Tag: Nagachithanya

  • ನಾಗಚೈತನ್ಯ ಜೊತೆ ಲವ್ವೂ ಇಲ್ಲ, ಡೇಟಿಂಗೂ ಇಲ್ಲ ಎಂದ ಶೋಭಿತಾ

    ನಾಗಚೈತನ್ಯ ಜೊತೆ ಲವ್ವೂ ಇಲ್ಲ, ಡೇಟಿಂಗೂ ಇಲ್ಲ ಎಂದ ಶೋಭಿತಾ

    ಲವು ದಿನಗಳಿಂದ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿ ಹರಡಿತ್ತು. ಈ ಕುರಿತು ನಾಗಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಕೂಡ ಪರೋಕ್ಷವಾಗಿ ಈ ಜೋಡಿಗೆ ಟಾಂಗ್ ಕೊಟ್ಟಿದ್ದರು. ಹಾಗಾಗಿ ಇಬ್ಬರ ಮಧ್ಯೆ ಏನೋ ನಡೀತಾ ಇದೆ ಎಂಬ ಗಾಸಿಪ್ ಕೂಡ ಹರಿಬಿಡಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ಶೋಭಿತಾ. ನಾಗಚೈತನ್ಯ ಜೊತೆ ಲವ್ವೂ ಇಲ್ಲ ಡೇಟಿಂಗ್ ಕೂಡ ನಡೆದಿಲ್ಲ ಎಂದಿದ್ದಾರೆ.

    ವಾಹಿನಿಯೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶೋಭಿತಾ, ‘ನಾನು ಈವರೆಗೂ ನಾಗಚೈತನ್ಯ ಅವರನ್ನು ಭೇಟಿಯಾಗಿದ್ದು ಕೇವಲ ಎರಡೇ ಎರಡು ಬಾರಿ. ಅದೂ ಹಾಯ್, ಬೈ ಲೆಕ್ಕದಲ್ಲಿ ಮಾತ್ರ. ತೀರಾ ಪರಿಚಯವೂ ಇಲ್ಲ. ಕ್ಲೋಸ್ ಕೂಡ ಇಲ್ಲ. ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವ ಸುದ್ದಿ ಹೇಗೆ ಹರಡಿತೋ ಗೊತ್ತಿಲ್ಲ. ಈ ವಿಷಯ ನನಗೂ ತಲುಪಿದಾಗ ಅಚ್ಚರಿ ಆಯಿತು. ಶಾಕ್ ಕೂಡ ಆಯಿತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್

    ನಾಗಚೈತನ್ಯ ಮತ್ತು ಶೋಭಿತಾ ವಿಚಾರವಾಗಿ ಕಳೆದ ಎರಡು ವಾರಗಳಿಂದಲೂ ಸುದ್ದಿ ಆಗುತ್ತಿದೆ. ಸಮಂತಾ ಮಾಡಿರುವ ಕಾಮೆಂಟ್ ಗೆ ಶೋಭಿತಾ ಕೂಡ ರಿಯ್ಯಾಕ್ಟ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಎಲ್ಲ ವಿಚಾರಗಳಿಗೂ ಶೋಭಿತಾ ತೆರೆ ಎಳೆದಿದ್ದಾರೆ. ನಾಗಚೈತನ್ಯ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

    Live Tv

  • ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ?: ಆ ಹುಡುಗಿಯನ್ನೇ ಓಕೆ ಮಾಡಿದೆಯಂತೆ ಕುಟುಂಬ

    ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ?: ಆ ಹುಡುಗಿಯನ್ನೇ ಓಕೆ ಮಾಡಿದೆಯಂತೆ ಕುಟುಂಬ

    ಟ ನಾಗಚೈತನ್ಯ ಮೊನ್ನೆಯಷ್ಟೇ ಗರ್ಲ್ ಫ್ರೆಂಡ್ ಕಾರಣಕ್ಕಾಗಿ ಸುದ್ದಿಯಾಗಿದ್ದರು. ಈಗ ಅದೇ ಗರ್ಲ್ ಫ್ರೆಂಡ್ ಜೊತೆಯೇ ನಾಗಚೈತನ್ಯ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಮಂತಾರಿಂದ ನಾಗಚೈತನ್ಯ ದೂರವಾದ ಬಳಿಕ, ಈ ನಟಿಯ ಜೊತೆ ಡೇಟಿಂಗ್ ಮಾಡುತ್ತಿದ್ದು, ಅವರನ್ನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಮದುವೆಗೆ ಎರಡೂ ಕುಟುಂಬದ ಸಮ್ಮತಿಯೂ ಇದೆಯಂತೆ.

    ಕೇವಲ ಡಿವೋರ್ಸ್ ವಿಚಾರಕ್ಕೆ ಮಾತ್ರ ಸುದ್ದಿಗೆ ಬರುತ್ತಿದ್ದ ನಾಗಚೈತನ್ಯ ಎರಡ್ಮೂರು ವಾರಗಳ ಹಿಂದೆ ತೆಲುಗು ನಟಿ ಶೋಭಿತಾ ಧಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟರು. ಐಷಾರಾಮಿ ಹೋಟೆಲ್ ಗಳಲ್ಲಿ ಭೇಟಿ ಆಗುವ ಮತ್ತು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ವಿಚಾರವೂ ಮುನ್ನೆಲೆಗೆ ಬಂತು. ಇದೀಗ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ವಿಷಯ ಭಾರೀ ಸಂಚಲನವನ್ನುಂಟು ಮಾಡಿದೆ. ಇದನ್ನೂ ಓದಿ:ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

    ಸಮಂತಾ ಮತ್ತು ನಾಗಚೈತನ್ಯ ದೂರುವಾದ ಬಳಿಕವೇ ಶೋಭಿತಾ ಮತ್ತು ನಾಗಚೈತನ್ಯ ತೀರಾ ಹತ್ತಿರವಾಗಿದ್ದರಂತೆ. ಹಾಗಾಗಿ ಸಮಂತಾ ಡಿವೋರ್ಸ್ ವಿಚಾರಕ್ಕೂ ಶೋಭಿತಾಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಶೋಭಿತಾ ಡೇಟಿಂಗ್ ವಿಚಾರ, ಮದುವೆ ವಿಷಯ ಎಲ್ಲವೂ ಗಾಸಿಪ್ ನಂತೆಯೇ ತೇಲಿ ಬರುತ್ತಿವೆ ಹೊರತು ಯಾವುದೇ ರೀತಿಯಲ್ಲಿ ಅಧಿಕೃತ ಹೇಳಿಕೆಗಳಾಗಿಲ್ಲ.

    Live Tv

  • ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತ್ರೂ ಮಳೆ ಹನಿ ನಿಲ್ಲದು!

    ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತ್ರೂ ಮಳೆ ಹನಿ ನಿಲ್ಲದು!

    ನಾಗಚೈತನ್ಯ ಮತ್ತು ಸಮಂತಾ ದೂರವಾಗಿ ಹಲವು ತಿಂಗಳುಗಳೇ ಉರುಳಿವೆ. ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ದಾಂಪತ್ಯದ ಹೊಸ ಹೊಸ ಮುಖಗಳು ಮಾತ್ರ ಅನಾವರಣಗೊಳ್ಳುತ್ತಲೇ ಇವೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಸಮಂತಾ ಬಗ್ಗೆ ನಾಗಚೈತನ್ಯ ಅಭಿಮಾನಿಗಳು ಸಲ್ಲದ ಆರೋಪ ಮಾಡಿದರು. ಅವರು ಯಾವುದೇ ಸಿನಿಮಾ ಒಪ್ಪಿಕೊಂಡರೂ, ಅದಕ್ಕೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದರು. ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದಾಗಲಂತೂ ಮಾನಹಾನಿ ಆಗುವಂತಹ ಸಂದೇಶಗಳನ್ನು ಕಳುಹಿಸಿದರು. ಇದೀಗ ಮದ್ವೆ ಸೀರೆ ಸುದ್ದಿ ಹಿಡಿದುಕೊಂಡು ಜಗ್ಗಾಡುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈಗ ತೆಲುಗು ಸಿನಿಮಾ ರಂಗದಲ್ಲಿ ಚಿತ್ರಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿಯೆಂದರೆ ಸಮಂತಾ ಅವರು ಮದ್ವೆ ಸೀರೆಯದ್ದು. ಮದುವೆ ದಿನದಂದು ನಾಗಚೈತನ್ಯ ಕುಟುಂಬವು ಬೆಲೆಬಾಳು ರೇಷ್ಮೆ ಸೀರೆಯನ್ನು ಸಮಂತಾಗೆ ನೀಡುತ್ತು. ಮದುವೆ ಸಂದರ್ಭದಲ್ಲಿ ಆ ಸೀರೆಯದ್ದೇ ಹೈಲೆಟ್ ಆಗಿತ್ತು. ಈಗ ಆ ಸೀರೆಯನ್ನೂ ನಾಗಚೈತನ್ಯ ಕುಟುಂಬಕ್ಕೆ ಸಮಂತಾ ವಾಪಸ್ಸು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರಿಂದಾಗಿ ಅಕ್ಕಿನೇನಿ ಕುಟುಂಬ ತೀರಾ ಮುಜಗರಕ್ಕೀಡಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡ ನಂತರ ಸಾಯುವತನಕ ಜತೆಗಿರುತ್ತೇನೆ ಎಂದು ಪ್ರಮಾಣ ಮಾಡಿದ ಪತಿಯನ್ನೇ ಬಿಟ್ಟು ಬಂದಿದ್ದೇನೆ. ಇನ್ನು ಅವರು ಕೊಟ್ಟಿರುವ ವಸ್ತುಗಳು ಯಾವ ಲೆಕ್ಕ ಎನ್ನುವ ಧೋರಣೆಯಿಂದಲೇ ಸಮಂತಾ ಹಾಗೆ  ಮಾಡಿದ್ದಾರೆ ಎನ್ನುವುದು ಸದ್ಯ ಸುದ್ದಿಗೆ ಸಿಕ್ಕ ಆಹಾರ.

  • ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!

    ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!

    ಚೆನ್ನೈ: ಟಾಲಿವುಡ್ ಕ್ಯೂಟ್ ಜೋಡಿ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ಪ್ರೀತಿಸಿ ಮದುವೆಯಾಗಿದ್ದರು. ಅವರನ್ನು ನೋಡಿದ ಎಲ್ಲ ಅಭಿಮಾನಿಗಳು ಸಖತ್ ಜೋಡಿ ಎಂದು ಹೇಳುತ್ತಿದ್ದರು. ಆದರೆ ಈಗ ಇವರಿಬ್ಬರು ಬೇರೆ-ಬೇರೆಯಾಗಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇವರ ವಿಚ್ಛೇದನಕ್ಕೆ ಅಭಿಮಾನಿಗಳು ಇನ್ನೂ ಕಾರಣ ಹುಡುಕುತ್ತಿದ್ದು, ಈಗ ಸಮಂತಾ ಅವರ ಬೋಲ್ಡ್ ದೃಶ್ಯಗಳೇ ಇದಕ್ಕೆ ಕಾರಣ ಎಂದು ಮೂಲಗಳ ಪ್ರಕಾರ ತಿಳಿದು ಬರುತ್ತಿದೆ.

    ಸಮಂತಾ ರುತ್ ಪ್ರಭು ಅವರ ಪ್ರಾಜೆಕ್ಟ್‍ಗಳಲ್ಲಿ ಬೋಲ್ಡ್ ದೃಶ್ಯಗಳು ಮತ್ತು ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದರಿಂದಲೇ ದಾಂಪತ್ಯ ಜೀವನದಲ್ಲಿ ಒಡಕು ಸಂಭವಿಸಿದೆ ಎನ್ನಲಾಗುತ್ತಿದೆ. 2018 ರಲ್ಲಿ ಈ ಜೋಡಿ ಮದುವೆಯಾಗಿದ್ದು, ಕೆಲವೇ ತಿಂಗಳುಗಳ ನಂತರ ಸಮಂತಾ ‘ರಂಗಸ್ಥಳಂ’ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗಿನ ಲಿಪ್-ಲಾಕ್ ದೃಶ್ಯ ಮಾಡಿದ್ದರು. ಇದಕ್ಕೆ ಅವರು ಹೆಚ್ಚು ಟ್ರೋಲ್ ಸಹ ಆಗಿದ್ದರು. ಇದನ್ನೂ ಓದಿ:  ಐಟಂ ಸಾಂಗ್ ಫುಲ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಇದಲ್ಲದೆ, ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಅವರು ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಿದ್ದರು. ಈ ಬಗ್ಗೆ ನಾಗಚೈತನ್ಯ ಮಾತ್ರವಲ್ಲ, ಅವರ ಪೋಷಕರು ನಾಗಾರ್ಜುನ ಅಕ್ಕಿನೇನಿ ಮತ್ತು ಇತರರು ಸಹ ಸಮಂತಾ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಮತ್ತು ಐಟಂ ಸಾಂಗ್ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ‘ದಿ ಫ್ಯಾಮಿಲಿ ಮ್ಯಾನ್ 2’ ನಲ್ಲಿ ಸಮಂತಾ ಅವರ ಲೈಂಗಿಕ ದೃಶ್ಯವನ್ನು ನೋಡಿ ನಾಗಚೈತನ್ಯ ಮತ್ತು ಅವರ ಕುಟುಂಬ ಸಂಪೂರ್ಣವಾಗಿ ಆಘಾತಕ್ಕೊಳಗಾಗಿತ್ತು. ಬೋಲ್ಡ್ ದೃಶ್ಯದ ಬಗ್ಗೆ ನಮಗೆ ಮೊದಲೇ ತಿಳಿಸಿಲ್ಲ ಯಾಕೆ ಎಂದು ಕುಟುಂಬ ಸಮಂತಾ ಅವರನ್ನು ಪ್ರಶ್ನಿಸಿತ್ತು ಎಂದು ವರದಿಯಾಗಿದೆ.

