Tag: Nagamohan das

  • 1766 ಪುಟಗಳ  ಮೀಸಲಾತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ

    1766 ಪುಟಗಳ ಮೀಸಲಾತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ

    ಬೆಂಗಳೂರು: ಬಹುನಿರೀಕ್ಷಿತ ಒಳ ಮೀಸಲಾತಿ (Internal Reservation) ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್ (Justice Nagamohan Das) ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯಗೆ 1,766 ಪುಟಗಳ ವರದಿ ಸಲ್ಲಿಕೆ ಮಾಡಿದ್ದಾರೆ.

    ಬಳಿಕ ಪ್ರತಿಕ್ರಿಯೆ ನೀಡಿದ ನ್ಯಾ.ನಾಗಮೋಹನ್ ದಾಸ್, ನಮ್ಮ ಆಯೋಗ ಮೊದಲು ಮಧ್ಯಂತರ ವರದಿ ಕೊಟ್ಟಿತ್ತು. ಆದಾದ ಬಳಿಕ ಸಮೀಕ್ಷೆ ಮಾಡಲು ಕ್ಯಾಬಿನೆಟ್ (Cabinet) ಒಪ್ಪಿಗೆ ಕೊಟ್ಟಿತ್ತು. 60 ದಿನ ಸಮೀಕ್ಷೆ ಮಾಡಿದ್ದೇವೆ. ಮೊಬೈಲ್ ಆಪ್ ಬಳಸಿ ಸಮೀಕ್ಷೆ ಮಾಡಲಾಗಿದೆ. 27 ಲಕ್ಷಕ್ಕೂ ಹೆಚ್ಚು ಕುಟುಂಬಗಳು 1.07 ಕೋಟಿಗೂ ಹೆಚ್ಚು ಜನರ ಸಮೀಕ್ಷೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಎಡ ಸಮುದಾಯಕ್ಕೆ 7% ಒಳಮೀಸಲಾತಿ ಕೊಡಬೇಕು – ಆಂಜನೇಯ

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಒಳ ಮೀಸಲಾತಿ ರಿಪೋರ್ಟ್ ಕೊಟ್ಟಿದ್ದಾರೆ. ಆಗಸ್ಟ್ 7ರಂದು ನಡೆಯುವ ಕ್ಯಾಬಿನೆಟ್‌ನಲ್ಲಿ ವರದಿ ಮಂಡಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾರೂ ಆರೋಪ ಮಾಡಿಲ್ಲ. ಸಮಿಕ್ಷೆಯನ್ನ, ವರದಿಯನ್ನು ಯಾರೂ ವಿರೋಧ ಮಾಡಿಲ್ಲ ಎಂದು ಹೇಳಿದರು.

  • ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ – ನ್ಯಾ.ನಾಗಮೋಹನ್ ದಾಸ್ ಆಯೋಗ ಮುಂದುವರಿಸಲು ಕ್ಯಾಬಿನೆಟ್ ತೀರ್ಮಾನ

    ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ – ನ್ಯಾ.ನಾಗಮೋಹನ್ ದಾಸ್ ಆಯೋಗ ಮುಂದುವರಿಸಲು ಕ್ಯಾಬಿನೆಟ್ ತೀರ್ಮಾನ

    ಬೆಂಗಳೂರು: ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ (Nagamohan Das) ಅವರ ಏಕಸದಸ್ಯ ಆಯೋಗ ನೇಮಕ ಮಾಡಲಾಗಿತ್ತು. ಒಳಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಮಧ್ಯಂತರ ವರದಿ ನೀಡಿದ್ದಾರೆ ಎಂದು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.

    ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ವರದಿಯಲ್ಲಿ 4 ಶಿಫಾರಸು ಮಾಡಿದ್ದಾರೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣವನ್ನು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ನೂತನ ವಿಜ್ಞಾನ ತಂತ್ರಜ್ಞಾನದ ಸಾಧನೆಗಳನ್ನು ಬಳಸಿ 30 ರಿಂದ 40 ದಿವಸಗಳ ಒಳಗೆ ಹೊಸದಾದ ಸಮೀಕ್ಷೆಯನ್ನು ನಡೆಸಬಹುದು. ಹೊಸ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು. ಇದಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಸೂಕ್ತ ಎಂದರು. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

    ಹೊಸ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಬೇಕು ಅಂತಾ ಶಿಫಾರಸು ಮಾಡಿದ್ದಾರೆ. ಅಲ್ಲದೇ ನಾಗಮೋಹನ್ ದಾಸ್ ಸಮಿತಿಯನ್ನೇ ಮುಂದುವರಿಸಲು ಕ್ಯಾಬಿನೆಟ್ ತೀರ್ಮಾನ ಮಾಡಿದ್ದು, 60 ದಿವಸಗಳ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹತ್ಯೆಗೆ ಸುಪಾರಿ – ಹೊಸ ಬಾಂಬ್‌ ಸಿಡಿಸಿದ ಸಚಿವ ರಾಜಣ್ಣ ಪುತ್ರ

    ಆಯೋಗ 60 ದಿನದೊಳಗೆ ಸಮೀಕ್ಷೆ ಮಾಡುತ್ತೇವೆ ಅಂದಿದ್ದಾರೆ. ನಾವು ಅದಕ್ಕೆ ಅನುಮತಿ ಕೊಟ್ಟಿದ್ದೇವೆ. ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಇದೆ. ಆದರೆ ಇದರಲ್ಲಿ ಇರುವ ಗೊಂದಲ ಬಗೆಹರಿಸುವ ಉದ್ದೇಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಮಾಡಿ ಭ್ರಷ್ಟಾಚಾರ, ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಅಂತ ಬಿಜೆಪಿ ಒಪ್ಪಿಕೊಂಡಿದೆ: ಪ್ರಿಯಾಂಕ್ ಖರ್ಗೆ

  • ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ – 104 ಪುಟಗಳ ವರದಿ ಸಿಎಂಗೆ ಹಸ್ತಾಂತರ ಮಾಡಿದ ಆಯೋಗ

    ಒಳಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆ – 104 ಪುಟಗಳ ವರದಿ ಸಿಎಂಗೆ ಹಸ್ತಾಂತರ ಮಾಡಿದ ಆಯೋಗ

    ಬೆಂಗಳೂರು: ಒಳಮೀಸಲಾತಿ (Internal Reservation) ಸಂಬಂಧ ಸರ್ಕಾರ ರಚನೆ ಮಾಡಿದ್ದ ಆಯೋಗ ಇಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. ಆಯೋಗದ ಅಧ್ಯಕ್ಷ ನ್ಯಾ‌.ನಾಗಮೋಹನದಾಸ್ ಸಿಎಂ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ವರದಿ ಸಲ್ಲಿಕೆ ಮಾಡಿದರು. ಸುಮಾರು 104 ಪುಟಗಳ ವರದಿ ಇದಾಗಿದೆ.

    ವರದಿ ಸಲ್ಲಿಕೆ ಬಳಿಕ ಆಯೋಗ ಅಧ್ಯಕ್ಷ ನ್ಯಾ.ನಾಗಮೋಹನದಾಸ್  (Nagamohan Das) ಮಾತನಾಡಿ, ಎರಡು ತಿಂಗಳಿಗಿಂತ ಹೆಚ್ಚು ಕಾಲ ಆಳವಾದ ಅಧ್ಯಯನ ಮಾಡಿ ವರದಿ ಕೊಡಲಾಗಿದೆ. 104 ಪುಟಗಳ ವರದಿ ನೀಡಲಾಗಿದೆ. ಇದು ತರಾತುರಿಯಲ್ಲಿ ಕೊಟ್ಟಿರುವ ವರದಿಯಲ್ಲ, ಸರ್ಕಾರ ವರದಿ ಕೇಳಿರಲಿಲ್ಲ. ನಾವೇ ಸರ್ಕಾರಕ್ಕೆ ಮಧ್ಯಂತರ ವರದಿ ಕೊಟ್ಟಿದ್ದೇವೆ. ಸರ್ಕಾರ ಏನ್ ತೀರ್ಮಾನ ಮಾಡುತ್ತೋ ನೋಡೋಣ ಎಂದರು. ಇದನ್ನೂ ಓದಿ: Uttar Pradesh | ಪತ್ನಿಯ ಅಕ್ರಮ ಸಂಬಂಧ ತಿಳಿದು ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ

    ಮಧ್ಯಂತರ ವರದಿ ಮೀಸಲಾತಿ ಕೊಡಲು ವಿಳಂಬ ಧೋರಣೆ ಮಾಡೋಕೆ ಅಲ್ಲ. ಶಾಶ್ವತ ಪರಿಹಾರ ಕೊಡೋದು ನಮ್ಮ ಇಚ್ಚೆ. ಈ ನಿಟ್ಟಿನಲ್ಲಿ ವರದಿ ಕೊಡಲಾಗಿದೆ. ಮಧ್ಯಂತರ ವರದಿ ಕೊಟ್ಟಿದ್ದೇನೆ‌. ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ. ಮಧ್ಯಂತರ ವರದಿಯಲ್ಲಿ ಏನಿದೆ ಅಂತ ನಾನು ಹೇಳೋಕೆ ಆಗೊಲ್ಲ. ಸರ್ಕಾರ ಏನ್ ಮಾಡುತ್ತೆ ಅಂತ ಸರ್ಕಾರವನ್ನ ಕೇಳಿ ಎಂದರು. ಇದನ್ನೂ ಓದಿ: ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

  • ಒಳಮೀಸಲಾತಿ | ನಾಗಮೋಹನ್ ವರದಿ ಜಾರಿಗೆ ಸರ್ಕಾರ ಬದ್ದ – ಆರ್‌ಬಿ ತಿಮ್ಮಾಪುರ್

    ಒಳಮೀಸಲಾತಿ | ನಾಗಮೋಹನ್ ವರದಿ ಜಾರಿಗೆ ಸರ್ಕಾರ ಬದ್ದ – ಆರ್‌ಬಿ ತಿಮ್ಮಾಪುರ್

    ಬೆಂಗಳೂರು: ಒಳಮೀಸಲಾತಿ (Internal Reservation) ಜಾರಿ ಮಾಡೋದಕ್ಕೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ನಾಗಮೋಹನದಾಸ್ ಅವರು ಯಾವುದೇ ಶಿಫಾರಸು ಮಾಡಿದರೂ ಸರ್ಕಾರ ಅದನ್ನು ಜಾರಿ ಮಾಡಲಿದೆ ಎಂದು ಸಚಿವ ಆರ್‌ಬಿ ತಿಮ್ಮಾಪುರ್ (RB Thimmapur) ತಿಳಿಸಿದ್ದಾರೆ.

    ಒಳಮೀಸಲಾತಿ ಸಂಬಂಧ ಇಂದು ಮಧ್ಯಂತರ ವರದಿ ಕೊಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಳ ಮೀಸಲಾತಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಒಳಮೀಸಲಾತಿ ಜಾರಿ ಮಾಡಿಯೇ ಮಾಡುತ್ತೇವೆ. ವೈಜ್ಞಾನಿಕವಾಗಿ ಅಂಕಿಅಂಶಗಳು ಬೇಕು. ಆ ನಿಟ್ಟಿನಲ್ಲಿ ಆಯೋಗ ರಚನೆ ಮಾಡಲಾಗಿದೆ. ನಾಗಮೋಹನದಾಸ್ (Nagamohan Das) ಹೇಳುವ ಎಲ್ಲಾ ಶಿಫಾರಸು ಸರ್ಕಾರ ಅನುಷ್ಠಾನ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಜಾರಕಿಹೊಳಿ ಸಿಎಂ ಆಗಲು ಹೆಚ್‍ಡಿಕೆ ಭೇಟಿ: ಜಿಟಿಡಿ ಬಾಂಬ್

