Tag: Nagaraj Somayaji

  • ‘ಮರ್ಯಾದೆ ಪ್ರಶ್ನೆ’ಗಾಗಿ ಹಾಡಿದ ನಟ ಶರಣ್

    ‘ಮರ್ಯಾದೆ ಪ್ರಶ್ನೆ’ಗಾಗಿ ಹಾಡಿದ ನಟ ಶರಣ್

    ವೆಂಬರ್ ನಲ್ಲಿ ತೆರೆ ಕಾಣಲಿರೋ ಮರ್ಯಾದೆ ಪ್ರಶ್ನೆ (Maryade Prashne) ಸಿನಿಮಾದ ಮೊದಲ ಹಾಡನ್ನು ಪ್ರಮೋದ್ ಮರವಂತೆ ಅವರು ಬರೆದು ನಟ ಶರಣ್ (Sharan) ಹೃದಯಾ ಅವರು ಹಾಡಿದ್ದಾರೆ. ಮರ್ಯಾದೆ ಪ್ರಶ್ನೆ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಜಾನಪದ ಶೈಲಿಯಲ್ಲಿ ಕಂಪೋಸ್ ಮಾಡಿದ್ದಾರೆ.

    ಈ ಹಾಡಿನಲ್ಲಿ  ನಟರ ಪಾತ್ರದ ಪರಿಚಯದ ಜೊತೆ ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜವನ್ನು ಪರಿಚಯಿಸುವ ಸಲುವಾಗಿ ಸಾಂದರ್ಭಿಕವಾಗಿ ಈ ಹಾಡನ್ನು ಬಳಸಲಾಗಿದೆ ಎಂದು ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ತಿಳಿಸಿದ್ದಾರೆ.

    ಈಗಾಗಲೇ ಬಿಡುಗಡೆ ಮಾಡಿರುವ ಕ್ಯಾರೆಕ್ಟರ್ ಪೋಸ್ಟರ್ ನಲ್ಲಿ ರಾಕೇಶ್ ಅಡಿಗ ಅವರು ಒಬ್ಬ ಕಾರ್ಯಕರ್ತನಾಗಿ  ಸುನಿಲ್ ರಾವ್ ಅವರು ಒಬ್ಬ ಡೆಲಿವರಿಬಾಯಾಗಿ,ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ.

    ಮಧ್ಯಮ ವರ್ಗದ ಬಗ್ಗೆ ಇರುವ ಈ ಕತೆಯಲ್ಲಿ  ಈ ಹಾಡು ತುಂಬಾ ಸೊಗಸಾದ ಸಾಹಿತ್ಯವನ್ನು ಒಳಗೊಂಡಿದೆ.ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಧನಾತ್ಮಕ ಚಿಂತನೆಗೆ ಕರೆದೊಯ್ಯುತ್ತದೆ. ದಿನ ಬೆಳಗಾದರೆ ಕೇಳುವ ಹಾಡಾಗಿರಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ.

  • ‘ಮರ್ಯಾದೆ ಪ್ರಶ್ನೆ’ಗೆ ಕೊನೆಗೂ ಉತ್ತರ ಸಿಕ್ತು: ಇದು ಪ್ರದೀಪ್ ಕನಸು

    ‘ಮರ್ಯಾದೆ ಪ್ರಶ್ನೆ’ಗೆ ಕೊನೆಗೂ ಉತ್ತರ ಸಿಕ್ತು: ಇದು ಪ್ರದೀಪ್ ಕನಸು

    ಳೆದ ಎರಡ್ಮೂರು ದಿನದಿಂದ ಸ್ಯಾಂಡಲ್ ವುಡ್ ನಲ್ಲಿ ‘ಮರ್ಯಾದೆ ಪ್ರಶ್ನೆ’ ಎನ್ನುವ ಪದವು ನಾನಾ ರೂಪಗಳನ್ನು ತಾಳಿ ಸಂಚಲನ ಮೂಡಿಸಿತ್ತು. ಅನೇಕ ನಟ ನಟಿಯರು, ತಂತ್ರಜ್ಞರು, ಬಿಗ್ ಬಾಸ್ ಸ್ಪರ್ಧಿಗಳು, ಕಿರುತೆರೆಯ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಈ ಪದ ಪ್ರಯೋಗ ಮಾಡಿ, ಕುತೂಹಲ ಮೂಡಿಸಿದ್ದರು. ಇದು ಏನಿರಬಹುದು ಎನ್ನುವ ಚರ್ಚೆ ಕೂಡ ಸೃಷ್ಟಿಯಾಗಿತ್ತು. ಅದಕ್ಕೀಗ  ಉತ್ತರ ಸಿಕ್ಕಿದೆ. ಇದು ಸಿನಿಮಾದ ಟೈಟಲ್ ಅನ್ನುವ ವಿಚಾರ ಬಹಿರಂಗವಾಗಿದೆ.

    ಕೆಲ ತಿಂಗಳ ಹಿಂದೆ ಆರ್.ಜೆ ಪ್ರದೀಪ್ ತಮ್ಮ ಸಕ್ಕತ್ ಸ್ಟುಡಿಯೋ ಮೂಲಕ ಸಿನಿಮಾವೊಂದನ್ನು ತಯಾರಿಸಿರುವ ವಿಚಾರವನ್ನು ಹಂಚಿಕೊಂಡಿದ್ದರು. ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆ ಚಿತ್ರಕ್ಕೆ ‘ಮರ್ಯಾದೆ ಪ್ರಶ್ನೆ’ (Maryade prashne) ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆಯನ್ನು ಪ್ರದೀಪ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ.

    ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಸಕ್ಕತ್ ಸ್ಟುಡಿಯೋ (Sakkat Studio) ಟ್ರೆಂಡ್ಸೆಟ್ಟರ್ ಆಗಿರುವುದು ಸುಳ್ಳಲ್ಲಾ. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಮುಂತಾದವರು ನಟಿಸಿರುವ ‘ಲೂಸ್ ಕನೆಕ್ಷನ್’ ನಮ್ಮ ಕನ್ನಡದ ಮೊದಲ ವೆಬ್ ಸರಣಿಯ ನಿರ್ಮಿಸಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ (Pradeep) ಮತ್ತು ಶ್ವೇತಾ ಆರ್ ಪ್ರಸಾದ್ (Shweta R Prasad) ಅವರ ನೇತೃತ್ವದಲ್ಲಿ ಶುರುವಾದ ಸಕ್ಕತ್ ಸ್ಟುಡಿಯೋ ವೈವಿಧ್ಯಮಯ ವೆಬ್ ಸರಣಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇತ್ತು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ ‘ಹನಿಮೂನ್’, ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ ‘ಬೈ ಮಿಸ್ಟೇಕ್’ ಮತ್ತು ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ “ಹೇಟ್ ಯು ರೋಮಿಯೋ” ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣವಾಗಿ ವೂಟ್ ( Voot), ಆಹಾ (Aha ), ಮುಂತಾದ ಒಟಿಟಿ ಪ್ಲಾಟ್‌ಫಾರಂ ಗಳಲ್ಲಿ ನೋಡುಗರ ಗಮನ ಸೆಳೆದಿವೆ.

    ಡಿಜಿಟಲ್ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಯಶಸ್ವಿಯಾಗಿಸಿ, ಸಕ್ಕತ್ ಸ್ಟುಡಿಯೋ ಈಗ ಸಿನಿಮಾ ಜಗತ್ತಿಗೆ ಕಾಲಿಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ತನ್ನ ಮೊಟ್ಟಮೊದಲ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರು ಚಿತ್ರದ ಮಹೂರ್ತಕ್ಕೆ ಆಗಮಿಸಿ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ಅದೇ ಚಿತ್ರವೇ ಮರ್ಯಾದೆ ಪ್ರಶ್ನೆ.

    ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ‘ದಿ ಬೆಸ್ಟ್ ಆಕ್ಟರ್’ ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಇದೀಗ ಸಕ್ಕತ್ ಸ್ಟುಡಿಯೋದ ಮೊದಲ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಿಶಿಷ್ಟ ಶೀರ್ಷಿಕೆ, ಪರಿಕಲ್ಪನೆ ಮತ್ತು ತಾರಾಗಣವನ್ನು ಅನಾವರಣಗೊಳಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಕೇವಲ ಶೀರ್ಷಿಕೆಯನ್ನು ಮಾತ್ರ ಬಹಿರಂಗ ಪಡಿಸಿದೆ. ಮುಂದಿನ ದಿನಗಳಲ್ಲಿ ತಾರಾಗಣ ಹಾಗೂ ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಬಹುದು.

