Tag: Nagarhole

  • ನಾಗರಹೊಳೆ ಕಾಡಲ್ಲಿ ಸಫಾರಿ: ಹುಲಿ ಸಿಗಲಿಲ್ಲ, ಬೇಜಾರಾಯ್ತು ಎಂದ ಯಶ್

    ನಾಗರಹೊಳೆ ಕಾಡಲ್ಲಿ ಸಫಾರಿ: ಹುಲಿ ಸಿಗಲಿಲ್ಲ, ಬೇಜಾರಾಯ್ತು ಎಂದ ಯಶ್

    ಸಿನಿಮಾ ಕೆಲಸಗಳ ಬ್ಯುಸಿ ನಡುವೆಯೂ ರಾಕಿಂಗ್ ಸ್ಟಾರ್ ಯಶ್ (Yash) ಕಾಡಿಗೆ ನುಗ್ಗಿದ್ದಾರೆ. ಮಕ್ಕಳಿಗೆ ಲೈವ್ ಆಗಿ ಕಾಡು ಪ್ರಾಣಿಗಳನ್ನು ತೋರಿಸಲು ಕುಟುಂಬ ಸಮೇತ ನಾಗರಹೊಳೆ (Nagarhole) ಕಾಡಿಗೆ ಬಂದಿದ್ದ ಅವರು, ಸತತ ಮೂರು ದಿನಗಳ ಕಾಲ ಸಫಾರಿ (Safari) ಮಾಡಿದ್ದಾರೆ. ನಾನಾ ಪ್ರಾಣಿಗಳನ್ನು ಕಣ್ತುಂಬಿ ಕೊಂಡ ಯಶ್ ಕುಟುಂಬ, ಹುಲಿ (Tiger) ಸಿಗದೇ ಹೋದ ಕಾರಣಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೋನಾದಿಂದಾಗಿ ಮೈಸೂರು ಕಡೆ ಪ್ರವಾಸ ಮಾಡಲು ಯಶ್ ಗೆ ಆಗಿರಲಿಲ್ಲವಂತೆ. ಹಾಗಾಗಿ ಇಬ್ಬರು ಮಕ್ಕಳು, ಪತ್ನಿ ರಾಧಿಕಾ ಪಂಡಿತ್ (Radhika Pandit) ಮತ್ತು ಅತ್ತೆ, ಮಾವನ ಜೊತೆ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಸುತ್ತ ಮುತ್ತಲಿನ ಸ್ಥಳಗಳನ್ನು ಮಕ್ಕಳಿಗೆ ತೋರಿಸಿದರು. ಅದರಲ್ಲೂ ಮಕ್ಕಳಿಗೆ ಇದು ಮೊದಲ ರಿಯಲ್ ಫಾರೆಸ್ಟ್ ಪ್ರವಾಸವಾಗಿದ್ದರಿಂದ ಆ ಸಂಭ್ರಮವನ್ನು ಹಂಚಿಕೊಂಡರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್, ‘ನಾವು ಮತ್ತು ಮಕ್ಕಳು ಕೂಡ ಸಫಾರಿ ಎಂಜಾಯ್ ಮಾಡಿದ್ರು. ಸಫಾರಿಯಲ್ಲಿ ಜಿಂಕೆ, ಕರಡಿ, ಆನೆ ಎಲ್ಲೂ ಕಂಡವು. ಹುಲಿಯೊಂದು ಸಿಗಲಿಲ್ಲ, ಬೇಜಾರಾಯ್ತು.ಇವತ್ತೂ ಸಫಾರಿ ಮಾಡಬೇಕಿತ್ತು, ಮಳೆ ಕಾರಣಕ್ಕೆ ಹೋಗಲಿಲ್ಲ. ಮುಂದೆ ಮತ್ತೆ ಸಫಾರಿ ಮಾಡಿ ನೋಡಿದ್ರಾಯ್ತು ಅಂತ ಬಂದೆವು’ ಎಂದಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ಸಫಾರಿ ಮುಗಿಸಿಕೊಂಡು ಕುಟುಂಬ ಸಮೇತ ಇಂದು ಯಶ್ ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು.

    ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.

  • ಲಾಕ್‍ಡೌನ್ ವೇಳೆ ಹೇಗಿದೆ ಕಾಡು- ಡ್ರೋನ್ ವೀಡಿಯೋ

    ಲಾಕ್‍ಡೌನ್ ವೇಳೆ ಹೇಗಿದೆ ಕಾಡು- ಡ್ರೋನ್ ವೀಡಿಯೋ

    ಮೈಸೂರು: ಲಾಕ್‍ಡೌನ್ ನಿಂದಾಗಿ ಕಾಡು ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಕಾಡಿನ ಇವತ್ತಿನ ಚಿತ್ರಣವನ್ನು ತೋರಿಸುವ ವಿನೂತನ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡಿದೆ.

    ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಯೂಟ್ಯೂಬ್ ಮೂಲಕ ಜನರಿಗೆ ಕಾಡನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ವೀಡಿಯೋದಲ್ಲಿ ಹಸಿರಿನಿಂದ ಕೂಡಿರುವ ನಾಗರಹೊಳೆ ಕಾಡು, ವನ್ಯಪ್ರಾಣಿಗಳ ದರ್ಶನವಾಗುತ್ತಿದೆ. ನವಿಲುಗಳ ನರ್ತನ, ಜಿಂಕೆ ಹಾರಾಟ, ಕರಡಿ, ವಿವಿಧ ಪಕ್ಷಿಗಳು, ಆನೆಗಳು ಸೇರಿದಂತೆ ವಿವಿಧ ವನ್ಯಜೀವಿಗಳನ್ನು ಸೆರೆ ಹಿಡಿಯಲಾಗಿದೆ.

    ಲಾಕ್‍ಡೌನ್ ನಲ್ಲಿ ಕಾಡು ಹೇಗಿದೆ ಎಂಬುದನ್ನು ಡ್ರೋನ್ ಮೂಲಕ ತೋರಿಸುವ ಪ್ರಯತ್ನ ಇದಾಗಿದೆ. ಸಫಾರಿ ಮಿಸ್ ಮಾಡಿಕೊಂಡವರಿಗೆ ಅದ್ಭುತವಾದ ವೀಡಿಯೋ ತಯಾರಿಸಿ ಬಿಡುಗಡೆ ಮಾಡಲಾಗಿದ್ದು, ಇಲಾಖೆಯ ಕೆಲಸಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

  • ಡಿ ಬಾಸ್ ಕ್ಯಾಮೆರಾ ಕಣ್ಣಲ್ಲಿ ಕರಿ ಚಿರತೆ ಸೆರೆ

    ಡಿ ಬಾಸ್ ಕ್ಯಾಮೆರಾ ಕಣ್ಣಲ್ಲಿ ಕರಿ ಚಿರತೆ ಸೆರೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆಯಲ್ಲಿ ಮೂರು ದಿನ ಸಫಾರಿ ನಡೆಸಿದ್ದು, ವೈಲ್ಡ್ ಲೈಫ್ ಫೋಟೋಗ್ರಫಿ ನಡೆಸಿದ್ದಾರೆ. ಈ ವೇಳೆ ಕರಿ ಚಿರತೆ ಸೇರಿದಂತೆ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ್ದಾರೆ.

    ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಡಿ ಬಾಸ್ ಸಫಾರಿ ನಡೆಸಿದ್ದು, ಈ ವೇಳೆ ಕರಿ ಚಿರತೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕರಿ ಚಿರತೆ ದಾಸನ ಕ್ಯಾಮೆರಾ ಕಣ್ಣಿಗೆ ಬಿದ್ದಿರಲಿಲ್ಲ. ಇದೀಗ ಸೆರೆ ಹಿಡಿದಿದ್ದು, ಇದರಿಂದಾಗಿ ಡಿ ಬಾಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಮೂರು ದಿನಗಳ ಕಾಲ ದರ್ಶನ್ ತಮ್ಮ ಸ್ನೇಹಿತರ ಜೊತೆ ನಾಗರಹೊಳೆಯಲ್ಲಿ ಭರ್ಜರಿ ಸಫಾರಿ ನಡೆಸಿದ್ದಾರೆ.

    ಸಫಾರಿ ವೇಳೆ ಮೂರು ಹುಲಿ, ಕರಿ ಚಿರತೆ, ಕಾಡು ನಾಯಿ, ಆನೆಗಳು ಕ್ಯಾಮರಾಕ್ಕೆ ಸೆರೆ ಸಿಕ್ಕಿವೆ. ಅದ್ಭುತ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ದರ್ಶನ್ ಸೆರೆ ಹಿಡಿದಿದ್ದಾರೆ. ಅದರಲ್ಲೂ ಕರಿ ಚಿರತೆ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿದ್ದಾರೆ. ಡಿ ಬಾಸ್ ತಮ್ಮ ಸ್ನೇಹಿತರ ಜೊತೆ ನಾಗರಹೊಳೆಯಲ್ಲಿ ಆಗಾಗ ಸಫಾರಿ ಮಾಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಹುಲಿಯ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು.

    ಕಾಡಿನ ದಾರಿಯಲ್ಲಿ ಹುಲಿ ಭರ್ಜರಿಯಾಗಿ ಘರ್ಜಿಸುತ್ತಿದ್ದ ವೇಳೆ ದರ್ಶನ್ ಚಿತ್ರಗಳನ್ನು ಸೆರೆ ಹಿಡಿದಿದ್ದರು. ವೈನ್ಯ ಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ದರ್ಶನ್, ತುಂಬಾ ಪ್ರೀತಿಸುತ್ತಾರೆ. ಹೀಗಾಗಿ ಆಗಾಗ ಸಫಾರಿ ಹೋಗುತ್ತಲೇ ಇರುತ್ತಾರೆ. ಅಲ್ಲದೆ ವೈಲ್ಡ್ ಲೈಫ್ ಫೋಟೋಗ್ರಫಿ ಸಹ ಅವರಿಗೆ ಎಲ್ಲಿಲ್ಲದ ಪ್ರೀತಿ ಎಂಬುದು ತಿಳಿದಿರುವ ವಿಚಾರವಾಗಿದೆ.

    ಶೂಟಿಂಗ್‍ನಿಂದ ಬಿಡುವು ಸಿಕ್ಕಾಗಲೆಲ್ಲ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್‍ನಲ್ಲೇ ಕಾಲ ಕಳೆಯುತ್ತಾರೆ. ಸಾಕು ಪ್ರಾಣಿಗಳು ಹಾಗೂ ಹಸುಗಳ ಜೊತೆಯೇ ಇರುತ್ತಾರೆ. ಅಲ್ಲದೆ ಸಮಯ ಸಿಕ್ಕಾಗಲೆಲ್ಲ ಅರಣ್ಯಕ್ಕೆ ತೆರಳಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಬಳಗದೊಂದಿಗೆ ಬೈಕ್‍ನಲ್ಲಿ ಲಾಂಗ್ ರೈಡ್ ಹೋಗಿದ್ದರು. ಇದೀಗ ನಾಗರಹೊಳೆಗೆ ತೆರಳಿದ್ದಾರೆ.

    ಕೆಲವು ದಿನಗಳ ಹಿಂದೆ ಕಿನ್ಯಾಡಿ ಕಾಡಿಗೆ ಹೋಗಿದ್ದ ದರ್ಶನ್, ಪ್ರಾಣಿ, ಪಕ್ಷಿಗಳ ಫೋಟೋವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದರು. ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬೀಡು ಬಿಟ್ಟು ವಿವಿಧ ರೀತಿಯ ಕಾಡು ಪ್ರಾಣಿಗಳ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಕ್ಯಾಮೆರಾ ಹೆಗಲಿಗೆ ಹಾಕಿಕೊಂಡು ಫೋಟೋ ತೆಗೆಯುತ್ತಾ ಸಫಾರಿಯನ್ನು ಎಂಜಾಯ್ ಮಾಡಿದ್ದಾರೆ. ದರ್ಶನ್ ಸಧ್ಯ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

  • ನಾಗರಹೊಳೆ ಅರಣ್ಯದಲ್ಲಿ ಆನೆ ದಾಳಿಗೆ ಮುಖ್ಯ ಅರಣ್ಯಾಧಿಕಾರಿ ಬಲಿ

    ನಾಗರಹೊಳೆ ಅರಣ್ಯದಲ್ಲಿ ಆನೆ ದಾಳಿಗೆ ಮುಖ್ಯ ಅರಣ್ಯಾಧಿಕಾರಿ ಬಲಿ

    ಮೈಸೂರು: ಆನೆ ದಾಳಿಗೆ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಮಣಿಕಂಠನ್ (45) ಮೃತಪಟ್ಟಿದ್ದಾರೆ.  ಹೆಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ನಾಗರಹೊಳೆ ಅರಣ್ಯ ಪ್ರದೇಶದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

    ಇಂದು ಫೈರ್ ಲೈನ್  ಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸರ್ವೆ ನಡೆಸುತ್ತಿದ್ದರು. ಸ್ವತಃ ಸರ್ವೆ ನಡೆಸಲು ಸಿಎಫ್ ಮಣಿಕಂಠನ್ ಕಾಡಿನೊಳಗೆ ನುಗ್ಗಿದ್ದರು. ಈ ವೇಳೆ ಏಕಾಏಕಿ ಆನೆಯೊಂದು ಬಂದು ದಾಳಿ ನಡೆಸಿದೆ. ತಕ್ಷಣವೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಣಿಕಂಠನ್ ಸಾವನ್ನಪ್ಪಿದ್ದಾರೆ.

    ತಮಿಳುನಾಡು ಮೂಲದ 2001 ಎಎಫ್‍ಎಸ್ ಬ್ಯಾಚ್ ಅಧಿಕಾರಿಯಾಗಿದ್ದ ಮಣಿಕಂಠನ್ ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷಗಳಿಂದ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕರಾಗಿದ್ದರು.

    ಮಣಿಕಂಠನ್ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಪಾರ್ಥಿವ ಶರೀರ ತರಲಾಗಿದೆ.

  • ಬಂಡೀಪುರದಲ್ಲಿ ಕಬ್ಬಿಣದ ಕಂಬಿಗಳನ್ನು ದಾಟಿ ಆನೆ ನಾಡಿಗೆ ಬರೋದನ್ನು ನೋಡಿ

    ಬಂಡೀಪುರದಲ್ಲಿ ಕಬ್ಬಿಣದ ಕಂಬಿಗಳನ್ನು ದಾಟಿ ಆನೆ ನಾಡಿಗೆ ಬರೋದನ್ನು ನೋಡಿ

    ಚಾಮರಾಜನಗರ:ಆನೆ ನಡೆದದ್ದೆ ದಾರಿ ಅಂತ ಹೇಳ್ತಾರೆ. ಆ ಮಾತಿಗೆ ಪುಷ್ಟಿ ನೀಡುವಂತಹ ದೃಶ್ಯವೊಂದು ಕ್ಯಾಮೆರಾ ದಲ್ಲಿ ಸೆರೆಯಾಗಿದೆ

    ಹೌದು ಆನೆಗಳು ಆಹಾರ ಅರಸಿ ನಾಡಿನ ಕಡೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವರದಿಯಾಗುತ್ತಿದೆ. ಕಾಡಾನೆಗಳು ಆಹಾರ ಅರಸಿ ನಾಡಿನತ್ತ ಬರುವುದನ್ನು ತಪ್ಪಿಸಲು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿ ಕಾಡಂಚಿನಲ್ಲಿ ರೈಲ್ವೇ ಕಂಬಿಗಳನ್ನು ಅಳವಡಿಸಲಾಗಿದೆ. ಆದರೆ ಆನೆಗಳು ಮಾತ್ರ ಕಬ್ಬಿಣದ ಕಂಬಿಯನ್ನು ದಾಟಿ ನಾಡಿನ ಕಡೆ ಧಾವಿಸಿ ಬರುತ್ತಿವೆ.

    ಬಂಡೀಪುರದ ಒಂದು ದೃಶ್ಯದಲ್ಲಿ ಆನೆ ರೈಲ್ವೆ ಕಂಬಿಯನ್ನು ದಾಟಲು ಶತ ಪ್ರಯತ್ನ ನಡೆಸುತ್ತಿರುವ ದೃಶ್ಯ ಸೆರೆಯಾಗಿದ್ದರೆ, ಮತ್ತೊಂದು ಚಿತ್ರಗಳಲ್ಲಿ ಆನೆ ರೈಲು ಕಂಬಿಗಳನ್ನು ಸುಲಭವಾಗಿ ದಾಟಿ ನಾಡಿನ ಕಡೆ ಬಂದಿರುವ ದೃಶ್ಯ ಸೆರೆಯಾಗಿದೆ.

