Tag: naked

  • ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

    ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

    ಇಸ್ಲಾಮಾಬಾದ್: ಗ್ರಾಮದ ಯುವತಿಯನ್ನ ಯುವಕ ಪ್ರೀತಿಸಿದ್ದಕ್ಕೆ ಆಕೆಯ ತಂಗಿಯನ್ನ ನಗ್ನಗೊಳಿಸಿ 1 ಗಂಟೆ ಕಾಲ ಮೆರವಣಿಗೆ ಮಾಡೋ ಮೂಲಕ ಶಿಕ್ಷಿಸಿರೋ ಅಮಾನವೀಯ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ನಡೆದಿದೆ.

    ಇಲ್ಲಿನ ದೇರಾ ಇಸ್ಮೈಲ್ ಖಾನ್ ಮಟ್ ಪ್ರದೇಶದಲ್ಲಿ ಅಕ್ಟೋಬರ್ 27ರಂದು ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ನೀರು ತೆಗೆದುಕೊಂಡು ಮನೆಗೆ ಹಿಂದಿರುಗುವಾಗ ಕೆಲವರು ಆಕೆಯನ್ನ ಸುತ್ತುವರಿದಿದ್ದಾರೆ. ನಂತರ ಆಕೆಯನ್ನ ವಿವಸ್ತ್ರಗೊಳಿಸಿ ಆ ಪ್ರದೇಶದಲ್ಲಿ ನಡೆಯುವಂತೆ ಮಾಡಿದ್ದಾರೆ. ಈ ವೇಳೆ ಭಯದಿಂದ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಯುವತಿಯ ಅಣ್ಣ ಸಜ್ಜದ್ ಅದೇ ಗ್ರಾಮದ ಯುವತಿಯನ್ನ ಮೂರು ವರ್ಷಗಳ ಹಿಂದೆ ಪ್ರೀತಿಸುತ್ತಿದ್ದ ಎಂದು ವರದಿಯಾಗಿದೆ. ಗ್ರಾಮದ ಪಂಚಾಯ್ತಿಯಲ್ಲಿ ಈ ವಿಷಯವನ್ನ ಚರ್ಚಿಸಿ ಸಜ್ಜದ್ ಕುಟುಂಬಕ್ಕೆ 1 ಲಕ್ಷ 5 ಸಾವಿರ ರೂ. ದಂಡ ಕೂಡ ವಿಧಿಸಲಾಗಿತ್ತು. ಆದ್ರೆ ಗ್ರಾಮಸ್ಥರು ಸಜ್ಜದ್ ಕುಟುಂಬದ ವಿರುದ್ಧ ದ್ವೇಷ ಇಟ್ಟುಕೊಂಡು ಆಕೆಯ ತಂಗಿಗೆ ಶಿಕ್ಷೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.

    ಬಾಲಕಿಗೆ ಶಿಕ್ಷಿಸಿದ ಹಿನ್ನೆಲೆಯಲ್ಲಿ ಈಗಾಗಲೇ 8 ಆರೋಪಿಗಳನ್ನ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಖೈಬರ್ ಫಕ್ತುಂಕ್ವಾ ಸಿಎಂ ಪರ್ವೇಸ್ ಖಟ್ಟಕ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

  • ಅತ್ತಿಗೆ ಎದುರೇ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಮಾನಗೇಡಿ ಮೈದುನ

    ಅತ್ತಿಗೆ ಎದುರೇ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಮಾನಗೇಡಿ ಮೈದುನ

    ಹಾವೇರಿ: ಆಸ್ತಿಗಾಗಿ ಸಹೋದರರ ನಡುವೆ ನಡೆದ ಕಲಹ ಬಚ್ಚಲಲ್ಲಿ ಅನಾವರಣವಾಗಿದೆ. ಅಣ್ಣನ ಮನೆಯ ಅಡುಗೆಮನೆಯಲ್ಲಿ, ಅತ್ತಿಗೆಯ ಮುಂದೆ ಮೈದುನ ಅರೆ ಬೆತ್ತಲೆಯಾಗಿ ಸ್ನಾನ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ನಡೆದಿದೆ.

    ಮಾಲತೇಶ ಬಾರ್ಕಿ ಮತ್ತು ಗಣೇಶ ಬಾರ್ಕಿ ಸಹೋದರರ ಮನೆಗಳು ಅಕ್ಕಪಕ್ಕದಲ್ಲಿ ಇದೆ. ಪ್ರಜ್ಞಾವಂತನಾದ ಗಣೇಶ, ತನ್ನ ಅಣ್ಣ ಮಾಲತೇಶ ಹೆಚ್ಚಿಗೆ ಜಾಗ ಹೊಂದಿದ್ದಾನೆ ಎಂದು ಮಾಲತೇಶನ ಮನೆಗೆ ತೆರಳಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಅತ್ತಿಗೆಯ ಮುಂದೆಯೇ ಅರಬೆತ್ತಲೆಯಾಗಿ ಸ್ನಾನ ಮಾಡಿದ್ದಾನೆ.

    ಈ ದೃಶ್ಯವನ್ನ ಮಾಲತೇಶನ ಮಕ್ಕಳು ಚಿತ್ರಿಕರಿಸಿಕೊಂಡಿದ್ದಾರೆ. ಆದ್ರೆ ಈ ದೃಶ್ಯ ಸೆರೆಹಿಡಿಯುತ್ತಿದ್ದ ಮಕ್ಕಳಿಗೆ ಹೆದರಿಸಿ ಯಾರಿಗೆ ಬೇಕಾದ್ರು ಕೋಡ್ರಿ. ನನಗೇನು ಮಾಡಬೇಕು ಎನ್ನುವುದು ಗೋತ್ತು ಅಂತಾ ಅತ್ತಿಗೆಗೆ ದಬಾಯಿಸಿದ್ದಾನೆ.

    ಅಲ್ಲದೆ ಮನೆಯಲ್ಲಿ ಹಿರಿಯಣ್ಣ ಇಲ್ಲದ ಸಮಯದಲ್ಲಿ ಮಕ್ಕಳಿಗೆ ಹೊಡೆಯುವುದು, ಮನೆಬಿಟ್ಟು ಹೋಗುವಂತೆ ದೌರ್ಜನ್ಯವೆಸಗುತ್ತಿದ್ದಾನೆಂದು ನೊಂದ ಕುಟುಂಬ ಈ ಸತ್ಯವನ್ನ ಮಾಧ್ಯಮದ ಮುಂದೆ ಬಿಚ್ಚಿಟ್ಟಿದೆ.

    ತಮ್ಮನ ಈ ಕೃತ್ಯ ಅಣ್ಣನನ್ನ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ತಾಯಿ ಸಮಾನಳಾದ ಅತ್ತಿಗೆಯ ಎದುರು, ಅಡುಗೆ ಮನೆಯಲ್ಲಿಯೇ ಈ ರೀತಿ ಅರಬೇತ್ತಲೆಯಾಗಿ ಮನೆ ಬಿಡುವಂತೆ ಸ್ನಾನ ಮಾಡಿರುವುದು ಸಮಾಜವೇ ನಾಚುವಂತಾಗಿದೆ.

     

     

  • ಸ್ನೇಹಿತೆಯಿಂದಲೇ ನಗ್ನ ಫೋಟೋ ಕ್ಲಿಕ್- ಬ್ಲ್ಯಾಕ್‍ಮೇಲ್ ಮಾಡ್ತಿದ್ದ ಅರಣ್ಯಾಧಿಕಾರಿ ವಿರುದ್ಧ ಮಹಿಳೆ ದೂರು

    ಸ್ನೇಹಿತೆಯಿಂದಲೇ ನಗ್ನ ಫೋಟೋ ಕ್ಲಿಕ್- ಬ್ಲ್ಯಾಕ್‍ಮೇಲ್ ಮಾಡ್ತಿದ್ದ ಅರಣ್ಯಾಧಿಕಾರಿ ವಿರುದ್ಧ ಮಹಿಳೆ ದೂರು

    ಬೆಂಗಳೂರು: ಮಹಿಳೆಯೊಬ್ಬರ ನಗ್ನ ಮತ್ತು ಅರೆನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿರೋ ಅರಣ್ಯ ಅಧಿಕಾರಿ ವಿರುದ್ಧ ನೊಂದ ಮಹಿಳೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.

    ವಿವಾಹಿತ ಮಹಿಳೆಗೆ ಮದುವೆ ಆಗುವಂತೆ ದೌರ್ಜನ್ಯ ಎಸಗಿದ್ದಕ್ಕೆ ಅರಣ್ಯಾಧಿಕಾರಿ ಸಿ. ಕೃಷ್ಣ ಮತ್ತು ನಗ್ನ ಚಿತ್ರ ತೆಗೆದ ಸುಮಲತಾ ದೇವನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಏನಿದು ಪ್ರಕರಣ?: ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರೋ ಮಹಿಳೆಯ ನಗ್ನ ಚಿತ್ರವನ್ನು ಆಕೆಯ ಸ್ನೇಹಿತೆ ಸುಮಲತಾ ದೇವನ್ ತೆಗೆದು ಅರಣ್ಯಾಧಿಕಾರಿ ಸಿ. ಕೃಷ್ಣಗೆ ನೀಡಿದ್ದಾಳೆ. ಈ ಫೋಟೋವನ್ನು ಪಡೆದ ಕೃಷ್ಣ, ಮದುವೆ ಆಗುವಂತೆ ದೌರ್ಜನ್ಯವೆಸಗಿ ಬಳಿಕ ಲೈಂಗಿಕವಾಗಿ ಸಹಕರಿಸುವಂತೆ ಬ್ಲ್ಯಾಕ್ ಮೇಲೆ ಮಾಡಿದ್ದು, ಒಂದು ವೇಳೆ ನೀನು ಇದಕ್ಕೆ ಒಪ್ಪದಿದ್ದರೆ ನಿನ್ನ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಡುತ್ತೇನೆ ಅಂತಾ ಬೆದರಿಸಿದ್ದಾನೆ.

    2013 ರಿಂದ ಈವರೆಗೆ 4.76 ಲಕ್ಷ ರೂ. ಸುಲಿಗೆ ಮಾಡಿರೋ ಕೃಷ್ಣ 30 ಗ್ರಾಂ ಮಾಂಗಲ್ಯ ಸರವನ್ನು ಕೂಡ ಪಡೆದಿದ್ದಾನೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ಸಾಯಿಸೋದಾಗಿ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಧಾನಸೌಧ ಪೊಲೀಸರು ಕೃಷ್ಣ ವಿರುದ್ಧ ಎಫ್‍ಐಆರ್ ಹಾಗೂ ನಗ್ನ ಚಿತ್ರ ತೆಗೆದ ಸುಮಲತಾ ದೇವನ್ ಎಂಬುವರ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.