Tag: nalpad

  • ನಲಪಾಡ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಬಿಜೆಪಿಯಿಂದ ಸುಳ್ಳು ಸುದ್ದಿ ಷಡ್ಯಂತ್ರ: ಸಿದ್ದು ಹಳ್ಳೇಗೌಡ

    ನಲಪಾಡ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಬಿಜೆಪಿಯಿಂದ ಸುಳ್ಳು ಸುದ್ದಿ ಷಡ್ಯಂತ್ರ: ಸಿದ್ದು ಹಳ್ಳೇಗೌಡ

    ಬಳ್ಳಾರಿ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಟೀಂ ನನ್ನ ಮೇಲೆ ಹಲ್ಲೆ ನಡೆಸಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನಮ್ಮ ನಡುವೆ ಯಾವುದೇ ಜಗಳವಾಗಿಲ್ಲ, ನಾನು ಆರಾಮಾಗಿದ್ದೇನೆ ಎಂದು ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಸ್ಪಷ್ಟಪಡಿಸಿದ್ದಾರೆ.

    ವಾಟ್ಸಪ್ ಮೂಲಕ ಬೈಟ್ ಬಿಡುಗಡೆ ಮಾಡಿರುವ ಸಿದ್ದು ಹಳ್ಳೇಗೌಡ, ನಮ್ಮ ನಡುವೆ ಯಾವುದೇ ಜಗಳವಾಗಿಲ್ಲ. ನಾನು ಆರಾಮಾಗಿದ್ದೇನೆ. ಹೊಡೆದಾಟದ ಪೋಟೋ ವೈರಲ್ ಅಗಿರುವುದು ಸುಳ್ಳು. ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧ ಮತ್ತೆ ಹಲ್ಲೆ ಆರೋಪ

    ನಲಪಾಡ್ ಹೊಡೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಇದು ಬಿಜೆಪಿ ಷಡ್ಯಂತ್ರವಾಗಿದೆ. ನಮ್ಮ ಕುಟುಂಬದ ಸದಸ್ಯರು ಗಾಬರಿಯಾಗಿದ್ದಾರೆ. ಈ ಸಂಬಂಧ ಸುಳ್ಳು ಸುದ್ದಿ ಹರಡುವುನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

    ಬುಧವಾರ ನಲಪಾಡ್ ಖಾಸಗಿ ಹೋಟೆಲ್‌ನಲ್ಲಿ ಮಧ್ಯಾಹ್ನ ಗೆಟ್ ಟೂ ಗೆದರ್ ರೀತಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಆ ಕ್ಷಣದಲ್ಲಿ ನಾನು ಮುಂದಿನ ಅಧ್ಯಕ್ಷನಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಎಂದು ಪ್ರಸ್ತಾಪಿಸಿದರು. ನಂತರ ರಾತ್ರಿ ಯಲಹಂಕದ ಒಂದು ಕ್ಲಬ್‌ನಲ್ಲಿ ಭೋಜನಕ್ಕೆ ಕರೆದಿದ್ದರು. ಈ ವೇಳೆ ನನ್ನನ್ನು ಹಾಗೂ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ಗೌಡರವರನ್ನು ಸದಸ್ಯ ಎಂದು ತಿಳಿದು ಸಮಯ ನೋಡಿ, ಏನು ಲೇ ನೀವು ಮಂಜುಗೌಡಗೆ ಸಪೋರ್ಟ್ ಮಾಡುತ್ತೀರಾ ಎಂದು ಹಲ್ಲೆ ನಡೆಸಿದ್ದಾರೆಂದು ಸಿದ್ದು ಹಳ್ಳೇಗೌಡ ಆರೋಪಿಸಿದ್ದಾರೆಂದು ಸುದ್ದಿಯಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ಸಿನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಖ್ಯಾತಿಯ ಪ್ರಿಯಾಂಕಾ ಬಿಜೆಪಿಗೆ?

