Tag: Nalamangala

  • ಮನೆಯನ್ನು ಕೆಡವಿದ್ದಾರೆ ನ್ಯಾಯ ನೀಡಿ- ದೇವರ ಫೋಟೋ ಹಿಡಿದು ಕಣ್ಣೀರಿಟ್ಟ ವೃದ್ಧ

    ಮನೆಯನ್ನು ಕೆಡವಿದ್ದಾರೆ ನ್ಯಾಯ ನೀಡಿ- ದೇವರ ಫೋಟೋ ಹಿಡಿದು ಕಣ್ಣೀರಿಟ್ಟ ವೃದ್ಧ

    ನೆಲಮಂಗಲ: ನಾನು ವಾಸವಿರುವ ಬಾಡಿಗೆ ಮನೆಯನ್ನು ಕೆಡವಿ ಸಾಮಾಗ್ರಿಗಳನ್ನು ಹೊರಗೆ ಬಿಸಾಡಿದ್ದಾರೆ. ನನಗೆ ನ್ಯಾಯ ನೀಡಿ ಎಂದು ಮನೆಯ ಎದುರು ದೇವರ ಫೋಟೋ ಹಿಡಿದು ವೃದ್ಧ ಕಣ್ಣೀರಿಟ್ಟ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಚಿಕ್ಕ ಕೊಠಡಿಯಲ್ಲಿ ವಾಸವಾಗಿದ್ದ ವೃದ್ಧ ನಾಗಣ್ಣ ಮನೆಯ ಎದುರು ಕುಳಿತು ನ್ಯಾಯಕ್ಕಾಗಿ ಕಣ್ಣೀರಿಡುತಿದ್ದಾರೆ. ನಗರದ ಜಕ್ಕಸಂದ್ರದಲ್ಲಿನ ನಿವೇಶನದ ಜಾಗದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ನಿರ್ಮಾಣವಾದ ಸಣ್ಣದೊಂದು ಬಾಡಿಗೆ ಮನೆಯಲ್ಲಿ ನಾಗಣ್ಣ ವಾಸವಿದ್ದರು. ನಿವೇಶನದ ಮಾಲೀಕ ಸಿದ್ದರಾಜು ಮನೆ ನಿರ್ಮಾಣ ಮಾಡಿದ್ದು, 2 ತಿಂಗಳ ಹಿಂದೆ 5,000 ಮುಂಗಡ ಹಣ ನೀಡಿ ಬಾಡಿಗೆ ಪಡೆದುಕೊಂಡಿದ್ದರು. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

    ಕೆಲವು ವ್ಯಕ್ತಿಗಳು ನಿವೇಶನ ನನ್ನದು ನನ್ನ ಜಾಗದಲ್ಲಿ ನೀನು ವಾಸವಿರಲು ಸಾಧ್ಯವಿಲ್ಲ ಎಂದು ಮನೆಯನ್ನು ಅರ್ಧದಷ್ಟು ಕೆಡವಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಹೊರಗೆ ಎಸೆದು ಹೋಗಿದ್ದಾರೆ. ಇದರಿಂದ ಮನನೊಂದ ನಾಗಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ದೇವರ ಫೋಟೋ ಹಿಡಿದು, ನ್ಯಾಯಕ್ಕಾಗಿ ಬಾಡಿಗೆ ಮನೆಯ ಎದುರು ಪ್ರತಿಭಟನೆ ಮಾಡಿದ್ದಾರೆ. ಇದನ್ನೂ ಓದಿ:  ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ಭೀಕರ ಅಪಘಾತ

    ಕೂಲಿನಾಲಿ ಮಾಡಿ 10 ಸಾವಿರ ಹಣವನ್ನು ಕಪಾಟಿನಲ್ಲಿ ಇಟ್ಟುಕೊಂಡಿದೆ. ಅವರು ನಾನು ಇಲ್ಲದ ಸಮಯದಲ್ಲಿ ಮನೆಯನ್ನು ಕೆಡವಿ ಮನೆ ಸಾಮಾಗ್ರಿಯನ್ನು ಹೊರಗೆ ಹಾಕಿದ್ದು, ಹಣವೂ ಇಲ್ಲದಂತಾಗಿದೆ. ದುಡಿದು ಬದುಕುವ ನಮ್ಮ ಮೇಲೆ ಆ ವ್ಯಕ್ತಿಗಳು ಮನೆ ಕೆಡವಿ ಸಮಸ್ಯೆ ಮಾಡಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಾಗಣ್ಣ ಆರೋಪಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

