Tag: Nalin Kateel

  • ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್

    ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್

    ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬರೀ ಮೋದಿ ಹೆಸರೊಂದೇ ಸಾಕಾಗಲ್ಲ. ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಖಡಕ್ ಸಂದೇಶ ನೀಡಿದ್ದಾರೆ.

    ಬಿಜೆಪಿ ಕಾರ್ಯಕಾರಿಣಿಯಲ್ಲಿ ಬಿಎಲ್ ಸಂತೋಷ್ ಮಾಡಿದ ಭಾಷಣ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ವಿರೋಧಿ ಅಲೆ ಎದುರಿಸಿ ಚುನಾವಣೆ ಗೆಲ್ಲಬೇಕು. ಇದಕ್ಕಾಗಿ ಪಕ್ಷ ಸಂಘಟಿಸಿ ಎಂದು ಕರೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ. ಇಲ್ಲಿಯೂ ಯುಪಿ ಮಾದರಿ ಅನುಸರಿಸಲಾಗುವುದು ಎನ್ನುವ ಮೂಲಕ ಹಲವರಿಗೆ ಬಿಗ್ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ

    ಬಿಜೆಪಿ ಕೋರ್ ಕಮಿಟಿ ಸಭೆ ಅಂತಿಮ ಕ್ಷಣದಲ್ಲಿ ರದ್ದುಗೊಂಡಿತು. ಬಿಜೆಪಿ ಪ್ರಮುಖರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರಾಜ್ಯ ಬಿಜೆಪಿ ನಾಯಕರಿಗೆ ಮೂರು ಟಾಸ್ಕ್ ನೀಡಿದ್ದಾರೆ. ಮಿಷನ್ 150 ಗುರಿ ತಲುಪಲು ಭರದ ಸಿದ್ಧತೆ ಮಾಡಿಕೊಳ್ಳಿ. ಕಷ್ಟದ ವಿಧಾನಸಭೆ ಕ್ಷೇತ್ರಗಳನ್ನು ರಿಸ್ಕ್ ಆಧಾರದಲ್ಲಿ ವಿಂಗಡಿಸಿಕೊಂಡು ಫೋಕಸ್ ಮಾಡಿ. ಕಾಂಗ್ರೆಸ್, ಜೆಡಿಎಸ್ ಕೋಟೆಗಳಲ್ಲಿ ಸ್ಪೆಷಲ್ ಫೋಕಸ್‍ಗೆ ತಾಕೀತು ಮಾಡಿದ್ದಾರೆ. ಕೇಂದ್ರ ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿ. ಸಿಎಂ ಸಹಿತ ಪದಾಧಿಕಾರಿಗಳವರೆಗೆ ಎಲ್ಲರೂ ಪಕ್ಷ ಸಂಘಟನೆ ಮಾಡಿ. ಸಚಿವರು ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜಿಲ್ಲಾ ಸಂಘಟನೆಯ ಮೇಲೆ ಗಮನ ಹರಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಗಿಳಿದ ಉಕ್ರೇನ್‌ನಿಂದ ವಾಪಸ್ ಆದ ವೈದ್ಯಕೀಯ ವಿದ್ಯಾರ್ಥಿಗಳು

  • ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

    ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

    – ಇಬ್ಬರೂ ಬೇಜವಾಬ್ದಾರಿ ಹೇಳಿಕೆ ಕೊಡ್ತಿದ್ದಾರೆ

    ಬೆಂಗಳೂರು: ಬ್ಲೂ ಫಿಲಂ ಬಗ್ಗೆ ಹೆಚ್‍ಡಿಕೆಗೆ ಹೇಗೆ ಗೊತ್ತಾಯ್ತು? ಹೇಗೆ ಕಲಿತ್ಕೊಂಡ್ರು ಅವ್ರು? ಬ್ಲೂ-ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವತ್ ನಾರಾಯಣ ಅವರು, ಉಪಚುನಾವಣೆ ಬಂದಾಗ ಕುಮಾರಸ್ವಾಮಿ ಕೂಗುಮಾರಿ ಥರ ಮಾತಾಡ್ತಾರೆ. ಉಪಚುನಾವಣೆಯ ವೇಳೆ ಹೆಚ್‍ಡಿಕೆ ಮನಸ್ಥಿತಿ ಕಳ್ಕೊಂಡು ಮಾತಾಡ್ತಾರೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್‍ಡಿಕೆ ಸ್ಥಿಮಿತ ಕಳ್ಕೊಂಡು ಬೇಜವಾಬ್ದಾರಿ ಹೇಳಿಕೆ ಕೊಡ್ತಿದ್ದಾರೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

    ಹೆಚ್‍ಡಿಕೆ ಆರ್‌ಎಸ್‌ಎಸ್ ಬಗ್ಗೆ ಆರೋಪ ಮಾಡಿದ್ದಾರೆ. ಹೆಚ್‍ಡಿಕೆ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಅಪ್ರಸ್ತುತವಾಗಿ ಹೆಚ್‍ಡಿಕೆ ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡಿ ಪ್ರಸ್ತುತರಾಗಲು ಪ್ರಯತ್ನ ಪಡ್ತಿದ್ದಾರೆ. ಆರ್‌ಎಸ್‌ಎಸ್ ಕಚೇರಿಗೆ ಬಂದು ನೋಡಿ ಎಂದು ಹೆಚ್‍ಡಿಕೆಗೆ ಕಟೀಲ್ ಅವರು ಆಹ್ವಾನಿಸಿದ್ದಾರೆ. ಆದರೆ ಹೆಚ್‍ಡಿಕೆ ಅವರು ಆರ್‌ಎಸ್‌ಎಸ್ ಶಾಖೆಗೆ ಬ್ಲೂ-ಫಿಲಂ ನೋಡಲು ಬರ್ಲಾ ಎಂದು ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಕಿಡಿಕಾರಿದರು.

    ಬ್ಲೂ ಫಿಲಂ ಬಗ್ಗೆ ಹೆಚ್‍ಡಿಕೆಗೆ ಹೇಗೆ ಗೊತ್ತಾಯ್ತು? ಹೇಗೆ ಕಲಿತ್ಕೊಂಡ್ರು ಅವ್ರು? ಬ್ಲೂ-ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ. ಸಿಂದಗಿ, ಹಾನಗಲ್ ನಲ್ಲಿ ಜೆಡಿಎಸ್‍ಗೆ ಜನ ಛೀಮಾರಿ ಹಾಕ್ತಾರೆ. ಜನರಿಗೂ ಗೊತ್ತಿದೆ ಜೆಡಿಎಸ್ ಬಂಡವಾಳ. ಸಿದ್ದರಾಮಯ್ಯ ಮತ್ತು ಹೆಚ್‍ಡಿಕೆ ಅವರು ಏಕೆ ಹೀಗೆ ಮಾತಾಡ್ತಿದ್ದಾರೆ ಎಂದು ಅವರವರ ಪಕ್ಷದ ಕಾರ್ಯಕರ್ತರಿಗೂ ಗೊತ್ತಿದೆ. ಸಾಧನೆಗಳನ್ನು ಹೇಳಿಕೊಂಡು ಮತಕೇಳಿ ಹೆಚ್‍ಡಿಕೆ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ಹೆಚ್‍ಡಿಕೆ ಕ್ಷಮೆ ಕೇಳಿ ಹೇಳಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

  • ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

    ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

    – ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ಸುದ್ದಿಗೋಷ್ಠಿ
    – ಕಟೀಲ್ ಹೇಳಿಕೆ ಸುಳ್ಳು ಅಂತ ಕಾಂಗ್ರೆಸ್‍ನವರು ಹೇಳಲಿ

    ಬೆಂಗಳೂರು: ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದ ಹಾಗಾಗಿದೆ ಎಂದು ವಕ್ತಾರರಾದ ಗಣೇಶ್ ಕಾರ್ಣಿಕ್ ರಾಜ್ಯಾಧ್ಯಕ್ಷರ ನಳಿನ್ ಕಟೀಲ್ ಅವರ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್, ಡ್ರಗ್ಗಿಸ್ಟ್ ಎಂಬ ಹೇಳಿಕೆ ಸಮರ್ಥಿಸಿ ಮಾತನಾಡಿದ್ದಾರೆ.

    ಕಟೀಲ್ ಅವರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಖಾತೆಯ ಟ್ವೀಟ್ ನಲ್ಲಿ ಅವಹೇಳನ ಪದ ಬಳಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ವಕ್ತಾರರಾದ ಗಣೇಶ್ ಕಾರ್ಣಿಕ್, ಚಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದರು. ಇದನ್ನೂ ಓದಿ:  ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    Nalin kumar katil

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಣೇಶ್ ಕಾರ್ಣಿಕ್ ಅವರು, ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದ ಹಾಗಾಗಿದೆ. 2016 ರಲ್ಲಿ ನಡೆದ ಘಟನೆ ಬಗ್ಗೆ ವರದಿಯಾಗಿತ್ತು. ವರದಿಯಲ್ಲಿ ಉಲ್ಲೇಖವಾದ ವಿಚಾರವನ್ನು ಕಟೀಲ್ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು ಎಂದರು.

    ಸುಬ್ರಮಣಿಯನ್ ಸ್ವಾಮಿ ಅವರು ಖಾಸಗಿ ವಾಹಿನಿಯಲ್ಲಿ ರಾಹುಲ್ ಗಾಂಧಿ ಅವರು ಮಾದಕ ವಸ್ತುಗಳ ಬಳಕೆ ಬಗ್ಗೆ ಪ್ರಸ್ತಾಪ ಮಾಡಿದ್ದರು. 2001ರಲ್ಲಿ 1.60 ಲಕ್ಷ ಡಾಲರ್ ಮೌಲ್ಯದ ಡ್ರಗ್ಸ್ ರಾಹುಲ್ ಗಾಂಧಿ ಬಳಿ ಪತ್ತೆ ಆಗಿತ್ತು. ಈ ಸಂಬಂಧ ಅಮೆರಿಕದ ಎಫ್‍ಬಿಐ ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಯುಪಿಎ ಅಧ್ಯಕ್ಷೆ ಆಗಿದ್ದ ಸೋನಿಯಾ ಗಾಂಧಿ ಅವರ ಮನವಿಯ ಮೇರೆಗೆ ಅಮರಿಕದ ಅಧ್ಯಕ್ಷ ಬುಷ್ ಅವರಿಗೆ ಪ್ರಧಾನಿ ವಾಜಪೇಯಿ ಮಾತನಾಡಿ ರಾಹುಲ್ ಗಾಂಧಿ ಅವರಿಗೆ ಬಿಡುಗಡೆಯ ಭಾಗ್ಯ ಒದಗಿಸಿದ್ದರು ಎಂದು ಮಾಹಿತಿ ನೀಡಿದರು.

    ಈ ವರದಿಗಳ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ನಿನ್ನೆ ಭಾಷಣದಲ್ಲಿ ಉಲ್ಲೇಖಿಸಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ಸುಳ್ಳು ಅಂತ ಯಾರೂ ಹೇಳಿಲ್ಲ. ಕಾಂಗ್ರೆಸ್‍ನವರು ಅನಗತ್ಯ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಖುದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಟೀಲ್ ಹೇಳಿಕ ವಿರೋಧ ಮಾಡಿಲ್ಲ. ಅಲ್ಲಿಗೆ ಆ ಆರೋಪ ನಿಜ ಅನ್ಸುತ್ತೆ ಅಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ: ಸಿಎಂ

    ಕಾಂಗ್ರೆಸ್ ಪ್ರತಿಪಕ್ಷದಲ್ಲಿರಲು ಅನರ್ಹ. ಇತ್ತೀಚೆಗೆ ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಶೋಚನೀಯ ಪರಿಸ್ಥಿತಿ ಇದೆ. ಕಾಂಗ್ರೆಸ್ ನಲ್ಲಿ ಅಧ್ಯಕ್ಷರಾಗಲು ತಾಯಿ-ಮಗನಲ್ಲಿಯೇ ಸ್ಪರ್ಧೆ ಇದೆ ಎಂದು ಸಮರ್ಥಿಸಿಕೊಂಡರು.

    ನಮ್ಮಲ್ಲಿ ಮೂರು ವರ್ಷಕ್ಕೆ ಆಂತರಿಕ ಚುನಾವಣೆ ನಡೆಯುತ್ತದೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷ ನೋಡಿ ಕಾಂಗ್ರೆಸ್ ಕಲಿಯಲಿ. ಕಟೀಲ್ ಅವರು ರಾಹುಲ್ ಗಾಂಧಿ ಅವರ ಬಗ್ಗೆ ಹೇಳಿದ್ದರಲ್ಲಿ ಸತ್ಯ ಇದೆ ಎಂದು ತಿಳಿಸಿದರು.