Tag: Nagaraj yadav

  • ಬಿಜೆಪಿ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ತನಿಖೆ ಮಾಡಿ: ನಾಗರಾಜ್ ಯಾದವ್

    ಬಿಜೆಪಿ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ತನಿಖೆ ಮಾಡಿ: ನಾಗರಾಜ್ ಯಾದವ್

    ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೊಡ್ಡ ಅಕ್ರಮವಾಗಿದೆ. ಬಿಜೆಪಿ ಅವಧಿಯಲ್ಲಿ ಅಕ್ರಮ ಆಗಿದ್ದು, ತನಿಖೆ ಮಾಡಿಸುವಂತೆ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ (Nagaraj Yadav) ಆಗ್ರಹ ಮಾಡಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ನಡೆದಿದೆ. ಸಚಿವರು ಜನವರಿಯಲ್ಲಿ ಸಭೆ ಮಾಡಿದ್ರು. ಅ ಸಭೆಯಲ್ಲಿ ಅಕ್ರಮ ಆಗಿದೆ ಅಂತ ಹೇಳಿದ್ದಾರೆ. ಇದಕ್ಕಾಗಿ ಒಂದು ಕಮಿಟಿ ರಚನೆ ಮಾಡೋದಾಗಿ ಹೇಳಿದ್ದಾರೆ. ಪ್ರತಿ ಸ್ಮಾರ್ಟ್ ಸಿಟಿಗೆ ಒಂದು ಸಾವಿರ ಕೋಟಿ ಹಣ ಖರ್ಚು ಮಾಡ್ತಾರೆ. ಈ ಯೋಜನೆಯಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು. ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಅಕ್ರಮವಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದರು. ಬಿಜೆಪಿ ಅವಧಿಯಲ್ಲಿ ಅಕ್ರಮವಾಗಿದೆ‌. ಈ ಬಗ್ಗೆ ತನಿಖೆ ಆಗಬೇಕು. ಅರ್ಧ ಗಂಟೆಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಕೇಳಿದರು. ಇದನ್ನೂ ಓದಿ: ನಿಮಗೂ ವಯಸ್ಸಾಗಿದೆ, ಅಧ್ಯಕ್ಷರ ಅವಧಿ ಮುಗಿಯೋದ್ರಲ್ಲಿ ದಲಿತ ಸಿಎಂ ಮಾಡಿ – ಖರ್ಗೆಗೆ ಕಾರಜೋಳ ಸವಾಲ್

    ಇದಕ್ಕೆ ಸಚಿವ ಭೈರತಿ ಸುರೇಶ್ ಉತ್ತರ ನೀಡಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಯಾವುದೇ ಅಕ್ರಮವಾಗಿಲ್ಲ. 7 ನಗರಗಳ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ-ರಾಜ್ಯ ಸರ್ಕಾರದಿಂದ ಒಟ್ಟು 6854.5 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ 6472.08 ಕೋಟಿ ಖರ್ಚಾಗಿದೆ ಎಂದು ಲಿಖಿತ ಉತ್ತರ ಕೊಟ್ಟರು.

    ಪ್ರಶ್ನೆ ಕೇಳಿದಾಗ ನಾಗರಾಜ್ ಯಾದವ್ ಏರುಧ್ವನಿಯಲ್ಲಿ ಮಾತಾಡುತ್ತಿದ್ದರಿಂದ, ಸಭಾಪತಿ ಮಾತನ್ನ ಕೇಳದ ಹಿನ್ನೆಲೆ ಸಚಿವರು ಉತ್ತರ ಕೊಡಲು ಬಿಡದೇ ಅರ್ಧ ಗಂಟೆ ಚರ್ಚೆಗೆ ಕೊಡೋದಾಗಿ ಸಭಾಪತಿಗಳು ತಿಳಿಸಿದರು. ಇದನ್ನೂ ಓದಿ: ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ – ಸುರೇಶ್ ಬಾಬು ಕಿಡಿ

  • ವಿಧಾನಪರಿಷತ್‍ಗೆ ಕಾಂಗ್ರೆಸ್‍ನಿಂದ ಅಚ್ಚರಿಯ ಆಯ್ಕೆ – ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಣಕ್ಕೆ

    ವಿಧಾನಪರಿಷತ್‍ಗೆ ಕಾಂಗ್ರೆಸ್‍ನಿಂದ ಅಚ್ಚರಿಯ ಆಯ್ಕೆ – ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಣಕ್ಕೆ

    ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

    ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಮೂಲಕ ನಾಳೆ ನಡೆಯಲಿರುವ ನಾಮಪತ್ರ ಸಲ್ಲಿಕೆ ಕುತೂಹಲಕ್ಕೆ ತೆರೆ ಎಳೆದಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

    ಹಲವು ದಿನಗಳಿಂದ ಕಾಂಗ್ರೆಸ್‍ನ ಹಿರಿಯ ನಾಯಕರು ಟಿಕೆಟ್‍ಗಾಗಿ ಹೈಕಮಾಂಡ್ ಕದತಟ್ಟಿದ್ದರು. ಆದರೆ ಹೈಕಮಾಂಡ್ ಪಕ್ಷ ನಿಷ್ಠರನ್ನು ಹುಡುಕಿ ಮಣೆ ಹಾಕಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಹೈಕಮಾಂಡ್ ಯಾರ ಪ್ರಯತ್ನಕ್ಕೂ ಕೇರ್ ಮಾಡದೇ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

    ಜಾತಿ ಸಮೀಕರಣದಲ್ಲಿ ಯಾದವ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ನಾಗರಾಜ್ ಯಾದವ್‍ಗೆ ಅವಕಾಶ ನೀಡಿದೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಮೇಶ್ ಜಾರಕಿಹೊಳಿ ಬೆಂಬಲಿಗ ಸಹಾ ಆಗಿರುವ ನಾಗರಾಜ್ ಯಾದವ್‍ಗೆ ಅವಕಾಶ ಸಿಕ್ಕಿದೆ. ಅಲ್ಲದೇ ಯಾದವ್ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ

    ಈ ಹಿಂದೆ ಒಂದು ಬಾರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದ ಅಬ್ದುಲ್ ಜಬ್ಬಾರ್‌ಗೆ ಹೈಕಮಾಂಡ್ ಮಣೆ ಹಾಕಿದೆ. ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜಾಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.