Tag: nalinkumar kateel

  • ಮೋದಿಯಿಂದಾಗಿ ನಳಿನ್ ಕುಮಾರ್ ಕಟೀಲ್ ಡಾಲರ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ: ಕಾಂಗ್ರೆಸ್

    ಮೋದಿಯಿಂದಾಗಿ ನಳಿನ್ ಕುಮಾರ್ ಕಟೀಲ್ ಡಾಲರ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ: ಕಾಂಗ್ರೆಸ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಮೇಲಿನ ಭರವಸೆಯಿಂದ ಹಿಂದೆ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರು ಒಂದು ಡಾಲರ್‌ಗೆ (Dollar) 15 ರೂಪಾಯಿಯಾಗುತ್ತದೆ ಎಂದಿದ್ದರು. ಈಗ 83 ರೂಪಾಯಿಯಾಗಿದೆ. ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ, ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಅವರಿಗೆ ಸಾಂತ್ವನ ಹೇಳುವಿರಾ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

    ಟ್ವೀಟ್‍ನಲ್ಲಿ ಏನಿದೆ:
    ರಸ್ತೆಗುಂಡಿಗಳು (Road Pothole) ಸಾವಿನ ಗುಂಡಿಗಳಾಗಿವೆ, 20ಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ರಸ್ತೆಗುಂಡಿಗಳಿಗೆ ಭಯಬಿದ್ದು ಕಾರ್ಯಕ್ರಮಗಳಿಗೆ ಹೆಲಿಕಾಪ್ಟರ್ ಸಂಚಾರ ಆಯ್ದುಕೊಂಡಿರಾ ಮೋದಿ ಅವರೇ? ಹಿಂದೆ ತಮಗಾಗಿ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋದ ಬಗ್ಗೆ ಮಾತಾಡುವಿರಾ? ಸಿಎಂಗೆ ವಿವರಣೆ ಕೇಳುವಿರಾ? ಸಹಾಯಕ ಪ್ರಾಧ್ಯಾಪಕರು, ಕೆಪಿಟಿಎಲ್ (KPTL) ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಸಂಗತಿ ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ ಮೋದಿ ಅವರೇ? ಇದನ್ನೂ ಓದಿ: ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್‌ ಆಕ್ರೋಶ

    ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದೀರಿ, ಆದರೆ ಇಲ್ಲಿ “2 ಕೋಟಿಗೆ ಒಂದು ಉದ್ಯೋಗ” ಎಂಬಂತಾಗಿದೆ. ನಿಮ್ಮ ಟ್ರಬಲ್ ಇಂಜಿನ್ ಸರ್ಕಾರದ ಹುದ್ದೆ ಮಾರಾಟದ ಬಗ್ಗೆ ಮಾತನಾಡುವಿರಾ? ಕಳೆದ ನಾಲ್ಕು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ. ಮೋದಿ ಅವರೇ, ಒಮ್ಮೆಯೂ ನೆರೆ ವೀಕ್ಷಣೆಗೆ ತಾವು ಬರಲಿಲ್ಲ, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,500 ಕೋಟಿ ರೂ. ಪರಿಹಾರ ಬಿಟ್ಟರೆ ಮತ್ತೇನೂ ಕೊಟ್ಟಿಲ್ಲ. ಕನ್ನಡಿಗರನ್ನು ಅನಾಥರನ್ನಾಗಿಸಿದೆ ನಿಮ್ಮ ಟ್ರಬಲ್ ಇಂಜಿನ್ ಸರ್ಕಾರ. ಬೆಲೆ ಏರಿಕೆಯ ಜೊತೆಗೆ ನಿಮ್ಮ ಅವೈಜ್ಞಾನಿಕ GST ಹೇರಿಕೆ ಹಾಗೂ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗೃಹಿಣಿರಿಗೆ ಕಣ್ಣೀರು, ಬಡವರ ಹೊಟ್ಟೆಗೆ ತಣ್ಣೀರು, ರೈತರಿಗೆ ರಕ್ತ ಕಣ್ಣೀರು ಎಂಬಂತಾಗಿದೆ ಟ್ರಬಲ್ ಇಂಜಿನ್ ಸರ್ಕಾರದ ಜಿಎಸ್‍ಟಿ ಹಾಗೂ ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಧೈರ್ಯವಿದೆಯೇ ಮೋದಿ ಅವರೇ? ಟ್ರಬಲ್ ಇಂಜಿನ್ ಸರ್ಕಾರದ ಕಿರುಕುಳದ ಬಗ್ಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರಕ್ಕೆ ತಾವು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಜೀವ ಹೋಯ್ತು. ಇದನ್ನೂ ಓದಿ: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

    ಗುತ್ತಿಗೆದಾರರು ಭ್ರಷ್ಟ ಸರ್ಕಾರದ 40% ಲೂಟಿಯ ಬಗ್ಗೆ 2 ಬಾರಿ ನಿಮಗೆ ಪತ್ರ ಬರೆದಿದ್ದಾರೆ, ಅವರಿಗೆ ಉತ್ತರ ನೀಡುವಿರಾ? ಅವರ ಸಮಸ್ಯೆಗೆ ಪರಿಹಾರ ತಂದಿದ್ದೀರಾ? ನೇಮಕಾತಿ ಹಗರಣಗಳು. ವರ್ಗಾವಣೆ ದಂಧೆ, ಪಿಎಸ್‍ಐ ಹಗರಣ, 40% ಕಮಿಷನ್ ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆ, ಈಶ್ವರಪ್ಪ ರಾಜೀನಾಮೆ, ರಸ್ತೆ ಗುಂಡಿಗಳು, ಸಿಎಂ ಹುದ್ದೆಗೆ 2,500 ಕೋಟಿ ರೂ., ಮಂತ್ರಿಗಿರಿಗೆ 50 ಕೋಟಿ ರೂ. ಯತ್ನಾಳರ ಆರೋಪಗಳು ಇವೆಲ್ಲದರ ಬಗ್ಗೆ ತಮ್ಮ ಭಾಷಣದಲ್ಲಿ ಜಾಗವಿದೆಯೇ ಮೋದಿ ಅವರೇ?

    ಮೋದಿ ಅವರೇ, ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು. ತಮ್ಮ ಕಚೇರಿ ಕೇಳಿದ ವರದಿ ತಲುಪಿತೇ? ಟ್ರಬಲ್ ಇಂಜಿನ್ ಸರ್ಕಾರದ ಭ್ರಷ್ಟಾಚಾರದ ದರ್ಶನವಾಯಿತೇ? ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡುವಿರಾ? ಕರ್ನಾಟಕ ಹಿಂದೆ ನಮ್ಮ ಆಡಳಿತದಲ್ಲಿ ಅಭಿವೃದ್ಧಿಯಲ್ಲಿ ನಂ.1 ಆಗಿತ್ತು, ಈಗ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಮೋದಿ ಅವರೇ, ಟ್ರಬಲ್ ಇಂಜಿನ್ ಸರ್ಕಾರದ ಟ್ರಬಲ್‍ನಿಂದ ಬೇಸತ್ತು ಹಲವರು ನಿಮಗೆ ಪತ್ರ ಬರೆದಿದ್ದಾರೆ. ಆ ಪತ್ರಗಳಿಗೆ ಉತ್ತರ ಹೊತ್ತು ತಂದಿದ್ದೀರಾ? ಅವರ ನೋವು ಆಲಿಸುವಿರಾ? ವೈಫಲ್ಯ ಮರೆಮಾಚಲು ಹಿಜಬ್ (Hijab), ಹಲಾಲ್ (Halal), ಅಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ ಟ್ರಬಲ್ ಇಂಜಿನ್ ಸರ್ಕಾರ. ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದಿದ್ದ ಮೋದಿ ಅವರೇ, ಸಿಎಂ ಬೊಮ್ಮಾಯಿ (Basavaraj Bommai) ಅವರು ಆಕ್ಷನ್‍ಗೆ ರಿಯಾಕ್ಷನ್ ಎಂದು ಸಮಾಜ ಘಾತುಕರಿಗೆ ಕುಮ್ಮಕ್ಕು ಕೊಡ್ತಿದಾರೆ. ಅವರಿಗೆ ಬುದ್ಧಿ ಹೇಳುವಿರಾ ಅಥವಾ ಬೆನ್ನು ತಟ್ಟುವಿರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನವರಿಗೆ ಟಿಪ್ಪು ಮಾತ್ರ ಮನೆದೇವರಾ?: ಕಟೀಲ್ ಕಿಡಿ