    ಹಲ್ಲೆ ವಿಚಾರವಾಗಿ ನನ್ನದೇನೂ ತಪ್ಪು ಇಲ್ಲ. ಹುಡುಗರು ಹುಡುಗರು ಏನೋ ಗಲಾಟೆ ಮಾಡಿಕೊಂಡಿರಬೇಕು. ನಾನು 9 ಗಂಟೆಗೆ ಅಲ್ಲಿಂದ ಹೊರಟು 9-30 ರಿಂದ 9-45 ರ ಸುಮಾರಿಗೆ ಮನೆಗೆ ಬಂದೆ. 11-30ಕ್ಕೆ ಮಲಗಿಕೊಂಡಿದ್ದೇನೆ. ಬೆಳಗ್ಗೆ 6 ಗಂಟೆ ವೇಳೆಗೆ ಈ ವಿಷಯ ನನಗೆ ಗೊತ್ತಾಗಿದೆ. ಬೆಳಗ್ಗೆ ಅವರೇ ಮತ್ತೆ ಮೆಸೇಜ್ ಹಾಕಿದ್ದಾರೆ. ನಲಪಾಡ್‌ದು ಏನೂ ತಪ್ಪು ಇಲ್ಲಾ ಅಂತ. ಇದರಲ್ಲಿ ನನ್ನ ಇನ್ವಾಲ್ ಮೆಂಟ್ ಏನೂ ಇಲ್ಲ ಎಂದು ನಲಪಾಡ್ ಕೂಡ ಸ್ಪಷ್ಟನೆ ನೀಡಿದ್ದರು.

  • ಬುದ್ಧಿ ಹೇಳೋಕೆ ಬಂದಿದ್ವಿ – ಆನಂದ್ ಪ್ರಸಾದ್ ಭೇಟಿ ಮಾಡಿದ ಹ್ಯಾರಿಸ್, ನಲ್‍ಪಾಡ್

    ಬುದ್ಧಿ ಹೇಳೋಕೆ ಬಂದಿದ್ವಿ – ಆನಂದ್ ಪ್ರಸಾದ್ ಭೇಟಿ ಮಾಡಿದ ಹ್ಯಾರಿಸ್, ನಲ್‍ಪಾಡ್

    – ಈ ಟ್ವೀಟ್‍ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ

    ಬೆಂಗಳೂರು: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿ ಅರೆಸ್ಟ್ ಆಗಿರುವ ಕೆಪಿಸಿಸಿ ಸೋಶಿಯಲ್ ಮೀಡಿಯಾ ಸೆಕ್ರೆಟರಿ ಆನಂದ್ ಪ್ರಸಾದ್‍ನನ್ನು ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮತ್ತು ಅವರ ಪುತ್ರ ಮಹಮ್ಮದ್ ನಲ್‍ಪಾಡ್ ಅವರು ಭೇಟಿಯಾಗಿದ್ದಾರೆ.

    ಭಾನುವಾರ ರಾತ್ರಿ ಕೆ.ಆರ್.ಪುರಂನಲ್ಲಿರುವ ನಿವಾಸದಿಂದಲೇ ಆನಂದ್ ಪ್ರಸಾದ್ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಟ್ವಿಟರ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆನಂದ್ ಪ್ರಸಾದ್ ಬರೆದಿದ್ದರು. ಸದ್ಯ ಟ್ವಿಟರ್ ಬರಹ ಡಿಲೀಟ್ ಮಾಡಲಾಗಿದೆ. ಈಗ ಆನಂದ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದ್ದಾರೆ.

    ಇಂದು ಆನಂದ್ ಪ್ರಸಾದ್‍ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಭೇಟಿಯಾದ ಹ್ಯಾರಿಸ್ ಮತ್ತು ನಲ್ಪಾಡ್, ಅನಂದ್ ಪ್ರಸಾದ್‍ಗೆ ಬುದ್ಧಿ ಹೇಳೋಕೆ ಬಂದಿದ್ದೆವು. ಯಾವುದೇ ಪಕ್ಷದ ಮುಖಂಡ ಆಗಿರಲಿ, ಆ ರೀತಿ ಮಾತಾಡಬಾರದು. ಈಗಾಗಲೇ ಆ ಬಗ್ಗೆ ಬುದ್ಧಿ ಹೇಳಿದ್ದೀವಿ, ಆನಂದ್ ಪ್ರಸಾದ್ ಕೂಡ ನನ್ನದು ತಪ್ಪಾಗಿದೆ ಎಂದು ಒಪ್ಕೊಂಡಿದ್ದಾರೆ. ಜೊತೆಗೆ ಆನಂದ್ ಅವರು ಮಾಡಿದ ಟ್ವೀಟ್‍ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧಿವಿಲ್ಲ ಎಂದು ಹ್ಯಾರಿಸ್ ಹೇಳಿದ್ದಾರೆ.

    ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ಆನಂದ್ ಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 505 (1)(ಬಿ)(ನಕಲಿ ಸಂದೇಶ ರವಾನೆ), 505(1) (ಅ), 153(ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

  • ಹಿಟ್ ಆಂಡ್ ರನ್ ಕೇಸ್ – ನಲಪಾಡ್ ಪರಾರಿ ಕೃತ್ಯಕ್ಕೆ ಸಾಕ್ಷಿ ಒದಗಿಸಿದ್ದ ಪೊಲೀಸರು

    ಹಿಟ್ ಆಂಡ್ ರನ್ ಕೇಸ್ – ನಲಪಾಡ್ ಪರಾರಿ ಕೃತ್ಯಕ್ಕೆ ಸಾಕ್ಷಿ ಒದಗಿಸಿದ್ದ ಪೊಲೀಸರು

    ಬೆಂಗಳೂರು: ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ನಲಪಾಡ್‍ನೇ ಅಪಘಾತ ಎಸಗಿದ್ದು ಎನ್ನುವುದಕ್ಕೆ ಸಾಕ್ಷಿ ಲಭ್ಯವಾಗಿದೆ.

    ನಲಪಾಡ್ ಓಡಿಸುತ್ತಿದ್ದ ಕಪ್ಪು ಕಲರ್ ಬೆಂಟ್ಲಿ ಕಾರಿನ ದೃಶ್ಯಗಳು ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಮಾಡಿದ್ದಾರೆ. ಏರ್‌ಪೋರ್ಟ್ ಟೋಲ್‍ನಿಂದ ಮೇಕ್ರಿ ಸರ್ಕಲ್‍ವರೆಗೆ ಪೊಲೀಸರು ಸಿಸಿಟಿವಿ ಚೆಕ್ ಮಾಡಿದ್ದಾರೆ. ಅಪಘಾತ ಮಾಡಿದ ದಿನ ಏರ್‌ಪೋರ್ಟ್ ಟೋಲ್‍ನಿಂದ ನಲಪಾಡ್ ವಾಹನ ಮೂವ್ ಆಗಿರಲಿಲ್ಲ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?

    ಮೊಬೈಲ್ ಟವರ್ ಡಂಪ್ ಮತ್ತು ಪೊಲೀಸ್ ಪೇದೆಯೊಬ್ಬರ ಸಾಕ್ಷಿ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಲಪಾಡ್ ಅಪಘಾತ ಮಾಡಿರುವುದು ಎಂದು ಗೊತ್ತಾಗಿದ್ದರಿಂದಲೇ ನೋಟಿಸ್ ನೀಡಿದ್ದರು ಎನ್ನಲಾಗಿದೆ. ನಲಪಾಡ್ ಓಡಿಸುತ್ತಿದ್ದ ಬೆಂಟ್ಲಿ ಕಾರಿನ ಚಲನೆಯ ಸಿಸಿಟಿವಿ ವಿಡಿಯೋವನ್ನು ತೆಗೆದಿದ್ದಾರೆ. ಇದನ್ನೂ ಓದಿ: ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು

    ಅಲ್ಲದೇ ಅಪಘಾತ ಆದ ದಿನ ಕರ್ತವ್ಯದಲ್ಲಿದ್ದ ಸಂಚಾರಿ ಪೇದೆ ಅಪಘಾತ ಮಾಡಿದ್ದು ನಲಪಾಡ್ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದರು. ನಲಪಾಡ್ ಟವರ್ ಡಂಪ್ ಸಹ ಮೇಕ್ರಿ ಸರ್ಕಲ್ ಬಳಿಯೇ ತೋರಿಸುತ್ತಿತ್ತು. ಇದೆಲ್ಲದರ ಸಾಕ್ಷಿಗಳ ಆಧಾರದ ಮೇಲೆ ನಲಪಾಡ್‍ಗೆ ನೋಟಿಸ್ ನೀಡಿ ಬಂಧಿಸಿ, ಬಳಿಕ ಜಾಮೀನು ಮಂಜೂರು ಮಾಡಿದ್ದಾರೆ.

  • ಆರ್‌ಸಿಬಿ ಮ್ಯಾಚ್ ವೇಳೆ ನಲಪಾಡ್ ಅಬ್ಬರ

    ಆರ್‌ಸಿಬಿ ಮ್ಯಾಚ್ ವೇಳೆ ನಲಪಾಡ್ ಅಬ್ಬರ

    ಬೆಂಗಳೂರು: ಕಳೆದ ದಿನ ನಡೆದ ಆರ್‌ಸಿಬಿ ಮ್ಯಾಚ್ ವೇಳೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಚೌಕಿದಾರ್ ಚೋರ್ ಎಂದು ಘೋಷಣೆ ಕೂಗಿದ್ದಾರೆ.

    ಭಾನುವಾರ ರಾತ್ರಿ 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯ ಆರನೇ ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಐಪಿಎಲ್ ಮ್ಯಾಚ್ ನೋಡಲು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸ್ಟೇಡಿಯಂಗೆ ಹೋಗಿದ್ದಾರೆ. ಆದರೆ ನಲಪಾಡ್ ಸ್ಟೇಡಿಯಂನ ಗ್ಯಾಲರಿಯಲ್ಲಿ ನಿಂತು ಪದೇ ಪದೇ ಚೌಕಿದಾರ್ ಚೋರ್ ಹೇ…ಚೌಕಿದಾರ್ ಚೋರ್ ಹೇ… ಎಂದು ಘೋಷಣೆ ಕೂಗಿದ್ದಾರೆ.

    ಅಷ್ಟೇ ಅಲ್ಲದೇ 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋತಿದ್ದಕ್ಕೆ ಅಭಿಮಾನಿಯೊಬ್ಬ ಕೋಪಗೊಂಡ ಕೈಯಲ್ಲಿದ್ದ ಬ್ಯಾಟ್‍ನಿಂದ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ಗಳೊಂದಿಗೆ ಗೆಲುವು ಸಾಧಿಸಿದೆ.

    ಈ ಹಿಂದೆ ನಡೆದ ಮ್ಯಾಚ್‍ನಲ್ಲೂ ಕ್ರೀಡಾಂಗಣದಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಬೋರ್ಡ್ ಹಿಡಿದು ಘೋಷಣೆ ಕೂಗಿದ್ದರು. ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಹೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

  • ಫಾರಿನ್ ಟೂರ್ ಪ್ಲಾನ್- ನಲಪಾಡ್ ಗೆ ಹೈಕೋರ್ಟ್ ಸೂಚನೆ

    ಫಾರಿನ್ ಟೂರ್ ಪ್ಲಾನ್- ನಲಪಾಡ್ ಗೆ ಹೈಕೋರ್ಟ್ ಸೂಚನೆ

    ಬೆಂಗಳೂರು: ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕೆಂದು ಮೊರೆ ಹೋಗಿದ್ದ ನಲಪಾಡ್‍ಗೆ ಹೈಕೋರ್ಟ್ ಸೆಷನ್ಸ್ ಕೋರ್ಟ್‍ಗೆ ಹೋಗುವಂತೆ ಸೂಚಿಸಿದೆ.

    15 ದಿನಗಳ ಕಾಲ ಲಂಡನ್ ಪ್ರವಾಸಕ್ಕೆ ಅನುಮತಿ ಕೋರಿ ಹೈಕೋರ್ಟ್ ಗೆ ನಲಪಾಡ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿದ್ವತ್ ಮೇಲೆ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳ ಸಡಿಲಿಕೆ ಕೋರಿ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿತ್ತು.

