Tag: Nail Art

  • Fashion | ನೈಲ್‌ ಆರ್ಟ್‌ ಮಾಡಿಸಿ – ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಇನ್ನಷ್ಟು ಹತ್ತಿರವಾಗಿ!

    Fashion | ನೈಲ್‌ ಆರ್ಟ್‌ ಮಾಡಿಸಿ – ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಇನ್ನಷ್ಟು ಹತ್ತಿರವಾಗಿ!

    ಪ್ರೀತಿ.. ಮೊಹಬ್ಬತ್.. ಇಷ್ಕ್.. ಈ ಪದ ಕೇಳಿದ್ರೆನೇ ಒಂತರ ರೋಮಾಂಚನ ಆಗುತ್ತೆ.. ದೇಹದಲ್ಲಿ ರಪ್ ಅಂತ ಕರೆಂಟ್ ಪಾಸ್ ಆಗುತ್ತೆ ಇದು ಅತಿಶಯೋಕ್ತಿ ಅನ್ನಿಸಿದರೂ ಇದೇ ಸತ್ಯ.. ಯಾಕಂದ್ರೆ ಪ್ರೀತಿಗೆ ಇರೋ ಶಕ್ತಿ ಜಗತ್ತಿನಲ್ಲಿ ಮತ್ಯಾವುದಕ್ಕೂ ಇಲ್ಲ.. ಪ್ರೀತಿಯಿಂದ ನಾವು ಏನನ್ನೂ ಬೇಕಾದ್ರೂ ಗೆಲ್ಲಬಹುದು..ಇಂತಹ ಪ್ರೀತಿಗೆನೇ ಒಂದು ವಿಶೇಷ ದಿನ ಮೀಸಲು ಇಟ್ಟಿದ್ದಾರೆ ನಮ್ಮ ಹಿರೀಕರು.. ಅಂತಹ ಬ್ಯೂಟಿಫುಲ್ ದಿನ ಬಂತೆ ಬಿಡ್ತು ನೋಡಿ.. ನಾಳೆ ಫೆಬ್ರವರಿ 14 ಈ ಭೂಮಿ ಮೇಲೆ ಪ್ರೀತಿ ಮಾಡೋ ಎಲ್ಲರ ದಿನ.. ಮನುಷ್ಯ ಅಂದ್ರೆ ಯಾವ್ದಾದ್ರೂ ಒಂದು ಕ್ಷಣ ಆದ್ರೂ ಪ್ರೀತಿ ಮಾಡಿರಲೇಬೇಕು ಅದೇ ಪ್ರೇಮಿಗಳ ದಿನ.. ಪ್ರೇಮಿಗಳಿಂದ.. ಪ್ರೇಮಿಗಳಿಗಾಗಿ…ಪ್ರೇಮಿಗಳಿಗೋಸ್ಕರ ಇರುವ ದಿನ..

    ಪ್ರೇಮಿಗಳ ದಿನ ಎನ್ನುವುದು ಪ್ರೀತಿಗೆ ಮೀಸಲಾಗಿರುವ ದಿನ. ಪ್ರೇಮಿಗಳು ಬಹುಕಾಲದಿಂದ ತಮ್ಮ ಮನಸಲ್ಲಿ ಬಚ್ಚಿಟ್ಟು ಕೊಂಡ ಪ್ರೀತಿಯನ್ನು ವ್ಯಕ್ತಪಡಿಸುವ ದಿನ.. ಈ ದಿನ ಪ್ರೇಮಿಗಳು ತಮ್ಮ ಸಂಗಾತಿ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಮನದ ಮಾತುಗಳನ್ನ ಪರಸ್ಪರ ಮುಕ್ತವಾಗಿ ಹಂಚಿಕೊಳ್ಳಲು ಇದೊಂದು ವಿಶೇಷ ದಿನವಾಗಿದೆ. ಅದ್ಭುತ ಪ್ರೀತಿಗೊಂದು ಹೊಸ ರೂಪ ಸಿಗುವ ದಿನ ಇದು. ಪ್ರೇಮ ಲೋಕದಲ್ಲಿ ತೇಲಾಡುವ ಯುವ ಜೋಡಿಗಳಿಗೆ ವಿಶೇಷವಾಗಿ ದಿನ ಕಳೆಯುವ ಹಂಬಲವಿರುತ್ತದೆ. ಅದು ಲವ್ ಬರ್ಡ್ಸ್ ಗಳಂತೆ ಹಾರಾಡುವ ಜೋಡಿಗಳು ಪಾರ್ಕ್, ಪಾರ್ಟಿ, ಡಿನ್ನರ್ ಹೀಗೆ ಹಲವು ರೀತಿಯಲ್ಲಿ ದಿನ ಕಳೆಯುತ್ತಾರೆ.

    ಹಿಂದೆಲ್ಲ ಪ್ರೇಮಿಗಳ ದಿನವನ್ನು ಯಾರು ಸಹ ಅಷ್ಟಾಗಿ ಆಚರಿಸುತ್ತಿರಲಿಲ್ಲ. ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತಿದೆ. ಎಳೆ ವಯಸಿನಲ್ಲೇ ಪ್ರೀತಿ ಚಿಗುರೊಡೆದು ತಮ್ಮದೇ ಪ್ರಪಂಚದಲ್ಲಿ ಹಾರಾಡುತ್ತಿರುತ್ತಾರೆ. ಪ್ರೀತಿಗೆ ಕೊನೆಯಿಲ್ಲ. ಪ್ರೇಮಿಗಳಿಗೆ ಎಲ್ಲಾ ದಿನವೂ ಖುಷಿಯ ಹಬ್ಬವಾಗಿರುತ್ತದೆ. ಇಂತಹ ವ್ಯಾಲೆಂಟೈನ್ಸ್ ಡೇ ದಿವಸ ಹುಡುಗರಿಗಿಂತಲೂ ಹುಡುಗಿಯರಿಗೆ ಹೆಚ್ಚು ವಿಶೇಷವಾಗಿರುತ್ತದೆ. ತಮ್ಮ ಗೆಳೆಯನನ್ನು ಭೇಟಿಯಾಗುವ ವಿಶೇಷ ದಿನದಂದು ಆತನಿಗೆ ನಾನು ಅಪ್ಸರೆಯಂತೆ ಕಾಣಬೇಕು ಎಂಬೆಲ್ಲ ಆಸೆಗಳಿರುತ್ತದೆ.

    ಹುಡುಗೀರಂತು ಅಡಿಯಿಂದ ಮುಡಿಯವರೆಗೂ ಚೆಂದ ಕಾಣಿಸಲು ಹಂಬಲಿಸುತ್ತಾರೆ. ಬಿಂದಿಯಿಂದ ಹಿಡಿದು ಚಪ್ಪಲಿಯವರೆಗೆ ವಿಶೇಷವಾಗಿ ಇರಬೇಕೆಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹೆಣ್ಮಕ್ಕಳಿಗಂತು ಡ್ರೆಸ್ ಯಿಂದ ಹಿಡಿದು ಎಲ್ಲಾ ಮ್ಯಾಚಿಂಗ್ ಆಗಿರಬೇಕು. ನೋಡೋ ಕಣ್ಣಿನಿಂದ ಹಿಡಿದು ಉಗುರಿಗೆ ಹಾಕೋ ನೈಲ್ ಪಾಲಿಶ್ ಕೂಡ ಇಷ್ಟ ಆಗ್ಬೇಕು. ಅಬ್ಬಬ್ಬಾ .. ಈಗಿನ ಕಾಲದಲ್ಲಿ ಒಂದು ನೈಲ್ ಪಾಲಿಷ್ ಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಆದ್ರೂ ಬೇರೆ ಬೇರೆ ರೀತಿ ವಿನ್ಯಾಸಗಳನ್ನು ಮಾಡಿಸ್ತಾರೆ. ಕೃತಕ ಉಗುರುಗಳನ್ನು ಇಟ್ಟು ಅದಕ್ಕೆ ಬಣ್ಣ ಬಣ್ಣದ ನೈಲ್ ಪಾಲಿಶ್ ಹಚ್ಚಿ ತಮ್ಮ ಉಗುರಿನ ಮೂಲಕವೇ ತಮ್ಮ ಮನದ ಹುಡುಗನನ್ನು ಗಮನ ಸೆಳೆಯುತ್ತಾರೆ.

    ನೈಲ್ ಪಾಲಿಶ್ ಗೂ ವ್ಯಾಲೆಂಟೈನ್ಸ್ ಡೇಗೂ ಏನು ಸಂಬಂಧ ಇದೆ ಯಾಕಂದ್ರೆ ಹೆಣ್ಣು ಮಕ್ಕಳು ಹೆಚ್ಚು ಕಾಳಜಿ ವಹಿಸುವುದು ತಮ್ಮ ಕೈ ಕಾಲಿನ ಉಗುರುಗಳು ಚೆನ್ನಾಗಿ ಕಾಣಬೇಕು ಎಂದು. ಆ ಮೂಲಕ ಅವರ ಹುಡುಗರ ಎದೆಯಲ್ಲಿ ಬೆರಳ ತುದಿಯಲ್ಲೇ ಚಿತ್ತಾರ ಬಿಡಿಸಲು ಕಾಯುತ್ತಿರುತ್ತಾಳೆ. ಈಗಿನ ಕಾಲದ ಹುಡುಗೀರು ಬ್ಯೂಟಿ ಪಾರ್ಲರ್ ಹೋದರಂತೂ ಪೆಡಿಕ್ಯೂರ್, ನೈಲ್ ಆರ್ಟ್ ಅಂತ ಉಗುರುಗಳ ಕಾಳಜಿ ಮಾಡುತ್ತ ಇರುತ್ತಾರೆ. ಇಷ್ಟೆಲ್ಲಾ ಕೇರ್ ಮಾಡುವ ಉಗುರುಗಳು ವ್ಯಾಲೆಂಟೈನ್ಸ್ ಡೇ ದಿನ ವಿಶೇಷವಾಗಿರಿಸಲು ಇಲ್ಲಿದೆ ಹೊಸ ನೈಟ್ ಆರ್ಟ್ ಡಿಸೈನ್.

