Tag: Nagesh

  • ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಚಾಲಾಕಿ ನಾಗನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ನಾಗ ಎಲ್ಲಿ ತಲೆಮರೆಸಿಕೊಂಡಿದ್ದ? ಪೊಲೀಸರಿಗೆ ಆತನ ಸುಳಿವು ಸಿಕ್ಕಿದ್ದು ಹೇಗೆ? ನಾಗನನ್ನು ಹಿಡಿಯಲು ಪೊಲೀಸರು ಹಾಕಿದ್ದ ಪ್ಲ್ಯಾನ್ ನಿಜಕ್ಕೂ ರೋಚಕವಾಗಿದೆ.

    ಏಪ್ರಿಲ್ 28 ರಂದು ಯುವತಿಯ ಮೇಲೆ ಆಸಿಡ್ ಎರಚಿ ನಾಗೇಶ್ ಪರಾರಿಯಾಗಿದ್ದ. ದಾಳಿ ವೇಳೆ ನಾಗನ ಬಲಗೈ ಮೇಲೂ ಆ್ಯಸಿಡ್ ಬಿದ್ದು ಗಾಯವಾಗಿತ್ತು. ಆ ಗಾಯಗಳನ್ನೇ ತೋರಿಸಿ ನ್ಯಾಯಾಲಯದ ಬಳಿ ವಕೀಲರನ್ನು ನಾಗೇಶ್ ಭೇಟಿಯಾಗಿದ್ದ. ಯಾರೂ ಕೇಸ್ ತೆಗೆದುಕೊಳ್ಳಲು ಒಪ್ಪದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದ. ನಂತರ ತಮಿಳುನಾಡು ಗಡಿಭಾಗದ ಕ್ಲಿನಿಕ್‌ನಲ್ಲಿ ಗಾಯಗಳಿಗೆ ಚಿಕಿತ್ಸೆ ತೆಗೆದುಕೊಂಡು ಪ್ರಯಾಣ ಮುಂದುವರಿಸಿದ್ದ. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಸ್ವಾಮೀಜಿ ವೇಷಧರಿಸಿದ್ದ ನಾಗ
    ನಾನೊಬ್ಬ ಭಕ್ತನೆಂದು ಹೇಳಿಕೊಂಡು ತಮಿಳುನಾಡಿನ ತಿರುವಣ್ಣಮಲ್ಲೈ ಆಶ್ರಮದಲ್ಲಿ ನಾಗ ಆಶ್ರಯ ಪಡೆದುಕೊಂಡಿದ್ದ. ಕಾವಿ ತೊಟ್ಟು ರಮಣಾ ಆಶ್ರಮದಲ್ಲಿ ನಾಗೇಶ ಅವಿತಿದ್ದ. ಭಿತ್ತಿ ಪತ್ರಗಳನ್ನು ಹೊರಡಿಸಿ ಆರೋಪಿಯ ಸುಳಿವು ಪತ್ತೆಗೆ ಪೊಲೀಸರು ಮುಂದಾಗಿದ್ದರು. ನೆರೆ ರಾಜ್ಯದ ಪೊಲೀಸರು ಕಾಮಾಕ್ಷಿಪಾಳ್ಯ ಪೊಲೀಸರ ನೆರವಿಗೆ ಬಂದಿದ್ದರು. ಶುಕ್ರವಾರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆತನ ಚಹರೆ ಹಾಗೂ ಕೈ ಮೇಲಾಗಿದ್ದ ಗಾಯಗಳನ್ನು ಕಂಡು ಪೊಲೀಸರು ಶಂಕೆಗೊಂಡಿದ್ದಾರೆ. ಹತ್ತಿರ ಹೋಗುತ್ತಿದ್ದಂತೆ ಭೀತಿಯಿಂದ ಪರಾರಿಯಾಗಲು ನಾಗೇಶ ಯತ್ನಿಸಿದ್ದ. ಕೂಡಲೇ ನಾಗನನ್ನು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಶಟರ್ ಮುರಿದು ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ 

    ನಾಗನನ್ನು ಹಿಡಿಯಲು ಖಾವಿ ತೊಟ್ಟಿದ್ದ ಪೊಲೀಸರು
    ಆ್ಯಸಿಡ್ ನಾಗ ಅಪ್ಪಟ ದೈವಭಕ್ತನಾಗಿದ್ದ. ವಾರದಲ್ಲಿ ಸೋಮವಾರ, ಶುಕ್ರವಾರ ತಪ್ಪದೇ ದೇವಸ್ಥಾನಕ್ಕೆ ಹೋಗುತ್ತಿದ್ದ. ಈ ಬಗ್ಗೆ ನಾಗೇಶ್ ಪೋಷಕರ ವಿಚಾರಣೆ ವೇಳೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶೋಧ ನಡೆಸಿದ್ದರು. ಪೊಲೀಸರು ಬೆನ್ನು ಬಿದ್ದಿರುವ ಮಾಹಿತಿ ತಿಳಿದ ನಾಗೇಶ್, ಮಠದಲ್ಲಿ ಸ್ವಾಮಿ ವೇಷದಲ್ಲಿ ವಾಸವಾಗಿದ್ದ. ಪೊಲೀಸರು ಕೂಡ ಭಕ್ತರ ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ನಾಗನನ್ನು ಹಿಡಿಯಲು ಸ್ವತಃ ಪೊಲೀಸರು ಸಹ ಖಾವಿ ಧರಿಸಿ ಹೊಂಚುಹಾಕಿದ್ದರು.