    ನಲಪಾಡ್ ಸಹೋದರ ಲಂಡನ್ ನಲ್ಲಿ ವಾಸವಾಗಿದ್ದು, ಹೀಗಾಗಿ ತಮ್ಮನನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿ, 15 ದಿನಗಳ ಕಾಲ ವಿದೇಶಕ್ಕೆ ಪ್ರಯಾಣ ಬೆಳೆಸಲು ತನ್ನ ಕಕ್ಷೀದಾರರಿಗೆ ಅವಕಾಶ ನೀಡಬೇಕೆಂದು ವಕೀಲರು ಮನವಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿ ನ್ಯಾ. ಜಾನ್ ಮೈಕೆಲ್ ಡಿ. ಕುನ್ಹಾ ಈ ಬಗ್ಗೆ ಸೆಷನ್ಸ್ ನ್ಯಾಯಾಲಯಲ್ಲಿಯೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

    ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ನಗರ ಬಿಟ್ಟು ತೆರಳದಂತೆ ಷರತ್ತು ವಿಧಿಸಿ ಕೋರ್ಟ್ ನಲಪಾಡ್ ಗೆ ಜಾಮೀನು ಮಂಜೂರು ಮಾಡಿತ್ತು.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಸಿಸಿಬಿ ಪೊಲೀಸರು 600ಕ್ಕೂ ಹೆಚ್ಚು ಪುಠಗಳಿರುವ ಚಾರ್ಜ್‍ಶೀಟನ್ನು ನಗರದ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಷ್ಟ ಅಂದ್ರೆ ಏನು ಅನ್ನೋದು ಗೊತ್ತಾಗಿದೆ, ರಾತ್ರಿ 9 ಗಂಟೆಯ ನಂತ್ರ ಎಲ್ಲಿಗೂ ಬರಲ್ಲ: ನಲಪಾಡ್

    ಕಷ್ಟ ಅಂದ್ರೆ ಏನು ಅನ್ನೋದು ಗೊತ್ತಾಗಿದೆ, ರಾತ್ರಿ 9 ಗಂಟೆಯ ನಂತ್ರ ಎಲ್ಲಿಗೂ ಬರಲ್ಲ: ನಲಪಾಡ್

    ಬೆಂಗಳೂರು: ಕಷ್ಟ ಅಂದರೆ ಏನು ಅನ್ನೋದು ನನಗೆ ಗೊತ್ತಾಗಿದೆ ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾನೆ.

    ಈ ಘಟನೆ ನಡೆದ ನಂತರ ಮೊದಲ ಬಾರಿಗೆ ಶಾಂತಿನಗರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಲಪಾಡ್ ತನ್ನ ನೋವು ತೋಡಿಕೊಂಡಿದ್ದಾನೆ. ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡುತ್ತಿದ್ದೇನೆ. ಈ 4 ತಿಂಗಳಲ್ಲಿ ನನ್ನ ಕುಟುಂಬ, ನನ್ನ ಮನೆಯವರು ನೀವೆಲ್ಲರು ಪಟ್ಟ ಕಷ್ಟಕ್ಕಿಂತ ಒಂದು ವ್ಯಕ್ತಿ ಜಾಸ್ತಿ ಕಷ್ಟ ಪಟ್ಟಿದ್ದಾರೆ. ಅವರು ನನ್ನ ತಾತ. ಎಲ್ಲರಿಗಿಂತ ಜಾಸ್ತಿ ನನಗೆ ನನ್ನ ತಾತನ ಮೇಲೆ ಪ್ರೀತಿ. ಅವರಿಗೂ ಕೂಡ ನಾನೆಂದರೆ ತುಂಬಾನೇ ಇಷ್ಟ. ಆದರೆ ಅವರ ಮೊಮ್ಮಗನಾಗಿ, ಒಬ್ಬ ಮಗನಾಗಿ ಇಲ್ಲಿಯವರೆಗೂ ನಾನು ಫೇಲ್ ಆಗಿದ್ದೇನೆ. ಇನ್ನು ಮುಂದೆ ಒಂದು ಒಳ್ಳೆಯ ಮಗ, ಮೊಮ್ಮಗನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾನೆ.

