ಟಾಲಿವುಡ್‌ನ ಹಾಟ್ ಟಾಪಿಕ್ ಅಂದ್ರೆ ಸಮಂತಾ ಮತ್ತು ನಾಗಚೈತನ್ಯ ಇಂದಿಗೂ ಈ ಜೋಡಿ ಯಾಕೆ ಬೇರೆಯಾಗಿದ್ದಾರೆ ಎಂಬ ಕಾರಣ ಗೌಪ್ಯವಾಗಿಯೇ ಇದೆ. ಇದೀಗ ಕರಣ್ ಜೋಹರ್ ಶೋವೊಂದರಲ್ಲಿ ಡಿವೋರ್ಸ್ ನಂತರ ನಾಗಚೈತನ್ಯ ಮೇಲೆ ಭಾವನೆ ಹೇಗಿದೆ ಅಂತಾ ಶಾಕಿಂಗ್ ಹೇಳಿಕೆಯನ್ನ ಸಮಂತಾ ನೀಡಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದ ಜೋಡಿ ಆದರೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಇಬ್ಬರು ದೂರ ದೂರ ಆದರು. ಸಾಕಷ್ಟು ನೆಗೆಟಿವ್ ಟ್ರೋಲ್‌ಗಳಿಗೆ ಗುರಿಯಾಗಿದ್ದ ಸಮಂತಾಗೆ ಕರಣ್ ಜೋಹರ್ ಶೋನಲ್ಲಿ ಸಮಂತಾ ಖಾಸಗಿ ವಿಚಾರವೊಂದನ್ನು ಕೇಳಿದ್ದಾರೆ. ಪ್ರಸ್ತುತ ನಿಮ್ಮ ಮತ್ತು ನಾಗಚೈತನ್ಯ ನಡುವೆ ರಿಲೇಷನ್ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಮತ್ತು ನಾಗಚೈತನ್ಯ ಅವರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳನ್ನು ಇರದಂತೆ ನೋಡಿಕೊಳ್ಳಿ ಎಂದು ಕರಣ್‌ಗೆ ಉತ್ತರಿಸಿದ್ದಾರೆ. ನಮ್ಮ ನಡುವೆ ಈಗ ಸ್ನೇಹಕ್ಕೆ ಭಾವನೆಗೆ ಜಾಗವಿಲ್ಲ ಅಂತಾ ಪರೋಕ್ಷವಾಗಿ ಸಮಂತಾ ತಿಳಿಸಿದ್ದಾರೆ. ನಾಗಚೈತನ್ಯ ಅವರನ್ನ ಕಂಡ್ರೆ ಸಮಂತಾಗೆ ಕೊಲ್ಲುವಷ್ಟು ಕೋಪವಿದ್ಯಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
ಸಮಂತಾ ಅವರನ್ನು ತುಂಬಾ ನೋಯಿಸಿದ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಯಾವುದು ಎಂದು ಕರಣ್ ಕೇಳಿದರು. ನಾಗ ಚೈತನ್ಯಗೆ ವಿಚ್ಛೇದನ ನೀಡಲು ೨೫೦ ಕೋಟಿ ರೂಪಾಯಿ ತೆಗೆದುಕೊಂಡಿರುವ ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಸಮಂತಾ ಹೇಳಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದಾಗ ಕಷ್ಟ ಆಯ್ತು.. ಖುಷಿಯಿಂದ ನಾವು ಡಿವೋರ್ಸ್ ಪಡೆದಿಲ್ಲ. ನೋವಿನಿಂದಲೇ ದೂರ ಆಗಿದ್ದೇವೆ ಜತೆಗೆ ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.




























`ಮಾನಾಡು’ ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಾಗಚೈತನ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿದ್ದು, ತೆಲುಗು ಮತ್ತು ತಮಿಳು ದ್ವಿಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ವಿಶೇಷ ಅಂದರೆ, ಈ ಚಿತ್ರದ ಮೂಲಕ ಚೈ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇನ್ನೂ ಹೆಸರಿಡದ ಈ ಹೊಸ ಪ್ರಾಜೆಕ್ಟ್ಗೆ ಶ್ರೀನಿವಾಸ್ ಸಿಲ್ವರ್ ಮತ್ತು ಪವನ್ ಕುಮಾರ್ ಹಣ ಹೂಡುತ್ತಿದ್ದು, ಈ ಹಿಂದೆ `ಓಕಾ ಲೈಲಾ ಕೋಸಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಚೈ ಮತ್ತು ಪೂಜಾ 8 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಒಂದಾಗುತ್ತಿರುವುದು ವಿಶೇಷ. ವಿಭಿನ್ನ ಲವ್‌ಸ್ಟೋರಿ, ಡಿಫರೆಂಟ್ ಶೇಡ್‌ಗಳ ಮೂಲಕ ಈ ಜೋಡಿ ಕಮಾಲ್ ಮಾಡಲು ಬರುತ್ತಿದ್ದಾರೆ. ಇದನ್ನು ಓದಿ:
`ಓಕಾ ಲೈಲಾ ಕೋಸಂ’ ಜೋಡಿ ಆಪ್ಟರ್ ಎ ಲಾಂಗ್ ಟೈಮ್ ಆನ್ ಸ್ಕ್ರೀನ್‌ನಲ್ಲಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಸದ್ಯ ನಾಗಚೈತನ್ಯ ನಟನೆಯ `ಲಾಲ್ ಸಿಂಗ್ ಚಡ್ಡಾ’ ಮತ್ತು ಪೂಜಾ ನಟನೆಯ ಬಹುನಿರೀಕ್ಷಿತ `ಬೀಸ್ಟ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಎರಡೂ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.