Tag: Nagendra Prasad

  • ‘ಪಂಚೇಂದ್ರಿಯಂ’ ಟೀಸರ್ ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

    ‘ಪಂಚೇಂದ್ರಿಯಂ’ ಟೀಸರ್ ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

    ರಾಜ್ ಪ್ರಿಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್ ಸೋಮಶೇಖರ್ ನಿರ್ಮಿಸಿರುವ ಹಾಗೂ ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ‘ಪಂಚೇಂದ್ರಿಯಂ’ (Panchendriyam) ಚಿತ್ರದ ಹಾಡುಗಳು ಹಾಗೂ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಕವಿರತ್ನ ವಿ.ನಾಗೇಂದ್ರ ಪ್ರಸಾದ್ (Nagendra Prasad) ಟೀಸರ್ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರಡ ಕುರಿತು ಮಾತನಾಡಿದರು.

    ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶ ಇವು ಮಾನವನ ದೇಹವನ್ನು ರೂಪಿಸುವ ಐದು ಅಂಗಗಳು. ಈ ‘ಪಂಚೇಂದ್ರಿಯ’ಗಳನ್ನು ದೇವರು ಸದ್ಬಳಿಕೆಗಾಗಿ ನೀಡಿದ್ದಾನೆ. ನಾವು ಅದನ್ನು  ದುರ್ಬಳಿಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೆ ಈ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದಲ್ಲಿ ಆರು ಹಾಡುಗಳಿದೆ. ನಾನೇ ಸಂಗೀತ ನೀಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ಹೆಚ್ ಸೋಮಶೇಖರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಫ್ಜಲ್ ಅವರು ಈ ಚಿತ್ರದ ದ್ವಿತೀಯ ನಾಯಕನಾಗಿ ಅಭಿನಯಿಸಿರುವುದಲ್ಲದೆ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ. ವಿನಯ್ ಸೂರ್ಯ ಈ ಚಿತ್ರದ ನಾಯಕರಾಗಿ ಹಾಗೂ ವಿದ್ಯಾಶ್ರೀ ಮತ್ತು ರಾಘವಿ ನಾಯಕಿಯರಾಗಿ ನಟಿಸಿದ್ದಾರೆ. ದೇವರಾಯನದುರ್ಗ, ದಾಬಸ್ ಪೇಟೆ ಮುಂತಾದ ಕಡೆ ಚಿತ್ರೀಕರಣವಾಗಿದೆ. ಅಂದುಕೊಂಡ ಹಾಗೆ ಆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ತಿಳಿಸಿದರು.

    ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹೆಚ್ ಸೋಮಶೇಖರ್ . ಈ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ಕಾರ್ಯಕಾರಿ ನಿರ್ಮಾಪಕನಾಗಿಯೂ ಕೆಲಸ ಮಾಡಿರುವುದಾಗಿ ಅಫ್ಜಲ್ ಹೇಳಿದರು.

    ಜಕ್ಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ಚಿತ್ರದಲ್ಲಿ ಬಾಲನಟನಾಗಿ ಅಭಿಯಿಸಿದ್ದ ನಾನು, ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಎಂದರು ವಿನಯ್ ಸೂರ್ಯ (Vinay Surya). ಚಿತ್ರದಲ್ಲಿ ಅಭಿನಯಿಸಿರುವ ಯತಿರಾಜ್, ವಿಕ್ಟರಿ ವಾಸು, ಗಣೇಶ್ ರಾವ್ ಹಾಗೂ ಪವನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಿರಿಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ‘ಸೂಟ್’ ಮೂಲಕ ಸಿನಿಮಾ ಕಥೆ ಹೇಳಲಿದ್ದಾರೆ ನಿರ್ದೇಶಕ ಭಗತ್ ರಾಜ್

    ‘ಸೂಟ್’ ಮೂಲಕ ಸಿನಿಮಾ ಕಥೆ ಹೇಳಲಿದ್ದಾರೆ ನಿರ್ದೇಶಕ ಭಗತ್ ರಾಜ್

    ದುವೆ ಮುಂತಾದ ಸಮಾರಂಭಗಳಲ್ಲಿ ‘ಸೂಟ್’ ಧರಿಸಿದರೆ ಒಂದು ಕಳೆ. ಅಂತಹ ಸೂಟ್ (The Suite) ಬಗ್ಗೆ ಸಿನಿಮಾವೊಂದು ಬರುತ್ತಿದ್ದು, ಬಿಡುಗಡೆಗೂ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಸೂಟ್ ನ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಮಾಲತಿ ಗೌಡ ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ರಾಮಸ್ವಾಮಿ ಈ ಚಿತ್ರದ ನಿರ್ಮಾಪಕರು.

