Tag: Nagesh

  • ಇಂಧನ ಖಾತೆ ನೀಡಿದ್ರೆ ಅಚ್ಚುಕಟ್ಟಾಗಿ ಕೆಲಸ ಮಾಡ್ತೇನೆ: ಹೆಚ್.ನಾಗೇಶ್

    ಇಂಧನ ಖಾತೆ ನೀಡಿದ್ರೆ ಅಚ್ಚುಕಟ್ಟಾಗಿ ಕೆಲಸ ಮಾಡ್ತೇನೆ: ಹೆಚ್.ನಾಗೇಶ್

    ಕೋಲಾರ: ನನಗೆ ಇಂಧನ ಖಾತೆಯ ಮೇಲೆ ಆಸೆ ಇದೆ. ಜೊತೆಗೆ ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಇಂಧನ ಖಾತೆ ಸಿಕ್ಕರೆ ಸಂತೋಷ ಎಂದು ಸಚಿವ ನಾಗೇಶ್ ಮತ್ತೊಮ್ಮೆ ಇಂಧನ ಖಾತೆ ಮೇಲೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಿಂದಿನಿಂದಲೂ ಇಂಧನ ಖಾತೆ ಮೇಲೆ ಒಲವಿತ್ತು. ಅಲ್ಲದೆ, ಆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಇಂಧನ ಖಾತೆ ನೀಡಿದರೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೇನೆ. ಈ ಕುರಿತು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ ನನಗೆ ಅದೇ ಖಾತೆ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

    ಬಿಜೆಪಿಯಲ್ಲಿ ಸ್ಥಾನ ಖಚಿತ:
    ಅನರ್ಹ ಶಾಸಕರೆಲ್ಲರಿಗೂ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಖಚಿತ. ಅದಕ್ಕಾಗಿ0iÉುೀ ಅರ್ಧದಷ್ಟು ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ನಾನು, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಬಿಜೆಪಿ ಸೇರ್ಪಡೆಯಾಗಲಿದ್ದೇವೆ ಎಂದು ಇದೇ ವೇಳೆ ಬಾಂಬ್ ಸಿಡಿಸಿದ್ದಾರೆ.

    ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿರುವ ಎಲ್ಲರೂ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮೂಲಕ ಜಿಲ್ಲೆಯ ಮತ್ತೆ ಆಪರೇಷನ್ ಕಮಲ ನಡೆಯುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ವಾಕ್ಸಮರದ ಕುರಿತು ಪ್ರತಿಕ್ರಿಯಿಸಿದ ಅವರು, 14 ತಿಂಗಳು ಮೇಲ್ನೋಟಕ್ಕೆ ಚೆನ್ನಾಗಿದ್ದರು. ನಂತರ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಮೈತ್ರಿ ಸರ್ಕಾರವಿದ್ದಾಗ ನನಗೂ ನೋವಿತ್ತು. ಆರಂಭದಲ್ಲೇ ಕೊಡಬೇಕಿದ್ದ ಖಾತೆಯನ್ನು ವರ್ಷದ ನಂತರ ಕೊಟ್ಟು, ಖಾತೆ ಕೊಡಲು ಹತ್ತು ದಿನ ಸತಾಯಿಸಿದ್ದರು ಎಂದು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ಒಬ್ಬರು ಇಬ್ಬರು ಭಿನ್ನಮತೀಯರಿಂದ ಏನೂ ಮಾಡಲಾಗುವುದಿಲ್ಲ. ಬಿಜೆಪಿ ಜೊತೆ ನಾವಿದ್ದೇವೆ ಎಂದು ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಕುರಿತು ಪ್ರತಿಕ್ರಿಯಿಸಿದರು. ಇದೆ ವೇಳೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು. ದೇಶದ ಒಳ್ಳೆಯ ನಾಯಕರು ಪ್ರಧಾನಿ ಮೋದಿಯವರಿಗೆ ಆಪ್ತರಾಗಿದ್ದ ಜೇಟ್ಲಿ ನಿಧನ ಬೇಸರ ತಂದಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾಗೇಶ್ ಪ್ರಾರ್ಥಿಸಿದರು.

