ್ವೀಟ್‍ನಲ್ಲಿ ಏನಿದೆ?: ಹರಾಜಿನಲ್ಲಿ ಸಿಗುವ ಹಣವನ್ನು ನಮಾಮಿ ಗಂಗೆ (Namami Gange) ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ನಾನು ಸ್ವೀಕರಿಸಿದ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳು ಹರಾಜಾಗುತ್ತಿವೆ. ಈ ಹರಾಜಿನಲ್ಲಿ ನಮ್ಮ ಒಲಿಂಪಿಕ್ಸ್ ಹೀರೋಗಳು ನೀಡಿದ ವಿಶೇಷ ಸ್ಮರಣಿಕೆಗಳು ಕೂಡಾ ಒಳಗೊಂಡಿದೆ. ನೀವು ಹರಾಜಿನಲ್ಲಿ ಭಾಗವಹಿಸಿ. ಆದಾಯವು ನಮಾಮಿ ಗಂಗೆ ಯೋಜನೆಗೆ ಹೋಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿಗೆ ಟ್ವೀಟ್ ಮಾಡಿದ್ದ ರಾಜಸ್ಥಾನ ಸಿಎಂ ಒಎಸ್‍ಡಿ ರಾಜೀನಾಮೆ!

    ನಮಾಮಿ ಗಂಗೆ ಯೋಜನೆ ಏನು?: ನಮಾಮಿ ಗಂಗೆ ಎನ್ನುವುದು ಗಂಗಾ ನದಿಯ ಸಮಗ್ರ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಕ್ರಮ. ಕೇಂದ್ರ ಸರ್ಕಾರವು ಜೂನ್ 2014ರಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಿತು. ಇದು ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. 2019ರಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಪಡೆದ 4,000ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜು ಹಾಕಲಾಗಿತ್ತು. ಹಿಂದಿನ ಹರಾಜಿನ ಆದಾಯವು ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಹೋಗಿತ್ತು. ಇದನ್ನೂ ಓದಿ:  ಪಂಜಾಬ್ ನೂತನ ಸಿಎಂ ಆಗಿ ಸುಖ್‍ಜಿಂದರ್ ಸಿಂಗ್ ರಂಧಾವಾ

    ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್ ಇ-ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಪಡೆದಿದೆ. 80 ಲಕ್ಷ ಮೂಲ ಬೆಲೆಯ ಬೊರ್ಗೊಹೈನ್ ಕೈಗವಸುಗಳು 1.92 ಕೋಟಿ ಬಿಡ್ ಪಡೆದಿದೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ 1.5 ಕೋಟಿ ಬಿಡ್ ಪಡೆದಿದೆ. ಚೋಪ್ರಾ ಅವರ ಜಾವೆಲಿನ್ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಹರಾಜಿನಲ್ಲಿ 1 ಕೋಟಿ ಮೂಲ ಬೆಲೆಯನ್ನು ಹೊಂದಿತ್ತು. ಪ್ಯಾರಾಲಿಂಪಿಯನ್ ಅವನಿ ಲೇಖರಾ ಮತ್ತು ಭವಾನಿ ಪಟೇಲ್ ಅವರ ಟೀ ಶರ್ಟ್‍ಗಳು, ಪಿವಿ ಸಿಂಧು ತನ್ನ ಕಂಚಿನ ಪದಕ ವಿಜೇತ ಒಲಿಂಪಿಕ್ಸ್ ಪಂದ್ಯದಲ್ಲಿ ಬಳಸಿದ racket ಕೂಡ ಹರಾಜಿನ ಭಾಗವಾಗಿತ್ತು. ಕ್ರೀಡಾ ಸಾಮಗ್ರಿಗಳ ಹೊರತಾಗಿ, ಇ-ಹರಾಜಿನಲ್ಲಿ ಕೇದಾರನಾಥ ದೇವಸ್ಥಾನ ಮತ್ತು ಏಕತೆಯ ಪ್ರತಿಮೆ, ಪ್ರಧಾನಿಯವರ ಭಾವಚಿತ್ರಗಳು ಮತ್ತು ಛಾಯಾಚಿತ್ರಗಳು ಸೇರಿವೆ. ಮೋದಿಯವರ ಛಾಯಾಚಿತ್ರ ಮತ್ತು ಭಾವಚಿತ್ರಗಳ ಮೂಲ ಬೆಲೆ 2 ಲಕ್ಷ ರೂಪಾಯಿ ಎಂದು ನಿಗದಿಗೊಳಿಸಲಾಗಿದೆ. ಇದನ್ನೂ ಓದಿ:  ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ- ಸ್ಮರಣಿಕೆಗಳು ಸೆ.17ರಿಂದ ಇ-ಹರಾಜು