    1. ವೈಟ್ ನೈಲ್ ಪಾಲಿಶ್ (White Nail polish)
    ಬಿಳಿ ಪರಿಶುದ್ಧತೆಯ ಸಂಕೇತ. ಈ ವೈಟ್ ನೈಲ್ ಪಾಲಿಶ್ ನಿಮ್ಮ ಉಗುರಿನ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೆ ಇದು ಎಲ್ಲಾ ಪ್ರೀತಿಯ ಡ್ರೆಸ್ ಗಳಿಗೆ ಕೂಡ ಮ್ಯಾಚ್ ಆಗುತ್ತದೆ. ನಿಮ್ಮ ಉಗುರುಗಳಿಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಹೆಚ್ಚಿನ ಮಾಡಲ್ಸ್ ಮತ್ತು ಸಿನಿ ತಾರೆಯರು ಬಿಳಿ ಬಣ್ಣದ ನೈಲ್ ಪಾಲಿಶ್ಗಳನ್ನ ಹೆಚ್ಚು ಇಷ್ಟಪಡುತ್ತಾರೆ.

    2. ಸ್ಲೋಪ್ ಹಾರ್ಟ್ ನೈಲ್ ಪಾಲಿಶ್ (Slope heart nail Polish)
    ಈ ನೈಲ್ ಆರ್ಟ್ ಮನದೊಳಗಿನ ಪ್ರೀತಿಯನ್ನು ಹೇಳುತ್ತದೆ. ಗುಲಾಬಿ ಬಣ್ಣದ ನೈಲ್ ಪಾಲಿಶ್ ಗಳ ಮೇಲೆ ಕೆಂಪು ಹಾರ್ಟ್ ಚಿತ್ರವು ಪ್ರೇಮಿಗಳ ದಿನದಂದು ಹೇಳಿ ಮಾಡಿಸಿದ ನೈಲ್ ಆರ್ಟ್ ಡಿಸೈನ್ ಆಗಿದೆ. ಇದು ವಿ ಆಕಾರದ ಉಗುರುಗಳಿಗೆ ಹೆಚ್ಚು ಸೊಗಸಾಗಿ ಕಾಣುತ್ತದೆ. ಅಲ್ಲದೆ ಬಿಳಿ ಬಣ್ಣದ ನೈಲ್ ಪಾಲಿಶ್ ಗಳ ಮೇಲೆ ರೆಡ್ ಹೃದಯದ ಚಿತ್ರವು ಉಗುರಿನ ಅಂದವನ್ನು ಹೆಚ್ಚಿಸುತ್ತದೆ. ಸಣ್ಣ ಹೃದಯದ ಆಕಾರವು ತುಂಬಾ ಸರಳವಾಗಿ, ಕ್ಲಾಸಿಯಾಗಿ ಕಾಣುತ್ತದೆ ಮತ್ತು ಕಡಿಮೆ ವಿನ್ಯಾಸವು ಹೈ-ಶೈನ್ ಟಾಪ್ ಕೋಟ್‌ನಂತಹ ಡಿಸೈನ್ಗಳಿಗಿಂತಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

    3. ಮೋನೋಕ್ರೋಮ್ ಹಾರ್ಟ್ (Monochrome heart)
    ಫ್ರೆಂಚ್ ಸ್ಟೈಲ್ ಉಗುರುಗಳಿಗೆ ಈ ಮೋನೋಕ್ರೋಮ್ ಹಾರ್ಟ್ ಚೆನ್ನಾಗಿ ಕಾಣುತ್ತದೆ. ಉಗುರಿನ ಮೇಲೆ ಒಂದೊಂದೆ ಹೃದಯದ ಚಿತ್ರವನ್ನು ಬಿಡಿಸಬೇಕು. ಪ್ರತಿ ಉಗುರಿಗೆ ಗುಲಾಬಿ ಅಥವಾ ಕೆಂಪು ಬಣ್ಣವನ್ನು ಆಯ್ಕೆ ಮಾಡಬಹುದು. ನೀವು ಲೈಟ್ ಕಲರ್ ನೈಲ್ ಪಾಲಿಶ್ ಗೆ ಡಾರ್ಕ್ ಬಣ್ಣದಲ್ಲಿ ಹೃದಯದ ಚಿತ್ರ ಬಿಡಿಸಿದರೆ ನಿಮ್ಮ ಕೈಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ.