  • ರಾತ್ರೋರಾತ್ರಿ ಬೆಂಗ್ಳೂರಿಗೆ ನಾಗೇಶ್ ವಾಪಸ್

    ರಾತ್ರೋರಾತ್ರಿ ಬೆಂಗ್ಳೂರಿಗೆ ನಾಗೇಶ್ ವಾಪಸ್

    ಬೆಂಗಳೂರು: ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಮುಳಬಾಗಿಲು ಪಕ್ಷೇತರ ಶಾಸಕ ಆರ್.ಶಂಕರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

    ಶಂಕರ್ ಜೊತೆಗೆ ಬಿಜೆಪಿ ಶಾಸಕರ ಆರ್.ಅಶೋಕ್ ಮತ್ತು ಅಶ್ವಥ್ ನಾರಾಯಣ್ ಕೂಡ ಇದ್ದರು. ಎಚ್‍ಎಎಲ್‍ನಿಂದ ನೇರವಾಗಿ 5 ಕಾರ್ ನಲ್ಲಿ ಜಾಲಹಳ್ಳಿಯ ಆರ್.ಅಶೋಕ್ ಮನೆಗೆ ಶಂಕರ್ ಅವರನ್ನು ಕರೆದೊಯ್ಯಲಾಯ್ತು.

    ಮುಂಬೈನಿಂದ ನಾಗೇಶ್ ಜೊತೆಗೆ ಬೆಂಗಳೂರಿಗೆಂದು ಹೊರಟಿದ್ದ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಮಾರ್ಗಮಧ್ಯೆ ನಾಪತ್ತೆಯಾಗಿದ್ದಾರೆ. ಪ್ರತ್ಯೇಕವಾಗಿ ಬರುತ್ತೇನೆ ಎಂದು ನಾಗೇಶ್‍ರನ್ನು ಕಳುಹಿಸಿದ್ದ ಶಂಕರ್, ಬೆಂಗಳೂರಿಗೆ ಬರಲೇ ಇಲ್ಲ. ಮುಂಬೈನಿಂದ ನೇರವಾಗಿ ಹೈದ್ರಾಬಾದ್‍ಗೆ ಹಾರಿದ್ದಾರೆ ಎನ್ನಲಾಗಿದೆ.

    ಇದೀಗ ಶಂಕರ್ ನಡೆ ಕುತೂಹಲ ಕೆರಳಿಸಿದೆ. ಅನರ್ಹತೆ ಭೀತಿಯಿಂದ ಏನಾದ್ರೂ ಉಲ್ಟಾ ಹೊಡೀತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಸ್ಪೀಕರ್, ರಾಜೀನಾಮೆ ಪ್ರಕರಣವನ್ನು ಮೊದಲು ಇತ್ಯರ್ಥ ಮಾಡ್ತಾರಾ? ಅನರ್ಹತೆ ಪ್ರಕರಣವನ್ನು ಇತ್ಯರ್ಥ ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

  • ಒಂದೇ ದಿನ 2 ಡ್ರೆಸ್ – ಕನಕಪುರದ ಬಂಡೆಗೆ ಚಮಕ್ ಕೊಟ್ಟ ಸಂತೋಷ್

    ಒಂದೇ ದಿನ 2 ಡ್ರೆಸ್ – ಕನಕಪುರದ ಬಂಡೆಗೆ ಚಮಕ್ ಕೊಟ್ಟ ಸಂತೋಷ್

    ಬೆಂಗಳೂರು: ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಯಡಿಯೂರಪ್ಪ ಆಪ್ತ ಸಂತೋಷ್ ಒಂದೇ ದಿನದಲ್ಲಿ ಎರಡು ಉಡುಪಿನಲ್ಲಿ ಕಾಣಿಸಿಕೊಂಡು ಟ್ರಬಲ್ ಶೂಟರ್ ಡಿಕೆಶಿಗೆ ಚಮಕ್ ಕೊಟ್ಟಿದ್ದಾರೆ.