    ಮೊದಲು ಮಾತನಾಡಿದ್ದ ನಿರ್ದೇಶಕ ಭಗತ್ ರಾಜ್ (Bhagat Raj), ಸೂಟ್ ಗೆ ಅದರದೇ ಆದ ವಿಶೇಷತೆ ಇದೆ. ಎಂದುಗೂ ಸೂಟ್ ಹಾಕದವರು, ಮದುವೆ ಆರತಕ್ಷತೆಯಲ್ಲಾದರೂ ಸೂಟ್ ಧರಿಸುವುದು ವಾಡಿಕೆ. ಅಂತಹ ಸೂಟ್ ನಮ್ಮ ಚಿತ್ರದ ಕಥಾನಾಯಕ. ಈ ಚಿತ್ರದಲ್ಲಿ ಸೂಟ್ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಸೂಟ್ ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಸೂಟ್ ಬಗ್ಗೆ ಅನೇಕ ಗಣ್ಯರು ತಮಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರ ಚಿತ್ರ ಮೂರು ಕಿರಣಗಳಿಂದ ಹೆಚ್ಚು ಪ್ರಕಾಶಿಸುತ್ತಿದೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್ ಸುಮಧುರ ಹಾಡುಗಳನ್ನು ನೀಡಿದ್ದಾರೆ.  ಛಾಯಾಗ್ರಾಹಕ ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಸೂಟ್ ನ ಅಂದವನೆ ಮತ್ತಷ್ಟು ಹೆಚ್ಚುಸಿದೆ‌.  ರೇಖಾಚಿತ್ರಗಳ ಮೂಲಕ ಕಿರಣ್ ನಮ್ಮ ಚಿತ್ರಕ್ಕೆ ಜೀವ ತುಂಬಿದ್ದಾರೆ. ಇವರೆ ಆ ಮೂರು ಕಿರಣಗಳು.  ಚಿತ್ರದಲ್ಲಿ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ.

    ಸಾಹಿತಿ ವಿ.ನಾಗೇಂದ್ರ ಪ್ರಸಾದ್  (Nagendra Prasad)ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ತಿಳಿಸಿ, ಸೂಟ್ ಬಗ್ಗೆ ತಾವು ಬರೆದಿರುವ ಕಾವ್ಯವನ್ನು ವಾಚಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪ್ರಣಯ ಮೂರ್ತಿ, ದೀಪ್ತಿ ಕಾಪ್ಸೆ, ಭೀಷ್ಮ ರಾಮಯ್ಯ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

    ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಹಾಜರಾಗದ ಸಂಗೀತ ನಿರ್ದೇಶಕ ಕಿರಣ್ ಶಂಕರ್ ಹಾಡುಗಳ ಹಾಗೂ ಹಾಡಿದವರ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದರು. ಛಾಯಾಗ್ರಾಹಕ ಕಿರಣ್ ಹಂಪಾಪುರ ಸೇರಿದಂತೆ ಅನೇಕ ತಂತ್ರಜ್ಞರು, ಕಲಾವಿದರು ಹಾಗೂ ಅತಿಥಿಗಳು ಆಡಿಯೋ ರಿಲೀಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದ ಸೂಟ್ ಚಿತ್ರಕ್ಕೆ ಅತಿಥಿದೇವೋ ಭವ ಎಂಬ ಅಡಿಬರಹವಿದೆ.

  • ತಮ್ಮ ಚಿತ್ರಕ್ಕೆ ‘ಚಟ್ಟ’ ಎಂದು ಹೆಸರಿಟ್ಟ ನಿರ್ದೇಶಕ: ಇದು ಬ್ಯಾರೇನ ಐತಿ

    ತಮ್ಮ ಚಿತ್ರಕ್ಕೆ ‘ಚಟ್ಟ’ ಎಂದು ಹೆಸರಿಟ್ಟ ನಿರ್ದೇಶಕ: ಇದು ಬ್ಯಾರೇನ ಐತಿ

    ಶೀರ್ಷಿಕೆಯೇ ಸಿನಿಮಾ ಪ್ರೇಕ್ಷಕರಿಗೆ ಮೊದಲ ಆಮಂತ್ರಣ. ಸಿನಿಮಾ ಮೇಕರ್‌ಗಳು ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ನಿರ್ಮಾಪಕರದ್ದು. ಈ ನಡುವೆ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ ‘ಚಟ್ಟ’ ಸಿನಿಮಾ.

    ‘ಚಟ್ಟ’ (Chatta) ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗ್ತಿರುವುದು ನಿರ್ದೇಶಕ ಭಾನು ಪ್ರಕಾಶ್ (Bhanu Prakash). ಕೋ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ‘ಕೇರ್ ಆಫ್ ಫುಟ್ಬಾತ್’ ಸೇರಿದಂತೆ ಒಂದಷ್ಟು ಕನ್ನಡ ಹಾಗೂ ತೆಲುಗು ಇಂಡಸ್ಟ್ರೀಯಲ್ಲಿಯೂ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡಿರುವ ಭಾನು ಪ್ರಕಾಶ್, ಈ ಭರವಸೆಯೊಂದಿಗೆ ಚಟ್ಟ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

    ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ ಹಾಕಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಾಡಲಾಗಿದೆ. ಕವಿರತ್ನ ವಿ.ನಾಗೇಂದ್ರ ಪ್ರಸಾದ್ (Nagendra Prasad), ನಿರ್ದೇಶಕ ಜೋಸೈಮನ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಭಾನು ಪ್ರಕಾಶ್ ಹೊಸ ಕನಸಿಗೆ ಜೊತೆಯಾದರು. ಈ ವೇಳೆ ನಿರ್ದೇಶಕ ಭಾನು ಪ್ರಕಾಶ್ ಮಾತನಾಡಿ, ಚಟ್ಟ ಎಂದರೆ ನಾವು ಅಂದುಕೊಂಡಂತೆ ಎತ್ತಿಕೊಂಡು ಹೋಗುವುದಲ್ಲ. ಲೋಕದಲ್ಲಿಯೂ ಪುಸ್ತಕ. ಆ ಪುಸ್ತಕದ ಕೊನೆಯ ಪೇಜ್ ಸಿನಿಮಾ. ನನಗೆ ಆಶೀರ್ವಾದ ಮಾಡಲು ಬಂದವರಿಗೆ ಧನ್ಯವಾದ. ಟೆಕ್ನಿಷಿಯಲ್, ಕಲಾವಿದರು ಒಬ್ಬೊಬ್ಬರಿಗೆ ಪರಿಚಯಿಸುತ್ತೀವೆ. ಚಟ್ಟ ಪ್ಯಾನ್ ಇಂಡಿಯಾ ಸಿನಿಮಾ ಎಂದರು.

    ಕೆಎಂ ಕ್ರಿಯೇಷನ್ಸ್ ನಿರ್ಮಾಣದ ಚಟ್ಟ ಸಿನಿಮಾವನ್ನು ಕುಮಾರ್ ಎಂ, ಅಣಜಿ ರಮೇಶ್, ಡಿ.ಒಬಲ್ ರೆಡ್ಡಿ, ಕುಮಾರ್ ಎಂ ನಿರ್ಮಾಣ ಮಾಡುತ್ತಿದ್ದಾರೆ. ಕೆ ರಾಮ್ ರಾಮ್ ಮೂರ್ತಿ, ವಾಸುದೇವನ್, ಪ್ರಕಾಶ್ ಗೌಡ ಕೋ ಪ್ರೊಡ್ಯೂಸರ್ ಆಗಿ, ಮುರಳಿ ಕೃಷ್ಣ ಸಿ.ಎಚ್.ಉತನೂರೂಪ್ಪ ಎಕ್ಸಿ ಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಿಸ್ಟ್ರೀ ಡ್ರಾಮಾ ಕಥಾಹಂದರ ಹೊಂದಿರುವ ಚಟ್ಟ ಸಿನಿಮಾ ಫೆಬ್ರವರಿಯಿಂದ ಶೂಟಿಂಗ್ ಚಾಲುವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ತಾರಾಬಗಳ ಹಾಗೂ ತಾಂತ್ರಿಕ ವರ್ಗವನ್ನು ರಿವೀಲ್ ಮಾಡಲಿದೆ.

  • ‘ಕರಡಿಗುಡ್ಡ’ ಕನ್ನಡ ಚಲನಚಿತ್ರದ ಟೈಟಲ್ ಅನಾವರಣ

    ‘ಕರಡಿಗುಡ್ಡ’ ಕನ್ನಡ ಚಲನಚಿತ್ರದ ಟೈಟಲ್ ಅನಾವರಣ

    ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಪಂಚಮುಖಿ ವಿನಾಯಕ ದೇವಸ್ಥಾನದಲ್ಲಿ ವಿ ನಾಗೇಂದ್ರ ಪ್ರಸಾದ್ (Nagendra Prasad) ‘ಕರಡಿಗುಡ್ಡ’ (Karadigudda) ಸಿನಿಮಾದ ಶೀರ್ಷಿಕೆ (Title) ಮತ್ತು ಕಾನ್ಸೆಪ್ಟ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮುಖೇನ ನಿರ್ಮಾಪಕರಾದ ವೀಣಾ ವೆಂಕಟೇಶ್. ವಿ , ಅಂಬಿಕಾ ಚಂದ್ರಪ್ಪ ಅವರಿಗೆ ಹಾಗೂ ನಿರ್ದೇಶಕರಾದ ಅಮಿತ್ ರಾವ್ ಅವರಿಗೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು.

    ಈಗಾಗಲೇ ಹವಾಲಾ ಹಾಗೂ ಅಂತರಾಷ್ಟ್ರೀಯ  ಚಲನಚಿತ್ರೋತ್ಸವಗಳಲ್ಲಿ  72 ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ಯಾದ್ಭಾವಂ ತದ್ಭವತಿ’ ಚಿತ್ರ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿರುವ  ಅಮಿತ್ ರಾವ್ (Amit Rao)  ಅವರ ಮೂರನೇ ನಿರ್ದೇಶನದ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಜಯಂತ್ ಚಂದ್ರಪ್ಪ ಅವರ ಕಥೆ ಇದ್ದು, ಮಕ್ಕಳ ಸಾಹಸಮಯ ಚಿತ್ರ ಇದಾಗಿರುತ್ತದೆ.

     

    ವಿ ನಾಗೇಂದ್ರ ಪ್ರಸಾದ್ ಕೂಡ ಈ ಚಿತ್ರದಲ್ಲಿ ಸಾಹಿತ್ಯದ ಜೊತೆ ತಂಡದಲ್ಲಿ ಒಬ್ಬರಾಗಿ ಜೊತೆ ಸಾಗುತ್ತಿದ್ದಾರೆ. ಅದಲ್ಲದೆ ತಂತ್ರಜ್ಞರಾಗಿ – ಛಾಯಾಗ್ರಹಕರಾಗಿ ವಿ. ಪವನ್ ಕುಮಾರ್, ಸಂಗೀತ ನಿರ್ದೇಶಕ ಕಿಶೋರ್ ಎಕ್ಸ, ಪ್ರೊಡಕ್ಷನ್ ಡಿಸೈನರ್ ಆಗಿ ನಿರ್ದೇಶಕ ನಟ ಮಂಜುನಾಥ್ ದೈವಜ್ಞ ಹಾಗೂ ತಂತ್ರಜ್ಞರ ಜೊತೆಗೆ ಹೊಸ ಪ್ರತಿಭೆಯಾಗಿ ವಿಶೇಷ ವೆಂಕಟೇಶ್, ವೆಂಕಟೇಶ್ ಗೌಡ, ನಾಗೇಂದ್ರ ಅರಸ್, ಭವಾನಿಪ್ರಕಾಶ್, ಮತ್ತು ಪುಟಾಣಿ ಮಕ್ಕಳು ಕಲಾವಿದರಾಗಿ  ಇನ್ನಿತರೆ ಕಲಾವಿದರೊಂದಿಗೆ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ತಯಾರಿಯಲ್ಲಿದೆ ಚಿತ್ರತಂಡ. ತಲಕಾಡಿನ ಸುತ್ತಮುತ್ತಲ್ಲಲ್ಲಿ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರೀಕ್ಷೆ ಟೈಮ್ ನಲ್ಲಿ ‘ಜಸ್ಟ್ ಪಾಸ್’ ಅಂತ ಹಾಡಿದ ಶರಣ್