    ಕಾಂಗ್ರೆಸ್‍ನವರಿಗೆ ಟಿಪ್ಪು ಮಾತ್ರ ಮನೆದೇವರಾ?: ಕಟೀಲ್ ಕಿಡಿ

    ಬೆಂಗಳೂರು: ಬೆಂಗಳೂರಿನ (Bengaluru) ನಿರ್ಮಾತೃ ಕೆಂಪೇಗೌಡರ ಪ್ರತಿಮೆ (Kempegowda Statue) ಅನಾವರಣ ಕಾರ್ಯಕ್ರಮದ ಬಗ್ಗೆ ಇಷ್ಟು ವಿಷಕಾರುವ ಕಾಂಗ್ರೆಸ್‌ನವರಿಗೆ ಮೇಲುಕೋಟೆ ಅಯ್ಯಂಗಾರ್ ಹಾಗೂ ಕೊಡವರ ಮಾರಣಹೋಮ ನಡೆಸಿದ ಟಿಪ್ಪು (Tipu) ಮಾತ್ರ ಮನೆದೇವರಾ ಎಂದು ಪ್ರಶ್ನಿಸಿ ಟ್ವೀಟ್‌ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalinkumar Kateel) ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕಾಂಗ್ರೆಸ್‍ನ ಕೀಳುಮಟ್ಟದ ರಾಜಕಾರಣಕ್ಕೆ ಮತ್ತೊಂದು ಸಾಕ್ಷಿ ಎನ್ನುವ ಹಾಗೆ, ಕೆಂಪೇಗೌಡರ ಪ್ರತಿಮೆಯ ಬಗ್ಗೆಯೂ ಇವರ ರಾಜಕೀಯ ನಿಂತಿಲ್ಲ. ಸರ್ಕಾರಿ ಹಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದೆ ಅಪರಾಧ ಎಂದು ಕರ್ನಾಟಕ ಕಾಂಗ್ರೆಸ್‍ನ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar)  ಹೇಳಿಕೆ ನೀಡುತ್ತಾರೆ. ಇದನ್ನೂ ಓದಿ: ಮೋದಿ ತಮ್ಮ ವೈಭವಕ್ಕೆ, ಪಕ್ಷದ ವೈಭವಕ್ಕೆ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ: ಡಿಕೆಶಿ ಕಿಡಿ

    ಹಿಂದೂಗಳನ್ನು ಮತಾಂತರಗೊಳಿಸಿ, ಹೆಣ್ಣುಮಕ್ಕಳನ್ನು ಅತ್ಯಚಾರಗೊಳಿಸುತ್ತಿದ್ದವ ಇವರಿಗೆ ಮಾದರಿ ಎಂದಾದರೆ ಭೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು? ಇನ್ನು ಸಿದ್ದರಾಮಯ್ಯ (Siddaramaiah) ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಬರೀ ಗಿಮಿಕ್ ಎನ್ನುತ್ತಾರೆ. ಕಾಂಗ್ರೆಸ್‍ನ ಶಾಸಕ ತನ್ವಿರ್ ಸೇಠ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಕೆಂಡ ಕಾರಿದ್ದಾರೆ. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಗೆ ನೆಲೆಯಿಲ್ಲದ, ಸೆಲೆಯಿರುವ ಜೆಡಿಎಸ್ ಭದ್ರಕೋಟೆಯಲ್ಲಿ ಕಟೀಲ್ ಕಹಳೆ

    ಬಿಜೆಪಿಗೆ ನೆಲೆಯಿಲ್ಲದ, ಸೆಲೆಯಿರುವ ಜೆಡಿಎಸ್ ಭದ್ರಕೋಟೆಯಲ್ಲಿ ಕಟೀಲ್ ಕಹಳೆ

    ಮಂಡ್ಯ: ಜೆಡಿಎಸ್ (JDS) ಭದ್ರಕೋಟೆ ಸಕ್ಕರೆ ನಾಡು ಮಂಡ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ನೇತೃತ್ವದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆ (Sankalpa Yatra) ಮೂಲಕ ಚುನಾವಣಾ ರಣಕಹಳೆ ಊದಿದ್ದಾರೆ.

    ಮಂಡ್ಯದ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಪದಾಧಿಕಾರಿಗಳು, ಸದಸ್ಯರೊಂದಿಗೆ ಇನ್ ಡೋರ್ ಸಭೆ ನಡೆಸಿದ ಕಟೀಲ್, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಪ್ರತಿ ಬೂತ್‍ನಲ್ಲಿ ಬಿಜೆಪಿ ಪರವಾಗಿ ಅಲೆ ಬೀಸುವಂತೆ ಪಕ್ಷ ಸಂಘಟಿಸಿ ಎಂದು ಕರೆಕೊಟ್ಟರು. ನಂತರ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಇದನ್ನೂ ಓದಿ: Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    ಬಳಿಕ ಬಹಿರಂಗ ಸಭೆ ಕುರಿತು ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜೆಡಿಎಸ್ ಮುಕ್ತ ಮಂಡ್ಯ ಮಾಡಲು ಕಾರ್ಯಕರ್ತರಿಗೆ ಕರೆಕೊಟ್ರು. ಸಂಕಲ್ಪ ಯಾತ್ರೆಯನ್ನು ಬಾಗಲಕೋಟೆಯಿಂದ ಪ್ರಾರಂಭ ಮಾಡಿದ್ದೇನೆ. ಇಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಿಮಿಷಾಂಭ ದೇವಿ ದರ್ಶನ ಪಡೆದು ಜಿಲ್ಲೆಯ 7 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮಂಡ್ಯವನ್ನು ಜೆಡಿಎಸ್ ಮುಕ್ತ ಮಾಡ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿಭಟನೆ ವೇಳೆ ಶಿವಸೇನೆ ಮುಖಂಡ ಗುಂಡಿನ ದಾಳಿಗೆ ಬಲಿ

    ಬಿಜೆಪಿಗೆ ನೆಲೆಯಿಲ್ಲದ, ಬಿಜೆಪಿಗೆ ಸೆಲೆಯಿರುವ ಮಂಡ್ಯದಲ್ಲಿ ಸಾವಿರಾರು ಕಾರ್ಯಕರ್ತರನ್ನು ನೋಡಿ ಖುಷಿಯಾಯ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೀರಿ. ಮುಂದಿನ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ ಜೆಡಿಎಸ್ ಮುಕ್ತ ಮಾಡುವಂತೆ ಕಾರ್ಯಕರ್ತರಿಗೆ ಕರೆಕೊಟ್ರು. ಹೆಚ್.ಡಿ.ಕುಮಾರಸ್ವಾಮಿ (HDKumaraswamy) ಮುಖ್ಯಮಂತ್ರಿಯಾದಾಗ ಆಡಳಿತವನ್ನು ವಿಧಾನಸೌಧ ಬಿಟ್ಟು ತಾಜ್ ಹೋಟೆಲ್‌ನಲ್ಲಿ ಮಾಡಿದ್ರು. ಕೆಲಸ ಮಾಡದೇ ಕಣ್ಣೀರು ಹಾಕಿದ್ರು. ಮುಂದಿನ ಬಾರಿ ಮಂಡ್ಯದಲ್ಲಿ ಕುಟುಂಬ ರಾಜಕಾರಣ ಮುಕ್ತ ಮಾಡ್ತೀರಿ. ಶ್ರೀರಂಗಪಟ್ಟಣದಲ್ಲಿ ಸಭೆ ಮುಗಿದ ಬಳಿಕ ಮಂಡ್ಯ ನಗರದ ಕಾಳಿಕಾಂಭ ಸಮುದಾಯ ಭವನದಲ್ಲಿಯು ಸಹ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಸಂಕಲ್ಪ ಸಭೆ ನಡೆಯಿತು.

    Live Tv
    [brid partner=56869869 player=32851 video=960834 autoplay=true]

  • ನುಡಿದಂತೆ ಪ್ರವೀಣ್ ನೆಟ್ಟಾರ್ ಕುಟುಂಬದ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಬಿಜೆಪಿ

    ನುಡಿದಂತೆ ಪ್ರವೀಣ್ ನೆಟ್ಟಾರ್ ಕುಟುಂಬದ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಬಿಜೆಪಿ

    ಮಂಗಳೂರು: ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Kumar Nettar) ಕನಸಿನ ಮನೆ ನಿರ್ಮಾಣಗೊಳ್ಳುವ ಕಾಲ ಸನ್ನಿಹಿತವಾಗಿದೆ. ಕೆಲ ದಿನಗಳ ಹಿಂದೆ ಪ್ರವೀಣ್ ಕುಟುಂಬಸ್ಥರಿಗೆ ಸಂಸದ, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ಕೊಟ್ಟ ಮಾತಿನಂತೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

    ಪ್ರವೀಣ್ ನೆಟ್ಟಾರು ಕಂಡಿದ್ದ ಸುಂದರ ಮನೆಯ ಕನಸನ್ನು ನನಸು ಮಾಡುವತ್ತ ಬಿಜೆಪಿ (BJP) ಮುಂದಡಿ ಇಟ್ಟಿದೆ. ನಳಿನ್ ಕುಮಾರ್ ಕಟೀಲ್ ಧಾರ್ಮಿಕ ವಿಧಿ ವಿಧಾನದಂತೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೋಸ್ಟ್ ವಾಂಟೆಡ್ ತುಫೈಲ್ ಹುಡುಕಾಟಕ್ಕಿಳಿದ ಕೊಡಗು ಪೊಲೀಸರು

    ಪ್ರವೀಣ್ ಕಂಡಿದ್ದ ಕನಸಿನಂತೆಯೇ ಮನೆ ನಿರ್ಮಾಣಗೊಳ್ಳುತ್ತಿದೆ. ಹಳೆಯ ಮನೆ ಕೆಡವಿ ಇಂದು ಹೊಸ ಮನೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಪ್ರವೀಣ್ ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಮನೆ ನಿರ್ಮಾಣ ಆಗುತ್ತಿದೆ. ಮೊಗರೋಡಿ ಕನ್ಸ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ 2,700 ಚದರ ಅಡಿಯ ಮನೆ ನಿರ್ಮಾಣ ಆಗಲಿದೆ. ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಮನೆಯನ್ನು ಪೂರ್ಣ ಮಾಡಿಕೊಡಲು ಇಂದಿನಿಂದಲೇ ಕೆಲಸ ಆರಂಭಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಪ್ರವೀಣ್ ಪತ್ನಿ ನೂತನಾರವರಿಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಇದೀಗ ಮನೆಯ ಕನಸ್ಸನ್ನು ನನಸಾಗಿಸುವತ್ತ ಹೆಜ್ಜೆ ಇರಿಸಿದ್ದಾರೆ. ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಾಣವಾಗುತ್ತಿರುವುದಕ್ಕೆ ಪತ್ನಿ ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಸಂಸದರು, ಸಚಿವರು ಮತ್ತು ಬಿಜೆಪಿ ಮುಖಂಡರು ಪ್ರವೀಣ್ ಅವರ ಕನಸು ನನಸು ಮಾಡಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ

    ಬಿಜೆಪಿ ವತಿಯಿಂದ ಈಗಾಗಲೇ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ನೀಡಲಾಗಿದ್ದು, ಸರ್ಕಾರದಿಂದಲೂ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೆ ಪ್ರವೀಣ್ ನೆಟ್ಟಾರು ಕಾರ್ಯಾಚರಿಸುತ್ತಿದ್ದ ಯುವ ಮೋರ್ಚಾದಿಂದ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದೀಗ ಮನೆ ಕಟ್ಟುವ ಜವಾಬ್ದಾರಿಯನ್ನೂ ಪಕ್ಷ ತೆಗೆದುಕೊಂಡಿದ್ದು ಆದಷ್ಟು ಬೇಗ ಮನೆ ನಿರ್ಮಾಣಗೊಳ್ಳಲಿ ಎನ್ನುವುದು ಪ್ರವೀಣ್ ಪೋಷಕರು ಮತ್ತು ಕಾರ್ಯಕರ್ತರ ಆಶಯವಾಗಿದೆ.

    ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಪ್ರವೀಣ್ ಅವರ ತಂದೆ, ತಾಯಿ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶಂಕುಸ್ಥಾಪನೆಗೆ ಸಾಕ್ಷಿಗಳಾದರು. ಜೊತೆಗೆ ಪ್ರವೀಣ್ ನೆಟ್ಟಾರು ಸಮಾಧಿಗೆ ನಮನ ಸಲ್ಲಿಸಿದರು.

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

    ಗಾಂಧಿ ಟೋಪಿ ಮುಂದಿಟ್ಟುಕೊಂಡು ಕಾಂಗ್ರೆಸ್ ಸಮಾಜಕ್ಕೆ ಟೋಪಿ ಹಾಕಿದೆ: ಕಟೀಲ್

    ಧಾರವಾಡ: ಕಾಂಗ್ರೆಸ್ (Congress) ಪಕ್ಷ ಗಾಂಧಿ ಟೋಪಿಯನ್ನು ಮುಂದಿಟ್ಟುಕೊಂಡು ಇಡೀ ಸಮಾಜಕ್ಕೆ ಟೋಪಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel)  ವಾಗ್ದಾಳಿ ನಡೆಸಿದರು.

    ಧಾರವಾಡದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರವಾದವನ್ನು ಬದಿಗಿಟ್ಟು ಪರಿವಾರ ವಾದವನ್ನು ಮುಂದಿಟ್ಟಿತ್ತು. ಮಹಾತ್ಮ ಗಾಂಧಿಗೂ ಹಾಗೂ ರಾಹುಲ್ ಗಾಂಧಿಗೂ ಏನು ಸಂಬಂಧ, ಯಾರಾದರೂ ಹೇಳಬಲ್ಲಿರಾ?. ದೇಶವನ್ನು ಜೋಡಿಸಿದವರು ಯಾರು, ವಿಭಜನೆ ಮಾಡಿದವರು ಯಾರು ಎಂಬುದು ಜನತೆಗೆ ಗೊತ್ತಿದೆ. ಇದೀಗ ಕಾಂಗ್ರೆಸ್ ಭಾರತ್ ಜೋಡೋ (Bharat Jodo Yatra) ಯಾತ್ರೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಜನರಿಂದ 2.69 ಕೋಟಿ ಸಂಗ್ರಹ, ಕೇವಲ 29 ಲಕ್ಷ ಬಳಕೆ – ಅಯ್ಯೂಬ್‌ ವಿರುದ್ಧ ಇಡಿ ಚಾರ್ಜ್‌

