Tag: nagaraj

  • ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ನ್ನಡದ ಖ್ಯಾತ ನಿರೂಪಕಿ ಅಪರ್ಣಾ (Aparna) ಗುರುವಾರದಂದು (ಜು.11) ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಪತ್ನಿಯ ಅಂತಿಮ ದರ್ಶನಕ್ಕೆ ಬರಲಿರುವ ಸಾರ್ವಜನಿಕರಿಗೆ, ಆಪ್ತರಿಗೆ ಹೂವು-ಹಾರ ತರಬೇಡಿ ಎಂದು ಪತಿ ನಾಗರಾಜ್‌ ವಸ್ತಾರೆ ಮನವಿ ಮಾಡಿದ್ದಾರೆ. ಈ ಮೂಲಕ ಪರಿಸರ ಕಾಳಜಿ ತೋರಿಸಿದ್ದಾರೆ. ಇದನ್ನೂ ಓದಿ:ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್

    ಅಪರ್ಣಾ ಅವರ ವಿಡಿಯೋ ಮತ್ತು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪತಿ ನಾಗರಾಜ್ ವಸ್ತಾರೆ, ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ, ಇಂದು (ಜು.12) ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ಇನ್ನೂ ತಾರಾ, ಶ್ರೀನಾಥ್, ಪದ್ಮಜಾ ರಾವ್, ದತ್ತಣ್ಣ, ಗಿರಿಜಾ ಲೋಕೇಶ್, ಮಂಡ್ಯ ರಮೇಶ್ ಸೇರಿದಂತೆ ಅನೇಕರು ಅಪರ್ಣಾ ಅಂತಿಮ ದರ್ಶನ ಪಡೆದಿದ್ದಾರೆ.

  • ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

    – ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ
    – ಹಾಲಿ ನ್ಯಾಯಾಧೀಶರರಿಂದ ಪ್ರಕರಣದ ತನಿಖೆ ನಡೆಸಬೇಕು
    – ಡಿಕೆಶಿ, ರಾಮಲಿಂಗಾ ರೆಡ್ಡಿ ಜೊತೆ ನಾಗರಾಜ್‌ ಇರುವ ಫೋಟೋ ರಿಲೀಸ್‌

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಧಿಕಾರಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಎನ್.ನಾಗರಾಜ್ (N Nagaraj) ಸಂಬಂಧದ ಅಸ್ತ್ರ ಪ್ರಯೋಗವಾಗಿದೆ. ಡೆತ್‌ನೋಟ್‌ನಲ್ಲಿರುವ ಎನ್.ನಾಗರಾಜ್ ಜಾಡು ಹಿಡಿದು ಹೊರಟ ಬಿಜೆಪಿ ಸಚಿವ ನಾಗೇಂದ್ರ (Nagendra) ಜೊತೆ ನಾಗರಾಜುಗೆ ವ್ಯವಹಾರಿಕ ಸಂಬಂಧ ಎಂದು ಗಂಭೀರ ಆರೋಪ ಮಾಡಿದೆ.

    ನಾಗೇಂದ್ರ ಜೊತೆ ನಾಗರಾಜ್ ಇರುವ ಫೋಟೋ ರಿಲೀಸ್ ಮಾಡಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಅಲ್ಲದೆ ಸಿಎಂ ಜೊತೆ, ಡಿಸಿಎಂ ಜೊತೆ, ರಾಮಲಿಂಗರೆಡ್ಡಿ ಜೊತೆ ಇರುವ ಫೋಟೋ ರಿಲೀಸ್ ಮಾಡಿ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ

    ಸಿ.ಟಿ.ರವಿ (CT Ravi) ಮಾತನಾಡಿ, ಡೆತ್‌ನೋಟ್‌ನಲ್ಲಿ ಎನ್.ನಾಗರಾಜ್ ಹೆಸರು ಇದೆ. ಆ ಎನ್.ನಾಗರಾಜ್ ನಾಗೇಂದ್ರ ಪರಮಾಪ್ತನಾಗಿದ್ದು ಬ್ಯುಸಿನೆಸ್‌ ಪಾರ್ಟ್‌ನರ್‌ ಆಗಿದ್ದಾನೆ. ಎನ್.ನಾಗರಾಜು ಜೊತೆ ನಾಗೇಂದ್ರಗೆ ವ್ಯವಹಾರ ಇದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಜೊತೆ ಎನ್.ನಾಗರಾಜ್ ಇರುವ ಫೋಟೋಗಳು ಇವೆ. ಹೀಗಾಗಿ ಈ ಪ್ರಕರಣದಲ್ಲಿ ಎಲ್ಲರ ಪಾತ್ರವಿದೆ ಎಂದು ಆರೋಪಿಸಿದರು.