    ಈ 4 ತಿಂಗಳಲ್ಲಿ ಕಷ್ಟ ಏನು ಎನ್ನುವುದನ್ನು ತಿಳಿದುಕೊಂಡೆ. ಜನರು ನೀರಿಲ್ಲ ಎಂದು ಹೇಳುತ್ತಿದ್ದಾಗ ಅವರ ಕಷ್ಟ ತಿಳಿದಿರಲಿಲ್ಲ. ಏಕೆಂದರೆ ನನ್ನ ಮನೆಯಲ್ಲಿ ಯಾವಾಗಲೂ ನೀರು ಬರುತ್ತಿತ್ತು. ಈ 4 ತಿಂಗಳಲ್ಲಿ ಜೈಲಿಗೆ ಹೋದಾಗ ಶೌಚಾಲಯದಲ್ಲಿ ನೀರಿಲ್ಲದೆ ಇದ್ದಾಗ ನನಗೆ ಆ ಕಷ್ಟ ತಿಳಿಯುತ್ತಿತ್ತು ಎಂದು ನಲಪಾಡ್ ಹೇಳಿದ್ದಾನೆ.

    ನನ್ನ ಕೈಯಲ್ಲಿ ಆದಷ್ಟು ನಾನು ಸಹಾಯ ಮಾಡುತ್ತೇನೆ. ಜನರ ಜೊತೆ ಇರುತ್ತೇನೆ ಎಂದು ನಾನು ನಿರ್ಧರಿಸಿದ್ದೇನೆ. ನನಗೆ ಸಪೋರ್ಟ್ ಆಗಿ ನನ್ನ ತಾತ ನಿಂತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ನಾನು ಒಂದು ಗಿಫ್ಟ್ ನೀಡುತ್ತೇನೆ. ಮುಂದಿನ ವರ್ಷ ಅವರ ಹುಟ್ಟುಹಬ್ಬಕ್ಕೆ ನಾನು ಒಳ್ಳೆಯ ಮೊಮ್ಮಗನಾಗಿ ಬದಲಾಗುತ್ತೇನೆ ಎಂದಿದ್ದಾನೆ.

    9 ಗಂಟೆ ನಂತರ ಎಲ್ಲಿಯೂ ಹೋಗಬಾರದು ಎಂದು ನನ್ನ ತಾತ ಹೇಳಿದ್ದಾರೆ. ಹಾಗಾಗಿ ನಾನು 9 ಗಂಟೆ ನಂತರ ಎಲ್ಲಿಯೂ ಹೋಗುತ್ತಿಲ್ಲ. 9 ಗಂಟೆ ಮೊದಲು ಕರೆದರೆ ಮಾತ್ರ ಬರುತ್ತೇನೆ ಎಂದು ನಲಪಾಡ್ ವೇದಿಕೆಯಲ್ಲಿ ಹೇಳಿದ್ದಾನೆ.

    https://www.youtube.com/watch?v=Bf9wUkjCQbE&feature=youtu.be

  • ಮೊಹಮ್ಮದ್ ನಲಪಾಡ್‍ಗೆ ಜಾಮೀನು ಮಂಜೂರು – ಹೈಕೋರ್ಟ್ ನಿಂದ ಷರತ್ತು ಬದ್ಧ ಬೇಲ್

    ಮೊಹಮ್ಮದ್ ನಲಪಾಡ್‍ಗೆ ಜಾಮೀನು ಮಂಜೂರು – ಹೈಕೋರ್ಟ್ ನಿಂದ ಷರತ್ತು ಬದ್ಧ ಬೇಲ್

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಕೊನೆಗೂ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

    ಇಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ತನಿಖೆಗೆ ಸಹಕರಿಸಬೇಕು. ಅಲ್ಲದೇ ವಿಚಾರಣೆಗೆ ಕರೆದಾಗಲೆಲ್ಲಾ ಬರಬೇಕು. ಅಧೀನ ನ್ಯಾಯಾಲಯ ನೀಡುವ ಷರತ್ತಿಗೂ ಬದ್ಧವಾಗಿರಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿ.ಕುನ್ಹಾ ಆದೇಶ ನೀಡಿದ್ದಾರೆ.

