Tag: nalinkumar kateel

  • ಕಾಂಗ್ರೆಸ್ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು ರೌಡಿಗಳೇ: ನಳಿನ್ ಕುಮಾರ್ ಕಟೀಲ್

    ಕಾಂಗ್ರೆಸ್ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು ರೌಡಿಗಳೇ: ನಳಿನ್ ಕುಮಾರ್ ಕಟೀಲ್

    – ಹಿಂದೂಗಳ ರಕ್ಷಣೆಗೆ ಹೊರಟವರನ್ನ ಹತ್ಯೆ ಮಾಡಲಾಗ್ತಿದೆ
    – ಕಾಶ್ಮೀರದ ಉಗ್ರರ ಚಟುವಟಿಕೆಗೂ, ಮಂಗಳೂರಿನ ಘಟನೆಗೂ ವ್ಯತ್ಯಾಸ ಇಲ್ಲ; ಕಿಡಿ

    ಉಡುಪಿ: ಕಾಂಗ್ರೆಸ್ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು ರೌಡಿಗಳೇ. ಜೈಲಿಗೆ ಹೋಗಿ ಬಂದವರೇ ಜಾಸ್ತಿ ಇದ್ದಾರೆ. ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆಶಿಯಿಂದ ಆರಂಭಿಸಿ ಎಲ್ಲರ ಮೇಲೆ ಕೇಸ್ ಇದೆ. ಹಾಗಿದ್ದರೆ ಸರ್ಕಾರದಲ್ಲಿ ಇರುವವರೆಲ್ಲರೂ ರೌಡಿಗಳಾ ಉತ್ತರ ಕೊಡಿ ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ (Nalin Kumar Kateel) ವಾಗ್ದಾಳಿ ನಡೆಸಿದರು.

    ಉಡುಪಿಯಲ್ಲಿ(Udupi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಹಾಸ್ ಶೆಟ್ಟಿ(Suhas Shetty) ಮೇಲೆ ಎರಡು ವರ್ಷದಿಂದ ಯಾವುದೇ ಕೇಸ್ ಇಲ್ಲ. ಯಾವುದೇ ಘಟನೆಗಳಲ್ಲಿ ಸುಹಾಸ್ ಭಾಗಿಯಾಗಿಲ್ಲ. ರೌಡಿಶೀಟರ್ ಎಂದು ತೀರ್ಮಾನ ಮಾಡಬೇಕಾಗಿರೋದು ನ್ಯಾಯಾಲಯ, ಗೃಹ ಸಚಿವರಲ್ಲ. ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೊಲೆಯಾಗಿದೆ. ಹಿಂದೂಗಳ ರಕ್ಷಣೆ ಮಾಡಲು ಹೊರಟವರನ್ನು ಹತ್ಯೆ ಮಾಡುತ್ತಿದ್ದಾರೆ. ಈಗಾಗಲೇ ಟಾರ್ಗೆಟ್ ಗ್ರೂಪ್ ರಚನೆಯಾಗಿದೆ. ಟಾರ್ಗೆಟ್ ಗ್ರೂಪಿನ ಒಂದು ಅಂಶದ ಕೆಲಸ ಆರಂಭವಾಗಿದೆ. ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಯುದ್ಧ ನಡೆದರೆ ನಾವು ಭಾರತದ ಜೊತೆ ನಿಲ್ಲಬೇಕು – ಪಾಕ್‌ನಲ್ಲಿರುವ ಪಶ್ತೂನ್‌ ಮುಸ್ಲಿಮರಿಗೆ ಕರೆ

    ಹಿಂದೂಗಳನ್ನ ಬಂಧಿಸಲು ಟಾಸ್ಕ್ ಫೋರ್ಸ್
    ಕರಾವಳಿಯಲ್ಲಿ ಕೋಮು ನಿಗ್ರಹದಳ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸರ್ಕಾರದ ಯೋಚನೆಯೇ ತಪ್ಪಾಗಿದೆ. ಇದು ಹಿಂದೂಗಳ ವಿರೋಧ ನೀತಿಗೆ ರಚನೆಯಾಗುತ್ತಿರುವ ಫೋರ್ಸ್. ಹಿಂದೂಗಳನ್ನು ಬಂಧಿಸಲು ಈ ದಳ ರಚಿಸುತ್ತಾರೆ. ಎಲ್ಲಾ ಸಮುದಾಯಗಳಿಗೆ ಸರಿಯಾದ ನ್ಯಾಯ ಕೊಡುವ ದಳವನ್ನು ಜಾರಿಗೆ ತರಲಿ. ಕಾಂಗ್ರೆಸ್ ಸರ್ಕಾರದ ಈ ದಳ ಒಂದೇ ಸಮುದಾಯಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಶರಣ್ ಪಂಪ್‌ವೆಲ್, ಭರತ್ ಕುಮ್ಡೇಲ್‌ಗೆ ಬೆದರಿಕೆ ವಿಚಾರವಾಗಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದೆಯಾ? ತನಿಖೆ, ಬಂಧನ ಮಾಡುವ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇಬ್ಬರೂ ಕಾರ್ಯಕರ್ತರಿಗೆ ಪೊಲೀಸರನ್ನು ನಿಯೋಜನೆ ಮಾಡಿ, ರಕ್ಷಣೆ ಮಾಡಬೇಕು. ಧಮ್ಕಿ ಹಾಕಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ – ಮುಂದಿನ ಸಿಜೆಐ ಪೀಠಕ್ಕೆ ಅರ್ಜಿ ವರ್ಗಾವಣೆ

    ಸಿದ್ದರಾಮಯ್ಯ ಅವರ ಆಡಳಿತ ಇದ್ದಾಗ ಹಿಂದೂಗಳ ಸರಣಿ ಕಗ್ಗೊಲೆಗಳು ನಡೆಯುತ್ತದೆ. ಹಿಂದೂಗಳ ಮೇಲೆ ನಿರಂತರ ದಾಳಿ ಆಗುತ್ತಿದೆ. ಪಾಕಿಸ್ತಾನ(Pakistan) ಧ್ವಜ ಹಿಡಿದರೆ, ಜಿಂದಾಬಾದ್ ಹೇಳಿದ್ದಕ್ಕೆ ಕೇಸ್ ಆಗಲ್ಲ. ಟ್ವೀಟ್ ಮೂಲಕ ಹಿಂದೂಗಳ ಹತ್ಯೆ ಮಾಡುವ ಎಚ್ಚರಿಕೆ ನಿರಂತರವಾಗಿ ನಡೆಯುತ್ತಿದೆ. ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗೂ, ಮಂಗಳೂರಿನ ಚಟುವಟಿಕೆಗೂ ಯಾವ ವ್ಯತ್ಯಾಸವು ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದ ಜಾತಿ ಜನಗಣತಿ ವರದಿ ಬಗ್ಗೆ ಮೇ 9ಕ್ಕೆ ನಿರ್ಧಾರ – ಹೆಚ್.ಕೆ ಪಾಟೀಲ್

    ಕಾನೂನು, ಜನರ ರಕ್ಷಣೆ ಎರಡರಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರ ಸಭೆಯಲ್ಲಿ ಶಾಸಕರಿಗೆ ಅವಕಾಶ ಇಲ್ಲ. ಆದರೆ ಮುಸ್ಲಿಂ ಪ್ರಮುಖರು ಬಂದು ಗಲಾಟೆಯನ್ನು ನಡೆಸಿದ್ದಾರೆ. ಇದಕ್ಕೆ ಯಾವ ಕ್ರಮ ಕೈಗೊಂಡಿದ್ದೀರಾ? ಗೃಹ ಸಚಿವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಆಕ್ರಮಣ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇದೇಯೋ ಅಥವಾ ಸತ್ತು ಹೋಗಿದೆಯೋ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ನಾಯಕರು(Congress Leaders) ಸುಹಾಸ್ ಮನೆಗೆ ಹೋಗಲು ತಡೆಯಿದೆ. ಕಾಂಗ್ರೆಸ್‌ನ ಮುಸ್ಲಿಂ ಮುಖಂಡರೊಬ್ಬರು ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನೀಡಿದ್ದಾರೆ. ಇಂತಹ ರಾಜಕೀಯಕ್ಕೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ. ಸರ್ಕಾರ ಇರುವುದೇ ಹಿಂದೂ ಸಮಾಜದ ಧಮನಕ್ಕಾಗಿ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕೃಷ್ಣ ನ್ಯಾಯಾಧಿಕರಣದ ಮುಂದೆ ರಾಜ್ಯದ ಹಕ್ಕೋತ್ತಾಯ ಮಂಡನೆ – ಡಿಕೆಶಿ

    ಹಿಂದೂ ಸಮಾಜ ಪರ ಇರುವ ಎಲ್ಲರ ಮೇಲೆ ದಾಳಿ ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬೆದರಿಕೆ ಹಾಕಿದರೆ ಬಂಧಿಸುತ್ತಾರೆ. ಗೃಹ ಸಚಿವರ ಸಭೆಯಲ್ಲಿ ಧಮ್ಕಿ ಹಾಕಿದವರನ್ನು ಬಂಧಿಸಲು ತಾಕತ್ತಿಲ್ಲ. ಗುಂಡು ಹೊಡೆಯಿರಿ ಎಂದು ಹೇಳಿಲ್ಲ, ಬಂಧನ ಮಾಡಿ ಅಂತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ್ದಂತೆ ಒಳಮೀಸಲಾತಿ ಜಾರಿಗೆ ಬದ್ಧ: ಸಿದ್ದರಾಮಯ್ಯ

    ಪಹಲ್ಗಾಮ್ ಘಟನೆಯನ್ನು(Pahalgam Terror Attack) ಕೇಂದ್ರ ಸರ್ಕಾರ ನಿಯಂತ್ರಣ ಮಾಡಿದೆ. ಪಾಕಿಸ್ತಾನ ಭಯಭೀತ ಆಗಿದೆ. ಸೇನೆಯು ಉಗ್ರರನ್ನು ಹುಡುಕಿ ಹೊಡೆಯುತ್ತಿದ್ದಾರೆ. 2014ರ ನಂತರ ಉಗ್ರರನ್ನು ಹತೋಟಿಯಲ್ಲಿಡುವ ಕೆಲಸ ನಡೆಯುತ್ತಿದೆ ಎಂದರು.

  • ಅವಕಾಶ ಕೊಟ್ಟರೆ ನಾನೂ ಬಿಜೆಪಿ ರಾಜ್ಯಾಧ್ಯಕ್ಷನಾಗ್ತೀನಿ – ರಮೇಶ್‌ ಜಿಗಜಿಣಗಿ

    ಅವಕಾಶ ಕೊಟ್ಟರೆ ನಾನೂ ಬಿಜೆಪಿ ರಾಜ್ಯಾಧ್ಯಕ್ಷನಾಗ್ತೀನಿ – ರಮೇಶ್‌ ಜಿಗಜಿಣಗಿ

    ಬೆಳಗಾವಿ: ಮಾಜಿ ಸಚಿವ ವಿ.ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ (BJP State President) ಆಗುವ ಬಯಕೆಯನ್ನು ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಹೊರಹಾಕಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನೂ ಬಿಜೆಪಿಯ (BJP) ಹಿರಿಯ ನಾಯಕ, ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಫೋರ್, ಸಿಕ್ಸ್ ಹೊಡೆಯೋಕ್ ಹೋಗಿ ಬೌಲ್ಡ್ ಆಗಿದ್ದೀನಿ – ಸೋಮಣ್ಣ

    ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರೇ ಆಯ್ಕೆ ಮಾಡ್ತಾರೆ. ನಳಿನ್‌ ಕುಮಾರ್ ಕಟೀಲ್ (NalinKumar Kateel) ಅವಧಿ ಮುಗಿದಿದೆ. ಎಲ್ಲರಿಗೂ ರಾಜ್ಯಾಧ್ಯಕ್ಷ ಆಗಬೇಕು ಎಂಬ ಆಶಯ ಇರೋದು ಸಹಜ. ನಾನೂ ಬಿಜೆಪಿಯ ಹಿರಿಯ ನಾಯಕ, ಅವಕಾಶ ಕೊಟ್ಟರೆ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷ ಆಗಬಾರದೇ ಎಂದು ಪ್ರಶ್ನಿಸಿದ್ದಾರೆ.

    ಮೋದಿ ಮೇಲೆ ಗೂಬೆ ಕೂಡಿಸುತ್ತಿದೆ:
    ಅಕ್ಕಿ ವಿಚಾರವಾಗಿ ಮಾತನಾಡಿ, ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ (Narendra Modi) ಮೇಲೆ ಗೂಬೆ ಕೂಡಿಸುತ್ತಿದೆ. ಕೋವಿಡ್ ಸಮಯದಲ್ಲಿ ‌ಕೂಡ ದೇಶದ 80 ಕೋಟಿ ಬಡವರಿಗೆ ಮೋದಿ ಸರ್ಕಾರ ಅಕ್ಕಿ ನೀಡಿದೆ. ಜಾರಿಮಾಡುವ ಯೋಗ್ಯತೆ ಇಲ್ಲದಿದ್ರೆ ಗ್ಯಾರಂಟಿ ಯೋಜನೆಗಳನ್ನ ಘೋಷಿಸಿದ್ದೇಕೆ? ಗ್ಯಾರಂಟಿ ಘೋಷಣೆ ಮಾಡುವಾಗ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕೇಳಿದ್ರಾ? ಕೇಂದ್ರ ‌ಸರ್ಕಾರ ಕೇವಲ ರಾಜ್ಯಕ್ಕೆ ಅಷ್ಟೇ ಅಲ್ಲ, ಬೇರೆ ರಾಜ್ಯಗಳಿಗೂ ಅಕ್ಕಿ ವಿತರಣೆ ಮಾಡಬೇಕು. ಬಡ ವರ್ಗದ ಜನರನ್ನು ಕಾಂಗ್ರೆಸ್ ಏನು ಗುತ್ತಿಗೆ ಪಡೆದಿದೆಯೇ? ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು – ಸಿಂಗರ್‌ ಆದ ಕಂಡಕ್ಟರ್

    ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡ್ತೀನಿ ಅಂದಿದ್ರು. ಆಗ ನೀವೇ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡ್ತಿನಿ ಅಂದಿದ್ದೀರಿ, ಹೇಳಿದ ಮೇಲೆ ಕೊಡಬೇಕು. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುತ್ತೆ ಎಂದು ಅಪೇಕ್ಷೆ ಮಾಡುವುದು ಸರಿಯಲ್ಲ. ಗ್ಯಾರಂಟಿ ಯೋಜನೆ ‌ಜಾರಿಗೊಳಿಸುವುದು ಅನುಮಾನ. ಹೀಗೆ ಮಾಡಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ‌ಬಹಳ‌ ದಿನ ಇರುವುದಿಲ್ಲ. ಯಾವುದೇ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡಲ್ಲ, ಬರೀ ಮೋದಿ ಅವರನ್ನೇ ಟೀಕಿಸುತ್ತಾರೆ. 9 ವರ್ಷಗಳ ಅವಧಿಯಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ. ಹಿಂದೆ ಕಾಂಗ್ರೆಸ್ ‌ಅಭಿವೃದ್ಧಿಗೆ ಆದ್ಯತೆ ನೀಡಿದ್ದರೆ ಈಗ ಭಾರತ ವಿಶ್ವದಲ್ಲೇ ನಂ.1 ಆಗಿರುತ್ತಿತ್ತು. ಕೋವಿಡ್ ನಿಯಂತ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಜನರ ಪ್ರಾಣ ರಕ್ಷಿಸಿದ್ದಾರೆ. ಈ ಸಮಯದಲ್ಲಿ ‌ಕಾಂಗ್ರೆಸ್ ಅಧಿಕಾರದಲ್ಲಿ ‌ಇದ್ದಿದ್ರೆ ರಸ್ತೆಯ ಮೇಲೆ ಹೆಣ ಬೀಳುತ್ತಿದ್ವು. ಮೋದಿ ಅವರ ಆಡಳಿತಕ್ಕೆ ಇಡೀ ಜಗತ್ತೆ ಬೆರಗಾಗಿದೆ. ಜಾಗತಿಕ ಮಟ್ಟದಲ್ಲಿ ಮೋದಿಗೆ ಗೌರವ ಹೆಚ್ಚಾಗಿದೆ. ದೇಶದ ಪ್ರಧಾನಿಗೆ ಜಾಗತಿಕ ಮಟ್ಟದಲ್ಲಿ ಗೌರವ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದ್ದಾರೆ.

  • ಪ್ರವೀಣ್‌ ನೆಟ್ಟಾರು ಕನಸು ನನಸು – ನೂತನ ಮನೆಯ ಗೃಹ ಪ್ರವೇಶ,  ಸ್ಮಾರಕ ಲೋಕಾರ್ಪಣೆ

    ಪ್ರವೀಣ್‌ ನೆಟ್ಟಾರು ಕನಸು ನನಸು – ನೂತನ ಮನೆಯ ಗೃಹ ಪ್ರವೇಶ, ಸ್ಮಾರಕ ಲೋಕಾರ್ಪಣೆ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ಬಿಜೆಪಿ (BJP) ಕಾರ್ಯಕರ್ತ ಪ್ರವೀಣ್ ನೆಟ್ಟಾರ್ (Praveen Kumar Nettar) ಅವರ ನೂತನ ಮನೆಯ ಗೃಹ ಪ್ರವೇಶವು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ನೆಟ್ಟಾರ್‌ನಲ್ಲಿ ನೆರವೆರಿದೆ.

    ಬೆಳ್ಳಾರೆಯ ನೆಟ್ಟಾರ್‌ನ ಹಳೆ ಮನೆಯ ಆವರಣದಲ್ಲೇ ಹೊಸ ಮನೆ ನಿರ್ಮಾಣವನ್ನು ಬಿಜೆಪಿ ವತಿಯಿಂದ ಮಾಡಿದ್ದಾರೆ. ಜೊತೆಗೆ ಮನೆ ಮುಂಭಾಗದಲ್ಲಿ ಪ್ರವೀಣ್ ಸ್ಮಾರಕ ನಿರ್ಮಿಸಲಾಗಿದೆ. ಪ್ರವೀಣ್ ಸ್ಮಾರಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರು ಗುರುವಾರ ಲೋಕಾರ್ಪಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು. ಬಿಜೆಪಿ ವತಿಯಿಂದ ನಿರ್ಮಾಣಗೊಂಡ ಪ್ರವೀಣ್ ನೆಟ್ಟಾರ್‌ನ ಕನಸಿನ ಮನೆಯನ್ನು ಪ್ರವೀಣ್ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ರೈತ ಯುವಕರನ್ನ ಮದುವೆ ಆಗೋರಿಗೆ 2 ಲಕ್ಷ ಪ್ರೋತ್ಸಾಹ ಧನ – JDS ಪ್ರಣಾಳಿಕೆ ಬಿಡುಗಡೆ

    ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಸುಳ್ಯ ತಾಲೂಕಿನ ನೆಟ್ಟಾರುವಿನಲ್ಲಿ ಐದೇ ತಿಂಗಳಲ್ಲಿ ವಿಶಾಲವಾದ ಸುಂದರ ಮನೆ ನಿರ್ಮಾಣವಾಗಿದೆ. 70 ಲಕ್ಷ ವೆಚ್ಚದಲ್ಲಿ, 2,800 ಚದರಡಿ ವಿಸ್ತೀರ್ಣದಲ್ಲಿ ಮನೆ‌‌ ನಿರ್ಮಾಣ ಮಾಡಲಾಗಿದೆ. ಮಾತ್ರವಲ್ಲದೆ, ನೀಡಿದ ಆಶ್ವಾಸನೆಯಂತೆ, ಪ್ರವೀಣ್ ಪತ್ನಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಉದ್ಯೋಗವನ್ನೂ ಕೊಡಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮೋದಿಯವರನ್ನು ಸಾವಿನ ಕೂಪಕ್ಕೆ ತಳ್ಳೋ ಆಹ್ವಾನ ನೀಡಿತ್ತು: ಸ್ಮೃತಿ ಇರಾನಿ

  • ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

    ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

    ಕಾರವಾರ: ವಿಧಾನಸಭಾ ಚುನಾವಣೆ (Karnataka Assembly Election) ಸಮೀಪಿಸುತಿದ್ದಂತೆ ಪಕ್ಷ ತೊರೆದು ಹೊಸ ಪಕ್ಷ ಸೇರುವುದು ನಾಯಕರ ಪಾಲಿಗೆ ಹೊಸದೇನಲ್ಲ. ಆದ್ರೆ ಇದೀಗ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಕ್ಷೇತ್ರದಲ್ಲಿ ಅವರಿಗೆ ಎದುರಾಳಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ (Shashibhushan Hegde) ಜೆಡಿಎಸ್‌ ತೊರೆದು ಬಿಜೆಪಿ (BJP) ಸೇರಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (NalinKumar Kateel) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

    ಶಶಿಭೂಷಣ್ ಹೆಗಡೆ ಹಿಂದೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ಧಿಸಿ 26,625 ಮತಗಳನ್ನ ಪಡೆದು 3ನೇ ಸ್ಥಾನದಲ್ಲಿದ್ದರು. ಈ ಹಿಂದೆ 2004 ರಲ್ಲಿ ಕುಮಟಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 31,273 ಮತ ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಮೋಹನ್ ಕೆ.ಶಟ್ಟಿ ವಿರುದ್ಧ 3,465 ಮತಗಳ ಅಂತರದಿಂದ ಸೋತರೇ, 2008 ರಲ್ಲಿ ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 30,201 ಮತ ಪಡೆದು ಅಂದಿನ ಜೆಡಿಎಸ್‌ ಅಭ್ಯರ್ಥಿ ದಿನಕರ್ ಶಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲು ಕಂಡು 3ನೇ ಸ್ಥಾನದಲ್ಲಿದ್ದರು. ದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಮೂರು ಸೋಲಿನ ನಂತರ ಜೆಡಿಎಸ್ ನಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ವದಗಿಬಂದರೂ ಸ್ಫರ್ಧಿಸುವ ಮನಸ್ಸು ಮಾಡಲಿಲ್ಲ. ಈ ನಡುವೆ ಕಾಂಗ್ರೆಸ್‌ ಸಹ ಶಶಿಭೂಷಣ್ ಹೆಗಡೆ ಅವರನ್ನ ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸಿತ್ತು. ಆದರೇ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯತ್ನದ ಫಲದಿಂದ ಕೊನೆಗೂ ಮತ್ತೆ ಶಶಿಭೂಷಣ್ ಹೆಗಡೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಗೇರಿ ಅವರಿಗೆ ಪ್ರಬಲ ಬ್ರಾಹ್ಮಣ ನಾಯಕರ ಪ್ರತಿಸ್ಪರ್ಧಿ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದನ್ನೂ ಓದಿ: ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ

    ಈ ಬಾರಿ ಶಶಿಭೂಷಣ್ ಹೆಗಡೆ ಸ್ಪರ್ಧೆಯಿಲ್ಲ: ಶಶಿಭೂಷಣ್ ಹೆಗಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಬದಲಾಗಿ ಪಕ್ಷದ ಕೆಲಸದಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಸ್ಥಾನಕ್ಕೆ ಅನಂತ್‌ ಕುಮಾರ್ ಹೆಗಡೆ ಸ್ಪರ್ಧಿಸದಿದ್ದರೇ ಆ ಸ್ಥಾನಕ್ಕೆ ಶಶಿ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಬಿಜೆಪಿ ಪಕ್ಷದ್ದಾಗಿದೆ.

  • ನಾನು ನಿಮ್ಮ ಸೇವೆ ಮಾಡಬೇಕು ಅಂತಿದ್ದೀನಿ, ಆದ್ರೆ ಕಾಂಗ್ರೆಸ್ ನನ್ನ ಸಮಾಧಿ ಬಯಸುತ್ತಿದೆ – ಮೋದಿ

    ನಾನು ನಿಮ್ಮ ಸೇವೆ ಮಾಡಬೇಕು ಅಂತಿದ್ದೀನಿ, ಆದ್ರೆ ಕಾಂಗ್ರೆಸ್ ನನ್ನ ಸಮಾಧಿ ಬಯಸುತ್ತಿದೆ – ಮೋದಿ

    ದಾವಣಗೆರೆ: ಕರ್ನಾಟಕಕ್ಕೆ ಬಹುಮತ ಪಡೆದ ಬಿಜೆಪಿ (BJP) ಸರ್ಕಾರದ ಅವಶ್ಯಕತೆಯಿದೆ. ನಿಮ್ಮ ಸೇವೆ ಮಾಡಲು ಬಿಜೆಪಿ ಸರ್ಕಾರವನ್ನ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮನವಿ ಮಾಡಿದರು.

    ದಾವಣಗೆರೆಯಲ್ಲಿ (Davanagere) ನಡೆದ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಸೇವೆ ಮಾಡಬೇಕೆಂದು ಬಯಸುತ್ತಿದ್ದೇನೆ. ಆದರೆ ಕಾಂಗ್ರೆಸ್ ನನ್ನ ಸಮಾಧಿ ಬಯಸುತ್ತಿದೆ. ಜನರು ಮೋದಿ ನಿನ್ನ ಕಮಲ ಅರಳುತ್ತೆ ಅಂತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮನೆಗೆ ಅಮಿತ್ ಶಾ ತಿಂಡಿಗೆ ಹೋಗಿಲ್ವಾ? – ಹೆಚ್. ವಿಶ್ವನಾಥ್ ಪ್ರಶ್ನೆ

    ದಾವಣಗೆರೆಯಲ್ಲಿ 4 ವಿಜಯ ಸಂಕಲ್ಪಯಾತ್ರೆಗಳ ಮಹಾಸಂಗಮ ಯಶಸ್ವಿಯಾಗಿದೆ. ಸಾಕಷ್ಟು ಜನಬೆಂಬಲ ಸಿಕ್ಕಿದೆ. ಮುಂದಿನ 3 ತಿಂಗಳೂ ಹುರುಪು ಹೀಗೆ ಇರಬೇಕು. ನಮ್ಮ ಕಾರ್ಯಕರ್ತರು ಎಲ್ಲ ಬೂತ್‌ಗಳಿಗೂ ತೆರಳಿ ಬಿಜೆಪಿ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಿಗಲಿದೆ: ಮೋದಿ

    ಕಾರ್ಯಕರ್ತರಿಗೆ ಷಹಬ್ವಾಸ್ ಅಂದ ಮೋದಿ:
    ಕರ್ನಾಟಕದ ಒಂದು ವಿಡಿಯೋ ನೋಡ್ತಿದ್ದೆ. ಅದರಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿಯೊಬ್ಬರು ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳ ಮೋಕ್ಷ ಪ್ರಕರಣ ಪ್ರಸ್ತಾಪಿಸಿದರು. ಆದರೆ `ನನ್ನ ಕಾರ್ಯಕರ್ತ ನನ್ನ ಮಿತ್ರ, ನನ್ನ ಸಹೋದರ ಇದ್ದಂತೆ. ನಮ್ಮಲ್ಲಿ ದೊಡ್ಡ ಕಾರ್ಯಕರ್ತ, ಚಿಕ್ಕ ಕಾರ್ಯಕರ್ತ ಅಂತಾ ಇಲ್ಲ ಎಲ್ಲರೂ ಸಮಾನರೇ ಎಂದು ಹೇಳಿದರು.

    ಕರ್ನಾಟಕದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಬಡವನ ಅಗತ್ಯತೆಗಳನ್ನೂ ಬಿಜೆಪಿ ಸರ್ಕಾರ ಪೂರೈಸುತ್ತೆ. ಕಾಂಗ್ರೆಸ್, ಜೆಡಿಎಸ್ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಗೆ ಕಮ್ಮಿ ರೈತ ಫಲಾನುಭವಿಗಳ ಹೆಸರನ್ನ ಕಳುಹಿಸಿದ್ದರು. ಆದ್ರೆ ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಅವಕಾಶವಾದಿ, ಸ್ವಾರ್ಥ ಸಮ್ಮಿಶ್ರ ಸರ್ಕಾರವನ್ನ ನೀವು ನೋಡಿದ್ದೀರಿ, ಇಂತಹ ಸಮ್ಮಿಶ್ರ ಸರ್ಕಾರದಿಂದ ರಾಜ್ಯಕ್ಕೆ ಸಾಕಷ್ಟು ನಷ್ಟ ಆಗಿದೆ. ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಅಗತ್ಯವಿದೆ. ಬಹುಮತ ಪಡೆದ ಬಿಜೆಪಿ ಸರ್ಕಾರದ ಅಗತ್ಯ ಇದೆ. ಹಾಗಾಗಿ ಈ ಬಾರಿ ಬಿಜೆಪಿ ಸರ್ಕಾರವನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

  • HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ

    HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ

    ಕಾರವಾರ: ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ `ಪಂಚರತ್ನ’ಯಾತ್ರೆ ಸಂಪೂರ್ಣ ಪಂಚರ್ ಆಗಿದೆ. ಕಾಂಗ್ರೆಸ್‌ಗೆ ಕ್ಷೇತ್ರ ಹುಡುಕಾಡುವ ಹೀನಾಯ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ (NalinKumar Kateel) ಲೇವಡಿ ಮಾಡಿದ್ದಾರೆ.

    ಭಟ್ಕಳದ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ 3 ಜನರ ನಡುವೆ ಕಿತ್ತಾಟ ನಡೆಯುತ್ತಿದೆ. ಆಂತರಿಕ ಕಲಹ ಪ್ರಾರಂಭವಾಗಿದೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಪರಮೇಶ್ವರ್ ಅವರನ್ನ ಮುಗಿಸಿರುವ ಸಿದ್ಧರಾಮಯ್ಯ (Siddaramaiah), ಡಿಕೆಶಿಯನ್ನೂ ಮುಗಿಸ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ

    ಸಿದ್ದರಾಮಯ್ಯನವರಿಗೆ ಸದ್ಯ ಕ್ಷೇತ್ರವೇ ಇಲ್ಲದಂತಾಗಿದೆ. ವರುಣಾ (Varuna Constituency), ಬಾದಾಮಿ, ಕೋಲಾರದಲ್ಲಿ ಸೋಲಿನ ಭೀತಿ ಎದುರಾಗಿದೆ. ಕಾಂಗ್ರೆಸ್ಸಿಗೆ ಇಂತಹ ಹೀನಾಯ ಸ್ಥಿತಿ ಬಂದಿದೆ. ಪ್ರಶ್ನಾತೀತ ನಾಯಕರ ಸ್ಥಿತಿಯೇ ಹೀಗಾದ್ರೆ ಕಾರ್ಯಕರ್ತರ ಸ್ಥಿತಿ ಹೇಗಿರಬೇಕು? ಎಂದು ಪ್ರಶ್ನಿಸಿದ ಕಟೀಲ್, ರಾಹುಲ್‌ಗಾಂಧಿ ನಿವೃತ್ತಿಯ ಮೂಡ್‌ನಲ್ಲಿದ್ದಾರೆ. 10 ವರ್ಷಗಳ ಮೊದಲೇ ಇದನ್ನೆಲ್ಲಾ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ

    ಇದೇ ವೇಳೆ ಹೆಚ್‌ಡಿಕೆ ವಿರುದ್ಧ ವ್ಯಂಗ್ಯವಾಡಿದ ನಳಿನ್‌ಕುಮಾರ್ ಕಟೀಲ್, ಹಾಸನದ ಟಿಕೆಟ್ ಯಾರಿಗೆ ಕೊಡಬೇಕು ಎಂಬ ವಿಚಾರಕ್ಕೆ ಕುಟುಂಬದಲ್ಲೇ ಕಲಹ ಪ್ರಾರಂಭವಾಗಿದೆ. ಇದರಿಂದ `ಪಂಚರತ್ನ’ಯಾತ್ರೆ ಸಂಪೂರ್ಣ ಪಂಚರ್ ಆಗಿದೆ. ಶರ್ಟ್ ಹೊಲಿಸಿ ಮುಖ್ಯಮಂತ್ರಿಯಾಗುವ ಕನಸು ಹೊತ್ತವರಿಗೆ ಮುಂದಿನ ಚುನಾವಣೆಯಲ್ಲಿ ಮುಖಭಂಗವಾಗುತ್ತದೆ ಎಂದು ಕುಟುಕಿದ್ದಾರೆ.

    ಉರಿಗೌಡ ನಂಜೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಹತ್ತಾರು ಇತಿಹಾಸ ತಿರುಚಿದೆ. ಉರಿಗೌಡ, ನಂಜೇಗೌಡರ ವಿಚಾರದಲ್ಲೂ ನಡೆದಿರಬಹುದು. ಈ ಬಗ್ಗೆ ಹೇಳಿಕೆ ನೀಡಲು ನಾನು ಇತಿಹಾಸ ತಜ್ಞನಲ್ಲ, ಇತಿಹಾಸದ ವಿಚಾರದ ಬಗ್ಗೆ ಚರ್ಚೆಗಳಾಗಲಿ, ಸತ್ಯಾಸತ್ಯತೆಗಳು ಹೊರಗೆ ಬರಲಿ ಎಂದು ಒತ್ತಾಯಿಸಿದ್ದಾರೆ.

  • ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದಿದ್ದ ಸೈಲೆಂಟ್ ಸುನಿ – ಸದಸ್ಯತ್ವ ರದ್ದುಗೊಳಿಸಿದ ಪಕ್ಷ

    ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದಿದ್ದ ಸೈಲೆಂಟ್ ಸುನಿ – ಸದಸ್ಯತ್ವ ರದ್ದುಗೊಳಿಸಿದ ಪಕ್ಷ

    ಬೆಂಗಳೂರು: ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದ ರೌಡಿಶೀಟರ್ ಸೈಲೆಂಟ್ ಸುನೀಲನ (Silent Sunila) ಸದಸ್ಯತ್ವವನ್ನು ಕೆಲವೇ ಗಂಟೆಗಳಲ್ಲಿ ರದ್ದುಮಾಡಲಾಗಿದೆ.

    ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ (BJP MemberShip) ಪಡೆದು ಸಂಭ್ರಮಿಸುತ್ತಿದ್ದ ವಿಚಾರದ ಬೆಳಕಿಗೆ ಬರುತ್ತಿದ್ದಂತೆ, ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದು, ಕೆಲವೇ ಗಂಟೆಗಳಲ್ಲಿ ಸದಸ್ಯತ್ವ ರದ್ದುಪಡಿಸಿದೆ. ಇದನ್ನೂ ಓದಿ: ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಈ ಬಗ್ಗೆ ಬೆಂಗಳೂರು (Bengaluru) ಕೇಂದ್ರದ ಅಧ್ಯಕ್ಷ ಮಂಜುನಾಥ್ `ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಜನರನ್ನು ಸೇರಿಸಿಕೊಳ್ಳಲು ಮಿಸ್ಡ್ಕಾಲ್ ಅಭಿಯಾನ ಶುರು ಮಾಡಿದೆ. ಈ ಸಂಖ್ಯೆಗೆ ಮಿಸ್ಡ್ಕಾಲ್ ಕೊಟ್ಟು ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ ಪಡೆದಿದ್ದಾನೆ. ಈ ವಿಷಯ ತಿಳಿದ ಕೂಡಲೇ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದಿಂದ ಸೈಲೆಂಟ್ ಸುನೀಲನ ಬಿಜೆಪಿ ಸದಸ್ಯತ್ವ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ

    ಕೆಲ ದಿನಗಳ ಹಿಂದೆಯಷ್ಟೇ ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಬಗ್ಗೆ ವಿವಾದ ಎದ್ದಿತ್ತು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel), ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ಹೇಳಿದ್ದರು. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಸೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಶನಿವಾರ ಸುನೀಲ ಪಕ್ಷ ಸೇರ್ಪಡೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಆತನ ಸದಸ್ಯತ್ವವನ್ನು ರದ್ದುಮಾಡಿದೆ.

  • ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

    ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

    ಬೆಂಗಳೂರು: ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ (BJP) ಸರ್ಕಾರ ಇರುತ್ತೆ. ಆಮೇಲೆ ಈ ದುಷ್ಟ ಸರ್ಕಾರವನ್ನ ಜನ ಓಡಿಸ್ತಾರೆ. ಕಾಂಗ್ರೆಸ್ (Congress) ಅಧಿಕಾರಕ್ಕೆ ಬರ್ತಿದ್ದಂತೆ ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ (Vidhana Soudha) ಕ್ಲೀನ್ ಮಾಡಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಗುಡುಗಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ತಲೆ ಕೆಟ್ಟು ಹೋಗಿದೆ. 200 ಯುನಿಟ್ ವಿದ್ಯುತ್, 2 ಸಾವಿರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ ಮೇಲೆ ತಲೆ ಕೆಡಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಗಿದೆ. ಯಡಿಯೂರಪ್ಪ (BS Yediyurappa) -ಬೊಮ್ಮಾಯಿ (Basavaraj Bommai) ಜಗಳ, ಸಿ.ಟಿ ರವಿ – ಕಟೀಲ್ ನಡುವೆ ಜಗಳ ಇದೆ. ಇದನ್ನ ಹೇಳೋಕೆ ಆಗ್ತಿಲ್ಲ ಅಷ್ಟೇ. ಅದಕ್ಕಾಗಿ ನಮ್ಮ ಜೊತೆಗಿದ್ದ ಸಚಿವ ಸುಧಾಕರ್ (K Sudhakar) ಅವರಿಂದ ಪ್ರೆಸ್‌ಮೀಟ್ ಮಾಡಿಸಿದ್ದಾರೆ ಎಂದು ಕುಟುಕಿದ್ದಾರೆ.

    40 ಪರ್ಸೆಂಟ್ ಬ್ರ್ಯಾಂಡ್‌ ಬಿಜೆಪಿ ಅವರು ಮಾಡಿದ್ದಾರೆ. ತೇಜಸ್ವಿ ಸೂರ್ಯ (Tejasvi Surya) ಬೆಡ್ ಸ್ಕ್ಯಾಮ್‌ ಅಂದ. ಪಿಪಿಇ ಕಿಟ್ ನಲ್ಲಿ ಸ್ಕ್ಯಾಮ್‌ ಅಂತ ಹೇಳಿದ. ಆ ಬಗ್ಗೆ ಮಾತಾಡಿ, ಎಸ್ಸಿ-ಎಸ್ಟಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನ ಅಮಾನತು ಮಾಡಿದ್ದಾರೆ. ಅರ್ಜಿ ಹಾಕದವರಿಗೂ ಹಣ ಕೊಟ್ಟಿದ್ದಾರೆ. ದಲಿತರ ದುಡ್ಡು ಹೊಡೆದಿದ್ದಾರೆ. 40 ಪರ್ಸೆಂಟ್ ನೀವು ತಿಂದು ಈಗ ಕಾಂಗ್ರೆಸ್‌ಗೆ ಒರೆಸೋಕೆ ಹೋಗ್ತೀರಾ? ಎಂದು ಪ್ರಶ್ನಿಸಿದ್ದಾರೆ.

    ರಾಮನಗರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು ಮಾಡಿಲ್ಲ. ನಮ್ಮ ಪಕ್ಕದ ಕ್ಷೇತ್ರ. ನಮಗೆ ಇರೋದು ಒಂದೇ ದಿನ ಸಮಯ. ಅವತ್ತು ಹೊಸದಾಗಿ ರಚನೆ ಆಗಿರೋ ಪ್ರಚಾರ ಸಮಿತಿ ಸಭೆ ಇದೆ. ಸೋತ ಅಭ್ಯರ್ಥಿಗಳು, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸಭೆ ಕರೆದಿದ್ದೇನೆ. ನಮ್ಮ ರಾಜ್ಯದ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀವಿ. ನಾವು ಕೊಟ್ಟ ಗ್ಯಾರಂಟಿಗಳ ಬಗ್ಗೆ, ನಮ್ಮ ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡಿ, ರೂಪುರೇಷೆ ತಯಾರು ಮಾಡ್ತೀವಿ. ಈ ದೃಷ್ಟಿಯಿಂದ ಮುಂದೂಡಿಕೆ ಮಾಡಿದ್ದೇವೆ. ರಾಮನಗರ ಪಕ್ಕದಲ್ಲೇ ಇದೆ ಯಾವಾಗ ಬೇಕಾದ್ರು ಕಾರ್ಯಕ್ರಮ ಮಾಡ್ತೀವಿ ಎಂದು ಹೇಳಿದ್ದಾರೆ.

    ಸಾಲಮನ್ನಾ ಭರವಸೆ ಇನ್ನೂ ಹೇಳಿಲ್ಲ: ಇದೇ ವೇಳೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸಾಲ ಮನ್ನಾ, ರೈತರಿಗೆ ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಭರವಸೆಯನ್ನೂ ಇನ್ನು ಹೇಳಿಲ್ಲ ಎಂಬುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 10 ಕೆಜಿ ಅಕ್ಕಿ ಬಗ್ಗೆ ಹೇಳಿದ್ದೇವೆ, ಉಳಿದಿದ್ದಕ್ಕೆ ಟೈಂ ಇದೆ. ಆಮೇಲೆ ಅ ಬಗ್ಗೆ ಹೇಳ್ತೀವಿ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್-ಜೆಡಿಎಸ್ ಸಭೆಗಳಲ್ಲಿ ಚಪ್ಪಲಿ ಹಿಡಿದು ಕಿತ್ತಾಟ – ಬಿಜೆಪಿ ಸಭೆಯಲ್ಲಿ ಮಾತ್ರ ಶಿಸ್ತು: ನಳಿನ್ ಕುಮಾರ್ ಕಟೀಲ್

    ಕಾಂಗ್ರೆಸ್-ಜೆಡಿಎಸ್ ಸಭೆಗಳಲ್ಲಿ ಚಪ್ಪಲಿ ಹಿಡಿದು ಕಿತ್ತಾಟ – ಬಿಜೆಪಿ ಸಭೆಯಲ್ಲಿ ಮಾತ್ರ ಶಿಸ್ತು: ನಳಿನ್ ಕುಮಾರ್ ಕಟೀಲ್

    – ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್

    ಬೆಂಗಳೂರು: ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಸಭೆಗಳಲ್ಲಿ ಚಪ್ಪಲಿ ಹಿಡಿದು ಕಿತ್ತಾಡುತ್ತಾರೆ. ಆದರೆ ಬಿಜೆಪಿ (BJP) ಸಭೆಯಲ್ಲಿ ಮಾತ್ರ ಶಿಸ್ತು. ಶಾಂತವಾಗಿ ನಮ್ಮ ಸಭೆ ನಡೆಯುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಿಡಿಕಾರಿದ್ದಾರೆ.

    ಬೆಂಗಳೂರಿನ ರಾಜ್ಯ ಬಿಜೆಪಿ ಜಗನ್ನಾಥ ಭವನ ಕಚೇರಿಯಲ್ಲಿ ನಡೆದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಪರಸ್ಪರ ಚಪ್ಪಲಿಗಳಲ್ಲಿ ಕಿತ್ತಾಡಿಕೊಂಡು ಸಭೆ ಮಾಡ್ತಾರೆ ಎಂದು ಕಟೀಲ್ ತಿವಿದಿದ್ದಾರೆ. ಇದನ್ನೂ ಓದಿ: ತನಿಖೆ ಮಾಡಿದ್ರೆ ಕಾಂಗ್ರೆಸ್ಸಿನವರಿಗೋಸ್ಕರ ಹೊಸ ಜೈಲು ತೆರೆಯಬೇಕಾಗುತ್ತೆ: ಆರಗ ತಿರುಗೇಟು

    ಮೂರು ಪಕ್ಷಗಳಲ್ಲೂ ಮೂರು ವಿಭಿನ್ನತೆ ಇದೆ. ರಾಷ್ಟ್ರೀಯ ಪಾರ್ಟಿಯೊಂದರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ. ಇನ್ನೊಂದು ಕುಟುಂಬದ ಪಕ್ಷ ಇದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ಮೇಲೆ ಬಿದ್ದಿರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ನಮ್ಮ ಚಪ್ಪಲಿಗಳು ಹೊರಗೆ ಇರುತ್ತವೆ. ಶಾಂತವಾಗಿ ನಮ್ಮ ಸಭೆ ನಡೆಯುತ್ತದೆ. ಒಂದು ಅಪ್ಪ ಮಕ್ಕಳ ಪಕ್ಷ, ಇನ್ನೊಂದು ರಾಷ್ಟ್ರೀಯ ಪಕ್ಷ. ಎರಡೂ ಪಕ್ಷಗಳಲ್ಲಿ ಕಿತ್ತಾಟ. ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಕೈ-ತೆನೆ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಚುನಾವಣೆಯಲ್ಲಿ ಬೇರೆಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ನಿರಂತರವಾಗಿ ರೈತಪರ ನಿಲುವನ್ನು ಹೊಂದಿದ್ದು, ವಿವಿಧ ರೈತೋಪಯೋಗಿ ಕಾರ್ಯ ಮಾಡಿವೆ. ರೈತರ ಒಳಿತಿಗಾಗಿ ಯೋಜನೆಗಳನ್ನು ಜಾರಿಗೊಳಿಸಿವೆ. ಹಿಂದಿನ ಕಾಂಗ್ರೆಸ್-ಯುಪಿಎ ಸರ್ಕಾರಗಳು ರೈತರನ್ನು ಮತಬ್ಯಾಂಕಿಗೆ ಮತ್ತು ಘೋಷಣೆಗೆ ಸೀಮಿತಗೊಳಿಸಿದ್ದವು. ಬಿಜೆಪಿ ಸರ್ಕಾರಗಳು ರೈತಪರ ನಿಲುವನ್ನು ತಳೆದು ರೈತರ ಏಳಿಗೆಗೆ ಶ್ರಮಿಸಿವೆ. ಪ್ರಧಾನಿಯವರ ಕಲಬುರ್ಗಿ, ಹುಬ್ಬಳ್ಳಿ ಕಾರ್ಯಕ್ರಮಗಳಿಗೆ ನಿರೀಕ್ಷೆಗೆ ಮೀರಿ ಜನಸಾಗರ ಬಂದಿದೆ. ವಿವಿಧ ಸಮಾವೇಶಗಳಲ್ಲೂ ಗರಿಷ್ಠ ಜನರು ಸೇರುತ್ತಿದ್ದಾರೆ. ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿ ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಜನರು ಬಿಜೆಪಿಯತ್ತ ಹರಿದುಬರುತ್ತಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೇಶ್ಯೆ ಅನ್ನೋ ಪದ ಬಳಸಿದ ಫೂಟೇಜ್ ಕೊಟ್ಟರೆ ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ: ಬಿ.ಕೆ ಹರಿಪ್ರಸಾದ್

    ಮತ್ತೆ ಬಿಜೆಪಿ ಸರ್ಕಾರವನ್ನು ನಾವು ರಚಿಸುತ್ತೇವೆ. ಯಡಿಯೂರಪ್ಪ ಅವರ ಮಾರ್ಗದರ್ಶನ, ಬೊಮ್ಮಾಯಿಯವರ ನೇತೃತ್ವದಲ್ಲಿ ತಂಡವಾಗಿ ನಾವು ಚುನಾವಣೆ ಎದುರಿಸಲಿದ್ದೇವೆ. ಈ ಬಿಜೆಪಿ ಪರ ವಾತಾವರಣವನ್ನು ಇನ್ನಷ್ಟು ಗಟ್ಟಿಮಾಡುವ ಕೆಲಸ ರೈತ ಮೋರ್ಚಾದಿಂದ ಆಗಬೇಕು. ಜನರು ಸ್ವಯಂಪ್ರೇರಣೆಯಿಂದ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುತ್ತಿದ್ದಾರೆ. ಸದಸ್ಯರಾಗಲು ಹೆಮ್ಮೆಯಿಂದ ಮುಂದೆ ಬರುತ್ತಿದ್ದಾರೆ. ಜನರು ಬಿಜೆಪಿಪರವಾಗಿದ್ದಾರೆ. ಈ ದೇಶವನ್ನು ಲೂಟಿ ಮಾಡಿದ, ಭಿಕ್ಷುಕರ ರಾಷ್ಟ್ರವಾಗಿ ಬಿಂಬಿಸಿದ ಪಕ್ಷ ಕಾಂಗ್ರೆಸ್ ಎಂದು ಜನರಿಗೆ ಗೊತ್ತಿದೆ. ರೈತರನ್ನು ಕಡೆಗಣಿಸಿದ್ದು ಕಾಂಗ್ರೆಸ್. ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ರೈತರ ಬದುಕು ಹಸನು ಮಾಡಿದ ಪಕ್ಷ ಬಿಜೆಪಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರು ಎಂದು ಜನರಿಗೆ ಗೊತ್ತಿದೆ ಎಂದು ವಿವರಿಸಿದ್ದಾರೆ.