    ಅಂಗೈ ಹುಣ್ಣಿಗೆ ಸಾಕ್ಷಿ ಬೇಕಾ? ಸಚಿವರ ಮೌಖಿಕ ಆದೇಶ ಇಲ್ಲದೇ ಹಣ ವರ್ಗಾವಣೆ ಹೇಗೆ ಆಗುತ್ತೆ? ಎನ್.ನಾಗರಾಜ್ ಗೂ ನಾಗೇಂದ್ರಗೂ ಏನ್ ಸಂಬಂಧ? ಎನ್.ನಾಗರಾಜ್‌ಗೂ ಸಿಎಂಗೂ, ಎನ್. ನಾಗರಾಜ್‌ಗೂ ಡಿಸಿಎಂಗೆ ಏನು ಸಂಬಂಧ ಎಂದು ಸಿ.ಟಿ.ರವಿ ಖಾರವಾಗಿ ಪ್ರಶ್ನಿಸಿದರು.  ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

    ಹೈದರಾಬಾದ್‌ನ ಒಂದು ಬ್ಯಾಂಕ್ ಅಥವಾ ಕಂಪನಿಗೆ ಹಣ ಹೋಗಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ಬಗ್ಗೆ ತನಿಖೆ ನಡೆಯಬೇಕು. ಅದಕ್ಕಾಗಿ ಹಾಲಿ ನ್ಯಾಯಾಧೀಶರರಿಂದ ತನಿಖೆ ನಡೆಸಬೇಕು. ಇದೊಂದು ಹಗಲು ದರೋಡೆಯಾಗಿದೆ. ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಜೊತೆ ಹೋಗಿದ್ದಾರೆ. ಡೆತ್ ನೋಟ್‌ನಲ್ಲಿ ನಾಗರಾಜ್ ಹೆಸರು ಉಲ್ಲೇಖವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ರು.

    ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಇದೊಂದು ಕೊಲೆ ಅಂತಾ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದರು. ವರ್ಕ್ ಆರ್ಡರ್ ಮಾಡದೇ ಇದ್ದರೂ ಈಶ್ವರಪ್ಪ ರಾಜೀನಾಮೆ ನೀಡಿದರು. ಅವರ ರಾಜಕೀಯ ಭವಿಷ್ಯವ‌ನ್ನೇ ಮುಗಿಸುವ ಕೆಲಸ ಮಾಡಿದರು. ಈಗ ಬಿ.ನಾಗೇಂದ್ರ ರಾಜೀನಾಮೆ ಪಡೆಯುತ್ತಿಲ್ಲ ಯಾಕೆ? ಬಿ.ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಸರ್ಕಾರಕ್ಕೆ ಮಾನ‌ ಮರ್ಯಾದೆ ಇದೆಯೇ ಎಂದು ಸಿಟಿ ರವಿ ಕಿಡಿಕಾರಿದರು.

     

  • ಪ್ರೊಫೆಸರ್ ನಾಗರಾಜ್ ಮನೆಗೆ ಆಗಾಗ್ಗೆ ಹೋಗ್ತಿದ್ದೆ – ಪ್ರಶ್ನೆ ಪತ್ರಿಕೆ ಲೀಕ್ ಒಪ್ಕೊಂಡ ಸೌಮ್ಯಾ

    ಪ್ರೊಫೆಸರ್ ನಾಗರಾಜ್ ಮನೆಗೆ ಆಗಾಗ್ಗೆ ಹೋಗ್ತಿದ್ದೆ – ಪ್ರಶ್ನೆ ಪತ್ರಿಕೆ ಲೀಕ್ ಒಪ್ಕೊಂಡ ಸೌಮ್ಯಾ

    ಬೆಂಗಳೂರು: ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ ಸಂಬಂಧ ತನ್ನ ತಪ್ಪನ್ನು ಆರೋಪಿ ಸೌಮ್ಯಾ ಒಪ್ಪಿಕೊಂಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದಾಗಿ ಆರೋಪಿ ಸೌಮ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಳೆ. ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನ ಓದುವುದು ಮಾಡ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಾಳೆ.

    ನಾಗರಾಜ್ ಟೇಬಲ್ ಮೇಲೆ ಕ್ವೆಶ್ಚೆನ್ ಪೇಪರ್ ನ ಎನ್ವಲಪ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ. ಮರುದಿನ ಕಾಲೇಜಿನ ಬಳಿ ಫ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಕ್ವೆಶ್ಚೆನ್ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್

    ಸದ್ಯ ಸೌಮ್ಯ ಹೇಳಿಕೆ ಹಾಗೂ ಪ್ರೊಫೆಸರ್ ಹೇಳಿಕೆಯನ್ನ ಹೋಲಿಕೆ ಮಾಡಿ ನೋಡಿರುವ ಪೊಲೀಸರು ಸೌಮ್ಯಳೇ ಕೆಲ ಕ್ವೆಶ್ಚೆನ್ಸ್ ಗಳನ್ನ ಪ್ರೊಫೆಸರ್ ಗೆ ಕಳಿಸಿರುವ ಬಗ್ಗೆ ಸಹ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ

  • ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್

    ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್

    ಬೆಂಗಳೂರು: ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಯಾಗ್ರಫಿ ಪ್ರೊಫೆಸರ್ ನಾಗರಾಜ್‍ನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

    ನಾಗರಾಜ್, ಧಾರವಾಡ ಕರ್ನಾಟಕ ಯೂನಿವರ್ಸಿಟಿಯ ವ್ಯಾಲ್ಯುಯೇಷನ್ ರಿಜಿಸ್ಟ್ರಾರ್ ಆಗಿದ್ದು, ಇದೀಗ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಿರ್ಲಕ್ಷ್ಯ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಲೀಕ್ ನಲ್ಲಿ ಭಾಗಿ ಹಿನ್ನೆಲೆ ನಾಗರಾಜ್ ತಂಗಿ ಮಗಳು ಕುಸುಮಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ತಯಾರಿ ವೇಳೆ ಸೌಮ್ಯಳಿಗೆ ಫೋಟೋ ತೆಗೆದು ಕುಸುಮ ಕಳಿಸಿದ್ದಳು. ಅಕ್ರಮದಲ್ಲಿ ಭಾಗಿ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    ಈ ಬಗ್ಗೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಮಾತನಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾರ್ಚ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಕೆಲವು ಅಭ್ಯರ್ಥಿಗಳಿಗೆ ಪ್ರಶ್ನೆಗಳು ಸಿಕ್ಕಿತ್ತು. ಈ ಸಂಬಂಧ ಪರೀಕ್ಷಾ ಪ್ರಾಧಿಕಾರ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿದ್ದೇವೆ ಎಂದರು. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

    ಆರೋಪಿಗಳಿಗೆ ಸಂಬಂಧಿಸಿದಂತೆ ಮನೆ, ಸಂಬಂಧಪಟ್ಟ ಸ್ಥಳಗಳಲ್ಲೂ ಪರಿಶೀಲನೆ ಮಾಡ್ತಿದ್ದೇವೆ. ಎಲ್ಲಾ ಮಾಹಿತಿ ಸಂಗ್ರಹಿಸಿ, ಇನ್ನು ಕೆಲವ್ರನ್ನ ಮೇಲೆ ಶಂಕೆ ಬಂದಿದೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವ ಉಳಿದವ್ರನ್ನು ಬಂಧಿಸಿ, ತನಿಖೆ ಮಾಡಲಾಗುತ್ತೆ. ಸದ್ಯ ಪ್ರೊಫೆಸರ್ ನಾಗರಾಜ್‍ನನ್ನ ಸಹ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.

  • ಅಪ್ಪು ಮರಕೋತಿ ಆಟವಾಡಿದ್ದನ್ನು ನೆನಪಿಸಿಕೊಂಡ ಬಾಲ್ಯದ ಗೆಳೆಯ

    ಅಪ್ಪು ಮರಕೋತಿ ಆಟವಾಡಿದ್ದನ್ನು ನೆನಪಿಸಿಕೊಂಡ ಬಾಲ್ಯದ ಗೆಳೆಯ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಬಾಲ್ಯದ ಗೆಳೆಯ ಕುಳ್ಳ ನಾಗರಾಜ್ ನೆನಪಿನ ಬುತ್ತಿ ಬಿಚ್ಚಿಟ್ಟರು.

    ಅಪ್ಪು ಅಗಲಿ ವಾರಗಳು ಕಳೆಯುತ್ತಿದ್ದರೂ, ಯಾರಿಗೂ ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಅವರ ಒಡನಾಡಿಗಳಿಗೆ ಅವರನ್ನು ಮರೆಯುವುದು ಸಾಧ್ಯವಿಲ್ಲ. ಪುನೀತ್‍ಗೆ ಬಾಲ್ಯದಲ್ಲಿ ಈಜು, ಬೈಸಿಕಲ್ ಹೊಡೆಯುವುದನ್ನ ಕಲಿಸಿದ್ದ ನಾಗರಾಜ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆರೆಯಲ್ಲಿ ಈಜು ಹೊಡೆಯುತ್ತಿದ್ದನು, ಮೀನು ಹಿಡಿಯುತ್ತಿದ್ದನು. ಬೀರಪ್ಪದೇವರ ಗುಡಿ ಬಳಿ ಮರಕೋತಿ ಆಟವಾಡುತ್ತಿದ್ದನು. ಇದನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ ಎಂದು ಅಪ್ಪು ಜೊತೆ ಕಳೆದ ಕೆಲವು ಮಧುರ ಕ್ಷಣಗಳನ್ನು ಹೇಳಿದರು.

    ಗಾಜನೂರಿಗೆ ಬಂದಾಗಲೆಲ್ಲಾ ತಮ್ಮ ಮನೆಗೆ ಕರೆಸಿಕೊಂಡು ನನ್ನ ಜೊತೆ ಕಾಲ ಕಳೆಯುತ್ತಿದ್ದರು. ಅಕ್ಟೋಬರ್ 30ರಂದು ಗಾಜನೂರಿಗೆ ಬರುತ್ತೇನೆ ನನಗೆ ನಾಟಿಕೋಳಿ ಸಾಂಬಾರ್, ರಾಗಿಮುದ್ದೆ ಮಾಡಿಸಬೇಕೆಂದು ಹೇಳಿದ್ದರು. ಆದರೆ ಈಗ ಅವರು ಗಾಜನೂರು ಬದಲು ಬಾರದ ಲೋಕಕ್ಕೆ ಪಯಣಿಸಿದ್ದಾರೆ ಎಂದು ಭಾವುಕರಾದರು. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?

    ನಾನು ಅವರನ್ನು ನೋಡಲು ಆಗಾಗ್ಗೆ ಬೆಂಗಳೂರಿಗೆ ಹೋಗುತ್ತಿದ್ದೆ. ನಾನು ಹೋದರೆ ಎಲ್ಲ ಕೆಲಸ ಬದಿಗೊತ್ತಿ ನನ್ನ ಜೊತೆ ಅಪ್ಪು ಕಾಲ ಕಳೆಯುತ್ತಿದ್ದರು. ನನ್ನನ್ನು ಅವರು ಬೈಸಿಕಲ್ ಖರೀದಿಸಲು ಕರೆದೊಯ್ದಿದ್ದರು. ಮನಸ್ಸಿಗೆ ಹಿಡಿಸದೆ ಮೂರು ಬೈಸಿಕಲ್‍ಅನ್ನು ಅವರು ಬದಲಾಯಿಸಿದ್ದರು. ಪುನೀತ್ ನಿಧನ ಈಗಲು ನನಗೆ ನಂಬಲಾಗುತ್ತಿಲ್ಲ. ಅವರು ಬೆಂಗಳೂರಿನಲ್ಲೇ ಇದ್ದಾರೆ ಎನಿಸುತ್ತದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

