Tag: nagaratna

  • ರಾಜ್ಯ ಮಹಿಳಾ ಆಯೋಗಕ್ಕೆ ದುನಿಯಾ ವಿಜಿ ಹಾಜರ್

    ರಾಜ್ಯ ಮಹಿಳಾ ಆಯೋಗಕ್ಕೆ ದುನಿಯಾ ವಿಜಿ ಹಾಜರ್

    ಬೆಂಗಳೂರು: ಕುಟುಂಬ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಶುಕ್ರವಾರ ಮಹಿಳಾ ಆಯೋಗಕ್ಕೆ ಹಾಜರಾಗಿದ್ದರು.

    ದುನಿಯಾ ವಿಜಯ್ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ನಿ ನಾಗರತ್ನ ದೂರು ದಾಖಲಿಸಿದ್ದರು. ದೂರು ದಾಖಲು ಮಾಡಿಕೊಂಡ ರಾಜ್ಯ ಮಹಿಳಾ ಆಯೋಗ ವಿಜಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಮಹಿಳಾ ಆಯೋಗಕ್ಕೆ ನಿನ್ನೆ ಹಾಜರಾಗಿದ್ದರು.

    ದುನಿಯಾ ವಿಜಿ ನನಗೆ ಡಿವೋರ್ಸ್ ನೀಡದೆ ಎರಡನೇ ಮದುವೆಯಾಗಿದ್ದಾನೆ ಎಂದು ಪತ್ನಿ ನಾಗರತ್ನ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ ವಿಜಯ್ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ವಿಚಾರಣೆಗೆ ಹಾಜರಾಗಿ ಉತ್ತರ ನೀಡುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಬಾಯಿ ವಿಜಿಗೆ ನೋಟಿಸ್ ನೀಡಿದ್ದರು.

    ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದುನಿಯಾ ವಿಜಿ, ಘಟನೆ ಸಂಬಂಧ ಮಹಿಳಾ ಆಯೋಗದವರು ಕೆಲವು ದಾಖಲೆಗಳನ್ನ ಕೇಳಿದ್ದರು. ನಾನು ಎಲ್ಲಾ ದಾಖಲೆಗಳನ್ನ ಸಲ್ಲಿಸುತ್ತೇನೆ. ಈ ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ವೈಯಕ್ತಿಕ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ತನಿಖೆಗೆ ಕರೆದರೆ ಸಹಕರಿಸುತ್ತೇನೆ ಎಂದು ಹೇಳಿದ್ದರು.

    ದುನಿಯಾ ವಿಜಿ ವಿರುದ್ಧ ಪತ್ನಿ ನಾಗರತ್ನ ದೂರನ್ನ ನೀಡಿದ್ದರು. ದೂರು ದಾಖಲಿಸಿಕೊಂಡು ವಿಜಿಗೆ ನೋಟಿಸ್ ನೀಡಿದ್ವಿ. ಹೀಗಾಗಿ ಅವರು ವಿಚಾರಣೆಗೆ ಹಾಜರಾಗಿದ್ದರು. ಸುಮಾರು 1 ಗಂಟೆಗಳ ಕಾಲ ವಿಜಿ ಅವರನ್ನು ವಿಚಾರಣೆ ನಡೆಸಿದ್ದೇನೆ. ವಿಜಿ ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಆದರೆ ಮಕ್ಕಳ ಜವಬ್ದಾರಿ ನನ್ನದು ಎಂದು ವಿಜಿ ಹೇಳಿರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಬಾಯಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುನಿಯಾ ವಿಜಿ ವಿರುದ್ಧ ಮಹಿಳಾ ಆಯೋಗ ಕೆಂಡಾಮಂಡಲ

    ದುನಿಯಾ ವಿಜಿ ವಿರುದ್ಧ ಮಹಿಳಾ ಆಯೋಗ ಕೆಂಡಾಮಂಡಲ

    ಬೆಂಗಳೂರು: ಸ್ಯಾಂಡಲ್ ವುಡ್ ಕರಿಚಿರತೆ ದುನಿಯಾ ವಿಜಯ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಕೆಂಡಾಮಂಡಲವಾಗಿದೆ.

    ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗದ್ದಕ್ಕೆ ಆಯೋಗ ವಿಜಯ್ ವಿರುದ್ಧ ಗರಂ ಆಗಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ವಾರದೊಳಗೆ ವಿಚಾರಣೆಗೆ ಹಾಜರಾಗಿ ಅಂತ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಜೀವನ ನಡೆಸಲು ನನಗೆ ವಿಜಯ್ ಹಣ ನೀಡುತ್ತಿಲ್ಲ. ಹೀಗಾಗಿ ಮಕ್ಕಳೊಂದಿಗೆ ಜೀವನ ನಡೆಸಲು ಸಾಕಷ್ಟು ತೊಂದರೆಯಾಗುತ್ತಿದೆ ಅಂತ ವಿಜಿ ವಿರುದ್ಧ ಆರೋಪ ಮಾಡಿ ಮೊದಲ ಪತ್ನಿ ನಾಗರತ್ನ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಆಯೋಗ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದೇ 17ರಂದು ವಿಚಾರಣೆಗೆ ಹಾಜರಾಗುವಂತೆ ವಿಜಿಗೆ ನೋಟಿಸ್ ನೀಡಲಾಗಿತ್ತು.

    ನೋಟೀಸ್ ಗೆ ಸ್ಪಂದಿಸಿದ ನಟ, ವಿಚಾರಣೆಗೆ ಹಾಜರಾಗುತ್ತೇನೆ. ಆದ್ರೆ ಫಿಲಂ ಶೂಟಿಂಗ್ ಇದ್ದ ಕಾರಣ ಒಂದು ವಾರ ಕಾಲಾವಕಾಶ ನೀಡಬೇಕು ಅಂತ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗ ಅದಕ್ಕೆ ಅನುವು ಮಾಡಿಕೊಟ್ಟಿತ್ತು. ಆದ್ರೆ ಇದೀಗ ಒಂದು ವಾರ ಕಳೆದ್ರೂ ದುನಿಯಾ ವಿಜಯ್ ವಿಚಾರಣೆಗೆ ಹಾಜರಾಗದೇ ಇದ್ದಿದ್ದರಿಂದ ವಿಜಿ ವಿರುದ್ಧ ಆಯೋಗ ಗರಂ ಆಗಿದೆ.

    ಅಲ್ಲದೇ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ವಿಜಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಮಹಿಳಾ ಆಯೋಗ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುನಿಯಾ ವಿಜಿಗೆ ಮತ್ತೆ ಸಂಕಷ್ಟ – ಆರೋಪ ಸಾಬೀತಾದ್ರೆ 7 ವರ್ಷ ಜೈಲು

    ದುನಿಯಾ ವಿಜಿಗೆ ಮತ್ತೆ ಸಂಕಷ್ಟ – ಆರೋಪ ಸಾಬೀತಾದ್ರೆ 7 ವರ್ಷ ಜೈಲು

    ಬೆಂಗಳೂರು: ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾದ ದುನಿಯಾ ವಿಜಿಗೆ ಈಗ ಸಂಕಷ್ಟ ಎದುರಾಗಿದೆ.

    ಕಾನೂನಿನ ಪ್ರಕಾರ ಮೊದಲ ಪತ್ನಿ ಬದುಕಿರುವಾಗಲೇ 2ನೇ ಮದುವೆ ಆಗುವಂತಿಲ್ಲ, ಅಲ್ಲದೇ ಎರಡನೇ ಪತ್ನಿ ಎಂದು ಘೋಷಣೆ ಮಾಡುವಂತೆಯೂ ಇಲ್ಲ. ಆದರೆ ನಟ ವಿಜಿ ಜಿಮ್ ಟ್ರೈನರ್ ಮೇಲೆ ಹಲ್ಲೆ ಹಾಗೂ ಕಿಡ್ನಾಪ್ ಪ್ರಕರಣದಲ್ಲಿ ಜೈಲಿನಲ್ಲಿರುವಾಗ ಎರಡನೇ ಹೆಂಡತಿಯ ಬಗ್ಗೆ ಪತ್ರ ಬರೆದಿದ್ದ ವಿಜಿ ಕೀರ್ತಿಗೌಡ ತನ್ನ 2ನೇ ಹೆಂಡತಿ ಅಂತ ಒಪ್ಪಿಕೊಂಡಿದ್ದರು.

    ಈ ಪತ್ರವನ್ನು ಆಧಾರವನ್ನು ಇಟ್ಟುಕೊಂಡು ಮೊದಲ ಪತ್ನಿ ನಾಗಲಕ್ಷಿ ಐಪಿಸಿ ಸೆಕ್ಷನ್ 494(ಪತ್ನಿ ಜೀವಂತ ಇರುವಾಗಲೇ ಮತ್ತೊಂದು ಮದುವೆ) ಅಡಿಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

    ತನ್ನ ಆರೋಪದ ಬಗ್ಗೆ ವಕೀಲರಿಗೆ ವಿಜಿ ವಿರುದ್ಧ ಎಲ್ಲಾ ದಾಖಲೆಗಳನ್ನು ನೀಡಿರೋ ನಾಗರತ್ನ, ಈ ವಾರವೇ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಆರೋಪ ಏನಾದರೂ ಸಾಬೀತಾದರೆ ಕನಿಷ್ಟ ಅಂದರೂ ವಿಜಿ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಂತಿಲ್ಲ ದುನಿಯಾ ವಿಜಿ ಫ್ಯಾಮಿಲಿ ವಾರ್ – ಮನೆಗಾಗಿ ಪತಿಯ ವಿರುದ್ಧ ಮತ್ತೆ ದೂರು!

    ನಿಂತಿಲ್ಲ ದುನಿಯಾ ವಿಜಿ ಫ್ಯಾಮಿಲಿ ವಾರ್ – ಮನೆಗಾಗಿ ಪತಿಯ ವಿರುದ್ಧ ಮತ್ತೆ ದೂರು!

    ಬೆಂಗಳೂರು: ದುನಿಯಾ ವಿಜಯ್ ಅವರು ಮೊದಲ ಪತ್ನಿ ನಾಗರತ್ನ ಮನೆಗಾಗಿ ತಮ್ಮ ಪತಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

    ನಾಗರತ್ನ ಮನೆಗಾಗಿ ವಿಜಿ ವಿರುದ್ಧ ದೂರು ನೀಡಲು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಲಿದ್ದಾರೆ. ನಾಗರತ್ನ ಅವರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿಯನ್ನು ಭೇಟಿಯಾಗಿ ತಮ್ಮ ಪತಿ ವಿಜಿ ವಿರುದ್ಧ ದೂರು ನೀಡಲಿದ್ದಾರೆ.

    ವಿಜಿ ತನಗೆ ಹೇಳದೇ ತಮ್ಮ ಮನೆಯನ್ನು ಸ್ನೇಹಿತ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರಿಗೆ ಮಾರಿದ್ದಾರೆ ಎಂದು ನಾಗರತ್ನ ಆರೋಪಿಸುತ್ತಿದ್ದಾರೆ. ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರೋ ದುನಿಯಾ ವಿಜಿ ಮನೆಯಿದ್ದು, ಈಗಾಗಲೇ ವಿಜಿ ತನ್ನ ಸ್ನೇಹಿತ ಸುಂದರ್ ಗೌಡಗೆ 4 ವರ್ಷದ ಹಿಂದೆ ಮನೆ ಮಾರಿದ್ದಾರೆ.

    ಸುಂದರ್ ಗೌಡಗೆ ವಿಜಿ ಮನೆ ಮಾರಿರುವ ವಿಚಾರ ತಿಳಿಯುತ್ತಿದ್ದಂತೆ ವಿಜಿ ವಿರುದ್ಧ ನಾಗರತ್ನ ಗರಂ ಆಗಿದ್ದಾರೆ. ನನ್ನ ಅನುಮತಿಯಿಲ್ಲದೆ ವಿಜಿ ಮನೆ ಮಾರಿದ್ದಾರೆ ಎಂದು ನಾಗರತ್ನ ಆರೋಪ ಮಾಡುತ್ತಿದ್ದಾರೆ. ನನಗೆ ಸರಿಯಾಗಿ ಜೀವನಾಂಶ ತಲುಪಿಲ್ಲ ಎಂದು ನಾಗರತ್ನ ಮಹಿಳಾ ಆಯೋಗದ ಮೋರೆ ಹೋಗಲು ಮುಂದಾಗಿದ್ದಾರೆ.

    ನಾಗರತ್ನ ಇಂದು ಮಧ್ಯಾಹ್ನ 12 ಗಂಟೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿ ಭೇಟಿ ಮಾಡಲಿದ್ದಾರೆ. ಈಗಾಗಲೇ ನಾಗಲಕ್ಷೀ ಬಾಯಿ ಅವರಲ್ಲಿ ಮೌಖಿಕವಾಗಿ ನಾಗರತ್ನ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುನಿಯಾ ವಿಜಿ ಪತ್ನಿ ನಾಗರತ್ನಗೆ ಬಿಗ್ ರಿಲೀಫ್

    ದುನಿಯಾ ವಿಜಿ ಪತ್ನಿ ನಾಗರತ್ನಗೆ ಬಿಗ್ ರಿಲೀಫ್

    ಬೆಂಗಳೂರು: ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ನಾಗರತ್ನ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ನಗರದ ಸೆಷನ್ಸ್ ನ್ಯಾಯಾಲಯ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದಿದೆ.

    ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ.5 ರಂದು ನಗರದ ಸಿಟಿ ಸಿವಿಲ್ ಕೋರ್ಟ್ ನಾಗರತ್ನಗೆ 50 ಸಾವಿರ ರೂ. ಬಾಂಡ್ ಷರತ್ತು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

    ಏನಿದು ಪ್ರಕರಣ?
    ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಬಳಿಕ ನಾಗರತ್ನ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದರು. ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸಿದ್ದರೂ ಬಂಧಿಸುವಲ್ಲಿ ವಿಫಲವಾಗಿದ್ದರು. ಕೀರ್ತಿಗೌಡ ಅವರು ತಮ್ಮ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ನಾಗರತ್ನ ಅವರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿತ್ತು. ಹಲ್ಲೆ ವಿಡಿಯೋ ಲಭ್ಯವಾಗುವುದಕ್ಕೂ ಮೊದಲು ಕೀರ್ತಿ ಅವರು ದೂರು ದಾಖಲಿಸಿದ್ದರು. ಆದರೆ ಆ ವೇಳೆ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಮಾತ್ರ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹೆಚ್ಚುವರಿಯಾಗಿ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಡಿಸಿಪಿ ಮುಂದೆ ಹಾಜರಾಗುವಂತೆ ದುನಿಯಾ ವಿಜಿಗೆ ನೋಟಿಸ್

    ಡಿಸಿಪಿ ಮುಂದೆ ಹಾಜರಾಗುವಂತೆ ದುನಿಯಾ ವಿಜಿಗೆ ನೋಟಿಸ್

    ಬೆಂಗಳೂರು: ನಟ ದುನಿಯಾ ವಿಜಿಗೆ ಜೈಲಿಗೆ ಹೋಗಿ ಬಂದ್ರೂ ಪೊಲೀಸ್ ವಿಚಾರಣೆಯ ಬಿಸಿ ಮಾತ್ರ ಕಡಿಮೆ ಆಗಿಲ್ಲ. ದುನಿಯಾ ವಿಜಿ ಮೇಲೆ ಗಿರಿ ನಗರ ಪೊಲೀಸರು ಹಾಕಿರುವ ಸಿಆರ್‌ಪಿಸಿ ಸೆಕ್ಷನ್ 107 ಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ದುನಿಯಾ ವಿಜಿಗೆ ನೋಟಿಸ್ ನೀಡಲಾಗಿದೆ. ಹೀಗಾಗಿ ವಿಜಯ್ ಇಂದು ದಕ್ಷಿಣ ವಿಭಾಗದ ಡಿಸಿಪಿ ಎದುರು ಹಾಜರಾಗಿ ಬಾಂಡ್ ನೀಡಿ ಹೇಳಿಕೆ ಕೊಡಬೇಕು.

    ನಟ ದುನಿಯಾ ವಿಜಿ ಕುಟುಂಬ ಹಾಗೂ ಹೊರಗಡೆ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ ಗಿರಿ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದರು. ಹೀಗಾಗಿ ಇಂದು ಪೊಲೀಸರ ಮುಂದೆ ಹಾಜರಾಗಬೇಕಿದೆ.

    ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಸಂಬಂಧ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ನಾಗರತ್ನ ಸದ್ಯಕ್ಕೆ ರಿಲ್ಯಾಕ್ಸ್ ಆಗುವ ಹಾಗಿಲ್ಲ. ಯಾಕಂದ್ರೆ ನಾಗರತ್ನ ಮೇಲೆ ಕೂಡ ಗಿರಿನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ನಾಗರತ್ನ ಕೂಡ ದಕ್ಷಿಣ ವಿಭಾಗದ ಡಿಸಿಪಿ ಎದಿರು ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಡಬೇಕು. ಇಷ್ಟು ದಿನ ನಾಪತ್ತೆಯಾಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಶೀಘ್ರದಲ್ಲೇ ಪೊಲೀಸರು ಅವರನ್ನು ಡಿಸಿಪಿ ಎದುರು ಹಾಜರಾಗಲು ನೋಟೀಸ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಂದೆ ವಿಜಿ ವಿರುದ್ಧವೇ ಮಹಿಳಾ ಆಯೋಗದ ಮೆಟ್ಟಿಲೇರಿದ ಮೋನಿಷಾ

    ತಂದೆ ವಿಜಿ ವಿರುದ್ಧವೇ ಮಹಿಳಾ ಆಯೋಗದ ಮೆಟ್ಟಿಲೇರಿದ ಮೋನಿಷಾ

    ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇದೀಗ ವಿಜಿ ಪುತ್ರಿ ಮೋನಿಷಾ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

    ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸಿ ಕೊಡಿ ಅಂತ ದುನಿಯಾ ವಿಜಿ ಎರಡನೇ ಮಗಳು ಮಕ್ಕಳು ಆಯೋಗಕ್ಕೆ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.

    ಇನ್ನೆರಡು ದಿನದಲ್ಲಿ ವಿಜಿಗೆ ಹಾಗೂ ನಾಗರತ್ನಗೆ ನೋಟಿಸ್ ಆಯೋಗ ನೀಡುವ ಸಾಧ್ಯತೆಯಿದೆ. ವಿಜಿ ಕುಟುಂಬದ ವೈಮನಸ್ಸಿನಿಂದ ಮಕ್ಕಳ ಬದುಕು ಮೂರಾಬಟ್ಟೆಯಾಗಲು ಬಿಡಲ್ಲ ಅಂತ ಆಯೋಗ ಹೇಳಿದೆ. ವಿಜಿ ಮಗಳ ಲಿಖಿತ ದೂರಿನನ್ವಯ ನೋಟಿಸ್ ನೀಡಿ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ, ಮಕ್ಕಳಿಗೆ ಆರ್ಥಿಕ ನೆರವಿನ ಬಗ್ಗೆ ಆಯೋಗ ಒಂದಿಷ್ಟು ಷರತ್ತು ವಿಧಿಸುವ ಸಾಧ್ಯತೆಗಳಿವೆ.

    ಕೀರ್ತಿ ಗೌಡ ಮೇಲೆ ಹಲ್ಲೆ ನಡೆದಿರುವ ಸಿಸಿಟಿವಿ ದೃಶ್ಯಾವಳಿ ಮಾಧ್ಯಮಗಳಿಗೆ ಸಿಗುತ್ತಿದ್ದಂತೆಯೇ ವಿಜಯ್ ಮೊದಲನೇ ಪತ್ನಿ ನಾಗರತ್ನ ಪರಾರಿಯಾಗಿದ್ದು ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊಸೂರು ಸುತ್ತಮುತ್ತ ಕಳೆದ ರಾತ್ರಿಯೂ ಗಿರಿನಗರ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ ನಾಗರತ್ನ ಸುಳಿವು ಮಾತ್ರ ಸಿಕ್ಕಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಪತ್ತೆಯಾಗಿರುವ ನಾಗರತ್ನಗೆ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್

    ನಾಪತ್ತೆಯಾಗಿರುವ ನಾಗರತ್ನಗೆ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್

    ಬೆಂಗಳೂರು: ದುನಿಯಾ ವಿಜಿ ಮೊದಲ ಪತ್ನಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ನಾಗರತ್ನಗೆ ಎಚ್ಚರಿಕೆ ನೀಡಿದ್ದಾರೆ.

    ನಾಗರತ್ನ ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾದ ದಿನದಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಒಂದು ವಾರದ ಒಳಗೆ ಉತ್ತರ ನೀಡಬೇಕೆಂದು ಸೂಚನೆ ನೀಡಿದ್ದೇವೆ ಅಂತ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ನಾಗರತ್ನ ನಾಪತ್ತೆ ಆಗಿದ್ದಾರೆ. ಅವರಿಗಾಗಿ ಗಿರಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಾಗರತ್ನ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಈಗಾಗಲೇ ನಾಗರತ್ನ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಅಲ್ಲದೇ ಇದು ಎರಡೂ ಕುಟುಂಬದ ಮಧ್ಯೆ ಫ್ಯಾಮಿಲಿ ಡಿಸ್ಪ್ಯೂಟ್. ಈಗಾಗಲೇ ಸಿಆರ್‍ಪಿಸಿ 107 ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದೀವಿ ಂದರು.

    ನಾಗರತ್ನ ಹಲ್ಲೆ ಮಾಡಿದ ಡಿವಿಆರ್ ಅನ್ನು ನೀರಲ್ಲಿ ಹಾಕಿದ್ದಾರೆ. ನಾವು ಈಗ ಟೆಕ್ನಿಕಲ್ ಸಪೋರ್ಟ್ ಪಡೆದು ವಿಡಿಯೋ ರಿಕವರಿ ಮಾಡಿದ್ದೇವೆ. ಸದ್ಯ ನಾಗರತ್ನ ವಿರುದ್ಧ ಐಪಿಸಿ 326 ಹಾಕಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇದೂವರೆಗೂ ಪತ್ತೆಯಾಗದ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ

    ಇದೂವರೆಗೂ ಪತ್ತೆಯಾಗದ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ

    ಬೆಂಗಳೂರು: ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮೊದಲ ಪತ್ನಿ ನಾಗರತ್ನ ಇಲ್ಲಿವರೆಗೂ ಪತ್ತೆಯಾಗಿಲ್ಲ. ಇವತ್ತಿಗೆ ಎರಡು ದಿನವಾದರೂ ನಾಗರತ್ನ ಪತ್ತೆಯಾಗದೇ ಇರೋದು ಗಿರಿನಗರ ಪೊಲೀಸರಿಗೆ ತಲೆನೋವಾಗಿದೆ.

    ನಾಗರತ್ನ ಎಲ್ಲಿದ್ದಾರೆ ಅಂತಾ ಪತ್ತೆಯಾದರೆ ಯಾವುದೇ ಕ್ಷಣದಲ್ಲೀ ಬಂಧಿಸುವ ಸಾಧ್ಯತೆಗಳಿವೆ. ನಾಗರತ್ನ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಬಳಿಕ ನಾಗರತ್ನ ಪತ್ತೆಯಾಗುವ ಮುನ್ಸೂಚನೆಗಳು ಹೆಚ್ಚಿವೆ.

