Tag: Nagarjuna Akkineni

  • ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

    ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

    ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಂಪಲ್ ಲೈಫ್ ಇಷ್ಟ ಪಡ್ತಾರೆ ಅನ್ನೋದನ್ನ ನಾವೆಲ್ಲರೂ ಕೇಳಿದ್ದೇವೆ. ಇಂಥಹ ಜೀವನ ಇಷ್ಟ ಪಡುವ ಸೆಲೆಬ್ರಿಟಿಗಳು ಕಡಿಮೆ ಜನರಿರುವ ಜಾಗಕ್ಕೆ ಹೋಗಿ ಸಾಮಾನ್ಯರಂತೆ ಕೆಲ ಸಮಯ ಕಳೆದು ಬರ್ತಾರೆ.

     

    View this post on Instagram

     

    A post shared by Sobhita Dhulipala (@sobhitad)

    ಇದೀಗ ಇಂಥದ್ದೇ ಲೈಫ್ ಫೀಲ್ ಮಾಡಿರುವ ನಟಿ ಶೋಭಿತಾ ಧೂಲಿಪಲಾ (Sobhita Dhulipala) ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಹಾಗೂ ವೀಡಿಯೋಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಮಹಾನ್’ ಚಿತ್ರ ಒಪ್ಪಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ

    ಸೂಪರ್ ಸ್ಟಾರ್ ನಾಗಾರ್ಜುನ ಸೊಸೆ, ನಟ ನಾಗಚೈತನ್ಯ ಪತ್ನಿ ಶೋಭಿತಾ ಪ್ರವಾಸದ ವೇಳೆ ಅಡುಗೆ ಮಾಡ್ತಿರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ರಸ್ತೆಯಲ್ಲೇ ಅಡುಗೆ ಸಾಂಬಾರ್ ಮಾಡೋದು, ಬೆಂಡೇಕಾಯಿ ಕಟ್ ಮಾಡುವುದು, ತೆಂಗಿನಕಾಯಿ ಒಡೆಯೋದು,‌ ಕುಟಾಣಿಯಲ್ಲಿ ಕುಟ್ಟುವ ಕೆಲಸ ಮಾಡುತ್ತಿರುವ ಫೋಟೋಸ್ ಗಾಗೂ ವಿಡಿಯೋಗಳನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

    ನಾಗಚೈತನ್ಯ 2ನೇ ಪತ್ನಿಯಾಗಿರುವ ಶೋಭಿತಾ ಸೂಪರ್ ಮಾಡೆಲ್ ಹಾಗೂ ನಟಿಯಾಗಿಯೂ ಗುರುತಿಸಿಕೊಂಡವರು. ಆದ್ರೆ ಇಷ್ಟು ಸರಳವಾಗಿರುತ್ತಾರೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ನಡೆದುಕೊಂಡಿದ್ದಾರೆ. ಅಂದಹಾಗೆ ಶೋಭಿತಾಗೆ ಅಡುಗೆ ಮಾಡೋದು ಅಂದ್ರೆ ಇಷ್ಟ ಅನ್ನೋದು ಸಾಬೀತಾಗಿದೆ.

  • ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಮಿಳು ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಕುಬೇರ’ (Kubera) ಚಿತ್ರದ ಟೀಸರ್ ರಿಲೀಸ್ ಆಗಿದೆ. ಹಣ ಮತ್ತು ಶ್ರೀಮಂತ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಟೀಸರ್ ಮೂಲಕನೇ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

    ಧನುಷ್ (Dhanush) ಭಿಕ್ಷುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ, ರಶ್ಮಿಕಾ ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ ಹರಿದ ಬಟ್ಟೆಯಲ್ಲಿ ಧನುಷ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ದುಡ್ಡಿನ ಸುತ್ತ ಹೆಣೆಯಲಾದ ಕಥೆ ಎಂಬುದನ್ನು ಟೀಸರ್‌ನಲ್ಲಿ ಹಿಂಟ್ ಬಿಟ್ಟು ಕೊಡಲಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಕುಬೇರ ಟೀಸರ್‌ನಲ್ಲಿ ಒಬ್ಬ ಮನುಷ್ಯನಿಗೆ ಹಣದ ದುರಾಸೆ ಎಷ್ಟಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ದುಡ್ಡೇ ಹೈಲೆಟ್ ಆಗಿದ್ದು, ಟೀಸರ್ ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಕನ್ನಡ ಟೀಸರ್‌ನಲ್ಲಿ ‘ನಂದು ನಂದು ನನ್ನದೇ ಈ ಲೋಕವಯ್ಯ’ ಎಂಬ ಹಾಡಿನ ಸಾಲು ಪ್ರೇಕ್ಷಕರ ಗಮನ ಸೆಳೆದಿದೆ.

    ನಾಗರ್ಜುನ ಅಕ್ಕಿನೇನಿ ಶ್ರೀಮಂತ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ತಯಾರಾಗಿದೆ. ಇದೇ ಜೂನ್ 20ರಂದು ಚಿತ್ರ ರಿಲೀಸ್ ಆಗಲಿದೆ. ಫಿದಾ, ಲವ್ ಸ್ಟೋರಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಶೇಖರ್ ಕಮ್ಮುಲಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನುಷ್ ಹಾಗೂ ರಶ್ಮಿಕಾ ನಟಿಸಿರುವ ಈ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ನಾಗಾರ್ಜುನ ಅಕ್ಕಿನೇನಿ ಸೋದರಳಿಯನ ಜೊತೆ ಮೀನಾಕ್ಷಿ ಚೌಧರಿ ಮದುವೆ?- ಸ್ಪಷ್ಟನೆ ನೀಡಿದ ನಟಿ

    ನಾಗಾರ್ಜುನ ಅಕ್ಕಿನೇನಿ ಸೋದರಳಿಯನ ಜೊತೆ ಮೀನಾಕ್ಷಿ ಚೌಧರಿ ಮದುವೆ?- ಸ್ಪಷ್ಟನೆ ನೀಡಿದ ನಟಿ

    ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಪುತ್ರ ನಾಗಚೈತನ್ಯ ಮತ್ತು ಶೋಭಿತಾ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಬೆನ್ನಲ್ಲೇ ನಾಗಾರ್ಜುನ ಸಹೋದರಿ ಪುತ್ರ ಸುಶಾಂತ್ ಮದುವೆಯ ಬಗ್ಗೆ ಹರಿದಾಡುತ್ತಿದೆ. ‘ಗುಂಟೂರು ಖಾರಂ’ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಜೊತೆ ಸುಶಾಂತ್ (Sushanth) ಮದುವೆ (Wedding) ಆಗಲಿದ್ದಾರೆ ಎನ್ನಲಾದ ಸುದ್ದಿಗೆ ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ.

    ಸಂದರ್ಶನವೊಂದರಲ್ಲಿ ಮೀನಾಕ್ಷಿ ಚೌಧರಿ ಮಾತನಾಡಿ, ಸುಶಾಂತ್ ಜೊತೆಗಿನ ಮದುವೆ ವಿಚಾರ ಅದು ವದಂತಿಯಷ್ಟೇ ಎಂದಿದ್ದಾರೆ. ನಾನು ಅವರೊಂದಿಗೆ ಮದುವೆಯಾಗುತ್ತಿಲ್ಲ. ಈ ವದಂತಿಗಳು ಹೇಗೆ ಬರುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದರು. ನಾನು ಸಿಂಗಲ್ ಆಗಿದ್ದೇನೆ, ಎಂಗೇಜ್ ಆಗೋದ್ದಕ್ಕೆ ರೆಡಿಯಿಲ್ಲ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ

    2021ರಲ್ಲಿ ಸುಶಾಂತ್‌ಗೆ ನಾಯಕಿಯಾಗಿ ಮೀನಾಕ್ಷಿ ತೆಲುಗು ಸಿನಿಮಾವೊಂದರಲ್ಲಿ ನಟಿಸಿದರು. ಅಲ್ಲಿಂದ ಇವರಿಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ವದಂತಿ ಹಬ್ಬಿತ್ತು. ಅದಕ್ಕೀಗ ನಟಿಯ ಕಡೆಯಿಂದ ಉತ್ತರ ಸಿಕ್ಕಿದೆ. ಇದನ್ನೂ ಓದಿ:‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ಇನ್ನೂ ‘ಗುಂಟೂರು ಖಾರಂ’ ಚಿತ್ರದಲ್ಲಿ ಮಹೇಶ್ ಬಾಬುಗೆ ಜೊತೆ ಮೀನಾಕ್ಷಿ ನಟಿಸಿದ್ದರು. ವಿಜಯ್ ದಳಪತಿ ನಟನೆಯ ಗೋಟ್ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದರು. ಇದೀಗ ವರುಣ್ ತೇಜ್ ನಟನೆಯ ಮಟ್ಕಾ, ವಿಶ್ವಕ್ ಸೇನ್ ಹೊಸ ಚಿತ್ರಕ್ಕೆ ಮೀನಾಕ್ಷಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಿದೆ.

  • ಧನುಷ್, ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ರಿಲೀಸ್

    ಧನುಷ್, ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ರಿಲೀಸ್

    ಟ್ಯಾಲೆಂಟೆಡ್ ನಟ ಧನುಷ್ (Dhanush) ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸಿರುವ ‘ಕುಬೇರ’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿದೆ. ‘ಕುಬೇರ’ (Kubera) ಸಿನಿಮಾದ ಗ್ಲಿಂಪ್ಸ್ ಕ್ಯೂರಿಯಸ್ ಆಗಿ ಮೂಡಿ ಬಂದಿದೆ. ಇದನ್ನೂ ಓದಿ:ಸರ್ಕಾರದಲ್ಲಿ ಉನ್ನತ ಸ್ಥಾನ ಕೊಡಿಸುವುದಾಗಿ ವಂಚನೆ – ನಟಿ ದಿಶಾ ಪಟಾನಿ ತಂದೆಗೆ 25 ಲಕ್ಷ ರೂ. ಪಂಗನಾಮ

    ಧನುಷ್, ರಶ್ಮಿಕಾ, ನಾಗಾರ್ಜುನ ಅಕ್ಕಿನೇನಿ (Nagarjuna Akkineni) ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ಅನಾವರಣ ಆಗಿದೆ. ಇದರಲ್ಲಿ ಡೈಲಾಗ್‌ಗಳ ಅಬ್ಬರವಿಲ್ಲದೇ ತುಣುಕು ಮತ್ತು ಸೌಂಡ್‌ನಿಂದಲೇ ಎಲ್ಲರ ಗಮನ ಸೆಳೆದಿದೆ. ಧನುಷ್ ಭಿಕ್ಷುಕನಾಗಿ ನಟಿಸಿದರೆ, ರಶ್ಮಿಕಾ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ‘ಲವ್ ಸ್ಟೋರಿ’ ಖ್ಯಾತಿಯ ಶೇಖರ್ ಕಮ್ಮುಲ ಅವರು ಕುಬೇರ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಧನುಷ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಒಟ್ಟಾಗಿ ನಟಿಸಿರುವ ಕಾರಣ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಕುರಿತು ಚಿತ್ರತಂಡ ಮಾಹಿತಿ ನೀಡಲಿದೆ.

    ಇನ್ನೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’, ‘ಛಾವಾ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ರೈನ್‌ಬೋ, ದಿ ಗರ್ಲ್ಫ್ರೆಂಡ್, ತಮಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.