    ಸದ್ಯ ಗುಂಡ್ಲುಪೇಟೆಯಲ್ಲಿ ಟೆಂಪೋ ಚಾಲಕರಾಗಿರುವ ನಾಗರಾಜ್, ನನಗೆ ಹೊಸ ಟೆಂಪೋ ಕೊಡಿಸುವುದಾಗಿ, ಕೊಟೇಷನ್ ನ್ನು ಅಪ್ಪು ಹಾಕಿಸಲು ಹೇಳಿದ್ದರು. ಈ ಹಿನ್ನೆಲೆ ಟೆಂಪೋ ಖರೀದಿಗೆ 18 ಲಕ್ಷ ರೂ. ಕೊಟೇಷನ್ ಹಾಕಲಾಗಿತ್ತು ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

  • ಪಕ್ಷ ವಿರೋಧಿ ಚಟುವಟಿಕೆ – ಬಿಜೆಪಿ ಕಾರ್ಪೊರೇಟರ್ ಅಮಾನತು

    ಪಕ್ಷ ವಿರೋಧಿ ಚಟುವಟಿಕೆ – ಬಿಜೆಪಿ ಕಾರ್ಪೊರೇಟರ್ ಅಮಾನತು

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ ವಿಚಾರವಾಗಿ ಬಿಜೆಪಿ ಪಕ್ಷದ ಕಾರ್ಪೊರೇಟರ್ ವಿರುದ್ಧ ಕ್ರಮಕೈಗೊಂಡು ಅಮಾನತು ಮಾಡಿದೆ.

    ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ಭೈರಸಂದ್ರ ವಾರ್ಡ್ ಬಿಬಿಎಂಪಿ ಕಾರ್ಪೊರೇಟರ್ ನಾಗರಾಜ್ ಅವರನ್ನು ಅಮಾನತು ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ನಾಗರಾಜ್ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಡಿ ಅಮಾನತು ಮಾಡಲಾಗಿದ್ದು, ಆದರೆ ಪತ್ರದಲ್ಲಿ ಅಮಾನತು ಅವಧಿ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಿಲ್ಲ.

    ಸದ್ಯ ಬಿಜೆಪಿ ಅಮಾನತು ಮಾಡಿದ್ದರೂ, ಅವರ ಮೇಲೆ ಎಷ್ಟು ಸಮಯ ಈ ಅಮಾನತು ಅನ್ವಯವಾಗುತ್ತದೆ ಎಂಬುದು ಉಲ್ಲೇಖ ಮಾಡಿರದ ಕಾರಣ ನಾಗರಾಜ್ ಬೇರೆ ಪಕ್ಷಕ್ಕೂ ಸೇರುಲು ಸಾಧ್ಯವಾಗುವುದಿಲ್ಲ. ಇದರಿಂದ ಮೇಯರ್ ಚುನಾವಣೆಯಲ್ಲಿ ವಿಪ್ ಜಾರಿ ಮಾಡಿದರೆ ನಾಗರಾಜ್ ಅವರು ಪಕ್ಷದ ವಿರುದ್ಧ ಮತ ಹಾಕುವಂತಿಲ್ಲ ಎಂಬಂತಾಗಿದೆ.

    ಇದೇ ವೇಳೆ ಬಸವೇಶ್ವರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯರಾದ ಎಸ್.ಹೆಚ್.ಪದ್ಮರಾಜ್ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದು, ಚುನಾವಣೆ ವೇಳೆ ಪಕ್ಷ ವಿರೋಧಿ ನಿಲುವು ತಾಳಿದ್ದರು ಅದ್ದರಿಂದ ನೋಟಿಸ್ ನೀಡಿದ್ದು, 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಪದ್ಮರಾಜ್. ಬಹಿರಂಗವಾಗಿ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.

     

  • 50 ವರ್ಷಗಳಿಂದ ಕಲಾ ಆರಾಧನೆ – 12 ವಾದ್ಯ ನುಡಿಸೋ ಪ್ರವೀಣ ಹುಬ್ಬಳ್ಳಿಯ ನಾಗರಾಜ್ ಕಂಬಾರ್

    50 ವರ್ಷಗಳಿಂದ ಕಲಾ ಆರಾಧನೆ – 12 ವಾದ್ಯ ನುಡಿಸೋ ಪ್ರವೀಣ ಹುಬ್ಬಳ್ಳಿಯ ನಾಗರಾಜ್ ಕಂಬಾರ್

    ಹುಬ್ಬಳ್ಳಿ: ಆಧುನಿಕರಣದಿಂದಾಗಿ ನಾಡಿನ ಕಲೆ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಆದ್ರೆ, ಐದು ದಶಕಗಳಿಂದ ಕಲೆಯ ಉಳಿವಿಗಾಗಿ ಟೊಂಕಕಟ್ಟಿದ್ದಾರೆ ಇವತ್ತಿ ನಮ್ಮ ಪಬ್ಲಿಕ್ ಹೀರೋ ನಾಗರಾಜ್ ಕುಂಬಾರ್.

    ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ನಿವಾಸಿಯಾದ 70 ವರ್ಷದ ನಾಗರಾಜ್ ಅವರು 50 ವರ್ಷಗಳಿಂದ ಕಲೆಗಾಗೇ ತಮ್ಮನ್ನ ಸಮರ್ಪಿಸಿಕೊಂಡಿದ್ದಾರೆ. ತಬಲಾ, ಡೊಳ್ಳುಖಣಿ, ಡಗ್ಗಾ , ದಪ್ಪಡ್ಡಿ, ಹಲಗೆ, ಕರಡಿ ಮಜಲು ಬ್ಯಾಂಗೋ, ಕಾಂಗೋ, ಮೃದಂಗ.. ಹೀಗೆ ಒಟ್ಟು 12ಕ್ಕೂ ಹೆಚ್ಚು ಚರ್ಮ ವಾದ್ಯಗಳನ್ನು ನುಡಿಸ್ತಿದ್ದಾರೆ.

    ಆಧುನೀಕರಣದಿಂದಾಗಿ ಮರೆಯಾಗುತ್ತಿರುವ ಕಲಾ ಪ್ರಕಾರಗಳನ್ನು ಗ್ರಾಮದ ಯುವಕರಿಗೆ ಹೇಳಿಕೊಟ್ಟು ಕಲೆಯನ್ನು ಪೋಷಣೆ ಮಾಡ್ತಿದ್ದಾರೆ. ಪುರುಷರ ಜೊತೆಗೆ ಮಹಿಳೆಯರಿಗೆ ಡೊಳ್ಳು ಕರಡಿ ಮಜಲು ಕಲಿಸುತ್ತಿದ್ದಾರೆ. ಇವರು ರಾಜ್ಯ ಮತ್ತು ಅಂತರ್ ರಾಜ್ಯಗಳಲ್ಲೂ ತಮ್ಮ ಕಲಾ ಪ್ರದರ್ಶನ ಮಾಡಿಸ್ತಿದ್ದಾರೆ.

    https://www.youtube.com/watch?v=SdYxqizsDEE

  • ಕರ್ನಾಟಕ ಬಂದ್ ಯಶಸ್ವಿಯಾಗಿದೆ, ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

    ಕರ್ನಾಟಕ ಬಂದ್ ಯಶಸ್ವಿಯಾಗಿದೆ, ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

    ಬೆಂಗಳೂರು: ಸೋಮವಾರ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಟೌನ್‍ಹಾಲ್ ಮುಂದುಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರಲ್ಲಿ ಯಾವುದೇ ನಿರುತ್ಸಾಹ ಇಲ್ಲ, ಜನರು ಇಷ್ಟಪಟ್ಟು ಬಂದ್‍ನಲ್ಲಿ ಭಾಗವಹಿಸಿದ್ದಾರೆ ಬೆಂಗಳೂರಿನಲ್ಲಿ ಎರಡು ಮೂರು ಬಸ್ ಓಡಿದ ಮಾತ್ರಕ್ಕೆ ಬಂದ್ ಯಶಸ್ವಿಯಾಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.

    ಮಹಾದಾಯಿ ಮತ್ತು ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಹೀಗಾಗಿ ಬಂದ್ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮಂಗಳವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೇಂದ್ರದ ಭೂತವನ್ನು ಸುಡುತ್ತೇವೆ ಎಂದು ವಾಟಾಳ್ ಹೇಳಿದಾಗ ಮಾಧ್ಯಮವರು ಪ್ರತಿಬಾರಿಯೂ ನೀವು ಕೇಂದ್ರದ ವಿರುದ್ಧವೇ ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

    ಈ ಪ್ರಶ್ನೆಗೆ, ವಾಟಾಳ್ ಬಂದ್ ವಿಫಲಗೊಳಿಸಲು ನೀವು ಕಾರಣ, ನೀವು ಅಪ್ರಚಾರ ಮಾಡಿದ್ದೀರಿ. ವಸ್ತುಸ್ಥಿತಿ ಹೇಳಬೇಕು ಎಂದರು. ಮಾಧ್ಯಮಗಳು ಮರುಪ್ರಶ್ನೆ ಹಾಕಿ ಮಾರ್ಕೆಟ್ ಬಂದ್ ಆಗಿಲ್ಲ, ಬಸ್ ಸಂಚರಿಸುತ್ತಿದೆ.ಕನ್ನಡ ಸಂಘಟನೆಗಳ ಮಧ್ಯೆ ಒಡಕು ಇದೆ. ನಾರಾಯಣ ಗೌಡರು ನಿಮ್ಮ ವಿರುದ್ಧವೇ ಮಾತನಾಡಿದ್ದಾರೆ ಎಂದು ಮರು ಪ್ರಶ್ನೆ ಹಾಕಿದರು.

    ನಮ್ಮಲ್ಲಿ ಯಾವುದೇ ಒಡಕು ಇಲ್ಲ. ನಾರಾಯಣ ಗೌಡರ ಭಾಷೆಯನ್ನು ನಾನು ಬಳಸುವುದಿಲ್ಲ. ಬೇಕಾದರೆ ಬೆಂಗಳೂರಿನ ಗುತ್ತಿಗೆಯನ್ನು ಅವರೇ ತೆಗೆದುಕೊಳ್ಳಲಿ. ಒಂದು ತಿಂಗಳಲ್ಲಿ ಅವರು ಕರ್ನಾಟಕ ಬಂದ್ ಕರೆಯಲಿ. ಕನ್ನಡಿಗರು ಕನ್ನಡಿಗರಲ್ಲಿ ಭಿನ್ನಾಭಿಪ್ರಾಯ ಬೇಡ. ಇವತ್ತು ಎಲ್ಲರೂ ನಮ್ಮ ಜೊತೆ ಬನ್ನಿ. ಎಲ್ಲರೂ ಒಟ್ಟಿಗೆ ಹೋಗಿ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು.

    ರಾಜ್ಯ ಸರ್ಕಾರ ಕಾರಣ: ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಬಂದ್ ಹತ್ತಿಕ್ಕುವ ಕೆಲಸ ನಡೆಸಿದೆ. 500 ಮಂದಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. 2 ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವತ್ತು ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಸರ್ಕಾರ ಬಂದ್ ಹತ್ತಿಕ್ಕಲು ಮುಂದಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

    ಕನ್ನಡಕ್ಕೆ ಹೋರಾಡುತ್ತೇನೆ: ನಾನು ಯಾವತ್ತೂ ಕನ್ನಡಕ್ಕಾಗಿ ಹೋರಾಡುತ್ತೇನೆ. ನಾನು ಏಕಾಂಗಿಯಾಗಿ 5 ಬಾರಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದೇನೆ. ಹೊಂದಾಣಿಕೆ ಮಾಡಿಕೊಂಡಿದ್ದರೆ ನಾನು ಮಂತ್ರಿ, ಮುಖ್ಯಮಂತ್ರಿಯಾಗುತ್ತಿದ್ದೆ. ಕಳೆದ 53 ವರ್ಷಗಳಿಂದ ನಾನು ಹೋರಾಡುತ್ತಿದ್ದೇನೆ ಎಂದು ತಿಳಿಸಿದರು.

    ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕುಮಾರ್ ಸೇರಿದಂತೆ ನೂರಾರು ಮಂದಿಯನ್ನು ಕಾರ್ಪೋರೇಷನ್ ವೃತ್ತದಲ್ಲಿ ತಡೆದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು.

    ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರವೀಣ್ ಶೆಟ್ಟಿ ಮತ್ತು ಅವರ ಬಣದ ನೂರಾರು ಕಾರ್ಯಕರನ್ನು ಮೆಖ್ರಿ ವೃತ್ತದಲ್ಲಿಯೇ ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದರು.

    ಇದನ್ನೂ ಓದಿ: ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