Tag: nalin kumar katil

  • ಬೊಮ್ಮಾಯಿ, ಕಟೀಲ್‌ಗೆ ತರಾಟೆ – ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಆರ್‌ಎಸ್‌ಎಸ್‌ ಚಾಟಿ

    ಬೊಮ್ಮಾಯಿ, ಕಟೀಲ್‌ಗೆ ತರಾಟೆ – ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಆರ್‌ಎಸ್‌ಎಸ್‌ ಚಾಟಿ

    ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಹಾಗೂ ಬಿಜೆಪಿ ನಡವಳಿಕೆ ಬಗ್ಗೆ ಆರ್‌ಎಸ್‌ಎಸ್‌ ಗರಂ ಆಗಿದೆ. ಶನಿವಾರ ರಾತ್ರಿ ಮೂರು ಗಂಟೆಗಳ ಕಾಲ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಬಿಜೆಪಿ ವಿರುದ್ಧ ಆರ್‌ಎಸ್‌ಎಸ್‌ ಕಿಡಿಕಾರಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಆರ್‌ಎಸ್‌ಎಸ್‌ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರನ್ನು ಹೊರಗಿಟ್ಟು ‌ಸಭೆ ನಡೆಸಲು ಆರ್‌ಎಸ್‌ಎಸ್‌ ಮುಂದಾಗಿತ್ತು. ಬಿಜೆಪಿ ಹೈಕಮಾಂಡ್ ನಾಯಕರೊಬ್ಬರ ಮನವಿ ಬಳಿಕ‌ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿತು. ಇದನ್ನೂ ಓದಿ: ಆಂಜನೇಯಸ್ವಾಮಿ ಕನ್ನಡ ನಾಡಿನ ಪುತ್ರ: ಬೊಮ್ಮಾಯಿ

    ಸಭೆ‌ ಆರಂಭವಾಗುತ್ತಿದ್ದಂತೆ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಗರಂ ಆದರು. ನಾವು ನಿಮ್ಮನ್ನು ಬಿಟ್ಟು ಸಭೆ ಮಾಡಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ ಜನತೆಗೆ ತಪ್ಪು ಸಂದೇಶ ಹೋಗುತ್ತೆ ಅಂತಾ ರಾಷ್ಟ್ರೀಯ ನಾಯಕರೊಬ್ಬರು‌ ಮನವಿ ಮಾಡಿಕೊಂಡರು. ಅದಕ್ಕಾಗಿ ನಿಮ್ಮ ನಾಲ್ವರನ್ನು ಸಭೆಗೆ ಆಹ್ವಾನಿಸಿದ್ದು ಎಂದು ಆರಂಭದಲ್ಲೇ ತರಾಟೆಗೆ ತೆಗೆದುಕೊಂಡರು.

    ಮೂರು ಗಂಟೆ ಸಭೆಯಲ್ಲಿ ಪಕ್ಷ, ಸರ್ಕಾರಕ್ಕೆ ಆರ್‌ಎಸ್‌ಎಸ್‌ ಬುದ್ದಿಮಾತು ಹೇಳಿದೆ. ಪಕ್ಷದಲ್ಲಿ ಬರೀ ಗೊಂದಲ, ಒಬ್ಬೊಬ್ಬ ಒಂದೊಂದು ಮಾತಾಡ್ತಾನೆ, ಯಾರು ಜವಾಬ್ದಾರಿ ಹೊರುತ್ತಾರೆ? ಸಂಪುಟ ಪುನಾರಚನೆ, ಕೆಲ ಬದಲಾವಣೆಗಳ ಕುರಿತು ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತಾಡುತ್ತಾರೆ. ಕೆಲವರು ಪಕ್ಷದ ವಿಚಾರದಲ್ಲೂ ಬಹಿರಂಗವಾಗಿ‌ ಏನೇನೋ ಮಾತಾಡುತ್ತಿದ್ದಾರೆ. ಯಾರು ಅವರಿಗೆಲ್ಲ ಅಧಿಕಾರ ಕೊಟ್ಟವರು ಎಂದು ಆರ್‌ಎಸ್‌ಎಸ್‌ ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ, ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ: ಬಿಜೆಪಿ

    BASAVARAJ BOMMAI

    ಪಕ್ಷದ ವಕ್ತಾರ ಎಲ್ಲಿದ್ದಾರೆ? ಏನ್ ಮಾತಾಡ್ತಿದ್ದಾರೆ? ಸರ್ಕಾರಕ್ಕೆ ಯಾರಾದರೂ ವಕ್ತಾರರು ಇದ್ದಾರಾ? ರಾಜಕೀಯ ನಿರ್ಣಯಗಳು ಹಾಗೂ ಸರ್ಕಾರದ ನಿರ್ಣಯಗಳ ವೇಳೆ ಯಾರು ಮಾತನಾಡ್ತಾರೆ? ರಾಜಕೀಯ ನಿರ್ಣಯ, ಸರ್ಕಾರದ ನಿರ್ಣಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ರಾಜಕಾರಣ ನಮಗೆ ಮುಖ್ಯ. ಆದರೆ ಆ ಕೆಲಸ ಯಾರು ಮಾಡುತ್ತಿದ್ದಾರೆ? ಸರ್ಕಾರದ ಕೆಲಸಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಬರೀ ವಿವಾದಗಳ ಬಗ್ಗೆ ಮಾತಾಡುತ್ತಾರೆ. ಇದು ಸರ್ಕಾರ, ಪಕ್ಷಕ್ಕೆ ಒಳ್ಳೆ ಹೆಸರು ತರುತ್ತಾ ಎಂದು ಸಿಎಂ, ರಾಜ್ಯಾಧ್ಯಕ್ಷ ಇಬ್ಬರ ಮೇಲೂ ಆರ್‌ಎಸ್‌ಎಸ್‌ ಕಿಡಿಕಾರಿತು.

  • ನಳಿನ್ ಕುಮಾರ್ ಕಟೀಲ್‍ ಒಬ್ಬ ಜೋಕರ್: ಶರಣ್‍ಪ್ರಕಾಶ್ ಪಾಟೀಲ್

    ನಳಿನ್ ಕುಮಾರ್ ಕಟೀಲ್‍ ಒಬ್ಬ ಜೋಕರ್: ಶರಣ್‍ಪ್ರಕಾಶ್ ಪಾಟೀಲ್

    ಕಲಬುರಗಿ: ಬಿಜೆಪಿ ರಾಜ್ಯಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಅವರು ಏನು ಮಾತನಾಡುತ್ತಾರೋ ಅವರಿಗೆ ಗೊತ್ತಾಗಲ್ಲ ಎಂದು ಮಾಜಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

    nalin kumar kateel

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 23 ಸ್ಥಾನಗಳನ್ನು ಗೆದ್ದಿದ್ರೆ, ಬಿಜೆಪಿ 23 ಸ್ಥಾನಗಳನ್ನು ಗೆದ್ದಿದೆ. ಆದರೆ ಕಟೀಲ್ ನಮಗೆ ಬಹುಮತ ಸಿಕ್ಕಿದೆ ಎಂದು ಹೇಳಿದ್ದಾರೆ. ಯಕ್ಷಗಾನದಲ್ಲಿ ಹೇಗೆ ನಟನೆ ಮಾಡುತ್ತಾರೋ, ಹಾಗೆ ಕಟೀಲ್ ಕೂಡ ಭಾಷಣ ಮಾಡುತ್ತಾರೆ. ಪಾಲಿಕೆಯಲ್ಲಿ ಬಹುಮತ ಸಿಕ್ಕಿದೆ ಎಂದು ಹೇಗೆ ಅಂದುಕೊಳ್ಳುತ್ತಾರೋ ಗೊತ್ತಿಲ್ಲ. ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲೂ ಸಹ ಕಾಂಗ್ರೆಸ್ ಪಾರುಪತ್ಯ ಮೆರದಿದೆ. ಹೊಸ ಸಿಎಂ ಬಂದ ಖುಷಿಯಲ್ಲಿ ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ:ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಕಲಬುರಗಿ ಪಾಳಿಕೆಯಲ್ಲಿ ಜೆಡಿಎಸ್ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆ. ಈ ಬಗ್ಗೆ ಜೆಡಿಎಸ್ ಕೂಡ ಒಲವು ವ್ಯಕ್ತಪಡಿಸಿದೆ. ಪಕ್ಷದ ಮಟ್ಟದಲ್ಲಿ ಇಂದು ಮೈತ್ರಿ ಬಗ್ಗೆ ಚರ್ಚೆ ನಡೆಯಲಿದೆ ಈ ಬಗ್ಗೆ ದೇವೆಗೌಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ ಎಂದರು.  ಇದನ್ನೂ ಓದಿ:  ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

    ಪಾಲಿಕೆ ವಿಚಾರದಲ್ಲಿ ಡಿಕೆಶಿ, ಸಿದ್ದು ಸೈಲೆಂಟ್ ಆಗಿಲ್ಲ. ಕುಮಾರಸ್ವಾಮಿ ಜೊತೆ ಡಿಕೆಶಿ ನಿರಂತರ ಚರ್ಚೆ ನಡೆಸಿದ್ದಾರೆ. ಸ್ಥಳೀಯ ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ ಸದಸ್ಯರೊಂದಿಗೆ ಮೈತ್ರಿಗೆ ಸಿದ್ಧರಿದ್ದಾರೆ. ಏನೇ ಗೊಂದಲಗಳಿದ್ದರು ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ 100ಕ್ಕೆ ನೂರು ಖಚಿತ. ಅಧಿಕಾರದ ಬಗ್ಗೆ ಬಿಜೆಪಿ ತಿರುಕನ ಕನಸು ಕಾಣುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಬೇಕಾದರೆ ಹುಷಾರಾಗಿರಿ ಎಂದು ಕಟೀಲ್ ವಿರುದ್ಧ ಶರಣಪ್ರಕಾಶ್ ಪಾಟೀಲ್ ಕಿಡಿಕಾರಿದರು

  • ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ : ಕಟೀಲ್ ಸಂತಸ

    ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ : ಕಟೀಲ್ ಸಂತಸ

    ಬೆಂಗಳೂರು: ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

    nalin kumar kateel

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯು ಯಡಿಯೂರಪ್ಪನವರ ಆಶೀರ್ವಾದ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದೆ. ಈ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಮೂರು ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಆಗಿದೆ. ಅದಕ್ಕಾಗಿ ನಾನು ಮತದಾರರಿಗೆ ಕೃತಜ್ಞತೆ ಆರ್ಪಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್

    25 ವರ್ಷಗಳ ಹಿನ್ನೆಲೆ ನೋಡಿದಾಗ ಬೆಳಗಾವಿಯಲ್ಲಿ ಪಾರ್ಟಿ ಹೆಸರಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಈಗ ಪಕ್ಷದ ಚಿನ್ಹೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇವು, ಗೆಲುವು ಸಿಕ್ಕಿದೆ. ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ

    ಇದೇ ವೇಳೆ, ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ನಾನು, ನಾನು ಎಂದು ಟವೆಲ್ ಹಾಕುವ ಕೆಲಸ ಮಾಡಿದ್ದರು. ಆದರೀಗ ಜನ ಟವೆಲ್ ತೆಗೆದು ಹಾಕ್ಬಿಡಿ ಎಂದು ಹೇಳುತ್ತಿದ್ದಾರೆ. ಡಿಕೆಶಿ ಫೇಲ್ಯೂರ್ ಅಧ್ಯಕ್ಷ ಅಂತಾ ಬಿಂಬಿಸುವಲ್ಲಿ ಸಿದ್ದರಾಮಯ್ಯ ಕೂಡ ಸಕ್ಸಸ್ ಆಗಿದ್ದಾರೆ. ಕಾಂಗ್ರೆಸ್ ನ ಒಳ ಜಗಳ ಹೊರಗೆ ಬಂದಿದೆ. ಪಾಲಿಕೆ ಚುನಾವಣೆಯಿಂದ ದೂರ ಸರಿದ್ದ ಸಿದ್ದರಾಮಯ್ಯ ಅವರ ತಂತ್ರ ಈಗ ಫಲಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದರು.

  • ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ಸಾಧನೆ- ಬಿಎಸ್‍ವೈ, ಕಟೀಲ್‍ಗೆ ಸಂತೋಷ್ ಅಭಿನಂದನೆ

    ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ಸಾಧನೆ- ಬಿಎಸ್‍ವೈ, ಕಟೀಲ್‍ಗೆ ಸಂತೋಷ್ ಅಭಿನಂದನೆ

    – ಈ ವರೆಗೆ ಶೇ.48 ವಾರ್ಡ್‍ಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು

    ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶೇ.48ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ  ಅಭಿನಂದನೆ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಬಿ.ಎಲ್.ಸಂತೋಷ್, ಒಟ್ಟು 82,616 ಗ್ರಾಮ ಪಂಚಾಯತ್ ವಾರ್ಡ್‍ಗಳ ಪೈಕಿ ಈ ವರೆಗೆ 5,344, ಅಂದರೆ ಶೇ.48 ರಷ್ಟು ವಾರ್ಡ್‍ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಗ್ರೇಟ್ ಗೋಯಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಗ್ರಾಮ ಪಂಚಾಯತ್ ಚುನಾವಣೆಗಳ ಮತ ಎಣೆಕೆ ಕಾರ್ಯ ಭರದಿಂದ ಸಾಗಿದ್ದು, ಬಹುತೇಕ ವಾರ್ಡ್‍ಗಳಲ್ಲಿ ಫಲಿತಾಂಶ ಪ್ರಕಟವಾಗಿದೆ. ಇನ್ನೂ ಕೆಲ ವಾರ್ಡ್‍ಗಳಲ್ಲಿ ಎಣಿಕೆ ನಡೆಯುತ್ತಿದೆ. ಸಂಜೆ ಅಥವಾ ರಾತ್ರಿಯ ವೇಳೆ  ಎಲ್ಲ ಗ್ರಾಮ ಪಂಚಾಯಿತಿಗಳ ಫಲಿತಾಂಶ ಹೊರ ಬೀಳಲಿದೆ..

  • ಬಜೆಟ್‍ನಲ್ಲಿ ಕಟೀಲ್‍ಗೆ ಸೆಡ್ಡು ಹೊಡೆದ ಸಿಎಂ: ಮಾಜಿ ಸಚಿವ ಸೊರಕೆ

    ಬಜೆಟ್‍ನಲ್ಲಿ ಕಟೀಲ್‍ಗೆ ಸೆಡ್ಡು ಹೊಡೆದ ಸಿಎಂ: ಮಾಜಿ ಸಚಿವ ಸೊರಕೆ

    ಉಡುಪಿ: ಬಜೆಟ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸೆಡ್ಡು ಹೊಡೆದಿದ್ದಾರೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದ ನಳೀನ್ ಕುಮಾರ್ ಕಟೀಲ್ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಾಗ ಬಜೆಟ್‍ನಲ್ಲಿ ಯೋಜನೆಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವ್ಯಂಗ್ಯವಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲೇ ಹಲವು ನೇತ್ರಾವತಿ ತಿರುವು ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿತ್ತು. ಅದು ಯಡಿಯೂರಪ್ಪನವರಿಗೆ ಗೊತ್ತಿತ್ತು. ಈಗ ಸಮಯ ಬಳಸಿಕೊಂಡು ತನ್ನ ರಾಜ್ಯಾಧ್ಯಕ್ಷರಿಗೆ ಸಿಎಂ ಯಡಿಯೂರಪ್ಪ ನೇರ ಸೆಡ್ಡು ಹೊಡೆದಿದ್ದಾರೆ. ಎತ್ತಿನಹೊಳೆ ಯೋಜನೆಗೆ 1500 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸೊರಕೆ ಛೇಡಿಸಿದರು.

    ಕೊರೊನಾ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ ಬಜೆಟ್‍ನಲ್ಲಿ ಇರಲಿಲ್ಲ. ಆರ್ಥಿಕ ಚೇತರಿಕೆ ಕೊಡದ ಬಜೆಟ್ ಮಂಡನೆಯಾಗಿದೆ. ದೇಶ, ವಿಶ್ವ ಚಿಂತಿಸುವಾಗ ಸಿಎಂ ಯಡಿಯೂರಪ್ಪನಿಗೆ ಕೊರೊನಾ ಚಿಂತೆಯೇ ಇಲ್ಲ ಎಂದರು.

    ಕರಾವಳಿ ಸಮಸ್ಯೆಯನ್ನು ಸಿಎಂ ಉಲ್ಲೇಖ ಮಾಡಿಲ್ಲ. ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಕ್ರಮ ಇಲ್ಲ. ಯಡಿಯೂರಪ್ಪ ಬಜೆಟ್ ಪುನರುಜ್ಜೀವನ ಕೊಡುವಲ್ಲಿ ವಿಫಲವಾಗಿದೆ. ಯಡಿಯೂರಪ್ಪರದ್ದು ನಿರಾಶಾದಾಯಕ ಬಜೆಟ್. ಕೇಂದ್ರದ ಅನುದಾನ ಬಂದಿಲ್ಲವೆಂದು ಸಿಎಂ ಬಜೆಟ್ ಭಾಷಣದಲ್ಲೇ ಒಪ್ಪಿಕೊಂಡಿರುವುದು ಅವರ ಅಸಹಾಯಕತೆಯ ಪ್ರದರ್ಶನ ಎಂದರು.

  • ರಾಜಕೀಯ ಅಂದ್ರೆ ಕಾಲೆಳೆಯೋ ಕಬಡ್ಡಿ- ಕಟೀಲ್ ಮಾತಿನ ಹಿಂದಿನ ಮರ್ಮವೇನು?

    ರಾಜಕೀಯ ಅಂದ್ರೆ ಕಾಲೆಳೆಯೋ ಕಬಡ್ಡಿ- ಕಟೀಲ್ ಮಾತಿನ ಹಿಂದಿನ ಮರ್ಮವೇನು?

    ಉಡುಪಿ: ರಾಜಕೀಯ ಒಂದು ಕಬಡ್ಡಿ ಆಟ. ಅಂಕಣದಲ್ಲಿ ಎಲ್ಲರೂ ಕಾಲು ಎಳೆಯುವವರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾರ್ಮಿಕವಾಗಿ ಮಾತನಾಡಿದರು. ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಕುಯಿಲಾಡಿ ಸುರೇಶ್ ನಾಯಕ್ ಪದಗ್ರಹಣ ಸಂದರ್ಭ ಮಾತನಾಡಿದರು.

    ಅಧಿಕಾರದ ಮದ ತಲೆಗೆ ಹತ್ತಬಾರದು. ಹೆಗಲಲ್ಲಿ ಜವಾಬ್ದಾರಿ ಹೊತ್ತು ಸಾಗಬೇಕು. ಯಡಿಯೂರಪ್ಪ ಸಿಎಂ ಆದ ಕೂಡಲೇ ನನಗೆ ಅಧಿಕಾರ ಕೊಟ್ಟರು. ಅವರು ಕಾಮಧೇನು ಇದ್ದಂತೆ ರಾಜ್ಯದಲ್ಲಿ ಅವರ ಬಳಿ ಬಂದವರಿಗೆ ಇಲ್ಲ ಎಂಬ ಉತ್ತರ ಸಿಗಲ್ಲ ಎಂದರು.

    ಕಾಂಗ್ರೆಸ್ ಇನ್ನೂ ರಾಜ್ಯ ಅಧ್ಯಕ್ಷರನ್ನು ನೇಮಿಸಿಲ್ಲ. ಕಾಂಗ್ರೆಸ್ ನಾವೀಕನಿಲ್ಲದ ನೌಕೆಯಾಗಿದೆ. ದೇಶದಲ್ಲಿ ಕಾಂಗ್ರೆಸ್ಸಿನ ದೋಣಿ ಮುಳುಗುತ್ತಿದೆ. ಕಾಂಗ್ರೆಸ್ ಗ್ರಾಮ ಪಂಚಾಯತ್ ಗೆಲ್ಲದ ಪರಿಸ್ಥಿತಿಯಲ್ಲಿದೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ನಡುವೆ ತಿಕ್ಕಾಟ ಜೋರಾಗಿದೆ. ಒಬ್ಬರಿಗೆ ಅಧಿಕಾರ ಕೊಟ್ಟರೂ ಕಾಂಗ್ರೆಸ್ ಒಡೆದ ಮನೆ ಆಗುತ್ತದೆ. ಯಾರು ಅಧ್ಯಕ್ಷರಾದರೂ ಪಕ್ಷ ಮೂರು ಹೋಳಾಗಿ ಒಡೆಯುತ್ತದೆ ಎಂದರು. ಕಾಂಗ್ರೆಸ್ಸಿನಿಂದ ದೇಶ, ರಾಜ್ಯ ನಡೆಸಲು ಸಾಧ್ಯವಿಲ್ಲ ಎಂದರು.

  • ಒಬಾಮಾ ಬಂದಿದ್ದಾಗ ಕಾಂಗ್ರೆಸ್ ಸೈಲೆಂಟಾಗಿದ್ಯಾಕೆ: ನಳೀನ್ ಕುಮಾರ್ ಕಟೀಲ್ ಪ್ರಶ್ನೆ

    ಒಬಾಮಾ ಬಂದಿದ್ದಾಗ ಕಾಂಗ್ರೆಸ್ ಸೈಲೆಂಟಾಗಿದ್ಯಾಕೆ: ನಳೀನ್ ಕುಮಾರ್ ಕಟೀಲ್ ಪ್ರಶ್ನೆ

    ಉಡುಪಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಭಾರತ-ಅಮೆರಿಕ ಸಂಬಂಧ ಗಟ್ಟಿಯಾಗಿದೆ. ಅಭಿವೃದ್ಧಿಗೆ ಈ ಭೇಟಿ ಪೂರಕ ಮತ್ತು ಮಹತ್ವದ್ದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ. ಟ್ರಂಪ್ ಪ್ರವಾಸ ಗುಜರಾತ್‍ನಿಂದ ಆರಂಭವಾಗುತ್ತಿದ್ದು, ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ ಎಂದರು.

    ಭಾರತಕ್ಕೆ ಎಲ್ಲಾ ನೆರವು ಅಮೆರಿಕದಿಂದ ಸಿಗಲಿದೆ. ವಿಪಕ್ಷಗಳು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದೆ. ಬಿಜೆಪಿಯನ್ನು ಟೀಕೆ ಮಾಡುವುದು ಕಾಂಗ್ರೆಸ್ ಜಾಯಮಾನ. ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್ಸಿಗೆ ಇಲ್ಲ. ಕಾಂಗ್ರೆಸ್ ಆಡಳಿತ ಇರುವಾಗ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದಾಗ ಕಾಂಗ್ರೆಸ್ ಆವಾಗ ಕಣ್ಮುಚ್ಚಿ ಕೂತಿದ್ಯಾಕೆ ಎಂದು ಪ್ರಶ್ನೆ ಮಾಡಿದರು.

  • ಪೌರತ್ವ ಪ್ರಮಾಣ ಪತ್ರ ವಿತರಣಾ ದಿನಾಂಕ ನಿಗದಿಗೆ ಸಂಗಣ್ಣ ಕರಡಿ ಒತ್ತಾಯ

    ಪೌರತ್ವ ಪ್ರಮಾಣ ಪತ್ರ ವಿತರಣಾ ದಿನಾಂಕ ನಿಗದಿಗೆ ಸಂಗಣ್ಣ ಕರಡಿ ಒತ್ತಾಯ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿರುವ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಪತ್ರ ಬರೆದಿದ್ದಾರೆ.

    ಸಿಂಧನೂರು ತಾಲೂಕಿನಲ್ಲಿರುವ ಆರ್.ಎಚ್ ಕ್ಯಾಂಪ್ 1ರಿಂದ 5ರಲ್ಲಿ ಸುಮಾರು 20 ಸಾವಿರ ಜನ ಪೌರತ್ವ ಪಡೆಯುವ ಫಲಾನುಭವಿಗಳು ಇದ್ದಾರೆ. ಆದ್ದರಿಂದ ಸಿಂಧನೂರಿನಲ್ಲಿ 15 ಜನವರಿ 2020ರೊಳಗೆ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಿನಾಂಕ ನಿಗದಿಪಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಅಂತ ಪತ್ರದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಂಗಣ್ಣ ಕರಡಿ ಕೋರಿದ್ದಾರೆ.

    1970-71ರಲ್ಲಿ ಬಂದ ಬಾಂಗ್ಲಾ ನಿವಾಸಿಗಳು ಈ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿದ್ದಾರೆ. ಭಾರತ ಬಾಂಗ್ಲಾ ವಿಭಜನೆ ಬಳಿಕ ಬಂದವರಿಗೆ ನಿರಾಶ್ರಿತ ಯೋಜನೆಯಡಿ ಆಗಿನ ಕೇಂದ್ರ ಸರ್ಕಾರ ಜಮೀನು, ನಿವೇಶನ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡಿತ್ತು. ಯೋಜನೆ ಮುಗಿದ ಬಳಿಕ ಬಂದ ವಲಸಿಗರು ಇದೂವರೆಗೆ ಅಕ್ರಮವಾಗಿಯೇ ವಾಸಮಾಡುತ್ತಿದ್ದರು. ಈಗ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಇಲ್ಲಿನ ಕ್ಯಾಂಪ್‍ಗಳಲ್ಲಿ ವಾಸಿಸುವ ಎಲ್ಲಾ ಬಾಂಗ್ಲಾ ವಲಸಿಗರು ಭಾರತ ಪೌರತ್ವ ಪಡೆಯುತ್ತಿದ್ದಾರೆ.

  • ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರನ್ನು ತೆಗಳಿದ ಬಿಜೆಪಿ ಮುಖಂಡನ ಉಚ್ಛಾಟನೆ

    ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರನ್ನು ತೆಗಳಿದ ಬಿಜೆಪಿ ಮುಖಂಡನ ಉಚ್ಛಾಟನೆ

    ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ತೆಗಳಿ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಹೊಗಳಿದ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

    ತುಮಕೂರು ಜಿಲ್ಲೆ ಕೊರಟಗೆರೆ ಮಂಡಳದ ಕಾರ್ಯದರ್ಶಿ ಕೆ. ಶಿವರುದ್ರಯ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಯಡಿಯೂರಪ್ಪ ಮಾಸ್ ಲೀಡರ್, ಅವರಂಥಹ ಮಾಸ್ ಲೀಡರ್ ಬಿಜೆಪಿ ಪಕ್ಷದಲ್ಲಿ ಬೇರೆ ಯಾರು ಇಲ್ಲ. ಯಡಿಯೂರಪ್ಪ ಒಂದು ಕುಗ್ರಾಮಕ್ಕೆ ಹೋದರೂ 5 ಸಾವಿರ ಜನ ಸೇರುತ್ತಾರೆ. ನಳಿನ್ ಕುಮಾರ್ ಕಟೀಲ್ ಬಂದರೆ 5 ಸಾವಿರ ಜನನೂ ಸೇರಲ್ಲ ಎಂದು ನಳೀನ್ ಕುಮಾರ್ ಕಟೀಲ್ ಅವರನ್ನು ತೆಗಳಿ ಸಾಮಾಜಿಕ ಜಾಲತಾಣದಲ್ಲಿ ಶಿವರುದ್ರಯ್ಯ ವಿಡಿಯೋ ಹರಿಬಿಟ್ಟಿದ್ದರು.

    ಅಲ್ಲದೆ ಗ್ರಾಮ ಪಂಚಾಯ್ತಿಯಲ್ಲೂ ಗೆಲ್ಲಲು ಸಾಮಥ್ರ್ಯ ಇಲ್ಲದವರು ಯಡಿಯೂರಪ್ಪ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ನೆಮ್ಮದಿಯಾಗಿ ಅಧಿಕಾರ ನಡೆಸಲು ಕೊಡುತ್ತಿಲ್ಲ. ಈಗಲಾದರೂ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚೊದು ಗ್ಯಾರಂಟಿ ಎಂಬ ಹೇಳಿಕೆ ನೀಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧ್ಯಕ್ಷ ಜಿ.ಬಿ ಜ್ಯೋತಿಗಣೇಶ್ ಶಿವರುದ್ರಯ್ಯ ಅವರನ್ನು ವಜಾಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.

  • ಟ್ರಾಫಿಕ್ ನಿಯಮ ಉಲ್ಲಂಘಿಸಿದ ಡಿಸಿಎಂ, ಎಂಎಲ್‍ಎ, ಬಿಜೆಪಿ ರಾಜ್ಯಾಧ್ಯಕ್ಷ

    ಟ್ರಾಫಿಕ್ ನಿಯಮ ಉಲ್ಲಂಘಿಸಿದ ಡಿಸಿಎಂ, ಎಂಎಲ್‍ಎ, ಬಿಜೆಪಿ ರಾಜ್ಯಾಧ್ಯಕ್ಷ

    ಕೊಪ್ಪಳ: ಜಿಲ್ಲೆಯ ಶಾಸಕರು, ಡಿಸಿಎಂ ಲಕ್ಷಣ ಸವದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಪ್ಪಳದಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ.

    ನಳಿನ್ ಕುಮಾರ್ ಕಟೀಲ್ ಹಾಗೂ ಡಿಸಿಎಂ ಲಕ್ಷಣ ಸವದಿ ಅವರು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸಂಚಾರ ಮಾಡಿದ್ದಾರೆ. ಅಲ್ಲದೆ ಹಿಂದೆ ಮುಂದೆ ಪೊಲೀಸ್ ವಾಹನಗಳಿದ್ದರೂ ನಿಯಮ ಉಲ್ಲಂಘನೆಗೆ ದಂಡ ವಿಧಿಸಿಲ್ಲ.

    ಸೀಟ್ ಬೆಲ್ಟ್ ಧರಿಸದಿದ್ದರೆ ಟ್ರಾಫಿಕ್ ನಿಯಮದ ಪ್ರಕಾರ ಒಂದು ಸಾವಿರ ದಂಡ ವಿಧಿಸಬೇಕಾಗುತ್ತದೆ. ಆದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರು ಬಿಜೆಪಿ ನಾಯಕರು ದಂಡ ಕಟ್ಟಲಿಲ್ಲ. ಇದನ್ನು ನೋಡಿದ ಸಾರ್ವಜನಿಕರು ಜನ ಸಾಮಾನ್ಯರಿಗೆ ಒಂದು ನ್ಯಾಯ? ಬಿಜೆಪಿ ನಾಯಕರಿಗೆ ಒಂದು ನ್ಯಾಯಾನಾ? ಎಂದು ಪ್ರಶ್ನಿಸುತ್ತಿದ್ದಾರೆ.

    ಸೀಟ್ ಬೆಲ್ಟ್ ಧರಿಸದ ಡಿಸಿಎಂ ಲಕ್ಷಣ ಸವದಿ ಅವರು ಕಾರ್ ಇಳಿಯುತ್ತಿದ್ದಂತೆ ಎಸ್‍ಪಿ ಹಾಗೂ ಡಿಸಿ ಹೂಗುಚ್ಚ ನೀಡಿ ಬರ ಮಾಡಿಕೊಂಡಿದ್ದಾರೆ.