Tag: nail

  • ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದ!

    ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದ!

    ಮುಂಬೈ: ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದ ಘಟನೆ ಮುಂಬೈನಲ್ಲಿ ನಡೆದಿದ್ದು, ಆತನ ಉಗುರುಗಳ ಮೇಲೆ ಇದ್ದ ರಕ್ತದ ಕಲೆಯಿಂದ ಸಿಕ್ಕಿಬಿದ್ದಿದ್ದಾನೆ.

    ಮುಂಬೈನ ಸಕಿನಾಕಾ ಪ್ರದೇಶದಲ್ಲಿ ರೀಮಾ ಭೋಲಾ ಯಾದವ್ ಹತ್ಯೆಯಾದ ದುರ್ದೈವಿ ಹಾಗೂ ಮನೋಜ್ ಪ್ರಜಾಪತಿ (22) ಆರೋಪಿ. ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ರೀಮಾ ಭೋಲಾ ಹಾಗೂ ಮನೋಜ್ ಪ್ರಜಾಪತಿ ಕಳೆದ ಎರಡು ದಿನಗಳಿಂದ ಪ್ರತ್ಯೆಕ ಮನೆಯಲ್ಲಿ ವಾಸಿಸುತ್ತಿದ್ದರು. ರೀಮಾ ಭೋಲಾ ಮನೆಗೆ ಸ್ನೇಹಿತರೊಬ್ಬರು ಬಂದಾಗ ಆಕೆ ಶವವಾಗಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ರೀಮಾ ಭೋಲಾ ಅವರ ಸ್ನೇಹಿತೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

    crime

    ಸ್ಥಳಕ್ಕಾಗಮಿಸಿದ ಪೊಲೀಸರಿಗೆ ರೀಮಾ ಯಾದವ್ ಅವರ ಶವವು ಕತ್ತು ಸೀಳಿದ ರೀತಿಯಲ್ಲಿ ಕಂಡು ಬಂದಿತ್ತು. ಅದೇ ಸಂದರ್ಭದಲ್ಲಿ ಆಮಿಸಿದ್ದ ಪ್ರಜಾಪತಿಯ ಉಗುರಿನಲ್ಲಿದ್ದ ರಕ್ತದ ಕಲೆಯನ್ನು ನೋಡಿ ಪೊಲೀಸರು ಅನುಮಾನಗೊಂಡಿದ್ದರು. ಇದರಿಂದ ಪ್ರಜಾಪತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಲು ಆಗ್ರಹಿಸಿ ಪ್ರತಿಭಟನೆ

    POLICE JEEP

    ಮೊದಲಿಗೆ ಪ್ರಜಾಪತಿಯು ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ಪೊಲೀಸರ ನಿರಂತರ ವಿಚಾರಣೆಯಿಂದಾಗಿ ಪ್ರಜಾಪತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡು ಆರೋಪಿ ಪ್ರಜಾಪತಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ – ಇಂದು ಹೈಕಮಾಂಡ್‍ನಿಂದ ಬಿಗ್ ಸಂದೇಶ ನಿರೀಕ್ಷೆ

  • ಹುಲಿ ಉಗುರು ಮಾರಾಟಕ್ಕೆ ಯತ್ನ – ಏಳು ಮಂದಿ ಸೆರೆ

    ಹುಲಿ ಉಗುರು ಮಾರಾಟಕ್ಕೆ ಯತ್ನ – ಏಳು ಮಂದಿ ಸೆರೆ

    ಮಡಿಕೇರಿ: ವರ್ಷದ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ಹುಲಿಯ ಕಲ್ಬೇರಳಿನ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯ ಕುಶಾಲನಗರ ತಾಲೂಕಿನ ಮರೂರು ಗ್ರಾಮದ ಗಣೇಶ್, ಯೋಗೇಶ್, ರಮೇಶ್, ನಟೇಶ್ ದೊರೇಶ್, ನವೀನ್, ಶೇಖರ್ ಮತ್ತು ರಮೇಶ್ ಬಂಧಿತ ಆರೋಪಿಗಳು. ವರ್ಷದ ಹಿಂದೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ತಂತಿ ಬೇಲಿಗೆ ಗಣೇಶ್ ಮತ್ತು ಯೋಗೇಶ್ ವಿದ್ಯುತ್ ಹರಿಸಿದ್ದರು. ಆದರೆ ಕಾಡು ಹಂದಿಗೆ ಇಟ್ಟಿದ್ದ ವಿದ್ಯುತ್ ಹುಲಿಗೆ ತಗುಲಿ ಸ್ಥಳದಲ್ಲಿಯೇ ಹುಲಿ ಮೃತಪಟ್ಟಿದೆ. ಇದನ್ನೂ ಓದಿ:  ಇದು ನನ್ನ ರಾಜಕೀಯ ಜೀವನಕ್ಕೆ ಅನಿವಾರ್ಯ : ಬಿಜೆಪಿ ಸೇರ್ಪಡೆ ಖಚಿತ ಪಡಿಸಿದ ಹೊರಟ್ಟಿ

    ಹುಲಿ ಮೃತಪಟ್ಟಿರುವುದರ ಬಗ್ಗೆ ಯಾರಿಗೂ ಮಾಹಿತಿ ನೀಡದೇ, ಹುಲಿ ಉಗುರು ತೆಗೆದುಕೊಂಡು ಹುಲಿ ಕಲ್ಬೇರಳನ್ನು ಹೂತಿ ಹಾಕಿದ್ದರು. ಅಲ್ಲದೇ ವರ್ಷದ ಬಳಿಕ ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯ ದಳ ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ 17 ಹುಲಿ ಉಗುರು, ಒಂದು ಕೋರೆ ಹಲ್ಲು, ಚರ್ಮದ ಚೂರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಹುಲಿಯ ಹೂತ್ತಿರುವ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆಂದು ಬಂದಿದ್ದ ಲೈಟ್ ಬಾಯ್, ಹುಡುಗಿ ವಿಚಾರಕ್ಕೆ ಹತ್ಯೆ

  • ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ಮಾಸ್ಕೋ: ವ್ಯಕ್ತಿಯೋರ್ವನ ಹೊಟ್ಟೆಯಿಂದ 1ಕಿಲೋಗ್ರಾಂಗಿಂತಲೂ ಹೆಚ್ಚು ಮೊಳೆಗಳು, ಬೋಲ್ಟ್‌ಗಳು, ತಿರುಪು ಇರುವುದನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.

    ಹೌದು, ಮದ್ಯವ್ಯಸನನಾಗಿದ್ದ ವ್ಯಕ್ತಿ, ಮದ್ಯ ಸೇವನೆಯನ್ನು ತ್ಯಜಿಸಿದ ನಂತರ ಲೋಹದಂತಹ ವಸ್ತುಗಳನ್ನು ಸೇವಿಸಲು ಆರಂಭಿಸಿದ್ದಾನೆ. ಆದರೆ ನಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಬಾಲ್ಟಿನ್ ನಗರದ ಕ್ಲೈಪೆಡಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

    Nail bolt

    ಈ ವೇಳೆ ವ್ಯಕ್ತಿ ಹೊಟ್ಟೆಯನ್ನು ಎಕ್ಸ್ ರೇ ಮಾಡಿದ ವೈದ್ಯರಿಗೆ 4 ಇಂಚಿರುವ ಆತನ ಹೊಟ್ಟೆಯಲ್ಲಿ ಲೋಹದ ತುಂಡುಗಳಿರುವ ವಿಚಾರ ತಿಳಿದುಬಂದಿದೆ. ಮನುಷ್ಯ ದೇಹದಲ್ಲಿ ಇಷ್ಟೆಲ್ಲಾ ಇದ್ದರೂ ಆತ ಇದ್ದಾನೆ ಎಂದರೆ ಇದು ಸಾಮಾನ್ಯವಾದಂತಹ ಪ್ರಕರಣವಲ್ಲ. ಇದೊಂದು ವಿಭಿನ್ನವಾದಂತಹ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.

    ನಂತರ ಸತತ ಮೂರಗಂಟೆಗಳ ಎಲ್ಲಾ ಲೋಹದ ವಸ್ತುಗಳನ್ನು ಹೊರ ತೆಗೆಯುವ ಮೂಲಕ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ವೈದ್ಯ ಸರುನಾಸ್ ಡೈಲಿಡೆನಾ, ಎಕ್ಸ್ ರೇ ಬಳಿಕ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ವ್ಯಕ್ತಿಯ ಹೊಟ್ಟೆಯಿಂದ ಎಲ್ಲಾ ವಿದೇಶಿ ಲೋಹಗಳನ್ನು ಹೊರತೆಗೆಯಲಾಯಿತು. ಈ ವೇಳೆ ಸಣ್ಣ, ಸಣ್ಣ ಲೋಹಗಳನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಜನಸಂದಣಿ ಮಧ್ಯೆಯೇ ಮಹಿಳೆ ಬರ್ಬರ ಹತ್ಯೆ – ಬೆಚ್ಚಿಬಿದ್ದ ದೆಹಲಿ ಮಂದಿ

    ಈ ಸಂಬಂಧ ಕ್ಲೈಪೆಡಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಲ್ಗಿರ್ದಾಸ್ ಸ್ಪೆಪಾವಿಸಿಯಸ್ ನಾವು ಈ ರೀತಿಯ ಪ್ರಕರಣವನ್ನು ಇಲ್ಲಿಯವರೆಗೂ ನೋಡೆ ಇಲ್ಲ. ಕಳೆದ ಒಂದು ತಿಂಗಳ ಹಿಂದೆ ಮದ್ಯಸೆವನೆಯನ್ನು ನಿಲ್ಲಿಸಿದ ನಂತರ ಲೋಹಗಳನ್ನು ನುಂಗಲು ವ್ಯಕ್ತಿ ಆರಂಭಿಸಿದ. ಇದೀಗ ವ್ಯಕ್ತಿ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

  • ದಿ ಮೋಸ್ಟ್ ಟ್ರೆಂಡಿಂಗ್ ನೈಲ್ ಪಾಲಿಶ್ ಕಲರ್

    ದಿ ಮೋಸ್ಟ್ ಟ್ರೆಂಡಿಂಗ್ ನೈಲ್ ಪಾಲಿಶ್ ಕಲರ್

    ನೈಲ್ ಆರ್ಟ್ ಕೂಡ ಒಂದು ಕಲೆ ಇದ್ದಂತೆ. ಸಾಮಾನ್ಯವಾಗಿ ಹುಡುಗಿಯರು ತಮ್ಮ ಉಡುಪು, ಮೇಕಪ್, ಜ್ಯೂವೆಲರಿಸ್, ಸ್ಲಿಪ್ಪರ್, ಹೇರ್ ಸ್ಟೈಲ್ ಬಗ್ಗೆ ಕಾಳಜಿ ವಹಿಸುವುದನ್ನು ನೊಡುತ್ತೇವೆ. ಆದರೆ ಎಷ್ಟೋ ಮಂದಿಗೆ ತಮ್ಮ ಕೈ ಬೆರಳ ಉಗುರನ್ನು ಸುಂದರಗೊಳಿಸುವುದು ಹೇಗೆ ಎಂದು ತಿಳಿಯದೇ ಚಿಂತಿಸುತ್ತಿರುತ್ತಾರೆ. ಕೇವಲ ಉಗುರನ್ನು ಸುಂದರಗೊಳಿಸಲು ದುಬಾರಿ ಮೊತ್ತ ನೀಡುವುದರ ಜೊತೆಗೆ ಬ್ಯೂಟಿ ಪಾರ್ಲರ್‍ಗಳಿಗೆ ಅಲೆದಾಡುತ್ತಾರೆ. ಅಂತಹವರಿಗೆ ಮನೆಯಲ್ಲಿಯೇ ಸುಲಭವಾಗಿ ತಮ್ಮ ಕೈ ಬೆರಳುಗಳ ಉಗುರನ್ನು ವಿನ್ಯಾಸಗೊಳಿಸಿ ಅದಕ್ಕೆ ತಕ್ಕ ಬಣ್ಣವನ್ನು ಹಚ್ಚುವುದರ ಕುರಿತ ಕೆಲವೊಂದು  ಟಿಪ್ಸ್ ಗಳು ಇಲ್ಲಿದೆ.

