Tag: nagchaitanya

  • ಸದ್ಗುರು ಮಾತಿಗೆ ಮಣಿದು, ಮಾಜಿಪತಿಯನ್ನೇ ಮದುವೆಯಾಗಲಿದ್ದಾರಾ ಸಮಂತಾ

    ಸದ್ಗುರು ಮಾತಿಗೆ ಮಣಿದು, ಮಾಜಿಪತಿಯನ್ನೇ ಮದುವೆಯಾಗಲಿದ್ದಾರಾ ಸಮಂತಾ

    ಟಾಲಿವುಡ್ ಬ್ಯೂಟಿ ಸಮಂತಾ (Samantha) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.  ಮಾಜಿ ಪತಿ ನಾಗಚೈತನ್ಯ (Nagachaitanya) ಅವರನ್ನೇ ಮತ್ತೆ ಮರು ಮದುವೆಯಾಲಿದ್ದಾರೆ. ಹಾಗಂತ ಟಿಟೌನ್ ಗಲ್ಲಿಯಲ್ಲಿ ಈ ಸುದ್ದಿ ಹರಿದಾಡುತ್ತಿದೆ.

    ದಕ್ಷಿಣದ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಸಮಂತಾ (Samantha) ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇಬ್ಬರು ತಮ್ಮ ತಮ್ಮ ವೃತ್ತಿ ಜೀವನದತ್ತ ಬ್ಯುಸಿಯಾಗಿದ್ದರು. ಈಗ ಮತ್ತೆ ಸಮಂತಾ ಮತ್ತು ನಾಗಚೈತನ್ಯ ಜೋಡಿ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಅದೆಷ್ಟೋ ಅಭಿಮಾನಿಗಳು ಆಶಿಸಿರುವುದುಂಟು. ಅದೀಗ ನಿಜವಾಗಲಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಇನ್ಮುಂದೆ ಅನಿರುದ್ಧ ಫೋಟೋನೂ ಇರಲ್ಲ

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ ಮತ್ತು ನಾಗ್ ನಾನೊಂದು ತೀರಾ, ನೀನೊಂದು ತೀರಾ ಅಂತಾ ದೂರ ದೂರ ಆಗಿದ್ದರು. ಕೆರಿಯರ್‌ನತ್ತ ಗಮನ ಕೊಡುತ್ತಾ ನೋವನ್ನ ನುಂಗಿ ಬದುಕುತ್ತಿದ್ದರು. ಹೀಗಿರುವಾಗ ಸಮಂತಾ ಇತ್ತೀಚೆಗೆ ಸದ್ಗುರು ಅವರನ್ನ ಭೇಟಿಯಾಗಿದ್ದಾರೆ. ಸದ್ಗುರು ಅವರ ಸಲಹೆಯಂತೆ ಮತ್ತೆ ನಾಗಚೈತನ್ಯ ಅವರನ್ನ ಮರು ಮದುವೆಯಾಗಲು ಸಮಂತಾ ಯೋಚಿಸಿದ್ದಾರಂತೆ. ಅಷ್ಟಕ್ಕೂ ಈ ಗುಡ್ ನ್ಯೂಸ್ ನಿಜಾನಾ ಎಂಬುದನ್ನ ಈ ಮಾಜಿ ದಂಪತಿ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಟಾಲಿವುಡ್‌ನ ಬೆಸ್ಟ್ ಕಪಲ್ ಎಂದೇ ಫೇಮಸ್ ಆಗಿದ್ದ ನಾಗಚೈತನ್ಯ(Nagachaitanya) ಮತ್ತು ಸಮಂತಾ (Samantha) ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇದೀಗ ಇಬ್ಬರು ತಮ್ಮ ವೃತ್ತಿ ಜೀವನದತ್ತ ಗಮನ ಕೊಡ್ತಿದ್ದಾರೆ. ಇದೀಗ ನಾಗ್ ಮತ್ತು ಸಮಂತಾ ಬಗ್ಗೆ ಮೊದಲ ಬಾರಿಗೆ ನಟ ನಾಗಾರ್ಜುನ್(Nagarjuna) ಮೌನ ಮುರಿದಿದ್ದಾರೆ.

    ನಾಗಚೈತನ್ಯ ಮತ್ತು ಸಮಂತಾ ತೆರೆಯ ಮೇಲೆ ಅಷ್ಟೇ ಅಲ್ಲ, ತೆರೆಯ ಹಿಂದೆ ಬೆಸ್ಟ್ ಜೋಡಿ ಎಂದೇ ಖ್ಯಾತಿ ಪಡೆದಿದ್ದರು. ಆದರೆ ವೈಯಕ್ತಿಕ ಬದುಕಿನಲ್ಲಿ ಅದೆನೆಲ್ಲಾ ಬೆಳವಣಿಗೆ ಆಯ್ತೋ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟರು. ನೆಚ್ಚಿನ ಜೋಡಿ ದೂರ ಆಗಿರೋದ್ದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದರು. ನಾಗಚೈತನ್ಯ, ಸಮಂತಾ ಬ್ರೇಕಪ್ ಬಗ್ಗೆ ನಟ ನಾಗಾರ್ಜುನ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ

    ಮಗ ನಾಗ್ ಈಗ ಖುಷಿಯಾಗಿದ್ದಾನೆ. ನಮಗೆ ಅಷ್ಟೇ ಸಾಕು, ಅವನ ಜೀವನದಲ್ಲಿ ಹೀಗೆಲ್ಲಾ ನಡೀಬಾರದಿತ್ತು. ಆದರೆ ಕೈ ಮೀರಿ ನಡೆದು ಹೋಗಿದೆ. ಸಮಂತಾಳನ್ನು ನಾವು ಮರೆತಿದ್ದೇವೆ. ನೀವು ಮರೆತು ಬಿಡಿ ಎಂದು ಅಭಿಮಾನಿಗಳಿಗೆ ನಟ ನಾಗಾರ್ಜುನ್ ಹೇಳಿದ್ದಾರೆ.

    ಇನ್ನು ಡಿವೋರ್ಸ್ ನಂತರ ಸಮಂತಾಗೆ ಮತ್ತಷ್ಟು ಬೇಡಿಕೆ ಜಾಸ್ತಿ ಆಗಿದೆ. ದಕ್ಷಿಣ ಭಾರತದ ಟಾಪ್ ಒನ್ ನಾಯಕಿಯಾಗಿ ಸಮಂತಾ (Samantha) ಮಿಂಚ್ತಿದ್ದಾರೆ. ತನ್ನ ಜೀವನದ ಎಲ್ಲಾ ಕಹಿ ಘಟನೆಗಳನ್ನ ಮರೆತು ವೃತ್ತಿರಂಗದಲ್ಲಿ ಯಶಸ್ವಿಯಾಗಿ ನಿಂತಿದ್ದಾರೆ.

    Live Tv
    [brid partner=56869869 player=32851 video=960834 autoplay=true]