Tag: nakul gowda

  • ಜ.12ರಂದು ಪಿ.ಸಿ.ಶೇಖರ್ ನಿರ್ದೇಶನದ ‘ಬ್ಯಾಡ್’ ಚಿತ್ರದ ಟ್ರೈಲರ್ ರಿಲೀಸ್

    ಜ.12ರಂದು ಪಿ.ಸಿ.ಶೇಖರ್ ನಿರ್ದೇಶನದ ‘ಬ್ಯಾಡ್’ ಚಿತ್ರದ ಟ್ರೈಲರ್ ರಿಲೀಸ್

    ಎಸ್.ಆರ್.ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ‘BAD’ ಚಿತ್ರದ ಟ್ರೈಲರ್ ಜನವರಿ 12 ರಂದು ಬಿಡುಗಡೆಯಾಗಲಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಟ್ರೈಲರ್ (Trailer) ನಲ್ಲಿ ಏನೆಲ್ಲಾ ಇರಬಹುದು? ಎಂಬುದನ್ನು ತಿಳಿಸಲು ಚಿತ್ರತಂಡ ಪ್ರೋಮೊ ಬಿಡುಗಡೆ ಮಾಡಿದೆ.

    ಈ ಪ್ರೋಮೊದಲ್ಲಿ ನಿರ್ದೇಶಕರಾದ ಪಿ.ಸಿ.ಶೇಖರ್ ಹಾಗೂ ನಾಯಕರಾದ ನಕುಲ್ ಗೌಡ ಸುಂದರವಾದ ನಿರೂಪಣೆಯಲ್ಲಿ ಚಿತ್ರದ ಟ್ರೈಲರ್ ನ ವೈಶಿಷ್ಟ್ಯತೆ  ಹಾಗು ತಾಂತ್ರಿಕ ವಿಭಿನ್ನತೆಯ ಮಾಹಿತಿ ನೀಡಿದ್ದಾರೆ‌. ಈ ಪ್ರೋಮೊ ನೋಡಿದ ಮೇಲೆ ಚಿತ್ರದ ಬಗ್ಗೆ ಹಾಗೂ ಬಿಡುಗಡೆಯಾಗಲಿರುವ ಟ್ರೈಲರ್ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

    ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪಿ.ಸಿ.ಶೇಖರ್ (PC Shekhar) ಸಂಕಲನ,  ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿದೆ‌. ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ  ಸಂಭಾಷಣೆ ಬರೆದಿದ್ದಾರೆ.  ಪ್ರೀತಿಯ ರಾಯಭಾರಿ ಚಿತ್ರದ ಮೂಲಕ ಜನರ ಮನಗೆದ್ದಿರುವ  ನಕುಲ್ ಗೌಡ (Nakul Gowda) ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.

  • ‘BAD’ ಸಿನಿಮಾದಲ್ಲಿ ಪ್ರೀತಿಯ ಪ್ರತಿನಿಧಿಯಾದ ಅಪೂರ್ವ ಭಾರದ್ವಾಜ್

    ‘BAD’ ಸಿನಿಮಾದಲ್ಲಿ ಪ್ರೀತಿಯ ಪ್ರತಿನಿಧಿಯಾದ ಅಪೂರ್ವ ಭಾರದ್ವಾಜ್

    ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಹಾಗೂ ಇತ್ತೀಚೆಗೆ ತೆರೆಕಂಡ ‘ನಾನು, ಅದು ಮತ್ತು ಸರೋಜ’ ಚಿತ್ರದಲ್ಲಿ ಅಭಿನಯಿಸಿರುವ ನಟಿ ಅಪೂರ್ವ ಭಾರದ್ವಾಜ್ (Apoorva Bhardwaj) ಇದೀಗ ಪಿ.ಸಿ.ಶೇಖರ್ (PC Shekhar) ನಿರ್ದೇಶನದ ‘BAD’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಿವೆ ಎಂದು ಮೊದಲೆ ತಿಳಿಸಲಾಗಿತ್ತು. ಆ ಪೈಕಿ ಕಾಮ ಎಂಬ‌ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುತ್ತಿದೆ. ಈ ಪಾತ್ರದಲ್ಲಿ  ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕಾಮವನ್ನು ಪ್ರೀತಿಗೆ ಬದಲಾಯಿಸಿ ತೋರಿಸಲಾಗುತ್ತಿದೆ. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್

    ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿ ಅನು.  ತಾಯಿ ಪ್ರೀತಿ ಕಾಣದ ಈ ಹುಡುಗಿಗೆ ಯಾರ ಬಳಿ ಹೇಗೆ ಪ್ರೀತಿ ವ್ಯಕ್ತಪಡಿಸಬೇಕೆಂದು ತಿಳಿದಿರುವುದಿಲ್ಲ. ಈ ಪಾತ್ರಕ್ಕೆ ಮಾತು ಕಡಿಮೆ. ಕಣ್ಣಿನಲ್ಲೇ ಭಾವನೆಗಳನ್ನು ಹೇಳುವ ಹಾಗೂ ಗುಂಗುರು ಕೂದಲುಳ್ಳ ಸಹಜ ಸುಂದರಿಯಂತೆ ಕಾಣುವ ಪಾತ್ರವಿದು.‌ ಹಾಗಾಗಿ ಅಪೂರ್ವ ಅವರ ಹಿಂದಿನ ಧಾರಾವಾಹಿ ಹಾಗೂ ಚಿತ್ರಗಳನ್ನು ನೋಡಿ, ಈ ಪಾತ್ರಕ್ಕೆ ಇವರೆ ಸರಿ ಹೊಂದುತ್ತಾರೆ ಎಂದು ಅಪೂರ್ವ ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

    ಅಪೂರ್ವ ಅವರು ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಹಾಗೂ ಚಿತ್ರದಲ್ಲಿ ಅವರ ಪಾತ್ರ ಬರುವ ಕಡೆಯೆಲ್ಲಾ ಪಿಂಕ್(ಗುಲಾಬಿ ಬಣ್ಣ) ಶೇಡ್ ನಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು. ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ  ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

    ಪ್ರೀತಿಯ ರಾಯಭಾರಿ ಚಿತ್ರದ ಮೂಲಕ ಜನರ ಮನಗೆದ್ದಿರುವ  ನಕುಲ್ ಗೌಡ (Nakul Gowda) ಈ  ಚಿತ್ರದಲ್ಲಿ ಕ್ರೋಧವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘BAD’ ಹುಡುಗಿ ಜೊತೆಗೆ ‘ಬೋಲ್ಡ್’ ಹುಡುಗಿಯೂ ಹೌದು ಮಾನ್ವಿತಾ

    ‘BAD’ ಹುಡುಗಿ ಜೊತೆಗೆ ‘ಬೋಲ್ಡ್’ ಹುಡುಗಿಯೂ ಹೌದು ಮಾನ್ವಿತಾ

    ಗರು ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಮಾನ್ವಿತ ಕಾಮತ್ (Manvita Kamat), ಪ್ರಸ್ತುತ ಪಿ.ಸಿ ಶೇಖರ್ (PC Shekhar) ನಿರ್ದೇಶನದ ‘BAD ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ  ಚಿತ್ರ ಫಸ್ಟ್ ಲುಕ್ ಮೂಲಕ ಜನರ ಮನ ಗೆದ್ದಿದೆ. ಪ್ರಮುಖ ಪಾತ್ರಧಾರಿ ನಕುಲ್ ಗೌಡ ಅವರ ಲುಕ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮಾನ್ವಿತ ಕಾಮತ್ ಅವರ ಪಾತ್ರದ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್, ಈ ಚಿತ್ರದಲ್ಲಿ ಮಾನ್ವಿತ ಅವರ ಪಾತ್ರದ ಹೆಸರು ಪವಿತ್ರ(ಪವಿ). ತುಂಬಾ ಬೋಲ್ಡ್ ಕ್ಯಾರೆಕ್ಟರ್ ಅವರದು. ವಿಲೇಜ್ ಬ್ಯಾಕ್ ಡ್ರಾಪ್ ನಲ್ಲಿ ಅವರ ಸ್ಟೋರಿ ಸಾಗುತ್ತಾ ಹೋಗುತ್ತದೆ. ನಾನು ಮುಂಚೆ ತಿಳಿಸಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ‌ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೆ ಇನ್ನೊಂದು ಪಾತ್ರ ಕೂಡ ಇದೆ ಎಂದು. ಆ ಪಾತ್ರದಲ್ಲಿ ಮಾನ್ವಿತ ಅಭಿನಯಿಸುತ್ತಿದ್ದಾರೆ ಎಂದರು.

    ನನಗೆ ಈ ಚಿತ್ರದ ಪಾತ್ರ ಬಹಳ ಇಷ್ಟವಾಯಿತು. ಪವಿತ್ರ ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರ ನನ್ನದು. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ.ಸಿ.ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್ ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದೇನೆ ಎಂದು ನಟಿ ಮಾನ್ವಿತ ಕಾಮತ್ ತಿಳಿಸಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ  ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ “BAD” ಚಿತ್ರಕ್ಕಿದೆ.

    ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ (Nakul Gowda), ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘BAD’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ಗಣೇಶ್

    ‘BAD’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ಗಣೇಶ್

    ಪಿ.ಸಿ ಶೇಖರ್ ನಿರ್ದೇಶನದ ಹತ್ತನೇ ಚಿತ್ರ ಹಾಗೂ ನಕುಲ್ ಗೌಡ (ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘BAD’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್  (Ganesh) ಫಸ್ಟ್ ಲುಕ್ (First Look) ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

    ಇದು ನಾಯಕ ಪ್ರಧಾನ ಚಿತ್ರವಲ್ಲ‌‌. ಏಳು ಮುಖ್ಯಪಾತ್ರಗಳಿವೆ.  ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ  ಅರಿಷಡ್ವರ್ಗಗಳಿರುತ್ತದೆ. ಈ ಆರು ಅರಿಷಡ್ವರ್ಗಗಳನ್ನು ಚಿತ್ರದ ಆರು ಪಾತ್ರಗಳು ಪ್ರತಿನಿಧಿಸುತ್ತದೆ. ಆ ಪೈಕಿ ಕ್ರೋಧವನ್ನು ಪ್ರತಿನಿಧಿಸುತ್ತಿರುವ ನಕುಲ್ ಗೌಡ ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

    ಸಾಮಾನ್ಯವಾಗಿ ಕ್ರೋಧವನ್ನು ಕಿರಿಚುವುದು, ಅರಚುವುದು ಮುಂತಾದ ವಿಚಿತ್ರ ರೀತಿಗಳಿಂದ ತೋರಿಸುತ್ತಾರೆ. ನಾವು ಮುಖದ ಹಾವಭಾವದಲ್ಲಿ ಕ್ರೋಧವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಇದೊಂದು ವಿಭಿನ್ನ ಕಥೆಯ ಚಿತ್ರ ಎಂದು ತಿಳಿಸಿರುವ ಮುಖ್ಯ ಪಾತ್ರಧಾರಿ ನಕುಲ್, ನನ್ನದು ಈ ಚಿತ್ರದಲ್ಲಿ ಕ್ರೋಧವನ್ನು ಪ್ರತಿನಿಧಿಸುವ ಪಾತ್ರ. ಕ್ರೋಧವನ್ನು ಚಿತ್ರದಲ್ಲಿ ಭೀಕರವಾಗಿ ತೋರಿಸಿಲ್ಲ. ನಿರ್ದೇಶಕ ಪಿ‌.ಸಿ.ಶೇಖರ್ (PC Shekhar) ಉತ್ತಮವಾದ ಕಥೆ ಮಾಡಿದ್ದಾರೆ. ಚಿತ್ರಕಥೆ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಬಹುತೇಕ ಭಾಗದ ಚಿತ್ರೀಕರಣ ಸೆಟ್ ನಲ್ಲೇ ನಡೆದಿರುವುದು ವಿಶೇಷ ಎನ್ನುತ್ತಾರೆ.

    ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ BAD ಚಿತ್ರದಲ್ಲಿ   ರೋಷಮಾನ್ ಎಫೆಕ್ಟ್ ಎಂಬ ವಿಶೇಷ ವಿಧಾನವನ್ನು ಬಳಸಿಕೊಳ್ಳಲಾಗಿದೆ‌.  ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ   ಸಚಿನ್ ಬಿ ಹೊಳಗುಂಡಿ  ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

    ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ (Nakul Gowda), ಮಾನ್ವಿತ ಹರೀಶ್ (Manvita Harish), ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಲನ್ ಇಟ್ಟುಕೊಂಡು ‘BAD’ ಸಿನಿಮಾ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್

    ವಿಲನ್ ಇಟ್ಟುಕೊಂಡು ‘BAD’ ಸಿನಿಮಾ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್

    ರೋಮಿಯೋ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ ಶೇಖರ್(P.C. Shekhar) ನಿರ್ದೇಶನದಲ್ಲಿ ನಕುಲ್ ಗೌಡ (Nakul Gowda) (ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ‘BAD’. ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರ ಕನ್ನಡದಲ್ಲಿ ವಿಭಿನ್ನ ಪ್ರಯತ್ನ ಎನ್ನಬಹುದು.

    ಈ ಚಿತ್ರಕ್ಕೆ  BAD ಅಂತ ಹೆಸರಿಡಲು ಕಾರಣವಿದೆ. ಏಕೆಂದರೆ ಇದರಲ್ಲಿ ನಾಯಕ ಹಾಗೂ ನಾಯಕಿ ಅಂತ ಇಲ್ಲ. ಎಲ್ಲಾ ವಿಲನ್ ಪಾತ್ರಗಳೆ. ಅದರಲ್ಲಿ ಮುಖ್ಯ ವಿಲನ್ ಗಳಿರುತ್ತಾರಷ್ಟೆ. ರೋಷಮಾನ್ ಎಫೆಕ್ಟ್ ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ‌. ಜಪಾನ್ ನಿರ್ದೇಶಕರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಒಂದೇ ಕಥೆಯನ್ನೇ ಬೇರೆಬೇರೆಯವರು ಹೇಳುವ ವಿಧಾನ ಬೇರೆ ರೀತಿ ಆಗಿರುತ್ತದೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ನನ್ನ ನಿರ್ದೇಶನದ ಹತ್ತನೇ ಚಿತ್ರ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನನ್ನ ನಿರ್ದೇಶನದ ಹತ್ತು ಚಿತ್ರಗಳಲ್ಲಿ ಒಂಬತ್ತು ಚಿತ್ರಗಳಿಗೆ ಅರ್ಜುನ್ ಜನ್ಯ ಅವರೆ ಸಂಗೀತ ನೀಡಿದ್ದಾರೆ. ನಾನೇ ಕಥೆ, ಚಿತ್ರಕಥೆ ರಚಿಸಿದ್ದೇನೆ.  ಸಂಕಲನವನ್ನು ಮಾಡುತ್ತಿದ್ದೇನೆ. ನನ್ನ ಹಿಂದಿನ ರಾಗ ಹಾಗೂ ದಿ ಟೆರರಿಸ್ಟ್ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನವಿದೆ ಎನ್ನುತ್ತಾರೆ ಶೇಖರ್.

    ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ಬರುವ ಪಾತ್ರಗಳ ಅಭಿನಯ ನೋಡುಗರಿಗೆ ಸಹಜ ರೀತಿಯಲ್ಲಿ ಕಾಣಬೇಕು ಹಾಗೂ ಅವರ ಪಾತ್ರವನ್ನು ನೋಡಿದ ಕೂಡಲೆ, ಇವರದು ಇಂತಹುದೇ ಪಾತ್ರ ಎಂದು ಪ್ರೇಕ್ಷಕರು ಅಂದುಕೊಳ್ಳಬಾರದು. ಹಾಗಾಗಿ ಈ ಚಿತ್ರದಲ್ಲಿ ಹೆಚ್ಚು ಹೊಸ ಕಲಾವಿದರೆ ಅಭಿನಯಿಸುತ್ತಿದ್ದಾರೆ ಎನ್ನುವುದು ನಿರ್ದೇಶಕರ ಮಾತು.

     

    ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್ (Manvita Harish), ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಹಾಗೂ ಅನೇಕ ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ‌. ಶಕ್ತಿ ಶೇಖರ್ ಈ ಚಿತ್ರದ ಛಾಯಾಗ್ರಾಹಕರು ಎಂದು ನಿರ್ದೇಶಕ ಪಿ.ಸಿ.ಶೇಖರ್ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.

  • `ಪ್ರೀತಿಯ ರಾಯಭಾರಿ’ಗೆ ಜೋಡಿಯಾದ ಟಗರು ಬ್ಯೂಟಿ ಮಾನ್ವಿತಾ

    `ಪ್ರೀತಿಯ ರಾಯಭಾರಿ’ಗೆ ಜೋಡಿಯಾದ ಟಗರು ಬ್ಯೂಟಿ ಮಾನ್ವಿತಾ

    `ಕೆಂಡಸಂಪಿಗೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಮಾನ್ವಿತಾ ಹರೀಶ್, ಬಳಿಕ ಸಾಕಷ್ಟು ಚಿತ್ರಗಳ ಮೂಲಕ ಸಂಚಲನ ಮೂಡಿಸಿದ್ರು. ಇದೀಗ ʻರೋಮಿಯೋʼ  ಖ್ಯಾತಿಯ ಪಿ. ಸಿ ಶೇಖರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟ ನಕುಲ್ ಗೌಡಗೆ ನಾಯಕಿಯಾಗಿ ನಟಿಸಿದ್ದಾರೆ.

    ಪಿ.ಸಿ ಶೇಖರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಟಗರು ಪುಟ್ಟಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ. 2018ರಲ್ಲಿ ತೆರೆಕಂಡ `ಪ್ರೀತಿಯ ರಾಯಭಾರಿ’ ಚಿತ್ರದ ಮೂಲಕ ಪರಿಚಿತರಾದ ನಕುಲ್ ಗೌಡಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ. ಸಿ ಶೇಖರ್ ಡೈರೆಕ್ಷನ್‌ನಲ್ಲಿ ನಕುಲ್ ಮತ್ತು ಮಾನ್ವಿತಾ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ.

    ಇದೊಂದು ಪಕ್ಕಾ ಲವ್‌ಸ್ಟೋರಿ ಮತ್ತು ಥ್ರಿಲರ್ ಚಿತ್ರವಾಗಿದ್ದು, ನಟ ನಕುಲ್ ಗೌಡ ಡಿಫರೆಂಟ್ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರೈತ ಕುಟುಂಬದಿಂದ ಬಂದ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಾನ್ವಿತಾ ನಟಿಸಿದ್ದಾರೆ.

    `ಪ್ರೀತಿಯ ರಾಯಭಾರಿ’ ಚಿತ್ರದ ಮೂಲಕ ಈಗಾಗಲೇ ಪರಿಚಿತರಾಗಿರೋ ನಟ ನಕುಲ್‌ಗೆ ಇದು ಎರಡನೇ ಚಿತ್ರವಾಗಿದ್ದು, ಈ ಚಿತ್ರದ ಮೂಲಕ ನಕುಲ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ. ಇನ್ನು ಏಪ್ರಿಲ್ ಅಂತ್ಯದಲ್ಲಿ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಿದೆ ಚಿತ್ರತಂಡ. ಇದನ್ನೂ ಓದಿ:ರಣಬೀರ್ – ಆಲಿಯಾ ಮದುವೆ : ದಿಲ್ಬರೋ ಹಾಡಿಗೆ ಹೆಜ್ಜೆ ಹಾಕಲಿದೆ ಸ್ಟಾರ್ ಜೋಡಿ

    ಸದ್ಯ ಮಾನ್ವಿತಾ ಹರೀಶ್ ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಪಾತ್ರಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದೀಗ ಪಿ.ಸಿ ಶೇಖರ್ ಮತ್ತು ನಕುಲ್ ಕಾಂಬಿನೇಷನ್ ಚಿತ್ರದಲ್ಲಿ ಭಿನ್ನ ಪಾತ್ರದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈ ಸುದ್ದಿ ಕೇಳಿ ಟಗರು ಪುಟ್ಟಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.