    ಮಧ್ಯಂತರ ವರದಿ ಯಾಕೆ ಕೊಡುತ್ತಿದ್ದಾರೆ ಗೊತ್ತಿಲ್ಲ. ಏನು ಬೇಕು ಏನು ಬೇಡ ಇದೆ ಅಂತ ಹೇಳುತ್ತಾರೆ. ಅದನ್ನ ನಾವು ಮಾಡುತ್ತೇವೆ. ಅವರು ಏನೇ ಕೊಟ್ಟರೂ ಸರ್ಕಾರ ಅನುಷ್ಠಾನ ಮಾಡಲು ಸಿದ್ಧ ಎಂದರು. ಇನ್ನು ಮೀಸಲಾತಿ ವರದಿ ಹಿನ್ನಲೆಯಲ್ಲಿ ಅನೇಕ ನೇಮಕಾತಿ ಸ್ಥಗಿತವಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಷ್ಟೋ ವರ್ಷಗಳಿಂದ ಮೀಸಲಾತಿ ಬಗ್ಗೆ ಹೋರಾಟ ಆಗುತ್ತಿದೆ. ಇನ್ನು 4-5 ತಿಂಗಳು ತಡೆದುಕೊಳ್ಳಲಿ ಏನು ಆಗಲ್ಲ ಎಂದರು. ಇದನ್ನೂ ಓದಿ: ಬಾಂಗ್ಲಾ ವಿಮೋಚನಾ ದಿನ – 1971ರ ಯುದ್ಧ ನೆನಪಿಸಿ ಯೂನುಸ್‌ಗೆ ಪತ್ರ ಬರೆದ ಪ್ರಧಾನಿ ಮೋದಿ

  • ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

    ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

    ಬೆಂಗಳೂರು: ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿ (Internal Reservation) ಕಲ್ಪಿಸುವ ವಿಚಾರವಾಗಿ ಇಂದು‌‌ ಮಹತ್ವದ ಸಭೆ ನಡೆಯಿತು. ‌ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ (Nagamohan Das) ಹಾಜರಿದ್ದರು.

    ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಭಾಗಿಯಾಗಿದರು. ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಮಧ್ಯಂತರ ವರದಿ ನೀಡುವ ಬಗ್ಗೆ ಚರ್ಚೆ ನಡೆಯಿತು. ಸಭೆ ಬಳಿಕ‌ ದಲಿತ ಸಮುದಾಯದ ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ‌ ಒಳ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಒಗ್ಗಟ್ಟು ಪ್ರದರ್ಶಿಸಿದರು. ಇದನ್ನೂ ಓದಿ: ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ

     

    ಸಚಿವ ಹೆಚ್.ಸಿ.ಮಹದೇವಪ್ಪ‌ (Mahadevappa) ಮಾತನಾಡಿ, ಒಳ‌ಮೀಸಲಾತಿ ಬಗ್ಗೆ ವಾರದಲ್ಲಿ ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಕೊಡುತ್ತಾರೆ. ಮಧ್ಯಂತರ ವರದಿ ಬಳಿಕ ಒಳಮೀಸಲಾತಿ ಜಾರಿ ತೀರ್ಮಾನ ಮಾಡುವುದಾಗಿ ಹೇಳಿದರು.

    ಒಳಮೀಸಲಾತಿಯಾಗುವ ತನಕ ಯಾವುದೇ ಹೊಸ ನೇಮಕ, ಬಡ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ, ಮಧ್ಯಂತರ ವರದಿ ಕೊಟ್ಟ ಬಳಿಕ‌ ಮತ್ತೆ ಸಿಎಂ ‌ಜೊತೆ ಸಭೆ ಸೇರಿ ತೀರ್ಮಾನ ಮಾಡುವುದಾಗಿ ಹೇಳಿದರು.

