Tag: nagashourya

  • ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

    ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

    ತೆರೆಯ ಮೇಲಷ್ಟೇ ನಾವು ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಇತ್ತೀಚಿನ ಘಟನೆಯೊಂದರಿಂದ ಟಾಲಿವುಡ್ (Tollywood) ನಟ ನಾಗಶೌರ್ಯ (Actor Naga shourya) ಪ್ರೂವ್ ಮಾಡಿದ್ದಾರೆ. ನಡುರಸ್ತೆಯಲ್ಲಿ ಯುವತಿಗೆ ಹೊಡೆದ ಲವರ್‌ಗೆ ಇದೀಗ ನಟ ನಾಗಶೌರ್ಯ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಿನಿಮಾ ತಮ್ಮ ಖಾಸಗಿ ಜೀವನ ಅಂತಾ ನಟ-ನಟಿಯರು ಬ್ಯುಸಿಯಿರುತ್ತಾರೆ. ಇತರೆ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ನಾಗಶೌರ್ಯ ಇದೀಗ ಮಾಡಿರುವ ಕೆಲಸ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾದಲ್ಲಿಷ್ಟೇ ಹೀರೋ ಅಲ್ಲ, ತೆರೆ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ನಟ ಪ್ರೂವ್ ಮಾಡಿದ್ದಾರೆ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

    ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನೆಂದರೆ, ಪ್ರೇಮಿಗಳಿಬ್ಬರು ರಸ್ತೆ ಮಧ್ಯೆ ಜಗಳವಾಡುತ್ತಿದ್ದರು. ಆಗ ಯುವಕ, ಯುವತಿ ಮೇಲೆ ಕೈ ಮಾಡಿದ್ದಾನೆ. ಇದನ್ನು ಕಂಡು ಸಿಟ್ಟಿಗೆದ್ದ ನಾಗ ಶೌರ್ಯ, ಕಾರಿನಿಂದ ಇಳಿದಿದ್ದಾರೆ. ಯುವತಿ ಹಲ್ಲೆ ಮಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಆ ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆ ಹುಡುಗ, ನಾನು ಆಕೆಯ ಲವರ್ ಎಂದು ಸಬೂಬು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ನಟ, ಲವರ್ ಆಗಿಬಿಟ್ಟರೆ, ಆಕೆಯ ಮೇಲೆ ಕೈ ಮಾಡಬಹುದಾ ಕ್ಷಮೆ ಕೇಳು ಎಂದು ಯುವಕನ ವಿರುದ್ಧ ಗರಂ ಆಗಿದ್ದಾರೆ. ಈ ರೀತಿ ಆ ಹುಡುಗನಿಗೆ ನಟ ಜೋರು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಆರಂಭದಲ್ಲಿ ಈ ವಿಡಿಯೋ ವೈರಲ್ ಆದಾಗ, ನಟ ನಾಗ ಶೌರ್ಯ ಅವರು ನಡುರಸ್ತೆಯಲ್ಲಿ ಯಾರೋ ಯುವಕನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಸತ್ಯಾಸತ್ಯತೆ ಗೊತ್ತಾದ ಮೇಲೆ ನಾಗ ಶೌರ್ಯ ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಇನ್ನೂ, ಆ ಯುವಕನ ಪರವಾಗಿ ಮಾತನಾಡಿರುವ ಆ ಯುವತಿ, ಏನೋ ಆಗಿದ್ದು ಆಗಿದೆ, ಬಿಟ್ಟುಬಿಡಿ ಎಂದು ಕೇಳಿಕೊಂಡರು ಎನ್ನಲಾಗಿದೆ. ಅಲ್ಲಿದ್ದವರು ಕೂಡ ಆ ಯುವಕನಿಗೆ ಕ್ಷಮೆ ಕೇಳುವಂತೆ ಪಟ್ಟುಹಿಡಿದಿದ್ದರು. ಒಟ್ಟಾರೆ ನಟ ನಾಗಶೌರ್ಯ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಮಹಿಳೆಯರಿಗೆ ನಾಗಶೌರ್ಯ ಗೌರವಿಸುವ ರೀತಿಯನ್ನ ಫ್ಯಾನ್ಸ್‌ ಮೆಚ್ಚಿದ್ದಾರೆ.