    ಇಂದು ಮಧ್ಯಾಹ್ನ ಮುಳುಬಾಗಿಲಿನ ಪಕ್ಷೇತರ ಶಾಸಕ ನಾಗೇಶ್ ಅವರನ್ನು ಸಂತೋಷ್ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಂಬೈಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

    ಈ ವೇಳೆ ನಾಯಕರ ಆಪ್ತರ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದ್ದರು. ಸಂತೋಷ್ ಜೊತೆ ನಾಗೇಶ್ ತೆರಳಿ ವಿಮಾನ ಹತ್ತುತ್ತಿದ್ದ ಫೋಟೋ ಪಬ್ಲಿಕ್ ಟಿವಿಗೆ ಸಿಕ್ಕಿತ್ತು. ಈ ವೇಳೆ ಸಂತೋಷ್ ನೀಲಿ ಬಣ್ಣದ ಶರ್ಟ್ ಧರಿಸಿದ್ದರು.

    ಸಂಜೆ ಪಕ್ಷೇತರ ಶಾಸಕ ಶಂಕರ್ ಪೌರಾಡಳಿತ ಖಾತೆಗೆ ರಾಜೀನಾಮೆ ನೀಡಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಶಂಕರ್ ಅವರನ್ನು ಮುಂಬೈಗೆ ಕಳುಹಿಸಲು ಸಂತೋಷ್ ಸಿದ್ದರಾಗಿದ್ದರು. ಶಂಕರ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಆಪರೇಷನ್ ಕಮಲವನ್ನು ವಿಫಲಗೊಳಿಸಲು ಡಿಕೆಶಿ ವಿಮಾನ ನಿಲ್ದಾಣ ಪ್ರವೇಶಿಸಿದ್ದಾರೆ.

    ದೆಹಲಿಗೆ ತೆರಳಲು ಡಿಕೆಶಿ ಬಂದಾಗ ಸಂತೋಷ್ ಮುಖಾಮುಖಿಯಾಗಿದ್ದಾರೆ. ನಿಲ್ದಾಣದ ಒಳಗಡೆ ಅಲ್ಲಿದ್ದ ಸಾರ್ವಜನಿಕರ ಮುಂದೆಯೇ ಶಿವಕುಮಾರ್ ಮತ್ತು ಸಂತೋಷ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ನೀನು ಇನ್ನೂ ಬಚ್ಚಾ, ಎಳಸು ಎಂದು ಡಿ.ಕೆ.ಶಿವಕುಮಾರ್ ಅವಾಜ್ ಹಾಕಿದಾಗ ವಿಮಾನ ನಿಲ್ದಾಣದಿಂದ ಹೊರ ಬಂದ ಸಂತೋಷ್, ಮಾಧ್ಯಮಗಳನ್ನು ಕಂಡ ಕೂಡಲೇ ಓಡೋಡಿ ಹೋಗಿ ಕಾರು ಹತ್ತಿಕೊಂಡಿದ್ದಾರೆ. ಶಿವಕುಮಾರ್ ಅವರ ಪ್ರವೇಶಿಸುವ ಅಷ್ಟರಲ್ಲಿಯೇ ಆರ್.ಶಂಕರ್ ಅವರನ್ನು ಮುಂಬೈನತ್ತ ಕಳುಹಿಸುವಲ್ಲಿ ಸಂತೋಷ್ ಯಶಸ್ವಿಯಾಗಿದ್ದಾರೆ.

    ಮಧ್ಯಾಹ್ನ ನಾಗೇಶ್ ಅವರನ್ನು ಕಳುಹಿಸಿದ್ದ ಫೋಟೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಸಂತೋಷ್ ಬಿಳಿ ಬಣ್ಣದ ಶರ್ಟ್ ಧರಿಸಿ ಶಂಕರ್ ಅವರಿಗಾಗಿ ಕಾಯುತ್ತಿದ್ದರು. ಸಂಜೆ ಡ್ರೆಸ್ ಬದಲಿಸಿದ್ದರೂ ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ಸಂತೋಷ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

  • ನಾಗೇಶ್ ಕೈ ಕೊಡ್ತಾನೆ ಅಂತ ನಾನು ಮೊದಲೇ ಹೇಳಿದ್ದೆ: ಕೆ.ಹೆಚ್ ಮುನಿಯಪ್ಪ

    ನಾಗೇಶ್ ಕೈ ಕೊಡ್ತಾನೆ ಅಂತ ನಾನು ಮೊದಲೇ ಹೇಳಿದ್ದೆ: ಕೆ.ಹೆಚ್ ಮುನಿಯಪ್ಪ

    ಚಿಕ್ಕಬಳ್ಳಾಪುರ: ಪಕ್ಷೇತರ ಶಾಸಕ ನಾಗೇಶ್ ನಮಗೆ ಕೈ ಕೊಡುತ್ತಾನೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.

    ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾತನಾಡಿದ ಕೆ.ಹೆಚ್ ಮುನಿಯಪ್ಪ, ಪಕ್ಷೇತರ ಶಾಸಕರ ಬದಲು ಪಕ್ಷದ ನಿಷ್ಟಾವಂತರಿಗೆ ಮಂತ್ರಿ ಸ್ಥಾನ ನೀಡಿ, ನಾಗೇಶ್ ಯಾವಾಗಲಾದರು ಕೈ ಕೊಡಬಹುದು ಎಂದು ನಾನು ಹೇಳಿದ್ದೆ ಎಂದರು.

    ನನ್ನ ಮಾತು ಕೇಳದೆ ಅವರು ಅವರ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ನೀಡಿದರು. ಇದೀಗ ಅವರೇ ಕೈ ಕೊಟ್ಟು ಹೋಗಿದ್ದಾರೆ ಎಂದು ಪಕ್ಷೇತರ ಶಾಸಕ ನಾಗೇಶ್ ರಾಜೀನಾಮೆ ವಿರುದ್ಧ ಕೆ.ಹೆಚ್ ಮುನಿಯಪ್ಪ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಿರುವ ಶಾಸಕರು ವಾಪಸ್ ಆಗಮಿಸಿ ಪಕ್ಷಕ್ಕೆ ನಿಷ್ಟೆಯಿಂದಿರುವಂತೆ ಕೆ.ಹಚ್.ಮುನಿಯಪ್ಪ ಅತೃಪ್ತರಿಗೆ ಮನವಿ ಮಾಡಿದರು.

  • ನಾಗೇಶ್‍ನನ್ನು ಕಿಡ್ನಾಪ್ ಮಾಡಿ, ಮುಂಬೈಗೆ ಕರ್ಕೊಂಡು ಹೋದ್ರು: ಡಿಕೆಶಿ

    ನಾಗೇಶ್‍ನನ್ನು ಕಿಡ್ನಾಪ್ ಮಾಡಿ, ಮುಂಬೈಗೆ ಕರ್ಕೊಂಡು ಹೋದ್ರು: ಡಿಕೆಶಿ

    ಬೆಂಗಳೂರು: ಶಾಸಕ ನಾಗೇಶ್ ಅವರನ್ನು ಕಿಡ್ನಾಪ್ ಮಾಡಿ ಬಳಿಕ ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಅವರು, ಮುಳುಬಾಗಿಲು ಶಾಸಕ ನಾಗೇಶ್ ಅವರು ಬೇರೆಯವರ ಫೋನಿಂದ ಮಾತನಾಡಿದರು. ಆಗ ಬಿಎಸ್‍ವೈ ಅವರ ಪಿಎ ಸಂತೋಷ್ ಮತ್ತು ಬಿಎಸ್‍ವೈ ಜನರನ್ನು ಕಳುಹಿಸಿ ನನ್ನನ್ನು ಕಿಡ್ನಾಪ್ ಮಾಡಿ, ನನ್ನ ಕೈಯಲ್ಲಿ ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದಾರೆ ಬೇಗ ಬನ್ನಿ.. ಬನ್ನಿ.. ಎಂದು ಹೇಳಿದರು. ತಕ್ಷಣ ನಾನು, ನಾರಾಯಣ ಸ್ವಾಮಿ ಮತ್ತು ನಮ್ಮ ವಿ.ಮುನಿಯಪ್ಪ ಅವರು ನಾವು ಕೂಡಲೇ ಬಂದೆವು.

    ಒಂದು ಗಂಟೆಗೆ ಇರುವ ಫ್ಲೈಟ್‍ನ ಬೇಗನೇ ಟೇಕ್ ಆಫ್ ಮಾಡಿಸಿದ್ದಾರೆ. ಇದರಿಂದ ಬಿಜೆಪಿಯ ಇಡೀ ತಂಡ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಗೊತ್ತಾಗುತ್ತದೆ. ನಾಗೇಶ್ ಅವರು ಕಣ್ಣೀರು ಹಾಕುತ್ತಾ ಫೋನ್ ಮಾಡಿ ಕರೆದರು. ನಾವು ಬರುವಷ್ಟರಲ್ಲಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಇದು ಖಂಡನೀಯ. ಮತ್ತೆ ಅವರು ವಾಪಸ್ ಬರುತ್ತಾರೆ, ಬಂದು ರಾಜೀನಾಮೆಯನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ನನಗೆ ವಿಶ್ವಾಸ ಇದೆ. ಈ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಈ ರೀತಿ ಶಾಸಕರಿಗೆ ಒತ್ತಡ ಕೊಟ್ಟು ರಾಜೀನಾಮೆ ಕೊಡಿಸುವುದು ಸರಿಯಲ್ಲ. ಬಿಜೆಪಿ ನಾನೇ ಮಾಡುತ್ತಿದ್ದೀನಿ ಎಂದು ಒಂದು ಸಾರಿ ನೇರವಾಗಿ ಹೇಳಲಿ. ಅದು ಬಿಟ್ಟು ನಾನು ಏನು ಮಾಡಿಲ್ಲ, ನನಗೆ ಗೊತ್ತೆಯಿಲ್ಲ ಎಂದು ಹೇಳುತ್ತಾ ಇಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ. ನಮಗೆ ಎಷ್ಟೆ ಕಷ್ಟವಾದರೂ ಈ ಸರ್ಕಾರವನ್ನು ಉಳಿಸಿಕೊಳ್ಳುತ್ತವೆ. ನಾವು ತ್ಯಾಗ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಈ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ.

    https://www.youtube.com/watch?v=KiVsBm1CkIQ

  • ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ

    ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಿದ್ದು, ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ನೀಡಿದ್ದಾರೆ.

    ಮುಳುಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರಿಗೆ ಬಳಿಕ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅತೃಪ್ತರ ಗುಂಪು ಸೇರಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸರ್ಕಾರ ಉಳಿಸಿಕೊಳ್ಳಲು 21 ದಿನಗಳ ಹಿಂದೆ ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ ಸಚಿವರ ಸಾಮೂಹಿಕ ರಾಜೀನಾಮೆಯ ಹಿನ್ನೆಲೆಯಲ್ಲಿ ನಾಗೇಶ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಸಿಎಂ ಅಮೆರಿಕದಿಂದ ಬಂದ ಬಳಿಕ ತಡರಾತ್ರಿ ಸಭೆಯ ಮೇಲೆ ಸಭೆ ನಡೆಸಿದ್ದಾರೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು 10 ಮಂದಿ ಸಚಿವರ ರಾಜೀನಾಮೆ ನೀಡಲು ಸೂಚನೆ ನೀಡಿದ್ದರು. ಹೀಗಾಗಿ ಸರ್ಕಾರ ಉಳಿಯಲ್ಲ ಎಂಬುದನ್ನು ಮನಗಂಡ ನಾಗೇಶ್ ರಾಜೀನಾಮೆ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೋಸ್ತಿ ಸರ್ಕಾರದ 13 ಶಾಸಕರು ರಾಜೀನಾಮೆ

  • `ಹನಿಗಳು ಏನನ್ನು ಹೇಳಲು ಹೊರಟಿವೆ’ ಈ ವಾರ ಬಿಡುಗಡೆ

    `ಹನಿಗಳು ಏನನ್ನು ಹೇಳಲು ಹೊರಟಿವೆ’ ಈ ವಾರ ಬಿಡುಗಡೆ

    ಬೆಂಗಳೂರು: ಹೊನ್ನಾದೇವಿ ಕ್ರೀಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನಿಗಳು ಏನನ್ನು ಹೇಳಲು ಹೊರಟಿವೆ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿ ಹುಡುಗನೊಬ್ಬ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಾನೆ. ಹಾಗೆ ಕಾಲೇಜು ಸೇರಿದ ಹುಡುಗ ಪ್ರೀತಿಯ ಬಲೆಗೆ ಬಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗುತ್ತಾನೆ. ಆ ನಂತರ ಆತನ ಬದುಕಿನಲ್ಲಿ ಏನೆಲ್ಲಾ ತಿರುವುಗಳು ಎದುರಾಗುತ್ತವೆ ಅನ್ನೋದು ಈ ಚಿತ್ರದ ಸಾರಾಂಶ.

    ಈ ಚಿತ್ರಕ್ಕೆ ನಾಗರಾಜ್.ಬಿ.ಹೆಚ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಾಣದ ಜೊತೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ, ಅರುಣ್ ಗೂಳೂರು ಛಾಯಾಗ್ರಹಣ, ಅಜಯ್, ನಾಗೇಶ್ ಸಾಹಿತ್ಯ, ಅವಿನಾಶ್ ಶರತ್ ಬೈಂದೂರು, ಚಿರು ಸಂಕಲನವಿದೆ, ನಾಗೇಶ್, ಪಲ್ಲವಿ, ಚಂದ್ರ, ಅರುಣ್ ಶಿವಲಿಂಗೇಗೌಡ ಪಾಂಡವಪುರ, ಮಧು, ಬಸವರಾಜ್, ಜೀವನ್, ಅಭಿಷೇಕ್ ಮುಂತಾದವರ ತಾರಾಬಳಗವಿದೆ.

  • ದೋಸ್ತಿ ಸರ್ಕಾರದ ಎರಡು ವಿಕೆಟ್ ಪತನ- ಪಕ್ಷೇತರರ ಬೆಂಬಲ ವಾಪಸ್

    ದೋಸ್ತಿ ಸರ್ಕಾರದ ಎರಡು ವಿಕೆಟ್ ಪತನ- ಪಕ್ಷೇತರರ ಬೆಂಬಲ ವಾಪಸ್

    ಮುಂಬೈ: ಸಂಕ್ರಾಂತಿಯಂದು ಆಪರೇಷನ್ ಕಮಲ ನಡೆಯಲಿದೆ ಎನ್ನುವ ಸುದ್ದಿಗೆ ಪೂರಕ ಎಂಬಂತೆ ಪಕ್ಷೇತರ ಶಾಸಕರಾದ ರಾಣೇಬೆನ್ನೂರು ಶಾಸಕ ಆರ್.ಶಂಕರ್ ಮತ್ತು ಮುಳಬಾಗಿಲು ನಾಗೇಶ್ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ.

    ಈ ಇಬ್ಬರು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದ್ರಾ ಎಂಬ ಚರ್ಚೆಗಳು ಅರಂಭಗೊಂಡಿವೆ. ಇನ್ನು ಮುಂಬೈನಲ್ಲಿರುವ ಇತರೆ ಕಾಂಗ್ರೆಸ್ ನಾಯಕರ ನಡೆಯ ಮೇಲೆ ಎಲ್ಲರ ಕಣ್ಣಿದೆ. ಒಂದು ವೇಳೆ ಮುಂಬೈನಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ 14 ಜನರು ರಾಜೀನಾಮೆ ನೀಡಿದ್ರೆ ದೋಸ್ತಿಗಳಿಗೆ ಕಂಟಕ ಎದುರಾಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಸರ್ಕಾರ ರಚನೆಯಾಗಿ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ ಆಡಳಿತ ನಡೆಸುತ್ತಿದೆ. ಈ ಅಭದ್ರ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು ನಮ್ಮ ಬೆಂಬಲವನ್ನು ವಾಪಸ್ಸು ಪಡೆಯುತ್ತಿದ್ದೇವೆ ಎಂದು ಹೇಳಿದ್ದು, ಎಲ್ಲಿಯೂ ಬಿಜೆಪಿ ಸೇರುತ್ತೇನೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

    ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರು ಹೊತ್ತಿದ್ದ ಹರಕೆಯನ್ನು ಇಂದು ತೀರಿಸಿದ್ದಾರೆ.

    ಕನಕಪುರದ ನಾಗೇಶ ಹರಕೆ ಹೊತ್ತಿದ್ದ ಭಕ್ತ. ಇವರು ವಿಷ ಹಾಕಿದ ಪಾಪಿಗಳು ಸಿಗಲೆಂದು ಹರಕೆ ಹೊತ್ತಿದ್ದರು. ವಿಷ ಹಾಕಿದ ಪಾಪಿಗಳು 150 ಗಂಟೆಯೊಳಗೆ ಸಿಕ್ಕರೆ 51 ಕಾಯಿ ಒಡೆಯುತ್ತೇನೆಂದು ದೇವರ ಮುಂದೆ ಪ್ರಾರ್ಥನೆ ಮಾಡಿದ್ದರು.

    ವಿಷ ಹಾಕಿದ ಪಾಪಿಗಳು ಬಂಧನವಾದ ಬೆನ್ನಲ್ಲೇ ಇದೀಗ ನಾಗೇಶ್, ಸುಳ್ವಾಡಿ ಮಾರಮ್ಮ ದೇವಸ್ಥಾನದ ಮುಂದೆ ಕಾಯಿ ಒಡೆದು ತಾವು ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ. ಇದೇ ವೇಳೆ ಇನ್ನು ಮುಂದೆ ದೇವಸ್ಥಾನ ಆವರಣದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಸಲ್ಲಿಸಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಈ ದೇವಸ್ಥಾನಕ್ಕೆ ನಾವು ಕಳೆದ 15 ವರ್ಷಗಳಿಂದ ಬರುತ್ತಿದ್ದೇವೆ. 2008-09ರಿಂದ ದೇವಸ್ಥಾನಕ್ಕೆ ಜಾಸ್ತಿ ಬರುತ್ತಿದ್ದೇನೆ. ಈ ದೇವಸ್ಥಾನಕ್ಕೆ ಬಂದ ಬಳಿಕ ನನಗೆ ತುಂಬಾನೇ ಅನುಕೂಲವಾಗಿದೆ. ಕನಕಪುರ-ಬೆಂಗಳೂರು ಮಧ್ಯೆ ಬಿಡದಿ ತಟ್ಟೆ ಇಡ್ಲಿ ಅಂತ ನಮ್ಮದು ಹೋಟೆಲ್ ಇದೆ. ಅಂದು ಅದ್ಯಾರೋ 5 ಮಂದಿ ಸಮುಂಗಲೆಯರು ಮಹದೇಶ್ವರ ಬೆಟ್ಟಕ್ಕೆ ಹೋಗಿ 8 ಗಂಟೆ ಸುಮಾರಿಗೆ ನಮ್ಮ ಹೊಟೇಲ್ ಗೆ ಬಂದಿದ್ದರು. ಆವಾಗ ನನಗೆ ಮದುವೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ಅವರು ಕಿಚ್ ಗುತ್ ಮಾರಮ್ಮನ ದೇವಸ್ಥಾನಕ್ಕೆ ಹೋಗು, ಒಳ್ಳೆಯದಾಗುತ್ತೆ ಅಂತ ಹೇಳಿದ್ದರು. ಹೀಗಾಗಿ ಇಲ್ಲಿಗೆ ಬರಲು ಆರಂಭಿಸಿದೆ. ಹಾಗೆಯೇ ಮನೆ ಕಟ್ಟಿಸಿದೆ, ಹೋಟೆಲ್ ಮಾಡಿದೆ. ರೇಷ್ಮೆನೂ ಬೆಳೆಯುತ್ತಿದ್ದೇನೆ. ಇವುಗಳ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದೇನೆ ಅಂದ್ರು.

    ಪ್ರಸಾದಕ್ಕೆ ವಿಷ ಹಾಕಿದ ವಿಚಾರ ನನಗೆ ತುಂಬಾನೇ ಬೇಸರ ತಂದಿದೆ. ಹೋದ ವಾರ ನಾವು ಬರಬೇಕಿತ್ತು. ಆದ್ರೆ ಬಂದಿರಲಿಲ್ಲ. ಒಂದು ವೇಳೆ ಬರುತ್ತಿದ್ದರೆ ನಾವೂ ಇರುತ್ತಿರಲಿಲ್ಲ. ಹೀಗಾಗಿ ಹೋದ ವಾರವೇ ನಾನು ಹರಕೆ ಕಟ್ಟಿಕೊಂಡೆ. 150 ಗಂಟೆಯಲ್ಲಿ ವಿಷ ಹಾಕಿದೋರು ಸಿಕ್ಕಿಬಿಟ್ರೆ ನಾನು 51 ಕಾಯಿ ಒಡೆಯುತ್ತೀನಿ ಎಂದು ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಂದು 51 ಕಾಯಿ ಒಡೆದಿದ್ದೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷುಲ್ಲಕ ವಿಚಾರಕ್ಕೆ ಕಲಹ- ವ್ಯಕ್ತಿ ಮೇಲೆ ಗುಂಡಿನ ದಾಳಿ

    ಕ್ಷುಲ್ಲಕ ವಿಚಾರಕ್ಕೆ ಕಲಹ- ವ್ಯಕ್ತಿ ಮೇಲೆ ಗುಂಡಿನ ದಾಳಿ

    ಮಡಿಕೇರಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ನಡೆದ ಪರಿಣಾಮ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ನಾಗೇಶ್ ಹಾಗೂ ಮಾದಪ್ಪ ಎಂಬವರಿಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದಿದ್ದು, ನಾಗೇಶ್ ಮಾದಪ್ಪ ಎಂಬವರ ಮೇಲೆ 2 ಸುತ್ತು ಗುಂಡು ಹಾರಿಸಿ ದಾಳಿಗೆ ಮುಂದಾಗಿದ್ದಾನೆ. ದಾಳಿಯಿಂದ ತಪ್ಪಿಸಿಕೊಂಡ ಮಾದಪ್ಪ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಈ ಘಟನೆ ಬಗ್ಗೆ ಮಾದಪ್ಪ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್‍ ನನ್ನ ಪೊಲೀಸರು ಬಂಧಿಸಿ ನಾಡ ಬಂದೂಕನ್ನ ವಶಕ್ಕೆ ಪಡೆದಿದ್ದಾರೆ.