    ಪೊಲೀಸರು ಸ್ಥಳಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು

    ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು

    ನೆಲಮಂಗಲ: ಕೊರೊನಾ ಆತಂಕದ ನಡುವೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿ ಪರೀಕ್ಷಾ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಖಾಸಗಿ ಕಾಲೇಜಿನಲ್ಲಿ ನೀಟ್ ಪರೀಕ್ಷೆ ಆಯೋಜನೆ ಮಾಡಲಾಗಿದೆ. ಆದರೆ ಇಲ್ಲಿ ಕೊರೊನಾ ನಿಯಮ ಸಂಪೂರ್ಣ ಬ್ರೇಕ್ ಆಗಿದೆ. ಪರೀಕ್ಷೆಗೆ ಮಕ್ಕಳ ಜೊತೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಪೊಲೀಸರು ಲಾಠಿ ಹಿಡಿದು ಪೋಷಕರನ್ನು ಚದುರಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ:   ಕಲಿಕೆಯ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು: ಜೊಲ್ಲೆ

    ಈ ಹಿನ್ನೆಲೆ ಪರೀಕ್ಷಾ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾ ಆತಂಕದ ನಡುವೆ ಸರಿಯಾದ ವ್ಯವಸ್ಥೆ ಇಲ್ಲದ ಸೆಂಟರ್ ಬಳಿ ಪರೀಕ್ಷೆ ಆಯೋಜನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ತುಮಕೂರು-ಬೆಂಗಳೂರು ರಾಷ್ಟ್ರಿಯ ಹೆದ್ದಾರಿ ಪಕ್ಕದ ಬಳಿಯ ಖಾಸಗಿ ಕಾಲೇಜಿನಲ್ಲಿ ನೀಟ್ ಪರೀಕ್ಷಾ ಸೆಂಟರ್ ಗುರುತಿಸಿರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು

    ಈ ಕುರಿತು ಮಾತನಾಡಿದ ಪೋಷಕರು, ಮುಂದೆ ಇಂತಹ ಸಮಸ್ಯೆಗಳು ಎದುರಾಗದಂತೆ ಎಲ್ಲಾ ವ್ಯವಸ್ಥೆ ಇರುವ ಪರೀಕ್ಷಾ ಕೇಂದ್ರವನ್ನು ಗುರುತು ಮಾಡಬೇಕು. ಅದರ ಜೊತೆಗೆ ಕೊರೊನಾ ಆತಂಕದ ನಿಯಮಗಳನ್ನು ಪಾಲಿಸುವಂತೆ ಮಂಡಳಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..!

  • ಬರದಿಮಂಡಿಗೆರೆಯ ಸರ್ಕಾರಿ ಶಾಲೆಯ 61 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಬರದಿಮಂಡಿಗೆರೆಯ ಸರ್ಕಾರಿ ಶಾಲೆಯ 61 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ನೆಲಮಂಗಲ: ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ನೀಡುವ ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ನೆಲಮಂಗಲದ ಸ್ಥಳೀಯ ದಾನಿಗಳು ಕೈಜೋಡಿಸಿದ್ದಾರೆ. ಇಂದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರದಿಮಂಡಿಗೆರೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ 61 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

    ರಾಜ್ಯಾದ್ಯಂತ ಯಶಸ್ವಿಯಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಣೆ ಮೂಲಕ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಬೆಂಗಳೂರು ವಿಭಾಗದ ಪ್ರೇಮಾ ಚಾಲನೆ ನೀಡಿದರು. ನಂತರ ಟ್ಯಾಬ್ ವಿತರಣೆ ಮಾಡಲಾಯಿತ್ತು.

    ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ದಾನಿಗಳಾದ ಹರ್ಷ ಶಿವಕುಮಾರ್, ದಾಸನಪುರದ ಲಕ್ಷ್ಮಣಮೂರ್ತಿ ಬೂದಿಹಾಳ್ ಗೋವಿಂದರಾಜು, ಕೃಷ್ಣಮೂರ್ತಿ, ಮಂಜುನಾಥ್ ನೆಲಮಂಗಲ ಬಿಇಓ ರಮೇಶ್ ಶಾಲೆಯ ಶಿಕ್ಷಕರು ಹಾಜರಿದ್ದು ಪಬ್ಲಿಕ್ ಟಿವಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ಪ್ರೀತಿಯ ʼಗುಂಡʼನನ್ನು ಹುಡುಕಿಕೊಟ್ಟವರಿಗೆ 10 ಸಾವಿರ ನಗದು ಬಹುಮಾನ

    ಪ್ರೀತಿಯ ʼಗುಂಡʼನನ್ನು ಹುಡುಕಿಕೊಟ್ಟವರಿಗೆ 10 ಸಾವಿರ ನಗದು ಬಹುಮಾನ

    ಬೆಂಗಳೂರು: ಕಳೆದ ಎರಡು ದಿನದ ಹಿಂದೆ ಮನೆಯ ಬಳಿ ಆಟವಾಡುತಿದ್ದ ಪ್ರೀತಿಯ ಶ್ವಾನ ನಾಪತ್ತೆಯಾಗಿದ್ದು, ಮುದ್ದಿನ ಶ್ವಾನ ಕಳೆದು ಹೋಗಿದಕ್ಕೆ ಕುಟುಂಬಸ್ಥರು ಬೇಸರಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ಇತ್ತ ಸಹಪಾಠಿ ಗುಂಡನ ನಾಪತ್ತೆಯಿಂದ ಉಳಿದ ಶ್ವಾನಗಳು ಸಹ ಊಟ ಮಾಡದೆ ನೀರು ಕುಡಿಯದೇ ಮಂಕಾಗಿ ಹೋಗಿವೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಹರ್ಷ ಕ್ಯಾಂಪಸ್ ನಿಂದ ಶ್ವಾನ ನಾಪತ್ತೆಯಾಗಿದೆ. ಹರ್ಷ ವಿದ್ಯಾಸಂಸ್ಥೆಗಳ ಮಾಲೀಕ ಶಿವಕುಮಾರ್ ಅವರ ಸಾಕು ನಾಯಿ ಗುಂಡ ನಾಪತ್ತೆಯಾಗಿದೆ.

    ಕಳೆದ ಒಂದೂವರೆ ವರ್ಷದಿಂದ ಗುಂಡನನ್ನು ಶಿವಕುಮಾರ್ ಮುದ್ದಾಗಿ ಸಾಕಿದ್ದರು. ಬಿಳಿ, ಕಪ್ಪು ಬಣ್ಣದ ಗುಂಡ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಹುಡುಕಿ ಕೊಟ್ಟವರಿಗೆ 10,000 ಇನಾಮು ನೀಡಲು ತೀರ್ಮಾನ ಮಾಡಿದ್ದಾರೆ. ಶ್ವಾನದ ಮಾಲೀಕ ಯಶಸ್ ಮಾತನಾಡಿ ಪ್ಲೀಸ್ ಯಾರಿಗಾದರೂ ಸಿಕ್ಕಿದರೆ ನಮಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

  • ಪಡಿತರ ಅಂಗಡಿಗಳಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ, ಪರಿಶೀಲನೆ

    ಪಡಿತರ ಅಂಗಡಿಗಳಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ, ಪರಿಶೀಲನೆ

    – ಅಕ್ರಮದಲ್ಲಿ ತೊಡಗದಂತೆ ಎಚ್ಚರಿಕೆ

    ನೆಲಮಂಗಲ: ಸಾರ್ವಜನಿಕರ ದೂರಿನ ಹಿನ್ನೆಲೆ ಆಹಾರ ಸಚಿವ ಗೋಪಾಲಯ್ಯ ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹಲವು ಪಡಿತರ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

    ನೆಲಮಂಗಲ ತಾಲೂಕಿನ ಕುಲವನಹಳ್ಳಿ, ಬಿಲ್ಲಿನಕೋಟೆ, ಡಾಬಸ್ ಪೇಟೆ, ಶಿವಗಂಗೆ ಗ್ರಾಮಗಳಿಗೆ ಸಚಿವರು ಆಗಮಿಸಿ ಪಡಿತರ ವೀಕ್ಷಿಸಿದರು. ಇದೇ ವೇಳೆ ಅಕ್ರಮದಲ್ಲಿ ಭಾಗಿಯಾಗದಂತೆ ಮಾಲೀಕರಿಗೆ ತಾಕೀತು ಮಾಡಿದರು. ಅಲ್ಲದೆ ಸ್ಥಳದಲ್ಲೇ ಎಲ್ಲರಿಗೂ ದಿನಸಿ ವಿತರಣೆ ಮಾಡುವಂತೆ ಆದೇಶ ನೀಡಿದರು. ತೂಕ, ಗುಣಮಟ್ಟ ಕಾಪಾಡಿ ಬಡವರಿಗೆ ನೆರವಾಗುವಂತೆ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ತಿಳಿಸಿದರು.

    ರಾಜ್ಯದ ಎಲ್ಲ ಜನರಿಗೂ ಆಹಾರ ಸಿಗುವಂತೆ ಮಾಡುವುದು ನಮ್ಮ ಸರ್ಕಾರದ ಗುರಿ, ಪಡಿತರ ಕಾಡ್9 ಇಲ್ಲದ ಹೊರ ಊರು, ಜಿಲ್ಲೆ, ಹೊರ ರಾಜ್ಯದ ಎಲ್ಲರಿಗೂ ದಿನಸಿ ನೀಡುವಂತೆ ಆದೇಶ ನೀಡಲಾಗಿದೆ. ವಲಸಿಗರಿಗೂ ಉಚಿತವಾಗಿ ಪಡಿತರ ನೀಡಲು ಆದೇಶಿಸಲಾಗಿದೆ. ರಾಜ್ಯದ ಕಟ್ಟೆಕಡೆಯ ವ್ಯಕ್ತಿಯ ಹಸಿವು ನಿಗಿಸಲು ನಮ್ಮ ಸರ್ಕಾರ ಮುಂದಾಗಿದೆ. ಎಲ್ಲರಿಗೂ ಪಡಿತರ ವ್ಯವಸ್ಥೆಯಾಗಬೇಕು ಎಂದರು.

    ರಾಗಿ ಖರೀದಿ ಕೇಂದ್ರದಲ್ಲಿ 2ಕೆ.ಜಿ ಅಧಿಕ ರಾಗಿ ಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಈ ವಿಷಯ ನನಗೆ ತಿಳಿದಿಲ್ಲ, ಮಾಹಿತಿ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಪ್ರತಿಯೊಬ್ಬರಿಗೂ 2 ಕೆ.ಜಿ ಕಡಲೆಕಾಳು ಹಾಗೂ ರಾಗಿ ವಿತರಣೆ ಮಾಡುವ ನಿಯಮ ರೂಪಿಸಲಾಗಿದೆ. ಮುಂದಿನ ತಿಂಗಳಿನಿಂದ ನೂತನ ಯೋಜನೆ ಜಾರಿಯಾಗಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಶಿವಗಂಗೆಯ ದೇವಸ್ಥಾನಕ್ಕೆ ತೆರಳದೇ ಬಾಗಿಲಿನಲ್ಲೇ ಕರ್ಪೂರ ಬೆಳಗಿ, ದೇವರಿಗೆ ನಮಿಸಿ, ಸಾಮಾಜಿಕ ಅಂತರ ಪಾಲನೆ ಮಾಡಿದರು. ಈ ವೇಳೆ ನೆಲಮಂಗಲ ತಹಶಿಲ್ದಾರ್ ಶ್ರೀನಿವಾಸ್, ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ನೆಲಮಂಗಲ: ಒಂದು ವಾರದಲ್ಲಿ ಇಬ್ಬರು ಮಾನವರನ್ನು ತಿಂದು ಮುಗಿಸಿದ ನರಭಕ್ಷಕ ಚಿರತೆಗಳ ಹಾವಳಿ ನೆಲಮಂಗಲದ ಹೊರವಲಯದಲ್ಲಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 11 ಬೋನ್ ಇಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಎರಡು ಚಿರತೆ ಮತ್ತು ಮರಿಗಳು ಬೋನಿಗೆ ಬಿದ್ದಿವೆ.

    ತಡರಾತ್ರಿ ಎರಡು ಮರಿ ಹಾಗೂ ಇಂದು ಬೆಳಗ್ಗೆ ಎರಡು ಚಿರತೆ ಬೋನಿಗೆ ಬಿದ್ದಿರುವ ಮಾಹಿತಿಯನ್ನು ಮಾಗಡಿ ಅರಣ್ಯಾಧಿಕಾರಿಗಳು ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಮತ್ತು ಮಾಗಡಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿವೆ.

    ಒಂದು ಚಿರತೆ ಬೋಡಗನಪಾಳ್ಯ ಹಾಗೂ ಮತ್ತೊಂದು ಚಿರತೆ ಶಿರಗನಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ. ಚಿರತೆ ಮರಿ ದಾಸೇಗೌಡನ ಪಾಳ್ಯದಲ್ಲಿ ಪ್ರತ್ಯೇಕವಾಗಿ ಕಂಡಿದೆ. ಒಂದೇ ವಾರದಲ್ಲಿ ಮೂರು ವರ್ಷದ ಮಗು, 68 ವರ್ಷದ ವೃದ್ಧೆಯನ್ನು ಬಲಿಪಡೆದ ಚಿರತೆಗಳ ಚಲನ ವಲನದ ಮೇಲೆ ಅರಣ್ಯಧಿಕಾರಿಗಳು ಕಣ್ಣಿಟ್ಟಿದ್ದರು. ದೊಡ್ಡ ಚಿರತೆ ಹಿಡಿಯಲು ಮರಿ ಚಿರತೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

    ಇದೀಗ ಮಾಗಡಿ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆಗೆ ಅಲ್ಪ ಯಶಸ್ಸು ಸಿಕ್ಕಿದೆ. ಸೆರೆಯಾಗಿರುವ ಚಿರತೆ ನಿನ್ನೆ ವೃದ್ಧೆಯನ್ನು ಬಲಿ ಪಡೆದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಆತಂಕ ವ್ಯಕ್ತವಾಗಿದೆ.

  • ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ಬೆಂಗಳೂರು: ವಿದೇಶಿಗರನ್ನು ಗ್ರಾಮದ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿದೇಶದಿಂದ ಬರುವ ಭಾರತ ಮೂಲದ ಜನರನ್ನು ಕ್ವಾರಂಟೈನ್ ಮಾಡಲು ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು ಹೊರವಲಯದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿಯ ನರಸಾಪುರ ಹಾಗೂ ಬಾಣವಾಡಿ ಗ್ರಾಮಗಳಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕ್ವಾರಂಟೈನ್ ಕೇಂದ್ರ ಸಿದ್ಧತೆ ಮಾಡಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನಮ್ಮ ಗ್ರಾಮಗಳಲ್ಲಿ ಮಕ್ಕಳಿದ್ದಾರೆ. ಸ್ವಾಮಿ ನಾವು ಹಳ್ಳಿ ಜನರು ಯಾಕೆ ಇಲ್ಲಿ ಕ್ವಾಂರಟೈನ್ ಹೋಮ್ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ಇನ್ನೂ ಕೊರೊನಾ ಕಾಲಿಟ್ಟಿಲ್ಲ, ಹೀಗೆ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡಿದರೆ ಇಲ್ಲಿಗೂ ಮಹಾಮಾರಿ ವ್ಯಾಪಿಸುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಜನರ ಮನವಿ ಮಾಡಿದ್ದು, ವಿದೇಶಿ ಜನರ ಕ್ವಾರಂಟೈನ್‍ಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹಳ್ಳಿಗಾಡಿನ ಜನರ ವಿರೋಧ ಮಾಡುತ್ತಿದ್ದಾರೆ. ಅಲ್ಲದೆ ಹೀಗೆ ಮಾಡುವುದರಿಂದ ಹಳ್ಳಿ ಹಳ್ಳಿಗೆ ಕರೊನಾ ವ್ಯಾಪಿಸುತ್ತದೆ ಎಂದು ವಿರೋಧಿಸುತ್ತಿದ್ದಾರೆ.

  • ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

    ನೆಲಮಂಗಲ: ಬಣ್ಣ ಬಳಿಯಲು ಹೋಗಿ ಸುಮಾರು 12 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದು ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಪ್ರಾಣದ ಹಂಗು ತೊರೆದು ರಕ್ಷಿಸಿ ಹೀರೋ ಆಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ಘಟನೆ ನಡೆದಿದ್ದು, ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದ ವ್ಯಕ್ತಿ ಒಟ್ಟು ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ರಕ್ಷಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಒಟ್ಟು ಒಬ್ಬರು ಪೇಂಟರ್ಸ್ ಸಂಪ್‍ಗೆ ಇಳಿದಿದ್ದರು. ಒಬ್ಬರು ಹೇಗೋ ಮೇಲಕ್ಕೆ ಬಂದಿದ್ದಾರೆ. ಆದರೆ ಓರ್ವ ಸಂಪ್‍ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿಂದ ಪೇಂಟರ್ ಅಸ್ವಸ್ಥರಾಗಿದ್ದಾರೆ. ಪೇಂಟರ್ ರಕ್ಷಣೆ ಮಾಡಲು ಇಬ್ಬರು ಸಂಪ್‍ಗೆ ಇಳಿದಿದ್ದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸಹ ರಕ್ಷಣೆಗಾಗಿ ಇಳಿದಿದ್ದ ಇಬ್ಬರ ಪೈಕಿ ಒಬ್ಬರು ಸಂಪ್ ನಲ್ಲಿ ಸಿಲುಕಿದ್ದರು. ಮತ್ತೊಬ್ಬರು ಮೇಲಕ್ಕೆ ಬಂದಿದ್ದರು.

    ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ನೀರಿನ, ಸಂಪ್‍ಗೆ ಹಿಳಿದು ಇಬ್ಬರನ್ನೂ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಕಿರಿದಾದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಹೀರೋ ಹಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರೇವಣ್ಣ, ಆಕ್ಸಿಜನ್ ಅಳವಡಿಸಿಕೊಂಡು ಧೈರ್ಯದಿಂದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

    ರಕ್ಷಿಸಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬೆಂಗ್ಳೂರು ಗ್ರಾಮಾಂತರ ಜಿಲ್ಲಾ ಗಡಿಯಲ್ಲಿ ವಾಹನಗಳಿಗೆ ಯೂಟರ್ನ್ – ನಗರದ ಪ್ರವೇಶಕ್ಕೆ ಬ್ರೇಕ್

    ಬೆಂಗ್ಳೂರು ಗ್ರಾಮಾಂತರ ಜಿಲ್ಲಾ ಗಡಿಯಲ್ಲಿ ವಾಹನಗಳಿಗೆ ಯೂಟರ್ನ್ – ನಗರದ ಪ್ರವೇಶಕ್ಕೆ ಬ್ರೇಕ್

    ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯಲ್ಲಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ನಿಷೇಧವನ್ನು ಯೂಟರ್ನ್ ಮುಖಾಂತರ ಮಾಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಯಲಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಜಾಸ್ ಟೋಲ್‍ನಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ, ಬೆಂಗಳೂರು ನಗರಕ್ಕೆ ಬರುವ ವಾಹನಕ್ಕೆ ಬ್ರೇಕ್ ಹಾಕಲಾಗಿದೆ. ನೆಲಮಂಗಲ ಟ್ರಾಫಿಕ್ ಪೊಲೀಸರು ರಸ್ತೆ ತಡೆ ಮಾಡಿದ್ದಾರೆ.

    ದಿನ ನಿತ್ಯದ ತುರ್ತು ಸ್ಥಿತಿಗೆ ಬೇಕಾದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಜನ ಬೆಂಗಳೂರು ನಗರದಿಂದ ಹೊರಗೆ ತೆರಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಹಳೇ ನಿಜಗಲ್ಲು ಬಳಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಬ್ರೇಕ್ ಹಾಕಲಾಗಿದೆ. ಮೈಸೂರು ಜಿಲ್ಲೆ ಮಾದರಿಯಂತೆ ವಾಹನಗಳ ವಾಪಸ್ ಕಳುಹಿಸುತ್ತಿದ್ದಾರೆ. ಅವಶ್ಯಕತೆ ಇದ್ದರೆ ಮಾತ್ರ ಬೆಂಗಳೂರಿಗೆ ಪ್ರವೇಶ ನೀಡಲಾಗುತ್ತಿದೆ. ಅಂಬುಲೆನ್ಸ್ ಮತ್ತು ತುರ್ತು ವಿಚಾರದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಭಾಗವಾದ ಹಳೇ ನಿಜಗಲ್ಲು ಮತ್ತು ಮಹದೇವಪುರ ಗಡಿ ಭಾಗದ ಚೆಕ್ ಪೋಸ್ಟ್‌ಗೆ ನೆಲಮಂಗಲ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ಚೆಕ್ ಪೋಸ್ಟ್ ಸ್ಥಳದಲ್ಲೇ ಭಾನುವಾರ ರಾತ್ರಿಯಿಂದ ಥರ್ಮಾಲ್ ಪರೀಕ್ಷೆ ಸಹ ಇಲಾಖೆಗಳು ಮಾಡುತ್ತಿತ್ತು. ನೆಲಮಂಗಲ ಉಪವಿಭಾಗ ಪೊಲೀಸರಿಂದ ಕಠಿಣ ಕ್ರಮ ಕೈಗೊಂಡು, ರಾಜಧಾನಿಗೆ ಸಂಪೂರ್ಣ ವಾಹನ ನಿಷೇಧ ಹೇರಿದ್ದಾರೆ.

  • ಕೊರೊನಾ ಭಯದಲ್ಲಿ ಮಾಲ್ಡೋವಾದಲ್ಲಿ ಸಿಲುಕಿದ ಕನ್ನಡಿಗ ವಿದ್ಯಾರ್ಥಿಗಳು

    ಕೊರೊನಾ ಭಯದಲ್ಲಿ ಮಾಲ್ಡೋವಾದಲ್ಲಿ ಸಿಲುಕಿದ ಕನ್ನಡಿಗ ವಿದ್ಯಾರ್ಥಿಗಳು

    ನೆಲಮಂಗಲ: ಕೊರೊನಾ ಭೀತಿಯಲ್ಲಿ ಮಾಲ್ಡೋವಾದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿ ಪರದಾಡುತ್ತಿದ್ದಾರೆ.

    ರಾಜ್ಯದ ಸುಮಾರು 12 ವಿದ್ಯಾರ್ಥಿಗಳು ಮಾಲ್ಡೋವಾ ದೇಶದ Nicolae Testemiteanu state university of medicine and pharmacy ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಕೊರೊನಾ ಭೀತಿಯಿಂದ ಕಂಗಾಲಾಗಿದ್ದಾರೆ. ಮಾಲ್ಡೋವಾ ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಪಿಸುತ್ತಿದ್ದು, ಕ್ವೆರೆಂಟೈನ್ ಆಗಿರುವ ವಿದ್ಯಾರ್ಥಿಗಳು ಮಾಲ್ಡೋವಾದಲ್ಲಿ ಕರ್ಫೂ ಜಾರಿಯಾಗಿರುವ ಹಿನ್ನೆಲೆ ಯಾವುದೇ ದಿನನಿತ್ಯದ ಪದಾರ್ಥಗಳು ಸಿಗದೆ ಒದ್ದಾಡುತ್ತಿದ್ದಾರೆ.

    ನಮ್ಮನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ವಿದ್ಯಾರ್ಥಿಗಳೆಲ್ಲಾ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ನೆಲಮಂಗಲ ಸಮೀಪದ ಬಾಣವಾಡಿಯ ವಿದ್ಯಾರ್ಥಿ ವಿಶ್ವಾಸ್, ತರುಣ್ ಗೌಡ, ಶಶಾಂಕ್ ಮಾಲ್ಡೋವಾದಲ್ಲಿ ಸಿಲುಕಿದ್ದು, ಪಬ್ಲಿಕ್ ಟಿವಿಗೆ ವಿಡಿಯೋ ಕಳುಹಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕೂಡಲೇ ನಮ್ಮ ಮನವಿಗೆ ಭಾರತ ಸರ್ಕಾರ ಸ್ಪಂಧಿಸಬೇಕಿದೆ. ಇಲ್ಲಿ ನಾವು ಮನೆಯಲ್ಲಿಯೇ ಇದ್ದೇವೆ. ಇಲ್ಲಿಂದ ಹೊರಬರದ ಪರಿಸ್ಥಿತಿ ಇದೆ. ಇಲ್ಲಿ ಕೊರೊನಾ ವೈರಸ್‍ನಿಂದ ರಕ್ಷಿಸಿಕೊಳ್ಳಲು ಯಾವುದೇ ರೀತಿಯ ಉಪಕರಣಗಳು ಸಿಗುತ್ತಿಲ್ಲ, ಆಹಾರ ಧಾನ್ಯಗಳು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ನಮ್ಮ ದೇಶಕ್ಕೆ ಬರಲು ಸಹಾಯ ಮಾಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.