    ಈ ರೀತಿಯ ದೃಶ್ಯಗಳಿಂದ ಸಾರ್ವಜನಿಕವಾಗಿ ನಮ್ಮ ಕುಟುಂಬದ ಇಮೇಜ್ ಹಾಳಾಗುತ್ತದೆ ಎಂದು ಸಮಂತಾಗೆ ವಿವರಿಸಲಾಗಿತ್ತು. ಆದರೂ ಎರಡು ಕಡೆಯ ಮಾತುಕತೆಗಳು ನಿಂತು ಹೋಗಿದ್ದರಿಂದ ಸಮಂತಾ ಸಂಬಂಧದಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

    ಮದುವೆ ಮುರಿದು ಬಿದ್ದಾಗ ಹೆಣ್ಣನ್ನೆ ಜವಾಬ್ದಾರರನ್ನಾಗಿ ಮಾಡುವುದು ಏಕೆ ಎಂದು ತನ್ನನ್ನು ಟ್ರೋಲ್ ಮಾಡಿದವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ತನ್ನ ವಿರುದ್ಧ ಟೀಕೆ ಮಾಡುತ್ತಿರೋರಿಗೆ ಸ್ಟ್ರಾಂಗ್ ಉತ್ತರ ಕೊಟ್ಟ ಸಮಂತಾ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ತನ್ನ ವಿರುದ್ಧ ಟೀಕೆ ಮಾಡುತ್ತಿರುವವ ವಿರುದ್ಧ ಸ್ಟ್ರಾಂಗ್ ಆಗಿ ಉತ್ತರ ಕೊಟ್ಟಿದ್ದಾರೆ.

    ಸಮಂತಾ ಮತ್ತು ನಾಗಚೈತನ್ಯ ಇತ್ತೀಚೆಗೆ ತಮ್ಮ ವಿಚ್ಛೇದನದ ವಿಚಾರವನ್ನು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಸಿದ್ದರು. ಈ ಹಿನ್ನೆಲೆ ಇವರ ಸಂಸಾರದ ಒಡೆಯಲು ಸಮಂತಾನೇ ಕಾರಣ ಎಂಬ ಮಾತು ಕೇಳಿಬರುತ್ತಿತ್ತು. ಈ ಪರಿಣಾಮ ಬೇಸರಗೊಂಡ ಸಮಂತಾ ಇನ್‍ಸ್ಟಾ ಸ್ಟೋರಿಯಲ್ಲಿ, ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಪ್ರಶ್ನಿಸುವುದಿಲ್ಲ. ಹಾಗಿದ್ದರೆ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    ಅ.2 ರಂದು ಸಮಂತಾ ತಮ್ಮ ದಾಂಪತ್ಯದ ಬಗ್ಗೆ, ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಬರೆದು ಪೋಸ್ಟ್ ಮಾಡಿದ್ದರು.

    ಅಕ್ಕಿನೇನಿ ಕುಟುಂಬ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಮುಂದಾಗಿತ್ತು. ಆದರೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಈ ಹಿನ್ನೆಲೆ ಹಲವು ನಟ- ನಟಿಯರು ಬೇಸರವನ್ನು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಇದಕ್ಕೆ ಸಮಂತಾ ಅವರ ಬಾಲಿವುಡ್ ಎಂಟ್ರಿಯೇ ಕಾರಣ ಎಂದು ಹೇಳಿದ್ದರು.

  • ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ಚೆನ್ನೈ: ಟಾಲಿವುಡ್ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ಪೈರಸಿಯಾಗಿದೆ.

    ಫುಲ್ ಎಚ್‍ಡಿ ಕ್ವಾಲಿಟಿ ಸಿನಿಮಾವನ್ನು ತಮಿಳುರಾಕರ್ಸ್ ತಂಡ ಲೀಕ್ ಮಾಡಿದ್ದು ಟೆಲಿಗ್ರಾಂನಲ್ಲಿ ಸಿಗುತ್ತಿರುವ ಚಿತ್ರ ತಂಡಕ್ಕೆ ಶಾಕ್ ನೀಡಿದೆ.

    ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ 24ರಂದು ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರ ರಿಲೀಸ್‍ಗೂ ಮುನ್ನ ತೆಲುಗು ಚಿತ್ರ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ನಟಿಸಿರುವ ಈ ಚಿತ್ರ ರೋಮ್ಯಾಂಟಿಕ್ ಆಗಿದ್ದು, ಜಾತಿ, ವರ್ಗ ವಿಭಜನೆಯಂತಹ ಕೆಲವು ಪ್ರಬುದ್ಧ ವಿಷಯಗಳನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ನಾಯಕ – ನಾಯಕಿ ಪ್ರೀತಿಯಲ್ಲಿ ಬೀಳುವ, ಅದನ್ನು ಕುಟುಂಬ ವಿರೋಧಿಸುವ ಹಲವು ಅಂಶಗಳನ್ನು ಒಳಗೊಂಡಿದ್ದು, ಫುಲ್ ಪ್ಯಾಕ್ ಮೂವಿ.

    ಈ ಸಿನಿಮಾ ರಿಲೀಸ್ ಆಗಿ 2 ದಿನಗಳಷ್ಟೇ ಕಳೆದಿದೆ. ಈ ನಡುವೆಯೇ 10 ಕೋಟಿ ರೂ. ಗಳಿಸಿತ್ತು. ಆದರೆ ಈಗ ಈ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡಲಾಗಿದ್ದು, ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶಿಸುತ್ತಿದ್ದು, ಕೊರೊನಾ ನಡುವೆಯೂ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗ ‘ಲವ್ ಸ್ಟೋರಿ’ ಸಿನಿಮಾ ಪೈರಸಿಯಾಗಿದ್ದು, ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

  • 2020ರ ಅದ್ಭುತ ಸುದ್ದಿಗೆ ಸಾಕ್ಷಿಯಾದ ನಾಗಚೈತನ್ಯ, ಸಮಂತಾ

    2020ರ ಅದ್ಭುತ ಸುದ್ದಿಗೆ ಸಾಕ್ಷಿಯಾದ ನಾಗಚೈತನ್ಯ, ಸಮಂತಾ

    ಹೈದರಾಬಾದ್: ಇತ್ತೀಚೆಗಷ್ಟೇ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗೂಬಾಟಿ ಹಾಗೂ ಮಿಹೀಕಾ ಬಜಾಜ್ ಒಟ್ಟಿಗೆ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಾವು ಎಂಗೇಜ್ ಆಗಿರುವ ಕುರಿತು ಸುಳಿವು ನೀಡಿದ್ದರು. ಇದೀಗ ಮತ್ತೊಂದು ಸಂತಸದ ಸುದ್ದಿಯನ್ನು ತಿಳಿಸಿದ್ದು, ಇದರಲ್ಲಿ ಸಮಂತಾ ದಂಪತಿ ಸಹ ಭಾಗಿಯಾಗಿದ್ದಾರೆ.

     

    View this post on Instagram

     

    And it’s official!! ????????????????

    A post shared by Rana Daggubati (@ranadaggubati) on

    ಹೌದು ಇತ್ತೀಚೆಗಷ್ಟೇ ರಾಣಾ ಹಾಗೂ ಮಿಹೀಮಾ ಒಟ್ಟಿಗಿರುವ ಫೋಟೋವನ್ನು ಹಾಕಿ ತಮ್ಮ ಪ್ರೀತಿ ಕುರಿತು ಬಹಿರಂಗಪಡಿಸಿದ್ದರು. ಇದೀಗ ಈ ಜೋಡಿ ಅಧಿಕೃತವಾಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದೆ. ಹೌದು ಪುಟ್ಟದಾಗಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಸಿಂಪಲ್ ಆಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.

    ಈ ಸಂಭ್ರಮದ ಕ್ಷಣದಲ್ಲಿ ಟಾಲಿವುಡ್ ಬೆಡಗಿ ಸಮಂತಾ ಹಾಗೂ ಅವರ ಪತಿ, ನಟ ನಾಗಚೈತನ್ಯ ಸಹ ಭಾಗಿಯಾಗಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಇದು 2020ರ ಅದ್ಭುತ ಸುದ್ದಿ’ ಎಂದು ಸಮಂತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ತಮ್ಮ ಭಾವನಿಗೆ ವಿಶ್ ಮಾಡಿದ್ದಾರೆ. ಅಲ್ಲದೆ ಇದರಲ್ಲಿ ರಾಣಾ ಅವರ ಸಹೋದರ ಅಭಿರಾಮ್, ಸೋದರಸಂಬಂಧಿ ಅರ್ಜುನ್ ಹಾಗೂ ಮಿಹೀಕಾ ಕುಟುಂಬದ ದಂಪತಿ ಭಾಗವಹಿಸಿದ್ದಾರೆ.

     

    View this post on Instagram

     

    My happy place! ???????? @ranadaggubati

    A post shared by miheeka (@miheeka) on

    ಸಮಂತಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ, ನಮ್ಮನ್ನು ಕರೆ ತಂದಿದ್ದಕ್ಕೆ ಧನ್ಯವಾದ, ಇದು 2020ರ ಉತ್ತಮ ಸುದ್ದಿಯಾಗಿದೆ. ರಾಣಾ ದಗ್ಗೂಬಾಟಿ ಮತ್ತು ಮಿಹೀಕಾ ಬಜಾಜ್…. ಇನ್ನು ಎಂದೆಂದಿಗೂ ನಿಮ್ಮ ಸಂತೋಷ ಇಲ್ಲೇ ಇರಲಿದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಮಿಹೀಕಾ ಬಜಾಜ್ ಇಂಟಿರಿಯರ್ ಡಿಸೈನರ್ ಆಗಿದ್ದು, ರಾಣಾ ಟಾಲಿವುಡ್‍ನ ಬೇಡಿಕೆಯ ನಟ. ಇದೀಗ ಇಬ್ಬರೂ ಎಂಗೇಜ್ ಆಗಿದ್ದಾರೆ. ಎಂಗೇಜ್‍ಮೆಂಟ್ ಫೋಟೋಗಳನ್ನು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಂಸ್ಕøತಿಕ ಉಡುಗೆಯಲ್ಲಿ ಮಿಂಚಿದ್ದಾರೆ. ರಾಣಾ ಅವರು ತಮ್ಮ ಫೋಟೋಗೆ ‘ಆ್ಯಂಡ್ ಇಟ್ಸ್ ಅಫೀಶಿಯಲ್’ ಎಂದು ಬರೆದುಕೊಂಡಿದ್ದಾರೆ. ಮಿಹೀಕಾ ತಮ್ಮ ಫೋಟೋಗೆ ಟು ದಿ ಬಿಗಿನಿಂಗ್ ಆಫ್ ಫಾರೆವರ್ ಎಂದು, ಇನ್ನೊಂದು ಫೋಟೋಗೆ ಮೈ ಹ್ಯಾಪಿ ಪ್ಲೇಸ್ ಎಂದು ಬರೆದುಕೊಂಡಿದ್ದಾರೆ.

    ಮಿಹೀಕಾ ಬಜಾಜ್ ಹೈದರಾಬಾದ್‍ನಲ್ಲಿ ಇವೆಂಟ್ ಮ್ಯಾನೇಜ್ ಕಂಪನಿ ನಡೆಸುತ್ತಿದ್ದು, ಇವರು ಲಂಡನ್‍ನ ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟಿರಿಯರ್ ಡಿಸೈನಿಂಗ್ ಓದಿದ್ದಾರೆ. ಇದೀಗ ಹೈದರಾಬಾದ್‍ನಲ್ಲೇ ಕಂಪನಿ ನಡೆಸುತ್ತಿದ್ದಾರೆ.

  • ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

    ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

    ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಇದೀಗ ಎಲ್ಲ ಚಿತ್ರಗಳಿಂದಲೂ ದೂರ ಉಳಿಯುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಶೂಟಿಂಗ್ ಪ್ರಾರಂಭವಾಗಿದ್ದ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರದಿಂದಲೂ ಸಮಂತ ಹೊರಗೆ ಬಂದಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಚಿತ್ರಗಳಿಂದ ಯಾಕೆ ದೂರ ಉಳಿಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

    ಇದಕ್ಕೆ ಕಾರಣವೂ ಇದ್ದು, ಸಮಂತಾ ಅವರು ಖುಷಿ ವಿಚಾರವನ್ನು ಹೇಳುತ್ತಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಅದೇನಪ್ಪಾ ಖುಷಿ ವಿಚಾರ ಅಂತೀರಾ, ಅದೇ ಅವರು ತಾಯಿಯಾಗುವುದು. ಹೌದು ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ಹೊಸ ಚಿತ್ರ `ಕಾತುವಾಕುಲ ರೆಂಡು ಕಾದಲ್’ ಚಿತ್ರದ ಶೂಟಿಂಗ್‍ನಲ್ಲಿ ಸಮಂತಾ ತೊಡಗಿದ್ದರು. ಆದರೆ ಇದ್ದಕ್ಕಿದ್ದಂತೆ ಚಿತ್ರದಿಂದ ಹೊರ ಬಂದಿದ್ದಾರೆ.

