Tag: Nalamagala

  • ನೆಲಮಂಗಲ ಗರ್ಲ್ಸ್ ಹಾಸ್ಟೆಲ್‌ಗೆ ಪೋಲಿಗಳ ಕಾಟ – ಪೊಲೀಸರಿಂದ ಭದ್ರತೆಯ ಭರವಸೆ

    ನೆಲಮಂಗಲ ಗರ್ಲ್ಸ್ ಹಾಸ್ಟೆಲ್‌ಗೆ ಪೋಲಿಗಳ ಕಾಟ – ಪೊಲೀಸರಿಂದ ಭದ್ರತೆಯ ಭರವಸೆ

    ಬೆಂಗಳೂರು: ನೆಲಮಂಗಲ ನಗರದ ಜಯನಗರದಲ್ಲಿರುವ ದೇವರಾಜ ಅರಸು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಯರಿಗೆ ಕೆಲ ಪುಂಡಪೋಕರಿಗಳು ಕಾಟ ಕೊಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಪ್ರತಿ ದಿನ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಹಾಸ್ಟೆಲ್ ಬಳಿ ಬಂದು ವರ್ತಿಸುತ್ತಿದ್ದಾರೆ. ಹಾಸ್ಟೆಲ್ ಪಕ್ಕದಲ್ಲಿರುವ ಸರ್ಕಾರಿ ಕಟ್ಟಡ ನಾನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದು ಪುಂಡರ ಹಾವಳಿಯ ವಾಸಸ್ಥಾನವಾಗಿದೆ. ಇದನ್ನೂ ಓದಿ: ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ

    ರಾತ್ರಿ ಹೊತ್ತಲ್ಲಿ ಹಾಸ್ಟೆಲ್‌ಗೆ ಲೇಸರ್ ಲೈಟ್ ಬಿಟ್ಟು, ಬಾಗಿಲು ಬಡಿದು ಕಾಟ ಕೊಡ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯರು ಹಾಗೂ ಹಾಸ್ಟೆಲ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಸೂಕ್ತ ಭದ್ರತೆ ನೀಡುವುದಾಗಿ ಭರಸವೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]