  • ಕನ್ನಡ ಆಯ್ತು ಈಗ ರಶ್ಮಿಕಾ ವಿರುದ್ಧ ತೆಲುಗು ಮಂದಿ ಕಿಡಿ

    ಕನ್ನಡ ಆಯ್ತು ಈಗ ರಶ್ಮಿಕಾ ವಿರುದ್ಧ ತೆಲುಗು ಮಂದಿ ಕಿಡಿ

    ರ್ನಾಟಕದಲ್ಲಿ ರಶ್ಮಿಕಾ ಬ್ಯಾನ್(Ban) ವಿಚಾರವಾಗಿ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ತೆಲುಗಿನಲ್ಲೂ ಹೊಸ ವಿವಾದವೊಂದು ರಶ್ಮಿಕಾ ಹೆಗಲೇರಿದೆ. ಕನ್ನಡದ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಲ್ಲ ಎಂದು ನಟಿಯ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ತೆಲುಗಿನ ಖ್ಯಾತ ಬರಹಗಾರ ತೋಟಾ ಪ್ರಸಾದ್ ಕೂಡ ರಶ್ಮಿಕಾ ವಿರುದ್ಧ ಕಿಡಿಕಾರಿದ್ದಾರೆ. ರಕ್ಷಿತ್ ಮಾತ್ರವಲ್ಲ, ನಾಗಶೌರ್ಯ ಅವರನ್ನು ಕೂಡ ರಶ್ಮಿಕಾ ಕಡೆಗಣಿಸಿದ್ದಾರೆ ಎಂದು ಮಾತನಾಡಿದ್ದಾರೆ.

    ಕೊಡಗಿನ ಕುವರಿ ರಶ್ಮಿಕಾ ತಮ್ಮ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯನ್ನ ಚಿತ್ರತಂಡವನ್ನ ಕಡೆಗಣಿಸಿದ್ದರು. ಇತ್ತೀಚಿಗೆ ರಶ್ಮಿಕಾ ನೀಡಿದ ಸಂದರ್ಶನ, ಕರ್ನಾಟಕದಲ್ಲಿ ಸಾನ್ವಿ ವಿರುದ್ಧ ಸಂಚಲನ ಸೃಷ್ಟಿಸಿತ್ತು. ಈ ವಿವಾದದ ಬೆನ್ನಲ್ಲೇ ತೆಲುಗಿನ ನಟ ನಾಗಶೌರ್ಯ(Nagashourya) ಅವರನ್ನು ಕೂಡ ನಟಿ ಕಡೆಗಣಿಸಿದ್ದರು ಎಂದು ತೋಟಾ ಪ್ರಸಾದ್ (Thota Prasad) ಕಿಡಿಕಾರಿದ್ದಾರೆ.

    ರಶ್ಮಿಕಾ, ರಕ್ಷಿತ್ ಶೆಟ್ಟಿ (Rakshith Shetty) ಜೊತೆಗೆ ಬ್ರೇಕಪ್ ಮಾಡಿಕೊಂಡ ಮೇಲಿಂದ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ. ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದರಲ್ಲಿ ತನ್ನ ಮಾಜಿ ಬಾಯ್ ಫ್ರೆಂಡ್ ರಕ್ಷಿತ್ ಅವರನ್ನು ವ್ಯಂಗ್ಯ ಮಾಡುವ ಭರದಲ್ಲಿ ತನ್ನ ಮೊದಲ ಸಿನಿಮಾದ ಬಗ್ಗೆ ಸನ್ನೆ ಮೂಲಕ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಮಾತನಾಡಿದ್ದರು. ಆಮೇಲೆ ತನ್ನ ಮಾತನ್ನು ತಿರುಚಲಾಗಿದೆ ಎಂದು ಬೇಸರದಲ್ಲಿ ಒಂದು ನೋಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡರು. ಆದರೆ ಅವರ ಈ ಧಿಮಾಕಿನ ಉತ್ತರ ರಿಷಬ್ ಶೆಟ್ಟಿ ಸೇರಿದಂತೆ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ನೋವು ತಂದಿತ್ತು. ಕರ್ನಾಟಕದವರೆಲ್ಲ ರಶ್ಮಿಕಾ ಅವರನ್ನು ವಿರೋಧಿಸಲು ಶುರು ಮಾಡಿದರು. ಅವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡುವ ಮಾತುಗಳು ಬಂದವು. ಇದನ್ನೂ ಓದಿ: ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೆಚ್ಚಿಕೊಂಡ ಪ್ರಬುದ್ಧ ಪ್ರೇಕ್ಷಕ

