Tag: Nails

  • ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ಚಿಕ್ಕಮಗಳೂರು: ದತ್ತ ಜಯಂತಿಯಂದು (Datta Jayanti) ತಾಲೂಕಿನ ದತ್ತಪೀಠ ಮಾರ್ಗದಲ್ಲಿ ಮೂಳೆ (Nails) ಹಾಕಿ ದುಷ್ಕೃತ್ಯ ನಡೆಸಲು ಹುನ್ನಾರ ನಡೆಸಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರು ಚಿಕ್ಕಮಗಳೂರಿನ (Chikkamagaluru) ದುಬೈ ನಗರ ನಿವಾಸಿಗಳಾದ ಮಹಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 6, 7 ಮತ್ತು 8 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಜಯಂತಿ ಕಾರ್ಯಕ್ರಮವಿತ್ತು. ಡಿಸೆಂಬರ್ 6 ರಂದು ದತ್ತಜಯಂತಿಯ ಮೊದಲ ದಿನ ಅನುಸೂಯ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠಕ್ಕೆ ತೆರಳಿ ಹೋಮ-ಹವನ ನಡೆಸುವವರಿದ್ದರು. ಆದರೆ, ಈ ವೇಳೆ ಕಿಡಿಗೇಡಿಗಳು ದತ್ತಪೀಠದ ಮಾರ್ಗದಲ್ಲಿ ಸುಮಾರು 2 ಕಿ.ಮೀ. ಸಣ್ಣ-ಸಣ್ಣ ಮೊಳೆ ಚೆಲ್ಲಿದ್ದರು. ಇದರಿಂದ ಪೊಲೀಸ್ ಸೇರಿದಂತೆ ನಾಲ್ಕೈದು ವಾಹನಗಳು ಮಾರ್ಗ ಮಧ್ಯೆಯೇ ಪಂಚರ್ ಆಗಿದ್ದವು. ಕೂಡಲೇ ಪೊಲೀಸರು ಮೊಳೆ ತೆಗೆದು ಸರಾಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದನ್ನೂ ಓದಿ: ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ – ರಸ್ತೆಯುದ್ದಕ್ಕೂ ಮೊಳೆಗಳನ್ನು ಹಾಕಿದ ಕಿಡಿಗೇಡಿಗಳು

    ಘಟನೆ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದರು. ಕಳೆದ ಎಂಟತ್ತು ದಿನಗಳಿಂದ ತನಿಖೆ ನಡೆಸಿದ ಪೊಲೀಸರು ಚಿಕ್ಕಮಗಳೂರಿನ ದುಬೈ ನಗರದ ಇಬ್ಬರನ್ನು ಬಂಧಿಸಿದ್ದಾರೆ. ಅವರು ಎಲ್ಲಿ ಮೊಳೆ ಖರೀದಿಸಿರು ಎಂಬ ಮಾಹಿತಿಯನ್ನೂ ಕಲೆ ಹಾಕಿ, ವೈಜ್ಞಾನಿವಾಗಿ ಸಾಬೀತು ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಐದಾರು ಜನ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದು ಪೊಲೀಸರು ಅವರಿಗೂ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ಸರ್ಕಾರಿ ಹಾಸ್ಟೆಲ್‌ನಲ್ಲಿ PUC ವಿದ್ಯಾರ್ಥಿನಿಗೆ ಹೆರಿಗೆ

    ಮೂರು ದಿನದ ಕಾರ್ಯಕ್ರಮಲ್ಲಿ ಮೊದಲ ದಿನವೇ ರಸ್ತೆಗೆ ಮೊಳೆ ಸುರಿದಿದ್ದರಿಂದ ಉಳಿದ ಎರಡು ದಿನಗಳ ಬಗ್ಗೆ ಆತಂಕ ಉಂಟಾಗಿತ್ತು. ಶಾಸಕ ಸಿ.ಟಿ.ರವಿ ಕೂಡ ಇಂತಹ ಬೆದರಿಕೆಗೆ ಬಗ್ಗಲ್ಲ, ದತ್ತಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ಹಠ ಬಂದಿದೆ ಎಂದಿದ್ದರು. ಈ ನಡುವೆ ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು. ಚುನಾವಣೆ ವರ್ಷವೇ ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಚಿಕ್ಕಮಗಳೂರು ಜನ ಕೂಡ ಆತಂಕಕ್ಕೀಡಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ನೀವು ನೈಲ್ ಆರ್ಟ್ ಪ್ರಿಯರಾ? ಹೊಸ ಹೊಸ ವಿನ್ಯಾಸಗಳನ್ನು ನಿಮ್ಮ ಉಗುರುಗಳಲ್ಲಿ ಚಿತ್ರಿಸಲು ನೀವು ಇಷ್ಟ ಪಡುತ್ತೀರಾ? ಪ್ರತಿ ಮಹಿಳೆ ತನ್ನ ಉಗುರುಗಳನ್ನು ಅಂದವಾಗಿ ಕಾಣಿಸಲು ವಿಭಿನ್ನ ವಿನ್ಯಾಸಗಳಿಗೆ ಮಾರು ಹೋಗುತ್ತಾರೆ. ಕೆಲವರು ತಮ್ಮ ಉಗುರುಗಳಿಗೆ ಗಾಢ ಬಣ್ಣಗಳನ್ನು ಹಚ್ಚಲು ಇಷ್ಟಪಟ್ಟರೆ ಇನ್ನೂ ಕೆಲವರು ಸರಳ ಹಾಗೂ ತಿಳಿ ಬಣ್ಣಗಳನ್ನು ಇಷ್ಟ ಪಡುತ್ತಾರೆ. ಉಗುರುಗಳಲ್ಲಿ ಮೂಡಿಸಬಹುದಾದ ಹೊಸ ಹೊಸ ವಿನ್ಯಾಸಗಳ ಹುಡುಕಾಟದಲ್ಲಿ ನೀವಿದ್ದರೆ, ಇಲ್ಲಿವೆ ಕೆಲವು ಸಿಂಪಲ್ ಹಾಗೂ ಬೇಗನೇ ಉಗುರುಗಳಲ್ಲಿ ಮೂಡಿಸಬಹುದಾದ ನೈಲ್ ಆರ್ಟ್ ಡಿಸೈನ್‌ಗಳು.

    ಲವ್ ಹಾರ್ಟ್ ನೈಲ್ ಆರ್ಟ್:
    ನಿಮ್ಮ ಉಗುರುಗಳಿಗೆ ಲವ್ ಹಾರ್ಟ್ ನೇಲ್ ಆರ್ಟ್ ವಿನ್ಯಾಸಗನ್ನು ಮೂಡಿಸುವ ಮೂಲಕ ರೋಮ್ಯಾಂಟಿಕ್ ಲುಕ್ ಪಡೆಯಬಹುದು. ಗುಲಾಬಿ, ಕೆಂಪು, ಅಥವಾ ಯಾವುದೇ ತಿಳಿ ಬಣ್ಣಗಳಿಂದ ನೀವು ನಿಮ್ಮ ಉಗುರುಗಳಲ್ಲಿ ಪುಟ್ಟದಾದ ಹೃದಯದ ವಿನ್ಯಾಸ ಮೂಡಿಸಿದರೆ ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ನೀವು ಈ ವಿನ್ಯಾಸಗಳಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಒಂದರ ಮೇಲೊಂದು ಹೃದಯಗಳನ್ನು ಬಿಡಿಸಿದರೆ ಹೃದಯದ ಆಕೃತಿ ಪಾಪ್ ಅಪ್ ಆದಂತೆ ಭಾಸವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು

    ಒಂಬ್ರೆ ನೇಲ್ ಆರ್ಟ್ ವಿನ್ಯಾಸ:
    ಎರಡು ಬಣ್ಣಗಳನ್ನು ಗ್ರೇಡಿಯಂಟ್ ವಿನ್ಯಾಸವನ್ನಾಗಿ ಮಾರ್ಪಡಿಸುವುದನ್ನು ಒಂಬ್ರೆಲ್ ನೇಲ್ ಆರ್ಟ್ ಎನ್ನಲಾಗುತ್ತದೆ. ಈ ವಿನ್ಯಾಸವನ್ನು ನಿಮ್ಮ ಉಗುರುಗಳಲ್ಲಿ ಮೂಡಿಸಲು ಬೇಕಾಗಿರುವುದು ಕೇವಲ ಎರಡು ಬಣ್ಣಗಳ ನೈಪ್ ಪಾಲಿಶ್ ಹಾಗೂ ಒಂದು ಪುಟ್ಟ ಸ್ಪಂಜ್.

    ನಿಮ್ಮ ಇಷ್ಟದ ಒಂದು ಬಣ್ಣವನ್ನು ನಿಮ್ಮ ಉಗುರಿನಲ್ಲಿ ಬೇಸ್ ಆಗಿ ಹಚ್ಚಿ ಬಳಿಕ ಇನ್ನೊಂದು ಬಣ್ಣದ ನೈಲ್ ಪಾಲಿಶ್ ಅನ್ನು ಇನ್ನೊಂದು ಲೇಯರ್ ಆಗಿ ಅರ್ಧ ಉಗುರಿಗೆ ಹಚ್ಚಿ. ಎರಡನೇ ಬಣ್ಣ ಒಣಗುವ ಮೊದಲು ಸ್ಪಂಜ್ ಸಹಾಯದಿಂದ ಮೆತ್ತಗೆ ಉಗುರುಗಳ ಮೇಲೆ ಒತ್ತಿದರೆ ಗ್ರೇಡಿಯಂಟ್ ವಿನ್ಯಾಸ ಮೂಡುತ್ತದೆ. ಉಗುರುಗಳಿಗೆ ಫಿನಿಶಿಂಗ್ ಟಚ್ ನೀಡಲು ಕೊನೆಯದಾಗಿ ವಾಟರ್ ಕಲರ್ ನೈಲ್ ಪಾಲಿಷ್ ಅಥವಾ ಕಲ್ಲರ್ ಲೆಸ್ ನೈಲ್ ಪೈಂಟ್ ಹಚ್ಚಿದರೆ ನಿಮ್ಮ ಉಗುರುಗಳು ಆಕರ್ಷಕವಾಗಿ ಹೊಳೆಯುವುದರಲ್ಲಿ ಸಂಶಯವಿಲ್ಲ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

    ವರ್ಣರಂಜಿತ ನೈಲ್ ಆರ್ಟ್:
    ಉಗುರುಗಳಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳನ್ನು ಬಳಸಲು ಹಲವರು ಇಷ್ಟಪಡುತ್ತಾರೆ. ಕಾಮನಬಿಲ್ಲಿನಂತೆ ಹಲವು ಬಣ್ಣಗಳ ಚಿತ್ತಾರವನ್ನು ಉಗುರಿನಲ್ಲಿ ಬಿಡಿಸುವಾಗ ನಿಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆ.
    ನೀವು ಹಲವು ಬಣ್ಣಗಳನ್ನು ಒಂದೇ ಉಗುರಿನಲ್ಲಿ ವಿವಿಧ ವಿನ್ಯಾಸಗಳನ್ನು ಮೂಡಿಸುವ ಮೂಲಕ ಆಕರ್ಷಕವನ್ನಾಗಿ ಮಾಡಬಹುದು. ಇಲ್ಲವೇ ಒಂದೊಂದು ಬೆರಳಿಗೆ ಒಂದೊಂದು ಬಣ್ಣಗಳನ್ನು ಬಳಸಿ ಇನ್ನೂ ಚೆನ್ನಾಗಿ ಕಾಣುವಂತೆ ಮಾಡಬಹುದು.

    ಈ ವಿನ್ಯಾಸಗಳನ್ನು ರಚಿಸುವಾಗ ಒಂದೇ ಉಗುರಿನಲ್ಲಿ ಹಲವು ಬಣ್ಣ ಬಳಸುತ್ತಿರಾದರೆ ಯಾವ ಬಣ್ಣಗಳನ್ನೂ ಬಳಸಬಹುದು. ಆದರೆ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಒಂದೊಂದು ಉಗುರಿಗೆ ಒಂದೊಂದು ಬಣ್ಣಗಳನ್ನು ಬಳಸುತ್ತೀರಾದರೆ ಒಂದು ಬಾರಿಗೆ ತಿಳಿ ಬಣ್ಣಗಳನ್ನು ಆಯ್ದುಕೊಳ್ಳಿ ಇಲ್ಲವೇ ಗಾಢ ಬಣ್ಣಗಳನ್ನೇ ಆಯ್ದುಕೊಳ್ಳಿ.

    ಲೈನ್ ಆರ್ಟ್ ಉಗುರು ವಿನ್ಯಾಸ:
    ಉಗುರುಗಳಲ್ಲಿ ರೇಖೆಗಳನ್ನು ಮೂಡಿಸುವುದು ಇತ್ತೀಚಿನ ಟ್ರೆಂಡ್. ಒಂದು ನಿಮ್ಮ ಇಷ್ಟದ ಬಣ್ಣವನ್ನು ಬೇಸ್ ಆಗಿ ಬಳಸಿ ಬಳಿಕ ತೆಳುವಾದ ರೇಖೆಗಳನ್ನು ಉಗುರುಗಳಲ್ಲಿ ಮೂಡಿಸಿದರೆ ಟ್ರೆಂಡಿಯಾಗಿ ಕಾಣಿಸುವುದಲ್ಲದೇ ಡೀಸೆಂಟ್ ಲುಕ್ ನಿಮ್ಮದಾಗುತ್ತದೆ. ಉಗುರುಗಳಲ್ಲಿ ಪುಟ್ಟ ರೇಖೆಗಳನ್ನು ಮೂಡಿಸಲು ನಿಮ್ಮ ನೈಲ್ ಆರ್ಟ್ ಕಿಟ್‌ನಲ್ಲಿ ಪುಟ್ಟದಾದ ಬ್ರಷ್‌ಗಳಿದ್ದರೆ ಒಳಿತು. ಇಲ್ಲವೆಂದರೆ ಚಿಕ್ಕ ಕಡ್ಡಿ ಅಥವಾ ಟೂತ್ ಪಿಕ್‌ಗಳನ್ನೂ ಬಳಸಬಹುದು. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    ಪ್ರಕೃತಿ ಪ್ರೇರಿತ ನೇಲ್ ಆರ್ಟ್ ವಿನ್ಯಾಸ:
    ನಿಮ್ಮ ಉಗುರುಗಳಲ್ಲಿ ಪ್ರಕೃತಿಯ ಚಿತ್ರಗಳನ್ನು ಮೂಡಿಸಿದರೆ ಅದರ ಮೇಲೆ ಗಮನಹರಿಸುವವರು ನೀವೊಬ್ಬ ಪ್ರಕೃತಿ ಪ್ರೇಮಿ ಎಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ಉಗುರುಗಳಲ್ಲಿ ಹೂವು, ಎಲೆ, ಬಳ್ಳಿ ಹೀಗೆ ಹಲವು ವಿನ್ಯಾಸಗಳನ್ನು ಮೂಡಿಸಿ ಆಕರ್ಷಕವಾಗಿಸಿ.

    ಪ್ರಕೃತಿಯ ಚಿತ್ರಗಳನ್ನು ಉಗುರಿನಲ್ಲಿ ಮೂಡಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಇದನ್ನು ಸುಲಭವಾಗಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನೈಲ್ ಸ್ಟಿಕ್ಕರ್‌ಗಳು ಲಭ್ಯವಿದೆ. ನೀವು ಉಗುರುಗಳಲ್ಲಿ ಮೂಡಿಸುವ ವಿನ್ಯಾಸಗಳು ಕೇವಲ ಹೂವು-ಹಣ್ಣು, ಎಲೆ-ಬಳ್ಳಿಗಳಿಗೆ ಮಾತ್ರ ಸೀಮಿತವಾಗಿಸದೇ ಸಮುದ್ರ, ಸೂರ್ಯ, ಬೆಟ್ಟ ಗುಡ್ಡಗಳಿಗೂ ವಿಸ್ತರಿಸಬಹುದು.

  • ಹೆದ್ದಾರಿಗೆ ಹಾಕಿದ್ದ ಮೊಳೆಗಳನ್ನ ತೆಗೆದಿಲ್ಲ: ದೆಹಲಿ ಪೊಲೀಸರು

    ಹೆದ್ದಾರಿಗೆ ಹಾಕಿದ್ದ ಮೊಳೆಗಳನ್ನ ತೆಗೆದಿಲ್ಲ: ದೆಹಲಿ ಪೊಲೀಸರು

    ನವದೆಹಲಿ: ರೈತರು ದೆಹಲಿ ಪ್ರವೇಶಿಸದಂತೆ ಮಹಾಗೋಡೆ ನಿರ್ಮಿಸಿಕೊಂಡಿದ್ದ ಸರ್ಕಾರ ಹೆದ್ದಾರಿಯಲ್ಲಿ ದೊಡ್ಡ ಮೊಳೆಗಳನ್ನ ಹಾಕಿತ್ತು. ಇಂದು ಬೆಳಗ್ಗೆ ಮೊಳೆಗಳನ್ನ ತೆಗೆಯುತ್ತಿರುವ ಕೆಲ ವೀಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ಇದೀಗ ದೆಹಲಿ ಪೊಲೀಸರು ಮೊಳೆಗಳನ್ನ ತೆಗೆದಿಲ್ಲ, ಬದಲಾಗಿ ಮತ್ತೊಂದು ಕಡೆ ಶಿಫ್ಟ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಗಣರಾಜ್ಯೋತ್ಸವ ದಿನದಂದು ನಡೆದ ಅನಾಹುತ ಮತ್ತೊಮ್ಮೆ ಸಂಭವಿಸಿದಂತೆ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜೀಪುರ್ ಗಡಿಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಿದೆ. ಗಡಿಯಲ್ಲಿರುವ ಟ್ರ್ಯಾಕ್ಟರ್ ದಿಲ್ಲಿ ಪ್ರವೇಶ ಮಾಡದಂತೆ ಆರೇಳು ಸುತ್ತಿನಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

    ಬೃಹತ್ ಸಿಮೆಂಟ್ ಬ್ರಿಕ್ಸ್ ಗಳನ್ನು ಇಟ್ಟು ನಡುವೆ ಕಾಂಕ್ರೀಟ್ ತುಂಬಿದೆ. ಸಾಲದು ಅಂತಾ ಗಡಿಯುದ್ದಕ್ಕೂ ಮುಳ್ಳು ತಂತಿನ ಬೇಲಿ ಹಾಕಲಾಗಿದ್ದು, ರಸ್ತೆಗಳನ್ನು ಅಗೆದು ಮೊಳೆಗಳನ್ನು ನಡೆಲಾಗಿತ್ತು.

    ಈ ನಡುವೆ ಪ್ರತಿಭಟನಾ ನಿರತ ರೈತರ ಭೇಟಿಗೆ ತೆರಳಿದ್ದ ವಿಪಕ್ಷ ಸಂಸದರು ಸಂಸದರನ್ನ ಪೊಲೀಸರು ತಡೆದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿಭಟನೆ ವೇಳೆ ಮೃತ ರೈತ ನಿವಾಸಕ್ಕೆ ಭೇಟಿ ನೀಡಿದ್ದಾರೆ.

  • 66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದದ ಉಗುರನ್ನು ಕತ್ತರಿಸಿಕೊಂಡಿದ್ದಾರೆ.

    ಶ್ರೀಧರ್ ಚಿಲ್ಲಾಲ್ ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರನ್ನು ಬೆಳಸಿ ವಿಶ್ವ ಗಿನ್ನಿಸ್ ದಾಖಲೆ ಮಾಡಿದ್ದರು. ಶ್ರೀಧರ್ 1952ರಿಂದ ತಮ್ಮ ಉಗುರುಗಳನ್ನು ಬೆಳಸಿಕೊಂಡಿದ್ದರು. ಈಗ ಅವರಿಗೆ 82 ವರ್ಷವಾಗಿದ್ದು, ಈಗ ತಮ್ಮ ಉದ್ದನೆಯ ಉಗುರುಗಳನ್ನು ಕತ್ತರಿಸಿದ್ದಾರೆ.

    ಶ್ರೀಧರ್ ಮೂಲತಃ ಪುಣೆಯವರಾಗಿದ್ದು, ತನ್ನ ಬೆರಳ ಉಗುರುಗಳನ್ನು ಕತ್ತರಿಸೋಕೆ ನ್ಯೂಯಾರ್ಕ್ ಗೆ ಹೋಗಿದ್ದರು. ನ್ಯೂಯಾರ್ಕ್ ನ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಶ್ರೀಧರ್ ತಮ್ಮ ಉಗುರನ್ನು ಕತ್ತರಿಸಿಕೊಂಡಿದ್ದಾರೆ.

    ಶ್ರೀಧರ್ ಅವರ ಐದು ಬೆರಳಿನ ಉಗುರುಗಳು ಒಟ್ಟು 909.6 ಸೆ.ಮೀ ಉದ್ದವಿದ್ದು, ಅದರಲ್ಲೂ ಅವರ ಹೆಬ್ಬೆಟ್ಟಿನ ಉಗುರು 197.8 ಸೆ.ಮೀ ಉದ್ದವಿತ್ತು. ಒಂದೇ ಕೈಯಲ್ಲಿ ವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿದ್ದರಿಂದ 2016ರಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದರು.

    ಸದ್ಯ ಶ್ರೀಧರ್ ಅವರ ಕತ್ತರಿಸಿದ ಉಗುರುಗಳನ್ನು ನ್ಯೂಯಾರ್ಕ್‍ನ ಟೈಮ್ಸ್ ಸ್ಕ್ವೇರ್ ನಲ್ಲಿರುವ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಶ್ರೀಧರ್ ತನ್ನ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಇದೂವರೆಗೂ 1.3 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.

    https://www.youtube.com/watch?v=gwoYzpesr4c