    ಜಾಮೀನು ಮಂಜೂರು ಮಾಡಿದ ನಂತರದ ಪ್ರಕ್ರಿಯೆಗಳನ್ನು ನಲಪಾಡ್ ವಕೀಲರು ಆರಂಭಿಸಿದ್ದು, ಇಂದು ಸಂಜೆಯೊಳಗೆ ನಲಪಾಡ್ ಜೈಲಿನಿಂದ ಹೊರ ಬರುವ ಸಾಧ್ಯತೆಗಳಿವೆ. ಇತ್ತ ಪರಪ್ಪನ ಅಗ್ರಹಾರದಲ್ಲಿರುವ ನಲಪಾಡ್, ಜಾಮೀನು ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾನೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಏನಿದು ಪ್ರಕರಣ?
    ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಕೊಟ್ಟಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.

  • ಹೈಕೋರ್ಟ್ ನಲ್ಲಿ ವಾದ-ಪ್ರತಿವಾದ ಮುಕ್ತಾಯ- ಇಂದು ನಲಪಾಡ್ ಜಾಮೀನು ಅರ್ಜಿ ತೀರ್ಪು

    ಹೈಕೋರ್ಟ್ ನಲ್ಲಿ ವಾದ-ಪ್ರತಿವಾದ ಮುಕ್ತಾಯ- ಇಂದು ನಲಪಾಡ್ ಜಾಮೀನು ಅರ್ಜಿ ತೀರ್ಪು

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜೈಲಾ ಅಥವಾ ಬೇಲಾ ಎಂಬುದು ಇಂದು ತೀರ್ಮಾನವಾಗುತ್ತದೆ.

    ಹೈಕೋರ್ಟ್ ನಲ್ಲಿ ವಾದ-ಪ್ರತಿವಾದ ಇಂದು ಮುಕ್ತಾಯ ಹಂತಕ್ಕೆ ತಲುಪಲಿದೆ. ಎರಡು ಕಡೆಯ ವಾದ-ಪ್ರತಿವಾದ ಆಲಿಸಿ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಹಾಗಾಗಿ ನಲಪಾಡ್‍ನ ಜಾಮೀನು ಅರ್ಜಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

    ಚಾರ್ಜ್ ಶೀಟ್ ಸಲ್ಲಿಕೆಯಾಗೋವರೆಗೂ ಕಾದು ನಲಪಾಡ್ ಸೆಷನ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದನು. ಚಾರ್ಜ್ ಶೀಟ್ ಸಲ್ಲಿಸಿರೋ ಹಿನ್ನೆಲೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ. ಹಾಗಾಗಿ ಜಾಮೀನು ನೀಡಿ ಅಂತ ನಲಪಾಡ್ ಪರ ವಕೀಲ ಬಿ.ವಿ.ಆಚಾರ್ಯರ ಪ್ರಬಲ ವಾದವಾಗಿದೆ .

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಏನಿದು ಪ್ರಕರಣ?
    ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಕೊಟ್ಟಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.

  • ಜಾಮೀನು ಅರ್ಜಿ ತಿರಸ್ಕೃತ – ರೌಡಿ ನಲಪಾಡ್‍ಗೆ ಜೈಲೇ ಗತಿ

    ಜಾಮೀನು ಅರ್ಜಿ ತಿರಸ್ಕೃತ – ರೌಡಿ ನಲಪಾಡ್‍ಗೆ ಜೈಲೇ ಗತಿ

    ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 63ನೇ ನ್ಯಾಯಾಲಯದ ತಿರಸ್ಕರಿಸಿದೆ.

    ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿರುವುದರಿಂದ ಆರೋಪಿ ನಲಪಾಡ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಿದ್ವತ್ ಪರ ವಕೀಲರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

    ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್, ಆರೋಪಿ ವಿರುದ್ಧ ಇದ್ದ ಬಲವಾದ ಸಾಕ್ಷಿಗಳು ಹಾಗೂ ನಲಪಾಡ್ ತಂದೆ ಶಾಸಕರಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ. ಈ ಹಿಂದೆ ಇದೇ ಕೋರ್ಟ್‍ನಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಆರೋಪಿ ವಿರುದ್ಧ ವಿಡಿಯೋ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯೂ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ಎಂದು ತಿಳಿಸಿದರು.