    ಇದೀಗ ಪಕ್ಕದ ತೆಲುಗು ಇಂಡಸ್ಟ್ರಿಯಲ್ಲೂ (Telagu Industry) ರಶ್ಮಿಕಾ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ತೆಲುಗಿನ ಖ್ಯಾತ ಸಿನಿಮಾ ಬರಹಗಾರ ತೋಟಾ ಪ್ರಸಾದ್ ಸಂದರ್ಶನವೊಂದರಲ್ಲಿ ರಶ್ಮಿಕಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಕನ್ನಡ ಮಾತ್ರವಲ್ಲ ತೆಲುಗು ನಟನ ಕುರಿತೂ ಧಿಮಾಕಿನಿಂದ ರೀತಿ ನಡೆದುಕೊಂಡಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ತೋಟಾ ಪ್ರಸಾದ್ ಒಂದು ವೇಳೆ ರಶ್ಮಿಕಾ ಮಂದಣ್ಣಗೆ ಬ್ರೇಕಪ್ ಆದ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಬೇಡ, ಅವರ ಹೆಸರು ಹೇಳೋದು ಬೇಡ, ಆದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತು ಇಲ್ವಾ ಸಿನಿಮಾ ಹೆಸರನ್ನಾದರೂ ಹೇಳಬಹುದಿತ್ತು.

    ಈಕೆ ಕನ್ನಡ ಮಾತ್ರವಲ್ಲ ತೆಲುಗಿನ ಮೊದಲ ಸಿನಿಮಾಗೂ ಹೀಗೆ ಮಾಡಿದ್ದಾರೆ. ತೆಲುಗಿನ ಡೆಬ್ಯೂ ಚಿತ್ರಕ್ಕೆ ನಾಗಶೌರ್ಯಗೆ ನಾಯಕಿಯಾಗಿದ್ದು ಈ ನಟಿ. ಈ ಚಿತ್ರದ ವಾರ್ಷಿಕೋತ್ಸವದ ಕುರಿತು ಟ್ವೀಟ್ ಮಾಡಿದ್ದ ರಶ್ಮಿಕಾ, ನಿರ್ದೇಶಕನ ಹೆಸರನ್ನ ಬರೆದಿದ್ದರು. ಆದರೆ ನಾಗಶೌರ್ಯ ಹೆಸರು ಹೇಳಿರಲಿಲ್ಲ. ಎಷ್ಟೇ ಬೆಳೆದರು ನಮಗೆ ಮೊದಲ ಅವಕಾಶ ಕೊಟ್ಟವರನ್ನು ಮರೆಯಬಾರದು ಎಂದು ತೋಟಾ ಪ್ರಸಾದ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ತೆಲುಗಿನ ಸ್ಟಾರ್ ಹೀರೋ(Telagu Actor) ನಾಗಶೌರ್ಯ(Nagashourya) ಕನ್ನಡದ ಹುಡುಗಿ ಅನುಷಾ ಶೆಟ್ಟಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ನಾಗ್ ಮತ್ತು ಅನುಷಾ (Anusha Shetty) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

     

    View this post on Instagram

     

    A post shared by Naga Shaurya (@nagashaurya_universe)

    ಟಾಲಿವುಡ್‌ನ(Tollywood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ನಾಗಶೌರ್ಯ ಕರ್ನಾಟಕದ(Karnataka) ಅಳಿಯ ಆಗಿದ್ದಾರೆ. ಕುಂದಾಪುರದ ಮೂಲದ ಹುಡುಗಿ ಅನುಷಾ, ಬೆಂಗಳೂರಿನಲ್ಲಿ ಮನೆಯ ಒಳಾಂಗಣ ವಿನ್ಯಾಸಕಿಯಾಗಿ (Interior Design) ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸಂಸ್ಥೆಯನ್ನ ಕೂಡ ತೆರೆದಿದ್ದಾರೆ. ಇನ್ನೂ ನಾಗಶೌರ್ಯ ಕನ್ನಡದ ಹುಡುಗಿಯನ್ನು ಪ್ರೀತಿಸಿ, ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.

     

    View this post on Instagram

     

    A post shared by Naga Shaurya (@nagashaurya_universe)

    ನಾಗ್ ಮತ್ತು ಅನುಷಾ ಶೆಟ್ಟಿ ಮದುವೆ ನವೆಂಬರ್ 20ರಂದು ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿದೆ. ನಾಗ್, ಅನುಷಾ ಮದುವೆ ಇಂದು 11.25ರ ಶುಭ ಮುಹೂರ್ತದಲ್ಲಿ ನಡೆದಿದೆ. ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಕೆಲವೇ ಮಂದಿಗೆ ನಾಗಶೌರ್ಯ ಮದುವೆಗೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಸುಕೃತ ನಾಗ್ ಜೊತೆಗಿನ ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ಶೈನ್ ಶೆಟ್ಟಿ

     

    View this post on Instagram

     

    A post shared by Naga Shaurya (@nagashaurya_universe)

    ಸದ್ಯ ನವಜೋಡಿಗೆ ಅಭಿಮಾನಿಗಳು, ಆಪ್ತರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]