    ಮೋದಿ ಅವರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ನೀಡಿದೆ. ಅಲ್ಲದೆ ರೈತರ ಫಸಲು ನಷ್ಟವಾದಾಗ ನಷ್ಟ ಭರಿಸುವ ವಿಮಾ ಯೋಜನೆ ಜಾರಿಗೊಳಿಸಿದೆ. ಯೂರಿಯಾಕ್ಕಾಗಿ ಹಿಂದೆ ರೈತರು ಅತಿ ಹೆಚ್ಚು ಕಷ್ಟ, ತೊಂದರೆ ಪಡುತ್ತಿದ್ದರು. ಈಗ ಬೇವುಲೇಪಿತ ಯೂರಿಯಾ ಮತ್ತು ಇತರ ರಸಗೊಬ್ಬರವು ಸಬ್ಸಿಡಿಯಲ್ಲಿ ಸುಲಭವಾಗಿ ಸಿಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕೃಷಿ ಬಜೆಟ್ ಮಂಡಿಸಿದ್ದರು. ಅಲ್ಲದೆ, ಹಾಲಿಗೆ ಪ್ರೋತ್ಸಾಹಧನ ನೀಡಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರವು ಕೂಡ ರೈತ ವಿದ್ಯಾನಿಧಿ ಪ್ರಕಟಿಸಿದೆ. ರೈತರಿಗಾಗಿ ಹತ್ತಾರು ಯೋಜನೆಗಳನ್ನು ಬಿಜೆಪಿ ಸರ್ಕಾರಗಳು ಅನುಷ್ಠಾನಕ್ಕೆ ತಂದು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಿವೆ. ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರಗಳು ಮಾಡಿದ ಸಾಧನೆ ಮತ್ತು ರೈತಪರವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಜನರು ಮತ್ತು ರೈತರಿಗೆ ತಿಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಕೇಂದ್ರ ಸರ್ಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಸಮಗ್ರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಡಬಲ್ ಎಂಜಿನ್ ಸರ್ಕಾರಗಳು ಶ್ರಮಿಸಿದೆ. ಕೇಂದ್ರ ಸರ್ಕಾರದ ಕೃಷಿಕರ ಪರ ಅನುದಾನವು 8 ಪಟ್ಟು ಹೆಚ್ಚಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದ ನಮ್ಮ ಸರ್ಕಾರವು ಕೃಷಿಕನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಪ್ರಕಟಿಸಿ, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 100 ಕಿಸಾನ್ ಡ್ರೋನ್‍ಗಳಿಗೆ ಚಾಲನೆ ಕೊಟ್ಟ ಕುರಿತು ಮಾಹಿತಿ ನೀಡಿದರು. ಕಿಸಾನ್ ರೈಲು ಮೂಲಕ ಉತ್ಪನ್ನಗಳ ಸುಲಭ ಸಾಗಣೆಗೆ ನೆರವಾಗಿದೆ. ಜಾತಿ, ಮತ ಮತ್ತು ಪಂಥ ಮೀರಿದ ಮೋರ್ಚಾ ರೈತರದು. ಬೂತ್ ವಿಜಯ ಅಭಿಯಾನದಲ್ಲಿ ಶೇ.95ರಷ್ಟು ಸಾಧನೆ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫೆ.17ಕ್ಕೆ ರಾಜ್ಯ ಬಜೆಟ್‌ ಮಂಡನೆ – ಜೆ.ಸಿ.ಮಾಧುಸ್ವಾಮಿ

    ಜ. 21 ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಈರಣ್ಣ ಕಡಾಡಿಯವರ ಹುಟ್ಟೂರಲ್ಲಿ ನಡೆಯಲಿದೆ. ಅದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಫೆಬ್ರವರಿ ಕೊನೆಯ ವಾರದಲ್ಲಿ 10 ಲಕ್ಷ ರೈತರ ದೊಡ್ಡ ಸಮಾವೇಶ ನಡೆಸಬೇಕಿದೆ. ರೈತ ಮೋರ್ಚಾ ಗಟ್ಟಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕರ್ನಾಟಕದ ಪ್ರಕೋಷ್ಠಗಳೂ ಕ್ರಿಯಾಶೀಲವಾಗಿವೆ. ಇದರ ಪರೀಕ್ಷೆ ಚುನಾವಣೆ ವೇಳೆ ನಡೆಯಲಿದ್ದು, ಪಕ್ಷಕ್ಕೆ ಗರಿಷ್ಠ ಸ್ಥಾನ ಗೆಲ್ಲಿಸಿ ಕೊಡುವ ಮೂಲಕ ಅತಿ ಹೆಚ್ಚು ಅಂಕ ಗಳಿಸಿ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ತಿಂಗಳಿಗೊಮ್ಮೆ ಕರ್ನಾಟಕ ಭೇಟಿಗೆ ಪ್ಲಾನ್ – ಚುನಾವಣೆ ತಯಾರಿ ಆರಂಭಿಸಿದ ಬಿಜೆಪಿ

    ಮೋದಿ ತಿಂಗಳಿಗೊಮ್ಮೆ ಕರ್ನಾಟಕ ಭೇಟಿಗೆ ಪ್ಲಾನ್ – ಚುನಾವಣೆ ತಯಾರಿ ಆರಂಭಿಸಿದ ಬಿಜೆಪಿ

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ (Gujarat Assembly Election) ಬೆನ್ನಲ್ಲೇ ಕರ್ನಾಟಕದ (Karnataka) ಮೇಲೆ ಗಮನ ಹರಿಸಿರುವ ಬಿಜೆಪಿ (BJP) ಹೈಕಮಾಂಡ್ ರಾಜ್ಯದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ (Nalinkumar Kateel) ಸೂಚಿಸಿದೆ. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ (Narendra Modi) ತಿಂಗಳಿಗೆ ಒಮ್ಮೆ ಕರ್ನಾಟಕ ಭೇಟಿಗೆ ನಿರ್ಧರಿಸಿದ್ದು, ಕೇಂದ್ರ ಸಚಿವರು ನಿರಂತರ ಭೇಟಿಗೆ ತಿರ್ಮಾನಿಸಿದ್ದಾರೆ.

    ಸೋಮವಾರ ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda), ಕರ್ನಾಟಕ ನಮ್ಮ ಮುಂದಿನ ಗುರಿ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ನರೇಂದ್ರ ಮೋದಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    ಸಭೆಯಲ್ಲಿ 2023ರಲ್ಲಿ ಬರುವ ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತ್ರಿಪುರ ಸೇರಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ವಿಶೇಷವಾಗಿ ಕರ್ನಾಟಕ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಾಯಿತು.

    ಬೂತ್ ಮಟ್ಟದ ಸಂಘಟನೆ ಮತ್ತು ಬೃಹತ್ ರ‍್ಯಾಲಿಗಳನ್ನು ಆಯೋಜಿಸಲು ಹೈಕಮಾಂಡ್ ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಿದೆ. ಚಳಿಗಾಲದ ಸಂಸತ್ ಅಧಿವೇಶನದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ. 2019ರಲ್ಲಿ ಬಿಜೆಪಿ ಸೋತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ವಹಿಸಲಾಗಿದೆ. ಅವರು ಎಂಟು ವಿಧಾನಸಭಾ ಕ್ಷೇತ್ರಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಕೇಂದ್ರ ಇಂಧನ ಸಚಿವ ಕೃಷ್ಣ ಪಾಲ್ ಗುರ್ಜರ್ ಹಾಸನ ಮತ್ತು ಮಂಡ್ಯ ಲೋಕಸಭಾ ಸ್ಥಾನಗಳು ಮತ್ತು ಈ ಜಿಲ್ಲೆಗಳ ವಿಧಾನಸಭಾ ಸ್ಥಾನಗಳ ಜವಾಬ್ದಾರಿಯನ್ನು ನೀಡಲಾಗಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಧರ್ಮದಂಗಲ್: ದೇವಸ್ಥಾನದ ಉತ್ಸವ, ಕಂಬಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ದಲಿತರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ನಾಲ್ಕು ಬೃಹತ್ ಸಮುದಾಯ ರ‍್ಯಾಲಿಗಳನ್ನು ಆಯೋಜಿಸಲು ಚಿಂತಿಸಿದ್ದು, ಇದರಲ್ಲಿ ನರೇಂದ್ರ ಮೋದಿ ಅವರು ಕನಿಷ್ಠ ಎರಡರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

    Live Tv
    [brid partner=56869869 player=32851 video=960834 autoplay=true]