     

    https://www.youtube.com/watch?v=wYq7yw565mk

     

     

  • ಈ ಆನೆಗೆ ಸೊಂಡಿಲಿಗಿಂತ ದಂತಗಳೇ ಉದ್ದ- ನಾಗರಹೊಳೆಯಲ್ಲಿ ಅಪರೂಪದ ಆನೆ ಪ್ರತ್ಯಕ್ಷ

    ಈ ಆನೆಗೆ ಸೊಂಡಿಲಿಗಿಂತ ದಂತಗಳೇ ಉದ್ದ- ನಾಗರಹೊಳೆಯಲ್ಲಿ ಅಪರೂಪದ ಆನೆ ಪ್ರತ್ಯಕ್ಷ

    ಮೈಸೂರು: ಸಾಮಾನ್ಯವಾಗಿ ಅನೆಗಳ ದಂತಗಳು ಸೊಂಡಿಲಿಗಿಂತ ಚಿಕ್ಕದಾಗಿರುತ್ತವೆ. ಕೆಲ ಪ್ರದೇಶಗಳಲ್ಲಿ ಸೊಂಡಿಲಿಗಿಂತ ದಂತಗಳು ಉದ್ದವಿರುವ ಆನೆಗಳನ್ನು ಕಾಣುತ್ತೇವೆ. ಆಶ್ಚರ್ಯ ಎನ್ನುವಂತೆ ಮೈಸೂರು ಜಿಲ್ಲೆಯ ಒಡಲಲ್ಲಿ ಇರುವ ನಾಗರಹೊಳೆಗೆ ಅರಣ್ಯ ಪ್ರದೇಶದ ಅಂತರಸಂತೆ ಪ್ರದೇಶದಲ್ಲಿ ಇಂತಹ ಅಪರೂಪದ ಆನೆ ಪತ್ತೆಯಾಗಿದೆ.

    ಸೊಂಡಿಲಿಗಿಂತ ದಂತ ಉದ್ದ ಇರುವ ಆನೆ ಪ್ರತ್ಯಕ್ಷವಾಗಿ ತನ್ನ ದರ್ಶನವನ್ನು ನೀಡಿದೆ. ಸುಮಾರು 57 ವರ್ಷ ವಯಸ್ಸಿನ ಈ ಆನೆಗೆ ಸುಮಾರು ಎರಡು ಮೀಟರ್ ಉದ್ದವಿರುವ ದಂತ ಬೆಳೆದಿದೆ. ಇದರಿಂದ ಆನೆಗೆ ಜೋರಾಗಿ ನಡೆಯುವುದಕ್ಕೂ ಆಗುತ್ತಿಲ್ಲ. ಅಲ್ಲದೆ ಆಹಾರವನ್ನು ಸಲೀಸಾಗಿ ತಿನ್ನುವುದಕ್ಕೆ ಆಗುತ್ತಿಲ್ಲ.

    ಈ ರೀತಿಯ ಆನೆಗಳು ಸುಮಾರು 70 ವರ್ಷಗಳು ಬದುಕುತ್ತವೆ. ಆ ವೇಳೆಗಾಗಲಿ ಈ ಆನೆಗೆ ದಂತ ಇನ್ನು ಉದ್ದ ಬೆಳೆದು ಆನೆಗೆ ಕಷ್ಟ ಹೆಚ್ಚಾಗಬಹುದು. ಒಂದು ವೇಳೆ ಈ ರೀತಿ ಆದರೆ ಕೇಂದ್ರದ ವನ್ಯ ಜೀವಿ ಸಂರಕ್ಷಣಾ ಅಧಿಕಾರಿಗಳ ಒಪ್ಪಿಗೆ ಮೇರೆಗೆ ದಂತವನ್ನು ಕತ್ತರಿಸಲು ಅರಣ್ಯ ಇಲಾಖೆ ಮುಂದಾಗುತ್ತದೆ.

    https://www.youtube.com/watch?v=0bSEfBg99Vc