    ಪೊಲೀಸರು ತನ್ನನ್ನು ಹುಡುಕುತ್ತಿರುವ ಮಾಹಿತಿ ತಿಳಿದು ನಾಗ ಖಾವಿ ಧರಿಸಿ ದೇವಸ್ಥಾನದಲ್ಲಿ ಕುಳಿತಿದ್ದ. ಯಾರಿಗೂ ಅನುಮಾನ ಬರಬಾರದು ಎಂದು ಖಾವಿ ಧರಿಸಿದ್ದ. ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಕೆಲಕಾಲ ಗೊಂದಲ ಮೂಡಿತ್ತು. ಖಾವಿಧಾರಿ ನಾಗೇಶ್‌ನನ್ನು ನೋಡಿ ಅನುಮಾನಗೊಂಡ ಪೊಲೀಸರಿಗೆ ನಂತರ ಗುರುತು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ನಾಗನನ್ನು ಬಂಧಿಸಿದ್ದಾರೆ. ನಂತರ ರಾತ್ರಿ 11 ಗಂಟೆ ವೇಳೆಗೆ ಬೆಂಗಳೂರಿಗೆ ಕರೆತರಲಿದ್ದಾರೆ.

  • ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಬೆಂಗಳೂರು: ನಗರದಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಈತ 16 ದಿನಗಳ ಬಳಿಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಯಾರಿಗೂ ಸಿಗಬಾರದೆಂದು ನಾಗೇಶ್ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಟ್ರಿಪ್‌ಗೆ ಹೋಗ್ತಿದ್ದೀನಿ, ಟಿವಿ-ಪೇಪರ್‌ನಲ್ಲಿ ಬರ್ತೀನಿ ಎಂದಿದ್ದ ಆ್ಯಸಿಡ್ ನಾಗ

    ಟ್ರಿಪ್‌ಗೆ ಹೋಗ್ತಿದ್ದೀನಿ, ಟಿವಿ-ಪೇಪರ್‌ನಲ್ಲಿ ಬರ್ತೀನಿ ಎಂದಿದ್ದ ಆ್ಯಸಿಡ್ ನಾಗ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಪಾಗಲ್ ಪ್ರೇಮಿ ಆ್ಯಸಿಡ್ ನಾಗ ಅಲಿಯಾಸ್ ನಾಗೇಶ್ ಹುಡುಕಾಟಕ್ಕಾಗಿ ಕಳೆದ 6 ದಿನಗಳಿಂದಲೂ ಶೋಧ ನಡೆಸುತ್ತಿದ್ದಾರೆ. ಹೊರರಾಜ್ಯದ ದೊಡ್ಡ-ದೊಡ್ಡ ದೇವಸ್ಥಾನಗಳು, ಮಠಗಳು, ಧಾರ್ಮಿಕ ಕೇಂದ್ರಗಳಲ್ಲಿ ಇರುವುದಾಗಿ ಶಂಕೆ ವ್ಯಕ್ತವಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.

    Young, Acid, Nagesh, (1)

    ಈ ನಡುವೆ ನಾಗೇಶ್ ತಾನು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿ ಆಪ್ತ ಸ್ನೇಹಿತರೊಂದಿಗೆ ಹೇಳಿಕೊಂಡಿದ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಗಾರ್ಮೆಂಟ್ಸ್ ಆಪ್ತ ಸ್ನೇಹಿತರ ಬಳಿ, ನಾನು 20 ದಿನ ಇರೋದಿಲ್ಲ. ಮನಃ ಶಾಂತಿಗಾಗಿ ಹೊರಗೆ ಹೋಗ್ತಿದ್ದೀನಿ ಎಂದು ಹೇಳಿದ್ದಾನೆ. ಸ್ನೇಹಿತರು ಎಲ್ಲಿಗೆ ಟ್ರಿಪ್ ಹೋಗ್ತಿದ್ದೀಯಪ್ಪ? ಎಂದು ಕೇಳಿದ್ದಕ್ಕೆ ಟಿವಿ-ಪೇಪರ್ ನಲ್ಲಿ ಬರುತ್ತೆ ನೋಡಿ ಎಂದಿದ್ದನಂತೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    ಅಲ್ಲಿಗೆ ಈತ 20 ದಿನಗಳ ಮೊದಲೇ ಆ್ಯಸಿಡ್ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿದ್ದ. ಇವೆಲ್ಲಾ ಪಕ್ಕಾ ಪ್ಲಾನ್ ಮಾಡಿ ಮಾಡಿರೋ ಕೆಲಸಗಳು ಗೊತ್ತಾಗಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರೆ, ವಿಚಾರಣೆ ವೇಳೆ ಸಿಕ್ಕಿಬೀಳುತ್ತೇನೆಂದು ಕೈಯಲ್ಲಿದ್ದ 1 ಲಕ್ಷ ಕ್ಯಾಶ್ ತೆಗೆದುಕೊಂಡು ಮೊಬೈಲ್ ಬಳಸದೆ, ಆನ್‌ಲೈನ್ ವಹಿವಾಟು ನಡೆಸದೆ, ಕುಟುಂಬದೊಂದಿಗೂ ಸಂಪರ್ಕದಲ್ಲಿರದೆ ಪರಾರಿಯಾಗಿರುವ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

  • 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದು ಐದು ದಿನ ಆಯ್ತು. ಆದರೆ ಪಾಗಲ್ ಪ್ರೇಮಿ, ಆ್ಯಸಿಡ್ ನಾಗ ಅಲಿಯಾಸ್ ನಾಗೇಶ್ ಇನ್ನೂ ಪತ್ತೆಯಾಗಿಲ್ಲ. ಇತ್ತ ನಾಗೇಶ್ ದಾಳಿಗೂ ಮೊದಲೇ ಪ್ರೀಪ್ಲಾನ್ ಮಾಡಿಕೊಂಡಿದ್ದ ಅನ್ನೋ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ನಡೆದ ಆ್ಯಸಿಡ್ ಅಟ್ಯಾಕ್‍ನ ಕಿರಾತಕ ನಾಗೇಶ್ ಸುಳಿವು ಸಿಕ್ಕಿಲ್ಲ. ಬೆಂಗಳೂರು ಪೊಲೀಸರು, ನಾಗೇಶನಿಗಾಗಿ 10 ತಂಡ ರಚಿಸಿಕೊಂಡು, ಹಗಲು- ರಾತ್ರಿಯನ್ನದೇ ಕಣ್ಣಿಗೆ ಎಣ್ಣೆಬಿಟ್ಕೊಂಡು ಹುಡುಕಾಡ್ತಿದ್ದಾರೆ. ಆದರೆ ಖತರ್ನಾಕ್ ನಾಗೇಶ್ ಮಾತ್ರ ಸಿಗ್ತಾನೇ ಇಲ್ಲ. ತನಿಖೆ ವೇಳೆ, ಆರೋಪಿಯ ಪ್ರೀಪ್ಲಾನ್ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

    ಆರೋಪಿ ನಾಗೇಶ್ ಯುವತಿ ಮೇಲೆ 10 ದಿನ ಮೊದಲೇ ಪ್ಲಾನ್ ಮಾಡಿ ಕೃತ್ಯವೆಸಗಿರೋದು ತಿಳಿದು ಬಂದಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಮಾಡಬೇಕು ಅನ್ನೋದನ್ನ ಮೊದಲೇ ಪ್ಲಾನ್ ಮಾಡಿಕೊಂಡಿದ್ದ. ಏಪ್ರಿಲ್ 28ರಂದು ದಾಳಿಗೂ ಮೊದಲೇ ಗಾರ್ಮೆಂಟ್ಸ್ ಖಾಲಿ ಮಾಡಲು, ಅಲ್ಲಿದ್ದ ಸ್ಟಾಕ್‍ಗಳನ್ನೆಲ್ಲಾ 1 ದಿನ ಮೊದಲು 1 ಲಕ್ಷ ರೂ.ಗೆ ಕ್ಲಿಯರೆನ್ಸ್ ಮಾಡಿದ್ದ. ಹಣಕ್ಕಾಗಿ ಎಟಿಎಂ ಬಳಸಿದ್ರೆ ಸಿಕ್ಕಿ ಬೀಳ್ತೀನಿ ಅಂತ, ದಾಳಿ ದಿನ 1 ಲಕ್ಷ ಕ್ಯಾಶ್ ಇರುವಂತೆ ನೋಡಿಕೊಂಡಿದ್ದ. ಯುವತಿ ಮೇಲೆ ದಾಳಿ ನಡೆಸಿದ ಬಳಿಕ ನನ್ನ ಸಿಬಿಜೆಡ್ ಬೈಕ್‍ನಲ್ಲಿ ಮೆಜೆಸ್ಟಿಕ್‍ಗೆ ಬಂದು, ಎಸ್ಕೇಪ್ ಆಗಿದ್ದಾನೆ. ಇದೀಗ ಆರೋಪಿ ಬೈಕ್, ಕೋರ್ಟ್ ಬಳಿ ಪತ್ತೆ ಆಗಿದೆ. ಮೊಬೈಲ್ ಅನ್ನ ಹೊಸಕೋಟೆ ಟೋಲ್ ಬಳಿ ಬಿಸಾಕಿದ್ದು, ಮೊಬೈಲ್ ಸಿಕ್ಕವರು ಸ್ವಿಚ್ಛ್ ಆನ್ ಮಾಡಿದಾಗ ವಿಷಯ ಗೊತ್ತಾಗಿದೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಒಂದ್ಕಡೆ ನೀಚ ಕೃತ್ಯವೆಸಗಿರುವ ಆರೋಪಿ ನಾಗೇಶ್ ಆಂಜನೇಯನ ಪರಮ ಭಕ್ತನಂತೆ. ಪ್ರತಿದಿನ ತಿಲಕವಿಲ್ಲದೆ ಮನೆಯಿಂದ ಹೊರಗೆ ಬರ್ತಿರಲಿಲ್ಲವಂತೆ. ಆಗಾಗ ತಮಿಳುನಾಡಿನ ದೇವಸ್ಥಾನಗಳಿಗೂ ಹೋಗ್ತಿದ್ದನಂತೆ. ಹೀಗಾಗಿ ಪೊಲೀಸರು ತಿರುಪತಿ ಸೇರಿದಂತೆ ಹೊರರಾಜ್ಯಗಳ ದೊಡ್ಡ ದೇವಸ್ಥಾನಗಳು, ಮಠಗಳು, ಧಾರ್ಮಿಕ ಕೇಂದ್ರಗಳಲ್ಲಿ ಹುಡುಕಾಟ ನಡೆದುತ್ತಿದ್ದಾರೆ. ತಿರುಪತಿಯ 3000 ಫೇಸ್ ರೆಕಗ್ನೈಸೇಷನ್ ಕ್ಯಾಮೆರಾಗಳನ್ನ ಪೊಲೀಸ್ರು ಜಾಲಾಡಿದ್ದಾರೆ. ಎಲ್ಲೂ ಕೂಡ ಆರೋಪಿಯ ಮುಖ ಕಂಡುಬಂದಿಲ್ಲ.

    ಒಟ್ಟಾರೆ ಪ್ರೀತಿ ನಿರಾಕರಿಸಿದ್ರೂ ಅನ್ನೋ ಒಂದೇ ಒಂದು ಕಾರಣಕ್ಕೆ ಆರೋಪಿ ಆ್ಯಸಿಡ್ ದಾಳಿ ನಡೆಸಿದ್ದು, ಕ್ಷಮಿಸಲಾರದ ತಪ್ಪು. ಈತನ ವಿರುದ್ಧ ಕಠಿಣಾತಿ ಕಠಿಣ ಶಿಕ್ಷೆ ಆಗಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಇತ್ತ ಅಮಾಯಕ ಯುವತಿ, ಸುಟ್ಟುಗಾಯಗಳಿಂದ ನರಳುತ್ತ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಆದಷ್ಟು ಬೇಗ, ಪಾಗಲ್ ಪ್ರೇಮಿ ನಾಗೇಶ್‍ನನ್ನು ಬಂಧಿಸಿ, ಯುವತಿ ಕುಟುಂಬಕ್ಕೆ ನ್ಯಾಯಕೊಡಿಸಬೇಕಿದೆ.

  • ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಗೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಲುಕ್‍ಔಟ್ ನೊಟೀಸ್ ಜಾರಿ ಮಾಡಿದ್ದಾರೆ.

    ಎಲ್ಲಾ ರಾಜ್ಯಗಳಿಗೆ ಹಾಗೂ ಎಲ್ಲಾ ಭಾಷೆಗಳಲ್ಲೂ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಪೊಲೀಸರು, ಏರ್ ಪೋರ್ಟ್, ರೈಲ್ವೇ ನಿಲ್ದಾಣಗಳಿಗೂ ರವಾನೆ ಮಾಡಿದ್ದಾರೆ. ಸದ್ಯ ಆಶ್ರಮ, ಧ್ಯಾನಮಂದಿರಗಳಲ್ಲಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ

    ನಾಗೇಶ್ ತಮಿಳುನಾಡಿನಲ್ಲಿ ಅವಿತಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಇದ್ದಾನೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ತಮಿಳುನಾಡಿನ ದೇಗುಲಗಳಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

  • ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ನ್ಯಾಯ ಸಿಗಬೇಕು ಎಂದು ಇಡೀ ಕರ್ನಾಟಕದ ಜನರು ಕೇಳಿಕೊಳ್ಳುತ್ತಿದ್ದಾರೆ. ಪ್ರಸ್ತುತ ದಾಳಿ ಮಾಡಿದ ಆರೋಪಿದ ಸುಳಿವು ಇನ್ನೂ ಪೊಲೀಸರಿಗೆ ಸಿಕ್ಕದಿರುವುದು ಸಾರ್ವಜನಿಕರ ಆಕ್ರೋಶ ಹೆಚ್ಚು ಮಾಡುತ್ತಿದೆ. ಯುವತಿಗೆ ನ್ಯಾಯ ಸಿಗಬೇಕು ಎಂದು ಆಕೆ ಓದಿದ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

    ಬಡ ಕುಟುಂಬದಿಂದ ಬಂದ ಯುವತಿಯ ಚಿಕಿತ್ಸೆಗೆ ರಾಜಕೀಯ ಗಣ್ಯರು ಸೇರಿದಂತೆ ಸಾರ್ವಜನಿಕರು ಸಹಾಯಹಸ್ತ ಚಾಚಿದ್ದಾರೆ. `ಪಬ್ಲಿಕ್ ಟಿವಿ’ ಎಲ್ಲ ರಾಜಕೀಯ ಗಣ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದು, ಎಲ್ಲರೂ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಪಬ್ಲಿಕ್ ಟಿವಿಯೂ ಸಹ  ಸಂತ್ರಸ್ತೆಗೆ 50 ಸಾವಿರ ರೂ. ಸಹಾಯಧನ ನೀಡಿದೆ. ಇದನ್ನೂ ಓದಿ: ಆಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ  BBMP 

    ಕಾಂಗ್ರೆಸ್ ಮುಖಂಡ ಭರತ್ ರೆಡ್ಡಿ ಅವರು ತಮ್ಮ ಕಂಪನಿಯಲ್ಲಿಯೇ ಕೆಲಸದ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ. ಇದರ ಜೊತೆಗೆ 1 ಲಕ್ಷ ರೂ. ಕೊಟ್ಟಿದ್ದಾರೆ. ಆರೋಗ್ಯ ಸಚಿವ ಕೆ.ಸುಧಾಕರ್‌ 5 ಲಕ್ಷ ರೂ. ಸಹಾಯ ಮಾಡಿದರು.

    ಬಿಜೆಪಿ ಸಚಿವ ಮುರುಗೇಶ್ ನಿರಾಣಿ 1 ಲಕ್ಷ, ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಲಾ 50 ಸಾವಿರ ರೂ., ಮಾಜಿ ಶಾಸಕ ಮಾನಪ್ಪ ವಜ್ಜಲ್ 1 ಲಕ್ಷ ರೂ., ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ 1 ಲಕ್ಷ ರೂ., ಶಾಸಕ ಗೂಳಿಹಟ್ಟಿ ಶೇಖರ್ 2 ಲಕ್ಷ ರೂ., ಮಾಜಿ ಶಾಸಕ ಮುನಿರಾಜು 50 ಸಾವಿರ ರೂ, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

    ನೀವು ಇವರಿಗೆ ಸಹಾಯ ಮಾಡಲು ಇಚ್ಛಿಸಿದರೆ ಈ ಕೆಳಗಿನ ಬ್ಯಾಂಕ್‍ ಖಾತೆಗೆ ಹಣ ಹಾಕಬಹುದು.
    ಹೆಸರು: LAKSHMAMMA B
    ಖಾತೆ ನಂ: 3196101011122
    ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
    IFSC ಕೋಡ್: CNRB0003196
    ಬ್ರಾಂಚ್‌: HEGGANAHALL
    ಬೆಂಗಳೂರು: 560091
    PhonePay: 8105253022 (ರಾಜು, ಸಂತ್ರಸ್ಥೆ ತಂದೆ)

  • ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ

    ಹುಡುಗಿ ತಂಟೆಗೆ ಹೋಗಬೇಡ ಎಂದರೂ ಕೇಳಲಿಲ್ಲ ನಾಗೇಶ್ – ಪೊಲೀಸರ ಬಳಿ ಆರೋಪಿಯ ಅಣ್ಣ ಹೇಳಿಕೆ

    ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಆರೋಪಿ ಪಾಗಲ್ ಪ್ರೇಮಿ ನಾಗೇಶ್‍ನ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಿನ್ನೆ ರಾತ್ರಿ ಮಾಗಡಿ ರಸ್ತೆ ಬಳಿ ನಾಗೇಶ್ ಅಣ್ಣ ರಮೇಶ್ ಬಾಬು ಅಡಗಿ ಕುಳಿತಿದ್ದ. ಈ ವೇಳೆ ಪೊಲೀಸರು ನಾಗೇಶ್ ಅಣ್ಣನ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯ ಮೇಲೆ ಆ್ಯಸಿಡ್ ಸುರಿದ ಬಳಿಕ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಫೋನ್ ಮಾಡಿದ್ದ. ಫೋನ್ ಮಾಡಿ ಆ್ಯಸಿಡ್ ಹಾಕಿದ್ದೀನಿ, ಪೊಲೀಸರು ಬರ್ತಾರೆ ಎಸ್ಕೇಪ್ ಆಗು ಎಂದಿದ್ದ. ಬಳಿಕ ಆರೋಪಿ ಅಣ್ಣ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ 

    ಪೊಲೀಸರು ನಿನ್ನೆ ಸಂಜೆ ಆರೋಪಿ ಅತ್ತಿಗೆಯನ್ನು ಕರೆತಂದು ವಿಚಾರಣೆ ಮಾಡಿದ್ದರು. ನಂತರದಲ್ಲಿ ರಾತ್ರಿ ನಾಗೇಶ್ ಅಣ್ಣನ ಕರೆತಂದು ವಿಚಾರಣೆ ಮಾಡಿದ್ದಾರೆ. ಆ್ಯಸಿಡ್ ದಾಳಿಕೋರ ನಾಗೇಶ್‍ನ ಅಣ್ಣ, ಅತ್ತಿಗೆ ಹಾಗೂ ಪೋಷಕರನ್ನು ಸಹ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ನಮಗೆ ಈ ಬಗ್ಗೆ ಗೊತ್ತಿಲ್ಲ ಸರ್. ಆತ ಕಾಲ್ ಮಾಡಿ ಈ ರೀತಿ ಆ್ಯಸಿಡ್ ಹಾಕಿರುವ ಬಗ್ಗೆ ಹೇಳಿದಾಗ ಕೂಡಲೇ ನಾವೆಲ್ಲರೂ ಭಯಭೀತರಾಗಿ ಮನೆ ಬಿಟ್ಟು ಓಡಿ ಹೋದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಆರೋಪಿ ಅಣ್ಣನು ಏಪ್ರಿಲ್ 27ರ ರಾತ್ರಿ ನಾಗೇಶ್ ಮನೆಗೆ ಬಂದಿದ್ದ. ಅಣ್ಣನ ಜೊತೆಗೆ ಕೆಲ ಸಂಬಂಧಿಕರು ಸಹ ಬಂದಿದ್ದರು. ಈ ವೇಳೆ, ನಾಗೇಶ್‍ನಿಗೆ ತಡರಾತ್ರಿವರೆಗೂ ಬುದ್ಧಿವಾದ ಹೇಳಿದ್ದರು. ಮನೆಗೆ ಬಂದಿದ್ದ ಐದಾರು ಜನರಿಂದ ನಾಗೇಶ್ ಬುದ್ಧಿವಾದ ಹೇಳಿಸಿಕೊಂಡಿದ್ದ. ಯುವತಿ ಪೋಷಕರು ಅಣ್ಣನಿಗೆ ವಿಚಾರ ತಿಳಿಸಿದ ನಂತರ ಬಂದು ಬುದ್ಧಿವಾದ ಹೇಳಿದ್ದರು. ಅಷ್ಟು ಹೇಳಿದರೂ ಮಾತು ಕೇಳದೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

    ಆರೋಪಿಯು ಯುವತಿ ಮನೆಯಿಂದ 300 ಮೀಟರ್ ದೂರದಲ್ಲೇ ಮನೆ ಮಾಡಿಕೊಂಡಿದ್ದ. ಹೆಗ್ಗನಹಳ್ಳಿ ಕ್ರಾಸ್‍ನ ಸಂಜೀವಿನಿ ನಗರದಲ್ಲಿ ಐದು ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದ. ನಾಗೇಶ್ ತಂದೆ-ತಾಯಿ ಜೊತೆಗೆ ವಾಸವಿದ್ದ. ಸದ್ಯ ಪೊಲೀಸರು ಆರೋಪಿಯ ಪೋಷಕರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

  • ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು

    ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು

    – ಅವಳಿಗೆ ಬ್ಯಾಂಕ್ ಕೆಲಸ ಎಂದರೆ ಇಷ್ಟ

    ಬೆಂಗಳೂರು: ಆ್ಯಸಿಡ್ ದಾಳಿಗೆ ಬಳಗಾದ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಾಗಿ ಪೊಲೀಸರು ಇನ್ನೂ ಹುಡುಕಾಟ ಮಾಡುತ್ತಿದ್ದು, ಇಂದು ನಾಗೇಶ್ ಅವರ ಅಣ್ಣನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ತನ್ನ ಅಳಲನ್ನು ತೊಡಿಕೊಂಡಿದ್ದಾರೆ.

    ಆ್ಯಸಿಡ್ ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಮಾತನಾಡಿದ್ದು, ನನಗೆ ಏನೂ ತಿಳಿಯುವುದಿಲ್ಲವೆಂದು ಯಾವುದೇ ರೀತಿ ಮಾಹಿತಿಯನ್ನು ನನಗೆ ಕೊಡುತ್ತಿಲ್ಲ. ನನ್ನ ಅಕ್ಕ ಮತ್ತು ಭಾವನೇ ಇದನ್ನು ನೋಡಿಕೊಳ್ಳುತ್ತಿದ್ದಾರೆ. ನನಗೆ ಏನೂ ಹೇಳುತ್ತಿಲ್ಲ. ಆದರೆ ಈಗ ನಾನು ಸಹಿ ಮಾಡಬೇಕು ಎಂದು ಹೇಳಿ ಆಸ್ಪತ್ರೆಯಿಂದ ಕರೆಬಂದಿದೆ, ಹೋಗಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ 

    ಆಸ್ಪತ್ರೆಗೆ ದಾಖಲಾದ ಮೇಲೆ ಆಸ್ಪತ್ರೆಯವರು ನನ್ನ ಮಗಳನ್ನು ನೋಡಲು ಬಿಡುತ್ತಿರಲಿಲ್ಲ. ಆದರೆ ನಿನ್ನೆ ಬಿಟ್ಟಿದ್ರು. ನನ್ನ ಮಗಳನ್ನು ನೋಡುವುದಕ್ಕೆ ಆಗುತ್ತಿಲ್ಲ. ನನ್ನ ಮಗಳು ಈ ರೀತಿ ಮಲಗಿಕೊಂಡಿದ್ದಾಳೆ ಎಂದರೆ ನನಗೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು. ಆದರೆ ಈಗ ಈ ರೀತಿ ನೋಡಿ ನನಗೆ ದುಃಖ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಕಣ್ಣೀರು ಹಾಕಿದರು.

    ನನ್ನ ಮಗಳು ನಿನ್ನೆ ಸ್ವಲ್ಪ ಕಣ್ಣು ಬಿಟ್ಟು ನೋಡಿ, ಅಮ್ಮ, ಅಮ್ಮ ಎಂದು ಕರೆದ್ಳು. ಅಮ್ಮ ನನ್ನನ್ನು ಉಳಿಸಿಕೊಳ್ಳಿ, ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಅವನನ್ನು ಮಾತ್ರ ಸುಮ್ಮನೆ ಬಿಡಬೇಡಿ ಎಂದು ಬೇಡಿಕೊಂಡಿದ್ದಾಳೆ. ನಾನು ಪೊಲೀಸರ ಬಳಿ ಮಾತನಾಡಿಲ್ಲ. ಎಲ್ಲವನ್ನೂ ನನ್ನ ಅಕ್ಕ ಮತ್ತು ಭಾವ ನೋಡಿಕೊಳ್ಳುತ್ತಿದ್ದಾರೆ. ನಾನು 1ನೇ ಕ್ಲಾಸ್ ಸಹ ಓದಿಲ್ಲ. ನನ್ನ ಅಕ್ಕ-ಭಾವ ಓದಿದ್ದಾರೆ. ಡಾಕ್ಟರ್ ಮತ್ತು ಪೊಲೀಸರು ಏನೇ ಮಾತನಾಡಿದ್ರೂ ನನಗೆ ಅರ್ಥವಾಗುವುದಿಲ್ಲ. ಅದಕ್ಕೆ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ರೋದಿಸಿದರು.

    ಅಕ್ಕನ ಮನೆಯ ಮೇಲೆಯೇ ಬಾಡಿಗೆಗೆ ಇದ್ದ
    ನಾಗೇಶ್ ನಮ್ಮ ಅಕ್ಕನ ಮನೆಯ ಮೇಲೆಯೇ ಬಾಡಿಗೆಗೆ ಇದ್ದ. ಆದರೆ ವಿಷಯ ತಿಳಿದ ಮೇಲೆ 3 ವರ್ಷಗಳ ಹಿಂದೆಯೇ ಅವನನ್ನು ಮನೆಯಿಂದ ಖಾಲಿ ಮಾಡಿಸಿದ್ದೇವೆ. ಬ್ಯಾಂಕ್ ಬಳಿ ಬಂದು ಪ್ರೀತಿ ವಿಚಾರವನ್ನು ಹೇಳಿದ್ದ. ಆದರೆ ನನ್ನ ಮಗಳು ನಾನು ಮದುವೆಯಾಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಈ ವಿಷಯವನ್ನು ಮನೆಯವರ ಬಳಿಯೂ ಹೇಳಿದ್ದಳು. ಅಲ್ಲದೇ ಅವನು ಮನೆ ಬಳಿಯೇ ಬಂದು, ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದ. ಆದರೆ ನಾವು ಮತ್ತೆ ನಮ್ಮ ಭಾವ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದೆವು ಎಂದು ತಿಳಿಸಿದರು.

    6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗಿದ್ದಳು
    ನಾಗೇಶ್ ಅವರ ಅಣ್ಣನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಎಂಬುದಷ್ಟೇ ನನಗೆ ಗೊತ್ತು. ನನ್ನ ಮಗಳು 6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗಿದ್ದಳು. ಅವಳಿಗೆ ಬ್ಯಾಂಕ್ ಕೆಲಸ ಎಂದರೆ ಇಷ್ಟ. ಈ ಕೆಲಸಕ್ಕಾಗಿ ಹಲವು ಎಕ್ಸಾಂ ಸಹ ಬರೆದಿದ್ದಾಳೆ. ಅಲ್ಲದೇ ಇತ್ತೀಚೆಗೆ ಪೋಸ್ಟ್ ಆಫೀಸ್ ಕೆಲಸಕ್ಕೆ ಎಕ್ಸಾಂ ಬರೆಯಬೇಕು ಎಂದು ಕೇಳಿದ್ದಳು. ನಾವು ತರಕಾರಿ ವ್ಯಾಪಾರ ಮಾಡಿ ನನ್ನ ಮಕ್ಕಳನ್ನು ಬೆಳೆಸಿದ್ದೇವೆ ಎಂದು ಅತ್ತರು. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಅವನ ಅಣ್ಣನನ್ನು ಜೈಲಿಗೆ ಹಾಕಿ
    ನನ್ನ ದೊಡ್ಡ ಮಗಳ ಮದುವೆ ಇದ್ದ ಸಂದರ್ಭದಲ್ಲಿ ನಾಗೇಶ್ ಅಣ್ಣನಿಗೆ ಪತ್ರಿಕೆ ಕೊಡಲು ಹೋಗಿದ್ದಾಗಲೂ ನಮ್ಮ ಮನೆಯವರು ನಾಗೇಶ್ ವಿರುದ್ಧ ದೂರು ಕೊಡುವುದಾಗಿ ಹೇಳಿದ್ದರು. ಆದರೆ ಅವರ ಅಣ್ಣ ನನ್ನ ತಮ್ಮನಿಗೆ ಅಷ್ಟು ಧೈರ್ಯವಿಲ್ಲ, ಅವನಿಗೆ ನಾನು ಬುದ್ಧಿ ಹೇಳುತ್ತೇನೆ ಎಂದು ಹೇಳಿದ್ದರು. ಆಗ ನಾನು ಪೊಲೀಸರಿಗೆ ದೂರು ಕೊಟ್ಟಿದ್ರೆ ಈ ಪರಿಸ್ಥಿತಿ ನನ್ನ ಮಗಳಿಗೆ ಬರುತ್ತಿರಲಿಲ್ಲ. ಅವನ ಅಣ್ಣನನ್ನು ಜೈಲಿಗೆ ಹಾಕಿ ಎಂದು ಬೇಡಿಕೊಂಡರು.

  • ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಬೆಂಗಳೂರು: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು ಎಂದು ಆಸಿಡ್ ದಾಳಿಗೆ ಒಳಗಾದ ಯುವತಿ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.

    ಯುವತಿ ಮೇಲೆ ನಾಗೇಶ್ ಆಸಿಡ್ ದಾಳಿ ಮಾಡಿದ್ದು, ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ವೇಳೆ ಪೊಲೀಸರು ಯುವತಿಯನ್ನು ವಿಚಾರಣೆ ಮಾಡಿದ್ದು, ಅವನನ್ನ ಮಾತ್ರ ಬಿಡಬೇಡಿ ಸರ್, ಅವನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾಳೆ. ಯುವತಿಯ ಸ್ಟೇಟ್ ಮೆಂಟ್ ಪಡೆದ ಪೊಲೀಸರು ನಾಗೇಶ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

    ಆರೋಪಿ ನಾಗೇಶ್ ಯುವತಿ ಮೇಲೆ ಆಸಿಡ್ ಹಾಕಿದ ಬಳಿಕ ಕೋರ್ಟ್ ಬಳಿ ಹೋಗಿದ್ದಾನೆ. ವಕೀಲರನ್ನ ಭೇಟಿ ಮಾಡುವ ಉದ್ದೇಶದಿಂದ ನಾಗೇಶ್ ಸಿಸಿಟ ಸಿವಿಲ್ ಕೋರ್ಟ್ ಬಳಿ ಹೋಗಿದ್ದಾನೆ. ಬಳಿಕ ನಾಗೇಶ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಪ್ರಸ್ತುತ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಖಾಸಗಿ ಕಂಪನಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದೇನೆ. ಈ ದಿನ ಬೆಳಗ್ಗೆ 8:30ರ ಸುಮಾರಿಗೆ ಕಂಪನಿಯ ಮೊದಲ ಮಹಡಿಯಲ್ಲಿದ್ದ ಕಚೇರಿಗೆ ನಾನು ಹೋಗಿದ್ದೆ. ಈ ವೇಳೆ ಕಚೇರಿಗೆ ಇನ್ನೂ ಯಾರು ಬಾರದೇ ಇರುವ ಹಿನ್ನೆಲೆಯಲ್ಲಿ ಕಚೇರಿಯ ಬಾಗಿಲ ಬಳಿ ನಿಂತಿದ್ದಾಗ ನಾಗೇಶ್ ಸ್ಥಳಕ್ಕೆ ಬಂದಿದ್ದ. ನಾನು ಆತನ ಕೈಯಲ್ಲಿ ಕವರ್‍ವೊಂದರಲ್ಲಿ ಏನೋ ವಸ್ತು ಇರುವುದನ್ನು ನೋಡಿದೆ.