    4. ಗ್ಲಿಟರ್ ನೈಲ್ಸ್ (Glitter Nails)
    ಈ ಗ್ಲಿಟರ್ ನೈಲ್ ನಿಮ್ಮ ಉಗುರುಗಳನ್ನು ಹೊಳಪಿನಿಂದ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ನಿಮ್ಮ ಉಗುರಿಗೆ ಬೋಲ್ಡ್ ಲುಕ್ ನೀಡುತ್ತದೆ. ಈ ಗ್ಲಿಟರ್ ನೈಲ್ಸ್ ಇದೀಗ ಹೆಚ್ಚು ಟ್ರೆಂಡ್ನಲ್ಲಿದ್ದು, ಹಾಲಿವುಡ್, ಬಾಲಿವುಡ್ ನಟಿಯರು ಸಹ ಈ ನೈಲ್ಸ್ ಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ನಾಲ್ಕು ಉಗುರುಗಳಿಗೆ ಒಂದು ಬಣ್ಣ ಹಚ್ಚಿ ಇನ್ನೊಂದು ಉಗುರಿಗೆ ಬರೀ ಗ್ಲಿಟರ್ ಹಚ್ಚುತ್ತಾರೆ.

    5. ಮ್ಯಾಟ್ ನೈಲ್ಸ್ (Matte Nails)
    ಈ ಮ್ಯಾಟ್ ನೈಲ್ಸ್ ಕೂಡಾ ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಉಗುರುಗಳಿಗೆ ಹೆಚ್ಚು ಹೊಳಪನ್ನು ಬಯಸದೆ ಇರುವವರು ಇಂತಹ ಮ್ಯಾಟ್ ನೈಲ್ಸ್ ಗಳನ್ನು ಇಷ್ಟಪಡುತ್ತಾರೆ. ಇದು ಒಂದು ರೀತಿಯ ಡಾರ್ಕ್ ಬಣ್ಣಗಳಿಗೆ ಹೆಚ್ಚು ಚಂದ ಕಾಣುತ್ತದೆ. ಅಲ್ಲದೆ ನಿಮ್ಮ ಉಗುರುಗಳಿಗೆ ಕಾಸಿ ಹಾಗೂ ಬೋಲ್ಡ್ ಲುಕ್ ನೀಡುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಕೈಗಳಿಗೂ ಚೆನ್ನಾಗಿ ಕಾಣಿಸುತ್ತದೆ.

    ಎಲ್ಲಾ ಬ್ಯೂಟಿಫುಲ್ ಗರ್ಲ್ಸ್ ನಿಮ್ಮ ಪಾರ್ಟ್ನರ್ ಜೊತೆ ಕಳೆಯುವ ಸಮಯ ಎಲ್ಲಾ ರೀತಿಯಲ್ಲೂ ವಿಭಿನ್ನ ಹಾಗೂ ಸ್ಟೈಲಿಶ್ ಆಗಿರಬೇಕು ಎಂದು ಬಯಸಿದರೆ ಮೊದಲು ಈ ಮೇಲೆ ತಿಳಿಸಿರುವ ನೈಲ್ ಬ್ಯುಟಿ ಟಿಪ್ಸ್ ಅಳವಡಿಸಿಕೊಳ್ಳಿ. ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯೊಂದಿಗೆ ಕಳೆಯುವ ಪ್ರತಿಯೊಂದು ಕ್ಷಣಗಳನ್ನು ವಿಶೇಷವಾಗಿಸುತ್ತದೆ. ನಿಮ್ಮ ಮನದರಸ ನಿಮ್ಮ ಕೈಗಳ ಕಾಂತಿಗೆ ಮಾರುಹೋಗುವುದನ್ನು ಖಂಡಿತ.

  • ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ನೀವು ನೈಲ್ ಆರ್ಟ್ ಪ್ರಿಯರಾ? ಹೊಸ ಹೊಸ ವಿನ್ಯಾಸಗಳನ್ನು ನಿಮ್ಮ ಉಗುರುಗಳಲ್ಲಿ ಚಿತ್ರಿಸಲು ನೀವು ಇಷ್ಟ ಪಡುತ್ತೀರಾ? ಪ್ರತಿ ಮಹಿಳೆ ತನ್ನ ಉಗುರುಗಳನ್ನು ಅಂದವಾಗಿ ಕಾಣಿಸಲು ವಿಭಿನ್ನ ವಿನ್ಯಾಸಗಳಿಗೆ ಮಾರು ಹೋಗುತ್ತಾರೆ. ಕೆಲವರು ತಮ್ಮ ಉಗುರುಗಳಿಗೆ ಗಾಢ ಬಣ್ಣಗಳನ್ನು ಹಚ್ಚಲು ಇಷ್ಟಪಟ್ಟರೆ ಇನ್ನೂ ಕೆಲವರು ಸರಳ ಹಾಗೂ ತಿಳಿ ಬಣ್ಣಗಳನ್ನು ಇಷ್ಟ ಪಡುತ್ತಾರೆ. ಉಗುರುಗಳಲ್ಲಿ ಮೂಡಿಸಬಹುದಾದ ಹೊಸ ಹೊಸ ವಿನ್ಯಾಸಗಳ ಹುಡುಕಾಟದಲ್ಲಿ ನೀವಿದ್ದರೆ, ಇಲ್ಲಿವೆ ಕೆಲವು ಸಿಂಪಲ್ ಹಾಗೂ ಬೇಗನೇ ಉಗುರುಗಳಲ್ಲಿ ಮೂಡಿಸಬಹುದಾದ ನೈಲ್ ಆರ್ಟ್ ಡಿಸೈನ್‌ಗಳು.

    ಲವ್ ಹಾರ್ಟ್ ನೈಲ್ ಆರ್ಟ್:
    ನಿಮ್ಮ ಉಗುರುಗಳಿಗೆ ಲವ್ ಹಾರ್ಟ್ ನೇಲ್ ಆರ್ಟ್ ವಿನ್ಯಾಸಗನ್ನು ಮೂಡಿಸುವ ಮೂಲಕ ರೋಮ್ಯಾಂಟಿಕ್ ಲುಕ್ ಪಡೆಯಬಹುದು. ಗುಲಾಬಿ, ಕೆಂಪು, ಅಥವಾ ಯಾವುದೇ ತಿಳಿ ಬಣ್ಣಗಳಿಂದ ನೀವು ನಿಮ್ಮ ಉಗುರುಗಳಲ್ಲಿ ಪುಟ್ಟದಾದ ಹೃದಯದ ವಿನ್ಯಾಸ ಮೂಡಿಸಿದರೆ ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ನೀವು ಈ ವಿನ್ಯಾಸಗಳಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಒಂದರ ಮೇಲೊಂದು ಹೃದಯಗಳನ್ನು ಬಿಡಿಸಿದರೆ ಹೃದಯದ ಆಕೃತಿ ಪಾಪ್ ಅಪ್ ಆದಂತೆ ಭಾಸವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು

    ಒಂಬ್ರೆ ನೇಲ್ ಆರ್ಟ್ ವಿನ್ಯಾಸ:
    ಎರಡು ಬಣ್ಣಗಳನ್ನು ಗ್ರೇಡಿಯಂಟ್ ವಿನ್ಯಾಸವನ್ನಾಗಿ ಮಾರ್ಪಡಿಸುವುದನ್ನು ಒಂಬ್ರೆಲ್ ನೇಲ್ ಆರ್ಟ್ ಎನ್ನಲಾಗುತ್ತದೆ. ಈ ವಿನ್ಯಾಸವನ್ನು ನಿಮ್ಮ ಉಗುರುಗಳಲ್ಲಿ ಮೂಡಿಸಲು ಬೇಕಾಗಿರುವುದು ಕೇವಲ ಎರಡು ಬಣ್ಣಗಳ ನೈಪ್ ಪಾಲಿಶ್ ಹಾಗೂ ಒಂದು ಪುಟ್ಟ ಸ್ಪಂಜ್.

    ನಿಮ್ಮ ಇಷ್ಟದ ಒಂದು ಬಣ್ಣವನ್ನು ನಿಮ್ಮ ಉಗುರಿನಲ್ಲಿ ಬೇಸ್ ಆಗಿ ಹಚ್ಚಿ ಬಳಿಕ ಇನ್ನೊಂದು ಬಣ್ಣದ ನೈಲ್ ಪಾಲಿಶ್ ಅನ್ನು ಇನ್ನೊಂದು ಲೇಯರ್ ಆಗಿ ಅರ್ಧ ಉಗುರಿಗೆ ಹಚ್ಚಿ. ಎರಡನೇ ಬಣ್ಣ ಒಣಗುವ ಮೊದಲು ಸ್ಪಂಜ್ ಸಹಾಯದಿಂದ ಮೆತ್ತಗೆ ಉಗುರುಗಳ ಮೇಲೆ ಒತ್ತಿದರೆ ಗ್ರೇಡಿಯಂಟ್ ವಿನ್ಯಾಸ ಮೂಡುತ್ತದೆ. ಉಗುರುಗಳಿಗೆ ಫಿನಿಶಿಂಗ್ ಟಚ್ ನೀಡಲು ಕೊನೆಯದಾಗಿ ವಾಟರ್ ಕಲರ್ ನೈಲ್ ಪಾಲಿಷ್ ಅಥವಾ ಕಲ್ಲರ್ ಲೆಸ್ ನೈಲ್ ಪೈಂಟ್ ಹಚ್ಚಿದರೆ ನಿಮ್ಮ ಉಗುರುಗಳು ಆಕರ್ಷಕವಾಗಿ ಹೊಳೆಯುವುದರಲ್ಲಿ ಸಂಶಯವಿಲ್ಲ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

    ವರ್ಣರಂಜಿತ ನೈಲ್ ಆರ್ಟ್:
    ಉಗುರುಗಳಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳನ್ನು ಬಳಸಲು ಹಲವರು ಇಷ್ಟಪಡುತ್ತಾರೆ. ಕಾಮನಬಿಲ್ಲಿನಂತೆ ಹಲವು ಬಣ್ಣಗಳ ಚಿತ್ತಾರವನ್ನು ಉಗುರಿನಲ್ಲಿ ಬಿಡಿಸುವಾಗ ನಿಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆ.
    ನೀವು ಹಲವು ಬಣ್ಣಗಳನ್ನು ಒಂದೇ ಉಗುರಿನಲ್ಲಿ ವಿವಿಧ ವಿನ್ಯಾಸಗಳನ್ನು ಮೂಡಿಸುವ ಮೂಲಕ ಆಕರ್ಷಕವನ್ನಾಗಿ ಮಾಡಬಹುದು. ಇಲ್ಲವೇ ಒಂದೊಂದು ಬೆರಳಿಗೆ ಒಂದೊಂದು ಬಣ್ಣಗಳನ್ನು ಬಳಸಿ ಇನ್ನೂ ಚೆನ್ನಾಗಿ ಕಾಣುವಂತೆ ಮಾಡಬಹುದು.

    ಈ ವಿನ್ಯಾಸಗಳನ್ನು ರಚಿಸುವಾಗ ಒಂದೇ ಉಗುರಿನಲ್ಲಿ ಹಲವು ಬಣ್ಣ ಬಳಸುತ್ತಿರಾದರೆ ಯಾವ ಬಣ್ಣಗಳನ್ನೂ ಬಳಸಬಹುದು. ಆದರೆ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಒಂದೊಂದು ಉಗುರಿಗೆ ಒಂದೊಂದು ಬಣ್ಣಗಳನ್ನು ಬಳಸುತ್ತೀರಾದರೆ ಒಂದು ಬಾರಿಗೆ ತಿಳಿ ಬಣ್ಣಗಳನ್ನು ಆಯ್ದುಕೊಳ್ಳಿ ಇಲ್ಲವೇ ಗಾಢ ಬಣ್ಣಗಳನ್ನೇ ಆಯ್ದುಕೊಳ್ಳಿ.

    ಲೈನ್ ಆರ್ಟ್ ಉಗುರು ವಿನ್ಯಾಸ:
    ಉಗುರುಗಳಲ್ಲಿ ರೇಖೆಗಳನ್ನು ಮೂಡಿಸುವುದು ಇತ್ತೀಚಿನ ಟ್ರೆಂಡ್. ಒಂದು ನಿಮ್ಮ ಇಷ್ಟದ ಬಣ್ಣವನ್ನು ಬೇಸ್ ಆಗಿ ಬಳಸಿ ಬಳಿಕ ತೆಳುವಾದ ರೇಖೆಗಳನ್ನು ಉಗುರುಗಳಲ್ಲಿ ಮೂಡಿಸಿದರೆ ಟ್ರೆಂಡಿಯಾಗಿ ಕಾಣಿಸುವುದಲ್ಲದೇ ಡೀಸೆಂಟ್ ಲುಕ್ ನಿಮ್ಮದಾಗುತ್ತದೆ. ಉಗುರುಗಳಲ್ಲಿ ಪುಟ್ಟ ರೇಖೆಗಳನ್ನು ಮೂಡಿಸಲು ನಿಮ್ಮ ನೈಲ್ ಆರ್ಟ್ ಕಿಟ್‌ನಲ್ಲಿ ಪುಟ್ಟದಾದ ಬ್ರಷ್‌ಗಳಿದ್ದರೆ ಒಳಿತು. ಇಲ್ಲವೆಂದರೆ ಚಿಕ್ಕ ಕಡ್ಡಿ ಅಥವಾ ಟೂತ್ ಪಿಕ್‌ಗಳನ್ನೂ ಬಳಸಬಹುದು. ಇದನ್ನೂ ಓದಿ: ಮಹಿಳೆಯರಿಗಾಗಿ ಚೀಪ್ ಆ್ಯಂಡ್ ಬೆಸ್ಟ್ ರೇಟ್‍ನಲ್ಲಿ ಸ್ಪ್ಲೆಂಡಿಡ್ ನೆಕ್ಲೆಸ್

    ಪ್ರಕೃತಿ ಪ್ರೇರಿತ ನೇಲ್ ಆರ್ಟ್ ವಿನ್ಯಾಸ:
    ನಿಮ್ಮ ಉಗುರುಗಳಲ್ಲಿ ಪ್ರಕೃತಿಯ ಚಿತ್ರಗಳನ್ನು ಮೂಡಿಸಿದರೆ ಅದರ ಮೇಲೆ ಗಮನಹರಿಸುವವರು ನೀವೊಬ್ಬ ಪ್ರಕೃತಿ ಪ್ರೇಮಿ ಎಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ಉಗುರುಗಳಲ್ಲಿ ಹೂವು, ಎಲೆ, ಬಳ್ಳಿ ಹೀಗೆ ಹಲವು ವಿನ್ಯಾಸಗಳನ್ನು ಮೂಡಿಸಿ ಆಕರ್ಷಕವಾಗಿಸಿ.

    ಪ್ರಕೃತಿಯ ಚಿತ್ರಗಳನ್ನು ಉಗುರಿನಲ್ಲಿ ಮೂಡಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಇದನ್ನು ಸುಲಭವಾಗಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನೈಲ್ ಸ್ಟಿಕ್ಕರ್‌ಗಳು ಲಭ್ಯವಿದೆ. ನೀವು ಉಗುರುಗಳಲ್ಲಿ ಮೂಡಿಸುವ ವಿನ್ಯಾಸಗಳು ಕೇವಲ ಹೂವು-ಹಣ್ಣು, ಎಲೆ-ಬಳ್ಳಿಗಳಿಗೆ ಮಾತ್ರ ಸೀಮಿತವಾಗಿಸದೇ ಸಮುದ್ರ, ಸೂರ್ಯ, ಬೆಟ್ಟ ಗುಡ್ಡಗಳಿಗೂ ವಿಸ್ತರಿಸಬಹುದು.

  • ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ನೈಲ್ ಆರ್ಟ್

    ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ನೈಲ್ ಆರ್ಟ್

    ನೈಲ್ ಆರ್ಟ್ ಒಂದು ಉತ್ತಮ ಕಲೆಯಾಗಿದೆ. ನಿಮ್ಮ ನೆಚ್ಚಿನ ಬಣ್ಣದ ನೈಲ್ ಪಾಲಿಶ್‍ಗೆ ಅನೇಕ ಬಣ್ಣಗಳನ್ನು ಸೇರಿಸುವ ಮೂಲಕ ನೈಲ್ ಆರ್ಟ್ ಮಾಡಬಹುದು. ಅದರಲ್ಲೂ ಇದೀಗ ಡಬಲ್ ಡಿಸೈನ್‍ನಂತಹ ಹಲವಾರು ಟ್ರೆಂಡಿ ಡಿಸೈನ್‍ಗಳನ್ನು ಕಾಣಬಹುದಾಗಿದ್ದು, ನಿಮಗೆ ಏನಾದರೂ ಸಮಯವಿದ್ದರೆ ಅದನ್ನು ನೈಲ್ ಆರ್ಟ್ ಮಾಡುವುದನ್ನು ಅಭ್ಯಾಸಮಾಡಿಕೊಳ್ಳಿ. ನೈಲ್ ಆರ್ಟ್‍ಗೊಳಿಸಲು ದುಬಾರಿ ವಸ್ತುಗಳ ಅವಶ್ಯಕತೆ ಇಲ್ಲ. ಬದಲಾಗಿ ಮನೆಯಲ್ಲಿಯೇ ಇರುವ ಕೆಲವು ಬಣ್ಣಗಳನ್ನು ಬಳಸಿ ನೈಲ್ ಆರ್ಟ್ ಮಾಡಬಹುದಾಗಿದೆ.

    ಸ್ಟೇಟ್‍ಮೆಂಟ್ ರೆಡ್
    ಸಾಮಾನ್ಯವಾಗಿ ಕೆಂಪು ಬಣ್ಣದ ನೈಲ್ ಪಾಲಿಶ್‍ನನ್ನು ಎಲ್ಲರೂ ಇಷ್ಟ ಪಡುತ್ತಾರೆ. ಉಂಗುರದ ಬೆರಳಿನ ಮೇಲೆ ಸ್ಟಾರ್ ಡಿಸೈನ್ ವಿನ್ಯಾಸ ಗೊಳಿಸಿದರೆ ಬಹಳ ಸುಂದರವಾಗಿ ಕಾಣಿಸುತ್ತದೆ.

    ಶಿಮ್ಮರಿಂಗ್ ಚಾಂಪೇನ್ ಟಿಪ್ಸ್
    ಶೇಪ್‍ಗೊಳಿಸಿರುವ ನಿಮ್ಮ ಉಗುರಿನ ತುದಿಯ ಭಾಗದಲ್ಲಿ ಚಿನ್ನದ ಬಣ್ಣದ ಚಿಣಮಿಣವನ್ನು ಅಪ್ಲೇ ಮಾಡಿ ಇಂದು ನೋಡಲು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.

    ವೈಟ್ ಡಾಟ್ಸ್
    ಸಿಂಪಲ್ ಡಿಸೈನ್ ಬಯಸುವವರಿಗೆ ಈ ಡಿಸೈನ್ ಬಹಳ ಇಷ್ಟವಾಗುತ್ತದೆ. ಪಿಂಕ್, ಕ್ರೀಮ್ ಅಥವಾ ನಿಮಗೆ ಇಷ್ಟವಾಗುವಂತಹ ಬಣ್ಣದ ನೈಲ್ ಪಾಲಿಶ್‍ನನ್ನು ಉಗುರಿಗೆ ಹಚ್ಚಿ, ಅದರ ಮೇಲೆ ಬಿಳಿ ಬಣ್ಣದ ನೈಲ್ ಪಾಲಿಶ್‍ನಿಂದ ಡಾಟ್ ಇಟ್ಟರೆ ಇದು ನೋಡುಗರಿಗೆ ಸಿಂಪಲ್ ಆಗಿದ್ದರೂ, ಅಟ್ರಾಕ್ಟ್ ಮಾಡುತ್ತದೆ.

    ಮಿಸ್ ಮ್ಯಾಚ್
    ಉಗುರುಗಳಿಗೆ ನೀಲಿ ಬಣ್ಣ ಬಹಳ ಸುಂದರವಾಗಿ ಕಾಣಿಸುತ್ತದೆ. ಇದರೊಂದಿಗೆ ಎಲ್ಲಾ ಬೆರಳುಗಳಿಗೂ ವಿವಿಧ ಶೇಡ್‍ಗಳ ನೈಲ್ ಪಾಲಿಶ್ ಹಚ್ಚಿಕೊಂಡರೆ. ಈ ಬಣ್ಣಗಳು ನಿಮ್ಮ ಕೈನಲ್ಲಿ ಕನ್ನಡಿಯಂತೆ ಹೊಳೆಯುತ್ತದೆ.

    ಗೋಲ್ಡ್ ಗಿಲ್ಟರ್ ಸ್ಟ್ರಿಪ್ಸ್
    ಇದು ಬಹಳ ಸುಲಭವಾದ ಡಿಸಯನ್ ಆಗಿದ್ದು, ಗೋಲ್ಡ್ ಕಲರ್ ನೈಲ್ ಪಾಲಿಶ್ ಬಳಸಿ ಉಗುರಿನ ಮಧ್ಯದ ಭಾಗದಲ್ಲಿ ಸಣ್ಣ ಗೆರೆಯಂತೆ ಮೇಲಿನಿಂದ ಕೆಳಗಿನವರೆಗೂ ಅಪ್ಲೈ ಮಾಡಿ.

    ಕಲರ್ ಫುಲ್ ಲೈನ್ಸ್
    ಬಣ್ಣ ಬಣ್ಣದ ನೈಲ್ ಪಾಲಿಶ್‍ಗಳು ಬಹಳ ಇಂಟ್ರೆಸ್ಟಿಂಗ್ ಆಗಿರುತ್ತದೆ. ಉಗುರುಗಳ ಮಧ್ಯ ಭಾಗ ಅಡ್ಡವಾಗಿ ಪಟ್ಟೆಯಂತೆ ಚಿಕ್ಕದಾಗಿ ಗೆರೆ ಎಳೆಯಬೇಕು. ಈ ಡಿಸೈನ್ ಬಹಳ ಸುಂದರವಾಗಿದ್ದು, ನಿಮಗೆ ನ್ಯಾಚುಲರ್ ಲುಕ್ ನೀಡುತ್ತದೆ. ಇದನ್ನೂ ಓದಿ: ದಿ ಮೋಸ್ಟ್ ಟ್ರೆಂಡಿಂಗ್ ನೈಲ್ ಪಾಲಿಶ್ ಕಲರ್