Tag: Nagarapanchami

  • ನಾಗರಪಂಚಮಿ ಹಬ್ಬ ಹೆಣ್ಣುಮಕ್ಕಳಿಗೆ ವಿಶೇಷ ಯಾಕೆ?

    ನಾಗರಪಂಚಮಿ ಹಬ್ಬ ಹೆಣ್ಣುಮಕ್ಕಳಿಗೆ ವಿಶೇಷ ಯಾಕೆ?

    ಇಂದು ನಾಗರಪಂಚಮಿ (Nagarapanchami). ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಾಗ ದೇವನಿಗೆ ಹಾಲೆರೆಯುವ ಮೂಲಕ ನಾಡಿನಾದ್ಯಂತ ಸುಖ-ಸಮೃದ್ಧಿಯನ್ನು ಬೆಳಗಿಸಿಕೊಡುವಂತೆ ಪ್ರಾರ್ಥಿಸಲಾಗುತ್ತಿದೆ. ಅಂತೆಯೇ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬವೆಂದೂ ಕರೆಯುತ್ತಾರೆ. ಹಾಗಾದ್ರೆ ನಾಗರಪಂಚಮಿಗೂ ಹೆಣ್ಣು ಮಕ್ಕಳಿಗೂ ಇರುವ ಸಂಬಂಧವೇನು..? ಈ ಹಬ್ಬ ಅಣ್ಣ-ತಂಗಿಯರಿಗೆ ಯಾಕೆ ವಿಶೇಷ ಎಂಬುದನ್ನು ಮುಂದೆ ಓದಿ..

    ಸ್ಕಂದ ಪುರಾಣದಲ್ಲಿ ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳುತ್ತಾನೆ. ಆಗ ಆತ ಒಂದು ಕಥೆಯನ್ನು ಹೇಳುತ್ತಾನೆ. ಇದನ್ನೂ ಓದಿ: Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

    ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ ಓರ್ವ ಹೆಣ್ಣು ಹಾಗೂ 8 ಮಂದಿ ಗಂಡು ಮಕ್ಕಳಿದ್ದರು. ಒಂದು ದಿನ ಗರುಡನಿಂದ ಹೆದರಿದ್ದ ನಾಗರವೊಂದು ಈ ಹೆಣ್ಣುಮಗಳ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಕೂಡಲೇ ಈಕೆ ಭಕ್ತಿಯಿಂದ ನಾಗನಿಗೆ ಹಾಲು, ಫಲವಸ್ತುಗಳನ್ನು ಇಟ್ಟು ಸಾಕುತ್ತಾಳೆ. ಹೀಗೆ ಸಾಕಿ-ಸಲಹಿದ ಹೆಣ್ಣು ಮಗಳಿಗೆ ನಾಗನು ಪ್ರತಿದಿನ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರುವಾಗ ಒಂದು ದಿನ 8 ಮಂದಿ ಗಂಡು ಮಕ್ಕಳಲ್ಲಿ ಓರ್ವ ನನಗೆ ಚಿನ್ನ ಬೇಕು ಎಂದು ನಾಗರಾಜನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ.

    ಇದರಿಂದ ಕೋಪಗೊಂಡ ನಾಗಪ್ಪ, ಈತನ ಜೊತೆ ಉಳಿದ 7 ಮಂದಿಯನ್ನೂ ಕೊಂದು ಹೊರಟು ಹೋಗುತ್ತದೆ. ಇತ್ತ ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣವೆಂದು ಆಕೆ ದೇವರ ಎದುರಿನಲ್ಲಿಯೇ ಶಿರಚ್ಛೇದನಕ್ಕೆ ಮುಂದಾಗುತ್ತಾಳೆ. ಈ ವೇಳೆ ನಾರಾಯಣ ದೇವ ಪ್ರತ್ಯಕ್ಷವಾಗಿ ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಈ ದಿನವನ್ನೇ ಇಂದು ನಾವು ನಾಗರ ಪಂಚಮಿ ಹಬ್ಬವಾಗಿ ಆಚರಿಸುತ್ತೇವೆ. ಈ ಹಿನ್ನೆಲೆಯಿಂದಾಗಿ ನಾಗರಪಂಚಮಿ ಹೆಣ್ಣುಮಕ್ಕಳಿಗೆ ವಿಶೇಷವೂ ಆಗಿದೆ. ಇದನ್ನೂ ಓದಿ: Nagara Panchami: ಕರ್ನಾಟಕದ 10 ಪುಣ್ಯ ನಾಗಕ್ಷೇತ್ರ

    ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ, ಅಣ್ಣ ಬರಲಿಲ್ಲಾ ಕರಿಯಾಕ ಅಂತ ಜಾನಪದ ಗೀತೆಯಿದೆ. ಉತ್ತರ ಕರ್ನಾಟಕ ಭಾಗದ ಹಬ್ಬಗಳ ಹೆಬ್ಬಾಗಿಲಾಗಿರುವ ಶ್ರಾವಣ ಮಾಸದಲ್ಲಿ ಆಚರಿಸುವ ಬಹು ದೊಡ್ಡ ಹಬ್ಬ ಇದು. ಈ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಗಳಲ್ಲಿ ನಾಗರಪಂಚಮಿ ಆರಾಧಿಸಿ, ಸಾರ್ವಜನಿಕವಾಗಿ ಬೇಡ: ಉಡುಪಿ ಡಿಸಿ

    ಮನೆಗಳಲ್ಲಿ ನಾಗರಪಂಚಮಿ ಆರಾಧಿಸಿ, ಸಾರ್ವಜನಿಕವಾಗಿ ಬೇಡ: ಉಡುಪಿ ಡಿಸಿ

    – ನನ್ನ ಹೆಸರಿನಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ

    ಉಡುಪಿ: ಶನಿವಾರ ನಾಗರ ಪಂಚಮಿ ಹಬ್ಬ. ಉಡುಪಿ ಜಿಲ್ಲೆಯಲ್ಲಿ ಸಾಮೂಹಿಕ ನಾಗರಪಂಚಮಿಗೆ ಜಿಲ್ಲೆಯಲ್ಲಿ ಅವಕಾಶ ಇಲ್ಲ. ನಾಗಾರಾಧನೆ ಪೂಜೆ ಮಾಡಬಾರದು ಎಂದು ನಾನು ಹೇಳಿಲ್ಲ. ಮನೆಗಳಲ್ಲಿ ನಾಗಾರಾಧನೆ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹೆಸರಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಉಡುಪಿಯಲ್ಲಿ ನಾಗಪೂಜೆಗೆ ಅವಕಾಶ ಇಲ್ಲವೆಂಬ ಯಾರೂ ಸಂದೇಶ ರವಾನೆ ಮಾಡಬೇಡಿ ಎಂದರು.

    ಕೊರೊನಾ ಕಾಲದಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು. ಅವರವರ ಮನೆಯಲ್ಲಿ ನಾಗನ ಕಲ್ಲಿಗೆ ಹಾಲು ಎರೆಯಲು ಅಡ್ಡಿಯಿಲ್ಲ. ಮನೆಯಲ್ಲಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ. ಎಲ್ಲರಿಗೂ ನಾಗರಪಂಚಮಿ ಶುಭಾಶಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಶುಭ ಹಾರೈಸಿದ್ದಾರೆ.