    ಪರೀಕ್ಷೆ ಟೈಮ್ ನಲ್ಲಿ ‘ಜಸ್ಟ್ ಪಾಸ್’ ಅಂತ ಹಾಡಿದ ಶರಣ್

    ಹಾಸ್ಯ ಕಲಾವಿದರಾಗಿ, ನಾಯಕರಾಗಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶರಣ್ (Sharan), ಹಲವಾರು ಸಿನಿಮಾಗಳಿಗೆ ಗಾಯಕರಾಗಿಯೂ ಕೇಳುಗರ ಗಮನ ಸೆಳೆದಿದ್ದಾರೆ. ಸದ್ಯ ಅವರು ಮತ್ತೊಂದು ಚಿತ್ರಕ್ಕೂ ಹಾಡಿದ್ದು, ಪರೀಕ್ಷೆ ವೇಳೆಯಲ್ಲಿ ‘ಜಸ್ಟ್ ಪಾಸ್’ (Just Pass) ಎನ್ನುತ್ತಾ ಮತ್ತೆ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದಾರೆ.

    ಕೆ.ಎಂ.ರಘು (KM Raghu) ನಿರ್ದೇಶನದ ‘ಜಸ್ಟ್ ಪಾಸ್’ ಚಿತ್ರಕ್ಕಾಗಿ ವಿ.ನಾಗೇಂದ್ರ ಪ್ರಸಾದ್ (Nagendra Prasad) ಬರೆದಿರುವ ‘ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು’ ಎಂಬ ಹಾಡನ್ನು ಶರಣ್ ಹಾಡಿದ್ದು,  ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಸಾಧುಕೋಕಿಲ ಅಭಿನಯಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ

    ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್  ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಎಂ.ರಘು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.     ಶ್ರೀ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿ ಪ್ರಣತಿ ಈ ಚಿತ್ರದ ನಾಯಕಿ. ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ, ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರುವ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ‘ಪರಿಮಳಾ ಡಿಸೋಜಾ’ ಚಿತ್ರದ 2ನೇ ಹಾಡು ರಿಲೀಸ್ ಮಾಡಿದ ಜಿ.ಟಿ ದೇವೇಗೌಡ

    ‘ಪರಿಮಳಾ ಡಿಸೋಜಾ’ ಚಿತ್ರದ 2ನೇ ಹಾಡು ರಿಲೀಸ್ ಮಾಡಿದ ಜಿ.ಟಿ ದೇವೇಗೌಡ

    ‘ಪರಿಮಳಾ ಡಿಸೋಜಾ’ (Parima D’Souza) ಚಿತ್ರದ ಕಂದ ಕಂದ  ಎಂಬ ಹಾಡು (Song) ಸಾಂಸ್ಕೃತಿಕ ನಗರಿ ಮೈಸೂರಿನ ಡಿ ಆರ್ ಸಿ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ವಿ.ನಾಗೇಂದ್ರಪ್ರಾಸಾದ್ (Nagendra Prasad) ಬರೆದಿರುವ ಈ ಹಾಡನ್ನು ಅನುರಾಧಾ ಭಟ್ (Anuradha Bhatt) ಸುಶ್ರಾವ್ಯವಾಗಿ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ.‌ ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ವಿಜೃಂಭಣೆಯಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಗಣ್ಯ ವ್ಯಕ್ತಿಗಳಿಗೆ  ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಯನ್ನು  ಉಡುಗೊರೆಯಾಗಿ ನೀಡಲಾಯಿತು.

    ಚಾಮುಂಡೇಶ್ವರಿ ಕ್ಷೇತ್ರದ ಮಾನ್ಯ ಶಾಸಕರಾದ ಜಿ.ಟಿ ದೇವೇಗೌಡ  ಹಾಗೂ ಮೈಸೂರಿನ ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಬಿ.ಎನ್ ಗಿರೀಶ್ ಖ್ಯಾತ ಕನ್ನಡ ಚಲನಚಿತ್ರ ತಾರೆ ಭವ್ಯ ಮುಂತಾದ ಗಣ್ಯರು ಸೇರಿ ಈ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿಂದೆ ಮೈಸೂರಿನ ಉಸ್ತುವಾರಿ ಮಂತ್ರಿಯಾಗಿದ್ದಾಗ, ಪುನೀತ್ ರಾಜ್‌ಕುಮಾರ್ ಮೈಸೂರಿನಲ್ಲಿ ಆಫೀಸ್ ಮಾಡಲು ನನ್ನನು ಭೇಟಿ ಆಗಿದ್ದರು. ಆಗ ಎಷ್ಟು ಹೇಳಿದರು ನಮ್ಮ ಮುಂದೆ ಕುಳಿತುಕೊಳ್ಳದೆ, ನಿಂತುಕೊಂಡೆ ಮಾತನಾಡಿದ್ದು, ಪುನೀತ್ ಅವರು ಹಿರಿಯರಿಗೆ ಕೊಡುತ್ತಿದ್ದ ಗೌರವಕ್ಕೆ ಸಾಕ್ಷಿ ಎಂದು

    ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಪುನೀತ್ ರಾಜಕುಮಾರ್  ಅವರನ್ನು ನೆನಪಿಸಿಕೊಂಡರು.  ‘ಪರಿಮಳಾ ಡಿಸೋಜಾ’ ಚಿತ್ರಕ್ಕೂ ಶಾಸಕರು ಶುಭ ಕೋರಿದರು. ನಟಿ ಭವ್ಯ ಅವರು ಮಾತನಾಡಿ,  ಪುನೀತ್ ರಾಜ್‌ಕುಮಾರ್ ಅವರ ಜೊತೆ ಅಭಿನಯಿಸಿದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ಆನಂತರ ‘ಪರಿಮಳಾ ಡಿಸೋಜಾ’ ಚಿತ್ರದ ತಮ್ಮ ಪಾತ್ರದ ಕುರಿತು ಮಾತನಾಡಿದರು.

    ಭವ್ಯ, ಶ್ರೀನಿವಾಸ್ ಪ್ರಭು, ಕೋಮಲ ಬನವಾಸೆ, ಪೂಜಾ ರಾಮಚಂದ್ರ, ಸುನೀಲ್ ಎ ಮೋಹಿತೆ, ವಿನೋದ್ ಶೇಷಾದ್ರಿ, ಶಿವಕುಮಾರ್ ಆರಾಧ್ಯ, ಮೀಸೆ ಆಂಜನಪ್ಪ, ಜಯರಾಮಣ್ಣ, ಜ್ಯೋತಿ ಮರೂರು, ಉಗ್ರಂ ರೆಡ್ಡಿ, ರೋಹಿಣಿ ಜಗನ್ನಾಥ್, ಚಂದನ ಶ್ರೀನಿವಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಂದ ಲೆಕ್ಕ ಕೇಳಿದ ಆಡಳಿತಾಧಿಕಾರಿ

    ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಂದ ಲೆಕ್ಕ ಕೇಳಿದ ಆಡಳಿತಾಧಿಕಾರಿ

    ರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಲೆಕ್ಕಪತ್ರ ಯಾವುದೂ ಸರಿ ಇಲ್ಲ ಎಂದು ಹಲವು ವರ್ಷಗಳಿಂದ ಅದರ ಸದಸ್ಯರೇ ಮಾತನಾಡುತ್ತಿದ್ದರು. ಈ ಸಂಬಂಧ ಅನೇಕ ಬಾರಿ ಗಲಾಟೆಗಳು ನಡೆದಿವೆ. ಅಧಿಕಾರದ ಚುಕ್ಕಾಣೆ ಹಿಡಿಯಲು ಹೈಡ್ರಾಮಾ ಕೂಡ ನಡೆದಿತ್ತು. ಇದೀಗ ಇಬ್ಬರು ನಿರ್ದೇಶಕರಿಗೆ ಲೆಕ್ಕ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ ಆಡಳಿತಾಧಿಕಾರಿ. ಈ ಕುರಿತು ಅವರು ಹಿಂದಿನ ಅಧ್ಯಕ್ಷರುಗಳಾದ ಡಾ.ನಾಗೇಂದ್ರ ಪ್ರಸಾದ್ ಹಾಗೂ ಟೇಸಿ ವೆಂಕಟೇಶ್ ಅವರಿಗೆ ತಿಳುವಳಿಕೆ ಪತ್ರ ಕಳುಹಿಸಿದ್ದಾರೆ.

    ಆಡಳಿತಾಧಿಕಾರಿ ಎಸ್.ಜಿ.ಮಂಜುನಾಥ್ ಸಿಂಗ್ ಕಳುಹಿಸಿರುವ ಪತ್ರದಲ್ಲಿ, “ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಡ್ರಾ ಮಾಡಿರುವಂತಹ ಹಣದ ಖರ್ಚಿನ ವಿವರ ನೀಡುವ ಬಗ್ಗೆ ಟೇಸಿ ವೆಂಕಟೇಶ್ ಆದ ನೀವು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ನಿಮ್ಮ ಅಧಿಕಾರ ಅವಧಿಯಲ್ಲಿ ಬ್ಯಾಂಕಿನಿಂದ ವಿವಿಧ ದಿನಾಂಕಗಳಲ್ಲಿ ಹಣವನ್ನು ಡ್ರಾ ಮಾಡಿರುತ್ತೀರಿ. ಆದರೆ ದಾಖಲೆಗಳನ್ನು ಪರಿಶೀಲಿಸಿದ ನಿಮ್ಮ ಅವಧಿಯಲ್ಲಿ ಡ್ರಾ ಮಾಡಿದ ಹಣಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿ ನಡಾವಳಿ, ವೋಚರ್ಸ್, ನಗದು ಪುಸ್ತಕವನ್ನು ಈ ನೋಟಿಸ್ ನೀಡಿದ ಹತ್ತು ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಇಂದು ನೋಟಿಸ್ ಕಳುಹಿಸಲಾಗಿದೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಮಾಜಿ ಅಧ್ಯಕ್ಷರಾದ ವಿ. ನಾಗೇಂದ್ರ ಪ್ರಸಾದ್ ಅವರಿಗೂ ಇದೇ ಮಾದರಿಯ ಪತ್ರವನ್ನು ಕಳುಹಿಸಲಾಗಿದ್ದು, ಅವರಿಗೂ ನೋಟಿಸ್ ಕಳುಹಿಸಿದ ಹತ್ತು ದಿನಗಳೊಳಗೆ ಡ್ರಾ ಮಾಡಿದ ಹಣಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿ ನಡಾವಳಿ, ವೋಚರ್ಸ್, ನಗದು ಪುಸ್ತಕವನ್ನು ಈ ನೋಟಿಸ್ ನೀಡಿದ ಹತ್ತು ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ನೋಟಿಸ್ ಕಳುಹಿಸಿದ್ದಾರೆ.

    Live Tv

  • ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

    ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

    – ಕಥೆ ಕಟ್ಟಿ ಚಿನ್ನಾಭರಣ ತೊಗೊಂಡ್ಳು
    – ಸುಳ್ಳನ್ನ ಸ್ಪಷ್ಟತೆಯಿಂದ ಹೇಳೋದು ಆ ಮಹಿಳೆಯ ಕೆಲಸ

    ಬೆಂಗಳೂರು: ಅಂದು ನನಗೆ ನಂದಿನಿ ಹೆಸರಿನಲ್ಲಿ ಪರಿಚಯವಾಗಿದ್ದ ಮಹಿಳೆಯೇ ಇವತ್ತಿನ ಅರುಣಾ ಕುಮಾರಿ. ಹೀಗೆ ಸುಮ್ಮನಾದ್ರೆ ಈ ಮಹಿಳೆ ಮತ್ತೆ ಇನ್ನಷ್ಟು ಜನರದಲ್ಲಿ ಜೀವನದಲ್ಲಿ ಆಟ ಆಡುವ ಸಾಧ್ಯತೆಗಳಿವೆ. ಮುಂದೆ ಯಾರಿಗೂ ಮೋಸ ಆಗಬಾರದು ಎಂದು ಮಾಧ್ಯಮಗಳ ಮುಂದೆ ಬಂದಿದ್ದೇನೆ.

    ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಜೊತೆಯಲ್ಲಿ ನಾಗವರ್ಧನ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅರುಣಾ ಕುಮಾರಿ ಅಲಿಯಾಸ್ ನಂದಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ನಾಗೇಂದ್ರ ಪ್ರಸಾದ್ ಮತ್ತು ನನ್ನ ಗೆಳೆತನ ಕೊನೆಯಾಗಲು ಕಾರಣ ಈ ಮಹಿಳೆ. ಕಳೆದ ನಾಲ್ಕೈದು ವರ್ಷಗಳಿಂದ ನಾಗೇಂದ್ರ ಪ್ರಸಾದ್ ಜೊತೆ ಮಾತಾಡಿರಲಿಲ್ಲ. ನಿನ್ನೆಯಿಂದ ಸುದ್ದಿಗಳನ್ನು ನೋಡಿ, ನಮಗಾದ ಸ್ಥಿತಿ ಬೇರೆಯವರಿಗೆ ಬರೋದು ಬೇಡ. ಆ ಒಂದು ಕಾರಣಕ್ಕೆ ನಾಗೇಂದ್ರ ಅವರಿಗೆ ನಾನೇ ಫೋನ್ ಮಾಡಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದು ಹೇಳಿದರು.

    ನಾಗವರ್ಧನ್ ಹೇಳಿದ್ದೇನು?:
    2015 ಸೆಪ್ಟಂಬರ್ ವೇಳೆ ಫೇಸ್‍ಬುಕ್‍ನಲ್ಲಿ ನಂದಿತಾ ಹೆಸರಿನಲ್ಲಿ ಈ ಮಹಿಳೆಯ ಪರಿಚಯವಾಯ್ತು. ಸದ್ಯ ದರ್ಶನ್ ಪ್ರಕರಣದಲ್ಲಿ ನಂದಿತಾ ಹೆಸರು ಬದಲಾಗಿ ಅರುಣಾ ಕುಮಾರಿ ಆಗಿದೆ. ತಂದೆ ಡೈರಿಯಲ್ಲಿ ಕೆಲಸ ಮಾಡುತ್ತಿದ್ದು, ತೆಲಗು ರಿಮೇಕ್ ಚಿತ್ರ ಮಾಡುತ್ತಿದ್ದೇನೆ. ಆ ಚಿತ್ರಕ್ಕೆ ನಿಮ್ಮನ್ನೇ ಹೀರೋ ಮಾಡ್ತೀನಿ. ಕನಕಪುರ ಬಳಿಯಲ್ಲಿರುವ 10-12 ಕೋಟಿ ಕಾಮಗಾರಿಯ ಪ್ರೊಜೆಕ್ಟ್ ಕೊಡಿಸುತ್ತೇನೆ ಎಂದು ಹಲವು ಆಫರ್ ನೀಡಿ ನನ್ನ ಸ್ನೇಹ ಸಂಪಾದಿಸಿಕೊಂಡಳು. ಇದನ್ನೂ ಓದಿ: ಸೆಪ್ಟೆಂಬರ್ 11ಕ್ಕೆ NEET ಪರೀಕ್ಷೆ

    ಸ್ನೇಹ ಬೆಳೆಯುತ್ತಿದ್ದಂತೆ 6 ಲಕ್ಷ ರೂಪಾಯಿ ಸೇರಿದಂತೆ, ಚಿನ್ನಾಭರಣ ಪಡೆದುಕೊಂಡಳು. ಸುಳ್ಳನ್ನು ನಂಬುವಂತೆ ಸ್ಪಷ್ಟವಾಗಿ ಹೇಳೋದು ಈ ಮಹಿಳೆಯ ಕಲೆ. ನಂತರ ಹಂತ ಹಂತವಾಗಿ ನನ್ನ ಸ್ನೇಹಿತರನ್ನು ನನ್ನಿಂದ ದೂರ ಮಾಡಿದಳು. ಈಗ ಉಮಾಪತಿ ಮತ್ತು ದರ್ಶನ್ ಪ್ರಕರಣದಲ್ಲಿಯೂ ಸ್ನೇಹಿತರ ಮಧ್ಯೆಯೇ ಜಗಳ ಆಗುತ್ತಿದೆ. ನನ್ನ ಸ್ನೇಹಿತರು ಮಹಿಳೆಗೆ ಹಣ ನೀಡಿ ಮೋಸಕ್ಕೆ ಒಳಗಾಗಿದ್ದಾರೆ. ಈ ಸಂಬಂಧ 2015ರಲ್ಲಿಯೇ ಅರುಣಾ ಕುಮಾರಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ನಾಗವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್