    ತಕ್ಷಣ ನಾನು ಕೆಳಗೆ ಹೋಗಲು ಪ್ರಯತ್ನಿಸಿದ ವೇಳೆ ಹಿಂಬಾಲಿಸಿ ಬಂದ ಆತ ಕೈಯಲ್ಲಿದ್ದ ಆಸಿಡ್ ನನ್ನ ಎದೆ, ಬೆನ್ನು, ತಲೆ ಮೇಲೆ ಹಾಕಿದ್ದಾನೆ. ನಾನು ನಮ್ಮ ತಂದೆಯನ್ನು ಸ್ಥಳಕ್ಕೆ ಕರೆಸಿಕೊಂಡು ಲಕ್ಷ್ಮಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ನಾಗೇಶ್‍ನು ಏಳು ವರ್ಷಗಳಿಂದ ನನ್ನನ್ನು ಪ್ರೀತಿಸುವಂತೆ ಹಿಂಸೆ ಕೊಡುತ್ತಿದ್ದು, ನಾನು ಒಪ್ಪಿರಲಿಲ್ಲ. ಏಪ್ರಿಲ್ 27 ರಂದು ನನ್ನನ್ನು ಹಿಂಬಾಲಿಸಿಕೊಂಡು ನಮ್ಮ ಆಫೀಸ್ ಬಳಿ ಬಂದು, ನೀನು ನನ್ನನ್ನೇ ಮದುವೆ ಆಗಬೇಕು, ಇಲ್ಲವಾದರೆ ಬೇರೆ ಯಾರು ಮದುವೆ ಆಗದಂತೆ ಮಾಡಿಬಿಡುತ್ತೇವೆ ಅಂತಾ ಬೆದರಿಕೆ ಹಾಕಿದ್ದನು. ಇದನ್ನೂ ಓದಿ: ಹಾಡಹಗಲೇ ಅತ್ಯಾಚಾರ – ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ ಬಿಡದ ಪಾಪಿಗಳು

    ಈ ವಿಚಾರವನ್ನು ನಾನು ನಮ್ಮ ದೊಡ್ಡಮ್ಮನಿಗೆ ತಿಳಿಸಿದ್ದು, ನಾಗೇಶ್ ಅಣ್ಣನ ಬಳಿ ಈ ವಿಚಾರ ತಿಳಿಸಿದ್ದೆ. ಅದಕ್ಕೆ ಅವರು ಬುದ್ದಿ ಹೇಳುವುದಾಗಿ ಹೇಳಿದ್ದರು. ಈ ದಿನ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆಸಿಡ್ ಹಾಕಿ ಗಾಯಗೊಳಿಸಿದ್ದಾನೆ. ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

  • ಹಿಜಬ್ ವಿದ್ಯಾರ್ಥಿನಿಯರಿಗೆ ಶಾಕ್ – ಎಸ್‌ಎಸ್‌ಎಲ್‌ಸಿ ಪರಿಕ್ಷೆಗೆ ಸಮವಸ್ತ್ರ ಕಡ್ಡಾಯ

    ಹಿಜಬ್ ವಿದ್ಯಾರ್ಥಿನಿಯರಿಗೆ ಶಾಕ್ – ಎಸ್‌ಎಸ್‌ಎಲ್‌ಸಿ ಪರಿಕ್ಷೆಗೆ ಸಮವಸ್ತ್ರ ಕಡ್ಡಾಯ

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಬೇಕು ಎಂದು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ.

    ORDER

    ORDER 02

    ಮಾರ್ಚ್ 28ರಿಂದ ಎಪ್ರಿಲ್ 11ರ ವರೆಗೆ ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರ ಧರಿಸಿ ಕೇಂದ್ರಕ್ಕೆ ಬರಬೇಕು ಎಂದು ಅಧೀಕೃತ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ – ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ

    HIJAB 2

    ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿದ ಸಮವಸ್ತ್ರ ಮಾತ್ರ ವಿದ್ಯಾರ್ಥಿಗಳು ಧರಿಸಿ ಬರಬೇಕು. ಹಾಗೆಯೇ ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಿ ಬರಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್‌ ಬೆಂಬಲಿಸಿದ ಹೆಚ್‌ಡಿಕೆ

    ತನ್ನ ಸುತ್ತೋಲೆಯಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಹೈಕೋರ್ಟ್ ತೀರ್ಪಿನಂತೆ ಈ ಆದೇಶವನ್ನು ಪ್ರಕಟಿಸಲಾಗಿದೆ. 80 ಸಾವಿರಕ್ಕೂ ಹೆಚ್ಚು ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. 600-700 ವಿದ್ಯಾರ್ಥಿನಿಯರು ಇಲ್ಲಿಯವರೆಗೆ ಗೈರಾಗಿದ್ದಾರೆ. ಹೀಗಾಗಿ ಸಮವಸ್ತ್ರದಲ್ಲೇ ಪರೀಕ್ಷೆ ಬರೆಯಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.