  • ‘ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ ಹೊಸ ಪೋಸ್ಟರ್‌ ಔಟ್‌

    ‘ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ ಹೊಸ ಪೋಸ್ಟರ್‌ ಔಟ್‌

    ನುಷ್ (Dhanush) ನಟನೆಯ ‘ಕುಬೇರ’ (Kubera) ಸಿನಿಮಾದಲ್ಲಿ ಟಾಲಿವುಡ್ ಕಿಂಗ್ ನಾಗಾರ್ಜುನ ಅಕ್ಕಿನೇನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದ ವಿಶೇಷ ಪೋಸ್ಟರ್‌ವೊಂದನ್ನು ರಿವೀಲ್ ಮಾಡುವುದರ ಜೊತೆಗೆ ಸಿನಿಮಾದ ಕುರಿತು ಬಿಗ್ ಅಪ್‌ಡೇಟ್‌ವೊಂದನ್ನು ಹಂಚಿಕೊಂಡಿದ್ದಾರೆ.

    ‘ಕುಬೇರ’ ಸಿನಿಮಾದಲ್ಲಿ ನಟನೆಗೆ ಸ್ಕೋಪ್ ಇರುವಂತಹ ಪಾತ್ರದಲ್ಲಿ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ನಟಿಸಿದ್ದಾರೆ. ಸದ್ಯ ನಟನ ಪೋಸ್ಟರ್‌ವೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ಜೊತೆಗೆ ನವೆಂಬರ್ 15ರಂದು ಸಿನಿಮಾದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡೋದಾಗಿ ಚಿತ್ರತಂಡ ಅಪ್‌ಡೇಟ್ ಹಂಚಿಕೊಂಡಿದೆ. ಇದನ್ನೂ ಓದಿ:ದೀಪಿಕಾ ಪಡುಕೋಣೆ ಬಳಿಕ ಆಲಿಯಾ ಭಟ್‌ಗೆ ನಾಗ್ ಅಶ್ವಿನ್ ಆ್ಯಕ್ಷನ್ ಕಟ್?

    ಇನ್ನೂ ಧನುಷ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

    ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

    ಹೈದರಾಬಾದ್‌: ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌ ಕಾರಣ ಎಂದು ಬಾಂಬ್‌ ಸಿಡಿಸಿ ವಿವಾದಕ್ಕೆ ಸಿಲುಕಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ (Konda Surekha) ವಿರುದ್ಧ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ದೂರು ದಾಖಲಿಸಿದ್ದಾರೆ.

    ತಮ್ಮ ಮಗ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಕಾಂಗ್ರೆಸ್‌ ನಾಯಕರಿಗೆ (Congress Leaders) ದೂರು ಸಲ್ಲಿಸಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿಯಲ್ಲಿ ದೂರು ದಾಖಲಿಸಿದ್ದಾರೆ. ಸುರೇಖಾ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ವೈಯಕ್ತಿ, ವೃತ್ತಿಪರ, ಕೌಟುಂಬಿಕ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ. ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    ಕ್ಷಮೆಯಾಚಿಸಿದ ಸುರೇಖಾ
    ತಮ್ಮ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಹಿಂದೇಟು ಹಾಕಿದ ಸಚಿವೆ ಕೊಂಡಾ ಸುರೇಖಾ ಹೇಳಿಕೆ ಹಿಂಪಡೆದು ಕ್ಷಮೆ ಕೋರಿದ್ದಾರೆ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ಮಾತಿನ ಭರದಲ್ಲಿ ಬಾಯಿತಪ್ಪಿ ಆಡಿದ ಮಾತಿದು. ತೆಲುಗು ಚಿತ್ರರಂಗದ ಕುರಿತು ನಾನು ನೀಡಿದ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೆಟಿಆರ್‌ ವಿರುದ್ಧ ಮಾಡಿರುವ ಆರೋಪಗಳಿಗೆ ನಾನು ಬದ್ಧಳಾಗಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಸಮಂತಾ ಬಗ್ಗೆ ಗೌರವವಿದೆ:
    ನನ್ನ ಹೇಳಿಕೆಯಿಂದ ನಟಿ ಸಮಂತಾ (Samantha Ruth Prabhu) ಅವರಿಗೆ ನೋವಾಗಿದ್ದರೆ ಈ ಕೂಡಲೇ ಹೇಳಿಕೆ ಹಿಂಪಡೆಯುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಅನ್ಯಥಾ ಭಾವಿಸಬೇಡಿ. ನನ್ನ ಹೇಳಿಕೆ ರಾಜಕೀಯ ನಾಯಕರು ಮಹಿಳೆಯರನ್ನು ಕೀಳಾಗಿ ಕಾಣುವುದನ್ನು ಪ್ರಶ್ನಿಸುವ ಉದ್ದೇಶವಾಗಿತ್ತೇ ಹೊರತು ನಿಮ್ಮ (ಸಮಂತಾ) ಭಾವನೆಗಳನ್ನು ನೋಯಿಸುವುದು ಆಗಿರಲಿಲ್ಲ. ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲದೇ ಗೌರವವೂ ಇದೆ ಎಂದು ಹೇಳಿದ್ದಾರೆ.