     

    ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗಬೇಕು ಹಾಗು ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿರುವ ಪ್ರೇಕ್ಷಕ ವರ್ಗ, ಝೀ5ನ ಒಟಿಟಿ ಕ್ಷೇತ್ರದಲ್ಲಿ ಪ್ರದೀಪ್ ಅವರ ಹಿಂದಿನ ನಾಯಕತ್ವ ಮತ್ತು ಛಾಯಾಗ್ರಹಣ ಮತ್ತು ಕಥೆ ಹೇಳುವಿಕೆಯಲ್ಲಿ ನಾಗರಾಜ್ ಅವರ ಪ್ರಭಾವ, ಸೃಜನಶೀಲ ಮನಸ್ಸುಗಳನ್ನು ಒಳಗೊಂಡಿರುವ ತಂಡವು ನಿಸ್ಸಂದೇಹವಾಗಿ ‘ಸಕ್ಕತ್’ ಕನ್ನಡ ಚಿತ್ರವನ್ನು  ಪ್ರೇಕ್ಷಕನಿಗೆ ನೀಡುತ್ತಾರೆಂಬ ಭರವಸೆ ಮೂಡಿಸಿದೆ.

  • ಅಯ್ಯಪ್ಪನ ಭಜನೆ ಮೂಲಕ ‘ಪುಕ್ಸಟ್ಟೆ ಲೈಫ್’ ಚಿತ್ರದ ಪ್ರಚಾರ ಕಾರ್ಯ ಶುರು

    ಅಯ್ಯಪ್ಪನ ಭಜನೆ ಮೂಲಕ ‘ಪುಕ್ಸಟ್ಟೆ ಲೈಫ್’ ಚಿತ್ರದ ಪ್ರಚಾರ ಕಾರ್ಯ ಶುರು

    ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ ‘ಪುಕ್ಸಟ್ಟೆ ಲೈಫ್’ ಚಿತ್ರದ ಸ್ವಾಮಿಯೇ ಶರಣಂ ಅಯ್ಯಪ್ಪ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಸು ದೀಕ್ಷಿತ್, ಅಧಿತಿ ಸಾಗರ್ ಹಾಡಿರುವ ಈ ಹಾಡು ಟ್ರೆಂಡಿಯಾಗಿದ್ದು ಅಯ್ಯಪ್ಪನ ಭಜನೆ ಮಾಡುತ್ತ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಶುರುಮಾಡಿದೆ.

    ರಂಗಭೂಮಿ ಕಲಾವಿದರಾದ ಅರವಿಂದ ಕುಪ್ಳೀಕರ್ ‘ಪುಕ್ಸಟ್ಟೆ ಲೈಫ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ನಿರ್ದೇಶನ ಇವ್ರ ಮೊದಲ ಪ್ರಯತ್ನ. ಸಂಚಾರಿ ವಿಜಯ್ ಚಿತ್ರದಲ್ಲಿ ಮುಸ್ಲಿಂ ಹುಡುಗನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಪಾತ್ರಕ್ಕಾಗಿ ತೂಕ ಕೂಡ ಇಳಿಸಿಕೊಂಡಿರುವ ವಿಜಯ್ ಈ ಮೂಲಕ ತಾವು ಯಾವ ಪಾತ್ರ ಕೊಟ್ಟರು ನಟಿಸೋಕೆ ಸೈ ಅನ್ನೋದನ್ನ ಮತ್ತೆ ಪ್ರೂ ಮಾಡಿದ್ದಾರೆ.

    ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಚಿತ್ರದಲ್ಲಿ ನಟಿಸಿದ್ದಾರೆ. ವಸು ದೀಕ್ಷಿತ್ ಸಂಗೀತ ನಿರ್ದೇಶನ ಪುಕ್ಸಟ್ಟೆ ಲೈಫ್ ಚಿತ್ರಕ್ಕಿದೆ. ಸದ್ಯ ಫಸ್ಟ್ ಲಿರಿಕಲ್ ಹಾಡಿನ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಪುಕ್ಸಟ್ಟೆ ಲೈಫ್ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಅಪ್‍ಡೇಟ್ಸ್ ನೀಡಲಿದೆ.