     

  • 40% ಕಮಿಷನ್‌ ಆರೋಪ – ನ್ಯಾ. ನಾಗಮೋಹನ ದಾಸ್ ವಿಚಾರಣಾ ಆಯೋಗದಿಂದ ಸಿಎಂಗೆ ವರದಿ ಸಲ್ಲಿಕೆ

    40% ಕಮಿಷನ್‌ ಆರೋಪ – ನ್ಯಾ. ನಾಗಮೋಹನ ದಾಸ್ ವಿಚಾರಣಾ ಆಯೋಗದಿಂದ ಸಿಎಂಗೆ ವರದಿ ಸಲ್ಲಿಕೆ

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದವರು ಮಾಡಿದ ಆರೋಪಗಳು ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೀಳು ಕಾಲುವೆಗಳ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಗ್ಗೆ ಕೇಳಿಬಂದ ಆರೋಪಗಳ ಕುರಿತು ನಿವೃತ್ತ ನ್ಯಾ. ಹೆಚ್.ಎನ್ ನಾಗಮೋಹನ್ ದಾಸ್ ಅವರ ಆಯೋಗವು ನಡೆಸಿದ ತನಿಖೆಯ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

    ಬೆಂಗಳೂರಿನ ಕಾವೇರಿ ನಿವಾಸದಲ್ಲಿಂದು ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. 40% ಕಮೀಷನ್ ಆರೋಪ ಅನುಬಂಧಗಳೊಂದಿಗೆ 20 ಸಾವಿರ ಪುಟಗಳ ವರದಿಗಳನ್ನು ಸಿಎಂಗೆ ಸಲ್ಲಿಕೆ ಮಾಡಿದೆ.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕಾಮಗಾರಿಗಳಲ್ಲಿ ಶೇ.40 ಕಮಿಷನ್‌ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಗಂಭೀರವಾಗಿ ಆರೋಪಿಸಿತ್ತು. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ 26-7-2019 ರಿಂದ 31.03.2023ರ ವರೆಗೆ ನಡೆದಿರೋ ಕಾಮಗಾರಿಗಳ ಬಗ್ಗೆ ತನಿಖೆ ವರದಿ ಸಲ್ಲಿಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು.

    ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ರಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನ ಆಯ್ಕೆ ಮಾಡಿಕೊಂಡು ಆಯೋಗ ತನಿಖೆ ನಡೆಸಿತ್ತು. ಈ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳು, ಎಲ್ಲಾ ಮಾದರಿಯ ಕಾಮಗಾರಿಗಳು ಹಾಗೂ ಎಲ್ಲಾ ಮೊತ್ತದ ಕಾಮಗಾರಿಗಳನ್ನ ಪರಿಗಣಿಸಿ ಆಯೋಗ ತನಿಖೆ ನಡೆಸಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

  • ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ದೇಶದ ದುರಂತ: ನಾಗಮೋಹನ್ ದಾಸ್

    ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ದೇಶದ ದುರಂತ: ನಾಗಮೋಹನ್ ದಾಸ್

    ಮಂಗಳೂರು: ಅಯೋಧ್ಯೆ ವಿಚಾರದಲ್ಲಿ ಹೀಗೇ ತೀರ್ಪು ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಇದು ದೇಶದ ದುರಂತ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಹೇಳಿದ್ದಾರೆ.

    ನಗರದಲ್ಲಿ ನಡೆದ ಎಡಪಂಥೀಯ ಚಿಂತಕರ ಜನನುಡಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಆದೇಶಕ್ಕಾಗಿ ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರಲಾಗುತ್ತಿದೆ. ಅಷ್ಟೇ ಅಲ್ಲದೆ ಇಷ್ಟು ಸಮಯದೊಳಗಾಗಿ ತೀರ್ಪು ನೀಡಬೇಕೆಂಬ ಸೂಚನೆ ನೀಡಲಾಗುತ್ತೆ ಎಂದು ದೂರಿದರು. ಇದನ್ನು ಓದಿ: ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವುದು ನಿಜವೇ: ಪ್ರಕಾಶ್ ರೈ ಹೇಳಿದ್ದು ಏನು?

    ರಾಮ ಮಂದಿರ ನಿರ್ಮಾಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಒಪ್ಪಿಗೆಯಾಗದಿದ್ದರೆ ನಾವು ಸಹಿಸಲ್ಲ ಎನ್ನುವವರಿದ್ದಾರೆ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಕೆಲಸ ಆಗುತ್ತಿರುವುದು ದೇಶದ ದುರಂತ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv