Tag: Nagarathna

  • ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಬೆಂಗಳೂರು: ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮೋನಿಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ನಾಗರತ್ನ ಮನೆಯಲ್ಲಿ ಇಲ್ಲದ ಕಾರಣ ಅವರ ಮಗಳು ಮೋನಿಕಾರನ್ನು ವಶಕ್ಕೆ ಪಡೆದಿದ್ದರು. ಆದ್ದರಿಂದ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಗಿರಿನಗರ ಪೊಲೀಸ್ ಠಾಣೆಯ ಬಳಿ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಬ್ಬರು ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

    ಕೀರ್ತಿಗೌಡ ಅವರು ಮಾತನಾಡಿ, ಏನೇ ಪರಿಸ್ಥಿತಿ ಇರಬಹುದು ಇದೆಲ್ಲವನ್ನು ಮೀರಿ, ಯಾವುದೇ ಹೆಣ್ಣಿಗಾದರೂ ಈ ರೀತಿ ಹಲ್ಲೆ ಮಾಡಬಾದರು ಎಂದು ಮೋನಿಕಾ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಅವರ ತಾಯಿ ಮಾಡಿದ ತಪ್ಪಿಗೆ, ಅಷ್ಟು ಚಿಕ್ಕ ಹುಡುಗಿಗೆ ಶಿಕ್ಷೆಯಾಗುವುದು ಬೇಡ. ಇಷ್ಟೆಲ್ಲಾ ನಡೆದಿದ್ದಕ್ಕೆ ಬೇಜಾರಿದೆ. 2-3 ವರ್ಷದಿಂದ ಒಟ್ಟಿಗೆ ಇದ್ದೆವು. ಆದರೆ ನಮ್ಮ ಮೇಲೆ ಹೊಡೆಸುವಷ್ಟು ದ್ವೇಷ ಇದೆ ಅಂತ ಗೊತ್ತಿರಲಿಲ್ಲ. ಈಗ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿ ಗಳಗಳನೇ ಅಳುತ್ತಾ ಹೋಗಿದ್ದಾರೆ.

    ಈ ವೇಳೆ ಮಾತನಾಡಿದ ವಿಜಿ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ಅವರು ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದರೆ. ಆದರೆ ದೂರಿನಲ್ಲಿ ಹೆಸರು ಕೈಬಿಟ್ಟರು ಪೊಲೀಸರು, ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H0T715sdeFM

  • ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ಬೆಂಗಳೂರು: ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಈ ಘಟನೆಯ ಪ್ರತ್ಯಕ್ಷದರ್ಶಿ ಮಂಜು ಅವರು ಸಂಪೂರ್ಣ ವಿವರವನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಮಂಜು ಅವರು, ನಾಗರತ್ನ ಹಾಗೂ ಮಕ್ಕಳು ಕಾನೂನಿನ ದಾರಿ ತಪ್ಪಿಸಿ ಅವರಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಯಾರೋ ಕಾಣದ ಕೈ ಇಲ್ಲಿ ಆಟ ಆಡುತ್ತಿದೆ. ಈ ಮೂಲಕ ನಾನು ಎಸ್‍ಪಿ ಅಣ್ಣಾಮಲೈ ಅವರಿಗೆ ಕೈ ಮುಗಿದು, ಎಸ್‍ಪಿ ಅಣ್ಣಾಮಲೈ ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ನಾನು ನಿಮ್ಮ ಅಭಿಮಾನಿ ಸರ್, ಚಿಕ್ಕಮಗಳೂರಿನಲ್ಲಿ ಸಿಂಗಂ ಎಂದು ಹೇಳಿದ್ದಾರೆ. ಇಂತಹವರು ನಮ್ಮ ಬೆಂಗಳೂರಿಗೆ ಬಂದಿದ್ದಾರೆ. ನಾಗರತ್ನ ಅವರಿಂದ ನಮಗೆ ನ್ಯಾಯ ಕೊಡಿಸಬೇಕು. ಇಲ್ಲವೆಂದರೆ ನಿಮ್ಮನ್ನು ಫಾಲೋ ಮಾಡುತ್ತಿರುವ ನಮಗೆ ಅನ್ಯಾಯ ಮಾಡಿದ ರೀತಿ ಆಗುತ್ತದೆ. ನಿಮ್ಮಿಂದ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ, ಭರವಸೆ ಇದೆ. ಶೀಘ್ರವೇ ನಾಗರತ್ನ ಅವರನ್ನು ಹಿಡಿಯಿರಿ. ಒಂದು ವೇಳೆ ಅವರನ್ನು ಬಂಧಿಸಿಲ್ಲ ಎಂದರೆ ನಾವು ಧರಣಿ ಮಾಡುತ್ತೇವೆ. ದುನಿಯಾ ವಿಜಯ್ ಬಗ್ಗೆ ಎಲ್ಲರಿಗೂ ಗೊತ್ತು. ನಿಮ್ಮ ಮೇಲೆ ತುಂಬಾ ಗೌರವಿದೆ. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

    ನಡೆದ ಘಟನೆಯೇನು?:
    ಮೊದಲೇ ಮಗಳು ಮೊನಿಕಾ ಬಂದು ಅಮ್ಮನಿಗೆ ನೇರವಾಗಿ ಬರುವಂತೆ ದಾರಿ ಕೊಟ್ಟು ಹೋಗಿದ್ದರು. ನಾವು ಊಹಿಸಿರಲಿಲ್ಲ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ. ಇಷ್ಟು ಸಣ್ಣ ಹುಡುಗಿ ತನ್ನ ತಂದೆಯ ವಿರುದ್ಧ ಮಾಡುತ್ತೀನಿ ಎಂದು ಯೋಚನೆಯನ್ನೂ ಮಾಡದೇ ಕ್ರಿಮಿನಲ್ ಪ್ಲ್ಯಾನ್ ಮಾಡಿದ್ದಾರೆ. ಹಲ್ಲೆ ಮಾಡುವ ಮೊದಲೇ ಅಮ್ಮನ ಜೊತೆ ಮಾತನಾಡಿ ಇಬ್ಬರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಲ್ಲೆ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇವರು ಈಗ ಮಾತ್ರವಲ್ಲ ನಿರಂತರವಾಗಿ ದುನಿಯಾ ವಿಜಿ ಅವರಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಎಲ್ಲರ ಮುಂದೇ ಇವರು ನಾನು ಮೊದಲನೇ ಹೆಂಡತಿ ಎಂದು ಸಿಂಪತಿ ಪಡೆಯುತ್ತಿದ್ದಾರೆ. ಮನೆಗೆ ಬಂದಾಕ್ಷಣ ಅವರು ಅವಾಚ್ಯ ಪದಗಳಿಂದ ಬೈದಿದ್ದಾರೆ. ಆಗ ಬೈಗುಳವನ್ನು ನಾವು ಹೇಳಲು ಸಾಧ್ಯವಿಲ್ಲ ಅಷ್ಟು ಅಸಭ್ಯವಾಗಿತ್ತು. ಅವರು ಮಾಡುವ ಸುಳ್ಳುಗಳು. ಈ ಸುಳ್ಳು ಆರೋಪದಿಂದ ನಮಗೆ ತುಂಬಾ ನೋವಾಗಿದೆ. ಅದಕ್ಕೆ ಈಗ ಮಾತನಾಡಲು ಧೈರ್ಯವಾಗಿ ಮಾಧ್ಯಮಗಳ ಮುಂದೇ ಬಂದಿದ್ದೇನೆ ಎಂದ್ರು.

    ದುನಿಯಾ ವಿಜಿ ಅವರು ಮಕ್ಕಳನ್ನು ತುಂಬಾ ಪ್ರೀತಿ ಮಾಡುತ್ತಾರೆ. ಆದರೆ ಮಗಳು ನಮ್ಮ ಮುಂದೇ ಸಿಸಿಟಿವಿಯನ್ನ ತೆಗೆದಿದ್ದಾರೆ. ಆದರೆ ನಾವು ಏನು ಮಾತನಾಡಲು ಆಗಲಿಲ್ಲ. ಪ್ರತಿದಿನ ಮಗಳು ಮೊನಿಕಾಳನ್ನು ನೋಡಿ ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು ಎಂಬಂತೆ ಇದ್ದರು. ಈಗ ನೇರವಾಗಿ ನೋಡಿದ ಮೇಲೆ ಅವರ ಬಣ್ಣ ಬಯಲಾಗಿದೆ. ಸ್ವಲ್ಪ ಹೊತ್ತು ಹಲ್ಲೆ ಮಾಡಿದ ಬಳಿಕ ಮಗಳು ನೀರು ಕೊಡುತ್ತಾಳೆ. ಬಳಿಕ ಮತ್ತೆ ಅವರ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಯ ಮೇಲೆ ಪ್ರೀತಿ ಇಲ್ಲ. ಅವರಿಗೆ ಶಿಕ್ಷೆ ಕೊಡಬೇಕು ಎಂಬ ಉದ್ದೇಶ ಮಾತ್ರವಿದೆ ಎಂದು ಮಂಜು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI