Tag: Nagathan

  • ಮನೆಯ ವಸ್ತುಗಳನ್ನು ಮಾರಿ ಕುಡಿದು ಮಜಾ ಮಾಡ್ತಿದ್ದ ಮಗನನ್ನು ಕೊಂದ ತಂದೆ!

    ಮನೆಯ ವಸ್ತುಗಳನ್ನು ಮಾರಿ ಕುಡಿದು ಮಜಾ ಮಾಡ್ತಿದ್ದ ಮಗನನ್ನು ಕೊಂದ ತಂದೆ!

    ವಿಜಯಪುರ: ಮನೆಯ ವಸ್ತುಗಳನ್ನು ಮಾರಾಟ ಮಾಡಿ ಕಡಿದು ಮಜಾ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆ ಮಾಡಿದ ಘಟನೆ ನಾಗಠಾಣದಲ್ಲಿ (Nagathan) ನಡೆದಿದೆ.

    ಮುತ್ತಪ್ಪ ಮಸಳಿ (38) ಹತ್ಯೆಯಾದ ದುರ್ದೈವಿಯಾಗಿದ್ದಾನೆ. ತಂದೆ ಬಸಪ್ಪ ಮಸಳಿ ಮಗನನ್ನೇ ಹತ್ಯೆಗೈದಿರುವ ಆರೋಪಿಯಾಗಿದ್ದಾನೆ. ಮೃತ ಯುವಕ ತೀವ್ರ ಮದ್ಯ ವ್ಯಸನಿಯಾಗಿದ್ದ. ಆತನಿಗೆ ಹಲವು ಬಾರಿ ತಂದೆ ಬಸಪ್ಪ ಕುಡಿಯುವುದನ್ನು ಬಿಡುವಂತೆ ಬುದ್ಧಿವಾದ ಹೇಳಿದ್ದ. ಆದರೆ ಆತ ಕುಡಿಯುವುದನ್ನು ಬಿಟ್ಟಿರಲಿಲ್ಲ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‍ಗೆ ಹೃದಯಾಘಾತ

    ಕುಡಿಯಲು ಹಣ ಸಿಗದಿದ್ದಾಗ ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಕುಡಿಯುತ್ತಿದ್ದ. ಅಲ್ಲದೇ ಹೊಲದಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಕುಡಿಯುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಲುವಾಗಿ ಹಲವು ಬಾರಿ ಮುತ್ತಪ್ಪನಿಗೆ ತಿಳುವಳಿಕೆ ಹೇಳಲಾಗಿತ್ತು. ಆದರೆ ಆತ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಆತನ ತಂದೆ ತಲೆಗೆ ಸಲಾಕೆಯಿಂದ ಹೊಡೆದಿದ್ದು, ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಸಂಬಂಧ ವಿಜಯಪುರ (Vijayapura) ಗ್ರಾಮೀಣ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಸಲಿ ಚಿನ್ನ ಕದ್ದು, ನಕಲಿ ಚಿನ್ನ ಇಟ್ಟು ವಂಚನೆ ಮಾಡ್ತಿದ್ದ ಚಾಲಾಕಿ ಕಳ್ಳಿಯರು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ

    ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ

    ವಿಜಯಪುರ: ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಜಿಲ್ಲೆಯ ಅಧಿಕಾರಿಯೊಬ್ಬರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲೋಕಾಯುಕ್ತ (Lokayukta) ಇಲಾಖೆಯಲ್ಲಿ ಸಿಪಿಐ ಆಗಿದ್ದ ಮಾಜಿ ಅಧಿಕಾರಿ ಮಹೀಂದ್ರ ಕುಮಾರ್ ನಾಯಕ್ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ.

    ಜಿಲ್ಲೆಯ ನಾಗಠಾಣ (Nagathan) ಮೀಸಲು ಮತಕ್ಷೇತ್ರದಿಂದ ಮಹೀಂದ್ರ ಕುಮಾರ್ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಬಿಜೆಪಿ (BJP) ಪಕ್ಷದ ಆಕಾಂಕ್ಷಿಯಾಗಿರುವ ಅವರು ಟಿಕೆಟ್‍ಗಾಗಿ ಕಾದಿದ್ದಾರೆ. ಈ ಮೊದಲು ಬಾಗಲಕೋಟೆ (Bagalakote) ಜಿಲ್ಲೆಯ ಲೊಕಾಯುಕ್ತ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

    ತಮ್ಮ ಹುದ್ದೆಗೆ ಮಹೀಂದ್ರ ಕುಮಾರ್ ಮಾರ್ಚ್ ತಿಂಗಳಲ್ಲೇ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಕಳೆದ 20 ದಿನಗಳ ಹಿಂದೆಯಷ್ಟೆ ಇವರನ್ನು ಬೆಂಗಳೂರು (Bengaluru) ಲೋಕಾಯುಕ್ತ ಡಿಜಿಪಿ ಕೇಂದ್ರ ಕಛೇರಿಗೆ ವರ್ಗಾಯಿಸಲಾಗಿತ್ತು. ಮಾ.31 ರಂದು ರಾಜೀನಾಮೆ ಅಂಗೀಕಾರವಾಗಿದೆ. ಇದೀಗ ಸಕ್ರಿಯ ರಾಜಕಾರಣಕ್ಕೆ ಮಾಜಿ ಪೊಲೀಸ್ ಅಧಿಕಾರಿ ಎಂಟ್ರಿ ಆಗಿದ್ದಾರೆ.

    ನಾಗಠಾಣ ಮತಕ್ಷೇತ್ರದಿಂದ ಮಾಜಿ ಸಚಿವ ಬಿಜೆಪಿ ಪ್ರಭಾವಿ ನಾಯಕ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಬಿಜೆಪಿ ಟಿಕೆಟ್ ಯಾರಿಗಾದರೂ ಸಿಗಲಿ, ಕೆಲಸ ಮಾಡುವುದಾಗಿ ಮಹೀಂದ್ರ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಅಳೆದುತೂಗಿ ಹೈಕಮಾಂಡ್‌ಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಶಿಫಾರಸು ಮಾಡ್ತೇವೆ: ಜೋಶಿ

  • ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ

    ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ

    ವಿಜಯಪುರ: ಯಡಿಯೂರಪ್ಪನವರನ್ನು (Yediyurappa) ಮುಖ್ಯಮಂತ್ರಿ ಮಾಡಿದ್ದು ನಾನೇ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (Kalyana Rajya Pragati Party) ಅಧ್ಯಕ್ಷ ಜನಾರ್ದನ  ರೆಡ್ಡಿ (Janardhana Reddy) ಹೇಳಿದ್ದಾರೆ. ವಿಜಯಪುರದ (Vijayapura) ನಾಗಠಾಣ (Nagathan) ಗ್ರಾಮದಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ತೆರೆದಿಟ್ಟಿದ್ದಾರೆ.

    ಈ ಹಿಂದೆ ಬಿಜೆಪಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದೆ. ಬಳ್ಳಾರಿಯ (Ballari) ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯತ್ ವರೆಗೂ ಬಿಜೆಪಿಯನ್ನು ಗೆಲ್ಲಿಸಿದ್ದೆ. 9 ರಿಂದ 10 ಶಾಸಕರು ಅಧಿಕಾರ ಹಿಡಿಯಲು ನಾನೇ ಕಾರಣ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್, ಡಿಕೆಶಿ ಎಲ್ಲರೂ ಒಟ್ಟಾಗಿಯೇ ಪಕ್ಷದ ಕೆಲಸ ಮಾಡ್ತಿದ್ವಿ: ರಮೇಶ್ ಜಾರಕಿಹೊಳಿ

    ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬರಲು ನನ್ನ ಶ್ರಮವಿತ್ತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗ ಜನರ ಆಶೀರ್ವಾದದಿಂದ ಯಡಿಯೂರಪ್ಪರನ್ನು ಮುಖ್ಯಮಂತ್ರಿನ್ನಾಗಿ ಮಾಡಿದ್ದು ನಾನು ಎಂಬ ಹೆಮ್ಮೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಪಂಚರತ್ನ ಪ್ರಚಾರದ ವೇಳೆ ಜೆಡಿಎಸ್ ವಾಹನದ ಮೇಲೆ ಕಲ್ಲುತೂರಾಟ – ಚಾಲಕನಿಗೆ ಗಾಯ