    ಈ ಬೆಳವಣಿಗೆ ಬಳಿಕ ಯಾಕೆ ಸಿನಿಮಾದಿಂದ ಹೊರ ಬಂದರು ಎಂಬುದು ಅಧೀಕೃತವಾಗಿರಲಿಲ್ಲ. ಆದರೆ ಮೂಲಗಳ ಪ್ರಕಾರ ಸಮಂತಾ ಅವರೇ ಚಿತ್ರದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಮಾತ್ರಲ್ಲದೆ ಈ ವರ್ಷ ಅವರು ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ. ಸಮಂತಾ ಗರ್ಭಿಣಿಯಾಗಿದ್ದಾರೆ, ಹೀಗಾಗಿಯೇ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಚೆನ್ನೈನಲ್ಲಿ ವಿಘ್ನೇಶ್ ಅವರ ಕಚೇರಿಗೆ ಭೇಟಿ ನೀಡಿದ್ದ ಅವರು, ಹೊಸ ಚಿತ್ರದಿಂದ ಹೊರ ನಡೆಯುತ್ತಿರುವುದಕ್ಕೆ ನಿರ್ದೇಶಕರ ಬಳಿ ಕ್ಷಮೆ ಕೋರಿದ್ದಾರೆ. ಜೊತೆಗೆ ತಾವು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಕೆಲವು ನಟಿಯರ ಹೆಸರನ್ನೂ ಸಮಂತಾ ಸೂಚಿಸಿದ್ದಾರಂತೆ.

    ನಟ ವಿಜಯ್ ಸೇತುಪತಿ ನಾಯಕರಾಗಿರುವ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ ಮತ್ತು ಸಮಂತಾ ನಟಿಸಲಿದ್ದಾರೆ ಎಂದು ಪ್ರೇಮಿಗಳ ದಿನ ನಿರ್ದೇಶಕರೇ ಘೋಷಿಸಿದ್ದರು. ಒಂದೇ ಸಿನಿಮಾದಲ್ಲಿ ಇಬ್ಬರು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದರು. ಆದರೆ ಸಮಂತಾ ದಿಢೀರನೇ ಈ ಚಿತ್ರದಿಂದ ಹೊರಬಂದಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

    ಕೌಟುಂಬಿಕ ಜೀವನದತ್ತ ಹೆಚ್ಚು ಒತ್ತು ನೀಡಲು ಸಮಂತಾ ಈ ನಿರ್ಧಾರ ತಳೆದಿರಬಹುದು ಎನ್ನಲಾಗಿದೆ. ಸಮಂತಾ 2017ರ ಅಕ್ಟೋಬರ್‍ನಲ್ಲಿ ನಟ ನಾಗಚೈತನ್ಯ ಜೊತೆಗೆ ಗೋವಾದಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡು ವರ್ಷ ಕಳೆದರೂ ತಾಯಿಯಾಗುವ ಕುರಿತು ಸುಳಿವು ನೀಡಿಲ್ಲ. `ಸಮಂತಾ ತಾಯ್ತನದ ಸುಖ ಅನುಭವಿಸುವುದು ಯಾವಾಗ?’ ಎಂದು ಕಳೆದ ವರ್ಷ ಅವರ ಅಭಿಮಾನಿಗಳು ಪ್ರಶ್ನಿಸಿದ್ದರು. ನಂತರ ಈ ಕುರಿತು ಉತ್ತರಿಸಿದ್ದ ಸಮಂತಾ, `2022ರ ಆಗಸ್ಟ್ 7ರಂದು ಬೆಳಿಗ್ಗೆ 7ಗಂಟೆಗೆ ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ದಿನಾಂಕವನ್ನೇ ಘೋಷಿಸಿದ್ದರು. ಈ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದರು.

  • ನಾಗಚೈತನ್ಯ ಜೊತೆ ರೊಮ್ಯಾನ್ಸ್ ಮಾಡೋ ಚಾನ್ಸ್ ಮಿಸ್ ಮಾಡ್ಕೊಂಡ್ರಾ ರಶ್ಮಿಕಾ?

    ನಾಗಚೈತನ್ಯ ಜೊತೆ ರೊಮ್ಯಾನ್ಸ್ ಮಾಡೋ ಚಾನ್ಸ್ ಮಿಸ್ ಮಾಡ್ಕೊಂಡ್ರಾ ರಶ್ಮಿಕಾ?

    ಬೆಂಗಳೂರು: ಹಿಟ್ ಸಿನಿಮಾ ಗೀತಾ ಗೋವಿಂದಂ ನಂತರ ನಿರ್ದೇಶಕ ಪರಶುರಾಮ್ ಇದೀಗ ನಾಗಚೈತನ್ಯ ಜೊತೆ ಸಿನಿಮಾ ಮಾಡುತ್ತಿದ್ದು, ಇದು ಕಾಮಿಡಿ ಹಾಗೂ ಮನರಂಜನೆಯಾಧರಿತ ಚಿತ್ರವಾಗಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಕುರಿತು ತೀವ್ರ ಕುತೂಹಲ ಮೂಡಿದ್ದು, ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗಡೆ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.

    ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಾಯಕ ನಟಿಯರ ಆಯ್ಕೆ ಕುರಿತು ನಿರ್ದೇಶಕ ಪರಶುರಾಮ್ ಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದು, ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ಗೀತಾ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಅವರ ಪರ್ಫಾರ್ಮೆನ್ಸ್ ನೋಡಿ, ಇವರನ್ನೇ ಆಯ್ಕೆ ಮಾಡಬೇಕೆಂದು ನಿರ್ದೇಶಕರು ಅಂದುಕೊಂಡಿದ್ದರು. ಅಲ್ಲದೆ ರಶ್ಮಿಕಾ ಅಭಿನಯದ ಹಲವು ಚಿತ್ರಗಳು ಯಶಸ್ಸು ಕಂಡಿದ್ದರಿಂದ ಕಿರಿಕ್ ಬೆಡಗಿಯನ್ನೇ ನಾಗಚೈತನ್ಯ ಜೋಡಿಯಾಗಿಸಲು ಮುಂದಾಗಿದ್ದರು. ಆದರೆ ಇದಕ್ಕೆ ವಿಘ್ನ ಎದುರಾಗಿದೆ.

    ಒಂದೆಡೆ ನಿರ್ದೇಶಕರು ರಶ್ಮಿಕಾ ಕಡೆ ಮನಸ್ಸು ಮಾಡಿದರೆ, ನಿರ್ಮಾಪಕರು ಪೂಜಾ ಹೆಗಡೆ ಕುರಿತು ಒಲವು ತೋರಸಿದ್ದಾರಂತೆ. ಹೀಗಾಗಿ ನಾಯಕಿಯರ ಆಯ್ಕೆ ಕಗ್ಗಂಟಾಗಿದೆ. ಅಲ್ಲದೆ ನಿರ್ಮಾಪಕರ ಈ ಹಿಂದಿನ ಚಿತ್ರದ ಸಂದರ್ಭದಲ್ಲಿ ಪೂಜಾ ಫ್ಯಾನ್ಸಿ ಅಡ್ವಾನ್ಸ್ ಪಡೆದಿದ್ದಾರೆಂತೆ. ಹೀಗಾಗಿ ಪೂಜಾ ಹೆಗಡೆ ಕುರಿತು ನಿರ್ಮಾಪಕರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಚಿತ್ರವನ್ನು 14 ರೀಲ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರ ನಿರ್ಮಿಸುತ್ತಿದೆ.

    ಈ ಹಿಂದೆ ‘ಒಕ ಲೈಲಾ ಕೋಸಂ’ ಚಿತ್ರದಲ್ಲಿ ಸಹ ನಾಗಚೈತನ್ಯ ಹಾಗೂ ಪೂಜಾ ಹೆಗಡೆ ಜೋಡಿ ಒಂದಾಗಿತ್ತು. ಆದರೆ ಬಾಕ್ಸ್ ಆಫೀಸಿನಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ. ಪ್ರಸ್ತುತ ನಾಗಚೈತನ್ಯರ ತಮ್ಮ ಅಖಿಲ್ ಅವರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ.

    ನಾಗಚೈತನ್ಯ ಅವರ ಸಿನಿಮಾಗೂ ಪೂಜಾ ಹೆಗಡೆಯವರೇ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ನಾಗಚೈತನ್ಯ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಈಗಾಗಲೇ ರಶ್ಮಿಕಾ ಅವರಿಗೆ ಹೆಚ್ಚು ಆಫರ್‍ಗಳು ಬರುತ್ತಿದ್ದು, ಭೀಷ್ಮ ಸಕ್ಸಸ್ ನಂತರ ಹಲವು ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದಾರೆ.

    ಪ್ರಸ್ತುತ ರಶ್ಮಿಕಾ ಮಂದಣ್ಣ ತಮಿಳು ನಟ ಕಾರ್ತಿಯವರ ‘ಸುಲ್ತಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ತೆಲುಗಿಗೂ ಡಬ್ ಆಗುತ್ತಿದೆ. ಅಲ್ಲದೆ ಬಹುದಿನಗಳ ಗ್ಯಾಪ್ ನಂತರ ಇದೀಗ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದು, ಪೊಗರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.