    ಜಾತಿ ಹೆಸರಿನಲ್ಲಿ ಈ ದೇಶವನ್ನು ಇಬ್ಭಾಗ ಮಾಡಲಾಯಿತು, ಅದೇ ರೀತಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಎಂದು ಒಡೆಯಲು ಮುಂದಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಈ ದೇಶವನ್ನು ಜೋಡಿಸುವ ಕೆಲಸ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ಮಾಡಿಸುವ ಮೂಲಕ ದೇಶವನ್ನು ಜೋಡಣೆ ಮಾಡಿದವರು ವಾಜಪೇಯಿ. ಈಗ ಅದೇ ರಸ್ತೆಯಲ್ಲಿ ರಾಹುಲ್ ಗಾಂಧಿ  (Rahul Gandhi) ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಹಾಗೂ ಉತ್ತರವನ್ನು ಮೋದಿ (Narendra Modi) ಜೋಡಿಸುತ್ತಿದ್ದಾರೆ. ಒಂದು ಕಡೆ ಡಿಕೆಶಿ (D.K Shivakumar), ಇನ್ನೊಂದು ಕಡೆ ಸಿದ್ದು, ಇಬ್ಬರನ್ನೂ ಮುಗಿಸಲು ಖರ್ಗೆ ಬಣ ರೆಡಿಯಾಗಿದೆ. ಖರ್ಗೆಯನ್ನು ಸೋಲಿಸಲು ಪ್ರಯತ್ನಿಸಿದ್ದು ಸಿದ್ದರಾಮಯ್ಯ (Siddaramaiah). ಆದರೆ, ಇದೀಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯನವರನ್ನು ಓಡಿಸಿದರು. ಬಾದಾಮಿ ಜನ ಈ ಬಾರಿ ನಮ್ಮ ಕ್ಷೇತ್ರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ಜಾಗ ಹುಡುಕುವ ಯಾತ್ರೆ ಮಾಡಬೇಕು ಎಂದರು. ಇದನ್ನೂ ಓದಿ: 19 ವರ್ಷದ ಯುವತಿ ಅನುಮಾನಸ್ಪದ ಸಾವು- ಅತ್ಯಾಚಾರ, ಕೊಲೆ ಶಂಕೆ

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ

    ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ

    ಬೆಂಗಳೂರು: ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಅವರ ಧರ್ಮಪತ್ನಿ ನೂತನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿ ಸರ್ಕಾರದಿಂದ ಗ್ರೂಪ್ ಸಿ ಹುದ್ದೆಗೆ ನೇಮಕಾತಿ ಮಾಡಿದ್ದಕ್ಕಾಗಿ ಹಾಗೂ ಮಂಗಳೂರಿನಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ಕುಮಾರ್ ನೆಟ್ಟಾರು ಅವರ ಧರ್ಮಪತ್ನಿ ಶ್ರೀಮತಿ ನೂತನ ಅವರು ಬಿಜೆಪಿ ರಾಜ್ಯಾದ್ಯಕ್ಷರಾದ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರೊಂದಿಗೆ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಸರ್ಕಾರದಿಂದ ಕೆಲಸ ಕೊಡಿಸಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಸಹಕರಿಸಿದಕ್ಕಾಗಿ ಧನ್ಯವಾದ ಸಮರ್ಪಿಸಿದರು. ಇದನ್ನೂ ಓದಿ: ಮದರಸಾದಲ್ಲಿ 1985ರಿಂದಲೂ ಪೂಜೆ ಇತ್ತು, ಪೊಲೀಸರ ಅನುಮತಿ ಸಿಕ್ಕಿತ್ತು: ಹಿಂದೂ ಮುಖಂಡರ ಸ್ಪಷ್ಟನೆ

    ಸರ್ಕಾರದಿಂದ ಗ್ರೂಪ್ ಸಿ ಹುದ್ದೆಗೆ ನೇಮಕಾತಿ ಮಾಡಿ ಸಿಎಂ ಕಚೇರಿಯಲ್ಲಿ ಕೆಲಸ ಕೊಡುವುದಾಗಿ ಸಿಎಂ ಹೇಳಿದ್ದರು. ಈ ವೇಳೆ ಮಂಗಳೂರಿನಲ್ಲಿ ಕೆಲಸ ಕೊಡುವಂತೆ ಬೇಡಿಕೆ ಕೇಳಿ ಬಂದಿತ್ತು. ಇದನ್ನು ಮನಗಂಡು ಬೊಮ್ಮಾಯಿ ಮಂಗಳೂರಿನಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ PayCM ಕ್ಯಾಂಪೇನ್‌ – ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಕ್ಲಾಸ್‌

    Live Tv
    [brid partner=56869869 player=32851 video=960834 autoplay=true]

  • PayCM ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ – ನಳಿನ್ ಕುಮಾರ್ ಕಟೀಲ್ ತಿರುಗೇಟು

    PayCM ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ – ನಳಿನ್ ಕುಮಾರ್ ಕಟೀಲ್ ತಿರುಗೇಟು

    ಬೆಂಗಳೂರು: ಪೇ ಸಿಎಂ ಅಂದ್ರೆ ‘ಪೇ ಕಾಂಗ್ರೆಸ್ ಮೇಡಂ’ (Pay Congress Madam) ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ (Nalin Kumar Kateel) ಅವರು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲಿಂದು ಸಿದ್ದರಾಮಣ್ಣ ಅಧಿಕಾರಾವಧಿಯ ಶೇ 100 ಭ್ರಷ್ಟಾಚಾರವನ್ನು ಅನಾವರಣಗೊಳಿಸುವ ʻಸ್ಕ್ಯಾಮ್ ರಾಮಯ್ಯ” (Scam Ramaiah) ಪುಸ್ತಕ ಬಿಡುಗಡೆ ಮಾಡಿದರು. ಕಾಂಗ್ರೆಸ್ (Congress) ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಉಲ್ಲೇಖ ಇದಾಗಿದೆ. ಶಿವಕುಮಾರ್ (DK Shivakumar) ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಅವರು ಚೀಟಿ ಶಿವಕುಮಾರ್ ಆಗಿದ್ದಾರೆ. ಪೇ ಸಿಎಂ ಅಭಿಯಾನವು ಕರ್ನಾಟಕಕ್ಕೆ (Karnataka) ಮಾಡುತ್ತಿರುವ ಅವಮಾನ. ಸಿದ್ದರಾಮಯ್ಯ ಅವರು ಕೋರ್ಟಿನ (Court) ಆದೇಶದನ್ವಯ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಗೌರವ ಹೋದ್ರೆ ಎಲ್ಲರದ್ದೂ ಹೋಗಲಿದೆ – ಪೇ ಸಿಎಂ ಗದ್ದಲ, ಗಲಾಟೆ: ಕಲಾಪ ಮುಂದೂಡಿಕೆ

    ಕಾಂಗ್ರೆಸ್‌ ಪಕ್ಷವು ತನ್ನ ಸುದೀರ್ಘ ರಾಜಕಾರಣದಲ್ಲಿ (Politics) ಭ್ರಷ್ಟಾಚಾರಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ. ದೇಶದಲ್ಲಿ ಉಗ್ರವಾದ ಭಯೋತ್ಪಾದನೆಗೂ (Terrorism) ಕಾಂಗ್ರೆಸ್ ಪಕ್ಷವೇ ಕಾರಣ. 1947ರಿಂದ 2014ರವರೆಗೆ ಗರಿಷ್ಠ ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ (Congress) ಪಕ್ಷವು ಭ್ರಷ್ಟಾಚಾರಕ್ಕೆ ಬೃಹತ್ತಾದ ಕೊಡುಗೆ ನೀಡಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ

    ಕಾಂಗ್ರೆಸ್‍ನ ಅತಿ ಹೆಚ್ಚು ಜನರು ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು (National Congress Leader), ರಾಜ್ಯದ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ತನಿಖೆಯ ಫಲಿತಾಂಶಗಳು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿವೆ. ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಸಿದ್ದರಾಮಣ್ಣನ ಕಾಲಘಟ್ಟದಲ್ಲೂ ಅತಿಹೆಚ್ಚು ಹಗರಣಗಳು ನಡೆದಿದ್ದು, ಲೋಕಾಯುಕ್ತ ಶಕ್ತಿ ಕುಂದಿಸಿ ಹಗರಣಗಳನ್ನು ಮುಚ್ಚಿ ಹಾಕಲು ಆಗಿನ ಸರ್ಕಾರ ಮುಂದಾಗಿತ್ತು ಎಂದು ತಿಳಿಸಿದರು.