    ಸಮಾಜದಲ್ಲಿ ನಲಪಾಡ್ ಪ್ರಕರಣ ಸಾಕಷ್ಟು ಭಯವನ್ನು ಉಂಟು ಮಾಡಿದೆ. ಅಲ್ಲದೇ ಈ ಹಿಂದೆಯೂ ಸಹ ಇಂತಹ ಹಲವು ಪ್ರಕರಣಗಳು ನಡೆದಿದ್ದು ಪದೇ ಪದೇ ಮರುಕಳಿಸುತ್ತಿದೆ ಎಂಬ ವಾದವನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

    ವಿದ್ವತ್- ಹಲ್ಲೆಗೊಳಗಾದ ಯುವಕ.

    ಏನಿದು ಪ್ರಕರಣ?
    ಘಟನೆ ನಡೆದ ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತ್ತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ಅನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಹೊಡೆದಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.

  • ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಮತ್ತೊಬ್ಬ ಪ್ರಭಾವಿ ಸಚಿವರ ಪುತ್ರನ ವಿಚಾರಣೆ

    ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಮತ್ತೊಬ್ಬ ಪ್ರಭಾವಿ ಸಚಿವರ ಪುತ್ರನ ವಿಚಾರಣೆ

    ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಈಗಾಗಲೇ ಜೈಲಿನಲ್ಲಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಲೋಕೋಪಯೋಗಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರನ್ನು ವಿಚಾರಣೆ ನಡೆಸಿದ್ದಾರೆ.

    ಫೆಬ್ರವರಿ 17ರಂದು ನಗರದ ಫರ್ಜಿ ಕೆಫೆಯಲ್ಲಿ ನಲಪಾಡ್ ಕ್ಷುಲಕ ಕಾರಣಕ್ಕಾಗಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಹಲ್ಲೆ ನಡೆದ ವೇಳೆ ಫರ್ಜಿ ಕಫೆಯಲ್ಲಿ ಸಚಿವರ ಪುತ್ರ ಸುನೀಲ್ ಬೋಸ್ ಅಲ್ಲಿಯೇ ಪಾರ್ಟಿ ಮಾಡ್ತಿದ್ರು ಎಂಬುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಲಪಾಡ್ ಪ್ರಕರಣದ ತನಿಖಾಧಿಕಾರಿ ಅಶ್ವಥ್ ಗೌಡ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ಸುನಿಲ್ ಬೋಸ್ ಅವರ ವಿಚಾರಣೆಯನ್ನು ನಡೆಸಿದ್ದಾರೆ.

    ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

    ಕೆಲವು ದಿನಗಳ ಹಿಂದೆ ಸಚಿವ ಮಹದೇವಪ್ಪ ಈ ಬಾರಿ ಚುನಾವಣೆಯಲ್ಲಿ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು ಅಂತಾ ಹೇಳಲಾಗಿತ್ತು. ಆದ್ರೆ ಹೈಕಮಾಂಡ್ ಇಬ್ಬರಿಗೆ ಟಿಕೆಟ್ ನೀಡಿದ್ರೆ ಬೇರೆ ನಾಯಕರು ಅಸಮಾಧಾನಗೊಳ್ಳುವ ಸಾಧ್ಯತೆಗಳಿವೆ ಅಂತಾ ಹೇಳಿ ಟಿಕೆಟ್ ನೀಡಲು ನಿರಾಕರಿಸಿತ್ತು ಎಂಬ ಮಾಹಿತಿಗಳು ಕಾಂಗ್ರೆಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಚುನಾವಣೆಯ ಸಮಯದಲ್ಲಿ ಸುನಿಲ್ ಬೋಸ್ ವಿಚಾರಣೆ ನಡೆಯುತ್ತಿರುವುದು ಮುಂದೆ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.