    ಕೆಟಿಆರ್‌ ಲೀಗಲ್‌ ನೋಟಿಸ್‌
    ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಕುರಿತು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಕುರಿತು ಸಚಿವೆ ಕೊಂಡಾ ಸುರೇಖಾ ಅವರಿಗೆ ಕೆಟಿ ರಾಮರಾವ್‌ ಲೀಗಲ್‌ ನೋಟಿಸ್‌ ನೀಡಿದ್ದರು. ಸಚಿವೆ ಮಾಡಿರುವ ಆರೋಪವು ರಾಜಕೀಯ ಪ್ರೇರಿತವಾದುದು. ಇಂಥ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. 24 ಗಂಟೆಯೊಳಗೆ ಸುರೇಖಾ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

  • ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್ ಶಾಕ್- ಅದ್ಧೂರಿ ಕನ್ವೆನ್ಷನ್ ಸೆಂಟರ್ ಧ್ವಂಸ

    ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್ ಶಾಕ್- ಅದ್ಧೂರಿ ಕನ್ವೆನ್ಷನ್ ಸೆಂಟರ್ ಧ್ವಂಸ

    ಹೈದರಾಬಾದ್: ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ (Nagarjuna Akkineni) ಅವರ ಎನ್ ಕನ್ವೆನ್ಷನ್ ಹಾಲ್ (N Convention Hall) ಅನ್ನು ನೆಲಸಮಗೊಳಿಸಲಾಗಿದೆ.

    ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈಡ್ರಾ (HYDRA)(ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ) ಸಂಸ್ಥೆ ಶನಿವಾರ ನಟ ಅಕ್ಕಿನೇನಿ ನಾಗಾರ್ಜುನ ಅವರ ಹೈದ್ರಾಬಾದ್‌ನ ಮಾದಾಪುರದಲ್ಲಿರುವ (Madhapur) ಎನ್ ಕನ್ವೆನ್ಷನ್ ಆಸ್ತಿಯನ್ನು ನೆಲಸಮಗೊಳಿಸಿದೆ.ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

     10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು (Tummidikunta Lake) ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ಅವಘಡ- ರವಿತೇಜಗೆ ಕೈಗೆ ಗಾಯ

    ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.

  • ರಜನಿಕಾಂತ್ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ

    ರಜನಿಕಾಂತ್ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ

    ಲೈವಾ ನಟಿಸಿರುವ ‘ಕೂಲಿ’ (Coolie) ಸಿನಿಮಾ ಟೀಸರ್ ರಿಲೀಸ್ ಆಗಿ ಮಿಲಿಯನ್‌ಗಟ್ಟಲೇ ವೀಕ್ಷಣೆ ಪಡೆದಿದೆ. ರಜನಿಕಾಂತ್ (Rajanikanth) ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಿರುವಾಗ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಡಲಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ ಸಿನಿಮಾಗಳನ್ನು ನಾಗಾರ್ಜುನ ಒಪ್ಪಿಕೊಳ್ತಿದ್ದಾರೆ. ರಣ್‌ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ (Akkineni Nagarjuna) ನಟಿಸಿ ಬಂದಿದ್ದರು. ಧನುಷ್ ಮತ್ತು ರಶ್ಮಿಕಾ ನಟನೆಯ ‘ಕುಬೇರ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ಬೆನ್ನಲ್ಲೇ ತಲೈವಾ ಸಿನಿಮಾದಲ್ಲಿ ನಟಿಸಲು ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ದೇಶದ ಮೊದಲ ಎಐ ಆ್ಯನಿಮೇಟೆಡ್ `ಬ್ಯಾಡ್ ಬಾಯ್ಸ್’ ವಿಡಿಯೋ ಸಾಂಗ್ ರಿಲೀಸ್

    ‘ಕೂಲಿ’ ಸಿನಿಮಾದಲ್ಲಿ ನಾಗಾರ್ಜುನ ಪಾತ್ರ ಉತ್ತಮವಾಗಿಯಂತೆ. ಆ ಪಾತ್ರಕ್ಕೆ ಸೂಕ್ತ ಎಂದೆನಿಸಿ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರನ್ನು ಸಂಪರ್ಕಿಸಿದ್ದಾರೆ. ನಟನಾಗಲಿ ಅಥವಾ ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ರಜನಿಕಾಂತ್ ‘ಕೂಲಿ’ ಚಿತ್ರದ ಟೀಸರ್‌ನಲ್ಲಿ ಕೂಲಿಂಗ್ ಗ್ಲ್ಯಾಸ್ ಧರಿಸಿ ತಲೈವಾ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.

    ಟೀಸರ್ ಬ್ಲ್ಯಾಕ್ & ವೈಟ್ ಥೀಮ್‌ನಲ್ಲಿ ಮೂಡಿ ಬಂದಿದೆ. ಆದರೆ ಇದರಲ್ಲಿ ಇರುವ ಬಂಗಾರದ ವಸ್ತುಗಳನ್ನು ಮಾತ್ರ ಹೈಲೆಟ್ ಮಾಡಿ ತೋರಿಸಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕುರಿತ ಸಿನಿಮಾ ಎಂಬುದರ ಸುಳಿವನ್ನು ಚಿತ್ರತಂಡ ನೀಡಿದೆ.

    ಗೋಲ್ಡ್ ಬಿಸ್ಕೆಟ್, ಗೋಲ್ಡ್ ವಾಚ್ ಜೊತೆಗೆ ಚಿನ್ನದ ರಾಶಿಯೇ ಇರುವ ಜಾಗಕ್ಕೆ ರಜನಿಕಾಂತ್ ಎಂಟ್ರಿ ನೀಡುತ್ತಾರೆ. ಅಲ್ಲಿರುವ ಖದೀಮರಿಗೆ ಗೋಲ್ಡ್ ವಾಚ್‌ಗಳಿಂದ ಮಾಡಿದ ಚೈನ್‌ನಿಂದಲೇ ಬೆಂಡೆತ್ತಿದ್ದಾರೆ. ಈ ರೀತಿಯ ಆ್ಯಕ್ಷನ್ ದೃಶ್ಯದ ಮೂಲಕ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಟೀಸರ್ ಮೂಲಕ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಭಿಮಾನಿಗಳ ಕೌತುಕ ಕೆರಳಿಸುವಲ್ಲಿ ಗೆದ್ದಿದ್ದಾರೆ.

    ‘ಜೈಲರ್’ ಸಿನಿಮಾದ ಸಕ್ಸಸ್‌ನಿಂದ ರಜನಿಕಾಂತ್ ಗೆದ್ದು ಬೀಗಿದ್ದರು. ಆದರೆ ಲಾಲ್ ಸಲಾಮ್‌ನಿಂದ ತಲೈವಾಗೆ ಸೋಲಿನ ಕಹಿ ಸಿಕ್ಕಿತ್ತು. ಈಗ ‘ಕೂಲಿ’ ಸಿನಿಮಾದ ಟೀಸರ್‌ನಿಂದ ಫ್ಯಾನ್ಸ್‌ಗೆ ಚಿತ್ರದ ಮೇಲೆ ಭರವಸೆ ಮೂಡಿದೆ.

  • ‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

    ‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ನಟನೆಯ ‘ಯುವ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ (Yuva Film) ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಯುವ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿರುವ ಮಿತ್ರರಿಗೆ ಎಲ್ಲರಿಗೂ ನಮಸ್ಕಾರ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಯುವ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಯುವ ಚಿತ್ರ ಹಿಟ್ ಕೂಡ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೈದರಾಬಾದ್‌ನಲ್ಲಿಯೂ ಚಿತ್ರ ಹಿಟ್ ಆಗಿದೆ ಎಂದು ನಾಗಾರ್ಜುನ್ ಮಾತನಾಡಿದ್ದಾರೆ. ವಿಡಿಯೋ ಮೂಲಕ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    ಈ ವೇಳೆ, ವರನಟ ರಾಜ್‌ಕುಮಾರ್ ಅವರನ್ನು ನಾಗಾರ್ಜುನ್ ಸ್ಮರಿಸಿದ್ದಾರೆ. ತೆಲುಗು ಮಂದಿಗೂ ಅವರೆಂದರೆ ಇಷ್ಟ. ಇನ್ನೂ ನಿಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ನಿಮ್ಮ ಮುಂದಿನ ಹೆಜ್ಜೆಗೆ ಶುಭವಾಗಲಿ ಎಂದು ದೊಡ್ಮನೆ ಕುಡಿಗೆ ತೆಲುಗು ನಟ ನಾಗಾರ್ಜುನ್ ಶುಭಹಾರೈಸಿದ್ದಾರೆ.

    ‘ಯುವ’ ಸಿನಿಮಾ ಇದೇ ಮಾರ್ಚ್.29ಕ್ಕೆ ರಿಲೀಸ್ ಆಗಿದೆ. ಯುವ ಮತ್ತು ಸಪ್ತಮಿ ಗೌಡ (Sapthami Gowda) ಜೋಡಿ ನೋಡುಗರ ಗಮನ ಸೆಳೆದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ‘ಯುವ’ (Yuvafilm) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಕಣಕ್ಕೆ- YSR ಕಾಂಗ್ರೆಸ್‌ಗೆ ನಟ

    ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಕಣಕ್ಕೆ- YSR ಕಾಂಗ್ರೆಸ್‌ಗೆ ನಟ

    ಡೀ ದೇಶಾದ್ಯಂತ 2024ರ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಸದ್ಯ ತೆಲುಗು ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್‌ಗೆ ಜಗನ್ ಬಿಗ್ ಶಾಕ್ ಕೊಟ್ಟಿದ್ದಾರೆ. ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಟಿಡಿಪಿ-ಜನಸೇನಾ ಮೈತ್ರಿ ಎದುರಿಸಲು ಅಕ್ಕಿನೇನಿ ಕುಟುಂಬದ ನಾಗಾರ್ಜುನಗೆ ಮಣೆ ಹಾಕಿದ್ದಾರೆ. ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ತೆಲುಗು ನಟ ನಾಗಾರ್ಜುನ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.‌ ಇದನ್ನೂ ಓದಿ:ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ- ಆಟೋ ಚಾಲಕ ದುರ್ಮರಣ

    2024ರ ಲೋಕಸಭಾ ಚುನಾವಣೆಗೆ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳು ಗೆಲ್ಲಲೇಬೇಕು. ಜನಸೇನಾ, ಟಿಡಿಪಿ ಮೈತ್ರಿಯನ್ನು ಸೋಲಿಸಲೇಬೇಕು ಎಂಬುದು ಜಗನ್ (Jagan) ಮಾಸ್ಟರ್ ಪ್ಲ್ಯಾನ್ ಆಗಿದೆ. ನಾಗಾರ್ಜುನ ಮೂಲಕ ಪವನ್ ಕಲ್ಯಾಣ್‌ಗೆ (Pawan Kalyan) ಠಕ್ಕರ್ ಕೊಡಲು ಜಗನ್ ಪ್ಲ್ಯಾನ್ ಮಾಡಿದ್ದಾರೆ.

    ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಅವರನ್ನು ಕಣಕ್ಕಿಳಿಸಲು ವೈಎಸ್‌ಆರ್ ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿ ಇದೆ. ಇದಕ್ಕೆ ನಾಗಾರ್ಜುನ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.