Tag: najanagudu

  • ಆಹಾರ ಅರಸಿ ನಾಡಿಗೆ ಬರಲು ಯತ್ನಿಸಿದ್ದ ಕಾಡಾನೆ ಕಂದಕಕ್ಕೆ ಬಿದ್ದು ಸಾವು

    ಆಹಾರ ಅರಸಿ ನಾಡಿಗೆ ಬರಲು ಯತ್ನಿಸಿದ್ದ ಕಾಡಾನೆ ಕಂದಕಕ್ಕೆ ಬಿದ್ದು ಸಾವು

     ಮೈಸೂರು: ಕಂದಕಕ್ಕೆ ಬಿದ್ದು ಕಾಡಾನೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಂಜನಗೂಡು (Najanagudu) ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ನಡೆದಿದೆ.ಇದನ್ನೂಓದಿ:

    ಸುಮಾರು 40 ವರ್ಷದ ಗಂಡು ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ.

    ಮಲ್ಲಹಳ್ಳಿ ಗ್ರಾಮದ ಬಳಿ ಆನೆಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗಿತ್ತು. ಆಹಾರ ಅರಸಿ ಬರುತ್ತಿದ್ದ ವೇಳೆ ಕಂದಕಕ್ಕೆ ಬಿದ್ದಿದೆ. ಕಾಡಿನಿಂದ ನಾಡಿನತ್ತ ಬರುವ ಯತ್ನ ಮಾಡಿರುವ ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ.ಇದನ್ನೂಓದಿ:

  • ಹುಚ್ಚುಗಣಿ ದೇವಾಲಯ ಧ್ವಂಸ, ಅಧಿಕಾರಿಗಳಿಂದ ತಪ್ಪಾಗಿದೆ: ಜೊಲ್ಲೆ

    ಹುಚ್ಚುಗಣಿ ದೇವಾಲಯ ಧ್ವಂಸ, ಅಧಿಕಾರಿಗಳಿಂದ ತಪ್ಪಾಗಿದೆ: ಜೊಲ್ಲೆ

    ಮೈಸೂರು: ನಂಜನಗೂಡಿನ ಹುಚ್ಚುಗಣಿ ದೇವಾಲಯ ಧ್ವಂಸ, ಅಧಿಕಾರಿಗಳಿಂದ ತಪ್ಪಾಗಿದೆ. ಅವರು ಮಾಡಿದ್ದು ಸರಿಯಲ್ಲ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ನಗರದಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನ ಹುಚ್ಚುಗಣಿ ದೇವಸ್ಥಾನ ತೆರುವು ಮಾಡಿದ್ದು ಸರಿಯಲ್ಲ. ಅಧಿಕಾರಿಗಳು ಸರ್ಕಾರದ ಗಮನಕ್ಕೆ ಬಾರದಂತೆ ಈ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ಅಧಿಕಾರಿಗಳ ತಲೆದಂಡದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಸ್ತೆಬದಿ ದಹಿ ಕಚೋರಿ ಮಾರುವ 14ರ ಬಾಲಕನ ಭಾವನಾತ್ಮಕ ಕಥೆ

    ದೇವಸ್ಥಾನದ ವಿಚಾರ, ಅಧಿವೇಶನದಲ್ಲು ಚರ್ಚೆ ಆಗಿದೆ. ದೇವಸ್ಥಾನಗಳ ಬಗ್ಗೆ ಸರ್ಕಾರ ಮಸೂದೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದು ಜನರ ಭಾವನಾತ್ಮಕ ವಿಚಾರ, ಅವರ ಭಾವನೆಗೂ ಬೆಲೆ ಕೊಡಬೇಕು. ಉಚ್ಚ ನ್ಯಾಯಾಲಯದ ಅದೇಶವನ್ನು ಪಾಲನೆ ಮಾಡಿಕೊಂಡು ಮಸೂದೆ ಜಾರಿಗೆ ತರಲಾಗುವುದು ಎಂದರು. ಈ ಮಸೂದೆಯಿಂದ ರಾಜ್ಯದಲ್ಲಿ ಸಾವಿರಾರು ದೇವಾಲಯಗಳು ರಕ್ಷಣೆಯಾಗಲಿವೆ. ಎಲ್ಲಾ ದೇವಸ್ಥಾನ, ಚರ್ಚ್, ಮಸೀದಿಗಳ ರಕ್ಷಣೆಯನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.  ಇದನ್ನೂ ಓದಿ: ಮಳೆಗಾಗಿ ಭಕ್ತನಿಂದ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಆಂಜನೇಯ

    ಹುಚ್ಚುಗಣಿ ದೇವಸ್ಥಾನ ತೆರುವು ಮಾಡಿದ್ದು, ರಾಜ್ಯದೆಲ್ಲೆಡೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಸರ್ಕಾರದ ಈ ನಿಲುವಿಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ, ಹುಚ್ಚುಗಣಿ ದೇವಸ್ಥಾನದ ಮರುನಿರ್ಮಾಣ ಮಾಡುವ ಭರವಸೆಯನ್ನು ನೀಡಿದೆ.

  • ಎಸ್‍ಎಂಕೆ, ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ರಿಂದ ಕಾಂಗ್ರೆಸ್‍ಗೆ ಗೆಲುವು: ದಿನೇಶ್ ಗುಂಡೂರಾವ್

    ಎಸ್‍ಎಂಕೆ, ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ರಿಂದ ಕಾಂಗ್ರೆಸ್‍ಗೆ ಗೆಲುವು: ದಿನೇಶ್ ಗುಂಡೂರಾವ್

    ಬೆಂಗಳೂರು: ಮಾಜಿ ಸಿಎಂ ಎಸ್‍ಎಂ ಕೃಷ್ಣ ಹಾಗೂ ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‍ಗೆ ಗೆಲುವು ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

    ಉಪಚುನಾಚವಣೆಯಲ್ಲಿ ಗುಂಡ್ಲುಪೇಟೆ ಹಾಗೂ ನಂಜನಗೂಡು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಸ್‍ಎಂ ಕೃಷ್ಣ, ಕುಮಾರ್ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‍ಗೆ ಗೆಲುವು ಸಿಕ್ಕಿದೆ. ಜನ ಯಾವುದೇ ರೀತಿಯ ಬಣ್ಣದ ಮಾತುಗಳಿಗೆ ಸೋಲುವುದಲ್ಲ. ಜನ ಪ್ರತ್ಯುತ್ತರ ನೀಡಿದ್ದಾರೆ ಅಂತ ಹೇಳಿದ್ರು.

    ಜಾತಿ ಆಧಾರದ ಮೇಲೆ ಚುನಾವಣೆ ಗೆದ್ದಿಲ್ಲ. ಜನರೇ ತಕ್ಕ ಉತ್ತರ ನೀಡಿದ್ದಾರೆ. ಇನ್ನು ಮುಂದೆ ಕೂಡ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮತದಾರರು ನಮ್ಮ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಅಂದ್ರು.

    ಕಾಂಗ್ರೆಸ್ ಜಯಭೇರಿ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ರು.