    ಆರ್ಟಿಸ್ಟಿಕ್ ಸ್ಟ್ರಿಪ್ಸ್
    ನಿಮಗೆ ಇಷ್ಟವಾಗುವಂತಹ ಎರಡು ನೈಲ್ ಪಾಲಿಶ್‍ನನ್ನು ತೆಗೆದುಕೊಂಡು ಉದ್ದವಾಗಿ ಸಣ್ಣ ಸಣ್ಣ ಪಟ್ಟೆಯ ಮಾದರಿ ಉಗುರಿನ ಮೇಲೆ ಲೇಪಿಸಿ ಇದು ನೋಡಲು ಸುಂದರವಾಗಿ ಕಾಣಿಸುವುದರ ಜೊತೆಗೆ ಈ ಉಗುರಿನ ಅಂದವನ್ನು ಹೆಚ್ಚಿಸುತ್ತದೆ ಹಾಗೂ ನಿಮಗೆ ಬಹಳ ಖುಷಿಕೊಡುತ್ತದೆ.

    ರಿಚ್ ಬ್ರಾವ್ನ್ (ಕಂದು ಬಣ್ಣ)
    ಬ್ರಾವ್ನ್ ನೈಲ್ ಪಾಲಿಶ್‍ನನ್ನು ನೀವು ಕೇವಲ ಚಳಿಗಾಲದಲ್ಲಿ ಮಾತ್ರ ಹಚ್ಚಿಕೊಂಡರೆ ಚಂದ ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು ತಿಳುವಳಿಕೆ, ನೈಲ್ ಪಾಲಿಶ್ ಹಚ್ಚಿಕೊಳ್ಳಲು ನೀವು ಸೀಸನ್‍ಗಳಿಗಾಗಿ ಕಾಯಬೇಕಾಗಿಲ್ಲ. 3.1 ಫಿಲಿಮ್ ಲಿಮ್ ಬ್ರಾವ್ನ್(ಕಂದು) ಕಲರ್ ನೈಲ್ ಪಾಲಿಶ್, ನೀಲಿ ಬಣ್ಣದ ನೈಲ್ ಪಾಲಿಶ್ ಈ ಎಲ್ಲವೂ ತೀಷ್ಣವಾದ ಬಣ್ಣವಾಗಿದ್ದು, ಯಾವ ಸೀಸನ್‍ಗಳಲ್ಲಿ ಹಚ್ಚಿಕೊಂಡರು ಉತ್ತಮವಾಗಿ ಕಾಣುತ್ತದೆ.

    ಕ್ರಿಮಿ ಹುಯಿಸ್( ಕೆನೆ ವರ್ಣ)
    ಮಾಡೆಲ್‍ಗಳು ಹೆಚ್ಚಾಗಿ ಕಿತ್ತಳೆ ಮತ್ತು ಪಿಂಕ್ ಕಲರ್ ಕಾಂಬಿನೇಷನ್ ನೈಲ್ ಪಾಲಿಶ್ ಬಳಸುತ್ತಾರೆ. ಈ ಬಣ್ಣಗಳನ್ನು ಉಗುರಿಗೆ ಲೇಪಿಸಿದಾಗ ಇದು ನೋಡಲು ಕ್ರಿಮ್ ಕಲರ್ ಲುಕ್ ನೀಡುತ್ತದೆ. ಉಗುರಿನ ತುದಿ ಕಿತ್ತಳೆ ಬಣ್ಣ ಹಾಗೂ ಅದರ ಹಿಂದೆ ಪಿಂಕ್ ಕಲರ್ ಹಚ್ಚುವುದರಿಂದ ನಿಮ್ಮ ಉಗುರು ಸುಂದರವಾಗಿ ಹಾಗೂ ಕಾಂತಿಯುತವಾಗಿ ಗೋಚರಿಸುತ್ತದೆ.

    ಅನಿಮಲ್ ಪ್ರಿಂಟ್
    ಉಗುರಿನ ಮೇಲೆ ಯಾವುದಾದರೂ ಒಂದು ನೈಲ್ ಪಾಲಿಶ್ ಹಚ್ಚಿ ಅದರ ಮೇಲೆ ಮತ್ತೊಂದು ನೈಲ್ ಪಾಲಿಶ್ ಮೂಲಕ ಪ್ರಾಣಿಗಳ ಅಥವಾ ಮಿಡಿ ಸ್ಕರ್ಟ್‍ಗಳ ಮುದ್ರಣ ಮಾಡಿದರೆ ಅದು ನಿಮ್ಮ ಉಗುರಿಗೆ ಸೂಪರ್ ಬೋಲ್ಡ್ ಲುಕ್ ನೀಡುತ್ತದೆ.

    ಪಲ್ಸ್ ಟಿಪ್ಸ್
    ಸಾಮಾನ್ಯವಾಗಿ ಕೇಶ ವಿನ್ಯಾಸಕ್ಕಾಗಿ ಮುತ್ತುಗಳನ್ನು ಬಳಸಿರುವುದನ್ನು ನಾವು ಕಂಡಿರುತ್ತೇವೆ. ಆದರೆ ಮಾಡೆಲ್ ಒಬ್ಬರು ಉಗುರಿನ ಮೇಲೆ ಮುತ್ತುಗಳನ್ನು ನೈಲ್ ಪಾಲಿಶ್‍ನಂತೆ ವಿನ್ಯಾಸಗೊಳಿಸಿದ್ದಾರೆ. ಸಣ್ಣ ಸಣ್ಣ ಮುತ್ತುಗಳನ್ನು ಉಗುರಿನ ತುದಿಯಲ್ಲಿ ಅಂಟಿಸಿಕೊಳ್ಳುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ನೀವು ಕೂಡ ಮದುವೆ ಸಮಾರಂಭಗಳಿಗೆ ಹೋಗುವಾಗ ಈ ರೀತಿಯ ವಿಭಿನ್ನ ಶೈಲಿಯಲ್ಲಿ ಮುತ್ತುಗಳನ್ನು ಉಗುರಿನ ಬಣ್ಣದಂತೆ ಅಂಟಿಸಿಕೊಳ್ಳಲು ಟ್ರೈ ಮಾಡಿ ನೋಡಿ.

  • ಕೊರಳಿಗೆ ಡಾಲರ್ ಮಾಡಿಸಿಕೊಳ್ಳಲು ಹುಲಿ ಉಗುರು ಖರೀದಿಸಿ ಸಿಕ್ಕಿಬಿದ್ರು

    ಕೊರಳಿಗೆ ಡಾಲರ್ ಮಾಡಿಸಿಕೊಳ್ಳಲು ಹುಲಿ ಉಗುರು ಖರೀದಿಸಿ ಸಿಕ್ಕಿಬಿದ್ರು

    – ಎರಡು ಹುಲಿ ಉಗುರು ವಶ, ಇಬ್ಬರ ಬಂಧನ

    ಚಾಮರಾಜನಗರ: ಹುಲಿ ಉಗುರುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಸಿಐಡಿ ಅರಣ್ಯ ಸಂಚಾರಿ ದಳ ಪೊಲೀಸರು, ಎರಡು ಹುಲಿ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.

    ಕೊಳ್ಳೇಗಾಲದ ನಾರಾಯಣಿ ಹಾಗೂ ನಯೀಮ್ ಪಾಷಾ ಎಂಬುವರು ಹುಲಿ ಉಗುರು ಮಾರಾಟ ಮಾಡಲು ಆಟೋದಲ್ಲಿ ತೆರಳುತ್ತಿದ್ದರು. ಆದರೆ ಅಣಗಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಸಿಐಡಿ ಅರಣ್ಯ ಸಂಚಾರಿ ದಳದ ಜೀಪ್ ಕಂಡೊಡನೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಆಟೋ ನಿಲ್ಲಿಸಿ ವಿಚಾರಣೆ ನಡೆಸಿದಾಗ ಹುಲಿ ಉಗುರು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.

    ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸಿದಾಗ, ಕೊರಳಿಗೆ ಹಾಕಿಕೊಳ್ಳುವ ಡಾಲರ್ ಮಾಡಿಸಿಕೊಳ್ಳಲು ಮೂರು ತಿಂಗಳ ಹಿಂದೆ ವ್ಯಕ್ತಿಯೊಬ್ಬನಿಂದ ಎರಡು ಹುಲಿ ಉಗುರುಗಳನ್ನು 20 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ ನಾರಾಯಣಿ ತಿಳಿಸಿದ್ದಾನೆ. ಆದರೆ ಈಗ ಹಣಕಾಸಿನ ತೊಂದರೆ ಇದ್ದುದ್ದರಿಂದ ಅವುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾನೆ ಎಂದು ತಿಳಿಸಿದ್ದಾನೆ.

  • ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

    ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

    ಚಾಮರಾಜನಗರ: ಕಾಲಿಗೆ ಗಾಯವಾದರೆ ರಕ್ತ ಬರುವುದನ್ನು ನೋಡಿದ್ದೀರ. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲಿಗೆ ಗಾಯವಾಗಿದ್ದು, ತಾಮ್ರದ ಮೊಳೆಗಳು ಹೊರಬಂದಿವೆ.

    ಗ್ರಾಮದ ಮಾದಪ್ಪ ಎಂಬವರ ಕಾಲಿನಲ್ಲಿ ಗಾಯವಾದ ಜಾಗದಲ್ಲಿ ರಕ್ತದ ಬದಲು ತಾಮ್ರದ ಮೊಳೆಗಳು ಬರುತ್ತಿವೆ. ಕಳೆದ ಪೂರ್ಣಿಮೆಯಂದು ಜಮೀನಿನಿಂದ ಮನೆಗೆ ಬರುವ ವೇಳೆ ಮಾಟ ಮಾಡಿದ ಜಾಗದಲ್ಲಿ ಮಾದಪ್ಪ ಕಾಲಿಟ್ಟಿದ್ದಾರೆ. ಮಾದಪ್ಪ ಅವರಿಗೆ ಮಾಟಮಂತ್ರದ ಬಗ್ಗೆ ಹೆಚ್ಚು ನಂಬಿಕೆ ಇಲ್ಲದ ಕಾರಣ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಒಂದು ದಿನದ ನಂತರ ಪಾದದಲ್ಲಿ ದೊಡ್ಡ ಗುಳ್ಳೆಯೊಂದು ಆಗಿದೆ.

    ಇದನ್ನು ಗುಣಪಡಿಸಿಕೊಳ್ಳಲು ವೈದ್ಯರ ಬಳಿ ಹೋದ ಸಂದರ್ಭದಲ್ಲಿ ಗುಳ್ಳೆಯನ್ನು ಒಡೆದು, ಔಷಧಿಯನ್ನು ನೀಡಿದ್ದಾರೆ. ಆದರೂ ಸಹ ಗಾಯ ಮಾತ್ರ ವಾಸಿಯಾಗಿರಲಿಲ್ಲ. ಮಂಗಳವಾರ ಅಮವಾಸ್ಯೆಯಾದ್ದರಿಂದ ಪತ್ನಿಯ ಒತ್ತಾಯಕ್ಕೆ ಮಣಿದು ಗುಂಡ್ಲುಪೇಟೆ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಹೋಗಿದ್ದಾರೆ. ಅಲ್ಲಿನ ಅರ್ಚಕರು ಗಾಯದ ಮೇಲೆ ನಿಂಬೆ ರಸವನ್ನು ಬಿಟ್ಟ ಸಂದರ್ಭದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಕಾಲಿನಿಂದ ಸುಮಾರು 30 ರಿಂದ 40 ತಾಮ್ರದ ಮೊಳೆಗಳು ಹೊರಬಂದಿವೆ.