Tag: Nagavardhan

  • ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

    ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್

    – ಕಥೆ ಕಟ್ಟಿ ಚಿನ್ನಾಭರಣ ತೊಗೊಂಡ್ಳು
    – ಸುಳ್ಳನ್ನ ಸ್ಪಷ್ಟತೆಯಿಂದ ಹೇಳೋದು ಆ ಮಹಿಳೆಯ ಕೆಲಸ

    ಬೆಂಗಳೂರು: ಅಂದು ನನಗೆ ನಂದಿನಿ ಹೆಸರಿನಲ್ಲಿ ಪರಿಚಯವಾಗಿದ್ದ ಮಹಿಳೆಯೇ ಇವತ್ತಿನ ಅರುಣಾ ಕುಮಾರಿ. ಹೀಗೆ ಸುಮ್ಮನಾದ್ರೆ ಈ ಮಹಿಳೆ ಮತ್ತೆ ಇನ್ನಷ್ಟು ಜನರದಲ್ಲಿ ಜೀವನದಲ್ಲಿ ಆಟ ಆಡುವ ಸಾಧ್ಯತೆಗಳಿವೆ. ಮುಂದೆ ಯಾರಿಗೂ ಮೋಸ ಆಗಬಾರದು ಎಂದು ಮಾಧ್ಯಮಗಳ ಮುಂದೆ ಬಂದಿದ್ದೇನೆ.

    ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಜೊತೆಯಲ್ಲಿ ನಾಗವರ್ಧನ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅರುಣಾ ಕುಮಾರಿ ಅಲಿಯಾಸ್ ನಂದಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ನಾಗೇಂದ್ರ ಪ್ರಸಾದ್ ಮತ್ತು ನನ್ನ ಗೆಳೆತನ ಕೊನೆಯಾಗಲು ಕಾರಣ ಈ ಮಹಿಳೆ. ಕಳೆದ ನಾಲ್ಕೈದು ವರ್ಷಗಳಿಂದ ನಾಗೇಂದ್ರ ಪ್ರಸಾದ್ ಜೊತೆ ಮಾತಾಡಿರಲಿಲ್ಲ. ನಿನ್ನೆಯಿಂದ ಸುದ್ದಿಗಳನ್ನು ನೋಡಿ, ನಮಗಾದ ಸ್ಥಿತಿ ಬೇರೆಯವರಿಗೆ ಬರೋದು ಬೇಡ. ಆ ಒಂದು ಕಾರಣಕ್ಕೆ ನಾಗೇಂದ್ರ ಅವರಿಗೆ ನಾನೇ ಫೋನ್ ಮಾಡಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದು ಹೇಳಿದರು.

    ನಾಗವರ್ಧನ್ ಹೇಳಿದ್ದೇನು?:
    2015 ಸೆಪ್ಟಂಬರ್ ವೇಳೆ ಫೇಸ್‍ಬುಕ್‍ನಲ್ಲಿ ನಂದಿತಾ ಹೆಸರಿನಲ್ಲಿ ಈ ಮಹಿಳೆಯ ಪರಿಚಯವಾಯ್ತು. ಸದ್ಯ ದರ್ಶನ್ ಪ್ರಕರಣದಲ್ಲಿ ನಂದಿತಾ ಹೆಸರು ಬದಲಾಗಿ ಅರುಣಾ ಕುಮಾರಿ ಆಗಿದೆ. ತಂದೆ ಡೈರಿಯಲ್ಲಿ ಕೆಲಸ ಮಾಡುತ್ತಿದ್ದು, ತೆಲಗು ರಿಮೇಕ್ ಚಿತ್ರ ಮಾಡುತ್ತಿದ್ದೇನೆ. ಆ ಚಿತ್ರಕ್ಕೆ ನಿಮ್ಮನ್ನೇ ಹೀರೋ ಮಾಡ್ತೀನಿ. ಕನಕಪುರ ಬಳಿಯಲ್ಲಿರುವ 10-12 ಕೋಟಿ ಕಾಮಗಾರಿಯ ಪ್ರೊಜೆಕ್ಟ್ ಕೊಡಿಸುತ್ತೇನೆ ಎಂದು ಹಲವು ಆಫರ್ ನೀಡಿ ನನ್ನ ಸ್ನೇಹ ಸಂಪಾದಿಸಿಕೊಂಡಳು. ಇದನ್ನೂ ಓದಿ: ಸೆಪ್ಟೆಂಬರ್ 11ಕ್ಕೆ NEET ಪರೀಕ್ಷೆ

    ಸ್ನೇಹ ಬೆಳೆಯುತ್ತಿದ್ದಂತೆ 6 ಲಕ್ಷ ರೂಪಾಯಿ ಸೇರಿದಂತೆ, ಚಿನ್ನಾಭರಣ ಪಡೆದುಕೊಂಡಳು. ಸುಳ್ಳನ್ನು ನಂಬುವಂತೆ ಸ್ಪಷ್ಟವಾಗಿ ಹೇಳೋದು ಈ ಮಹಿಳೆಯ ಕಲೆ. ನಂತರ ಹಂತ ಹಂತವಾಗಿ ನನ್ನ ಸ್ನೇಹಿತರನ್ನು ನನ್ನಿಂದ ದೂರ ಮಾಡಿದಳು. ಈಗ ಉಮಾಪತಿ ಮತ್ತು ದರ್ಶನ್ ಪ್ರಕರಣದಲ್ಲಿಯೂ ಸ್ನೇಹಿತರ ಮಧ್ಯೆಯೇ ಜಗಳ ಆಗುತ್ತಿದೆ. ನನ್ನ ಸ್ನೇಹಿತರು ಮಹಿಳೆಗೆ ಹಣ ನೀಡಿ ಮೋಸಕ್ಕೆ ಒಳಗಾಗಿದ್ದಾರೆ. ಈ ಸಂಬಂಧ 2015ರಲ್ಲಿಯೇ ಅರುಣಾ ಕುಮಾರಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ನಾಗವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್

  • ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್

    ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್

    – ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡುತ್ತೇನೆ ಎಂದು ಪರಿಚಯ
    -ಫೇಸ್‍ಬುಕ್‍ನಲ್ಲಿ ನಂದಿನಿ ಹೆಸರಿನ ಮೂಲಕವಾಗಿ ಮಹಿಳೆ ಪರಿಚಯ

    ಬೆಂಗಳೂರು: 25 ಕೋಟಿ ಹಗರಣದಲ್ಲಿ ಸಿಲುಕಿಕೊಂಡಿರುವ ಮಹಿಳೆ ಅರುಣಾ ಕುಮಾರಿ ವಂಚಕಿ. ಆಕೆಯಿಂದ ಈ ಹಿಂದೆ ಮೋಸ ಹೋಗಿದ್ದೆ ಎಂದು ಉದ್ಯಮಿ ನಾಗವರ್ಧನ್ ಹೇಳಿದ್ದಾರೆ.

    ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಉಮಾಪತಿಗೆ ಮಹಿಳೆ ಫ್ರಾಡ್ ಮಾಡಿದ್ದಾರೆ. ಈ ಮಹಿಳೆ ತುಂಬಾ ಫ್ರಾಡ್. 2015 ಸೆಪ್ಟಂಬರ್‍ನಲ್ಲಿ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದರು. ನಮಗೆ ಮೊದಲು ನಂದಿತಾ ಎನ್ನುವ ಹೆಸರಿನ ಮೂಲಕವಾಗಿ ಪರಿಚಯವಾಗಿದ್ದಳು. ಆದರೆ ದರ್ಶನ್ ಸರ್ ಪ್ರಕರಣದಲ್ಲಿ, ಹೆಸರು ಬದಲಾವಣೆಯಾಗಿದೆ. ಸಿನಿಮಾದಲ್ಲಿ ಆಫರ್ ಕೊಡುತ್ತೇನೆ, ತಂದೆ ನಂದಿನಿ ಡೈರಿಯಲ್ಲಿ ಕೆಲಸ ಮಾಡ್ತಾರೆ ಎಂದು ಮಹಿಳೆ ನನ್ನ ಬಳಿ ಹೇಳಿಕೊಂಡಿದ್ದರು ಎಂದು ತಿಳಿಸಿದರು.

    ಸಿನಿಮಾನಲ್ಲಿ ಚಾನ್ಸ್ ಕೊಡಿಸ್ತೀನಿ ಅಂತಾ ಆಫರ್ ಕೊಟ್ಟಿದ್ದರು. ನಂತರ ನಿಮ್ಮನ್ನೇ ಹೀರೋ ಮಾಡುತ್ತೇನೆ ಎಂದು ಹೇಳಿದ್ದಳು. ನಂತರ ಕನಕಪುರ ರಸ್ತೆಯಲ್ಲಿ ಪ್ರಾಪರ್ಟಿ ಇದೆ. 10-12 ಕೋಟಿ ಕನ್‍ಸ್ಟ್ರಕ್ಷನ್ ಪ್ರಾಜೆಕ್ಟ್ ಕೊಡಿಸ್ತೇನೆ ಎಂದು ಹೇಳಿದ್ದರು. ಆಮೇಲೆ ಕನ್‍ಸ್ಟ್ರಕ್ಷನ್ ತಂದ್ರು, ನಮ್ಮಕ್ಕನಿಂದ ಥ್ರೆಟ್ ಇದೆ. ತೆಲುಗು ಫಿಲಂ ರಿಮೇಕ್ ಮಾಡುತ್ತೇನೆ ಅಂತ ಹೇಳಿದ್ದಳು. ನನ್ನ ಜೊತೆ ಮೊದಲು ಫ್ರೆಂಡ್ ಶಿಪ್ ಬೆಳೆಸಿದಳು. ನಂತರ ಸಿನೆಮಾ ಆಫರ್ ಕೊಟ್ಟು 6 ಲಕ್ಷ ವಂಚನೆ ಮಾಡಿದ್ದಾಳೆ. ನನ್ನ ಹತ್ರ ಇರುವ ಚಿನ್ನವನ್ನ ಪಡೆದಿದ್ದಳು. ಸ್ಯಾಟ್ ಲೈಟ್ ಥ್ರೂ ಮೊಬೈಲ್ ವೈರಸ್ ಬರುತ್ತದೆ ಅಂತ ಕಥೆ ಕಟ್ಟಿ ನನ್ನ ಬಳಿ ಚಿನ್ನ ಕಸಿದುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

    ಅರುಣಾಕುಮಾರಿ ಸ್ಪಷ್ಟತೆಯಿಂದ, ನೇರವಾಗಿ ಮಾತನಾಡೋದ್ರಿಂದ ಮೊದಲು ಅನುಮಾನ ಬರಲಿಲ್ಲ. ನನ್ನ ಸ್ನೇಹಿತರ ಕಡೆಯಿಂದಲೂ ಆರ್ಥಿಕ ಸಹಾಯ ಮಾಡಿದ್ದೇನು. ನಮ್ ಸ್ನೇಹಿತರ ಜೊತೆ 1 ಲಕ್ಷ ಹಣ ಕೊಡಿಸಿದ್ದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ಅರುಣಾಕುಮಾರಿ ಮೇಲೆ ದೂರು ನೀಡಿದ್ದೇವೆ ಎಂದರು.

    ಅರುಣಾಕುಮಾರಿಯಿಂದ ನನ್ನ ಸ್ನೇಹಿತರು ಕಟ್‍ಡೌನ್ ಆದರು. ಪರಿಚಯದ ತದನಂತ್ರ ನನ್ನ ಎಲ್ಲಾ ಸ್ನೇಹಿತರನ್ನ ಕಟ್ ಡೌನ್ ಮಾಡೋಕೆ ಶುರು ಮಾಡಿದರು. ಪರಿಚಯ ಆಗುತ್ತಿದ್ದಂತೆ, ಫ್ಯಾಮಿಲಿ ಸ್ನೇಹಿತರ ಬಗ್ಗೆ ತಿಳ್ಕೊಳ್ತಾಳೆ ಇವತ್ತು ದರ್ಶನ್ ಉಮಾಪತಿಯವರ ವಿಚಾರದಲ್ಲೂ ಇದೇ ಆಗುತ್ತಿದೆ. ನಾಗೇಂದ್ರ ಪ್ರಸಾದ್ ಮತ್ತು ನಾನು ಮಾತು ಬಿಡೋಕೆ ಅವಳೇ ಕಾರಣಳಾಗಿದ್ದಾಳೆ ಎಂದು ಆರೋಪ ಮಾಡಿದರು.