    ಸಾಲು ಸಾಲು ಹಗರಣ:
    ನೆಹರೂರಿಂದ ಆರಂಭಿಸಿ ಮನಮೋಹನ್ ಸಿಂಗ್ (Manmohan Singh) ಕಾಲಘಟ್ಟದವರೆಗೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇತರ ಎಲ್ಲ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ. 1948ರ ಜೀಪ್ ಹಗರಣದಿಂದ ಬೊಫೋರ್ಸ್ (Bofors Case), ಸಿಮೆಂಟ್ ಹಗರಣ, ಕಾಮನ್‍ವೆಲ್ತ್ ಹಗರಣದಿಂದ 2ಜಿ ಹಗರಣದವರೆಗೆ ಆಕಾಶ, ನೀರು, ಮಣ್ಣು ಮತ್ತು ಗಾಳಿಯಲ್ಲಿ ಗರಿಷ್ಠ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಅನ್ವರ್ ಮಾಣಿಪ್ಪಾಡಿ ವರದಿ 2.5 ಲಕ್ಷ ಕೋಟಿ ಹಗರಣವನ್ನು ಬೆಳಕಿಗೆ ತರಲಿದೆ. ಅರ್ಕಾವತಿ, ಮೊಟ್ಟೆ, ಹಾಸಿಗೆ, ದಿಂಬು ಸೇರಿ ಅನೇಕ ಹಗರಣಗಳು ನಡೆದಿದ್ದವು. ಇವೆಲ್ಲವುಗಳನ್ನು ಮುಚ್ಚಿಡಲು ಕಾಂಗ್ರೆಸ್ ಪ್ರಯತ್ನಿಸಿತು. ಡ್ರಗ್ ದಂಧೆ, ಮರಳು ಮಾಫಿಯಾಗಳು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿದ್ದವು. ಆ ದಂಧೆಗಳನ್ನು ನಮ್ಮ ಸರ್ಕಾರ ನಿಯಂತ್ರಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದವರ ಬಂಧನವೇಕಿಲ್ಲ?: ದಿನೇಶ್ ಗುಂಡೂರಾವ್

    ಕಾಂಗ್ರೆಸ್ ಹಗರಣಗಳ ಸಂಪೂರ್ಣ ತನಿಖೆ ನಡೆಯಲಿದ್ದು, ತಪ್ಪಿತಸ್ಥರ ಬಂಧನವಾಗಲಿದೆ. ನಮ್ಮ ಸಾಧನೆ ಮತ್ತು ಅಭಿವೃದ್ಧಿಗಳನ್ನು ನೋಡಿ ಆತಂಕಗೊಂಡ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಹಾಗಾಗಿ ದಾಖಲೆಗಳನ್ನು ಸಂಗ್ರಹಿಸಿ, ʻಸ್ಕ್ಯಾಮ್ ರಾಮಯ್ಯʼ ಪುಸ್ತಕ ಹೊರತಂದಿದ್ದೇವೆ. ಅಧಿಕಾರಿಗಳಾದ ಕೆಂಪಯ್ಯ ಮತ್ತು ಕಾಂಟ್ರಾಕ್ಟರ್ ಕೆಂಪಣ್ಣನ ಮೂಲಕ ಸಿದ್ದರಾಮಣ್ಣ ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಾವು ಲೋಕಾಯುಕ್ತಕ್ಕೆ ಜೀವ ಕೊಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯ ಎಲ್ಲ ಹಗರಣಗಳನ್ನು ತನಿಖೆ ಮಾಡಿಸಲಿದ್ದೇವೆ. ಪ್ರಕರಣ ದಾಖಲಿಸಿ, ಎಷ್ಟೇ ದೊಡ್ಡವರಿದ್ದರೂ ಬಂಧಿಸಲಿದ್ದೇವೆ. ಪಾರದರ್ಶಕ ಆಡಳಿತ ನಡೆಸಲಿದ್ದೇವೆ ಎಂದು ನುಡಿದರು.

    ಉಗ್ರವಾದವನ್ನು ಪೋಷಿಸಿದ ಪಕ್ಷ ಕಾಂಗ್ರೆಸ್. ನಾವು ಉಗ್ರರನ್ನು ಮಟ್ಟ ಹಾಕಲು ಎನ್‍ಐಎ ಮೂಲಕ ದಾಳಿಗಳನ್ನು ಸಂಘಟಿಸಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಕಾಶ್ಮೀರ ಉಳಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿತ್ತು ಎಂದ ಅವರು, ಸಿದ್ದರಾಮಯ್ಯರ ಎಲ್ಲ ಹಗರಣಗಳ ದಾಖಲೆ ಸಂಗ್ರಹಿಸಲಾಗಿದೆ. ಈಗ ತನಿಖೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಎನ್‌ಐಎ ದಾಳಿ- ಅಪರಾಧಗಳ ಹಿನ್ನೆಲೆ ಮಾತ್ರ ಗಣನೆ, ಧರ್ಮ ಅಲ್ಲ: ಆರಗ ಜ್ಞಾನೇಂದ್ರ

    ಕಾಂಗ್ರೆಸ್ ಶಾಪಗ್ರಸ್ಥ ಪಕ್ಷ:
    ಕಾಂಗ್ರೆಸ್ ಪಕ್ಷವು ಭ್ರಷ್ಟರ ಮೂಲ ಕೇಂದ್ರ. ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕಿದೆ. ಜಾತಿ-ಜಾತಿಗಳನ್ನು ಒಡೆದ, ರಾಜ್ಯಗಳನ್ನು ಮತ್ತು ದೇಶ ಒಡೆದ ಶಾಪ ಕಾಂಗ್ರೆಸ್‍ಗಿದೆ. ಅದೊಂದು ಶಾಪಗ್ರಸ್ಥ ಪಕ್ಷ. ಡಿಕೆಶಿ ಡೀಲ್ ಮಾಸ್ಟರ್ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಇಲ್ಲಿಯೂ ಡಿಕೆಶಿ- ಸಿದ್ದರಾಮಣ್ಣ ನಡುವೆ ಜಗಳ ನಡೆಯುತ್ತಿದೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಡಿಐಜಿ ಮಟ್ಟದ ಅಧಿಕಾರಿಯನ್ನು ನಮ್ಮ ಸರ್ಕಾರ ಬಂಧಿಸಿದೆ ಎಂದು ಮಾಹಿತಿ ನೀಡಿದರು.

    ಭ್ರಷ್ಟಾಚಾರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನಿಗೆ ಕಾಲಾವಕಾಶ ಕೊಟ್ಟಿದ್ದರೂ ದಾಖಲೆ ಕೊಟ್ಟಿಲ್ಲ. ಇಂದಿನ ವರೆಗೆ ಕಾಂಗ್ರೆಸ್ ಮತ್ತು ಅವರ ಏಜೆಂಟರು ದಾಖಲೆಗಳನ್ನು ಕೊಟ್ಟಿಲ್ಲ. ಸಾಕ್ಷಿ ಇಲ್ಲದೆ ತನಿಖೆ ಮಾಡಲು ಹೇಗೆ ಸಾಧ್ಯ? ಅದಕ್ಕಾಗಿ ಪಕ್ಷದ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಹಾಗೂ ಸಿದ್ದರಾಜು, ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್

    ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್

    – ಕಾಂಗ್ರೆಸ್‍ನ ಎಲ್ಲಾ ಕರ್ಮಕಾಂಡಗಳನ್ನು ಹೊರಗೆ ಹಾಕುತ್ತೇವೆ

    ಹಾಸನ: ಕಾಂಗ್ರೆಸ್‍ನ (Congress) ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಕಾಂಗ್ರೆಸ್‍ನಲ್ಲಿರುವ ಎಲ್ಲಾ ಪ್ರಮುಖ ನಾಯಕರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ಕಾಂಗ್ರೆಸ್ ಒಂದು ವಿರೋಧ ಪಕ್ಷ ಆಗಿರಲು ನಾಲಾಯಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ವಾಗ್ದಾಳಿ ನಡೆಸಿದ್ದಾರೆ.

    ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಭಾರತ್ ಜೋಡೋ (Bharat Jodo Yatra) ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಅವರು, ಈ ದೇಶದಲ್ಲಿ ಎಲ್ಲಾ ಕಡೆ ವಿಭಜನೆ ಮಾಡಿದ್ದು ಕಾಂಗ್ರೆಸ್, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪಾಕಿಸ್ತಾನ, ಭಾರತ ವಿಭಜನೆ, ನಂತರ ಮತ್ತು ಮೊದಲಿಗೆ ಈ ದೇಶದಲ್ಲಿದ್ದ ವಂದೇ ಮಾತರಂ ವಿಭಜನೆ ಮಾಡಿದ್ರು, ರಾಷ್ಟ್ರದ ವಿಭಜನೆ ಮಾಡಿದ್ರು, ಆನಂತರದ ದಿನಗಳಲ್ಲಿ ಕಾಶ್ಮೀರವನ್ನು ಪ್ರತ್ಯೇಕ ಮಾಡುವಂತಹ ಪ್ರಯತ್ನಗಳಾದವು. ಕಾಂಗ್ರೆಸ್ ಈ ದೇಶದಲ್ಲಿ ವಿಭಜನೆಗೆ ಕಾರಣಿಭೂತವಾಗಿರುವ ಪಾರ್ಟಿ. ಆ ಪಾಪದ ಕೈ ತೊಳೆಯಲು ಯಾತ್ರೆಯನ್ನು ಮಾಡ್ತಾ ಇದ್ದಾರೆ. ಭಾರತ್ ಜೋಡೋ ಬದಲು ಮೊದಲಿಗೆ ಕಾಂಗ್ರೆಸ್ ಜೋಡೋ ಆಗಬೇಕಿದೆ. ಇವತ್ತು ಕಾಂಗ್ರೆಸ್‍ನಲ್ಲಿರುವ ಎಲ್ಲಾ ಹಿರಿಯರು 23ಜಿಯನ್ನು ಬಿಟ್ಟು ಹೋಗ್ತಾ ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಪ್ರಾರಂಭವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

    ರಾಹುಲ್‍ಗಾಂಧಿಯವರು (Rahul Gandhi)  ಕಾಂಗ್ರೆಸ್‍ನ್ನು ಸ್ಥಿರ ಮಾಡುವ ಬದಲು ಜನರನ್ನು ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಂದಾಗಬೇಕಿದ್ದ ಕಾಂಗ್ರೆಸ್ ಒಳಜಗಳ, ಬೀದಿಜಗಳ ಜೋಡೋ ಹೆಸರಿನಲ್ಲಿ ಎರಡು ತುಂಡು ಆಗಿರುವುದು ಕಾಣ್ತಾ ಇದೆ. ಸಿದ್ದರಾಮಣ್ಣ ಈ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಡಿಕೆಶಿಯವರು ಹೋದಲೆಲ್ಲಾ ಭಯವನ್ನು ಸೃಷ್ಟಿ ಮಾಡುತ್ತಿದ್ದಾರೆ. ಆತಂರಿಕ ಗೊಂದಲದಿಂದ ಅವರವರ ಹೇಳಿಕೆಗಳು, ಇದರ ಜೊತೆ ಐಟಿ (IT) ನೋಟೀಸ್‍ಗಳು, ಭ್ರಷ್ಟಾಚಾರದಿಂದ ಯಾರು, ಯಾವಾಗ ಜೈಲಿಗೆ ಹೋಗ್ತಾರೆ ಎನ್ನುವ ಭಯ ಕಾಂಗ್ರೆಸ್‍ನ ಒಳಗಡೆ ಕಾಡುತ್ತಿದೆ. ಇದರಿಂದ ಕಾಂಗ್ರೆಸ್‍ಗೆ ನಷ್ಟವಾಗುತ್ತೆ ಹೊರತು ಬಿಜೆಪಿಗಲ್ಲ. ಅವರವರ ಕಾರ್ಯ ಮಾಡಲಿ, ನಮ್ಮ ನಮ್ಮ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರ ಮನೆಗೆ ಬೊಮ್ಮಾಯಿ ಭೇಟಿ – ಆರೋಗ್ಯ ವಿಚಾರಿಸಿ, ಈಗ್ಲೂ ಮುದ್ದೆ ತಿಂತೀರಾ ಸರ್ ಎಂದ ಸಿಎಂ

    ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ಇಡಿ (ED), ಐಟಿ ದಾಳಿ ಮಾಡಿಸಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ (D.K Shivakumar)  ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ಇಡಿ ಮತ್ತು ಐಟಿ ಸ್ವತಂತ್ರವಾಗಿ ತನಿಖೆ ಮಾಡುವ ಸಂಸ್ಥೆಗಳು, ಅದಕ್ಕೆ ಪೂರ್ಣವಾದ ಸಹಕಾರ ಕೊಡಬೇಕು, ಎಲ್ಲರನ್ನು ತನಿಖೆ ಮಾಡ್ತಾರೆ. ನಾಲ್ಕು ವರ್ಷದ ಹಿಂದೆ ಡಿಕೆಶಿ ಮೇಲೆ ದಾಳಿ ಆಗಿತ್ತು, ಒಂದು ವರ್ಷದ ಹಿಂದೆಯೂ ಆಗಿತ್ತು, ಆಗ ಯಾರು ದಾಳಿ ಮಾಡ್ಸಿದ್ರು, ಆದರೆ ಇವತ್ತು ಅವರ ಭ್ರಷ್ಟಾಚಾರದ ವ್ಯವಸ್ಥೆಯನ್ನು ಮುಚ್ಚಿಹಾಕಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಣ್ಣ ತಿರುಕನ ಕನಸನ್ನು ಕಾಣ್ತಾ ಇದ್ದಾರೆ. ಅವರಿಗೆ ಕಾಂಗ್ರೆಸ್‍ನ್ನು ಗಟ್ಟಿ ಮಾಡಲು ಆಗಲಿಲ್ಲ, ಅವರೇ ಟೀಂ ರಚನೆ ಮಾಡಲು ಆಗಲಿಲ್ಲ ಇನ್ನೆಲ್ಲಿ ರಾಜ್ಯದ ಅಧಿಕಾರ ಹಿಡಿತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್‌ ದಾಖಲು

    ಪಿಎಸ್‍ಐ (PSI Scam), ಶಿಕ್ಷಕರ ನೇಮಕಾತಿ ಅಷ್ಟೇ ಅಲ್ಲಾ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಎಲ್ಲಾ ಕರ್ಮಕಾಂಡಗಳನ್ನು ಹೊರಗೆ ಹಾಕುತ್ತೇವೆ. ನನಗೆ ಸಂಶಯ ಇದೆ, ಸಿದ್ದರಾಮಣ್ಣ ಎಲ್ಲಿ ಇರ್ತಾರೆ ಗೊತ್ತಿಲ್ಲ, ಕಾದುನೋಡಿ. ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. ಸೆ.26 ನಂತರ ನನ್ನ ಟೀಂ ಹೊರಡುತ್ತೆ, ಅ.9 ನಂತರ ಯಡಿಯೂರಪ್ಪ (B.S Yediyurappa), ಮುಖ್ಯಮಂತ್ರಿಯ ಟೀಂ ಹೊರಡುತ್ತೆ, ಇಡೀ ರಾಜ್ಯ ಪ್ರವಾಸ ಮಾಡುತ್ತೇವೆ. ಸಚಿವ ಸ್ಥಾನ ಬೇಕೆಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿಲ್ಲ, ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟದ್ದು. ಎಲ್ಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮತಾಂಧ ಶಕ್ತಿಗಳು ಉಗ್ರವಾದಿಗಳ ಜೊತೆ ಕೈಜೊಡಿಸಿಕೊಂಡು ದೇಶ ಹಾಗೂ ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿ ಮಾಡಲು ಮುಂದಾಗಿರುವುದು ಗೊತ್ತಾಗಿದ್ದು, ಉಗ್ರರು ಎಲ್ಲೇ ಇದ್ದರು ಬಂಧಿಸುವ ಕೆಲಸವಾಗುತ್ತೆ. ಈಗಾಗಲೇ ಕೆಲವೊಂದು ಕಡೆಗಳಲ್ಲಿ ಈ ರಾಜ್ಯದ ಮತಾಂಧ ಶಕ್ತಿಗಳು ಉಗ್ರರೊಂದಿಗೆ ಕೈಜೋಡಿಸಿರುವ ಸಾಕ್ಷ್ಯಧಾರಗಳು ಸಿಗ್ತಾ ಇವೆ, ಹಿಂದೆ ಯಾಸಿನ್ ಭಟ್ಕಳ ಬಂಧನವಾಗಿದೆ. ಅರು ತಿಂಗಳ ಹಿಂದೆ ಮಂಗಳೂರಿನಲ್ಲಿ ಎನ್‍ಐಎ (NIA) ಮೂರು ಜನರನ್ನು ಬಂಧಿಸಿದ್ದರು. ಈಗ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನವಾಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂದ ಮೇಲೆ ಇಂತಹ ಭಯೋತ್ಪಾದನಾ ಚಟುವಟಿಕೆಗಳಿಗೆ ನಿಯಂತ್ರಣ ಮಾಡುವ ಕೆಲಸವಾಗಿದೆ ಉಗ್ರರು ಎಲ್ಲೇ ಇದ್ದರು ಬಂಧಿಸುವ ಕೆಲಸವಾಗುತ್ತೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ

    ಪ್ರವೀಣ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ

    ಮಂಗಳೂರು: ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಹಾಗೂ ಬಿಜೆಪಿ ಪಕ್ಷದಿಂದ 25 ಲಕ್ಷ ಸೇರಿ ಒಟ್ಟು 50 ಲಕ್ಷ ರೂ. ಪರಿಹಾರ ಘೋಷಿಸಿದಂತೆ, ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.

    ಸರ್ಕಾರದ ವತಿಯಿಂದ 25 ಲಕ್ಷ, ಬಿಜೆಪಿ ವತಿಯಿಂದ 25 ಲಕ್ಷ ರೂ.ಗಳ ಚೆಕ್ ಅನ್ನು ಪ್ರವೀಣ್ ಪತ್ನಿಗೆ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಲಾ 25 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ

    ಬೆಳ್ಳಾರೆಯ ಮೃತ ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ಪ್ರವೀಣ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಸಿಎಂ, ಪ್ರವೀಣ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಚಿಕ್ಕ ಅಂಗಡಿಯೇ ಆದಾಯದ ಮೂಲವಾಗಿತ್ತು. ಸರ್ಕಾರದ ವತಿಯಿಂದ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಹಾಗೂ ಬಿಜೆಪಿ ವತಿಯಿಂದ 25 ಲಕ್ಷ ರೂ.ಗಳನ್ನ ಪರಿಹಾರವಾಗಿ ನೀಡಲಾಗಿದೆ. ಪ್ರವೀಣ್ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಕೊಲೆಪ್ರಕರಣ ಬೇಧಿಸುವವರೆಗೆ ಅಕ್ಷರಶಃ ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಪ್ರವೀಣ್ ಕೊಲೆಗೈದವರಿಗೆ ಶಿಕ್ಷೆಯಾದಾಗ ಮಾತ್ರ ಆತ್ಮಕ್ಕೆ ಶಾಂತಿ ದೊರಕಲಿದೆ. ಪ್ರವೀಣ್ ಕುಟುಂಬದವರೂ ಇದೇ ಮಾತು ಹೇಳಿದ್ದಾರೆ. ಇನ್ನೆಂದೂ ಈ ರೀತಿ ಯಾರಿಗೂ ಆಗಬಾರದು. ಇದರ ಹಿಂದಿರುವ ಸಂಘಟನೆಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಟುಕರಿಗೆ ಶಿಕ್ಷೆ ಆಗುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳಿನ ನಟ ಜಿ.ಎಂ ಕುಮಾರ್ ಆಸ್ಪತ್ರೆಗೆ ದಾಖಲು

    ಇದು ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ: ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೊನ್ನೆ ನಡೆದ ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ. ಕಳೆದ 10 ವರ್ಷಗಳಲ್ಲಿ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದರಿಂದ ನಿರ್ಭೀತಿಯಿಂದ ಈ ಘಟನೆ ನಡೆಸಲಾಗಿದೆ. ಇದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ದೇಶವನ್ನು ಛಿದ್ರ ಮಾಡುವ ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ರಾಜ್ಯದ ಗಡಿ ದಾಟಿರಬಹುದು. ಈ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ. ಕೆಲವರನ್ನು ವಶಕ್ಕೆ ತೆಗೆದುಕೊಂಡು, ಅವರಿಂದ ಪಡೆದ ಮಾಹಿತಿಯಿಂದ ತನಿಖೆ ಮುಂದುವರಿಯಲಿದೆ. ಅತಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸವಿದೆ. ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ದುಷ್ಕೃತ್ಯಗಳಲ್ಲಿ ತೊಡಗಿಕೊಂಡಿರುವ ಸಮಾಜಘಾತುಕ ಶಕ್ತಿಗಳ ಜಾಡು ಹಿಡಿದು, ಈ ದಿಸೆಯಲ್ಲಿಯೂ ತನಿಖೆ ಕೈಗೊಂಡು ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಬಳಿಕ ನಮ್ಮ ನಾಯಕರು ತಲೆಯೆತ್ತಿ ಓಡಾಡೋಕೆ ಆಗ್ತಿಲ್ಲ – ವಿಜಯೇಂದ್ರ

    ಕರ್ನಾಟಕಕ್ಕೆ ಎನ್‌ಐಎ ಅಗತ್ಯವಿದೆ: ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ತನಿಖಾ ದಳವನ್ನು ಕಳುಹಿಸಲು ಕೋರಲಾಗಿದೆ. ವಿಶೇಷವಾಗಿ ಮಂಗಳೂರು ಭಾಗಕ್ಕೆ ಎನ್‌ಐಎ ಅವಶ್ಯಕತೆಯಿದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಪ್ರಾಥಮಿಕ ತನಿಖಾ ವರದಿಯ ಆಧಾರವಾಗಿ ಹೆಚ್ಚುವರಿ ತನಿಖೆಯ ಅವಶ್ಯಕತೆ ಇದ್ದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗುವುದು. ಈ ಘಟನೆಗೆ ಬೆಂಬಲ ನೀಡಿರುವ ಬಗ್ಗೆಯೂ ತನಿಖೆ ನಡೆಸಿ, ಈ ಕುಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಜಾಲವನ್ನು ಭೇದಿಸಲಾಗುವುದು. ಪಿಎಫ್‌ಐ ಬ್ಯಾನ್ ಮಾಡಲು ಕ್ರಮಗಳು ಪ್ರಾರಂಭವಾಗಿದೆ. ಈ ರೀತಿಯ ದುಷ್ಕೃತ್ಯಗಳು ಭಾರತದ ವಿವಿಧ ರಾಜ್ಯಗಳಲ್ಲಿ ನಡೆದಿದ್ದು, ದೇಶದ ಮಟ್ಟದಲ್ಲಿ ಸರಿಯಾದ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

    ಮಸೂದ್ ಹತ್ಯೆ ಹಾಗೂ ಪ್ರವೀಣ್ ಹತ್ಯೆಗೂ ಸಂಬಂಧವಿದೆಯೇ ಅನ್ನೋ ಬಗ್ಗೆ ತನಿಖೆಯಿಂದ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳ ಕರ್ತವ್ಯ ವೈಫಲ್ಯವಾಗಿದ್ದರೆ ಅದನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಮಾಡ್ತಿರೋದು ಡಿಕೆ ಶಿವಕುಮಾರ್ ವಿರುದ್ಧ ಹಾಗಾಗಿ ಡಿಕೆಶಿಗೆ ನಿದ್ದೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಸಿದ್ದರಾಮೋತ್ಸವ ಮಾಡ್ತಿರೋದು ಡಿಕೆ ಶಿವಕುಮಾರ್ ವಿರುದ್ಧ ಹಾಗಾಗಿ ಡಿಕೆಶಿಗೆ ನಿದ್ದೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಬೆಂಗಳೂರು: ಸಿದ್ದರಾಮೋತ್ಸವ ಮಾಡ್ತಿರೋದು ನಮಗೆ ಖುಷಿಯಾಗಿದೆ. ಸಿದ್ದರಾಮಣ್ಣ ಇನ್ನೊಂದು ನಾಲ್ಕೈದು ಲಕ್ಷ ಜನ ಸೇರಿಸಲಿ. ಬೇಕಾದರೆ ಇದಕ್ಕೆ ನಾವೂ ಸಹ ಸಹಕಾರ ಕೊಡ್ತೇವೆ. ಸಿದ್ದರಾಮೋತ್ಸವದಿಂದ ನಮಗೇನೂ ಹೊಟ್ಟೆಕಿಚ್ಚಾಗಿಲ್ಲ. ಆದರೆ ಡಿಕೆಶಿ ಅವರು ಮಲಗುತ್ತಿಲ್ಲ. ಸಿದ್ದರಾಮೋತ್ಸವ ಬಿಜೆಪಿ ವಿರುದ್ಧ ಮಾಡ್ತಿಲ್ಲ. ಸಿದ್ದರಾಮೋತ್ಸವ ಮಾಡ್ತಿರೋದು ಡಿಕೆಶಿಯ ವಿರುದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

    Siddaramaiah

    ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಮಾಡ್ತಿರೋದಿಕ್ಕೆ ಡಿಕೆಶಿಗೆ ನಿದ್ದೆ ಇಲ್ಲ. ಡಿಕೆಶಿಯನ್ನು ಮುಗಿಸುವುದು ಸಿದ್ದರಾಮಯ್ಯ ತಂತ್ರಗಾರಿಕೆ. ಕಾಂಗ್ರೆಸ್‍ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಹೈಕಮಾಂಡ್‍ಗೆ ತಮ್ಮ ಶಕ್ತಿ ತೋರಿಸಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಅಂತ ಘೋಷಣೆ ಮಾಡಬೇಕೆಂಬ ಒತ್ತಡವನ್ನು ಸಿದ್ದರಾಮಯ್ಯ ಸೃಷ್ಟಿಸುತ್ತಿದ್ದಾರೆ. ಡಿಕೆಶಿಯನ್ನು ಮುಗಿಸೋದು ಸಿದ್ದರಾಮಯ್ಯ ತಂತ್ರ. ಈಗಾಗಲೇ ಜನತಾ ದಳವನ್ನು ಸಿದ್ದರಾಮಯ್ಯ ಮುಗಿಸಿದರು. ಕಾಂಗ್ರೆಸ್‍ಗೆ ಬಂದು ನಿಜವಾದ ಕಾಂಗ್ರೆಸಿಗರನ್ನು ಹೊರಗಿಟ್ರು. ದಲಿತ ಸಿಎಂ ಆಗಬೇಕಾಗಿದ್ದ ಖರ್ಗೆಯವರನ್ನು ಹೊರಗಿಟ್ರು. ಪರಮೇಶ್ವರ್ ಅವರನ್ನು ಸೋಲಿಸಿದ್ರು. ಈಗ ಡಿಕೆಶಿ ಮುಗಿಸುವ ತಂತ್ರಗಾರಿಕೆ ಮಾಡ್ತಿದ್ದಾರೆ. ಸಿದ್ದರಾಮೋತ್ಸವದಿಂದ ನಮಗೇನೂ ಭಯ ಇಲ್ಲ. ಡಿಕೆಶಿ ಅವರಿಗೆ ಭಯ ಇದೆ. ಡಿಕೆಶಿ ನಿದ್ದೆ ಕೆಡಿಸಿದ್ದಾರೆ ಸಿದ್ದರಾಮಯ್ಯ. ಇನ್ನಷ್ಟು ಜನ ಸೇರಿಸಲು ನಾವು ಸಿದ್ದರಾಮಯ್ಯಗೆ ಇನ್ನಷ್ಟು ಬೆಂಬಲ ಕೊಡ್ತೇವೆ. ಇದನ್ನೂ ಓದಿ: 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

    DK SHIVAKUMAR

    ಸಿದ್ದರಾಮಯ್ಯ ಅಧಿಕಾರಕ್ಕೆ ಏರಿದ ಮರುದಿನವೇ ರಾಜೀನಾಮೆ ಕೊಡಬೇಕಿತ್ತು. ಅವರ ಕಾಲಘಟ್ಟದಲ್ಲಿ ಹಗರಣಗಳ ರಾಶಿಯೇ ಬಿದ್ದಿತ್ತು. ಡಿಕೆ ರವಿ, ಗಣಪತಿಯಂಥ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ್ರು. ಮೂರ್ನಾಲ್ಕು ಡಿವೈಎಸ್‍ಪಿಗಳು ರಾಜೀನಾಮೆ ಕೊಟ್ಟರು. ಅರ್ಕಾವತಿ ಹಗರಣ ಆಯ್ತು. ಸಿದ್ದರಾಮಯ್ಯ ಸಾಮರ್ಥ್ಯವೇ ಇಲ್ಲದೇ ಸಿಎಂ ಆಗಿದ್ರು. ಅವರ ಸರ್ಕಾರದಲ್ಲಿ ಹಗರಣಗಳೇ ತುಂಬಿದ್ದವು. ಒಬ್ಬ ಸಚಿವರ ಮೇಲೂ ಅವರು ಕ್ರಮ ಕೈಗೊಳ್ಳಲಿಲ್ಲ. ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸಿಎಂ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ನೈತಿಕ ಹಕ್ಕಿಲ್ಲ. ನಮ್ಮ ಸರ್ಕಾರ ಡ್ರಗ್ಸ್ ಮಾಫಿಯಾ ಕಂಟ್ರೋಲ್ ಮಾಡಿದೆ. ಡ್ರಗ್ಸ್ ಮಾಫಿಯಾದ ನೆರಳಿನಲ್ಲೇ ಕಾಂಗ್ರೆಸ್ ಸರ್ಕಾರ ಬದುಕಿತ್ತು. ಡ್ರಗ್ಸ್ ಮಾಫಿಯಾದ ದಂಧೆಯಿಂದಲೇ ಕಾಂಗ್ರೆಸ್ ಸರ್ಕಾರ ಉಳಿದುಕೊಂಡಿತ್ತು. ಅಂತಹ ಡ್ರಗ್ಸ್ ದಂಧೆ ಇದೀಗ ಕಂಟ್ರೋಲ್ ಆಗಿದೆ. ಪಿಎಸ್‍ಐ ಕೇಸ್‍ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನೇ ಜೈಲಿಗೆ ಹಾಕುವ ಧೈರ್ಯ ಸಿಎಂ ಬೊಮ್ಮಾಯಿ ತೋರಿಸಿದ್ದಾರೆ. ನಮ್ಮ ಸರ್ಕಾರ ಭ್ರಷ್ಟಾಚಾರ ಸಹಿಸಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ನೀವು NRI?- ಪ್ರಶ್ನೆಗೆ ನಾನು HRI ಎಂದ ಆನಂದ್‌ ಮಹೀಂದ್ರಾಗೆ ಭಾರತೀಯರ ಚಪ್ಪಾಳೆ

    ಪಿಎಸ್‍ಐ ಅಕ್ರಮ ನೇಮಕಾತಿ ತನಿಖೆಯ ಹಗ್ಗ ಕಾಂಗ್ರೆಸ್ ಕುತ್ತಿಗೆಯನ್ನೇ ಸುತ್ತಿಕೊಳ್ಳುತ್ತದೆ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿ. ಪಿಎಸ್‍ಐ ಹಗರಣದ ತನಿಖೆ ಪೂರ್ತಿಯಾದಾಗ ಕಾಂಗ್ರೆಸ್‍ನ ಯಾರ‍್ಯಾರು ಇದ್ದಾರೆ ಎಂದು ಗೊತ್ತಾಗುತ್ತೆ. ಆ ನಂತರ ಎಲ್ಲಾ ಹಗರಣಗಳು ಹೊರಗೆ ಬರುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]