    ಇತ್ತ ಸೋಮವಾರ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಗಲಾಟೆ ನಡೆದ ವೇಳೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ವಿಜಯ್, ಬಳಿಕ ಸಂಧಾನ ನಡೆದ ಪರಿಣಾಮ ಪತ್ನಿ ನಾಗರತ್ನ ಅವರಿಗೆ ನೀಡಬೇಕಾದ ಆಸ್ತಿಯನ್ನು ನೀಡಿದ್ದರು. ಅಲ್ಲದೇ ತಮ್ಮ ಮಕ್ಕಳ ಹೆಸರಿನಲ್ಲೂ ಆಸ್ತಿಯನ್ನು ನೀಡಿದ್ದರು.

    ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಘಟನೆಗಳಿಂದ ಬೇಸತ್ತಿರುವ ವಿಜಯ್ ಅವರು ಸದ್ಯ ಕಾನೂನಿನ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯಲು ಕಾರಣವನ್ನು ನೀಡಬೇಕಾಗುತ್ತದೆ. ಇದಕ್ಕೆ ಪತ್ನಿ ನಾಗರತ್ನ ಅವರ ಕೌರ್ಯ ಕಾರಣ ನೀಡಿದ್ದಾರೆ.

    ಕೀರ್ತಿ ಗೌಡ ಅವರ ಮೇಲಿನ ಹಲ್ಲೆ ವಿಡಿಯೋ ಬಿಡುಗಡೆಯಾಗುತ್ತಿದಂತೆ ನಾಗರತ್ನ ಅವರು ನಾಪತ್ತೆಯಾಗಿದ್ದಾರೆ. ಕೀರ್ತಿ ಅವರ ಹಲ್ಲೆ ವಿರುದ್ಧ ಸದ್ಯ ನಾಗರತ್ನ ಅವರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಕೀರ್ತಿ ತಮ್ಮ ದೂರಿನಲ್ಲಿ ವಿಜಯ್ ಅವರ ಪುತ್ರಿಯರ ಮೇಲಿನ ಹೆಸರನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಚ್ಛೇದನ ಅರ್ಜಿ ಸಲ್ಲಿಸಿದ್ದು ಏಕೆ: ಸ್ಪಷ್ಟನೆ ಕೊಟ್ಟ ದುನಿಯಾ ವಿಜಿ

    ವಿಚ್ಛೇದನ ಅರ್ಜಿ ಸಲ್ಲಿಸಿದ್ದು ಏಕೆ: ಸ್ಪಷ್ಟನೆ ಕೊಟ್ಟ ದುನಿಯಾ ವಿಜಿ

    ಬೆಂಗಳೂರು: ಈ ಮೊದಲೇ ನಾನು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ ವಕೀಲರ ಮುಂದೆ ಒಪ್ಪಂದ ಆಗಿದ್ದ ಕಾರಣ ನಾನು 2 ವರ್ಷ ಸುಮ್ಮನೆ ಇದ್ದೆ. ಶನಿ ಕಾಟ ಇದ್ರೂ ಪಾರಾಗ್ತಾರೆ, ಆದರೆ ಹೆಂಡತಿ ಕಾಟದಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ನಟ ವಿಜಯ್ ಹೇಳಿದ್ದಾರೆ.

    ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಕುರಿತು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅವರು, ನಾನು ಎಂದು ಶಾಂತಿ ಭಂಗ ಮಾಡಿಲ್ಲ. ಆಕೆಯೇ ನನಗೆ ಶಾಂತಿ ಇಲ್ಲದಂತೆ ಮಾಡಿದ್ದಾರೆ. ನಾನು ಏನು ತಪ್ಪು ಮಾಡಿಲ್ಲ. ಆದರೆ ಜನತೆಗೆ ಸುಳ್ಳು ಹೇಳಿಕೆ ನೀಡಿ ನನ್ನ ಹೆಸರು ಹಾಳು ಮಾಡಲು ಯತ್ನಿಸಿದ್ದು ನನಗೆ ಬೇಸರ ತಂದಿತ್ತು ಎಂದು ಹೇಳಿದರು.

    2 ವರ್ಷಗಳ ಕಾಲ ಎಷ್ಟೇ ನೋವು ನೀಡಿದರೂ ಸಹನೆಯಿಂದ ಇದ್ದೆ. ಆದರೆ ಈಗ ಎಲ್ಲದಕ್ಕೂ ಕೊನೆಗಾಣಿಸಬೇಕೆಂದು ವಿಡಿಯೋ ನೀಡಿ ಪೂರ್ಣ ವಿರಾಮ ಹಾಕಿದ್ದೇನೆ. ನನ್ನ ಮೇಲೆ ಇಲ್ಲ ಸಲ್ಲದ ನಕಲಿ ಎಫ್‍ಐಆರ್ ಮಾಡಿದ್ದರು. ಅದರೂ ಸುಮ್ಮನೆ ಇದ್ದೆ. ಇದನ್ನು ಸಹಿಸಲು ಸಾಧ್ಯವಾಗದೇ ಆಕೆ ಮತ್ತೆ ಇಷ್ಟೆಲ್ಲಾ ಮಾಡಿದ್ದಾರೆ. ನನ್ನ ತಾಯಿಯ ಮೇಲೂ 2 ಬಾರಿ ಹಲ್ಲೆ ನಡೆದಿತ್ತು, ಆದರೆ ನಾನು ಗೌರವಕ್ಕೆ ಅಂಜಿ ಮಾತನಾಡಿರಲಿಲ್ಲ ಎಂದು ತಿಳಿಸಿದರು.

    ನನ್ನ ಅರ್ಥ ಬದುಕನ್ನೆ ಆಕೆ ಮುಗಿಸಲು ಯತ್ನ ಮಾಡಿದ್ದಾಳೆ, ಇಷ್ಟು ಕಷ್ಟ ಅನುಭವಿಸಿದಕ್ಕೆ ಕೀರ್ತಿ ನನಗೆ ಸಿಕ್ಕಿದ್ದು ಅದೃಷ್ಟ. ದೇವರು ನನಗೆ ಕೀರ್ತಿಯನ್ನು ನೀಡಿದ್ದಾರೆ. ಆದರೆ ನನಗೆ ಈಗಲೂ ನೋವು ಇದೆ. ನನ್ನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾರೆ. ನನ್ನ ವಿರುದ್ಧವೇ ಮಕ್ಕಳು ದೂರು ನೀಡುದಂತೆ ಮಾಡಿದ್ದಾರೆ ಬೇಸರ ವ್ಯಕ್ತಪಡಿಸಿದರು.

    ನಾನು ಜನರಿಗೆ ಸ್ಪಷ್ಟನೆ ನೀಡಬೇಕಿದೆ. ನನ್ನ ಮಕ್ಕಳ ಭವಿಷ್ಯ ನೋಡಿ ಸುಮ್ಮನೆ ಕುಳಿತ್ತಿದ್ದೆ. ಆದರೆ ಇನ್ನು ಏನು ಮಾಡಲು ಸಾಧ್ಯವಿಲ್ಲ. ಮಾಧ್ಯಮಗಳ ಮುಂದೇ ನನ್ನ ವಿರುದ್ಧ ಹೇಳಿಕೆ ನೀಡಿ ಅವಮಾನ ಮಾಡಿದ್ದರು. ಈಗ ನನಗೆ ಸತ್ಯ ತಿಳಿದಿದೆ. ಜನರಿಗೂ ಆಕೆಯ ವ್ಯಕ್ತಿತ್ವ ತಿಳಿದಿದೆ ಅಷ್ಟು ಸಾಕು. ಇನ್ನಾದರು ಆಕೆಗೆ ಒಳ್ಳೆಯದು ಮಾಡಲಿ, ಆದರೆ ನಾನು ಕಾನೂನು ಹೋರಾಟ ಮಾತ್ರ ಮುಂದುವರಿಸುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv